ಪುರುಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪುರುಗುಪ್ತ
೯ನೇ ಗುಪ್ತ ಸಾಮ್ರಾಟ
ಆಳ್ವಿಕೆ c. 467 – c. 473 CE
ಪೂರ್ವಾಧಿಕಾರಿ ಸ್ಕಂದಗುಪ್ತ
ಉತ್ತರಾಧಿಕಾರಿ ಎರಡನೇ ಕುಮಾರಗುಪ್ತ
ತಂದೆ ಮೊದಲನೇ ಕುಮಾರಗುಪ್ತ
ತಾಯಿ ಅನಂತಾದೇವಿ

ಪುರುಗುಪ್ತ (ಆಳ್ವಿಕೆ ಕಾಲ ಕ್ರಿ.ಶ. 467–473) ಉತ್ತರ ಭಾರತದಲ್ಲಿ ಗುಪ್ತ ರಾಜವಂಶದ ಒಬ್ಬ ಸಾಮ್ರಾಟನಾಗಿದ್ದನು. ಪುರುಗುಪ್ತನು ಗುಪ್ತ ಸಾಮ್ರಾಟ ಮೊದಲನೇ ಕುಮಾರಗುಪ್ತ ಮತ್ತು ರಾಣಿ ಅನಂತಾದೇವಿಯ ಒಬ್ಬ ಮಗನಾಗಿದ್ದನು. ಇವನು ತನ್ನ ಮಲಸಹೋದರ ಸ್ಕಂದಗುಪ್ತನ ಉತ್ತರಾಧಿಕಾರಿಯಾದನು.[೧] ಇಲ್ಲಿಯವರೆಗೆ ಪುರುಗುಪ್ತನ ಯಾವುದೇ ಶಾಸನ ಪತ್ತೆಯಾಗಿಲ್ಲ. ಇವನು ತನ್ನ ಮೊಮ್ಮಗ ಮೂರನೇ ಕುಮಾರಗುಪ್ತನ ಭೀತರಿ ಬೆಳ್ಳಿ-ತಾಮ್ರ ಮುದ್ರೆ ಮತ್ತು ತನ್ನ ಪುತ್ರರಾದ ನರಸಿಂಹಗುಪ್ತ ಹಾಗೂ ಬುಧಗುಪ್ತ ಹಾಗೂ ಮೊಮ್ಮಗ ಮೂರನೇ ಕುಮಾರಗುಪ್ತರ ನಾಲಂದಾ ಜೇಡಿಮಣ್ಣಿನ ಮುದ್ರೆಗಳಿಂದ ತಿಳಿದುಬಂದಿದ್ದಾನೆ. ಸಾರನಾಥದ ಬುದ್ಧ ವಿಗ್ರಹ ಶಾಸನದಿಂದ, ಎರಡನೇ ಕುಮಾರಗುಪ್ತನು ಇವನ ಉತ್ತರಾಧಿಕಾರಿ ಎಂದು ತೀರ್ಮಾನಿಸಲಾಗಿದೆ.[೨]

ವಿಷ್ಣುಗುಪ್ತನ ನಾಲಂದಾ ಮುದ್ರೆಯ ಪ್ರಕಾರ, ವಿಷ್ಣುಗುಪ್ತನು ಎರಡನೇ ಕುಮಾರಗುಪ್ತನ ಮಗ, ಮತ್ತು ಪುರುಗುಪ್ತನ ಮೊಮ್ಮಗನಾಗಿದ್ದನು.[೩]

ಉಲ್ಲೇಖಗಳು[ಬದಲಾಯಿಸಿ]

  1. Mahajan, V. D. (2007) [1960]. Ancient India. New Delhi: S. Chand. p. 512. ISBN 81-219-0887-6.
  2. Agarwal, Ashvini (1989). Rise and Fall of the Imperial Guptas. Delhi: Motilal Banarsidass. pp. 220, 223–5. ISBN 81-208-0592-5.
  3. Corpus Inscriptionum Indicarum Vol.3 (inscriptions Of The Early Gupta Kings) p.364