ವಿಷಯಕ್ಕೆ ಹೋಗು

ಬಂದಡ್ಕ

ನಿರ್ದೇಶಾಂಕಗಳು: 12°30′5.88″N 75°16′3.51″E / 12.5016333°N 75.2676417°E / 12.5016333; 75.2676417
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬಂದಡ್ಕ
ಕೋಟೆಕ್ಕಾಲ್
ಸಣ್ಣ ಪಟ್ಟಣ
ಬಂದಡ್ಕ is located in Kerala
ಬಂದಡ್ಕ
ಬಂದಡ್ಕ
ಕೇರಳದ ಗ್ರಾಮ, ಭಾರತ
ಬಂದಡ್ಕ is located in India
ಬಂದಡ್ಕ
ಬಂದಡ್ಕ
ಬಂದಡ್ಕ (India)
Coordinates: 12°30′5.88″N 75°16′3.51″E / 12.5016333°N 75.2676417°E / 12.5016333; 75.2676417
ದೇಶ ಭಾರತ
ರಾಜ್ಯಕೇರಳ
ಜಿಲ್ಲೆಕಾಸರಗೋಡು
Government
 • Bodyಕುತ್ತಿಕೋಲು ಗ್ರಾಮ ಪಂಚಾಯತ್
Population
 (2011)
 • Total೭,೮೨೪
ಭಾಷೆಗಳು
 • ಅಧಿಕೃತಮಲೆಯಾಳಂ, ಇಂಗ್ಲೀಷ್
Time zoneUTC+5:30 (IST)
ಪಿನ್‌ಕೋಡ್
671541
Vehicle registrationKL-14

ಬಂದಡ್ಕ ಎಂಬುದು ಭಾರತ ದೇಶದ ಕೇರಳ ರಾಜ್ಯದ ಉತ್ತರತುದಿಯ ಕಾಸರಗೋಡು ಜಿಲ್ಲೆಯ ಒಂದು ಸಣ್ಣ ಪಟ್ಟಣವಾಗಿದೆ. ಬಂದಡ್ಕದಲ್ಲಿ ಕೋಟೆ ಇರುವ ಕಾರಣ ಕೊಟೆಕ್ಕಾಲ್ ಎಂದೂ ಕರೆಯುತ್ತಾರೆ. ಇದು ಕುತ್ತಿಕೋಲು ‌ಗ್ರಾಮ ಪಂಚಾಯತ್‌ನ ವ್ಯಾಪ್ತಿಗೆ ಬರುತ್ತದೆ. ಇದು ಉತ್ತರ ಕೇರಳದ ಮಲೆನಾಡು ಪ್ರದೇಶದ ಭಾಗವಾಗಿದೆ. ಈ ಪ್ರದೇಶವು ಜಿಲ್ಲಾ ಕೇಂದ್ರವಾದ ಕಾಸರಗೋಡಿನಿಂದ ೩೭ ಕಿ.ಮೀ ಪೂರ್ವ ಭಾಗದಲ್ಲಿ ಹಾಗೂ ರಾಜ್ಯ ರಾಜಧಾನಿ ತಿರುವನಂತಪುರಂನಿಂದ ೫೯೨ ಕಿ.ಮೀ. ದೂರದಲ್ಲಿದೆ. ಬಂದಡ್ಕದ ಅಂಚೆ ಪಿನ್‌ಕೋಡ್ ೬೭೧೫೪೧ ಮತ್ತು ಅಂಚೆಯ ಪ್ರಧಾನ ಕಚೇರಿ ಚೆಂಗಳದಲ್ಲಿದೆ. []

ಭೌಗೋಳಿಕತೆ ಮತ್ತು ಜನಸಂಖ್ಯೆ

[ಬದಲಾಯಿಸಿ]

ಸಾಂಸ್ಕೃತಿಕ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಕಾಸರಗೋಡು ಜಿಲ್ಲೆಯ ಅಗ್ರಗಣ್ಯ ಪ್ರದೇಶಗಳಲ್ಲಿ ಬಂದಡ್ಕವೂ ಪ್ರಮುಖವಾಗಿದೆ. ಇಲ್ಲಿನ ಜನರ ಪ್ರಧಾನವಾಗಿ ಕೃಷಿಯನ್ನು ಅವಲಂಬಿಸಿ ಬದುಕುತ್ತಿದ್ದಾರೆ. ಈ ಪ್ರದೇಶವು ಹಿಂದೂ, ಇಸ್ಲಾಂ, ಕ್ರೈಸ್ತ ಜನಾಂಗದ ಜನರ ಸಾಮರಸ್ಯದ ಕೇಂದ್ರವಾಗಿದೆ. ೨೦೧೧ರ ಭಾರತದ ಜನಗಣತಿಯ ಪ್ರಕಾರ ಬಂದಡ್ಕವು ಒಂದು ಗ್ರಾಮ ಪ್ರದೇಶವಾಗಿದೆ. ಇಲ್ಲಿನ ಸಾಕ್ಷರತೆಯ ಪ್ರಮಾಣವು ೭೮.೫೨ ಶೇಕಡ ಆಗಿದೆ. ಜನಗಣತಿಯ ಪ್ರಕಾರ ಬಂದಡ್ಕವು ೭,೮೨೪ ಜನಸಂಖ್ಯೆಯನ್ನು ಹೊಂದಿದೆ. ಇದೇ ಜನಗಣತಿಯ ಪ್ರಕಾರ ಪುರುಷರ ಸಂಖ್ಯೆ ೩,೮೯೩ (ಶೇಕಡಾ. ೪೯.೭೫) ಹಾಗೂ ಸ್ತ್ರೀಯರ ಸಂಖ್ಯೆ ೩೯೩೧ (ಶೇಕಡಾ. ೫೦.೨೪) ಆಗಿದೆ. []

ಪಡುಪ್ಪು (2 ಕಿ.ಮೀ), ಪಾಣತ್ತೂರ್ (15‌ ಕಿ.ಮೀ), ಕುತ್ತಿಕೋಲ್ (9 ಕಿ.ಮೀ) ಮತ್ತು ಕರ್ನಾಟಕದ ಸುಳ್ಯ (20 ಕಿ.ಮೀ) ಬಂದಡ್ಕಕ್ಕೆ ಹತ್ತಿರದ ಪಟ್ಟಣಗಳಾಗಿದೆ. ಬಂದಡ್ಕದ ಪೂರ್ವ ಭಾಗದಲ್ಲಿ ಸುಳ್ಯ, ಪಶ್ಚಿಮಕ್ಕೆ ಕಾಸರ‌ಗೋಡು, ಉತ್ತರದ ಕಡೆಗೆ ಪುತ್ತೂರು, ದಕ್ಷಿಣಕ್ಕೆ ನಿಲೇಶ್ವರ ಇದೆ. ದಶಕಗಳಿಂದ ಇಲ್ಲಿನ ಜನರು ವಿವಿಧ ಅಗತ್ಯಗಳಿಗಾಗಿ ಜಿಲ್ಲಾಕೇಂದ್ರವಾದ ಕಾಸರಗೋಡಿನ ಜೊತೆಗೆ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯವನ್ನು ಆಶ್ರಯಿಸುತ್ತಿದ್ದಾರೆ. 1952ರಲ್ಲಿ ಇಳಂದಿಲ ಸಣ್ಣಯ್ಯ ಮಾಸ್ಟರ್‌ ಅವರಿಂದ ಸ್ಥಾಪಿತವಾದ ಬಂದಡ್ಕ ಸರಕಾರಿ ಹೈಯರ್‌ ಸೆಕೆಂಡರಿ ಶಾಲೆಯು ಇಲ್ಲಿನ ಪ್ರಧಾನ ಶಿಕ್ಷಣ ಕೇಂದ್ರವಾಗಿದೆ. ಬಂದಡ್ಕ ಶ್ರೀ ಸುಬ್ರಮಣ್ಯ ದೇವಾಲಯವು ಇಲ್ಲಿನ ಪ್ರಧಾನ ಆರಾಧನಾ ಕೇಂದ್ರವಾಗಿದೆ.

ಇಲ್ಲಿನ ಸ್ಥಳೀಯ ಅಧಿಕೃತ ಭಾಷೆ ಮಲೆಯಾಳಂ ಆಗಿದೆ. ಆದರೂ ಕೇರಳದ ಸರಕಾರದ ಕನ್ನಡ ಅಲ್ಪಸಂಖ್ಯಾತರ ತಾಲೂಕಿನ ಭಾಗವಾಗಿರುವ ಕಾರಣದಿಂದ ಕನ್ನಡವೂ ಸ್ಥಳೀಯ ಭಾಷೆಯ ಗೌರವ ಹೊಂದಿದೆ. ಪ್ರಾದೇಶಿಕವಾಗಿ ಅರೆಭಾಷೆ, ತುಳು, ಹವ್ಯಕ ಮತ್ತು ಮರಾಠಿ ಭಾಷೆಗಳನ್ನು ಮಾತನಾಡುವ ವಿವಿಧ ಜನವಿಭಾಗದವರು ವ್ಯಾವಹಾರಿಕ ಭಾಷೆಯಾಗಿ ಕನ್ನಡವನ್ನು ಬಳಸುತ್ತಿದ್ದಾರೆ. ಕನ್ನಡ ಮತ್ತು ಮಲೆಯಾಳಂ ಭಾಷಿಕರು ಧಾರಾಳವಾಗಿ ಕಂಡು ಬರುವ ಬಂದಡ್ಕ ಗ್ರಾಮದ ಕಕ್ಕಚಾಲ್‌, ಬಿಲ್ಲಾರಮಜಲು, ಇಳಂದಿಲ, ಪಾಲಾರು ಮೊದಲಾದ ಪ್ರದೇಶಗಳು ಕನ್ನಡಿಗರು ಹೆಚ್ಚಿನ ಪ್ರಮಾಣದಲ್ಲಿ ಕಂಡು ಬರುವ ಸ್ಥಳಗಳಾಗಿದೆ.

ಬಂದಡ್ಕವು ಪೊಯಿನಾಚ್ಚಿ-ಆಲೆಟ್ಟಿ-ಸುಳ್ಯ ರಸ್ತೆಯ ಮಧ್ಯದಲ್ಲಿ ಇದೆ. ಮೈಸೂರು ಮತ್ತು ಬೆಂಗಳೂರು ಭಾಗಕ್ಕೆ ಈ ರಸ್ತೆಯ ಮೂಲಕ ಸುಲಭವಾಗಿ ಹೋಗಬಹುದು. ಇಲ್ಲಿಂದ ಕಾಸರಗೋಡು, ಕಾಞ್ಞಂಗಾಡು, ಪಾಣತ್ತೂರು, ಮಂಗಳೂರು, ಸುಳ್ಯ ಮೊದಲಾದ ಪ್ರಮುಖ ನಗರಗಳಿಗೆ ಪ್ರಯಾಣ ಮಾಡಲು ಖಾಸಗಿ ಮತ್ತು ಕೇರಳ ರಾಜ್ಯ ಸಾರಿಗೆ (ಕೆ.ಎಸ್.ಆರ್.ಟಿ.ಸಿ) ಬಸ್ಸುಗಳು ಲಭ್ಯವಿದೆ. ಹತ್ತಿರದ ರೈಲ್ವೇ ನಿಲ್ದಾಣಗಳಾದ ಕಾಸರಗೋಡು ಮತ್ತು ಕಾಞ್ಞಂಗಾಡು, ಮಂಗಳೂರು - ಪಾಲಕ್ಕಾಡ್ ಮಾರ್ಗದ ಪ್ರಮುಖ ನಿಲ್ದಾಣವಾಗಿದೆ. ಉತ್ತರದ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ದಕ್ಷಿಣದ ಕಣ್ಣೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ವಿಮಾನ ನಿಲ್ದಾಣಗಳು ಸಮೀಪದ ವಿಮಾನ ನಿಲ್ದಾಣಗಳಾಗಿದೆ. ‌

ಬಂದಡ್ಕ ಪೇಟೆ

ಪ್ರಾದೇಶಿಕ ಭಾಷಾ ವೈವಿಧ್ಯ

[ಬದಲಾಯಿಸಿ]

ಶಿಕ್ಷಣ ಕೇಂದ್ರಗಳು

[ಬದಲಾಯಿಸಿ]
  • ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಬಂದಡ್ಕ
  • ಸರಸ್ವತಿ ವಿದ್ಯಾನಿಕೇತನ್ ಶಾಲೆ, ಬಂದಡ್ಕ

ಪ್ರೇಕ್ಷಣೀಯ ಸ್ಥಳಗಳು

[ಬದಲಾಯಿಸಿ]
  • ಬಂದಡ್ಕ ಕೋಟೆ
  • ಬಂದಡ್ಕ ಶ್ರೀ ಸುಬ್ರಮಣ್ಯ ದೇವಸ್ಥಾನ
  • ಬಂದಡ್ಕ ಶ್ರೀ ರಾಮನಾಥ ದೇವಳ
  • ಪದಿಕಲ್ ಶ್ರೀ ಕಲ್ಲುರ್ಟಿ ದೈವಸ್ಥಾನ

ಸಮೀಪದ ಸ್ಥಳಗಳು

[ಬದಲಾಯಿಸಿ]

ಉಲ್ಲೇಖಗಳು

[ಬದಲಾಯಿಸಿ]
  1. ಪಿನ್‌ಕೋಡ್ - ೬೭೧೫೪೧ [೧]
  2. Office of the Registrar General & Census Commissioner, India As per census 2011 - Bandadka Village


"https://kn.wikipedia.org/w/index.php?title=ಬಂದಡ್ಕ&oldid=1051658" ಇಂದ ಪಡೆಯಲ್ಪಟ್ಟಿದೆ