ಕೆ.ಕೆ.ಹೆಬ್ಬಾರ
ಕಟ್ಟಿಂಗೇರಿ ಕೃಷ್ಣ ಹೆಬ್ಬಾರ ಇವರು ೧೯೧೧ರ ಜೂನ್ ೧೧ರಂದು ಉಡುಪಿ ಜಿಲ್ಲೆಯ ಕಟ್ಟಿಂಗೇರಿ ಗ್ರಾಮದಲ್ಲಿ ಜನಿಸಿದರು. ತಾಯಿ ಸೀತಮ್ಮ; ತಂದೆ ನಾರಾಯಣ ಹೆಬ್ಬಾರ. ತಂದೆ ಗಣಪತಿಯ ಮಣ್ಣಿನ ಮೂರ್ತಿಗಳನ್ನು ಮಾಡುವದರಲ್ಲಿ ಸಿದ್ಧಹಸ್ತರು. ಮಗ ಗೋಡೆ ಹಾಗು ನೆಲದ ಮೇಲೆ ಇದ್ದಿಲಿನಿಂದ ಗೀಚಿದ ಚಿತ್ರಗಳಿಗೆ ತಾಯಿಯ ವಾತ್ಸಲ್ಯಪೂರ್ಣ ಪ್ರೋತ್ಸಾಹ.
ಅಧ್ಯಯನ
[ಬದಲಾಯಿಸಿ]ಕೃಷ್ಣ ಹೆಬ್ಬಾರರು ಔಪಚಾರಿಕ ಶಿಕ್ಷಣವನ್ನು ಪೂರ್ತಿಗೊಳಿಸಲಿಲ್ಲ. ಕೌಟಂಬಿಕ ಪರಿಸ್ಥಿತಿಯೂ ಅದಕ್ಕೆ ಪೂರಕವಾಗಿರಲಿಲ್ಲ. ಹಿತೈಷಿಯೊಬ್ಬರ ಸಲಹೆಯ ಮೇರೆಗೆ ಮೈಸೂರಿನಲ್ಲಿರುವ ಚಾಮರಾಜೇಂದ್ರ ಟೆಕ್ನಿಕಲ್ ಇನ್ಸ್ಟಿಟ್ಯೂಟದಲ್ಲಿ ಚಿತ್ರಕಲೆಯ ಅಭ್ಯಾಸಕ್ಕಾಗಿ ಸೇರಿಕೊಂಡರು. ಅಲ್ಲಿಯ ಶಿಕ್ಷಣ ಪದ್ಧತಿಯಿಂದ ಸಮಾಧಾನವಾಗದ ಹೆಬ್ಬಾರರು ಮುಂಬಯಿಗೆ ನಡೆದರು. ಹೊಟ್ಟೆಪಾಡಿಗಾಗಿ ಫೋಟೋಗ್ರಾಫರ್ ಒಬ್ಬರಲ್ಲಿ ದುಡಿಯುತ್ತ ದಂಡವತಿಯವರ ಚಿತ್ರಕಲಾಶಾಲೆಯಲ್ಲಿ ಅಭ್ಯಾಸ ನಡೆಸಿದರು. ೧೯೩೪ರಿಂದ ೧೯೩೮ರವರೆಗೆ ಜೆ.ಜೆ.ಸ್ಕೂಲಿನಲ್ಲಿ ಅಭ್ಯಾಸ ಮಾಡಿ ಡಿಪ್ಲೋಮಾ ಇನ್ ಪೇಂಟಿಂಗ ಪಡೆದರು. ೧೯೪೯-೫೦ರಲ್ಲಿ ಪ್ಯಾರಿಸ್‍ನಲ್ಲಿರುವ Academy of Julian (paintings) & Ecole Estinne (Graphics)ದಲ್ಲಿ ಅಧ್ಯಯನ ಮಾಡಿದರು.
ಅಧ್ಯಾಪನ
[ಬದಲಾಯಿಸಿ]೧೯೩೯ರಿಂದ ೧೯೪೬ರವರೆಗೆ ಮುಂಬಯಿಯ J.J.School of Artನಲ್ಲಿ ಚಿತ್ರಕಲೆಯನ್ನು ಬೋಧಿಸಿದರು.
ಚಿತ್ರಪ್ರದರ್ಶನ
[ಬದಲಾಯಿಸಿ]- ೧೯೪೧ : Academy of Fine Arts, ಕೊಲ್ಕತ್ತ
- ೧೯೪೫ : ಮುಂಬಯಿಯಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ
- ೧೯೪೭ : Bombay Arts Society, ಮುಂಬಯಿ ಯ ವಾರ್ಷಿಕ ಪ್ರದರ್ಶನ
- ೧೯೪೯ : ಪ್ಯಾರಿಸ್‍ನಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ
- ೧೯೫೦ : ಲಂಡನ್‍ದಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ
- ೧೯೫೧ : Salon de Mai, ಪ್ಯಾರಿಸನಲ್ಲಿ ಚಿತ್ರಪ್ರದರ್ಶನ
- ೧೯೫೩ : ರಶಿಯಾ, ಪೋಲ್ಯಾಂಡ ಹಾಗು ಜರ್ಮನಿ (ಆಗ ಪಶ್ಚಿಮ ಜರ್ಮನಿ) ಗಳಲ್ಲಿ ಪ್ರಯಾಣ ಹಾಗು ಚಿತ್ರಪ್ರದರ್ಶನ
- ೧೯೫೫ : Venice Biennale, ಇಟಲಿ
- ೧೯೫೬ : ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ
- ೧೯೫೭ : ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ
- ೧೯೫೮ : ರಾಷ್ಟ್ರೀಯ ಚಿತ್ರಪ್ರದರ್ಶನ, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸ ದೆಹಲಿ
- ೧೯೫೯ : Sao Paulo Biennale, ಬ್ರೇಝಿಲ್
- ೧೯೬೪ : ನ್ಯೂಯಾರ್ಕ್ನಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ
- ೧೯೬೯ : Bonythan Art Gallery, ಸಿಡ್ನಿ, ಆಸ್ಟ್ರೇಲಿಯಾ
- ೧೯೭೧ : Retrospective, ರವೀಂದ್ರಭವನ, ಲಲಿತ ಕಲಾ ಅಕಾಡೆಮಿ, ಹೊಸದೆಹಲಿ
- ೧೯೮೭ : Indian Drawing Today: Jehangir Art Gallery, Bombay
- ೧೯೯೪ : Vadhera Art Gallery, ದಿಲ್ಲಿಯಲ್ಲಿ ಏಕವ್ಯಕ್ತಿ ಚಿತ್ರಪ್ರದರ್ಶನ
- ೧೯೯೯ : Fine Art Company, ಮುಂಬಯಿಯಲ್ಲಿ ಚಿತ್ರಪ್ರದರ್ಶನ
ಪುರಸ್ಕಾರ
[ಬದಲಾಯಿಸಿ]- ೧೯೪೧ : ಕೋಲಕತ್ತಾದ Academy of Fine Arts ನೀಡಿದ ಸ್ವರ್ಣಪದಕ
- ೧೯೪೭ : Bombay Art Society ನೀಡಿದ ಸ್ವರ್ಣಪದಕ
- ೧೯೫೪ : ಲಲಿತ ಕಲಾ ಅಕಾಡೆಮಿಯಿಂದ Eminent Artist ಎಂಬ ಪುರಸ್ಕಾರ
- ೧೯೫೬ : ಮುಂಬಯಿ ಪ್ರಾಂತ ಪುರಸ್ಕಾರ
- ೧೯೫೬ : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ)
- ೧೯೫೭ : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ)
- ೧೯೫೮ : ರಾಷ್ಟ್ರೀಯ ಕಲಾ ಅಕಾಡೆಮಿ ಪುರಸ್ಕಾರ (ಲಲಿತ ಕಲಾ ಅಕಾಡೆಮಿ, ಹೊಸ ದಿಲ್ಲಿ)
- ೧೯೬೧ : ಪದ್ಮಶ್ರೀ ಪುರಸ್ಕಾರ
- ೧೯೭೬ : Fellow of Lalit Kala Akademi, ನವ ದೆಹಲಿ
- ೧೯೭೬ : ಮೈಸೂರು ವಿಶ್ವವಿದ್ಯಾನಿಲಯದವರು ನೀಡಿದ ಗೌರವ ಡಿ.ಲಿಟ್. ಪುರಸ್ಕಾರ
- ೧೯೮೦-೮೪: ಲಲಿತ ಕಲಾ ಅಕಾಡೆಮಿಯ ಚೇರ್ಮನ್ ಎಂದು ರಾಷ್ಟ್ರಪತಿಯವರಿಂದ ನೇಮಿತ
- ೧೯೮೩ : ಸೋವಿಯೆಟ್ ಲ್ಯಾಂಡ್ ನೆಹರು ಪ್ರಶಸ್ತಿ
- ೧೯೮೫ : ಕರ್ನಾಟಕ ಲಲಿತ ಕಲಾ ಅಕಾಡೆಮಿಯಿಂದ ವಿಶಿಷ್ಟ ಕಲಾಕಾರರ ಪ್ರಶಸ್ತಿ
- ೧೯೮೬ : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ
- ೧೯೮೮ : ಮಹಾರಾಷ್ಟ್ರ ರಾಜ್ಯದ ಗೌರವ ಪುರಸ್ಕಾರ
- ೧೯೮೯ : ಪದ್ಮಭೂಷಣ ಪ್ರಶಸ್ತಿ ಪ್ರದಾನ
- ೧೯೯೦ : ಮಹಾರಾಷ್ಟ್ರ ರಾಜ್ಯದ ಗೌರವ ಪುರಸ್ಕಾರ
ಕೆಲವು ಖ್ಯಾತ ಚಿತ್ರಗಳು
[ಬದಲಾಯಿಸಿ]- ಕಾರ್ಲೆ ಗುಹಾ ಚಿತ್ರ
- ದನಗಳ ಸಂತೆ
- ಭಿಕ್ಷುಕರು
- Sunny Southfood
- ಮಾಹೀಮ್ ದರ್ಗಾ
- ಶಾಂತಿ
- ಸಂಗೀತಗಾರ
- ವಿನಾಶ
- ಸಂಧ್ಯಾಗೀತೆ
- ಗಾಳಿಪಟಗಳು
- ಜೀವನ ಮತ್ತು ಮೃತ್ಯು
- ನಾಗಮಂಡಲ
ಹೆಬ್ಬಾರರ ಚಿತ್ರಸಂಗ್ರಹಗಳು
[ಬದಲಾಯಿಸಿ]- National Gallery of Modern Art, New Delhi (Lalit Kala Academy, New Delhi)
- Governmental Museums in Punjab, Karnataka, Tamilnadu, Baroda
- Academy of Fine Arts, ಕೊಲ್ಕತ್ತ
- Birla Academy of Fine Arts, Kolakata
- Tata Institute of Fundamental Research, Bombay
- Kala Academy, Goa
- Museum of Modern Art, Paris
- Government Museums : Poland, Czechoslovakia, ರಷ್ಯಾ, Dresden Gallery, ಜರ್ಮನಿ
- The Commonwealth, Australia
- The Staten Island Institute of Arts & Science Museum, U.S.A.
ಕೆ.ಕೆ.ಹೆಬ್ಬಾರರವರು ೧೯೯೬ ಮಾರ್ಚ ೨೬ರಂದು ನಿಧನರಾದರು.