ವಿಷಯಕ್ಕೆ ಹೋಗು

ಸದಸ್ಯ:HEMADRI/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಡಾ.ಸುಧಾಕರ್ ಬಯಲು ಸೀಮೆಯ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದಲ್ಲಿ ಶಾಸಕರಾಗಿದ್ದರು.

ಡಾ.ಸುಧಾಕರ್

[ಬದಲಾಯಿಸಿ]

ಡಾ.ಸುಧಾಕರ್ ಬಯಲು ಸೀಮೆಯ ಅತ್ಯಂತ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಹಾಲಿ ಶಾಸಕರು. ಎರಡನೇ ಬಾರಿ ಚಿಕ್ಕಬಳ್ಳಾಪುರ ಕ್ಷೇತ್ರದಿಂದ ಆಯ್ಕೆಯಾಗಿ ಬಂದಿರುವ ಡಾ.ಸುಧಾಕರ್ ಅತ್ಯಂತ ಕ್ರಿಯಾಶೀಲ ಶಾಸಕ ಅಂತಲೇ ಹೆಸರು ಪಡೆದುಕೊಂಡಿದ್ದಾರೆ.ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರ ಅನ್ನುವ ಸಣ್ಣ ಗ್ರಾಮದಲ್ಲಿ ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮನ್ನು ಸಮರ್ಪಣೆ ಮಾಡಿಕೊಂಡಿದ್ದ ಅತ್ಯಂತ ಗೌರವಯುತವಾದ ಕುಟುಂಬದಿಂದ ಬಂದವರು ಸುಧಾಕರ್. ಇವರ ತಾತ ಹಿರಿಯ ಸ್ವ್ವಾತಂತ್ರ್ಯ ಹೋರಾಟಗಾರರಾದಂತಹ ಶ್ರೀ ಪಟೇಲ್ ಅವಾಲ ರೆಡ್ಡಿ. ತಂದೆ ಕೇಶವ ರೆಡ್ಡಿ.

ಆರಂಭಿಕ ಜೀವನ ಮತ್ತು ಶಿಕ್ಷಣ

[ಬದಲಾಯಿಸಿ]

ಈ ಕಾರಣದಿಂದಲೇ ಡಾ.ಸುಧಾಕರ್ ಅವರಿಗೆ ಸದಾ ಸಮಾಜ ಸೇವೆಯ ಮನಸ್ಸು ತುಡಿಯುತ್ತಿರುತ್ತದೆ. ತನ್ನ ಬಾಲ್ಯದ ಆರಂಭದಿಂದಲೇ ಸೇವೆಯೇ ಪರಮ ಧರ್ಮ ಎನ್ನುವುದನ್ನು ಇವರು ಬೆಳೆದು ಬಂದ ವಾತಾವರಣ ಕಲಿಸಿಕೊಟ್ಟಿದೆ. ಸಮಾಜ ಸೇವೆಯತ್ತ ಇವರ ಒಲವು ಅತಿಯಾಗಿ ವಿಸ್ತರಿಸಿಕೊಂಡಿದ್ದು ೧೯೯೯ರಲ್ಲಿ ಸುಧಾಕರ್ ಅವರ ಕುಟುಂಬ ಸದಸ್ಯರು ಗ್ರಾಮದ ಹಿತಕ್ಕಾಗಿ ತಮ್ಮ ಅಪಾರ ಪ್ರಮಾಣದ ಕೃಷಿ ಭೂಮಿಯನ್ನೇ ದಾನವಾಗಿ ಬಿಟ್ಟುಕೊಟ್ಟಿದ್ದರು. ಇದೇ ಭೂಮಿಯನ್ನು ಅಂಚೆ ಕಚೇರಿ, ಆಸ್ಪತ್ರೆ, ಸಂತೆ, ವಿದ್ಯುತ್ ಉಪ ಕೇಂದ್ರ, ಪೊಲೀಸ್ ಠಾಣೆ, ಶಾಲೆ ಮತ್ತು ಇತರೆ ಸಾಮಾಜಿಕ ಸೇವೆಗಳಲ್ಲಿ ಬಳಸಿಕೊಳ್ಳಲಾಗಿದೆ. ತನ್ನ ಕುಟುಂಬದ ಈ ಸೇವೆಯನ್ನೇ ಮಾದರಿಯನ್ನಾಗಿ ಮಾಡಿಕೊಂಡ ಸುಧಾಕರ್ ಪಂಚಾಯ್ತಿ ಹಂತದಲ್ಲೇ ಸಾಮಾಜಿಕ ಸೇವೆಯನ್ನು ಕೈಗೊಂಡರು. ಇದೀಗ ಅವರಿಗೆ ೪೪ ವರ್ಷ ವಯಸ್ಸು. ಹೀಗಾಗಿಯೇ ಅವಿರತವಾಗಿ ಅವರು ಜನರ ಉದ್ಧಾರಕ್ಕೆ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಿಗೆ ನೂರಾರು ಕಂಪ್ಯೂಟರ್‌ಗಳನ್ನು ನೀಡಿ ಗ್ರಾಮೀಣ ಭಾಗದ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಮುಂದಾದರು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟವನ್ನು ವೃದ್ಧಿಸುವ ನಿಟ್ಟಿನಲ್ಲಿ ಸುಧಾಕರ್ ಅವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ.

ಮಹಾತ್ಮ ಗಾಂಧೀಜಿ, ಸ್ವಾಮಿ ವಿವೇಕಾನಂದರು, ಮದರ್ ಥೆರೆಸಾ ಮತ್ತು ಡಾ.ಸರ್.ಎಂ.ವಿಶ್ವೇಶ್ವರಯ್ಯ ಅವರ ಜೀವನಾದರ್ಶಗಳನ್ನೇ ಬಾಲ್ಯದಿಂದಲೂ ಅನುಸರಿಸುತ್ತಾ ಬಂದಿರುವ ಡಾ.ಸುಧಾಕರ್ ಅವರು ಈ ಸುಧಾರಕರ ಬೋಧನೆಗಳನ್ನು ತನ್ನ ಜೀವನದಲ್ಲಿ ಅಳವಡಿಸಿಕೊಳ್ಳುತ್ತಾ ಸಾಗಿದವರು. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಸಮಾಜಕ್ಕಾಗಿ ಸೇವೆ ಮಾಡುತ್ತಾ ಬಂದವರು ಸುಧಾಕರ್. ವಿವಿಧ ಹಂತಗಳಲ್ಲಿ ಇವರು ಕೈಗೊಂಡ ಸಾಮಾಜಿಕ ಸೇವಗಳು ಚಿಕ್ಕಬಳ್ಳಾಪುರ ತಾಲೂಕಿನಲ್ಲಿ ಸಾಕಷ್ಟು ರಚನಾತ್ಮಕವಾದ ಬದಲಾವಣೆಗಳನ್ನು ತಂದಿವೆ.

ಡಾ.ಸುಧಾಕರ್ ಅವರು ಪ್ರಾಥಮಿಕವಾಗಿ ಅತ್ಯಾಧುನಿಕ ಯಂತ್ರೋಪಕರಣಗಳು ಮತ್ತು ಸಲಕರಣೆಗಳ ಮೂಲಕ ಗ್ರಾಮೀಣ ಪ್ರದೇಶಗಳಿಗೆ ಅತ್ಯಂತ ಗುಣಮಟ್ಟದ ಮತ್ತು ಪ್ರಾಯೋಗಿಕವಾದ ಶಿಕ್ಷಣವನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಆರೋಗ್ಯ, ಮಹಿಳಾ ಸಲೀಕರಣ, ಆರೋಗ್ಯ ಜಾಗೃತಿ, ಕಾನೂನು ಜಾಗೃತಿ, ಯಾವುದೇ ಧರ್ಮ-ಜಾತಿಗಳ ಭೇದ-ಭಾವ ಇಲ್ಲದಂತೆ ಸಾಂಸ್ಕೃತಿಕ ಹಬ್ಬ ಆಚರಣೆಗಳನ್ನು ಮಾಡುವ ನಿಟ್ಟಿನಲ್ಲೂ ಡಾ.ಸುಧಾಕರ್ ಅವರು ತಮ್ಮನ್ನು ತಾವು ತೊಡಗಿಸಿಕೊಂಡು ಬರುತ್ತಿದ್ದಾರೆ.

ವಿದ್ಯಾ ಸಭಾ, ಬೆಂಗಳೊರು

ಆರೋಗ್ಯ ಶಿಬಿರಗಳು, ಉಚಿತ ಸೀಳು ತುಟಿ ಚಿಕಿತ್ಸೆಗಳು, ರಕ್ತ ದಾನ ಶಿಬಿರಗಳು, ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ಕಡುಬಡವರಿಗೆ ಉಚಿತ ಆರೋಗ್ಯ ಚಿಕಿತ್ಸೆಗಳನ್ನು ಕೊಡಿಸುವ ಮೂಲಕ ದುರ್ಬಲರಿಗೆ ಆಸರೆ ಯಾಗಿದ್ದಾರೆ. ಯಾರು ಸೇವೆಯನ್ನು ಬಯಸುತ್ತಾರೋ ಅವರಿಗೆ ಅತ್ಯಂತ ಹತ್ತಿರದಿಂದ ಸ್ಪಂದನೆ ಮಾಡುವಂತಹ ಗುಣವನ್ನು ಡಾ.ಸುಧಾಕರ್ ಬೆಳೆಸಿಕೊಂಡಿದ್ದಾರೆ. ಅತ್ಯಂತ ವೃತ್ತಿಪರವಾದ ನೆಲೆಗಟ್ಟಿನ ಒಳಗೆ ಸಾಮಾಜಿಕ ಸೇವೆಯನ್ನು ಮಾಡುತ್ತಾ ಜನರ ಬದುಕಿನಲ್ಲಿ ಮಂದಹಾಸವನ್ನು ಸೃಷ್ಟಿ ಮಾಡುವಂತಹ ಕಾರ್ಯಯೋಜನೆಗಳನ್ನು ಡಾ.ಸುಧಾಕರ್ ಹಾಕಿಕೊಂಡು ಬರುತ್ತಿದ್ದಾರೆ.

ಎಂಬಿಬಿಎಸ್ ಪದವಿಯನ್ನು ಮುಗಿಸಿದ ಡಾ.ಸುಧಾಕರ್ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ಕೆಲಸ ಮಾಡುವಂತಹ ಅವಕಾಶಗಳನ್ನೂ ಪಡೆದುಕೊಂಡಿದ್ದರು. ಹತ್ತಲವು ಹುದ್ದೆಗಳನ್ನು ನಿಭಾಯಿಸಿ ಅಲ್ಲಿಯೂ ಸಾಮಾಜಿಕ ಸೇವೆಗಳನ್ನು ಮಾಡುತ್ತಾ ಬಂದರು. ಅದರಲ್ಲೂ ಮಾನವ ಅಭಿವೃದ್ಧಿಯಲ್ಲಿ ಅವರು ಅತ್ಯಂತ ಚಲನಶೀಲತೆಯಿಂದ ತೊಡಗಿಸಿಕೊಂಡು ಬರುತ್ತಿದ್ದಾರೆ.

ರಾಜಕೀಯ ವೃತ್ತಿ

[ಬದಲಾಯಿಸಿ]

ಇವರು ೨೦೦೬ರಲ್ಲಿ ಇವರ ಸಾಮಾಜಿಕ ಜೀವನದಲ್ಲಿ ಹೊಸ ಹೆಜ್ಜೆ ಇಡುವಂತಹ ಅನಿವಾರ್ಯ ಸಮಯ ಒದಗಿಬಂದಿತ್ತು. ಕಾಂಗ್ರೆಸ್‌ನಲ್ಲಿ ಆಗಷ್ಟೇ ಯುವ ಉತ್ಸಾಹಿಗಳನ್ನು ಸಮೀಕರಿಸಿಕೊಳ್ಳುವ ಕೆಲಸದಲ್ಲಿ ನಿರತರಾಗಿದ್ದ ಶ್ರೀ ರಾಹುಲ್ ಗಾಂಧೀ ಅವರು ಯುವಕರು ರಾಜಕಾರಣಕ್ಕೆ ಬರುವಂತೆ ಕರೆ ಕೊಟ್ಟಿದ್ದರು. ಅವರ ಕರೆಯಿಂದ ಪ್ರೇರಿತರಾಗಿ ಡಾ.ಸುಧಾಕರ್ ಅವರು ರಾಜಕೀಯ ರಂಗವನ್ನು ಸೇವೆಯ ಮಾರ್ಗವಾಗಿ ಆಯ್ಕೆ ಮಾಡಿಕೊಂಡರು.[]

ಮಾಜಿ ಮುಖ್ಯಮಂತ್ರಿಗಳೂ, ಮಾಜಿ ವಿದೇಶಾಂಗ ಸಚಿವರೂ ಆದ ಶ್ರೀ ಎಸ್.ಎಂ.ಕೃಷ್ಣ ಅವರ ಮಾರ್ಗದರ್ಶನದೊಂದಿಗೆ ಡಾ.ಸುಧಾಕರ್ ಅವರು ಕೆಪಿಸಿಸಿಯ ಭಾಗವಾಗಿ ಸೇರಿಕೊಂಡರು. ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವವನ್ನು ಪಡೆದುಕೊಂಡರು. ಎಸ್.ಎಂ.ಕೃಷ್ಣ ಅವರು ತಮ್ಮ ನಿವಾಸದಲ್ಲೇ ಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸಿ ಸುಧಾಕರ್ ಅವರನ್ನು ಕಾಂಗ್ರೆಸ್‌ಗೆ ಸೇರಿಸಿಕೊಂಡಿದ್ದರು. ಅಂದು ಕರ್ನಾಟಕ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತನಾಗಿ ಸೇವೆಗೆ ಇನ್ನಷ್ಟು ಆಯಾಮಗಳನ್ನು ಕೊಡಲು ಆರಂಭಿಸಿದ್ದ ಡಾ.ಸುಧಾಕರ್ ಇಂದಿನವರೆಗೂ ಜನರ ನಡುವೆಯೇ ಬದುಕುತ್ತಿದ್ದಾರೆ.

ಎರಡೇ ವರ್ಷಗಳ ಅಂತರದಲ್ಲಿ ಇವರ ಸಾಮಾಜಿಕ ಸೇವಾ ಗುಣ, ಸಂಘಟನಾ ಚಾತುರ್ಯವನ್ನು ಗಮನಿಸಿದ್ದ ಪಕ್ಷದ ನಾಯಕರು ಕೆಪಿಸಿಸಿ ಅಧ್ಯಕ್ಷ ರಾಜಕೀಯ ಕಾರ್ಯದರ್ಶಿಯನ್ನಾಗಿ ಡಾ.ಸುಧಾಕರ್ ಅವರನ್ನು ನೇಮಕ ಮಾಡಿದ್ದರು. ರಾಹುಲ್ ಗಾಂಧಿ ಅವರ ದೂರವಾಣಿ ಕರೆಗಳನ್ನು ಸ್ವೀಕರಿಸಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವಂತಹ ಕಾರ್ಯವನ್ನು ಡಾ.ಸುಧಾಕರ್ ಅವರು ಮಾಡುತ್ತಿದ್ದರು. ಇದೇ ನಿಟ್ಟಿನಲ್ಲಿ ಹಲವು ಚುನಾವಣೆಗಳು ಮತ್ತು ರಾಜಕೀಯ ಚಟುವಟಿಕೆಗಳಲ್ಲಿ ಸುಧಾಕರ್ ಅವರು ಕೆಲಸ ಮಾಡಿದ್ದರು.[]

೨೦೧೩ರ ವಿಧಾನಸಭೆ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದ ಸುಧಾಕರ್ ಅವರು ಐದು ವರ್ಷಗಳ ಕಾಲ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಸಾಕಷ್ಟು ಪರಿಶ್ರಮವನ್ನು ಹಾಕಿದ್ದರು. ಇದರ ಫಲವಾಗಿಯೇ ೨೦೧೮ರ ವಿಧಾನಸಭೆ ಚುನಾವಣೆಯಲ್ಲೂ ಕ್ಷೇತ್ರದ ಜನತೆ ಇವರಿಗೆ ಪ್ರಚಂಡ ಗೆಲುವನ್ನೇ ತಂದುಕೊಟ್ಟಿದ್ದಾರೆ.

ತಮ್ಮ ಕ್ರಿಯಾಶೀಲ ರಾಜಕಾರಣದ ನಡುವೆಯೂ ಶಾಂತಾ ವಿದ್ಯಾ ನಿಕೇತನ್ ಶಾಲೆ ಸಂಸ್ಥಾಪಕ ಮತ್ತು ಮುಖ್ಯಸ್ಥ, ಶ್ರೀ ಸಾಯಿ ಕೃಷ್ಣ ಚಾರಿಟಬಲ್ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕರು ಹೀಗೆ ಲಾಭ ರಹಿತ ಟ್ರಸ್ಟ್‌ಗಳಲ್ಲಿ ತೊಡಗಿಸಿಕೊಂಡು ಸಾಮಾಜಿಕ ಸೇವೆಗಳನ್ನು ಮುಂದುವರೆಸಿದ್ದಾರೆ.ಈ ಟ್ರಸ್ಟ್‌ಗಳನ್ನು ಕೇಂದ್ರ ಸಚಿವರೂ, ಚಿಕ್ಕಬಳ್ಳಾಪುರ  ಸಂಸದರೂ ಆಗಿದ್ದ ಶ್ರೀ ವೀರಪ್ಪಮೊಯ್ಲಿ ಅವರು ಉದ್ಘಾಟನೆ ಮಾಡಿದ್ದರು. ಶ್ರೀಲಂಕಾದ ಗೌರವಾನ್ವಿತ ಕಾನ್ಸುಲೇಟ್ ಕೌನ್ಸಿಲ್ ಕೂಡಾ ಆಗಿದ್ದ ಶ್ರೀ ಡಾ.ಸುಧಾಕರ್ ಅವರು ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯರೂ ಆಗಿ ಕೆಲಸ ಮಾಡಿದ್ದಾರೆ.[]

ಇವರು ಯಶಸ್ವಿ ರಾಜಕಾರಣಿ ಅಷ್ಟೇ ಅಲ್ಲ ಯಶಸ್ವೀ ಉದ್ಯಮಿಯೂ ಕೂಡಾ. ಡಾ.ಸುಧಾಕರ್ ಅವರು ತಾಂಜೇನಿಯಾ ಮತ್ತು ಉಗಾಂಡಾದ ಪಾಲುದಾರರು ಮತ್ತು ಉದ್ಯಮ ಹೂಡಿಕೆದಾರರ ಜತೆಯೂ ಕೆಲಸ ಮಾಡಿದ್ದಾರೆ. ಜಾಗತಿಕ ಆರ್ಥಿಕತೆಯ ಸುಧಾರಣೆಯ ನಿಟ್ಟಿನಲ್ಲಿ ವಿದೇಶಗಳ ಜತೆಯೂ ಡಾ.ಸುಧಾಕರ್ ಅವರು ವ್ಯವಹಾರ ಮಾಡಿ ಆರ್ಥಿಕ ವ್ಯವಹಾರದ ಪಾಲುದಾರರೂ ಆಗಿದ್ದಾರೆ.

ಪರಸ್ಪರ ವ್ಯವಹಾರ ಅಭಿವೃದ್ಧಿ ಮತ್ತು ಪರಸ್ಪರ ಸೌಹಾರ್ದ ಸಂಬಂಧವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ದೇಶದೇಶಗಳ ನಡುವೆ ಸಂಪರ್ಕ ಸೇತುವೆಯಾಗಿಯೂ ಡಾ.ಸುಧಾಕರ್ ಅವರು ಕೆಲಸ ಮಾಡಿದ್ದಾರೆ. ಜಾಗತಿಕ ಮಟ್ಟದಲ್ಲಿ ಈ ಕಾರಣಕ್ಕಾಗಿ ಚಲನಶೀಲ, ದೂರದೃಷ್ಟಿಯ ನಾಯಕ ಎಂದು ಸುಧಾಕರ್ ಅವರು ಗುರುತಿಸಿಕೊಂಡಿದ್ದಾರೆ.

ರಾಷ್ಟ್ರೀಯ ಅಭಿವೃದ್ಧಿಯ ನಿಟ್ಟಿನಲ್ಲಿ ಕೆಲಸ ಮಾಡುವಂತಹ, ಸಾಮಾಜಿಕ ಸೇವೆಯ ಪರಿಕಲ್ಪನೆಯಲ್ಲಿ ಅಭಿವೃದ್ಧಿಯ ಕಾರ್ಯಯೋಜನೆಗಳನ್ನು ಮುನ್ನಡೆಸುವ ಇಚ್ಛಾಶಕ್ತಿಯಿರುವ ಇಂತಹ ನಾಯಕರನ್ನು ಭಾರತವು ಯಾವತ್ತೂ ಬಯಸುತ್ತದೆ. ಈ ನಿಟ್ಟಿನಲ್ಲಿ ನೋಡುವುದೇ ಆದರೆ ಡಾ.ಸುಧಾಕರ್ ಅವರು ಇವತ್ತಿನ ಯುವ ಸಮಾಜಸೇವಾಸಕ್ತರಿಗೆ ಮಾದರಿ ಎನಿಸಿದ್ದಾರೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.wikivillage.in/blog/karnataka-assembly-elections-2018/dr-k-sudhakar-mla-from-chikkaballapur-constituency-karnataka/
  2. http://www.kla.kar.nic.in/assembly/member/members.htmKarnataka Legislative Assembly. Retrieved 12 March 2017.
  3. https://kannada.oneindia.com/news/2010/02/25/fecilities-scheduled-caste-survey.html (in Kannada). oneindia kannada. 25 February 2010. Retrieved 12 March 2017.