ಕರ್ನಾಟಕದಲ್ಲಿ ಬ್ಯಾಂಕಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕರ್ನಾಟಕ ರಾಜ್ಯದಲ್ಲಿನ  ಕರಾವಳಿ ಜಿಲ್ಲೆಗಳಾದ  ದಕ್ಷಿಣ ಕನ್ನಡ ಮತ್ತು ಉಡುಪಿಯನ್ನು ಭಾರತದ ಬ್ಯಾಂಕಿಂಗ್ನ ತೊಟ್ಟಿಲು ಎಂದು ಕರೆಯಲಾಗುತ್ತದೆ.[೧] ಇದಕ್ಕೆ ಕಾರಣ ದೇಶದ ಪ್ರಮುಖ ಬ್ಯಾಂಕುಗಳಲ್ಲಿ ಏಳು ಬ್ಯಾಂಕುಗಳು ಈ ಪ್ರದೇಶದಲ್ಲಿ ಹುಟ್ಟಿಕೊಂಡಿತು, ಅವುಗಳೆಂದರೆ: ಕೆನರಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ವೈಶ್ಯ ಬ್ಯಾಂಕ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಮೈಸೂರು . ಮೇಲಿನ ಬ್ಯಾಂಕ್ಗಳ ಪಟ್ಟಿಯಲ್ಲಿ ಮೊದಲ ಐದು ಬ್ಯಾಂಕ್ಗಳನ್ನು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ  ಸ್ಥಾಪಿಸಲಾಯಿತು.  ಪ್ರತಿ 500 ವ್ಯಕ್ತಿಗಳಿಗೆ ಒಂದು ಶಾಖೆಯನ್ನು ಈ ಜಿಲ್ಲೆಗಳು ಹೊಂದಿದ್ದು ಭಾರತದಲ್ಲೆ  ಅತ್ಯುತ್ತಮ ಬ್ಯಾಂಕ್  ವಿತರಣೆ ಇರುವ ಪ್ರದೇಶವಾಗಿದೆ .[೨] 1880 ಮತ್ತು 1935 ರ ನಡುವೆ, ಕರಾವಳಿ ಕರ್ನಾಟಕದಲ್ಲಿ 22 ಬ್ಯಾಂಕುಗಳನ್ನು ಸ್ಥಾಪಿಸಲಾಯಿತು, ಅವುಗಳಲ್ಲಿ ಒಂಬತ್ತು ಮಂಗಳೂರು ನಗರದಲ್ಲಿವೆ.

ಬ್ಯಾಂಕುಗಳ ಉಗಮ[ಬದಲಾಯಿಸಿ]

ಕರಾವಳಿ ಪ್ರದೇಶದಲ್ಲಿ  ಬ್ಯಾಂಕಿಂಗ್ ನ ಉಗಮ 1868 ರಲ್ಲಿ ಶುರುವಾಯಿತು.  ತೋಟದ ಉತ್ಪಾದನೆಯನ್ನು ರಫ್ತು ಮಾಡುವ  ಬ್ರಿಟಿಷ್ ಕಂಪನಿಗಳ ಅಗತ್ಯಗಳನ್ನು ಪೂರೈಸಲು ಪ್ರೆಸಿಡೆನ್ಸಿ ಬ್ಯಾಂಕ್ ಆಫ್ ಮದ್ರಾಸ್  ಒಂದು ಶಾಖೆಯನ್ನು ತೆರೆಯಿತು .1912 ರಲ್ಲಿ   ಭಾರತೀಯ ಸಹಕಾರ ಸಂಘಗಳ ಕಾಯಿದೆಯಿಂದಾಗಿ ಬಹಳಷ್ಟು ಸಹಕಾರ ಸಂಘಗಳು  ಸ್ಥಾಪನೆಗೊಂಡವು.   1905 ರ ಸ್ವದೇಶಿ ಆಂದೋಲನದ ಅಂಗವಾಗಿ ಕರ್ನಾಟಕ ಬ್ಯಾಂಕ್ ಅನ್ನು ರಚಿಸಲಾಯಿತು, ಆದ್ದರಿಂದ ಭಾರತದ ಸ್ವಾತಂತ್ರ್ಯ ಚಳವಳಿ ಕೂಡಾ ಒಂದು ಪ್ರಮುಖ ಪಾತ್ರ ವಹಿಸಿದೆ. ಈ ಬ್ಯಾಂಕುಗಳು ಮೊದಮೊದಲು ಕೇವಲ ವ್ಯವಸಾಯ  ಕ್ಷೇತ್ರಕ್ಕೆ ಸೀಮಿತವಾಗಿತ್ತು, ನಂತರ ಇತರ ಆರ್ಥಿಕ ವಲಯಗಳಿಗೂ ಹಬ್ಬಿಕೊಂಡಿತು.

ಬ್ಯಾಂಕ್ ಹುಟ್ಟಿದ ಸ್ಥಳ ವರ್ಷ
ಕೆನರಾ ಬ್ಯಾಂಕ್  ಮಂಗಳೂರು 1906,112 ವರ್ಷಗಳ ಹಿಂದೆ
ಕರ್ನಾಟಕ ಬ್ಯಾಂಕ್  ಮಂಗಳೂರು 1924, 94 ವರ್ಷಗಳ ಹಿಂದೆ
ವಿಜಯಾ ಬ್ಯಾಂಕ್  ಮಂಗಳೂರು 1931,87 ವರ್ಷಗಳ ಹಿಂದೆ
ಕಾರ್ಪೊರೇಶನ್ ಬ್ಯಾಂಕ್ ಉಡುಪಿ 1906,112 ವರ್ಷಗಳ ಹಿಂದೆ
ಸಿಂಡಿಕೇಟ್ ಬ್ಯಾಂಕ್  ಉಡುಪಿ 1925, 93 ವರ್ಷಗಳ ಹಿಂದೆ
ವೈಶ್ಯ ಬ್ಯಾಂಕ್  ಬೆಂಗಳೂರು 1930,88 ವರ್ಷಗಳ ಹಿಂದೆ
ಸ್ಟೇಟ್ ಬ್ಯಾಂಕ್ ಆಫ್ ಮೈಸೂರು  N/A 1913, 105 ವರ್ಷಗಳ ಹಿಂದೆ

ಅಭಿವೃದ್ದಿ[ಬದಲಾಯಿಸಿ]

1969 ಮತ್ತು 1980ರಲ್ಲಿ, ಭಾರತ ಸರ್ಕಾರದ ಬ್ಯಾಂಕುಗಳ ರಾಷ್ಟ್ರೀಕರಣದ ಪ್ರಕಟಣೆಯಿಂದಾಗಿ ಈ ಬ್ಯಾಂಕುಗಳು  ರಾಷ್ಟ್ರೀಕರಣಗೊಂಡವು ಮತ್ತು ಈಗ ಈ ಬ್ಯಾಂಕುಗಳ ಮೇಲೆ ಕೆಲವು ನಿಯಂತ್ರಣವನ್ನು ಸರ್ಕಾರ ಹೊಂದಿದೆ. ಸ್ಟೇಟ್ ಬ್ಯಾಂಕ್ ಆಫ್ ಮೈಸೂರು, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್ ಮತ್ತು ವೈಶ್ಯ ಬ್ಯಾಂಕ್ಗಳು ಬೆಂಗಳೂರಿನಲ್ಲಿ ತಮ್ಮ ಪ್ರಧಾನ ಕಛೇರಿಯನ್ನು ಹೊಂದಿವೆ.  ಕಾರ್ಪೊರೇಷನ್ ಬ್ಯಾಂಕ್ ಮತ್ತು ಕರ್ನಾಟಕ ಬ್ಯಾಂಕ್ ಮುಖ್ಯ ಕಚೇರಿ ಮಂಗಳೂರಿನಲ್ಲಿ  ಹಾಗು ಸಿಂಡಿಕೇಟ್ ಬ್ಯಾಂಕ್ ಮುಖ್ಯ ಕಚೇರಿ ಮಣಿಪಾಲದಲ್ಲಿದೆ . 

ಮಾರ್ಚ್ 2002 ರಂತೆ, ಕರ್ನಾಟಕವು 4767 ವಿವಿಧ ಬ್ಯಾಂಕ್ಗಳ ಶಾಖೆಗಳನ್ನು  ಹೊಂದಿದೆ.[೩] ಪ್ರತಿ ಶಾಖೆ ಸೇವೆ ನೀಡುವ ಜನರ ಸಂಖ್ಯೆಯು 11,000 ಆಗಿದೆ ಮತ್ತು ಇದು ರಾಷ್ಟ್ರೀಯ ಸರಾಸರಿ 16,000 ಗಿಂತ ಕಡಿಮೆಯಿದೆ.

ಬ್ಯಾಂಕುಗಳು[ಬದಲಾಯಿಸಿ]

ಕೆನರಾ ಬ್ಯಾಂಕ್[ಬದಲಾಯಿಸಿ]

ವಕೀಲರಾಗಿದ್ದ ಅಮ್ಮೆಂಬಾಳ್ ಸುಬ್ಬರಾವ್ ಪೈ ಅವರು  1906 ರ ಜುಲೈ 1 ರಂದು ಮಂಗಳೂರಿನಲ್ಲಿ ಕೆನರಾ ಬ್ಯಾಂಕ್ ಹಿಂದೂ ಖಾಯಂ ನಿಧಿಯನ್ನು  ಸ್ಥಾಪಿಸಿದರು . ಈಗ ಭಾರತದಲ್ಲಿ 2542 ಶಾಖೆಗಳನ್ನು  ಹೊಂದಿದೆ.  ಭಾರತವಲ್ಲದೇ ಲಂಡನ್,ಮಾಸ್ಕೋ,ಹಾಂಗ್‌ಕಾಂಗ್,ದೋಹಾ,ದುಬೈ ಮುಂತಾದ ಸ್ಥಳಗಳಲ್ಲಿಯು ಬ್ಯಾಂಕ್ ತನ್ನ ಶಾಖೆಗಳನ್ನು ಹೊಂದಿದೆ.

[೪] [೫]  ೧೯೬೯ರಲ್ಲಿ ರಾಷ್ಟ್ರೀಕರಿಸಲಾಯಿತು ಮತ್ತು  ಕೆನರಾ ಬ್ಯಾಂಕ್ನಲ್ಲಿ 73% ಪಾಲನ್ನು ಭಾರತ ಸರ್ಕಾರ ಹೊಂದಿದೆ.

ಕಾರ್ಪೊರೇಶನ್ ಬ್ಯಾಂಕ್[ಬದಲಾಯಿಸಿ]

ಕಾರ್ಪೊರೇಷನ್ ಬ್ಯಾಂಕ್ ಅನ್ನು ೧೯೦೬ರಲ್ಲಿ ಉಡುಪಿಯಲ್ಲಿ ಖಾನ್ ಬಹದ್ದೂರ್ ಹಾಜಿ ಅಬ್ದುಲ್ಲ ಕಾಸಿಮ್ ಸಾಹೆಬ್ ಬಹದ್ದೂರ್ ಮತ್ತು ಇನ್ನಿತರರು "ಕೆನರಾ ಬ್ಯಾಂಕಿಂಗ್ ಕಾರ್ಪೊರೇಶನ್ (ಉಡುಪಿ) ಲಿಮಿಟೆಡ್" ಎಂಬ ಹೆಸರಿನಲ್ಲಿ ಸ್ಥಾಪಿಸಿದರು. 1972 ರಲ್ಲಿ,  ಪ್ರಸ್ತುತ ಹೆಸರು ಕಾರ್ಪೋರೇಷನ್ ಬ್ಯಾಂಕ್ ಪಡೆದುಕೊಂಡು ಮತ್ತು 1980 ರಲ್ಲಿ ರಾಷ್ಟ್ರೀಕರಣಗೊಂಡಿತು.  [೬]

 

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು[ಬದಲಾಯಿಸಿ]

ಸ್ಟೇಟ್ ಬ್ಯಾಂಕ್ ಆಫ್ ಮೈಸೂರು (ಎಸ್ಬಿಎಂ) ಅನ್ನು 1913 ರಲ್ಲಿ ಬ್ಯಾಂಕ್ ಆಫ್ ಮೈಸೂರು ಲಿಮಿಟೆಡ್ ಎಂಬ ಹೆಸರಿನಲ್ಲಿ ಸ್ಥಾಪಿಸಲಾಯಿತು.[೭] ಸರ್ ಎಂ ವಿಶ್ವೇಶ್ವರಯ್ಯ ನೇತೃತ್ವದ ಬ್ಯಾಂಕಿಂಗ್ ಸಮಿತಿಯು ಮೈಸೂರು ರಾಜ್ಯದ ಪ್ರೋತ್ಸಾಹದಲ್ಲಿ ರೂಪುಗೊಂಡು ಈ ಬ್ಯಾಂಕಿನ ರಚನೆಗೆ ಕಾರಣವಾಯಿತು.

ಕರ್ನಾಟಕ ಬ್ಯಾಂಕ್[ಬದಲಾಯಿಸಿ]

ಕರ್ನಾಟಕ ಬ್ಯಾಂಕ್ ಅನ್ನು 18 ಫೆಬ್ರವರಿ 1924 ರಂದು ಮಂಗಳೂರಿನಲ್ಲಿ ಸ್ಥಾಪಿಸಲಾಯಿತು.

ಸಿಂಡಿಕೇಟ್ ಬ್ಯಾಂಕ್[ಬದಲಾಯಿಸಿ]

1925 ರಲ್ಲಿ ಉಡುಪಿಯಲ್ಲಿ ಸಿಂಡಿಕೇಟ್ ಬ್ಯಾಂಕ್ ಅನ್ನು ಸ್ಥಾಪಿಸಲಾಯಿತು. ಉಪೇಂದ್ರ ಅನಂತ್ ಪೈ,ವಾಮನ್ ಕುಡ್ವ ಮತ್ತು ಡಾ.ಟಿ ಎಂ ಎ ಪೈ ಮೂವರು ಸೇರಿ ₹೮೦೦೦ ಬಂಡವಾಳ ದಲ್ಲಿ "ಕೆನರಾ ಇಂಡಸ್ಟ್ರಿಯಲ್ ಮತ್ತು ಬ್ಯಾಂಕಿಂಗ್ ಸಿಂಡಿಕೇಟ್ ಲಿಮಿಟೆಡ್ " ಅನ್ನು ಸ್ಥಾಪಿಸಿದರು.  [೮]

   

ವೈಶ್ಯ ಬ್ಯಾಂಕ್[ಬದಲಾಯಿಸಿ]

ವೈಶ್ಯ ಬ್ಯಾಂಕ್ ಅನ್ನು 1930 ರಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲಾಯಿತು .[೯]

 

ವಿಜಯ ಬ್ಯಾಂಕ್[ಬದಲಾಯಿಸಿ]

ವಿಜಯ ಬ್ಯಾಂಕ್ ಅನ್ನು 23 ಅಕ್ಟೋಬರ್ 1931 ರಂದು  ಮಂಗಳೂರಿನಲ್ಲಿ ಎ ಬಿ.ಶೆಟ್ಟಿ ಮತ್ತು ಇತರರಿಂದ ಸ್ಥಾಪಿಸಲ್ಪಟ್ಟಿತು. 1960 ರ ದಶಕದಲ್ಲಿ ಬ್ಯಾಂಕ್ ಮುಲ್ಕಿ ಸುಂದರ್ ರಾಮ್ ಶೆಟ್ಟಿಯವರ ನಾಯಕತ್ವದಲ್ಲಿ ಅಪೂರ್ವವಾಗಿ ಬೆಳೆಯಿತು. ವಿಜಯಾ ಬ್ಯಾಂಕ್ 1980 ರ ದಶಕದಲ್ಲಿ ಭಾರತದ ಸರ್ಕಾರದಿಂದ ರಾಷ್ಟ್ರೀಕರಣಗೊಂಡಿತು. 

ಇದನ್ನು ಸಹ ನೋಡಿ[ಬದಲಾಯಿಸಿ]

ಟಿಪ್ಪಣಿಗಳು[ಬದಲಾಯಿಸಿ]

  1. Ravi Sharma. "Building on a strong base". Online Webpage of The Frontline, Volume 22 - Issue 21, Oct. 08 - 21, 2005. © 2005, Frontline. Archived from the original on 2007-10-07. Retrieved 2007-06-21. {{cite web}}: Unknown parameter |deadurl= ignored (help)
  2. Ravi Sharma. "A pioneer's progress". Online Edition of the Frontline, Volume 20 - Issue 15, July 19 - August 01, 2003. © 2003, Frontline. Archived from the original on 2007-10-12. Retrieved 2007-06-21.
  3. "State/Union Territory-Wise Number of Branches of Scheduled Commercial Banks and Average Population Per Bank Branch – March 2002" (PDF). Online webpage of the Reserve Bank of India. Archived from the original (PDF) on 2007-08-10. Retrieved 2007-06-21. {{cite web}}: Unknown parameter |deadurl= ignored (help)
  4. "Branches and Offices". Online Webpage of The Canara Bank. Archived from the original on 2007-06-06. Retrieved 2007-06-21. {{cite web}}: Unknown parameter |dead-url= ignored (help)
  5. "Canara Bank eyes Dena, appoints E&Y for deal". Online webpage of The Rediff.com, dated 2007-05-09. © 2007 Rediff.com India Limited. Archived from the original on 15 July 2007. Retrieved 2007-06-21. {{cite web}}: Unknown parameter |dead-url= ignored (help)
  6. "History". Online webpage of the Corporation Bank. Archived from the original on 9 June 2007. Retrieved 2007-06-21. {{cite web}}: Unknown parameter |dead-url= ignored (help)
  7. "Our Profile". Online webpage of the State Bank of Mysore. Archived from the original on 28 June 2007. Retrieved 2007-06-21. {{cite web}}: Unknown parameter |dead-url= ignored (help)
  8. "About Us". Online webpage of The Syndicate Bank. Archived from the original on 2007-02-27. Retrieved 2007-06-21. {{cite web}}: Unknown parameter |dead-url= ignored (help)
  9. "ಆರ್ಕೈವ್ ನಕಲು". Archived from the original on 2015-08-20. Retrieved 2018-01-22.

ಬಾಹ್ಯ ಕೊಂಡಿಗಳು[ಬದಲಾಯಿಸಿ]