ಭಾನುಗುಪ್ತ
ಭಾನುಗುಪ್ತ | |
---|---|
? ಗುಪ್ತ ಅರಸ | |
ಆಳ್ವಿಕೆ | c. 510 – c. ? CE |
ಪೂರ್ವಾಧಿಕಾರಿ | ? |
ಉತ್ತರಾಧಿಕಾರಿ | ? |
ಗುಪ್ತ ಸಾಮ್ರಾಜ್ಯ ಕ್ರಿ.ಶ. 320 – ಕ್ರಿ.ಶ. 550 | ||||||||||||||||||||||||||||||||||||
---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|---|
|
||||||||||||||||||||||||||||||||||||
ಭಾನುಗುಪ್ತ ಗುಪ್ತ ರಾಜವಂಶದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನಾಗಿದ್ದನು. ಇವನು ಕೇವಲ ಎಯ್ರನ್ನಲ್ಲಿನ ಒಂದು ಶಾಸನದಿಂದ ಮತ್ತು ಮಂಜುಶ್ರೀ ಮೂಲಕಲ್ಪದಲ್ಲಿನ ಒಂದು ಉಲ್ಲೇಖದಿಂದ ಪರಿಚಿತನಾಗಿದ್ದಾನೆ.
ಎಯ್ರನ್ ಶಾಸನದಲ್ಲಿ ಇವನನ್ನು ಗುಪ್ತ ಸಾಮ್ರಾಜ್ಯದ ಅರಸನಿಗೆ ರೂಢಿಜನ್ಯವಾದ ಮಹಾರಾಜ ಅಥವಾ ಮಹಾರಾಜಾಧಿರಾಜ ಎಂದು ಕರೆಯುವ ಬದಲು ಕೇವಲ ರಾಜ ಎಂದು ಉಲ್ಲೇಖಿಸಲಾಗಿದೆ. ಹಾಗಾಗಿ ಭಾನುಗುಪ್ತನು ಗುಪ್ತ ಸಾಮ್ರಾಟ ನರಸಿಂಹಗುಪ್ತನ ಕೆಳಗೆ ಮಾಲ್ವಾದ ಪ್ರದೇಶಕ್ಕೆ ಕೇವಲ ಒಬ್ಬ ಪ್ರಾಂತಾಧಿಪತಿಯಾಗಿರಬಹುದು. ಎಯ್ರನ್ ಶಾಸನದ ಎರಡು ಅನುವಾದಗಳಿವೆ. ಮೊದಲನೇ ಅನುವಾದವನ್ನು ಫ್ಲೀಟ್ ಮಾಡಿದ್ದಾರೆ.
ಭಾನುಗುಪ್ತನು ಅವನ ಕಾಲದ ಒಂದು ಪ್ರಮುಖ ಕಾಳಗದಲ್ಲಿ ಭಾಗಿಯಾಗಿದ್ದನು, ಬಹುಶಃ ಹುಣ ಆಕ್ರಮಣಕಾರ ತೋರಮನನ ವಿರುದ್ಧ ಮತ್ತು ಮುಖ್ಯ ಸೋಲುಗಳನ್ನು ಅನುಭವಿಸಿದನು ಮತ್ತು ೫೧೦ರಲ್ಲಿ ಇವನು ತೋರಮನನನ್ನು ಸೋಲಿಸಿರಬಹುದು ಅಥವಾ ಇಲ್ಲದಿರಬಹುದು ಎಂದು ಸೂಚಿಸಲಾಗಿದೆ.[೧][೨] ಶಾಸನದ ದೃಷ್ಟಿಯಿಂದ, ಭಾನುಗುಪ್ತನು ಕ್ರಿ.ಶ. ೫೧೦ರ ಎಯ್ರನ್ ಕಾಳಗದಲ್ಲಿ ತೋರಮನನಿಂದ ಪರಾಭವಗೊಂಡನು, ಮತ್ತು ಹೀಗೆ ಪಶ್ಚಿಮ ಗುಪ್ತ ಪ್ರಾಂತ್ಯವಾದ ಮಾಲ್ವಾ ಹುಣರ ಕೈ ಸೇರಿತು ಎಂದು ಮುಕರ್ಜಿ ವಾಸ್ತವವಾಗಿ ಪರಿಗಣಿಸುತ್ತಾರೆ. ಆಗ ತೋರಮನನು, ಪ್ರದೇಶದ ನಿಯಂತ್ರಣದ ಹಕ್ಕುಸಾಧಿಸಿ, ತನ್ನ ಎಯ್ರನ್ ಕಾಡುಹಂದಿ ಶಾಸನವನ್ನು ಮಾಡಿರಬಹುದು.
ಉಲ್ಲೇಖಗಳು
[ಬದಲಾಯಿಸಿ]