ಸಮಾಜ ಸೇವೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮ ಸುತ್ತಮುತ್ತಲಿರುವ ಜನರ ಅನುಕೂಲಕ್ಕಾಗಿ ಪ್ರತಿಫಲವನ್ನು ಬಯಸದೆ ಮಾಡುವ ಕೆಲಸ ಕಾರ್ಯಗಳೇ ಸಮಾಜ ಸೇವೆ ಎನಿಸಿಕೊಳ್ಳುತ್ತದೆ. ಇದು ನಗರದ , ರಾಜ್ಯ ಮಟ್ಟದಲ್ಲೂ,ರಾಷ್ಟ್ರಮಟ್ಟದಲ್ಲೂ ಆಗಬಹುದು. ಅಂಬೇಡ್ಕರ್,ಗಾಂಧಿ, ನೆಲ್ಸನ್ ಮಂಡೇಲ ಅವರೆಲ್ಲ ರಾಷ್ಟ್ರಮಟ್ಟದಲ್ಲಿ ಸಮಾಜ ಸೇವೆಗ್ಗದರು. ಈ ಮಟ್ಟಕ್ಕೆ ಎಲ್ಲರೂ ಏರಲು ಸಾಧ್ಯವಿಲ್ಲವಾದರೂ ಪ್ರತಿಯೊಬ್ಬರೂ ತಮ್ಮ ತಮ್ಮ ಯೋಗ್ಯತಾನುಸಾರ ಸಮಾಜ ಸೇವೆಯನ್ನು ಮಾಡಬಹುದಾಗಿದೆ.'ಜನಸೇವೆಯೇ ಜನಾರ್ಧನನ ಸೇವೆ' ಎಂಬ ಗಾದೆಯು ಸಮಾಜ ಸೇವೆಯು ದೇವರ ಪೂಜೆಗಿಂತ ಶ್ರೇಷ್ಠ ಎಂಬುದನ್ನು ತಿಳಿಸುತ್ತದೆ. ಒಂದು ಕಾಲದಲ್ಲಿ ಸಮಾಜ ಸೇವಾಕರ್ತರೆಂದರೆ ಎಲ್ಲರೂ ಅವರನ್ನು ತುಂಬ ಪೂಜ್ಯಭಾವದಿಂದ ಕಾಣುತ್ತಿದ್ದರು. ಆದರೆ ಇಂದು ಸಮಾಜ ಸೇವಾಕರ್ತರೆನಿಸಿಕೊಂಡಿರುವವರಲ್ಲಿ ಬಹುಜನ ಸ್ವಾರ್ಥ ಮನೋಭಾವದವರಾಗಿರುವುದರಿಂದ ಸಮಾಜ ಸೇವಾಕರ್ತರಿಂದರೆ ಸಾರ್ವಜನಿಕರ ಹಣದಲ್ಲಿ ಐಷಾರಾಮದ ಜೀವನವನ್ನು ನಡೆಸುವವರೆಂಬ ಅರ್ಥ ಜನಜನಿತವಾತಗಿದೆ.

ಇಂದು ನಮ್ಮ ರಾಷ್ಟ್ರದಲ್ಲಿ ೮೦ ಕೋಟಿ ಜನಸಂಖ್ಯೆ ಇದ್ದು ಇದರಲ್ಲಿ ಕೇವಲ ಒಂದು ಲಕ್ಷ ಪ್ರಾಮಾಣಿಕರೂ ಸತ್ಯನಿಷ್ಟರೂ ಬುದ್ದಿವಂತರು ಆದ ಜನರನ್ನು ಜನ ಗುರುತಿಸಿ ಅವರಿಗೆ ಸಮಾಜ ಸೇವೆ ಮಾಡುವ ಅವಕಾಶವನ್ನುಂಟು ಮಾಡಿದರೆ ರಾಜಕೀಯ,ಸಾಂಸ್ಕ್ರತಿಕ,ಶ್ಶಕ್ಷನಿಕ,ಆಧ್ಯಾತ್ಮಿಕ,ಆರೋಗ್ಯವಲಯಗಳಲ್ಲಿ ಹಣ ಪೋಲಾಗದೆ ಜನ ನಾನಾ ಬಗೆಯ ತ್ರಪ್ತಿಯನ್ನು ಅನುಭವಿಸಬಹುದಾಗಿದೆ.ಸಮಾಜ ಸೇವಾ ವಲಯದಲ್ಲಿ ಉತ್ತಮ ಸೇವಾಮನೋಭಾವದವರು ಅಗ್ರ ಸ್ಥಾನವನ್ನಲಂಕರಿಸದಿದ್ದರೆ ಆ ವಲಯದಲ್ಲಿರುವವರು ಸಕಾಲದಲ್ಲಿ ಸ್ಪಂದಿಸಿ ಅಯೋಗ್ಯ ವ್ಯಕ್ತಿಗಳನ್ನು ಸ್ಥಾನ ಪಲ್ಲಟಗೊಳಿಸಿ ಯೋಗ್ಯರನ್ನು ಆ ಸ್ಥಾನಕ್ಕೆ ಆರಿಸಬೇಕು. ಈ ಬಗೆಯ ಸತ್ಕ್ರಾಂತಿ ಮೊದಲು ರಾಜಕೀಯ ವಲಯದಲ್ಲಿಯೂ, ಐಶ್ವರ್ಯವಿರುವ ಸಾರ್ವಜನಿಕ ಸೇವಾಸಂಸ್ಥೆಗಳಲ್ಲಿಯೂ ನಡೆದರೆ ಭಾರತ ಇರುವ ಸ್ಥಿತಿಯಿಂದಲೇ ಶ್ರೀಮಂತ ದೇಶವೆನಿಸಿಕೊಳ್ಳುತ್ತದೆ.

ದಾನ[ಬದಲಾಯಿಸಿ]

  • ಪಂಚತಂತ್ರದ ಆರಂಭದಲ್ಲಿಯೇ ಇರುವ ಸುಂದರವಾದ ಕತೆ ಭಾರತದಲ್ಲಿ ಅನಾದಿ ಕಾಲದಿಂದಲೂ ದಾನದ ಪದ್ಧತಿ ಇತ್ತು ಎಂಬುದನ್ನು ಹೇಳುತ್ತದೆ. ಜೀವನದಲ್ಲಿ ಯಶಸ್ಸು ದಕ್ಕಬೇಕಾದರೆ ನಾಲ್ಕು ಕೌಶಲಗಳನ್ನು ಕರಗತ ಮಾಡಿಕೊಳ್ಳಬೇಕು ಎಂದು ಹಿರಿಯ ವ್ಯಾಪಾರಿಯು ಕಿರಿಯ ವ್ಯಾಪಾರಿಗೆ ಹೇಳುತ್ತಾನೆ. ಮೊದಲನೆಯದು, ಹಣ ಮಾಡುವ ಕೌಶಲವಾದರೆ ಎರಡನೆಯದು ಅದನ್ನು ಸಂರಕ್ಷಿಸುವ ಕಲೆ. ಸಂರಕ್ಷಿಸುವುದು ಎಂದರೆ ನೆಲಹಾಸಿನಡಿಯಲ್ಲಿ ಹೂತಿಡುವುದಲ್ಲ, ಬದಲಿಗೆ ಆ ಹಣದಿಂದ ಲಾಭ ಗಳಿಸುವುದು. ಮೂರನೆಯದಾಗಿ ಹಣ ಖರ್ಚು ಮಾಡಲು ಗೊತ್ತಿರಬೇಕು. ಖರ್ಚು ಮಾಡುವುದೆಂದರೆ ದುಂದು ವೆಚ್ಚವೂ ಅಲ್ಲ, ಜಿಪುಣತನವೂ ಅಲ್ಲ. ಕೊನೆಯದಾಗಿ, ದಾನ ಮಾಡುವ ಕೌಶಲ ರೂಢಿಸಿಕೊಳ್ಳಬೇಕು. ದಾನ ಮಾಡುವುದು ಒಂದು ಕಲೆ.[೧]

ಉಲ್ಲೇಖ[ಬದಲಾಯಿಸಿ]

  1. "ಹೊಸ ಶ್ರೀಮಂತರ ಸಮಾಜ ಸೇವೆಯ ಅಚ್ಚರಿ/20 Apr, 2018-ಲೇಖಕ: ಪ್ರಾಕ್ಟರ್ ಅಂಡ್ ಗ್ಯಾಂಬಲ್ ಇಂಡಿಯಾದ ಸಿಇಒ ಆಗಿದ್ದವರು.[[:en:Gurcharan Das | ಗುರುಚರಣ ದಾಸ್]] 'ಇಂಡಿಯಾ ಅನ್‌ಬೌಂಡ್' ಸೇರಿದಂತೆ ಹಲವು ಪುಸ್ತಕಗಳ ಲೇಖಕ ಹಾಗೂ ಅಂಕಣಕಾರ". Archived from the original on 2018-04-20. Retrieved 2018-04-21.