ಕಳ್ಳ ಮಳ್ಳ ಸುಳ್ಳ (ಚಲನಚಿತ್ರ)
ಗೋಚರ
ಕಳ್ಳ ಮಳ್ಳ ಸುಳ್ಳ | |
---|---|
ನಿರ್ದೇಶನ | ಉದಯ ಪ್ರಕಾಶ್ |
ನಿರ್ಮಾಪಕ | ಕೆ. ಮಂಜು |
ಲೇಖಕ | ಎಂ. ಎಸ್. ರಮೇಶ್ (ಸಂಭಾಷಣೆ) |
ಚಿತ್ರಕಥೆ | ಉದಯ ಪ್ರಕಾಶ್ |
ಕಥೆ | ಶಕ್ತಿ ಚಿದಂಬರಂ |
ಪಾತ್ರವರ್ಗ | ವಿ. ರವಿಚಂದ್ರನ್, ರಮೇಶ್ ಅರವಿಂದ್, ರಾಗಿಣಿ ದ್ವಿವೇದಿ, ವಿಜಯ್ ರಾಘವೇಂದ್ರ |
ಸಂಗೀತ | ಅಲೆಕ್ಸ್ ಪಾಲ್ |
ಛಾಯಾಗ್ರಹಣ | ಜಿ. ಎಸ್. ವಿ. ಸೀತಾರಾಮ್ |
ಸಂಕಲನ | ಕೆ. ಎಂ. ಪ್ರಕಾಶ್ |
ಸ್ಟುಡಿಯೋ | ಕೆ. ಮಂಜು ಸಿನೆಮಾಸ್ |
ವಿತರಕರು | ಜಯಣ್ಣ ಫಿಲಮ್ಸ್ |
ಬಿಡುಗಡೆಯಾಗಿದ್ದು | 2011 ಸೆಪ್ಟೆಂಬರ್ 16 |
ಅವಧಿ | 160 ನಿಮಿಷಗಳು |
ದೇಶ | ಭಾರತ |
ಭಾಷೆ | ಕನ್ನಡ |
ಕಳ್ಳ ಮಳ್ಳ ಸುಳ್ಳ 2011 ರ ಹಾಸ್ಯ ಪ್ರಕಾರದ ಬಹುತಾರಾಗಣದ ಕನ್ನಡ ಚಲನಚಿತ್ರವಾಗಿದ್ದು, ವಿ. ರವಿಚಂದ್ರನ್, ರಮೇಶ್ ಅರವಿಂದ್, ವಿಜಯ್ ರಾಘವೇಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಉದಯ ಪ್ರಕಾಶ್ ಅವರ ಚಿತ್ರಕಥೆ ಮತ್ತು ನಿರ್ದೇಶನ ಇದ್ದು, ಇದನ್ನು ಕೆ.ಮಂಜು ನಿರ್ಮಿಸಿದ್ದಾರೆ. ಅಲೆಕ್ಸ್ ಪಾಲ್ ಸಂಗೀತ ಸಂಯೋಜಿಸಿದ್ದಾರೆ. ಇದು 2002 ರ ಯಶಸ್ವಿ ತಮಿಳು ಚಲನಚಿತ್ರ ಚಾರ್ಲಿ ಚಾಪ್ಲಿನ್‌ನ ರೀಮೇಕ್ ಆಗಿದೆ. 'ಕಳ್ಳ ಮಲ್ಲ ಸುಳ್ಳ' ದ್ವಿತಿಯಾರ್ಧದಲ್ಲಿ ನಾನ್ ಸ್ಟಾಪ್ ಕಾಮಿಡಿ ಆಗಿದ್ದು, ವೀಕ್ಷಕರು ಥಿಯೇಟರ್ ನಿಂದ ಹೊರಬಂದಾಗ ಖುಷಿ ಪಡುತ್ತಾರೆ. [೧] ಇದನ್ನು ಹಿಂದಿಯಲ್ಲಿ ನೋ ಎಂಟ್ರಿ (2005) ಎಂದು ರೀಮೇಕ್ ಮಾಡಲಾಯಿತು.
ಪಾತ್ರವರ್ಗ
[ಬದಲಾಯಿಸಿ]- ರವಿಯಾಗಿ ವಿ.ರವಿಚಂದ್ರನ್
- ರಮೇಶ್ ಪಾತ್ರದಲ್ಲಿ ರಮೇಶ್ ಅರವಿಂದ್
- ರಘು ಪಾತ್ರದಲ್ಲಿ ವಿಜಯ್ ರಾಘವೇಂದ್ರ
- ಖುಷ್ಬು ಪಾತ್ರದಲ್ಲಿ ರಾಗಿಣಿ ದ್ವಿವೇದಿ
- ರಮ್ಯಾ ಪಾತ್ರದಲ್ಲಿ ಯಜ್ಞಾ ಶೆಟ್ಟಿ
- ಸಂಜನಾ ಪಾತ್ರದಲ್ಲಿ ರಿಷಿಕಾ ಸಿಂಗ್
- ರಂಗಾಯಣ ರಘು
- ಮೋನಿಕಾ
- ಮಂಡ್ಯ ರಮೇಶ್
- ಸಿಹಿ ಕಹಿ ಚಂದ್ರು
- ಸಾಧು ಕೋಕಿಲ
ಧ್ವನಿಮುದ್ರಿಕೆ
[ಬದಲಾಯಿಸಿ]ಸಂ. | ಹಾಡು | ಸಾಹಿತ್ಯ | ಹಾಡುಗಾರರು | ಸಮಯ |
---|---|---|---|---|
1. | "ಈ ದುನಿಯಾದಲ್ಲಿ" | ಕವಿರಾಜ್ | ವಿಜಯ್ ಪ್ರಕಾಶ್ | |
2. | "ತುಪ್ಪ ಬೇಕಾ ತುಪ್ಪ" | ಕವಿರಾಜ್ | ಜಸ್ಸಿ ಗಿಫ್ಟ್, ಸುನೀತಾ | |
3. | "ನೋಡಬೇಡ ಅವನನ್ನೇ" | ಕವಿರಾಜ್ | ಅನಿತಾ | |
4. | "ಜೋಕೆ ನಾನು ಬಳ್ಳಿಯ ಮಿಂಚು (ರೀಮಿಕ್ಸ್)" | ಚೈತ್ರ ಎಚ್. ಜಿ | ||
5. | "ಎಲ್ಲಿರುವೆ ಖುಷ್ಬೂ" | ಕವಿರಾಜ್ | ಶಂಕರ್ ಮಹದೇವನ್ | |
6. | "ರಾಕು ಚಿಕ್ಕು" | ಕವಿರಾಜ್ | ಅಜಯ್ ವಾರಿಯರ್, ಚೈತ್ರ ಎಚ್. ಜಿ |
ಉಲ್ಲೇಖಗಳು
[ಬದಲಾಯಿಸಿ]- ↑ "Kalla Malla Sulla". Sify. Archived from the original on 2017-08-23. Retrieved 2022-03-20.