ಕುಕ್ಕಂದೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇತಿಹಾಸ[ಬದಲಾಯಿಸಿ]

ಕಿನ್ನಿಮಾಣಿ-ಪೂಮಾಣಿ[೧] ಎಂಬವರಿಬ್ಬರು ಸಹೋದರರಾಗಿದ್ದರು,ಕಂಚಿ ದೇಶದ ರಾಜಕುಮಾರರು. ಜನರ ನ್ಯಾಯದ ಪರೀಕ್ಷೆಗೋಸ್ಕರ ತಮ್ಮ ಸಕಲ ಭೋಗಹಳನ್ನು ತ್ಯಜಿಸಿ, ದೇಶವನ್ನು ಬಿಟ್ಟು ಲೋಕ ಸಂಚಾರಕ್ಕೆಂದು ಹೊರಡುತ್ತಾರೆ. ಹೀಗೆ ಸಂಚಾರ ಬೆಳೆಸಿದ ಇವರಿಬ್ಬರು ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನು ಬೇರ್ಪಡಿಸುವ ಸುಬ್ರಮಣ್ಯದ ಹತ್ತಿರವಿರುವ ಕುಮಾರರ್ಪವತದಲ್ಲಿ ಬಂದು ನಿಲ್ಲುತ್ತಾರೆ.ಹೀಗೆ ಪರ್ವತಕ್ಕೆ ಬಂದು ತಲುಪಿದ ಇವರಿಬ್ಬರು ಇನ್ನು ಎಲ್ಲಿಗೆ ಹೋಗುವುದೆಂದು ಚಿಂತಿಸಿ ತಮ್ಮಲಿದ್ದ ಅಸ್ತ್ರಗಳನ್ನು ಬಿಟ್ಟರಂತೆ. ಹೀಗೆ ಬಿಟ್ಟ ಅಸ್ತ್ರ ಸುಬ್ರಮಣ್ಯ ದೇವಾಲಯದ ಧ್ವಜ ಸ್ತಂಭದ ಪತಾಕೆಯನ್ನು ಕತ್ತರಿಸಿತ್ತಂತೆ. ಪತಾಕೆ ತುಂಡಾಗಿ ಅಂಗಣಕ್ಕೆ ಬಿದ್ದದನ್ನು ಕಂಡು ಸುಬ್ರಮಣ್ಯ ದೇವರು ಅಚ್ಚರಿ ಪಟ್ಟು , ಈ ಬಗ್ಗೆ ಯೊಚಿಸುತ್ತಿರುವಾಗ, ತಾವು ಬಿಟ್ಟ ಬಾಣವು ಬಿದ್ದ ಸ್ಥಳವು ಹುಡುಕುತ್ತಾ ಹೊರಟ ಸಹೋದರರು ಅಲ್ಲಿಗೆ ಬಂದು ತಲುಪುತ್ತಾರೆ. ಈ ಸಹೋದರರನ್ನು ಕಂಡ ಸುಬ್ರಮಣ್ಯ ಸ್ವಾಮಿ "ನೀವು ಯಾರು? ಇಲ್ಲಿಗೇಕೆ ಬಂದಿದ್ದೀರಿ?" ಎಂದು ಪ್ರಶ್ನಿಸಿದಾಗ "ನಾವು ಬಿಟ್ಟ ಅಸ್ತ್ರವೊಂದು ಇಲ್ಲಿ ಬಂದು ಬಿದ್ದಿದೆ, ಧ್ವಜವನ್ನು ತುಂಡರಿಸಿದವರು ನಾವು, ಎಂದು ಒಪ್ಪಿಕೊಂಡರು,"ನಾವು ಸತ್ಯ ದೇವತೆಗಳು" ಎಂದು ಹೇಳುತ್ತಾರೆ. ಆಗ ದೇವರು "ನೀವು ಸತ್ಯದೇವತೆಗಳಾದರೆ ಏಳು ರಾತ್ರಿ ಏಳು ಹಗಲು ರಾಮಾಯಣದ ಪಾರಾಯಣ ಮಾಡಬೇಕೆಂದು ಹೇಳುತ್ತಾರೆ. ದೇವರು ಹಾಕಿದ ಈ ಸವಾಲನ್ನು ಸ್ವೀಕರಿಸಿದ ಸಹೋದರರು ರಾಮಾಯಣದ ಪಾರಾಯಣವನ್ನು ಪ್ರಾರಂಬಿಸ ತೊಡಗುತ್ತಿದಂತ್ತೆ ಸುಬ್ರಮಣ್ಯ ಕ್ಷೇತ್ರದ ಧನ-ಧಾನ್ಯಗಳು ಕ್ಞೀಣಿಸುತ್ತಾ ಬಂದವು. ಏಳು ದಿನಗಳ ಬಳಿಕ ದೇವರು ಸಹೋದರರನ್ನು ಕುರಿತು ನೀವು ಪಾರಾಯಣ ಮಾಡಿದ್ದು ಸಾಕು ನೀವು ಕಾರ್ಣಿಕ ಪುರುಷರೆಂಬುದನ್ನು ತಿಳಿಯಿತು. ನಿಮಗೇನಾಗಬೇಕು? ಎಂದು ಕೇಳಿದಾಗ "ಮೊದಲು ನಿಮ್ಮ ಧನ-ಧಾನ್ಯ ತುಂಬಲಿ" ಎಂದು ಹೇಳಿ ಭಂಡಾರಕ್ಕೆ ಒಂದು ನಾಣ್ಯವನ್ನು ಹಾಕುತ್ತಾರೆ. ಆಗ ಧನ-ಧಾನ್ಯಗಳು ತುಂಬಿಕ್ಕೊಳುತ್ತದೆ. ಉಗ್ರಾಣಕ್ಕೆ ಸಿರಿಮುಡಿಯಿಂದ ತೆಗೆದು ಹಿಂಗಾರದ ಅಕ್ಕಿಯನ್ನು ಹಾಕಿದಾಗ ಉಗ್ರಾಣ ತುಂಬಿಕೊಳ್ಲುತ್ತದೆ.ಅನಂತರ ಸಹೋದರರು ನಾವು ತುಳುನಾಡಿನಲ್ಲಿ ಸಂಚರಿಸುತ್ತಾ ಸಮುದ್ರದ ದಡದ ವರೆಗೆ ಹೋಗುತೇವೆ, ಹೀಗೆ ಹೋಗುವಾಗ ಎಲ್ಲೆಲಾ ಹೋಗಿ ನಿಲ್ಲುತ್ತಾರೊ ಆ ಸ್ಥಳದಲ್ಲಿ ನಮಗೊಂದು ಸ್ಥಾನವಾಗಬೇಕು. ಹಾಗೆಯೇ ಎಳೆಯುವುದಕ್ಕೆ ಬಂಡಿಯು ಬೇಕು. ಇದಕ್ಕೆಲ್ಲಾ ನಿಮ್ಮ ಅನುಗ್ರಹ ಬೇಕೆಂದು ಕೇಳಿದಾಗ ಅವರ ಮಾತಿಗೆ ದೇವರು ಒಪ್ಪಿಕೊಂಡು ಅವರನ್ನು ಬೀಳ್ಕೊಂಡುತ್ತಾರೆ. ಹೀಗೆ ಸುಬ್ರಮಣ್ಯದಿಂದ ಬೀಳ್ಕೊಂಡ ಈ ಸಹೋದರರು ಸುಳ್ಯ, ಪೆರಾಜೆ, ತೊಡಿಕಾನದ ಮೂಲಕ ಭಾಗಮಂಡಲಕ್ಕೆ ಹೋಗಿ ಭಗಭಾಡೇಶ್ವರನ ದರುಶನವನ್ನು ಮಾಡಿ ಅಲ್ಲಿಂದ ಹಿಂತಿರುಗಿ ಪೂಮಲೆ ತಲುಪುವಾಗ ಕಾಡಿನ ಮಧ್ಯೆ ದಾರಿಯಲ್ಲಿ ಕೇರಳದ ಕಡೆಯಿಂದ ಮರ ಕಡಿಯಲು ಬಂದು ಚಂದು ಮತ್ತು ಚಾತು ಎಂಬ ಇಬ್ಬರು ನಾಯರ್ ಗಳಲ್ಲಿ ಚಂದು-ಚಾತು ಎಂಬ ಇಬ್ಬರು ನಾಯರಗಳಲ್ಲಿ ಚಂದು ನಾಯರ್ ದಾರಿಗಡ್ಡವಾಗಿ ಕುಳಿತು ವಿಶ್ರಾಮಿಸುತ್ತಿದ್ದ. ದಾರಿ ಬಿಡುವಂತೆ ಉಳ್ಳಾಕುಲು ಕೇಳಿಕೊಂಡಾಗ ಮಿತ್ತೂರಿನಲ್ಲಿ ನೆಲೆ ನಿಲ್ಲಿಸುತ್ತಾರೆ. ಅವನ ಧೈರ್ಯವನ್ನು ಮೆಚ್ಚಿದ ಉಳ್ಳಾಕುಲು ಅವರನ್ನು ತಮ್ಮ ಪ್ರಧಾನಿಯನ್ನಾಗಿ ಸ್ವೀಕರಿಸಿ "ನಾವು ಕರೆದಾಗಲೆಲ್ಲಾ ಬರಬೇಕು" ಎಂದು ಅಪ್ಪಣೆ ಮಾಡಿ ಬಂದು ಕುಕ್ಕುನ್ನೂರು ತಲುಪುತ್ತಾರೆ. ಉಳ್ಳಾಕುಲು ಕುಕ್ಕನ್ನೂರು ಪ್ರವೇಶಿಸುವ ಹೊತ್ತಿಗೆ ಕುದುರೆಕುಂಞ ಎಂಬ ವ್ಯಕ್ತಿ ಮಲಗಿ ನದ್ರಿಸುತ್ತಿದ್ದನಂತೆ. ಕುದುರೆಕುಂಞನನ್ನು ಅಟ್ಟಳಿಗೆಯಿಂದ ಕೆಳಗೆ ಮಲಗಿ ಇವರಿಬ್ಬರೂ ಮಲಗುತ್ತಾರೆ. ನಿದ್ರೆಯಲ್ಲಿದ್ದ ಕುದುರೆಕುಂಞನಿಗೆ ಇವರಿಬ್ಬರು ಕರಿಯ ಹಾಗೂ ಬಿಳಿಯ ಕಾಳಿಂಗ ಸರ್ಪ ರೂಪದಲ್ಲಿ ಕನಸಿನಲ್ಲಿ ಗೋಚರಿಸಿ "ನಾವು ಹೂಡಿದ ಬಾಣ ಬದ್ದಲ್ಲಿ ನಮಗೆ ಮಾಡ ಕಟ್ಟಿಸಿ ಬಂಡಿಯನ್ನು ನರ್ಮಿಸಿ ಕೊಡಬೇಕೆಂದು"ಅಪ್ಪಣೆ ಮಾಡುತ್ತಾರೆ. ಎಚ್ಚರಗೊಂಡ ಕುದುರೆಕುಂಞ ತಾನು ಅಟ್ಟೊಳಿಗೆಯ ಕೆಳಗಿರುವುದನ್ನು ತಿಳಿದು, ಇದು ದೈವಗಳ ಕಾಣಿಕವಿರಬಹುದೆಂದು ಯೋಚಿಸಿ ಬಾಣ ಬಿದ್ದ ಸ್ಥಳವನ್ನು ಹುದುಕಿಕೊಂಡು ಹೋದಾಗ ಆ ಬಾಣವು ಈಗಿನ "ಕಟ್ಟಮುಚ್ಚಿರು"ಮಾಡ ಇರುವಲ್ಲಿ ತಮ್ಮನಿಗು "ಪೆರಾಬೆ" ಎಂಬಲ್ಲಿ ಅಣ್ಣನಿಗೂ ಮಾಡ ನಿರ್ಮಿಸಿದಂತೆ ಕುದುರೆಕುಂಞನ ಕೊಟ್ಡಿಗೆಯಿಒದ ಬೇಂಗ ಪಾಪುವಿನ ಮೂಲಕ ಹೋಗಿ ಉಳಾಕುಲು ವಾಲಸಿರಿಮಜಲು ಎಂಬಲ್ಲಿ ವಿಶ್ರಮಿಸುತ್ತಾರೆ. ಹೇಗೆ ವಿಶ್ರಮಿಸಿದ ವಾಲಸಿರಿ ಮಜಲಿನ ಒಂದು ಭಾಗದಲ್ಲಿ ಬಂಡಿಯನ್ನು ನಿರ್ಮಿಸಿ ಉಲ್ಲಾಕುಳು ದೈವವನ್ನು ಊರವರೆಲ್ಲಾ ಒಟ್ಟಾಗಿ ಪೂಜಿಸಲಾರಂಭಿಸಿದರು. ಇಲ್ಲಿ ಮುಖ್ಯವಾದ ವಿಚಾರವೆಂದರೆ ಉಳ್ಲಾಕುಲು ತುಳುನಾಡಿನಲ್ಲಿ ಮೊದಲು ನೆಲೆಗೊಂಡದ್ದು ಇದೇ ಕುಕ್ಕನ್ನೂರಿನಲ್ಲಿ.[೨]

ಆಚರಣೆ[ಬದಲಾಯಿಸಿ]

  1. ವಿಷು ಆಚರಣೆ
  2. ದೀಪಾವಳಿ
  3. ಕೆಡ್ಡಸ
  4. ಹೊಸಕ್ಕಿ ಊಟ

ಆರಾಧನೆ[ಬದಲಾಯಿಸಿ]

  1. ತುಳುನಾಡಿನ ದೈವಾರಾಧನೆ.
  2. ದೇವತಾರಾಧನೆ

ಉಲ್ಲೇಖಗಳು[ಬದಲಾಯಿಸಿ]

  1. http://shodhganga.inflibnet.ac.in/handle/10603/131921
  2. ಪುಸ್ತಕ:ಸ್ಥಳನಾಮಗಳು ಮತ್ತು ಐತಿಹಗಳು-೨೦೧೬ ಸಂಪಾದಕರು:ಪೂವಪ್ಪ ಕಾಣಿಯೂರು ಪುಟ ಸಂಖ್ಯೆ :೨೦-೨೨ ಪ್ರಕಾಶಕರು: ಕನ್ನಡ ಸಂಘ ನೆಹರು ಮೆಮೊರಿಯಲ್ ಕಾಲೇಜು ಸುಳ್ಯ