ಶಿವನ ಸಮುದ್ರ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಗಗನಚುಕ್ಕಿ ಜಲಪಾತ
ಭರಚುಕ್ಕಿ ಜಲಪಾತ

ಶಿವನಸಮುದ್ರ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಒಂದು ಸಣ್ಣ ಊರು. ಕಾವೇರಿ ನದಿಯ ದಂಡೆಯಲ್ಲಿ ಇರುವ ಈ ಊರಿನ ಬಳಿ ನದಿಯು ಎರಡು ಕವಲುಗಳಾಗಿ ಗಗನಚುಕ್ಕಿ ಮತ್ತು ಭರಚುಕ್ಕಿ ಎಂಬ ಜಲಪಾತಗಳನ್ನು ಸೃಷ್ಟಿಸುತ್ತದೆ. ಇಲ್ಲಿ ೧೯೦೨ರಲ್ಲಿ ಜಲವಿದ್ಯುತ್ ಉತ್ಪಾದನಾ ಕೇಂದ್ರ ಒಂದನ್ನು ಸ್ಥಾಪಿಸಲಾಯಿತು. ಇಡೀ ಏಷ್ಯಾ ಖಂಡದಲ್ಲಿಯೇ ಸ್ಥಾಪನೆಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಇದು.ಇಷ್ಟೇ ಅಲ್ಲದೆ,ಈ ಜಲವಿದ್ಯುತ್ ಉತ್ಪಾದನಾ ಕೇಂದ್ರದಿಂದ ಮೊದಲ ಬಾರಿಗೆ ಕೋಲರಕ್ಕೆ ವಿದ್ಯುತ್ತನ್ನು ಕಳೆಸಲಾಗಿತ್ತು.[೧]ಈ ಶಿಂಷಾ ಜಲವಿದ್ಯುದಾಗಾರದ ಬಳಿಯಿರುವ ಗಗನಚುಕ್ಕಿಯ ಹರವು ಕಡಿಮೆ. ಆದರೆ ಎತ್ತರ ಹಾಗೂ ರಭಸ ಹೆಚ್ಚು. ಮಧ್ಯರಂಗ ಕ್ಷೇತ್ರದ ಬಳಿಯಿರುವ ಭರಚುಕ್ಕಿ ಜಲಪಾತದಲ್ಲಿ ನೀರಿನ ಪ್ರಮಾಣ ಸ್ವಲ್ಪ ಕಡಿಮೆ. ಆದರೆ ನದಿಯ ಹರವು ವಿಶಾಲ. ಬೆಂಗಳೂರು-ಕೊಳ್ಳೇಗಾಲ ಹೆದ್ದಾರಿಯ ಅಂಚಿನಲ್ಲಿರುವ ಗಗನಚುಕ್ಕಿಯನ್ನು ತಲುಪುವುದು ಸುಲಭ. ಆದರೆ ಭರಚುಕ್ಕಿ ತಲುಪಲು ಸ್ವಂತ ವಾಹನವೇ ಬೇಕು. ನೀರಿನ ರಭಸ ಎರಡೂ ಕಡೆ ತೀವ್ರ. ಕಣಿವೆ ಕೊಳ್ಳ ಪ್ರದೇಶವಾದ್ದರಿಂದ ಜಲಪಾತಗಳ ತಳಕ್ಕೆ ಇಳಿಯುವುದು ಕಠಿಣ ಹಾಗೂ ಅತಿ ಅಪಾಯಕಾರಿ.

ಉಲ್ಲೇಖಗಳು[ಬದಲಾಯಿಸಿ]