ಇತ್ತೀಚಿನ ಸಂಶೋಧನೆಯಿಂದ ಕಚಗುಪ್ತನು ಮೊದಲನೇ ಚಂದ್ರಗುಪ್ತನ ಪುತ್ರರಲ್ಲಿ ಒಬ್ಬನು ಎಂದು ಪರಿಗಣಿಸಲಾಗಿದೆ, ಮತ್ತು ಸುಮಾರು ಕ್ರಿ.ಶ. ೩೩೫ರಲ್ಲಿ ಅಲ್ಪಕಾಲ ಆಳಿದನು.[೧] ಇವನ ತಮ್ಮ ಸಮುದ್ರಗುಪ್ತನು ಇವನ ಉತ್ತರಾಧಿಕಾರಿಯಾಗಿರಬಹುದು, ಅಥವಾ ಅಧಿಕಾರಕ್ಕಾಗಿ ಇವನೊಡನೆ ಸಂಘರ್ಷದಲ್ಲಿದ್ದಿರಬಹುದು.[೧][೨] ಕಚಗುಪ್ತನು ಕೇವಲ ಅವನ ನಾಣ್ಯಗಳಿಂದ ತಿಳಿದುಬಂದಿದ್ದಾನೆ, ಮತ್ತು ಅವುಗಳ ಕೊರತೆ ಅವನ ಆಳ್ವಿಕೆಯ ಸಂಕ್ಷಿಪ್ತತೆಯನ್ನು ದೃಢೀಕರಿಸುತ್ತವೆ.[೧]