ವಿಷಯಕ್ಕೆ ಹೋಗು

ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ (ABISY) ಹಿಂದೂ-ರಾಷ್ಟ್ರೀಯ ಸಂಘಟನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾಗಿದೆ. ಇದನ್ನು ೧೯೭೩ ರಲ್ಲಿ ಆರ್‌ಎಸ್‌ಎಸ್ ಪ್ರಚಾರಕ ರಾದ ಮೊರೊಪಂತ್ ಪಿಂಗ್ಲೆ ಅವರ ದೂರದರ್ಶಿತ್ವದಲ್ಲಿ ೧೯೭೮-೭೯ ರಲ್ಲಿ ಸ್ಥಾಪಿನೆಯಾಯಿತು. ಬ್ರಿಟಿಷ್ ರಾಜ್ಯ ಭಾರತದ ಇತಿಹಾಸವನ್ನು ವಿರೂಪಗೊಳಿಸಿ, ಪಕ್ಷಪಾತಮಾಡಿದ ತಪ್ಪುಗಳನ್ನಸರಿಪಡಿಸಲು ಪ್ರಯತ್ನಿಸುತ್ತದೆ. ಹಿಂದೂ ರಾಷ್ಟ್ರೀಯವಾದಿ ದೃಷ್ಟಿಕೋನದಿಂದ ಭಾರತೀಯ ಇತಿಹಾಸವನ್ನು ಪುನಃ ಬರೆಯುವುದು ಸಂಘಟನೆಯ ನಿಜವಾದ ಗುರಿಯಾಗಿದೆ ಎಂದು ವಿದ್ವಾಂಸರು ಹೇಳುತ್ತಾರೆ. [] [] []

ಇತಿಹಾಸ

[ಬದಲಾಯಿಸಿ]

ಅಖಿಲ ಭಾರತೀಯ ಇತಿಹಾಸ ಸಂಕಲನ ಯೋಜನೆ (ABISY) ೧೯೭೮-೭೯ ರಲ್ಲಿ ಸ್ಥಾಪನೆಯಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಂಗಸಂಸ್ಥೆಯಾಗಿದೆ. [] ಇದನ್ನು ೧೯೭೩ ರಲ್ಲಿ ಆರೆಸ್ಸೆಸ್ ಪ್ರಚಾರಕ ಮೊರೊಪಂತ್ ಪಿಂಗ್ಲೆ ರೂಪಿಸಿದರು. [] ಬಾಲ್ಮುಕುಂದ್ ಪಾಂಡೆಯವರು ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿಪಡಿಸಿದರು, ಮುಂದೆ ಅದರ ಸಂಘಟನಾ ಕಾರ್ಯದರ್ಶಿಯಾದರು. [] ಸಾಮಾಜಿಕ ಮಾನವಶಾಸ್ತ್ರಜ್ಞ ಡೇನಿಯಲಾ ಬೇಟಿ ಅವರ ಪ್ರಕಾರ, ಸಂಘಟನೆಯ ಪ್ರಮುಖ ನಾಯಕರು ಹಿಂದುತ್ವ ಸಿದ್ಧಾಂತದೊಂದಿಗೆ ಹೊಂದಿಕೊಂಡ ಸಿದ್ಧಾಂತವನ್ನು ಹೊಂದಿದ್ದಾರೆ, ಆದಾಗ್ಯು ಸಂಘಟನೆಯ ಸದಸ್ಯರು ಈ ಕಾರ್ಯಕ್ಕೆ ತೊಡಗಿಕೊಳ್ಳಲು ತಮ್ಮದೇ ಆದ ಕಾರಣಗಳನ್ನು ಹೊಂದಿರಬಹುದು. []

ಜುಲೈ ೨೦೧೪ ರಲ್ಲಿ, ABISY ಯ ಆಂಧ್ರಪ್ರದೇಶದ ಭಾಗದ ಮುಖ್ಯಸ್ಥರಾಗಿದ್ದ ಯಲ್ಲಪ್ರಗಡ ಸುದರ್ಶನ್ ರಾವ್ ನರೇಂದ್ರಮೋದಿ ನೇತೃತ್ವದ ನ್ಯಾಷನಲ್ ಡೆಮಾಕ್ರಟಿಕ್ ಅಲೈಯನ್ಸ್(ಎನ್,ಡಿ.ಎ) ಸರ್ಕಾರವು ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ (ಐ ಸಿ ಎಚ್.ಅರ್) ನ ಅಧ್ಯಕ್ಷರನ್ನಾಗಿ ನೇಮಿಸಿತು[] []. ಮಾರ್ಚ್ ೨೦೧೫ ರಲ್ಲಿ, ಇತರ ಮೂವರು ABISY-ಸಂಯೋಜಿತ ಇತಿಹಾಸಕಾರರನ್ನು ಕೌನ್ಸಿಲ್‌ಗೆ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಲಾಯಿತು ಅವರುಗಳು ನಾರಾಯಣ ರಾವ್ ಬರ್ಹಾಂಪುರ ವಿಶ್ವವಿದ್ಯಾಲಯದ ಮಾಜಿ ಪ್ರಾಧ್ಯಾಪಕ ಮತ್ತು ABISY ನ ರಾಷ್ಟ್ರೀಯ ಉಪಾಧ್ಯಕ್ಷ, ಗೋರಖ್‌ಪುರ ವಿಶ್ವವಿದ್ಯಾನಿಲಯದ ಈಶ್ವರ್ ಶರಣ್ ವಿಶ್ವಕರ್ಮ ಪ್ರಾಚೀನ ಇತಿಹಾಸ ಪುರಾತತ್ವ ಮತ್ತು ಸಂಸ್ಕೃತಿ ವಿಭಾಗದ ಪ್ರಾಧ್ಯಾಪಕ ಮತ್ತು ABISY ನ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ, ಕಲ್ಯಾಣಿ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಮತ್ತು ABISY ಯ ಬಂಗಾಳ ವಿಭಾಗದ ಮುಖ್ಯಸ್ಥ ನಿಖಿಲೇಶ್ ಗುಹಾ [] [].

ಸಿದ್ಧಾಂತ

[ಬದಲಾಯಿಸಿ]

ABISY ಯ ಉದ್ದೇಶವುವು ಭಾರತೀಯ ಇತಿಹಾಸವನ್ನು "ರಾಷ್ಟ್ರೀಯ ದೃಷ್ಟಿಕೋನದಿಂದ" ಬರೆಯುವುದು[೧೦] [೧೧]. ABISY ಹೆಸರಿನ ಅರ್ಥ "ಇಡೀ ಭಾರತದ ಇತಿಹಾಸವನ್ನು ಸಂಗ್ರಹಿಸುವ ಯೋಜನೆ ಎಂದು (ಸಮಿತಿಯ ಅರ್ಥದಲ್ಲಿಯೂ ಸಹ)" []. ವಿದ್ವಾಂಸರುಗಳು ಸಂಸ್ಥೆಯು ಹಿಂದುತ್ವದ ಸಿದ್ಧಾಂತದೊಂದಿಗೆ ಸ್ಥಿರವಾದ ನಿರೂಪಣೆಯನ್ನು ಪ್ರಸ್ತುತಪಡಿಸಲು ಐತಿಹಾಸಿಕ ಪರಿಷ್ಕರಣೆಯಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದ್ದಾರೆ [] [] [] ಭಾರತೀಯ ಇತಿಹಾಸಕಾರರು ಪಾಶ್ಚಾತ್ಯ ವಿರೂಪಗಳಿಗೆ ಒಳಗಾಗಿದ್ದಾರೆ ಎಂದು ಪಾಂಡೆ ಹೇಳುತ್ತಾರೆ. ಇದರಿಂದಾಗಿ ಭಾರತೀಯ ಸಾಂಸ್ಕೃತಿಕ ವೈವಿಧ್ಯತೆಯ ತಪ್ಪು ಅಭಿಪ್ರಾಯವನ್ನು ಸೃಷ್ಟಿಸಿತ್ತಿದೆ [] [೧೨]. ಪಾಂಡೆ ಪ್ರಕಾರ, ಪುರಾಣಗಳು ಭಾರತೀಯ ಇತಿಹಾಸದ ಅತ್ಯಂತ ಮಹತ್ವದ ಮೂಲವಾಗಿದೆ[೧೩]. ಹಿಂದೂ ಸಂಸ್ಕೃತಿಯು ಬಾರತೀಯರ ವೈವಿಧ್ಯತೆಯಲ್ಲಿ ಏಕತೆಯನ್ನು ಸೃಷ್ಟಿಸುತ್ತದೆ ಎಂದು ಸಂಸ್ಥೆ ಹೇಳುತ್ತದೆ[೧೪] [೧೫]. ವೈದಿಕ ಸಂಸ್ಕೃತಿಯು ಭಾರತದ ಜನಜಾತಿ ಮತ್ತು ಆದಿವಾಸಿಗಳ ಸಂಪ್ರದಾಯದಿಂದ ಹುಟ್ಟಿಕೊಂಡಿತು ಎಂದು ಪರಿಗಣಿಸುತ್ತದೆ[೧೨] [೧೬].

ಇಂಡೋ-ಆರ್ಯನ್ನರು ಮಧ್ಯ ಏಷ್ಯಾದಿಂದ ಭಾರತೀಯ ಉಪಖಂಡಕ್ಕೆ ವಲಸೆ ಬಂದಿಲ್ಲ ಬದಲಾಗಿ ಇವರೇ ಮೂಲ ನಿವಾಸಿಗಳು ಎಂದು ನಂಬುತ್ತದೆ. ಅವರಲ್ಲಿ ಕೆಲವರು ನಂತರ ಉಪಖಂಡವನ್ನು ತೊರೆದು ಪ್ರಪಂಚದ ಇತರ ಭಾಗಗಳನ್ನು ನಾಗರಿಕಗೊಳಿಸಿದರು[] []. ಈ ಸಿದ್ಧಾಂತವನ್ನು ಮುಖ್ಯವಾಹಿನಿಯ ವಿದ್ವಾಂಸರು ತಿರಸ್ಕರಿಸಿದ್ದರು. ಅವರ ಪ್ರಕಾರ ಇದು ವ್ಯಾಪಕವಾದ ವೈಜ್ಞಾನಿಕ ಸಂಶೋಧನೆಗೆ ವಿರುದ್ಧವಾಗಿದೆಯೆಂದು ವಾದಿಸಿದರು [೧೭] [೧೮]. ಆದರೆ ಇತ್ತೇಚಿನ ಸಂಶೋದನೆಗಳು ಅರ್ಯನ ಮೈಗ್ರೆಷನ್ ಥಿಯರಿಯನ್ನು ಸುಳ್ಳು ಎಂದು ಸಾಭೀತು ಪಡಿಸಿವೆ.

ಡಿಸಂಬರ್ ೨೦೦೫ ರಲ್ಲಿ ಪ್ರಕಟವಾದ ಈ ಸಂಶೋಧನಾ ಪ್ರಬಂಧವು [೧೯] ಕಳೆದ ೧೦,೦೦೦-೧೫,೦೦೦ ವರ್ಷಗಳಿಂದ ಭಾರತದಲ್ಲಿ ಯಾವುದೇ ಗಮನಾರ್ಹವಾದ ಆನುವಂಶಿಕ ಪ್ರಭಾವದ ಅನುಪಸ್ಥಿತಿಯನ್ನು ಪ್ರದರ್ಶಿಸುತ್ತದೆ ಎಂದು ಹೇಳುತ್ತದೆ. ಮತ್ತೂಂದು ಸಂಶೋಧನಾ ಪ್ರಬಂಧವು [೨೦]ಭಾರತವನ್ನು ಒಳಗೊಂಡಂತೆ ಪೂರ್ವ ಯುರೋಪ್‌ನಿಂದ ಏಷ್ಯಾಕ್ಕೆ ಯಾವುದೇ ಗಮನಾರ್ಹವಾದ ಪಿತೃವಂಶೀಯ ಜೀನ್ ಹರಿದು ಬಂದಿಲ್ಲ ಕನಿಷ್ಠ ಮಧ್ಯ-ಹೊಲೊಸೀನ್ ಅವಧಿಯಿಂದ (7,000 ರಿಂದ 5,000 ವರ್ಷಗಳ ಹಿಂದೆ) ರವರಗೆ. ಈ ಸಂಶೋಧನಾ ಪ್ರಬಂಧವು ಆರ್ಯರ ಆಕ್ರಮಣ/ವಲಸೆಯ ಸಾಧ್ಯತೆಯನ್ನು ತಿರಸ್ಕರಿಸುತ್ತದೆ ಮತ್ತು ಭಾರತೀಯ ಜನಸಂಖ್ಯೆಯು ತಳೀಯವಾಗಿ ವಿಶಿಷ್ಟವಾಗಿದೆ ಮತ್ತು ಆಫ್ರಿಕನ್ನರ ನಂತರ ಎರಡನೇ ಅತಿ ಹೆಚ್ಚು ಆನುವಂಶಿಕ ವೈವಿಧ್ಯತೆಯನ್ನು ಹೊಂದಿದೆ ಎಂದು ತೀರ್ಮಾನಿಸಿದೆ

ಈ ಮೂರು ಸಂಶೋಧನಾ ಪ್ರಬಂಧಗಳು ಅರ್ಯನ್ ವಲಸೆಯನ್ನು ತಪ್ಪು ಎಂದು ಸಾಬೀತುಪಡಿಸುತ್ತದೆ. ಸುಮಾರು ೧೫೦೦ BCE ಯಲ್ಲಿ ಆರ್ಯರ ಆಕ್ರಮಣ ಇರಲಿಲ್ಲ ಎಂದು ನಿರ್ಣಾಯಕವಾಗಿ ಮತ್ತು ನಿರಾಕರಿಸಲಾಗದಂತೆ ಸಾಬೀತುಪಡಿಸುತ್ತದೆ.

ಚಟುವಟಿಕೆಗಳು

[ಬದಲಾಯಿಸಿ]

ಯೋಜನೆಗಳು

[ಬದಲಾಯಿಸಿ]

ಆಗಸ್ಟ್ ೨೦೧೪ ರಲ್ಲಿ, ಸಂಸ್ಥೆಯು ನಾಲ್ಕು ಸಂಶೋಧನಾ ಯೋಜನೆಗಳನ್ನು ಪೂರ್ಣಗೊಳಿಸಿದೆ ಎಂದು ಹೇಳಿದೆ, ಅವುಗಳೆಂದರೆ ಸರಸ್ವತಿ ನದಿಯ ಮೂಲವನ್ನು ಹುಡುಕುವುದು, ಆರ್ಯರು ಭಾರತಕ್ಕೆ ವಲಸೆ ಬಂದರು ಎಂಬ ಸಿದ್ಧಾಂತದ ಸತ್ಯ ಸತ್ಯತೆಯನ್ನು ಪರಿಶೀಲಿಸಿವುದು [೨೧]. , ಮಹಾಭಾರತ ದ ಕಾಲವನ್ನು ನಿರ್ಧರಿಸುವುದು, ಶಂಕರಾಚಾರ್ಯ ಮತ್ತು ಬುದ್ಧ ರ ಸಮಯವನ್ನು ಗುರುತಿಸುವುದು. ಸಿಪಾಯಿ ದಂಗೆ ಎಂದು ವ್ಯಖ್ಯನಿಸಿದ್ದ೧೮೫೭ ರ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಒತ್ತಿ ಹೇಳಿದರು [೧೨] . ಹತ್ತು ವರ್ಷಗಳಲ್ಲಿ ಎಲ್ಲಾ ಹಿಂದೂ ಪುರಾಣಗಳನ್ನು ವಿಶ್ವಕೋಶವಾಗಿ ಸಂಗ್ರಹಿಸಿ ಬರೆಯುವುದು, ಅದರ ಮೂಲ ಅರ್ಥವನ್ನು ಅರ್ಥೈಸಲು ವಿದ್ವಾಂಸರ ಸಹಾಯ ಪಡೆಯುವುದು. ಅದನ್ನು ಭಾರತದ ನಿಜವಾದ ಇತಿಹಾಸ ಎಂದು ಮುಂದಿಡುವುದು ಎಂದು ಅದು ಘೋಷಿಸಿತು. [೨೨] ABISY ಭಾರತದ ಎಲ್ಲಾ ೬೭೦+ ಜಿಲ್ಲೆಗಳ ಇತಿಹಾಸವನ್ನು ದಾಖಲಿಸಲು ಉದ್ದೇಶಿಸಿದೆ ಮತ್ತು ಭಾರತದಲ್ಲಿನ ೬೦೦ ಕ್ಕೂ ಹೆಚ್ಚು ಬುಡಕಟ್ಟು ಸಮುದಾಯಗಳ ಇತಿಹಾಸವನ್ನು ವಿವರಿಸಲು ಉದ್ದೇಶಿಸಿದೆ ಎಂದು ಹೇಳಿದೆ [೧೩].

ಸಂಶೋಧನೆಯ ವಿಧಾನ

[ಬದಲಾಯಿಸಿ]

ABISY ತನ್ನ ಐತಿಹಾಸಿಕ ಕೆಲಸವನ್ನು ಹಿಂದೂ ಧರ್ಮಗ್ರಂಥಗಳ ಸುತ್ತ ಕೇಂದ್ರೀಕರಿಸುತ್ತದೆ. [೧೫] ಕುಲ್ಲುಪುರಾಣದಲ್ಲಿ ಉದಾಹರಿಸಿದ ಹಾಗೆ  ದೇವರುಗಳ ಮೌಖಿಕವಾಗಿ ಸಂರಕ್ಷಿಸಲ್ಪಟ್ಟ ಕಥೆಗಳನ್ನು ಸಂಗ್ರಹಿಸಿ ಅದನ್ನೇ ವಿಶ್ವಾಸಾರ್ಹ ಮೂಲಗಳಾಗಿ ಪರಿಗಣಿಸಬೇಕು. ಏಕೆಂದರೆ ಮೌಖಿಕವಾಗಿವಾಗಿ ಬಂದ ಜ್ಯಾನ ಹೆಚ್ಚು ಬದಲಾವಣೆಗೆ ಒಳಗಾಗಿರುವುದಿಲ್ಲ[೨೩]. ABISY ನಾಯಕರುಗಳು ಇದರಲ್ಲಿ ಬರುವ ನಿರ್ದಿಷ್ಟ ಪದಗಳು ಅಥವಾ ಅಭಿವ್ಯಕ್ತಿಗಳ ಮೇಲೆ ಗಮನ ಕೊಟ್ಟು ಸಂಸ್ಕೃತ ಪಠ್ಯಗಳೊಂದಿಗೆ ಇದರ ಹೋಲಿಕೆಯನ್ನು ಹುಡುಕಿ ಆ ಪಠ್ಯಗಳನ್ನು ಅಥವಾಅವುಗಳ ತುಣುಕುಗಳನ್ನು "ಅರ್ಥಮಾಡಿಕೊಳ್ಳುತ್ತಾರೆ". ಇದು ಗ್ರಾಮ ದೇವತೆಗಳ ಸಂಸ್ಕೃತ ಗುರುತನ್ನು ಬಹಿರಂಗಪಡಿಸುತ್ತದೆ. [೨೪] ABISY ಆ ಸ್ಥಳೀಯ ಸಂಸ್ಕೃತಿಗಳನ್ನು ತನಿಖೆ ಮಾಡುವ ಮೂಲಕ ಸ್ಥಳೀಯ ಸಂಸ್ಕೃತಿಗಳು ಮತ್ತು ಭಾವಿಸಲಾದ ಏಕೀಕೃತ ಹಿಂದೂ ಸಂಸ್ಕೃತಿಯ ನಡುವಿನ ಸಂಪರ್ಕವನ್ನು ತೋರಿಸಲು ಪ್ರಯತ್ನಿಸುತ್ತದೆ [೧೬]. ಈ ರೀತಿಯ "ಹೊಸ ಸ್ಥಳೀಯ ಇತಿಹಾಸ ಚರಿತ್ರೆ" [೧೬] ಹಿಂದುತ್ವ-ಬರಹಗಾರರಿಗೆ ವಿಶಿಷ್ಟವಾಗಿಲ್ಲ, ಆದರೆ ಆಫ್ರಿಕನ್ ರಾಷ್ಟ್ರೀಯತೆಯ ಭಾಷಣದಲ್ಲಿ ಕಾಣಿಸಿಕೊಂಡಿದೆ ಮತ್ತು "ಜನಪದ ರಾಜಕೀಯ ನಿರ್ಮಾಣ ಮತ್ತು ಅದರ ಬಳಕೆಯು ೧೯ನೇ ಶತಮಾನದ ಮುಖ್ಯಭೂಮಿಕೆಯಾಗಿತ್ತು. ಯುರೋಪಿಯನ್ ರಾಷ್ಟ್ರೀಯತೆಗಳು." [೨೫]

ಪ್ರಕಟಣೆಗಳು

[ಬದಲಾಯಿಸಿ]

ABISY ದೆಹಲಿಯಲ್ಲಿ ಸಂಪಾದಿಸಿದ ಇತಿಹಾಸ್ ದರ್ಪಣ್ [೨೬](ಇತಿಹಾಸದ ಕನ್ನಡಿ) ಜರ್ನಲ್ ಅನ್ನು ಪ್ರಕಟಿಸುತ್ತದೆ. ಹೆಚ್ಚಿನ ಲೇಖನಗಳನ್ನು ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ, ಆದರೆ ಕೆಲವು ಹಿಂದಿಯಲ್ಲಿವೆ . ಇದನ್ನು ೧೯೯೫ ರಿಂದ ಕಾಲ ಕಾಲಕ್ಕೆ ಪ್ರಕಟಿಸಲಾಗಿದೆ; ೨೦೧೬ ರಿಂದ, ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್ ಆಡಳಿತವನ್ನು ವಹಿಸಿಕೊಂಡಿದೆ. ಕೆಲವು ಲೇಖಕರು ಇತಿಹಾಸದಲ್ಲಿ ಯಾವುದೇ ಸಾಂಸ್ಥಿಕ ಸಂಬಂಧ ಅಥವಾ ಶೈಕ್ಷಣಿಕ ತರಬೇತಿಯನ್ನು ಹೊಂದಿದ್ದಾರೆ. ಜರ್ನಲ್‌ನ ಸಂಪಾದಕೀಯ ಮಾನದಂಡಗಳು ಭಾರತೀಯ ಐತಿಹಾಸಿಕ ಸಂಶೋಧನೆಯಲ್ಲಿ "ವೈಜ್ಞಾನಿಕ ಪಾತ್ರ"ದ ಅಗತ್ಯತೆಯನ್ನು ಒತ್ತಿಹೇಳುತ್ತವೆ,

ಇಲ್ಲಿ ಎಲ್ಲಾ ಸ್ಥಳೀಯ ಇತಿಹಾಸವನ್ನು ಸಂಶೋಧನೆಗೆ ಯೋಗ್ಯವೆಂದು ಪರಿಗಣಿಸಲಾಗುವುದಿಲ್ಲ, ಆದರೆ ಸಂಸ್ಥೆಯ ಸಿದ್ಧಾಂತಕ್ಕೆ ಅನುಗುಣವಾಗಿ ಇರುವ ಸಂಗತಿಗಳು ಮಾತ್ರ. [೨೭] .

ಸಂಸ್ಥೆ

[ಬದಲಾಯಿಸಿ]

ABISY ಪ್ರಧಾನ ಕಛೇರಿಯು ಆರ್‌ಎಸ್‌ಎಸ್‌ನ ದೆಹಲಿ ಕಚೇರಿಯಾದ ಕೇಶವ್ ಕುಂಜ್‌ನಲ್ಲಿದೆ. [೧೫] ಕೇಂದ್ರ ಕಚೇರಿಯ ಅಡಿಯಲ್ಲಿ ಹದಿಮೂರು ಕ್ಷೇತ್ರಗಳು ಅಥವಾ ಪ್ರಾಂತೀಯ ಕಚೇರಿಗಳು, ಪ್ರತಿಯೊಂದೂ ಅಧ್ಯಕ್ಷರಿಂದ ನಡೆಸಲ್ಪಡುತ್ತವೆ. ಈ ಕೇಂದ್ರಗಳು ABISY ಸಿದ್ಧಾಂತವನ್ನು ಸ್ಥಳೀಯ ಸಾಂಸ್ಕೃತಿಕ ಸಿದ್ಧಾಂತ ಮತ್ತು ಸಂಪ್ರದಾಯಕ್ಕೆ ಸಂಪರ್ಕಿಸುವ ಜವಾಬ್ದಾರಿಯನ್ನು ಹೊಂದಿವೆ. [೧೫] ABISY ನ ಶಾಖೆಗಳು ಚಂಡೀಗಢ, ಶಿಮ್ಲಾ ಮತ್ತು ಕುಲುಗಳಲ್ಲಿ ಅಸ್ತಿತ್ವದಲ್ಲಿವೆ. [೨೮] ABISY ತನ್ನೊಂದಿಗೆ ೫೦೦ ಪ್ರಾಧ್ಯಾಪಕರನ್ನು ಹೊಂದಿದೆ ಎಂದು ಹೇಳುತ್ತದೆ. [೧೨]

ಉಲ್ಲೇಖಗಳು

[ಬದಲಾಯಿಸಿ]
  1. ೧.೦ ೧.೧ ೧.೨ ೧.೩ ೧.೪ ೧.೫ Berti 2006.
  2. ೨.೦ ೨.೧ Berti 2007, pp. 7–9.
  3. ೩.೦ ೩.೧ ೩.೨ Chatterji, Hansen & Jaffrelot 2019, p. 165-168.
  4. Chatterji, Hansen & Jaffrelot 2019, p. 165.
  5. ೫.೦ ೫.೧ Berti 2007, p. 7.
  6. Iyer, Kavitha (3 Jul 2014). "Coming soon from Modi sarkar: RSS takeover of top research, cultural bodies". Firstpost.
  7. Chakravarti, Ananya (2023-09-01). "Forgotten Tales: The NCERT debate misses the Sangh's grip over local histories". The Caravan. Retrieved 2023-09-30.
  8. "ICHR chief Sudershan Rao recommends 3 RSS historians to top panel". Economic Times. 14 January 2015. Archived from the original on 2016-03-05. Retrieved 2024-04-22.
  9. "Saffron hue in revamped ICHR". The Hindu. 2 March 2015.
  10. "Vision and objectives". ABISY. Archived from the original on 2019-06-22. Retrieved 2024-04-22.
  11. Berti 2007, p. 15.
  12. ೧೨.೦ ೧೨.೧ ೧೨.೨ ೧೨.೩ "Among new projects, RSS to focus on studying adivasis traditions". Hindustan Times. 21 Aug 2014. Archived from the original on 24 August 2014.
  13. ೧೩.೦ ೧೩.೧ "6 times more 'Puranas' in hand, RSS puts 100 on job for new history". The Indian Express. 18 August 2014. Retrieved 2014-09-09.
  14. Berti 2006, p. 17.
  15. ೧೫.೦ ೧೫.೧ ೧೫.೨ ೧೫.೩ Berti 2007.
  16. ೧೬.೦ ೧೬.೧ ೧೬.೨ Berti 2007, p. 8.
  17. Trautmann 2005, p. xiii.
  18. Bryant 2001, pp. 140–145.
  19. "Polarity and Temporality of High-Resolution Y-Chromosome Distributions in India Identify Both Indigenous and Exogenous Expansions and Reveal Minor Genetic Influence of Central Asian Pastoralists". National Library of Medicine. 16 December 2005. Archived from the original on 12 ಜನವರಿ 2015. Retrieved 16 December 2005.{{cite web}}: CS1 maint: bot: original URL status unknown (link)
  20. "Separating the post-Glacial coancestry of European and Asian Y chromosomes within haplogroup R1a".
  21. "Misconceptions about Aryans". ABISY. Archived from the original on 2 ಜೂನ್ 2016. Retrieved 21 June 2019.
  22. "History according to puranas: RSS's next big project". Firstpost. 18 Aug 2014.
  23. Berti 2007, p. 24.
  24. Berti 2007, p. 23-24.
  25. Berti 2007, p. 9.
  26. "ಇತಿಹಾಸ ದರ್ಪಣ".
  27. Berti 2007, p. 14.
  28. Berti 2007, p. 12.

ಮೂಲಗಳು

[ಬದಲಾಯಿಸಿ]