ಜ್ಞಾನೇಂದ್ರಿಯ
ಜ್ಞಾನೇಂದ್ರಿಯಗಳು ಐದು: ಕಣ್ಣು, ಕಿವಿ, ನಾಲಗೆ, ಮೂಗು ಮತ್ತು ಚರ್ಮ (ಅಥವಾ ತ್ವಕ್ಕು). ಇವು ಇಂದ್ರಿಯ ಗೋಚರವಾಗುವ ರೂಪ, ಶಬ್ದ, ರಸ, ಗಂಧ, ಸ್ಪರ್ಶ ಎಂಬ ಪಂಚತನ್ಮಾತ್ರಯಗಳನ್ನು ತರುವ ಇಂದ್ರಿಯಗಳು, ಬಾಹ್ಯೇಂದ್ರಿಯಗಳು.
ಬಾಹ್ಯಜಗತ್ತಿನ ಮಾಹಿತಿಯನ್ನು ಮಿದುಳಿಗೆ ಸಾಗಿಸುವ ಕಾರ್ಯ ಜ್ಞಾನೇಂದ್ರಿಯಗಳದ್ದು. ದುರದೃಷ್ಟವಶಾತ್ ಇವುಗಳಿಗೂ ಇತಿಮಿತಿಗಳಿವೆ. ಕೆಲವು ಸಂದರ್ಭಗಳಲ್ಲಿ ಇವು ಒದಗಿಸುವ ಮಾಹಿತಿಯನ್ನು ಮಿದುಳು ತಪ್ಪಾಗಿ ಅರ್ಥೈಸುವ ಸಾಧ್ಯತೆಯೂ ಇದೆ. ಇವಕ್ಕೆ ಲಭ್ಯವಿರುವ ಸರಳ ಉದಾಹರಣೆಗಳು ದೃಷ್ಟಿಭ್ರಮೆಗಳು (ಆಪ್ಟಿಕಲ್ ಇಲ್ಯೂಷನ್ಸ್).[೧]
ಪಂಚಭೂತಗಳು ವಿಷ್ಣುವಿನಿಂದ ಜನಿಸಿದವು ಎಂದು ಪುರಾಣಗಳು ಹೇಳುತ್ತವೆ . ಹಿಂದೊಮ್ಮೆ , ವಿಷ್ಣು , ಶಿವನನ್ನು ಕುರಿತು ತಪಸನ್ನು ಆಚರಿಸುತ್ತಿದ್ದ, ಶಿವನ ಆಶಿರ್ವಾದದಿಂದ ಅನೇಕ ಪರ್ವತ ಶಿಕರ , ಜರಿ , ನದಿ ತೊರೆಗಳು , ವಿಷ್ಣುವಿನ ದೇಹದಿಂದ ಜನ್ಮ ತಾಳಿದವು . ನಂತರೆ ವಿಷ್ಣುವಿನ ದೇಹದಿಂದ, ಮೂರು ಗುಣಗಳು , ಪಂಚಭೂತಗಳು, ಕೊನೆಯಲ್ಲಿ ಪಂಚ ಜ್ಞಾನೇಂದ್ರಿಯ ಗಳು ಪ್ರಕಟವಾದವು . ಆತ್ಮನಿಂದ ಆಕಾಶ, ಆಕಾಶದಿಂದ ವಾಯು, ವಾಯುವಿನಿಂದ ಬೆಂಕಿ, ಬೆಂಕಿಯಿಂದ ನೀರು ಮತ್ತು ಎಲ್ಲ ೪ ಧಾತುಗಳಿಂದ ಭೂಮಿಯಾ ಸೃಷ್ಟಿಯಾಯಿತು . ವೇದಾಂತ ಪುರಾಣಗಳ ಪ್ರಕಾರ , ಮನಷ್ಯನ ಪಂಚೇಂದ್ರಿಯಗಳು ಪಂಚಭೂತಗಳಿಂದ ಆವಿಷ್ಕರವಾಯಿತು . ಆಕಾಶದಿಂದ ಕಿವಿ , ವಾಯುವಿನಿಂದ ಚರ್ಮ, ಅಗ್ನಿಯಿಂದ ಕಣ್ಣು, ನೀರಿನಿಂದ ನಾಲಿಗೆ ಮತ್ತು ಭೂಮಿಯಿಂದ ನಾಸಿಕ ಹೊರಹೊಮ್ಮಿತು.
ಉಲ್ಲೇಖಗಳು
[ಬದಲಾಯಿಸಿ]