ಭಟಲ ಪಿನಾರಿ
ಗೋಚರ
Sterculia foetida | |
---|---|
Scientific classification | |
ಸಾಮ್ರಾಜ್ಯ: | Plantae |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | Eudicots |
ಏಕಮೂಲ ವರ್ಗ: | Rosids |
ಗಣ: | ಮಾಲ್ವೇಲೀಸ್ |
ಕುಟುಂಬ: | ಮಾಲ್ವೇಸೀ |
ಕುಲ: | ಸ್ಟರ್‌ಕ್ಯೂಲಿಯಾ |
ಪ್ರಜಾತಿ: | S. foetida
|
Binomial name | |
Sterculia foetida | |
Synonyms[೧] | |
|
ಭಟಲ ಪಿನಾರಿ ಸ್ಟರ್‌ಕ್ಯೂಲಿಯೇಸೀ ಕುಟುಂಬಕ್ಕೆ ಸೇರಿದ ಅಲಂಕಾರ ವೃಕ್ಷ. ಸ್ವರ್‌ಕ್ಯೂಲಿಯ ಫೀಟಿಡ ಇದರ ಸಸ್ಯವೈಜ್ಞಾನಿಕ ಹೆಸರು.
ಉಷ್ಣವಲಯದ ಮೂಲನಿವಾಸಿಯಾದ ಇದು ಆಫ್ರಿಕ, ಉತ್ತರ ಆಸ್ಟ್ರೇಲಿಯ, ಶ್ರೀಲಂಕಾ, ಮಲಕಾ ದ್ವೀಪಗಳು ಹಾಗೂ ಭಾರತದಲ್ಲಿ ಸಮೃದ್ಧವಾಗಿ ಹರಡಿದೆ.[೨][೩]
ವಿವರ
[ಬದಲಾಯಿಸಿ]ಇದು ೭-೧೫ ಮೀ ಎತ್ತರಕ್ಕೆ ಬೆಳೆಯುವ ಮರ. ಎಲೆಗಳು ಸಂಯುಕ್ತ ಮಾದರಿಯವು. ಫೆಬ್ರುವರಿ-ಮಾರ್ಚ್ ಹೂಬಿಡುವ ಕಾಲ. ಆಗ ಹೂಗಳಿಂದ ದುರ್ವಾಸನೆ ಹೊರಡುತ್ತದೆ. ಕಾಯಿ ದೋಣಿಯಾಕಾರದ್ದು. ಭಟಲ ಪಿನಾರಿಯ ವೃದ್ಧಿ ಬೀಜದ ಮೂಲಕ.
ಉಪಯೋಗಗಳು
[ಬದಲಾಯಿಸಿ]ಕ್ಷಾಮಕಾಲದಲ್ಲಿ ಇದರ ಬೀಜಗಳನ್ನು ಹುರಿದು ತಿನ್ನುವುದಿದೆ. ಬೀಜದಿಂದ ಎಣ್ಣೆಯೂ ಒದಗುತ್ತದೆ. ತೊಗಟೆಯಿಂದ ನಾರನ್ನು ತೆಗೆದು ಹಗ್ಗಗಳನ್ನು ಹೊಸೆಯುವುದುಂಟು. ಚೌಬೀನೆಯಿಂದ ಹಗುರವಾದ ಉಪಕರಣಗಳನ್ನು ತಯಾರಿಸಬಹುದು.
ಛಾಯಾಂಕಣ
[ಬದಲಾಯಿಸಿ]-
ಪರಾಗ
-
ಕೊಶಕ ಮತ್ತು ಬೀಜಗಳು - ಎಂಎಚ್ಎನ್ಟಿ
-
ಕೆಂಪು ಬಣ್ಣದಲ್ಲಿ ಗುರುತಿಸಲಾದ ಬಿಂದುಗಳು ಭಟಲ ಪಿನಾರಿಯ ಪರಿಚಿತ ಸ್ಥಳಗಳು
-
ಹಣ್ಣು ಮತ್ತು ಎಲೆಗಳು
-
ಎಲೆಗಳು ಮತ್ತು ಮರ
-
ಕೆಳಗಿನ ಭಾಗದಲ್ಲಿನ ಹೂವು ಎರಡು ಶೈಲಿಗಳನ್ನು ಹೊಂದಿರುವಂತೆ ತೋರುತ್ತದೆ.
ಉಲ್ಲೇಖಗಳು
[ಬದಲಾಯಿಸಿ]- ↑ "Sterculia foetida L. — the Plant List". Archived from the original on 2012-11-06. Retrieved 2023-04-19.
- ↑ "Kalumpang, Sterculia foetida, wild almond, Xiang ping po: Philippine Herbal Medicine / Philippine Alternative Medicine". www.stuartxchange.org. Retrieved 2017-03-10.
- ↑ "Sterculia foetida L. - Checklist View". Gbif.org. Retrieved 2013-12-10.
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: