ವಿಷಯಕ್ಕೆ ಹೋಗು

ಚೂರಿತ್ತೋಡ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚೂರಿತ್ತೋಡ್‌ ಗ್ರಾಮದ ಒಂದು ದೃಶ್ಯ

ಚೂರಿತ್ತೋಡ್ ಭಾರತದ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯ ಒಂದು ಸಣ್ಣ ಗ್ರಾಮ. ಇದು ಕು‌ತ್ತಿಕೋಲು ಪಂಚಾಯತ್‌ನ ಬಂದಡ್ಕ ಗ್ರಾಮದ ವ್ಯಾಪ್ತಿಯಲ್ಲಿ ಬರುತ್ತದೆ. ಇದು ಉತ್ತರ ಕೇರಳ ವಿಭಾಗಕ್ಕೆ ಸೇರಿದೆ. ಜಿಲ್ಲಾ ಕೇಂದ್ರವಾದ ಕಾಸರಗೋಡಿನಿಂದ ಪೂರ್ವಕ್ಕೆ ೪೧ ಕಿ.ಮೀ ಮತ್ತು ಗ್ರಾಮ ಕೇಂದ್ರ ಬಂದಡ್ಕದಿಂದ ೩ ಕಿ.ಮೀ ದೂರದಲ್ಲಿ ಚೂರಿತ್ತೋಡ್ ಇದೆ. ಇಲ್ಲಿನ ಪಿನ್‌ಕೋಡ್ ೬೭೧೫೪೧ ಮತ್ತು ಇಲ್ಲಿನ ಅಂಚೆ ಕಚೇರಿಯು ೩ ಕಿ.ಮೀ ದೂರದ ಮಾನಡ್ಕಂ ಎಂಬಲ್ಲಿದೆ. ಕೇರಳ ರಾಜ್ಯದ ಮಲೆನಾಡ ಹೆದ್ದಾರಿಯ ಬಂದಡ್ಕ - ಕೋಳಿಚ್ಚಾಲ್‌ ಮಾರ್ಗದ ಮಧ್ಯೆ ಚೂರಿತ್ತೋಡ್‌ ಎಂಬ ಗ್ರಾಮವಿದೆ.[]

ಹೆಗ್ಗುರುತುಗಳು

[ಬದಲಾಯಿಸಿ]
  • ಚೂರಿತ್ತೋಡ್‌ ಅಯ್ಯಪ್ಪ ಭಜನಾ ಮಂದಿರ[]
  • ಚೂರಿತ್ತೋಡ್‌ ಮಕ್ಕಳ ಆರೈಕೆ ಕೇಂದ್ರ (ಅಂಗನವಾಡಿ)
  • ಪ್ರಾಥಮಿಕ ಆರೋಗ್ಯ ಕೇಂದ್ರ, ಮಾನಡ್ಕಂ (ಪಶ್ಚಿಮ ಭಾಗ)[]
  1. ಮಲೆನಾಡ ಹೆದ್ದಾರಿ ಹಾದುಹೋಗುವ ಪ್ರದೇಶಗಳು
  2. ಚೂರಿತ್ತೋಡ್‌ ಅಯ್ಯಪ್ಪ ಭಜನಾ ಮಂದಿರ - ಗೂಗಲ್‌ ನಕ್ಷೆ
  3. ಪ್ರಾಥಮಿಕ ಆರೋಗ್ಯ ಕೇಂದ್ರ, ಮಾನಡ್ಕಂ - ಗೂಗಲ್‌ ನಕ್ಷೆ