ವಿಷಯಕ್ಕೆ ಹೋಗು

ಭಟಲ ಪಿನಾರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sterculia foetida
Scientific classification e
ಸಾಮ್ರಾಜ್ಯ: Plantae
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: Eudicots
ಏಕಮೂಲ ವರ್ಗ: Rosids
ಗಣ: ಮಾಲ್ವೇಲೀಸ್
ಕುಟುಂಬ: ಮಾಲ್ವೇಸೀ
ಕುಲ: ಸ್ಟರ್‌ಕ್ಯೂಲಿಯಾ
ಪ್ರಜಾತಿ:
S. foetida
Binomial name
Sterculia foetida
Synonyms[]
  • Clompanus foetida (L.) Kuntze
  • Clompanus foetidus (L.) Kuntze
  • Sterculia mexicana var. guianensis Sagot

ಭಟಲ ಪಿನಾರಿ ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್‌ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು.

ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ.[][]

ಇದು ೭-೧೫ ಮೀ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಸಂಯುಕ್ತ ಮಾದರಿಯವು. ಫೆಬ್ರುವರಿ-ಮಾರ್ಚ್ ಹೂಬಿಡುವ ಕಾಲ. ಆಗ ಹೂಗಳಿಂದ ದುರ್ವಾಸನೆ ಹೊರಡುತ್ತದೆ. ಕಾಯಿ ದೋಣಿಯಾಕಾರದ್ದು. ಭಟಲ ಪಿನಾರಿಯ ವೃದ್ಧಿ ಬೀಜದ ಮೂಲಕ.

ಉಪಯೋಗಗಳು

[ಬದಲಾಯಿಸಿ]

ಕ್ಷಾಮಕಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದಿದೆ. ಬೀಜದಿಂದ ಎಣ್ಣೆಯೂ ಒದಗುತ್ತದೆ. ತೊಗಟೆಯಿಂದ ನಾರನ್ನು ತೆಗೆದು ಹಗ್ಗಗಳನ್ನು ಹೊಸೆಯುವುದುಂಟು. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು.

ಛಾಯಾಂಕಣ

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. "Sterculia foetida L. — the Plant List". Archived from the original on 2012-11-06. Retrieved 2023-04-19.
  2. "Kalumpang, Sterculia foetida, wild almond, Xiang ping po: Philippine Herbal Medicine / Philippine Alternative Medicine". www.stuartxchange.org. Retrieved 2017-03-10.
  3. "Sterculia foetida L. - Checklist View". Gbif.org. Retrieved 2013-12-10.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: