ಸದಸ್ಯ:Kishoryadav55/ನನ್ನ ಪ್ರಯೋಗಪುಟ
ನನ್ನ ಪರಿಚಯ
[ಬದಲಾಯಿಸಿ]ನನ್ನ ಪೂರ್ಣ ಹೆಸರು ಕಿಶೋರ್. ನವೆಂಬರ್ ೨ ೧೯೯೯ ರಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕು ಚಿಕ್ಕನಲ್ಲಾಳ ಎಂಬ ಗ್ರಾಮದಲ್ಲಿ ಜನಿಸಿದೆನು. ನನ್ನ ತಂದೆಯ ಹೆಸರು ರಾಜಣ್ಣ ಹಾಗೂ ತಾಯಿ ಶಾರದಮ್ಮನ ಮಗನಾಗಿ ಜನಿಸಿದ್ದೇನೆ. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ೧ನೇ ತರಗತಿಯಿಂದ ೬ನೇ ತರಗತಿಯ ವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಎಂಬ ಚಿಕ್ಕನಲ್ಲಾಳದಲ್ಲಿ ವಿದ್ಯಾಭ್ಯಾಸವನ್ನು ಪಡೆದಿದ್ದೇನೆ. ನಂತರ ನನ್ನ ೭ನೇ ತರಗತಿಯಿಂದ ೮ನೇ ತರಗತಿಯವರೆಗೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಎಂಬ ಬೂದಿಗೆರೆಯಲ್ಲಿ ಮುಂದುವರೆಸಿದೆನು. ನಂತರ ೯ನೇ ತರಗತಿಯಿಂದ ೧೦ನೇ ತರಗತಿಯವರೆಗೆ ಶ್ರೀ ಸಿದ್ಧಗಂಗಾ ಸಂಯುಕ್ತ ಪದವಿ ಪೂರ್ವ ಮತ್ತು ಪ್ರೌಢ ಶಾಲೆ ಎಂಬ ಬೂದಿಗೆರೆಯಲ್ಲಿ ವಿದ್ಯಾಭ್ಯಾಸವನ್ನು ಮುಗಿಸಿದ್ದೇನೆ. ನಂತರ ಪ್ರಥಮ ಹಾಗೂ ದ್ವಿತೀಯ ದರ್ಜೆನಲ್ಲಿ ವಿಜ್ನಾನವೆಂಬ ವಿಷಯವನ್ನು ತೆಗೆದುಕೊಂಡು ಶ್ರೀ ಮಾರುತಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಭ್ಯಾಸವನ್ನು ಮಾಡೀದ್ದೇನೆ. ನನ್ನ ಮುಂದಿನ ಶಿಕ್ಷಣವನ್ನು ಕ್ರೈಸ್ಟ್ ಯೂನಿವರ್ಸಿಟಿ ಎಂಬ ಕಾಲೇಜಿನಲ್ಲಿ ಬಿ.ಎಸ್.ಸಿ ಎಂಬ ಪದವಿಯನ್ನು ಮಾಡುತ್ತಿದ್ದೇನೆ. ನನಗೆ ಕ್ರೈಸ್ಟ್ ಕಾಲೇಜಿನಲ್ಲಿ ತುಂಬಾ ಇಷ್ಟವಾದುದೆಂದರೆ ಈ ಕಾಲೇಜಿನಲ್ಲಿ ಎಲ್ಲಾತುಂಬಾ ಚೆನ್ನಾಗಿ ಪಾಠವನ್ನು ಮಾಡುತ್ತಾರೆ. ಹಾಗೂ ನನಗೆ ಎನಾದರೂ ವಿಷಯದ ಬಗ್ಗೆ ಗೊತ್ತಿಲ್ಲದಿದ್ದಾಗ ನಮ್ಮ ಪಕ್ಕದಲ್ಲಿ ಬಂದು ಅರ್ಥವಾಗುವಂತೆ ಹೇಳಿಕೊಡುತ್ತಾರೆ.
ನನಗೆ ಇಷ್ಟವಾದ ಸ್ಥಳಗಳು ಮತ್ತು ವೆಕ್ತಿಗಳು :
[ಬದಲಾಯಿಸಿ]ನನಗೆ ಈ ಕಾಲೇಜಿನ ಆವರಣವೆಂದರೆ ತುಂಬಾ ಇಷ್ಟವಾಯಿತು. ಏಕೆಂದರೆ ಕಾಲೇಜಿನ ಸುತ್ತಮುತ್ತಲಿನ ಎಲ್ಲಾಕಡೆ ಹೆಚ್ಚು ಮರಗಿಡಗಳಿವೆ. ಹಾಗು ನಮಗೆ ಓದಲು ಇಷ್ತವಾದಾಗ ಮರದ ಕೆಳಗೆ ಕುಳಿತುಕೊಂಡು ಓದಲು ಪ್ರಾರಂಬಿಸಿದಾಗ ನಮಗೆ ಓದಲು ಆಸಕ್ತಿ ಉಂಟಾಗುತ್ತದೆ. ನನಗೆ ಇಷ್ಟವಾದ ಉತ್ತಮ ಗುಣವುಳ್ಳ ಪ್ರಧಾನ ಮಂತ್ರಿಗಳೆಂದರೆ ಎಪಿಜೆ ಅಬ್ದುಲ್ ಕಲಾಂ ಹಾಗೂ ಈಗಿನ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರು ನನಗೆ ಇಷ್ಟವಾಗಿದ್ದಾರೆ. ನನಗೆ ಇಷ್ಟವಾದ ಪ್ರಾವಾಸಿಕ ಸ್ಥಳಗಳೆಂದರೆ ಧರ್ಮಸ್ಥಳ, ಶ್ರುಂಗೇರಿ, ಕುಪ್ಪಳ್ಳಿ, ತಿರುಪತಿ ಮತ್ತು ಮಲೆನಾಡಿನ ಸುತ್ತಮುತ್ತಲಿನ ಪ್ರದೇಶಗಳು. ನಂತರ ನನಗೆ ಇಷ್ಟವಾದ ಮಹಿಳಾ ರತ್ನಗಳೆಂದರೆ ಅಕ್ಕ ಮಹಾದೇವಿ, ಕಿತ್ತೂರು ರಾಣಿ ಚೆನ್ನಮ್ಮ ಮತ್ತು ನನಗೆ ಇಷ್ಟವಾದ ಗಣಿತ ತಜ್ನರೆಂದರೆ ಆರ್ಯಭಟ ಹಾಗು ನನಗೆ ಇಷ್ಟವಾದ ಸ್ವಾತಂತ್ರ ಹೋರಾಟಗಾರರೆಂದರೆ ಸುಭಾಷ್ ಚಂದ್ರ ಭೋಸ್, ಭಗತ್ ಸಿಂಗ್
ನನ್ನ ಆಟ ಮತ್ತು ಓಟಗಳು
[ಬದಲಾಯಿಸಿ]. ನನಗೆ ಮರೆಯಲಾರದ ಸಂಗತಿಗಳೆಂದರೆ ನಾನು ಮತ್ತು ನನ್ನ ಸ್ನೇಹಿತರು ಒಂದೇ ತಟ್ಟೆನಲ್ಲಿ ಊಟವನ್ನು ಮಾಡಿರುವುದು. ಮತ್ತು ನನ್ನ ಮೊದಲ ಪಂದ್ಯ ಖೋ ಖೋ ಮೊಟ್ಟಮೊದಲಿಗೆ ರಾಜ್ಯಮಟ್ಟದಲ್ಲಿ ಭಾಗವಹಿಸಿರುವುದು. ಹಾಗೂ ನಾನು ನನ್ನ ಗೆಳೆಯರು ಚಿಕ್ಕ ವಯಸ್ಸಿನಲ್ಲಿ ಕ್ರಿಕೇಟ್ ಎಂಬ ಆಟ ತಿಳಿಯದೇ ಹಲವಾರೂ ಪಂದ್ಯಗಳನ್ನು ಸೋತಿರುವುದು. ನಾನು ಪ್ರಾಥಮಿಕ ಹಾಗು ಪ್ರೌಢ ಶಾಲೆಯಲ್ಲಿ ಓದುತ್ತಿರುವಾಗ ನನಗೆ ಕಬಡ್ಡಿ ಎಂದರೆ ತುಂಬಾ ಇಷ್ಟವಿತ್ತು. ಹಾಗು ನಾನು ಎಲ್ಲಾ ಕ್ರೀಡೆನಲ್ಲಿ ಭಾಗವಹಿಸಿತ್ತಿದ್ದೆ. ನಾನು ಕಬಡ್ಡಿನಲ್ಲಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿ ಪ್ರಥಮ ಹಾಗೂ ದ್ವಿತೀಯ ಬಹುಮಾನವನ್ನು ತೆಗೆದುಕೊಂಡಿದ್ದೇನೆ. ಹಾಗೂ ದ್ವಿತೀಯ ದರ್ಜೆನಲ್ಲಿ ಓದುತ್ತಿರುವಾಗ ನಾನು ನಮ್ಮ ಬೆಂಗಳೂರು ಗ್ರಾಮಾಂತರದಿಂದ ರಾಜ್ಯಮಟ್ಟದಲ್ಲಿ ಬಾಗಲಕೋಟೆ ಜಿಲ್ಲೆಯ ಜಮಕಂಡಿನಲ್ಲಿ ಕಬಡ್ಡಿಯಲ್ಲಿ ಭಾಗವಹಿಸಿದ್ದೇನೆ. ಇದರಿಂದ ನನಗೆ ರಾಜ್ಯಮಟ್ಟದ ಪ್ರಮಾಣ ಪತ್ರವನ್ನು ಕೊಟ್ಟಿದ್ದರು. ಈ ಪ್ರಮಾಣ ಪತ್ರ ನನಗೆ ಇವಾಗ ತುಂಬಾ ಪ್ರಾಮುಖ್ಯತೆಯನ್ನು ಕೊಡುತ್ತಿದೆ. ಹಾಗೂ ನನ್ನ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿರುವಾಗ ನಾನು ಪ್ರತಿಭಾ ಕಾರಂಜಿನಲ್ಲಿ ಭಾಗವಹಿಸುತ್ತಿದ್ದೆ. ಅವಾಗ ನನಗೆ ಚಿತ್ರಕಲೆ ಎಂದರೆ ತುಂಬಾ ಇಷ್ಟವಿತ್ತು. ಎಲ್ಲಾದರು ಪ್ರತಿಭಾ ಕಾರಂಜಿ ಇದ್ದಾಗ ನಾನು ಚಿತ್ರಕಲೆನಲ್ಲಿ ಭಾಗವಹಿಸಿ ಬಹುಮಾನವನ್ನು ತೆಗೆದುಕೊಳ್ಳುತ್ತಿದ್ದೇನು. ಇದರಿಂದ ನಮ್ಮ ಮನೆನಲ್ಲಿ ನನಗೆ ಚಿತ್ರ ಬರೆಯುವುದನ್ನು ಕಲಿಯಲು ಬೇರೆ ಶಾಲೆಗಳಿಗೆ ಕಳಿಸುತ್ತಿದ್ದರು
ನನ್ನ ಮುಂದಿನ ಆಸೆ
. ನಾನು ಚೆನ್ನಾಗಿ ಓದಿ ಶಿಕ್ಷಕನಾಗಲು ಬಯಸುತ್ತೇನೆ. ಏಕೆಂದರೆ ನಮ್ಮ ತಂದೆ ತಾಯಿಗೆ ನಾನು ಶಿಕ್ಷಕನಾಗಬೇಕೆಂಬ ಆಸೆ ಇದೆ. ಅದಕ್ಕಾಗಿ ನಾನು ಚೆನ್ನಾಗಿ ಓದಿ ಮುಂದೆ ಶಿಕ್ಷಕನಾಗುತ್ತೇನೆ. ನಾನು ಶಿಕ್ಷಕನಾಗಿ ತುಂಬಾ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಹೇಳಿಕೊಡುತ್ತೇನೆ.