ಸದಸ್ಯ:Ganya ganiga/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸದಾಪುಷ್ಪ
Scientific classification
ಸಾಮ್ರಾಜ್ಯ:
Plantae
(ಶ್ರೇಣಿಯಿಲ್ಲದ್ದು):
Angiosperms
(ಶ್ರೇಣಿಯಿಲ್ಲದ್ದು):
Eudicots
(ಶ್ರೇಣಿಯಿಲ್ಲದ್ದು):
Asterids
ಗಣ:
Gentianales
ಕುಟುಂಬ:
Apocynaceae
ಕುಲ:
Catharanthus
ಪ್ರಜಾತಿ:
C. roseus
Binomial name
Catharanthus roseus
Synonyms
  • Vinca rosea (basionym)
  • Ammocallis rosea
  • Lochnera rosea

ಸದಾಪುಷ್ಪಿಯ ಮೂಲಸ್ಥಾನ ಮಡಗಾಸ್ಕರ್.ಇದನ್ನು ಸಾಮಾನ್ಯವಾಗಿ ಉದ್ಯಾನವನಗಳಲ್ಲಿ ಬೆಳೆಯಲಾಗುತ್ತದೆ.ಉದ್ಯಾನದ ಅಂಚುಗಳಲ್ಲಿ ಅಂದಕ್ಕಾಗಿ ಬೆಳೆಸುತ್ತಾರೆ.ಇದನ್ನು ದಕ್ಷಿಣ ಆಫ್ರಿಕಾ,ಭಾರತ,ಶ್ರೀಲಂಕಾಗಳಲ್ಲಿ ಸಿಹಿಮೂತ್ರರೋಗಕ್ಕೆಮನೆಯೌಷಧಿಯಾಗಿ ಬಳಸಲಾಗುತ್ತದೆ.ಕರ್ನಾಟಕದ ಕೆಲವೆಡೆ ಇದನ್ನು "ಪರಂಗಿ ಮಲ್ಲಿ" ಎಂದು ಕರೆಯುತ್ತಾರೆ.ಎಲ್ಲ ಕಾಲದಲ್ಲಿಯೂ ಹೂ ಬಿಡುವಂತಹದಾದ್ದರಿಂದ "ಸದಾ ಬಹಾರ್",ಸದಾಪುಷ್ಪಿ ಅಂತಲೂ ಕರೆಯಲಾಗುತ್ತದೆ.ಮೈಸೂರು ಪ್ರಾಂತ್ಯದಲ್ಲಿ "ಹೇನು ಹೂ" ಎಂತಲೂ ಕರೆಯುತ್ತಾರೆ.

ಕಾಶಿ ಕಣಗಿಲೆ(ಸ್ಮಶಾನ ಕಣಗಿಲೆ)ಅನೇಕ ಔಷಧೀಯ ಗುಣಗಳನ್ನು ಹೊಂದಿರುವ ಸಸ್ಯ.ಇದು ಬಿಳಿ ಮತ್ತು ಕೆಂಪು ಹೂಗಳು ಬಿಡುವುದರಿಂದ ಬಿಳಿ ಮತ್ತು ಕೆಂಪು ಕಾಶಿ ಕಣಿಗಲು,ಪ್ರಾಣಿಗಳು ಸೇವಿಸದೇ ಇರುವುದರಿಂದ ಮತ್ತು ವಿಷಯುಕ್ತವಾದ್ದರಿಂದ ವಿಷ ಕಣಿಗಲು,ದೇಗುಲಗಳ ಸಮೀಪ ಹಾಗೂ ಸ್ಮಶಾನದ ಸುತ್ತಮುತ್ತ ಬೆಳೆಯುವುದರಿಂದ ಗಣೇಶನ ಹೂ,ಸ್ಮಶಾನ ಮಲ್ಲಿಗೆ ಎಂದು,ವರ್ಷದ ಎಲ್ಲ ಋತುಗಳಲ್ಲಿ ಹೂ ಬಿಡುವುದರಿಂದ ಸದಾಪುಷ್ಪ ಎಂದು ಹೆಸರುವಾಸಿಯಾಗಿದೆ.

ಸಸ್ಯವರ್ಣನೆ[ಬದಲಾಯಿಸಿ]

ಇದು ೨-೩ ಅಡಿ ಎತ್ತರ ಬೆಳೆಯುತ್ತದೆ.ಕಾಂಡ ಬಹಳವಾಗಿ ಕವಲೊಡೆದು ಬೆಳೆಯುವುದರಿಂದ ಪೊದೆಯಂತಾಗುತ್ತದೆ.ಕಾಂಡದ ಮೇಲೆ ಸಾಮಾನ್ಯ ರೀತಿಯ ಎಲೆಗಳು ಅಭಿಮುಖವಾಗಿ ಜೋಡಣೆಯಾಗಿವೆ.ಹೂಗಳ ಬಣ್ಣ ಗುಲಾಬಿ ಕೆಂಪು ಅಥವಾ ಬಿಳಿ.ಎಲೆಗಳ ಮೇಲ್ಭಾಗ ದಟ್ಟ ಹಸಿರಾಗಿದ್ದು ಹೊಳಪಿನಿಂದ ಕೂಡಿದೆ.ಆದರೆ ಎಲೆಯ ಕೆಳಭಾಗ ಹೊಳಪಿಲ್ಲದೆ ತಿಳಿಹಸಿರಾಗಿದೆ.ಗುಲಾಬಿಗೆಂಪಿನ ಮತ್ತು ಬಿಳಿ ಹೂ ಬಿಡುವ ಸಸ್ಯಗಳು ಬಾಹ್ಯನೋಟಕ್ಕೆ ಪ್ರತ್ಯೇಕ ತಳಿಗಳೆಂಬಂತೆ ಕಂಡುಬಂದರೂ ವಾಸ್ತವವಾಗಿ ಎರಡು ತಳಿಗಳು ಒಂದೇ ಆಗಿವೆ.ಒಂದೇ ಸಸ್ಯದ ಬೇರೆ ಬೇರೆ ರೆಂಬೆಗಳಲ್ಲಿ ಎರಡೂ ಬಣ್ಣದ ಹೂಗಳಿರುವುದು ಈ ವಾದಕ್ಕೆ ಪುಷ್ಟಿ ಕೊಡುತ್ತದೆ.ಕ್ಯಾಥರಾಂತಸ್ ರೋಸಿಯಸ್ ಎಂಬ ವೈಜ್ಞಾನಿಕ ಹೆಸರುಳ್ಳ ಈ ಸಸ್ಯವು ಅಪೊಸೈನೇಸಿ ಕುಟುಂಬಕ್ಕೆ ಸೇರಿದೆ.

ಮಣ್ಣು[ಬದಲಾಯಿಸಿ]

ಇದನ್ನು ವಿವಿಧ ಮಣ್ಣುಗಳಲ್ಲಿ ಬೆಳೆಯಬಹುದಾದರೂ ಆಮ್ಲೀಯ ಕ್ಷಾರವುಳ್ಳ ಅಥವಾ ಜಿಗುಟು ಮಣ್ಣಿನಲ್ಲಿ ಬೆಳೆಯಲಾಗುವುದಿಲ್ಲ,ಫಲವತ್ತಾದ ಮರಳು ಮಿಶ್ರಿತ ಗೋಡುಮಣ್ಣು ಈ ಬೆಳೆಗೆ ಸೂಕ್ತ.

ಹವಾಗುಣ[ಬದಲಾಯಿಸಿ]

ಉಷ್ಣ ಹಾಗೂ ಸಮಶೀತೋಷ್ಣವಲಯಗಳಲ್ಲಿ ಸಮರ್ಪಕವಾಗಿ ಬೆಳೆಯುತ್ತದೆ.ಕೆಲವೊಮ್ಮೆ ಊರ ಹೊರವಲಯದಲ್ಲಿ,ಪಾಳು ದೇಗುಲಗಳ ಸಮೀಪ,ಕೋಟೆ ಕೊತ್ತಲಗಳ ಸಮೀಪ ಮತ್ತು ಸ್ಮಶಾನದ ಬಯಲಿನಲ್ಲಿ ಪ್ರಕೃತಿ ಸಹಜ ಬೆಳೆಯಂತೆ ಕಂಡುಬರುತ್ತದೆ.

ತಳಿಗಳು[ಬದಲಾಯಿಸಿ]

ಲೋಕಲ್ ಮತ್ತು ನಿರ್ಮಲ್ ಎಂಬ ತಳಿಗಳು ಇವೆ.ಕಾಶಿ ಕಣಗಿಲೆಯಲ್ಲಿ ೩ವಿಧದ ಹೂಗಳನ್ನು ಹೊಂದಿರುವ ಗಿಡಗಳು ಕಂಡುಬರುತ್ತವೆ.ಗುಲಾಬಿ(ನೇರಳೆ)ಬಣ್ಣದ ಹೂಗಳು,ಬಿಳಿ ಹೂಗಳು, ಗುಲಾಬಿ(ನೇರಳೆ)ಬಣ್ಣದ ಮಧ್ಯಭಾಗವನ್ನು ಹೊಂದಿದ ಬಿಳಿ ಹೂಗಳು ಇವೆ.

ಬೇಸಾಯ ಕ್ರಮಗಳು[ಬದಲಾಯಿಸಿ]

ಕಾಶಿ ಕಣಗಿಲೆಯನ್ನು ಬೀಜಗಳಿಂದ ವೃದ್ಧಿ ಮಾಡಬಹುದು.ಬೀಜಗಳು ಬಹಳ ಬೇಗ ಮೊಳಕೆಯೊಡೆಯುವ ಸಾಮರ್ಥ್ಯ ಕಳೆದುಕೊಳ್ಳುವುದರಿಂದ ಕೊಯ್ಲಾದ ಕೂಡಲೇ ನೇರ ಬಿತ್ತನೆಯಾಗಲಿ ಅಥವಾ ಸಸಿ ಮಡಿಗಳಲ್ಲಾಗಲಿ ಬೀಜಗಳನ್ನು ಬಿತ್ತಬೇಕು.

ಒಂದು ಚ.ಮೀಟರ್ ಜಾಗಕ್ಕೆ ೨.೫ ಗ್ರಾಂನಷ್ಟು ಬೀಜಗಳು ಬೇಕಾಗುತ್ತವೆ.ಬೀಜಗಳನ್ನು ಸಣ್ಣ ಮರಳಿನೊಂದಿಗೆ ಬೆರೆಸಿ ಬಿತ್ತಬೇಕಾಗುತ್ತದೆ.ಬೀಜ ಮೊಳೆತು ಸಸಿ ಬೆಳೆದ ಮೇಲೆ ೪೫ ಸೆಂ.ಮೀ ಅಂತರವಿಟ್ಟು ಮಿಕ್ಕ ಸಸಿಗಳನ್ನು ಕೀಳಬೇಕು.

ಕಳೆ ಹತೋಟಿ[ಬದಲಾಯಿಸಿ]

ನಾಟಿ ಮಾಡಿದ ನಂತರ ಕಳೆ ಕಂಡ ತಕ್ಷಣ ತೆಗೆಯಬೇಕು.

ನೀರಾವರಿ[ಬದಲಾಯಿಸಿ]

ಮೊದಲಲ್ಲಿ ಆಗಾಗ್ಗೆ ನೀರು ಹಾಯಿಸಬೇಕು.ನಂತರ ಒಂದು ವಾರಕ್ಕೊಮ್ಮೆ ನೀರು ಕೊಡಬಹುದು.

ಸಸ್ಯ ಸಂರಕ್ಷಣೆ[ಬದಲಾಯಿಸಿ]

ಇದು ಗಡುತರ ಸಸ್ಯವಾಗಿದ್ದರಿಂದ ಕೀಟ ಹಾಗೂ ರೋಗ ಬಾಧೆಗೆ ಗುರಿಯಾಗುವುದಿಲ್ಲ.ಆದರೂ ಕೆಲವೊಮ್ಮೆ ವೈರಸ್ ಬಾಧೆಯಿಂದ ಸಣ್ಣೆಲೆ ಮತ್ತು ತುದಿಯಿಂದ ಒಣಗುವಿಕೆ ಕಂಡುಬರುತ್ತದೆ.ಈ ರೀತಿಯ ಗಿಡಗಳನ್ನು ಕಿತ್ತು ಸುಡಬೇಕು.

ಕೊಯ್ಲು ಮತ್ತು ಇಳುವರಿ[ಬದಲಾಯಿಸಿ]

ಬೀಜ ಬಿತ್ತಿದ ಒಂದು ವರ್ಷದ ನಂತರ ಕೊಯ್ಲು ಮಾಡಿ, ಎಲೆ, ಕಾಂಡ ಮತ್ತು ಬೀಜಗಳನ್ನು ಒಣಗಿಸಬೇಕು.ನಂತರ ಬೇರುಗಳನ್ನು ಸಹ ಪಡೆಯಬಹುದು.ಪೂರ್ತಿ ಗಿಡವನ್ನು ಕಿತ್ತ ನಂತರ ನೆರಳಿನಲ್ಲಿ ಒಣಗಿಸಿ ಹಗುರವಾಗಿ ಗಿಡವನ್ನು ನೆಲಕ್ಕೆ ಬಡಿದರೆ ಬೀಜಗಳು ಬೇರ್ಪಡುತ್ತವೆ.ಬಲಿತ ಕಾಯಿಗಳನ್ನು ಗಿಡ ಕೀಳುವುದಕ್ಕೆ ಮೊದಲೇ ಕೊಯ್ಲು ಮಾಡುವುದರಿಂದ ಬೀಜಗಳನ್ನು ಮುಂದೆ ಉಪಯೋಗಿಸಿಕೊಳ್ಳಬಹುದು.ಇದರಿಂದ ೧.೫ ಕೆ.ಜಿ ಯಷ್ಟು ಕಾಂಡಭಾಗವನ್ನು ೩ಕೆ.ಜಿ ಯಷ್ಟು ಎಲೆಯ ಇಳುವರಿಯನ್ನು ಮಾಡಬಹುದು.

ಉಪಯುಕ್ತ ಭಾಗಗಳು[ಬದಲಾಯಿಸಿ]

ಬೇರು, ಎಲೆ ಮತ್ತು ಕಾಂಡ.

ರಾಸಾಯನಿಕ ಘಟಕಗಳು[ಬದಲಾಯಿಸಿ]

ವಿನ್ಕ್ರಿಸ್ಟಿನ್, ವಿನ್ಬ್ಲಾಸ್ಟಿನ್.

ಔಷಧೀಯ ಗುಣಗಳು[ಬದಲಾಯಿಸಿ]

  • ಕ್ರಿಮಿಕೀಟಗಳು ಕಚ್ಚಿದಾಗ ಸದಾಪುಷ್ಪಿಯ ಎಲೆಯನ್ನು ಅರೆದು ಲೇಪಿಸಿದಲ್ಲಿ ಊತ, ನೋವು ಕಡಿಮೆಯಾಗುತ್ತದೆ.
  • ಅಧಿಕ ರಕ್ತಸ್ರಾವದಿಂದ ಬಳಲುವ ಸ್ತ್ರೀಯರಿಗೆ ಸದಾಪುಷ್ಪಿಯ ಎಲೆಗಳ ಕಷಾಯ ಉತ್ತಮ ಪರಿಣಾಮ ಬೀರುತ್ತದೆ.
  • ಸದಾಪುಷ್ಪಿಯ ಬೇರು ವಿಷವುಳ್ಳದ್ದಾಗಿದ್ದು ಈ ಗಿಡದ ಎಲ್ಲ ಭಾಗಗಳೂ ಅದರಲ್ಲಿಯೂ ಬೇರಿನ ತೊಗಟೆಯಲ್ಲಿ ಆಲ್ಕಲಾಯ್ಡ್ ಗಳಿವೆ. ಈ ಎಲ್ಲ ಆಲ್ಕಲಾಯ್ಡ್ ಗಳು ರಕ್ತದೊತ್ತಡ ತಗ್ಗಿಸುತ್ತವೆ, ನಿದ್ರಾಜನಕವಾಗಿರುವುದಲ್ಲದೆ ಆತಂಕವನ್ನು ಕಡಿಮೆ ಮಾಡುತ್ತವೆ.ದೇಹದ ಮಾಂಸಖಂಡಗಳಲ್ಲಿ ಬಿಗಿತವನ್ನು ಸಡಿಲಗೊಳಿಸುವುದಲ್ಲದೇ ಖಿನ್ನತೆಯನ್ನು ತಗ್ಗಿಸುತ್ತದೆ. ಈ ಆಲ್ಕಲಾಯ್ಡ್ ಗಳು ಕಾಲರಾ ಉತ್ಪತ್ತಿ ಮಾಡುವ vibrio cholerae ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ನಿಯಂತ್ರಿಸುತ್ತವೆ.
  • ಸಿಹಿಮೂತ್ರ ರೋಗವುಳ್ಳವರು ಸದಾಪುಷ್ಪಿಯ ಎಲೆಗಳನ್ನು ಪ್ರತಿದಿನ ಬೆಳಗ್ಗೆ(೪-೬)ಅಗಿದು ತಿನ್ನುವುದರಿಂದ ಸಕ್ಕರೆಕಾಯಿಲೆ ನಿಯಂತ್ರಣಕ್ಕೆ ಬರುತ್ತದೆ.
  • ಚೇಳು ಕಡಿತ ಸದಾಪುಷ್ಪಿಯ ಬೇರನ್ನು ಅರೆದು ಚೇಳು ಕಡಿದಾಗ ಲೇಪ ಹಾಕುವುದರಿಂದ ಉರಿ, ನೋವು ಕಡಿಮೆಯಾಗುತ್ತದೆ.
  • ಅಧಿಕ ರಕ್ತದೊತ್ತಡ ಇದರ ಎಲೆಗಳನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿಟ್ಟುಕೊಳ್ಳಬೇಕು.ಒಂದು ಚಮಚ ಪುಡಿಯನ್ನು ಒಂದು ಲೋಟ ನೀರಿಗೆ ಹಾಕಿ ಕಾಯಿಸಿ ಕಷಾಯ ತಯಾರಿಸಬೇಕು.ಈ ಕಷಾಯವನ್ನು ಬೆಳಗ್ಗೆ ಹಾಗೂ ರಾತ್ರಿ ಕುಡಿಯಬೇಕು.
  • ಸುಟ್ಟಗಾಯ ಸುಟ್ಟಗಾಯಗಳಾಗಿ ಬೊಬ್ಬೆಯುಂಟಾದಾಗ ಇದರ ತಾಜಾ ಎಲೆಗಳನ್ನು ಜಜ್ಜಿ ರಸ ತೆಗೆದು ಅದರಲ್ಲಿ ಸ್ವಲ್ಪ ಅಕ್ಕಿ ಹಿಟ್ಟು ಬೆರೆಸಿ ಗಾಯದ ಮೇಲೆ ಲೇಪ ಹಾಕಬೇಕು.ಉರಿ ಕಡಿಮೆಯಾಗುವುದಲ್ಲದೇ ಗಾಯವೂ ಬೇಗ ವಾಸಿಯಾಗುವುದು.
  • ಭೇದಿಯುಂಟಾದಾಗ ಹತ್ತು ಗ್ರಾಂ ಇದರ ಎಲೆಗಳನ್ನು ನೀರಿನಲ್ಲಿ ಕುದಿಸಿ ಕಷಾಯ ತಯಾರಿಸಬೇಕು.ತಣ್ಣಗಾದ ನಂತರ ಎರಡು ಭಾಗ ಮಾಡಿ ಬೆಳಗ್ಗೆ ಹಾಗೂ ರಾತ್ರಿ ಕುಡಿಯಬೇಕು.
  • ಗಾಯಗಳಾದಾಗ ಮಕ್ಕಳು ಆಟವಾಡುವಾಗ ಗಾಯಗಳಾಗುವುದು ಸಾಮಾನ್ಯ.ಅಂತಹ ಸಮಯದಲ್ಲಿ ಸದಾಪುಷ್ಪಿ ಎಲೆಗಳನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡಿದ್ದು ಆ ಪುಡಿಯನ್ನು ಗಾಯಗಳ ಮೇಲೆ ಲೇಪಿಸಿದಲ್ಲಿ ಗಾಯ ವಾಸಿಯಾಗುತ್ತದೆ.
  • ಮಲಬದ್ಧತೆ ಮಲಬದ್ಧತೆಯ ತೊಂದರೆಯಿಂದ ಬಳಲುವವರು ಸದಾಪುಷ್ಪಿಯ ತಾಜಾ ಎಲೆಗಳ ಕಷಾಯ ತಯಾರಿಸಿ ರಾತ್ರಿ ಮಲಗುವ ಮುಂಚೆ ಕುಡಿಯಬೇಕು.[೧]

ಸಂಶೋಧನೆ[ಬದಲಾಯಿಸಿ]

ಸದಾಪುಷ್ಪಿಯಲ್ಲಿರುವ ಕೆಲವು ರಾಸಾಯನಿಕ ಸತ್ವಗಳು ಹೃದಯ ಸಂಬಂಧವಾದ ರೋಗಗಳನ್ನು ವಾಸಿ ಮಾಡುತ್ತವೆಂದು ಸಂಶೋಧನೆಗಳಿಂದ ತಿಳಿದುಬಂದಿದೆ.ಕ್ಯಾನ್ಸರ್ ರೋಗಕ್ಕೂ ಇದರಲ್ಲಿನ ಕೆಲವು ಆಲ್ಕಾಲಾಯ್ಡ್ ಗಳಿಂದ ಔಷಧಿ ತಯಾರಿಸುವುದರ ಕುರಿತು ಸಂಶೋಧನೆ ನಡೆಯುತ್ತಿದೆ. ಕೆಲವು ಪ್ರಾಣಿಗಳಿಗೆ (ಇಲಿ, ಮೊಲ, ಗಿನಿಪಿಗ್)ಕ್ಯಾನ್ಸರ್ ರೋಗವನ್ನು ಕೃತಕವಾಗಿ ಉಂಟುಮಾಡಿ ಸದಾಪುಷ್ಪಿಯಿಂದ ತಯಾರಿಸಿದ ಔಷಧಿಯನ್ನು ಚುಚ್ಚುಮದ್ದಿನ ಮೂಲಕ ಆ ಪ್ರಾಣಿಗಳಿಗೆ ನೀಡಲಾಯಿತು.ಇದರಿಂದ ಕೆಲವು ಬಗೆಯ ಕ್ಯಾನ್ಸರ್ ರೋಗಗಳು ಗುಣವಾದವು.ಸದಾಪುಷ್ಪಿಯ ಎಲೆಯಿಂದ ಹೊರತೆಗೆದ ಆಲ್ಕಲಾಯ್ಡ್ ನಿಂದ ಗುಣ ಕಂಡುಬಂದಿತು.ಇದೇ ನಿಟ್ಟಿನಲ್ಲಿ ಸಂಶೋಧನೆಗಳು ಮುಂದುವರೆದವು.ಮನುಷ್ಯ ಶರೀರದ ಮೇಲೂ ಇದೇ ಔಷಧಿಯನ್ನು ಪ್ರಯೋಗಿಸಲಾಯಿತು.ಯಾವ ಔಷಧಿಗಳಿಂಲೂ ನಿಯಂತ್ರಣಕ್ಕೆ ಬರದ ಕ್ಯಾನ್ಸರ್, ಸದಾಪುಷ್ಪಿಯ ಆಲ್ಕಲಾಯ್ಡ್ ಗಳಿಂದ ಹಿಡಿತಕ್ಕೆ ಬಂದುದು ಕಂಡುಬಂದಿದೆ.ಮುಖ್ಯವಾಗಿ 'ಹಾಡ್ಜ್ಕಿನ್ ಡಿಸೀಸ್'ಗೆ ಇದು ಅತ್ಯುತ್ತಮ ಔಷಧಿಯಾಗಿದೆ.

ಇತರ ಭಾಷೆಗಳಲ್ಲಿ[ಬದಲಾಯಿಸಿ]

  • ಸಂಸ್ಕ್ರತ - ಸದಾಪುಷ್ಪಿ
  • ಹಿಂದಿ - ಸದಾ ಬಹಾರ್
  • ತೆಲುಗು - ತೆಲ್ಲನಿ ಗನ್ನೇರು, ಬಿಲ್ಲಗನ್ನೇರು
  • ಮರಾಠಿ - ಸದಾಫೂಲ್
  • ಮಲಯಾಳಂ - ಉಷಾಮಲಾರೈ
  • ತಮಿಳು - ಸುದುಕಡು ಮಲ್ಲಿಕೈ, ನಿತ್ಯ ಕಲ್ಯಾಣಿ
  • ಇಂಗ್ಲಿಷ್ - periwinkle
  • ವೈಜ್ಞಾನಿಕ ಹೆಸರು - catharanthus rosens

ಉಲ್ಲೇಖ[ಬದಲಾಯಿಸಿ]

  1. ಮನೆಯಂಗಳದಲ್ಲಿ ಔಷಧಿವನ,ಡಾ.ವಸುಂಧರಾ ಭೂಪತಿ.ನವಕರ್ನಾಟಕ ಪ್ರಕಾಶನ,೭ನೇ ಮುದ್ರಣ ೨೦೧೩.ಪುಟ ಸಂಖ್ಯೆ ೧೮೩