ಧರಮ್ ಸಿಂಗ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
(ಧರ೦ ಸಿ೦ಘ್ ಇಂದ ಪುನರ್ನಿರ್ದೇಶಿತ)
ಎನ್. ಧರಮ್ ಸಿಂಗ್ N. Dharam Singh.

17 ನೇ ಕರ್ನಾಟಕದ ಮುಖ್ಯಮಂತ್ರಿ
ಅಧಿಕಾರ ಅವಧಿ
28 May 2004 – 3 February 2006
ರಾಜ್ಯಪಾಲ ಟಿ. ಎನ್. ಚತುರ್ವೇದಿ
ಪೂರ್ವಾಧಿಕಾರಿ ಎಸ್. ಎಂ. ಕೃಷ್ಣ
ಉತ್ತರಾಧಿಕಾರಿ ಹೆಚ್. ಡಿ. ಕುಮಾರಸ್ವಾಮಿ
ಮತಕ್ಷೇತ್ರ ಜೆವರ್ಗಿ

ಅಧಿಕಾರ ಅವಧಿ
2009 – 2014
ಪೂರ್ವಾಧಿಕಾರಿ ನರ್ಸಿಂಗ್ರಾವ್ ಸೂರ್ಯವಂಶಿ
ಉತ್ತರಾಧಿಕಾರಿ ಭಗವಾತ್ ಖುಬಾ
ಮತಕ್ಷೇತ್ರ ಬೀದರ್ (ಲೋಕಸಭಾ ಕ್ಷೇತ್ರ)

ವಿಧಾನಸಭೆಯ ಸದಸ್ಯರು
ಅಧಿಕಾರ ಅವಧಿ
1978 – 2008
ಪೂರ್ವಾಧಿಕಾರಿ ಓ. ಎಸ್. ನಾರಾಯಣ್ ಸಿಂಗ್
ಉತ್ತರಾಧಿಕಾರಿ ದೊಡ್ಡಪ್ಪ ಗೌಡ ಪಾಟೀಲ್
ಮತಕ್ಷೇತ್ರ ಜೆವರ್ಗಿ
ವೈಯಕ್ತಿಕ ಮಾಹಿತಿ
ಜನನ (೧೯೩೬-೧೨-೨೫)೨೫ ಡಿಸೆಂಬರ್ ೧೯೩೬
ನೆಲೋಗಿ, ಜೆವರ್ಗಿ, ಗುಲ್ಬರ್ಗಾ
ಮರಣ 27 July 2017(2017-07-27) (aged 80)
ಬೆಂಗಳೂರು, ಭಾರತ
ರಾಜಕೀಯ ಪಕ್ಷ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಸಂಗಾತಿ(ಗಳು) ಪ್ರಭಾವತಿ
ಅಭ್ಯಸಿಸಿದ ವಿದ್ಯಾಪೀಠ ಉಸ್ಮಾನಿಯಾ ವಿಶ್ವವಿದ್ಯಾಲಯ
As of 27 July, 2017

ಧರಮ್ ಸಿಂಗ್ ಭಾರತದ ಕರ್ನಾಟಕ ರಾಜ್ಯದ ೧೭ನೆ ಮುಖ್ಯಮಂತ್ರಿಗಳು, ಕಾಂಗ್ರೆಸ್ ಪಕ್ಷದ ಸದಸ್ಯರಾಗಿದ್ದರು . ಗುಲ್ಬರ್ಗ ಜಿಲ್ಲೆಯ, ಜೇವರಗಿ ತಾಲೂಕಿನ, ನೇಲೋಗಿ ಗ್ರಾಮದಲ್ಲಿ ೧೯೩೬ ರಲ್ಲಿ ಜನಿಸಿದ ಧರಂ ಸಿಂಗ್, ಹೈದರಾಬಾದ್ ನ ಓಸ್ಮಾನಿಯಾ ವಿಶ್ವವಿದ್ಯಾಲಯದಲ್ಲಿ ಎಂ.ಎ. ಹಾಗು ಎಲ್.ಎಲ್.ಬಿ. ಪದವಿಗಳನ್ನು ಪಡೆದಿದ್ದಾರೆ. ವಕೀಲರಾಗಿ ಸ್ವಲ್ಪ ಕಾಲ ಕಾರ್ಯ ನಿರ್ವಹಿಸಿದ ಮೇಲೆ ೬೦ ರ ದಶಕದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರಾದರು. ಗುಲ್ಬರ್ಗ ಜಿಲ್ಲೆಯ ಜೇವರಗಿ ವಿಧಾನಸಭಾ ಕ್ಷೇತ್ರದಿಂದ ಸತತ ಎಂಟು ಬಾರಿ ಚುನಾಯಿತರಾಗಿದ್ದಾರೆ. ೧೯೮೦ ರಲ್ಲಿ ಗುಲ್ಬರ್ಗ ಕ್ಷೇತ್ರದಿಂದ ಲೋಕಸಭೆಗೆ ಸಹ ಚುನಾಯಿತರಾಗಿದ್ದರು.[೧][೨]

ಮುಖ್ಯಮಂತ್ರಿಯಾಗುವ ಮೊದಲು ಕರ್ನಾಟಕ ಸರ್ಕಾರದಲ್ಲಿ ವಿವಿಧ ಖಾತೆಗಳನ್ನು ನಿರ್ವಹಿಸಿದ್ದರು. ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರ ಸರ್ಕಾರದಲ್ಲಿ ಲೋಕೋಪಯೊಗಿ ಖಾತೆಯನ್ನು ನಿರ್ವಹಿಸಿದ್ದರು. ಇದಕ್ಕಿಂತ ಮೊದಲು ಗೃಹ ಖಾತೆ, ಸಮಾಜ ಸುಧಾರಣಾ ಖಾತೆ, ಅಬಕಾರಿ ಖಾತೆ, ಆದಾಯ ಖಾತೆ ಮೊದಲಾದ ಖಾತೆಗಳಲ್ಲಿ ಸೇವೆ ಸಲ್ಲಿಸಿದ್ದರು. ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್ ಕಮಿಟಿ) ಯ ಅಧ್ಯಕ್ಷತೆಯನ್ನು ಸಹ ವಹಿಸಿದ್ದರು.

ರಾಜಕೀಯ ಪ್ರವೇಶ[ಬದಲಾಯಿಸಿ]

  1. ತಮ್ಮ 24, 25 ನೇ ವಯಸ್ಸಿನಲ್ಲಿ ಕಾಂಗ್ರೆಸ್ ನೊಂದಿಗೆ ಅಧಿಕೃತವಾಗಿ ಗುರುತಿಸಿಕೊಂಡರು
  2. 1968 ರಿಂದ 1988 ರವರೆಗೆ ಸಿಟಿ ಕೌನ್ಸಿಲ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ರು.
  3. 1978 ರಲ್ಲಿ ಮೊದಲ ಬಾರಿಗೆ ಜೇವರ್ಗಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ವಿಧಾನಸಭೆ ಪ್ರವೇಶ
  4. 1980 ರಲ್ಲಿ ಕಲ್ಬುರ್ಗಿ ಲೋಕಸಭಾ ಕ್ಷೇತ್ರದಿಂದ ಮೊದಲ ಬಾರಿಗೆ ಲೋಕಸಭೆ ಪ್ರವೇಶ .
  5. 1983 ,1985,1989 ,1994 ,1999,2004 , ರಲ್ಲಿ ಜೇವರ್ಗಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆ
  6. 2004 ಮೇ 28 ರಂದು ಕರ್ನಾಟಕದ 17 ನೇ ಮುಖ್ಯಮಂತ್ರಿಯಾಗಿ ಅಧಿಕಾರ
  7. 2006 ಜನವರಿ 28 ರಂದು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ
  8. 2008 ರಲ್ಲಿ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿ ಎಂಟನೇ ಬಾರಿ ವಿಧಾನಸಭೆ ಪ್ರವೇಶ ಮಾಡುವ ಕನಸಿಗೆ ಭಗ್ನ. ಈ ಬಾರಿ ಸೋಲು.
  9. 2009 ರಲ್ಲಿ ಬೀದರ್ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆಲುವು
  10. 2014 ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಸೋಲು
  11. 2006-2007: ಪ್ರತಿಪಕ್ಷ ನಾಯಕ, ಕರ್ನಾಟಕ ವಿಧಾನಸಭೆ
  12. 2009 ರಿಂದ: ಸಂಸತ್ತಿನ ಸದಸ್ಯ [೩]

ಉಲ್ಲೇಖಗಳು[ಬದಲಾಯಿಸಿ]

  1. "'Invincible Man' (often referred to as Ajat Shatru in State Politics) Dharam Singh". Karnataka.com. Karnataka.com. Archived from the original on 2007-08-10. Retrieved 2007-07-08.
  2. "Kalaburgi elected Indira Gandhi's close aide 'Stephen'". Archived from the original on 2017-08-02. Retrieved 2017-07-27.
  3. "ಧರಂ ಸಿಂಗ್ ಬಗ್ಗೆ ನೀವು ತಿಳಿದುಕೊಳ್ಳಬೇಕಾದ್ದು". www.suvarnanews.tv/news ,27 July 2017.