ಗುಲ್ಬರ್ಗ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಗುಲ್ಬರ್ಗ ಕರ್ನಾಟಕದ ಜಿಲ್ಲೆಗಳಲ್ಲಿ ಒಂದು. ಈ ಜಿಲ್ಲೆಯ ಜನಸಂಖ್ಯೆ ೨೦೦೧ ರ ಜನಗಣತಿಯ೦ತೆ ಸುಮಾರು ೨೫ ಲಕ್ಷ. ಗುಲ್ಬರ್ಗ ಜಿಲ್ಲೆಯಲ್ಲಿ ಹತ್ತು ತಾಲೂಕುಗಳಿವೆ. ಇಲ್ಲಿನ ಹವಾಮಾನ ಬೇಸಗೆಯಲ್ಲಿ ೪೬ ಡಿಗ್ರಿಗಳವರೆಗೆ ಹೋಗಬಲ್ಲದು; ಚಳಿಗಾಲದ ಕನಿಷ್ಠ ತಾಪಮಾನ ಸಾಮಾನ್ಯವಾಗಿ ೧೫ ಡಿಗ್ರಿ ಇರುವುದು.ಗುಲ್ಬರ್ಗ ಕರ್ನಾಟಕದ ಎರಡನೆ ಅತಿ ದೊಡ್ಡ ಜಿಲ್ಲೆ.

ಪರಿವಿಡಿ

[ಬದಲಾಯಿಸಿ] ಆಕರ್ಷಣೆಗಳು

  • ಗುಲ್ಬರ್ಗಾದ [ಶರಣ ಬಸವೇಶ್ವರ ದೇವಸ್ಥಾನ]
  • ಗುಲ್ಬರ್ಗಾದ [ಶರಣ ಬಸವೇಶ್ವರ ಕೆರೆಯ ಪಾರ್ಕ]
  • ಗುಲ್ಬರ್ಗಾದ [ಬಂದೇ ನವಾಜ್ ದರ್ಗಾ]
  • ಗುಲ್ಬರ್ಗಾದ [ಬಹುಮನಿ ಕೋಟೆ]
  • ಗುಲ್ಬರ್ಗಾದ [ಶ್ರೀ ರಾಮ ಮಂದಿರ]
  • ಗುಲ್ಬರ್ಗಾದ [ ಬುದ್ಧ ವಿಹಾರ]
  • ಗಾಣಗಾಪುರದ [ಶ್ರೀ ದತ್ತಾತ್ರೇಯ ಮಂದಿರ]
  • ಗುಲ್ಬರ್ಗಾದ [ ಶ್ರೀ ಸಾಯಿ ಮಂದಿರ]
  • ಶ್ರೀನಿವಾಸ ಸರಡಗಿ [ಲಕ್ಮಿ ಮಂದಿರ]
  • ಘತ್ತರಗಿಯ [ಶ್ರೀ ಭಾಗ್ಯವಂತಿ ದೇವಸ್ಥಾನ]
  • ಸುರಪುರದ [ಟೈಲರ್ ಮನ್ಜಿಲ್ಲ್]
  • ಸುರಪುರದ [ಶ್ರೀ ವೇಣುಗೋಪಾಲ ದೇವಸ್ಥಾನ]
  • ಸುರಪುರದ [ನಾಯಕರ ಅರಮನೆ
  • ಸನ್ನತಿಯ [ಶ್ರೀ ಚಂದ್ರಲಾಂಭ ದೇವಸ್ತಾನ
  • ಯಾನಾಗುಂದಿಯ [ಶ್ರೀ ಮಾಣಿಕೇಶ್ವರಿ ದೇವಸ್ಥಾನ]
  • ಕೆಸರಟಗಿಯ [ಪಾರ್ಕ್]
  • ಹಿಂದಿ ಪ್ರಚಾರ ಸಭಾ
  • ಕುದುಮುಡ್ ಮಹಾದೆವ ದೆವಸ್ತನ
  • ಬಬಲಾದ ಶ್ರೀ ಗುರುಚನ್ನಬಸವೆಸ್ವರ್

ಹಿಂದಿ ಪ್ರಚಾರ ಸಭಾ ಟ್ರಸ್ಟ್ ಕಟ್ಟಡ ಅಕ್ರಮ’ ಅನ್ನಪೂರ್ಣ ವೃತ್ತದ ಬಳಿ ಇರುವ ಹಿಂದಿ ಪ್ರಚಾರಸಭಾ ನಿವೇಶನ ಸರ್ವೇ ನಂ. ೧ರಲ್ಲಿ ಒಟ್ಟು ೨೮೩೪.೪ ಚದರ ಅಡಿ ಮತ್ತು ಸರ್ವೇ ನಂ. ೨ರಲ್ಲಿ ೬೬೩.೯ ಚದರ ಅಡಿಗಳಷ್ಟಿದ್ದು, ಈ ಜಾಗ ಕಂದಾಯ ಭೂಮಿ. ರಾಷ್ಟ್ರೀಯ ಭಾಷೆ ಹಿಂದಿ ಪ್ರಚಾರ ಮಾಡುವ ಉದ್ದೇಶಕ್ಕಾಗಿ ನಿವೇಶನದಲ್ಲಿ ಒಂದು ಸಣ್ಣ ಕಟ್ಟಡ ಮತ್ತು ಕಾವಲುಗಾರನ ಕೋಣೆ ನಿರ್ಮಾಣಕ್ಕೆ ೧೮೫೪ರಲ್ಲಿ ಅಂದಿನ ಸರ್ಕಾರ ಅವಕಾಶ ನೀಡಿತ್ತು. ೨೦೦೨ರಲ್ಲಿ ನೂತನ ಕಟ್ಟಡಗಳ ನಿರ್ಮಾಣಕ್ಕೆ ಹಿಂದಿ ಪ್ರಚಾರಸಭಾ ಟ್ರಸ್ಟ್‌ಗೆ ಮಹಾನಗರ ಪಾಲಿಕೆ ಅನುಮತಿ ನೀಡಿತು. ಹೊಸ ಕಟ್ಟಡಗಳಲ್ಲಿ ‘ಬೈಕ್ ಸರ್ವಿಸ್ ಸೆಂಟರ್’ ‘ಪ್ರಿಂಟಿಂಗ್ ಪ್ರೆಸ್’ ‘ಕ್ಲಾಸ್ ರೂಮ್’ ‘ಅನ್ನಪೂರ್ಣ ಕೇಂದ್ರ’ ಮತ್ತು ‘ಎಸ್‌ಟಿಡಿ ಬೂತ್’ ಕಾರ್ಯನಿರ್ವಹಿಸುತ್ತಿವೆ. “ಹಿಂದಿ ಪ್ರಚಾರಸಭೆಯ ಮೂಲ ಉದ್ದೇಶಕ್ಕೆ ವಿರುದ್ಧವಾಗಿ ಟ್ರಸ್ಟಿಗಳು, ಕಂದಾಯ ಭೂಮಿಯನ್ನು ಒತ್ತುವರಿ ಮಾಡಿಕೊಂಡು ವಾಣಿಜ್ಯ ವ್ಯವಹಾರ ನಡೆಸುತ್ತಿದ್ದಾರೆ” ಎಂದು ಪಾಲಿಕೆಯ ಮಾಜಿ ಸದಸ್ಯ ಪಿ.ಎಂ. ಮಣ್ಣೂರ್ ೨೦೦೨ರಲ್ಲೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತರು ೨೦೦೭ರಲ್ಲಿ ಈ ಕುರಿತು ತನಿಖೆ ಕೈಗೊಂಡು ಒತ್ತುವರಿ ದೃಢಪಡಿಸಿದ್ದರು. ಒತ್ತವರಿ ತೆರವುಗೊಳಿಸಿ ವರದಿ ನೀಡುವಂತೆ ಗುಲ್ಬರ್ಗ ಜಿಲ್ಲಾಧಿಕಾರಿಗಳ ಮೂಲಕ ಸೆಪ್ಟೆಂಬರ್ ೨೦೦೮ರಲ್ಲಿ ಮೊದಲ ಪತ್ರ ಬರೆದಿದ್ದರು. ಆನಂತರ ನಾಲ್ಕು ನೆನಪೋಲೆಗಳನ್ನು ಬರೆಯಲಾಗಿದೆ. ‘ಕರ್ನಾಟಕ ರಾಜ್ಯ ಸರ್ಕಾರಿ ಜಮೀನುಗಳ ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷ ವಿ. ಬಾಲಸುಬ್ರಹ್ಮಣ್ಯನ್ ಅವರು ಗುಲ್ಬರ್ಗಕ್ಕೆ ಆಗಮಿಸಿದ್ದ ಹಿನ್ನೆಲೆಯಲ್ಲಿ ಕಂದಾಯ ಭೂಮಿ ಒತ್ತುವರಿಯನ್ನು ಜಿಲ್ಲಾಡಳಿತ ಈಗ ಗಂಭೀರವಾಗಿ ಪರಿಗಣಿಸಿದೆ. ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವುದಾಗಿಯೂ ಪ್ರಾದೇಶಿಕ ಆಯುಕ್ತರು ಬಾಲಸುಬ್ರಹ್ಮಣ್ಯನ್ ಅವರಿಗೆ ತಿಳಿಸಿದ್ದಾರೆ’ ಎನ್ನುವುದು ಸಂರಕ್ಷಣಾ ಕಾರ್ಯಪಡೆಯ ಅಧ್ಯಕ್ಷರಿಗೂ ಈ ಕುರಿತು ದೂರು ಸಲ್ಲಿಸಿರುವ ಮಣ್ಣೂರ್ ಅವರ ವಿವರಣೆ. ಕಾನೂನುಬಾಹಿರವಾಗಿ ನಿರ್ಮಿಸಿರುವ ಹಿಂದಿ ಪ್ರಚಾರ ಸಭಾ ಟ್ರಸ್ಟ್ ಕಟ್ಟಡವನ್ನು ತೆರವುಗೊಳಿಸಿ ವರದಿ ನೀಡಿ’ ಎಂದು ಜುಲೈ ೨೭ರಂದು ಹೆಚ್ಚುವರಿ ಜಿಲ್ಲಾಧಿಕಾರಿ ಮಠ ಮಲ್ಲಿಕಾರ್ಜುನ, ಪಾಲಿಕೆಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ, ‘ಲೋಕಾಯುಕ್ತರು ನೀಡಿದ ಸೂಚನೆಯನ್ನು ಓದಿಕೊಂಡು ಪ್ರತಿಕ್ರಿಯೆ ನೀಡುತ್ತೇನೆ. ನೇರವಾಗಿ ಪಾಲಿಕೆಯ ಆಯುಕ್ತರನ್ನೇ ಪ್ರಶ್ನಿಸಿ’ ಎಂದರು. ‘ನಾನು ಬಂದ ಮೇಲೆ ಈ ರೀತಿಯ ಯಾವುದೇ ಆದೇಶಗಳು ಬಂದಿಲ್ಲ’ ಎನ್ನುವುದು ಪಾಲಿಕೆ ಆಯುಕ್ತರ ವಿವರಣೆ. ಗುಲ್ಬರ್ಗ: ಹಿಂದಿ ಭಾಷೆಯ ಪ್ರಚಾರ ಉದ್ದೇಶಕ್ಕಾಗಿ ‘ಹಿಂದಿ ಪ್ರಚಾರ ಸಭಾ’ ಸಂಸ್ಥೆ ಸ್ಥಾಪನೆಗೆ ಒದಗಿಸಲಾಗಿದ್ದ ಸರ್ಕಾರಿ ಕಂದಾಯ ಜಮೀನಿನಲ್ಲಿ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಿಸಲಾಗಿದೆ ಎನ್ನುವ ಆರೋಪದ ಈ ಹಿನ್ನೆಲೆಯಲ್ಲಿ ಗುಲ್ಬರ್ಗ ಜಿಲ್ಲಾಡಳಿತವು ಹಿಂದಿ ಪ್ರಚಾರ ಸಭಾದ ಮೂಲ ಕಟ್ಟಡ ಹೊರತಾಗಿ ಕಟ್ಟಲಾದ ಅಕ್ರಮ ಕಟ್ಟಡಗಳ ತೆರವು ಕಾರ್ಯಾಚರಣೆಗೆ ಗುರುವಾರ ಚಾಲನೆ ನೀಡಲಾಯಿತು. ಲೋಕಾಯುಕ್ತ ತನಿಖೆ: ಹಿಂದಿ ಪ್ರಚಾರ ಸಭಾ ನಿರ್ಮಾಣಕ್ಕೆ ನೀಡಿರುವ ಜಾಗದಲ್ಲೇ ವಾಣಿಜ್ಯ ಉದ್ದೇಶಿತ ಕಟ್ಟಡ ನಿರ್ಮಿಸಲಾಗಿದೆ. ಟಿವಿಎಸ್ ಸರ್ವಿಸ್ ಸೆಂಟರ್, ಖಾಸಗಿ ಕಾಲೇಜು ಮತ್ತು ಟ್ಯೂಷನ್ ಕ್ಲಾಸ್‌ಗಳನ್ನು ನಡೆಸಲಾಗುತ್ತಿದೆ ಎಂದು ಹಿರಿಯ ಪತ್ರಕರ್ತ ಪಿ.ಎಂ. ಮಣ್ಣೂರ ಅವರು ಬಹಳ ವರ್ಷಗಳ ಹಿಂದೆಯೇ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಹಿಂದಿ ಪ್ರಚಾರ ಸಭಾಗೆ ನೀಡಿರುವ ಜಾಗದಲ್ಲೇ ಅಕ್ರಮ ಕಟ್ಟಡ ನಿರ್ಮಿಸಲಾಗಿದ್ದು, ಅವುಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ತನಿಖೆಯ ನಂತರ ಲೋಕಾಯುಕ್ತ ಅಧಿಕಾರಿಗಳು ಜಿಲ್ಲಾಧಿಕಾರಿಗೆ ಪತ್ರ ರವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅವರು ೩.೫.೨೦೧೧ರಂದು ಆರ್ಡ್‌ರ್ ಮಾಡಿದ್ದರು. ಹಿರಿಯ ಅಧಿಕಾರಿಯ ಆಜ್ಞೆಯಂತೆ ಉಪ ಕಂದಾಯ ಅಧಿಕಾರಿ ಸಂಗಪ್ಪ ಮತ್ತು ತಹಸೀಲ್ದಾರ ಮಹಾದೇವಪ್ಪ ಸಾಸನೂರ, ಪಿಎಸ್‌ಐ ವೀರಣ್ಣ ಕುಂಬಾರ ಅವರು ಪೊಲೀಸ್ ಸಿಬ್ಬಂದಿಯೊಂದಿಗೆ ತೆರವಿಗೆ ಮುಂದಾರು. ಕಾಲಾವಕಾಶ ನೀಡಿ: ಅಲ್ಲಿಗೆ ಆಗಮಿಸಿದ ಸ್ವಾತಂತ್ರ್ಯ ಹೋರಾಟಗಾರ ವಿದ್ಯಾಧರ ಗುರೂಜಿ ಮತ್ತು ಮಾಜಿ ಸಚಿವ ವೈಜನಾಥ ಪಾಟೀಲ ಅವರು ಇನ್ನೊಂದೆರಡು ದಿನ ಕಾಲಾವಕಾಶ ಕೇಳಿದರು. ಆದರೆ ಹಿರಿಯ ಅಧಿಕಾರಿಗಳ ಆಜ್ಞೆ ಪಾಲಿಸುವುದಷ್ಟೇ ನಮ್ಮ ಕೆಲಸ ನೀವು ಏನಾದರೂ ಕೇಳಬೇಕಾದರೆ ಜಿಲ್ಲಾಧಿಕಾರಿಗಳನ್ನೇ ವಿಚಾರಿಸಿ ಎಂದು ಸಂಗಪ್ಪ ವಿವರಿಸಿದರು. ಲೋಕಾಯುಕ್ತ ಆದೇಶದ ಹೊರತಾಗಿಯೂ ಅಕ್ರಮ ಕಟ್ಟಡ ತೆರವಿಗೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವ ಬಗ್ಗೆ ‘ಪ್ರಜಾವಾಣಿ’ ಈ ಹಿಂದೆ ವರದಿ ಮಾಡಿತ್ತು. ಸುಮಾರು ಒಂದು ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ಕಂದಾಯ ಭೂಮಿಯಲ್ಲಿನ ವಾಣಿಜ್ಯ ಉದ್ದೇಶಿತ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಈಗ ಶುರುವಾದಂತಾಗಿದೆ.


೧.ಗುಲ್ಬರ್ಗಾದ [ಬಹುಮನಿ ಕೋಟೆ] ಗುಲ್ಬರ್ಗ ಕೋಟೆ ೧೩೪೭ ರಲ್ಲಿ ನಿರ್ಮಿಸಿದರು ಉತ್ತರ ಕರ್ನಾಟಕ ರಲ್ಲಿ ಗುಲ್ಬರ್ಗ ಜಿಲ್ಲೆಯ ಕಂಡುಬರುತ್ತದೆ.ಗುಲ್ಬರ್ಗ ಕೋಟೆ ಕರ್ನಾಟಕ ಪ್ರಾಚೀನ ಇಸ್ಲಾಮಿಕ್ ವಾಸ್ತುಶಿಲ್ಪ ಅತ್ಯುತ್ತಮ ಉದಾಹರಣೆಗಳಲ್ಲಿ ಒಂದು. ಕೋಟೆ ಮೂಲತಃ ರಾಜಾ ಗುಲ್ಚಂದ್ ಕಟ್ಟಿಸಿದನು. ಗುಲ್ಬರ್ಗ ಬಹಮನಿ ರಾಜಧಾನಿಯಾಗಿ ಪ್ರಾಮುಖ್ಯತೆಯನ್ನು ಪಡೆದುಕೊಂಡಿತು, ಕೋಟೆ ಆಳವಾದ ಕಂದಕ ಬೃಹತ್ ಗೋಡೆಗಳೊಂದಿಗೆ ಅಲಾವುದ್ದೀನ್ ಬಹಮನಿ ಮೂಲಕ ಬಲಪಡಿಸಿದರು. ಕೋಟೆ ಚೆನ್ನಾಗಿ, ಶತ್ರು ಕಷ್ಟ ಆಗುತ್ತದೆ, ಇದರಿಂದ ಕಾಲುವೆ ಕೋಟೆಯ ಸುತ್ತ ತಯಾರಿಸಲಾಗುತ್ತದೆ ಯೋಜನೆ ರೂಪಿಸಿದೆ ಕಟ್ಟಲಾಗಿದೆ. ಕೃಷ್ಣ ನದಿ ಮತ್ತು ಭೀಮ ನದಿಯ ಹರಿವು ಬಹಳ ಕೋಟೆ ಹತ್ತಿರ. ಹೆಚ್ಚಾನೆಚ್ಚು ಕಪ್ಪು ಮಣ್ಣಿನ ಈ ಪ್ರದೇಶದಲ್ಲಿ ಕಂಡುಬರುತ್ತದೆ ಮತ್ತು ಬರ ಪೀಡಿತ ಪ್ರದೇಶದಲ್ಲಿ ಇದೆ. ಕೋಟೆ ೧೫ ಗೋಪುರಗಳು ಮತ್ತು ೨೬ ಬಂದೂಕುಗಳ ಒಳಗೊಂಡಿತ್ತು ಅದ್ರಲ್ಲಿ ಒಂದು ೮ ಮೀಟರ್ ಉದ್ದವಾಗಿತ್ತು. ಜಾಮಿ ಮಸೀದಿ ನಂತರ ಪರ್ಷಿಯನ್ ವಾಸ್ತುಶಿಲ್ಪ ಶೈಲಿಯಲ್ಲಿ ೧೩೬೭ ರಲ್ಲಿ ಕೋಟೆಯ ಒಳಗೆ ನಿರ್ಮಿಸಲಾಯಿತು. ಕೋಟೆ ೩೮,೦೦೦ ಚದರ ಅಡಿ ಪ್ರದೇಶದಲ್ಲಿ ಇದೆ. ಈ ಮಸೀದಿ ದಕ್ಷಿಣ ಭಾರತದಲ್ಲಿ ಮೊದಲ ಒಂದು. ಇದು ೨೧೬x೧೭೬ ಅಡಿ (೬೬x೫೪meters) ಆಯಾಮಗಳು ಹೊಂದಿದೆ. ಕೋಟೆಯ ಒಂದು ತೆರೆದ ಹೊಂದಿಲ್ಲ. ಈ ಮಸೀದಿ ಐದು ದೊಡ್ಡ ಗುಮ್ಮಟಗಳು, ೭೫ ಸಣ್ಣ ಗುಮ್ಮಟಗಳು ಮತ್ತು ಪ್ರಸ್ತುತ ೨೫೦ ಕಮಾನುಗಳು ಹೊಂದಿದೆ. ಗುಲ್ಬರ್ಗ ಕೋಟೆ ಭಾರತೀಯ ಪುರಾತತ್ವ ಸೊಸೈಟಿ ರಾಷ್ಟ್ರೀಯ ಸ್ಮಾರಕ ಎಂದು ಗುರುತಿಸಲಾಗುತ್ತದೆ [ASI] ಮತ್ತು ಪ್ರಾಚೀನ ಸ್ಮಾರಕಗಳು ಮತ್ತು ೧೯೫೮ ಪುರಾತತ್ವ ರಿಮೇನ್ಸ್ ಆಕ್ಟ್ ನಂತರ ನಂಬಿಕೆ ಇರಿಸಲಾಗುತ್ತದೆ.


೨.ಗುಲ್ಬರ್ಗಾದ [ಬಂದೇ ನವಾಜ್ ದರ್ಗಾ]--> ಹಜ್ರತ್ ಖ್ವಾಜಾ ಬಂದಾ ನವಾಜ್ ಗೆಸು ದರಜ್ (ಜುಲೈ ೧೩, ೧೩೨೧ - ನವೆಂಬರ್ ೧, ೧೪೨೨) ಭಾರತದ ವಬ್ಬ ಮಹಾನ್ ಸೂಫಿ ಸಂತ. ಅವರು ಯಲ್ಲ ಜಾತಿಯ ತುಂಬಾ ತಿಳುವಳಿಕೆ ಹಾಗು ತಾಳ್ಮೆ ಹೊಂದಿದವರು. ಗೆಸು ದರಜ್ ವಬ್ಬ ದಿಲ್ಲಿಯ ಪ್ರಖ್ಯಾತ ಸೂಫಿ ಸಂತ ಹಜ್ರತ್ ನಾಸಿರುದ್ದೀನ್ ಚಿರಗ್ಹ್ ದೆಹ್ಳವಿ ಅವರ ಶಿಷ್ಯರಾಗಿದ್ದರು. ಗೆಸು ದರಜ್ ಅವರ್ ಹೆಸರು "ಸಯೆದ್ ಮೊಹಮ್ಮೆದ್ ಹುಸ್ಸೈನಿ". ೧೩೩೬ ರಲ್ಲಿ ಇವರು ದಿಲ್ಲಿಗೆ ಹೋಗಿ ತಮ್ಮ ಶಿಕ್ಷಣ ಹಾಗು ತಾಲೀಮು ಪೂರ್ತಿ ಮಾಡಿದರು. ಗೆಸು ದರಜ್ ಅವರ ಗುರುಗಳು ಹಜ್ರತ್ ಕೆಥ್ಲಿ, ಹಜ್ರತ್ ತಾಜುದ್ದೀನ್ ಬಹಾದುರ್ ಮತ್ತು ಕಜಿ ಅಬ್ದುಲ್ ಮುಕ್ತದಿರ್. ದಿಲ್ಲಿ, ಮೆವಾಥ್, ಗ್ವಲಿಒರ್, ಅಇರ್ಚ, ಛತ್ರ, ಚಂದೆರಿ ಮತ್ತು ಬರೋದ ಅಲ್ಲಿ ಪಾಠವನ್ನು ಮಾಡಿ ೧೩೯೭ರಲ್ಲಿ ಗುಲ್ಬರ್ಗಕ್ಕೆ ಬಂದರು.ಒಂದು ದಿನ ಇವರು ಮತ್ತು ಮಿತ್ರರು ಹಜ್ರತ್ ನಸಿರುದ್ದಿನವರ್ ಪಲಕಿವನ್ನು ಎತ್ತಿದಾಗ ಗೆಸು ದರಜಿನ ಕೂದಲು ಪಲಕಿಯ ಕಾಲಲ್ಲಿ ಸಿಕ್ಕಿಬಿದ್ದಿತು, ಅವನಿಗೆ ಬಹಲ ನೋವು ಆಗಿತ್ತು, ಆದ್ರೆ ಗುರುವಿನ ಮೇಲೆ ಪ್ರೀತಿ ಹಾಗು ಮರಿಯಾದೆನಿಂದ ಅವನು ಯಾರಿಗೂ ಹೇಳಲಿಲ್ಲ. ಈ ಪ್ರೀತಿ ಹಾಗು ಮರಿಯಾದೆ ನೋಡಿ ಹಜ್ರತ್ ನಾಸಿರುದ್ದೀನ್ ಅವನನ್ನು " ಗೆಸು ದರಜ್ " ಅಂತ ಗೊಶಿಸಿದನು. ಯಲ್ಲ ಜನರು ಗೆಸು ದರಜಿಗೆ "ಖ್ವಾಜಾ ಬಂದಾ ನವಾಜ್ ಗೆಸು ದರಾಜ್" ಹೆಸರಿಂದ ಕರಯುತ್ತಾರೆ. ಇವರು ಸನ್ ೧೪೨೨ ನವೆಂಬರ್ ರಲ್ಲಿ ಮರಣರಾದರು. ಇವರು ೧೦೧ ವಯಸು ಬದಕಿದ್ರು. ಇವರ ಮರಣ ಸ್ತಾನ್ ಈಗ ಯಾತ್ರೆಯ ಸ್ತಾನ್ ವಾಗಿದೆ. ಇವರು ೧೯೫ ಪುಸ್ತಕಗಳನ್ನು ಅರಬಿ ಪೆರ್ಸಿಯ ಹಾಗು ಉರ್ದು ಭಾಷೆಯಲ್ಲಿ ಬರೆದಿದ್ದರೆ. ಉದಾ: ಅವರಿಫ್-ಉಲ್-ಮ`ಅರಿಫ್, ಫಾಸೂಸ್-ಅಲ-ಹುಕ್ಮ್, ಅಸೇದ ಅಮಲಿ ಮತ್ತು ಅದಾಬ್-ಅಲ-ಮುರೀದಇನ್. ಸ್ಥಳ ದೊಡ್ಡ ವಿಸ್ತಾರವಾದ ಸಂಕೀರ್ಣ ವಸತಿ ೧೪೧೩ ರಲ್ಲಿ ಗುಲ್ಬರ್ಗಾ ಬಂದಿದ್ದ 'ಬಂದಾ ನವಾಜ್', ಮಹಾನ್ ಸೂಫಿ ಸಂತನ ಸಮಾಧಿ ಹೊಂದಿದೆ. ಅವರ ಸಮಾಧಿಯ ತಂದೆಯ ಗೋಡೆಗಳ ವರ್ಣಚಿತ್ರಗಳು ಮತ್ತು ಮುಘುಲ್ ನಿರ್ಮಿಸಿದ ಮಸೀದಿ ಸಮಾಧಿಯ ಸಮೀಪದಲ್ಲಿದೆ. ಇದು ಇಂಡೋ-ಅರೆಬ್ಬಿಯವನು ಯಾ ಮುಸಲ್ಮಾನ ಶೈಲಿಯಲ್ಲಿ ನಿರ್ಮಿಸಲಾಗಿದೆ. ಗೋಡೆಗಳು ಮತ್ತು ಮೇಲ್ಛಾವಣಿಯ ಮೇಲೆ ವರ್ಣಚಿತ್ರಗಳು ಟರ್ಕಿಷ್ ಮತ್ತು ಇರಾನಿ ಪ್ರಭಾವ ಸಮ್ಮಿಳನ ಹೊಂದಿವೆ.ಚಂದ್ಬಿಬಿ ನಿರ್ಮಿಸಿದ "ಖಂದರ್ ಖಾನ್" ತಂದೆಯ ಮಸೀದಿ ಹಾಗೂ ಹಿರಾಪುರ್ ಮಸೀದಿ (ಒಟ್ಟು ೧೫೮೫) ಇಲ್ಲಿ ಕೆಲವು ಸ್ಮಾರಕಗಳು, ಮತ್ತು ಸುಲ್ತಾನ್ ಹಾಸನ ಮತ್ತು ಇರೊಜೆ ಷಾ ಸಮಾಧಿ ರಚನೆಗಳು ಭವ್ಯವಾದ ಇವೆ. ರಾಜ್ಯದ ಪುರಾತತ್ವ ಮ್ಯೂಸಿಯಂ ಇಲ್ಲಿ ಬೌದ್ಧ plaquest ಸನ್ನತಿದಿಂದ ತಂದಿದೆ. ಉರಸ್: ಇದು "ಖ್ವಾಜಾ ಬಂದಾ ನವಾಜ್ ಗೆಸು ದರಜ್"ರ ಪೂನ್ಯತಿಥಿಯ ದಿನಯಂದು ಆಚರಿಸುತ್ತಾರೆ. ಈ ದಿನ ಉಲ್-ಅ`ದಃ ಮುಸ್ಲಿಂ ಕ್ಯಾಲೆಂಡರ ೧೫ನೆ ದಿನಕೆ ಆಚರಿಸುತ್ತಾರೆ. ಈ ದಿನ ಹಲವಾರು ಜನ ವಿಬಿನ್ನ್ ಸ್ಥಳದಿಂದ ಇಲ್ಲಿ ಗೆಸು ದರಜ್ ರ ಆಶಿರ್ವಾದ್ ಪಡೆಯಲು ಬರುತ್ತಾರೆ. ಈಗ ಇಲ್ಲಿನ ಮುಖ್ಯ "ಸ್ಯೆದ್ ಶಾಹ್ ಖುಸ್ರೋ ಹುಸ್ಸೈನಿ" ರಗಿದರೆ.

೩.ಗುಲ್ಬರ್ಗಾದ [ಶರಣ ಬಸವೇಶ್ವರ ದೇವಸ್ಥಾನ]--> ಶರಣ ಬಸವೇಶ್ವರ ದೇವಸ್ಥಾನ ಗುಲ್ಬರ್ಗದ ಮಧ್ಯದಲ್ಲಿದೆ. ಈ ದೇವಸ್ಥಾನ ಸಂತ ಶ್ರೀ ಬಸವೇಶ್ವರರ ನೆನಪಿಗೆ ಹೋಲಿಸಲಾಗಿದೆ.ಈ ದೇವಸ್ಥಾನ ೨ಶತಮಾನದ ಹಿಂದೆ ಸ್ತಪಿಸ್ಲಾಗಿತ್ತು. ಇಲ್ಲಿ ನೀವು ಪಂಚಲೋಹ ಕಲಶವನ್ನು ನೋಡಬಹುದು. ಈ ದೇವಸ್ಥಾನದ ವಾಸ್ತುಕಲೆ ೧೨ನೆ ಶತಮಾನದಿಂದ ಇದೆ. ಗರ್ಬಗ್ರಹ: ಶರಣ ಬಸವೇಶ್ವರ ಸಮಾಧಿ ಇದೆ, ದೇವಸ್ಥಾನದ ಸುತ್ತಮುತ್ತ ಬಹಳಷ್ಟು ಸ್ತಮ್ಬಗಲಿವೆ ಮತ್ತೆ ಸಭಾಮಂತಾಪ ಹಾಗು ಪ್ರದಕ್ಷಿನಪಥವಿದೆ. ಗುಡಿಯ ಸುತ್ತ ಆನೆ, ನವಿಲು, ಗಿಳಿ, ಗರುಡ, ನಾಗ ಹಾಗು ಹೂವಿನ ಶಿಲೆ ಶಿಲ್ಪಗಳಿವೆ. ಇದು ತುಂಬ ಸುಂದರವಾಗಿ ಕಾಣಿಸುತ್ತದೆ. ಶರಣ ಬಸವೇಶ್ವರ ವೀರಶೈವ ಮನೆತನದವರು. ಇವರ ತಾಯಿ ಸಂಗಮ್ಮ ಹಾಗು ತಂದೆ ಮಲಕಪ್ಪ, ಇವರಿಗೆ ಶರಣ ಬಸವೇಶ್ವರನೊಂದಿಗೆ ಬಹಳ ಪ್ರೀತಿ ಹಾಗು ಭಕ್ತಿ ಇತ್ತು. ಇದರಿಂದ ದಾಸೋಹದ ಪಾರಂಪರ ಪ್ರಾರಂಬವಾಯಿತು. ಶರಣ ಬಸ್ಸವೆಶ್ವರ ಪೂರ್ತಿ ಮನಸ್ಸದಿಂದ ಪೂಜೆ ಮಾಡುತಿದ. ಶರಣ ಬಸವೇಶ್ವರ ಮರಣದ ನಂತರ, ಅವರ ನೆನಪಿನಿಂದ ಒಂದು ಪವಿತ್ರವಾದ ದೇವಸ್ಥಾನವನ್ನು ಕಟ್ಟಿಸಿದರು. ಶರಣ ಬಸವೇಶ್ವರರ ಉತ್ಸಾಹಿತ ಭಕ್ತ "ಅಡಿ ದೊಡ್ಡಪ್ಪ ಶರಣ" ಇವರಿಬ್ಬರು ಕೂಡಿ "ಶರಣ ಬಸವೇಶ್ವರ ಮಹದಸೋಹ ಪೀಠ" ಕಟ್ಟಿಸಿದರು. ಸಂಕ್ರಾಂತಿ ಹಾಗು ವಿಜಯದಶಮಿ ಹುಬ್ಬ ಬಹಳ ಉತ್ಶಾಹದಿಂದ ಆಚರಿಸುತ್ತಾರೆ. ಶರಣ ಬಸವೇಶ್ವರ ಮಹದಸೋಹ ಜಾತ್ರೆ ಪ್ರತಿ ವರ್ಷ ಮಾರ್ಚ್ ರಿಂದ ಏಪ್ರಿಲ್ವರೆಗೆ ಇರುತ್ತದೆ. ಥೆರವನ್ನು ಎಲಯೂತ್ತಾರೆ. ಇದು ಬಹಳ ಆಕರ್ಷಿತ್ವಾಗೀರುತ್ತದೆ. ಶರಣ ಬಸವೇಶ್ವರ ಮಹದಸೋಹ ಪೀಠ ತಮ್ಮ "ಶರಣ ಬಸವೇಶ್ವರ ವಿದ್ಯಾ ವರ್ಷಕ್ ಸಂಸ್ಥೆ ಇಂದ ಶಿಕ್ಷಣವನ್ನು ಕೊಡುತ್ತಾರೆ.

೪.ಗುಲ್ಬರ್ಗಾದ [ ಬುದ್ಧ ವಿಹಾರ]-->

ಬುದ್ಧ ವಿಹಾರ್ ವಿಸ್ತಾರವಾದ ೭೦ ಎಕರೆ ಭೂಮಿ ಗುಲ್ಬರ್ಗಾ ನೆಲೆಸಿದೆ. ಇದು ಅತಿ ದೊಡ್ಡ ರಾಷ್ಟ್ರಗಳು ಮತ್ತು ಅದರ ರೀತಿಯ ಒಂದು. ಇದು ನಗರದಿಂದ ದೂರದರಲ್ಲಿ ಗುಲ್ಬರ್ಗಾ ವಿಶ್ವವಿದ್ಯಾಲಯ ರೂ ೮ ಕೋಟಿ ಹೆಚ್ಚು ವೆಚ್ಚದಲ್ಲಿ ಸಿದ್ದಾರ್ಥ ವಿಹಾರ್ ಟ್ರಸ್ಟ್ ನಿರ್ಮಿತಗೊಂಡಿದೆ ಪಕ್ಕದ ಇದು ಇಡೀ ದಕ್ಷಿಣ ಭಾರತದ ದೊಡ್ಡ ಒಂದು ಎಂದು ಪರಿಗಣಿಸಲಾಗುತ್ತದೆ.ಸಿಮೆಂಟ್ ಸುಮಾರು ೧೫೦೦ ಟನ್, ಉಕ್ಕು ೨೫೦ ಟನ್, ೫ ಲಕ್ಷ ಇಟ್ಟಿಗೆಗಳನ್ನು ಮತ್ತು ಮರಳು ೨೦೦ ಘನ ಮೀಟರ್ ನಿರ್ಮಿಸಿದ, ಈ ಸುಂದರ ರಚನೆಯಾಗಿ ಕುಶಲಕರ್ಮಿಗಳು ಪರಿವರ್ತಿಸಲ್ಪಟ್ಟಿವೆ. ಮುಖ್ಯ ರಚನೆ ೨೮೪ ಬ್ಲಾಕ್ಗಳನ್ನು ಜೊತೆ ೧೭೦ ಕಂಬಗಳನ್ನು ರಂದು ಭೂಮಿಯ ೩೨.೪೫೦ sq ft ಮೇಲೆ ನಿಂತಿದೆ. ಈ ಪ್ರತಿಯೊಂದು ಒಂದು ಅಜಂತಾ ಮತ್ತು ಎಲ್ಲೋರ ಶಿಲ್ಪಗಳು ಮತ್ತು ಕಲೆ ಪ್ರತಿಬಿಂಬಿಸುತ್ತವೆ. ವಿಹಾರ್ ಮೈದಾನದಲ್ಲಿ ಮೊದಲ ಮಹಡಿಗಳನ್ನು ಲಾರ್ಡ್ ಬುದ್ಧ ಎರಡು ಮನೋಹರ ಕೆತ್ತಿದ ಮೂರ್ತಿಗಳು ಇನ್ಸ್ಟಾಲ್ ಅಲ್ಲಿ ಏಕಾಂತ ಸ್ಥಳ ಹೊಂದಿವೆ. ರಾಮನಗರಂ ಜಿಲ್ಲೆಯ ಬಿಡದಿ ಆಫ್ ಶಿಲ್ಪಿ ಅಶೋಕ ಗುದಿಕರ ಮೂಲಕ ಕೆತ್ತನೆಯ ಹೊಳಪು, ಕಪ್ಪು ಕಲ್ಲಿನಿಂದ ಕೆತ್ತಿದ ಲಾರ್ಡ್ ಬುದ್ಧ ಒಂದು ಆರು ಅಡಿ ಆರಾಧ್ಯ ನೆಲದ ಮಹಡಿ ಸ್ಥಾಪಿಸಲಾಗಿದೆ. ಬುದ್ಧ ವಿಹಾರ್ ದೇಶದಲ್ಲೇ ಈ ರೀತಿಯ ಆಧ್ಯಾತ್ಮಿಕ ಕೇಂದ್ರದ ಒಬ್ಬನಾಗಿರುತ್ತಾನೆ. ಕಟ್ಟಡ ಪ್ರಾಚೀನ ಇತಿಹಾಸ ಮತ್ತು ಪ್ರದೇಶದ ಸಾಮಾಜಿಕ ಚಳುವಳಿಗಳ ಸಂಕೇತವಾಗಿ ನಡೆಯಲಿದೆ. ಇದು ಸಮಾಜದಲ್ಲಿ ಅಗತ್ಯವಿರುವವರಿಗೆ ತಮ್ಮ ಜೀವಗಳನ್ನು ಶ್ರಮಪಟ್ಟರು ಮತ್ತು ಮೀಸಲಿಟ್ಟ ಯಾರು ಬುದ್ಧ ಬಸವ ಮತ್ತು ಅಮ್ಬೇದ್ಕೆರ್, ಒಂದು ದೊಡ್ಡ ಗೌರವ ಕಾರ್ಯನಿರ್ವಹಿಸುತ್ತದೆ. ಇದು ಮಹಾನ್ ಪ್ರವಾಸಿ ಕೇಂದ್ರವನ್ನು ಮತ್ತು ಸೃಜನಶೀಲತೆ ಮತ್ತು ರಿಸರ್ಚ್ ಮಾತ್ರ ಇಲ್ಲ, ಕೇಂದ್ರವಾಗಿ ಸೆಂಟರ್ ಬೌದ್ಧಧರ್ಮದ ಮೇಲೆ ಸಂಶೋಧನೆಯ ಬಹಳಷ್ಟು ಮಾಡುತ್ತಿದ್ದಾರೆ. ಚಿನ್ನದ ಲೇಪನವನ್ನು ಹೊಂದಿರುವ ಸುಂದರವಾಗಿ ಕೆತ್ತನೆ ಪಂಚಲೋಹ ಆರಾಧ್ಯ ದಕ್ಷಿಣ ಭಾರತದ ಅತೀದೊಡ್ಡ ಆಗಿದೆ. ತನ್ನ ನೆಚ್ಚಿನ ಅನುಯಾಯಿಗಳ ಜೊತೆಗೆ ಲಾರ್ಡ್ ಬುದ್ಧ ಒಂದು ಚಿನ್ನದ ಲೇಪಿತ ನಗುತ್ತಿರುವ ಆರಾಧ್ಯ, ಆನಂದ್ ಮತ್ತು ಕಾಶ್ಯಪ್, ಬ್ಯಾಂಕಾಕ್ ನಿಂದ ಇಲ್ಲಿ ಮಂಡಿಸಲಾಗಿದೆ, ಹಾಗು ಅದು ೨೦೦೪ ರಲ್ಲಿ ಭಾರತಕ್ಕೆ ತರಲಾಯಿತು.ರೋಸ್ವುಡ್ ಮತ್ತು ಟೀಕ್ವುದ್ ರಲ್ಲಿ ಕೆತ್ತಿದ ಬಾಗಿಲು ಲಾರ್ಡ್ ಬುದ್ಧ ಮತ್ತೊಂದು ಆರಾಧ್ಯ ಅನುಸ್ಥಾಪಿತಗೊಂಡಿರುವ ವಸ್ತುಸಂಗ್ರಹಾಲಯ, ಒಂದು ಆಡಿಟೋರಿಯಂ, ಅತಿಥಿ ಗ್ರಹ ಮತ್ತು ಊಟದ ಹಾಲ್ ಹೊಂದಿದೆ .ಮೈಸೂರ್ ಸಂಕೀರ್ಣದ ರಾಜವಂಶದವರು ಸಂಪರ್ಕ ಕುಶಲಯಂತ್ರಕಾರ ಕೈಸರ್ ಅಲಿ ಮೂಲಕ ವಿನ್ಯಾಸಗೊಳಿಸಲಾಗಿದೆ. ಮಲ್ಲಿಕಾರ್ಜುನ ಖರ್ಗೆ, ಗುಲ್ಬರ್ಗ, ಭಾರತದಲ್ಲಿ ಸ್ಪೂರ್ತಿದಾಯಕ ಬುದ್ಧ ವಿಹಾರ್ ನಿರ್ಮಿಸಿದ ಎಂದು ಸಿದ್ಧಾರ್ಥ್ ವಿಹಾರ್ ಟ್ರಸ್ಟ್ ನ ಸ್ಥಾಪಕ ಅಧ್ಯಕ್ಷರು. ಬೌದ್ಧ ದೇವಾಲಯ ಜನವರಿ ೭, ೨೦೦೯ ರಂದು ಭಾರತದ ಅಧ್ಯಕ್ಷ ಉದ್ಘಾಟಿಸಿದರು. ಬುದ್ಧನ ವಿಗ್ರಹವನ್ನು ಶ್ರೀ ಶ್ರೀ ರವಿ ಶಂಕರ್, ಚಿತ್ರದುರ್ಗದಿಂದ ಮುರುಘ ರಾಜೇಂದ್ರ ಶರಣರು, ಮನವ್ಧರ್ಮ ಪೀತ ನಿಡುಮಾಮಿಡಿದ ಚೆನ್ನಮಲ್ಲ ಸ್ವಾಮಿಜೀಯವರನ್ನು, ರಾಬರ್ಟ್ ಮೈಕೆಲ್ ಮಿರಾಂಡಾ ಗುಲ್ಬರ್ಗಾದ ಬಿಷಪ್, ಹಾಗು ಶರಣಬಸವೇಶ್ವರ ಸಂಸ್ಥಾನದ ಶರಣಬಸಪ್ಪ ಅಪ್ಪ ಹಾಗು ಹಲವಾರು ಧಾರ್ಮಿಕ ನಾಯಕರ ಜೊತೆಗೆ ಜನವರಿ ೧೯, ೨೦೦೯ ರಂದು ದಲೈ ಲಾಮಾ ಮೂಲಕ ಪವಿತ್ರ ಎಂದು ಪಾಲ್ಗೊಂಡಿದ್ರು.

[ಬದಲಾಯಿಸಿ] ಚರಿತ್ರೆ

ಗುಲ್ಬರ್ಗ ನಗರದ ಹಿ೦ದಿನ ಹೆಸರು ಕಲ್ಬುರ್ಗಿ. ಗುಲ್ಬರ್ಗದ ಚರಿತ್ರೆಯನ್ನು ರಾಷ್ಟ್ರಕೂಟ ಅರಸರ ಕಾಲದ ವರೆಗೆ ಗುರುತಿಸಬಹುದು. ನಂತರ ಚಾಲುಕ್ಯ ಸಾಮ್ರಾಜ್ಯದ ಕೆಳಗೆ ೨೦೦ ವರ್ಷಗಳವರೆಗೆ ಗುಲ್ಬರ್ಗ ಇದ್ದಿತು. ಚಾಲುಕ್ಯರ ನಂತರ ಹನ್ನೆರಡನೆ ಶತಮಾನದವರೆಗೆ ಗುಲ್ಬರ್ಗ ಕಳಚೂರಿ ಅರಸರ ನಿಯಂತ್ರಣದಲ್ಲಿತ್ತು. ಹನ್ನೆರಡನೆಯ ಶತಮಾನದ ಕೊನೆಗೆ ದೇವಗಿರಿಯ ಯಾದವರು ಮತ್ತು ದ್ವಾರಸಮುದ್ರದ ಹೊಯ್ಸಳರು ಚಾಲುಕ್ಯ ಮತ್ತು ಕಳಚೂರಿಗಳನ್ನು ಸೋಲಿಸಿದರು. ಇದೇ ಸಮಯದಲ್ಲಿ ವಾರಂಗಲ್ ನ ಕಾಕತೀಯ ಅರಸರು ಪ್ರಾಮುಖ್ಯತೆಗೆ ಬಂದು ಗುಲ್ಬರ್ಗ ಅವರ ನಿಯಂತ್ರಣಕ್ಕೆ ಸಾಗಿತು. ಕ್ರಿ.ಶ. ೧೩೨೧ ರಲ್ಲಿ ಕಾಕತೀಯ ಅರಸರು ಸೋಲಿಸಲ್ಪಟ್ಟು ಗುಲ್ಬರ್ಗ ದೆಹಲಿಯ ಸುಲ್ತಾನರ ಕೈ ಸೇರಿತು. ೧೩೪೭ ರಲ್ಲಿ ದೆಹಲಿಯ ಸಾಮಂತರು ದಂಗೆಯೆದ್ದು, [[ಅಲ್ಲಾಹುಧ್ದೀನ ಹಸನ್ ಗಂಗು ಬಹುಮನ್ ಶಾ] ೧೯೪೭ ರಲ್ಲಿ, ಬಹಮನಿ ಸಾಮ್ರಾಜ್ಯವನ್ನು ಸ್ಥಾಪಿಸಿ ಗುಲ್ಬರ್ಗವನ್ನು ರಾಜಧಾನಿಯನ್ನಾಗಿ ಮಾಡಿದನು. ಬಹಮನಿ ಸುಲ್ತಾನರ ನಿಯಂತ್ರಣ ಕಡಿಮೆಯಾದಾಗ ಐದು ಬೇರೆ ಬೇರೆ ಬಹಮನಿ ಸಾಮ್ರಾಜ್ಯಗಳು ಸ್ಥಾಪಿತವಾಗಿ ಗುಲ್ಬರ್ಗ ಜಿಲ್ಲೆ ಭಾಗಶಃ ಬೀದರ್ ಮತ್ತು ಭಾಗಶಃ ಬಿಜಾಪುರ ಸಾಮ್ರಾಜ್ಯಗಳ ಭಾಗವಾಯಿತು. ೧೭ ನೇ ಶತಮಾನದಲ್ಲಿ ಔರಂಗಜೇಬ್ ಮತ್ತೆ ಈ ಪ್ರದೇಶವನ್ನು ಗೆದ್ದು ಗುಲ್ಬರ್ಗ ಮತ್ತೊಮ್ಮೆ ಮುಘಲ್ ಸಾಮ್ರಾಜ್ಯದ ಭಾಗವಾಯಿತು. ೧೮ ನೇ ಶತಮಾನದ ಆದಿಯಲ್ಲಿ ಮುಘಲ್ ಸಾಮ್ರಾಜ್ಯದ ಪ್ರಭಾವ ಕಡಿಮೆಯಾಗಿ ಅಸಫ್ ಜಾ ಎಂಬ ಔರಂಗಜೇಬನ ಸೇನಾಧಿಕಾರಿ ಹೈದರಾಬಾದ್ ಸಂಸ್ಥಾನವನ್ನು ಸ್ಥಾಪಿಸಿದನು. ಗುಲ್ಬರ್ಗ ಹೈದರಾಬಾದ ಸಂಸ್ಥಾನವನ್ನು ಸೇರಿತು. ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಪಡೆದರೆ, ಬೀದರ್, ಗುಲ್ಬರ್ಗ ಮತ್ತು ರಾಯಚೂರಿನ ಜನರ ತೀವ್ರ ಹೋರಾಟದ ಫಲವಾಗಿ ೧೯೪೮ರಲ್ಲಿ ಹೈದರಾಬಾದ ಸಂಸ್ಥಾನವು ಭಾರತ ಗಣರಾಜ್ಯವನ್ನು ಸೇರಿತು. ೧೯೫೬ರಲ್ಲಿ ರಾಜ್ಯಗಳ ಭಾಷಾವಾರು ವಿಂಗಡಣೆಯಲ್ಲಿ ಗುಲ್ಬರ್ಗ ಜಿಲ್ಲೆಯ ಎರಡು ತಾಲೂಕುಗಳ ಹೊರತು ಉಳಿದವು ಮೈಸೂರು ರಾಜ್ಯಕ್ಕೆ ಸೇರಿದವು. ೧೯೭೬ ರಲ್ಲಿ ಮೈಸೂರು ರಾಜ್ಯಕ್ಕೆ ಕರ್ನಾಟಕ ಎ೦ದು ಪುನರ್ನಾಮಕರಣ ಮಾಡಲಾಯಿತು.ಸ್ವಾತಂತ್ರ್ಯ ಹೋರಾಟದಲ್ಲೂ ಕೂಡ ಈ ಭಾಗದ ಅನೇಕ ಜನರು ಹೋರಾಟ ಮಾಡಿದ್ದಾರೆ. ಅವರಲ್ಲಿ ವೆಂಕಟಪ್ಪನಾಯಕ ಸುರಪುರ(ಬ್ರಿಟೀಶರ ಮತ್ತು ನಿಜಾಮನ ವಿರುದ್ಧ),ರಮಾನ೦ದ ತೀರ್ಥ, ದೇವಿಂದ್ರಪ್ಪ ಮಾಸ್ತರ್ -ಸಿಂದಗಿ( ಬಿ) (ನಿಜಾಮನ ವಿರುದ್ಧ) ಕರಬಸಪ್ಪ ಶ್ರೀಗನ್ - ಹರಸೂರ/ಶ್ರೀ ಸರಡಗಿ] (ನಿಜಾಮನ ವಿರುದ್ಧ),ಮುಂತಾದವರು ಹೋರಾಟ ಮಾಡಿ ಹೈದರಾಬಾದ ನಿಜಾಮರ ವಿರುದ್ದ ಹಾಗೂ ಬ್ರೀಟಿಷರ ವಿರುದ್ಧ ಜಯ ಸಾಧಿಸಿದ್ದಾರೆ. ಕಾರಣ ಈ ಭಾಗ ಬಹು ದಿನಗಳಕಾಲ ನಿಜಾಮನ ಆಡಳಿತಕ್ಕೆ ಒಳಪಟ್ಟಿತ್ತ್ಫು.ಕೋನೆಯಾ ನಿಜಾಮ್ ನೀಗೆ ಗುಲಾಬ್ ಹೂವೆ ಅನ್ದ್ರೆ ಬಹಲ ಇಶ್ತ, ಆದಕ್ಕಾಗಿ ಅವರು "ಕಲ್ಬುರ್ಗಿ"ಗೆ "ಗುಲ್ಬರ್ಗ"ಹೆಸರಿಗೆ ಬದ್ಲಾವನೆ ಮಾಡಿದಾರೆ.

[ಬದಲಾಯಿಸಿ] ಭೌಗೋಳಿಕ

ಗುಲ್ಬರ್ಗ ಬೆಂಗಳೂರಿನಿ೦ದ ೬೧೩ ಕಿಮೀ ದೂರದಲ್ಲಿದ್ದು ಬಿಜಾಪುರ, ಹೈದರಾಬಾದ್, ಬೀದರ್ ಮೊದಲಾದಲ್ಲಿಗೆ ರಸ್ತೆ ಸ೦ಪರ್ಕ ಹೊ೦ದಿದೆ.ಬೀದರ್ -ಶ್ರಿರಂಗಪಟ್ಟಣ ರಾಜ್ಯ ಹೆದ್ದಾರಿಯ ಫಲವಾಗಿ ಇಂದು ಬೆಂಗಳುರು-ಗುಲ್ಬರ್ಗ ಮಧ್ಯೆ ರಸ್ತೆ ಸಂಚಾರ ಸುಗಮವಾಗಿದೆ. ದಕ್ಷಿನ ಭಾರತದಿ೦ದ ಉತ್ತರ ಭಾರತಕ್ಕೆ ಸಾಗುವ ರೈಲುಗಳು ಗುಲ್ಬರ್ಗದ ಮೂಲಕ ಸಾಗುತ್ತವೆ. ಹವಾಮಾನದ ದೃಷ್ಟಿಯಿ೦ದ ಗುಲ್ಬರ್ಗದಲ್ಲಿ ಸಾಕಷ್ಟು ಒಣ ಹವೆ ಇದೆ. ಸರಾಸರಿ ವಾರ್ಷಿಕ ಮಳೆ ಇಲ್ಲಿ ಸುಮಾರು ೭೫ ಸೆ.ಮೀ. ಇಡೀ ಜಿಲ್ಲೆ ದಖನ್ ಪ್ರಸ್ತಭೂಮಿಯ ಮೇಲಿದ್ದು ಸಮುದ್ರ ಮಟ್ಟದಿ೦ದ ಸರಾಸರಿ ಎತ್ತರ ೩೦೦ ಮೀ ಇ೦ದ ೭೫೦ ಮೀ. ಭಾರತದ ತೂಗರೆ ಕನಜ ಎದು ಪ್ರಸಿದ್ದ ವಾಗಿದೆ

[ಬದಲಾಯಿಸಿ] ತಾಲೂಕುಗಳು


ಯಾದಗೀರ್ ಕೂಡ ಗುಲ್ಬರ್ಗ ಜಿಲ್ಲೆಯ ಒ೦ದು ತಾಲೂಕೂ ಇತ್ತು,ಆದರೆ ೧೦ April, ೨೦೧೦ ಕ್ಕೆ ಯಾದಗೀರ್,ಜಿಲ್ಲೆಯಾಗಿ ಘೊಶಿತವಾಯಿತು. ಯಾದಗೀರ್ ಜಿಲ್ಲೆಯಲ್ಲಿ [[]]ಸುರಪುರ,ಹಾಗು ಶಹಾಪುರ ತಾಲೂಕೂಗಳ್ ನ್ನು ಕೂಡಿಸಲಾಯಿತು.ಆಳ್೦ದ ತಾಲುಕಿನ ಕುದಮುಡ್ ಗ್ರಾಮದಲ್ಲಿ ಪ್ರಸಿದ್ದ ವಾದ ಮಾಹಾದೆವ ದೆವಸ್ಥ್ನಾನ ವಿದೆರ್ರ್ ರೆಬ್ಬನಪಲ್ಲಿ ಪ್ರಸಿಸಿದ್ದ ಬಸವೆಶ್ವರ ದೆವಸ್ತನವಿದೆ

[ಬದಲಾಯಿಸಿ] ಕೃಷಿ

ಇಲ್ಲಿರುವ ಎರಡು ಮುಖ್ಯ ನದಿಗಳೆ೦ದರೆ ಕೃಷ್ಣಾ ಮತ್ತು ಭೀಮಾ. ಕೃಷ್ಣಾ ಮೇಲ್ದಂಡೆ ಯೋಜನೆ ಇಲ್ಲಿನ ಕೃಷಿ ಯೋಜನೆಗಳಲ್ಲಿ ಮುಖ್ಯವಾದದ್ದು. ಕೃಷಿಯ ದೃಷ್ಟಿಯಿ೦ದ, ಗುಲ್ಬರ್ಗ ಜಿಲ್ಲೆಯ ಮಣ್ಣು ಕಪ್ಪು ಮಣ್ಣಾಗಿದ್ದು ಇಲ್ಲಿನ ಮುಖ್ಯ ಬೆಳೆಗಳು ಜೋಳ, ತೊಗರಿ, ನೆಲಗಡಲೆ, ಅಕ್ಕಿ ಮತ್ತು ಬೇಳೆಗಳು. ಈ ಜಿಲ್ಲೆಯನ್ನು ತೋಗರಿ ಕಣಜ ಎನ್ದೆ ಕರೆಯುತ್ತಾರೆ

[ಬದಲಾಯಿಸಿ] ಉದ್ಯಮ

ಉದ್ಯಮದ ದೃಷ್ಟಿಯಿ೦ದ ಗುಲ್ಬರ್ಗ ಹಿಂದುಳಿದ ಜಿಲ್ಲೆ . ಶಹಾಬಾದ್, ವಾಡಿ, ಮಲಖೇಡ್ ಗಳಲ್ಲಿ ಸಿಮೆಂಟ್ ಉದ್ಯಮಗಳಿವೆ. ಜಿಲ್ಲೆಯ್ಯಾದಂತ ದಾಲ್ ಮಿಲ್ ಗಳು ಇವೆ. ಆದರೆ ಹಳೆಯ ತಂತ್ರಜ್ಞಾನ ಮತ್ತು ಪದ್ದತಿಯನ್ನು ಬಳಸುತ್ತಿರುವುದರಿಂದ ಅನೇಕ ದಾಲ್ ಮಿಲ್ ಗಳು ನಷ್ಟದಲ್ಲಿವೆ. ನೌಕಕರ ಸಮಸ್ಯೆಯಿಂದಾಗಿ ಹಲವಾರು ಉದ್ಯಮಗಳು ಬಂದಾಗಿವೆ.

ಖಾಸಗಿ ಕ್ಷೇತ್ರದ ಇಂಜನಿಯರಿಂಗ್, ವೈದಕೀಯ, ನರ್ಸಿಂಗ್, ಪಾಲಿಟೆಕ್ನಿಕ್ ಕಾಲೇಜು, ಮ್ಯಾನೇಜ್ ಮೆಂಟ್ ಕಾಲೇಜುಗಳು ಮತ್ತು ಕಾನ್ವೆಂಟ್ ಶಾಲೆಗಳು, ಈ ಜಿಲ್ಲೆಯಲ್ಲಿರುವ ಅತ್ಯಂತ ಯಶಸ್ವಿ ವ್ಯಾಪಾರ ಕೇಂದ್ರಗಳಾಗಿವೆ.

ರಾಜ್ಯ ಸರ್ಕಾರ, ಗುಲ್ಬರ್ಗಾದಲ್ಲಿ ಐಟಿ ಪಾರ್ಕ ಸ್ಥಾಪಿಸುವುದಾಗಿ ಹೇಳಿದೆ. ಗುಲ್ಬರ್ಗಾ-ಬೀದರ್ ರೈಲು ಮಾರ್ಗವಾದರೆ, ಬೆಂಗಳೂರು-ದೆಹಲಿ ಪ್ರಯಾಣದಲ್ಲಿ ಹಲವಾರು ಗಂಟೆಗಳ ಉಳಿತಾಯವಾಗುವುದು ಮತ್ತು ಗುಲ್ಬರ್ಗಾ-ಬೀದರ ಅಭಿವೃದ್ಧಿಯಾಗುವುದು. ಆದರೆ ಕಳೆದ ೫ ದಶಕಗಳಿಂದ ಈ ಬೇಡಿಕೆ ಹಾಗೆಯೇ ಉಳಿದಿದೆ.

[ಬದಲಾಯಿಸಿ] ಇವನ್ನೂ ನೋಡಿ

[ಬದಲಾಯಿಸಿ] ಬಾಹ್ಯ ಅಂತರ್ಜಾಲ ಸ೦ಪರ್ಕಗಳು

Gulbarga at the Islamic Monuments of India Photographic Database


Karnataka-icon.jpg
ಕರ್ನಾಟಕದ ಜಿಲ್ಲೆಗಳು
ಬಾಗಲಕೋಟೆ | ಬೆಂಗಳೂರು ನಗರ ಜಿಲ್ಲೆ | ಬೆಂಗಳೂರು ಗ್ರಾಮಾಂತರ | ಬೆಳಗಾವಿ | ಬಳ್ಳಾರಿ | ಬೀದರ್ | ಬಿಜಾಪುರ | ಚಾಮರಾಜನಗರ | ಚಿಕ್ಕಮಗಳೂರು | ಚಿಕ್ಕಬಳ್ಳಾಪುರ | ಚಿತ್ರದುರ್ಗ | ದಕ್ಷಿಣ ಕನ್ನಡ | ದಾವಣಗೆರೆ | ಧಾರವಾಡ | ಗದಗ | ಗುಲ್ಬರ್ಗ | ಹಾಸನ | ಹಾವೇರಿ | ಕೊಡಗು | ಕೋಲಾರ | ಕೊಪ್ಪಳ | ಮಂಡ್ಯ | ಮೈಸೂರು | ಯಾದಗಿರಿ ಜಿಲ್ಲೆ |ರಾಯಚೂರು | ರಾಮನಗರ | ಶಿವಮೊಗ್ಗ | ತುಮಕೂರು | ಉಡುಪಿ | ಉತ್ತರ ಕನ್ನಡ
"http://kn.wikipedia.org/w/index.php?title=ಗುಲ್ಬರ್ಗ&oldid=270756" ಇಂದ ಪಡೆಯಲ್ಪಟ್ಟಿದೆ
ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು