ಚಲಗೇರಾ
ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ.
ಭೌಗೋಳಿಕ[ಬದಲಾಯಿಸಿ]
ಗ್ರಾಮವು ಭೌಗೋಳಿಕವಾಗಿ 16*°30'8"N ಉತ್ತರ ಅಕ್ಷಾಂಶ ಮತ್ತು 75*27'51"ಪೂರ್ವ ರೇಖಾಂಶದಲ್ಲಿ ಬರುತ್ತದೆ.
ಜನಸಂಖ್ಯೆ[ಬದಲಾಯಿಸಿ]
ಗ್ರಾಮದಲ್ಲಿ ಜನಸಂಖ್ಯೆ ಸುಮಾರು 10,000 ಮಾತ್ರ ಇದೆ. ಅದರಲ್ಲಿ 6,000 ಪುರುಷರು ಮತ್ತು 4,000 ಮಹಿಳೆಯರಿದ್ದಾರೆ.
ಹವಾಮಾನ[ಬದಲಾಯಿಸಿ]
•ಬೇಸಿಗೆ-ಚಳಿಗಾಲದಲ್ಲಿ ಹವಾಗುಣವು ಹಿತಕರವಾಗಿದ್ದು, ಸಾಧಾರಣ ಪ್ರಮಾಣದಲ್ಲಿ ಮಳೆಯಾಗುತ್ತದೆ. ಬೇಸಿಗೆಯಲ್ಲಿ ಅತೀ ಹೆಚ್ಚು ಉಷ್ಣತೆ ಅಂದರೆ ೪೨.೭ ಡಿಗ್ರಿವರೆಗೆ ಏಪ್ರಿಲನಲ್ಲಿ, ಅತೀ ಕಡಿಮೆ ಅಂದರೆ ೯.೫ ಡಿಗ್ರಿ ಸೆಲ್ಸಿಯಸವರೆಗೆ ಡಿಸೆಂಬರನಲ್ಲಿ ಉಷ್ಣತೆ ದಾಖಲಾಗಿದೆ.
•ಬೇಸಿಗೆಕಾಲ:೩೫°c-೪೨°c
•ಚಳಿಗಾಲ/ಮಳೆಗಾಲ:೪೮°c-೨೮°c
•ಮಳೆ: ಪ್ರತೀ ವರ್ಷ ಮಳೆಯು ೩೦೦ -0 ೬೦೦ಮಿ.ಮಿ ಗಳಷ್ಟು ಆಗಿರುತ್ತದೆ.(ಬರಗಾಲ ಬಂದಾಗ ಇಲ್ಲ)
•ಗಾಳಿ : ಗಾಳಿವೇಗ ೧೮.೨ ಕಿಮಿ/ ಗಂ (ಜೂನ),೧೯.೬ ಕಿಮಿ/ಗಂ (ಆಗಸ್ಟ) ಇರತ್ತದೆ.
ಸಾಂಸ್ಕೃತಿಕ[ಬದಲಾಯಿಸಿ]
ಮುಖ್ಯ ಭಾಷೆ: ಕನ್ನಡ ಇದರ ಜೊತೆಗೆ ಕೆಲವರು ಇಂಗ್ಲೀಷ, ಹಿಂದಿ ಮಿಶ್ರಿತ ಕನ್ನಡ ಮಾತನಾಡುತ್ತಾರೆ.
ಆಹಾರ ಧಾನ್ಯಗಳು: ಜೋಳ ಇದರ ಜೊತೆಗೆ ಗೋದಿ,ಅಕ್ಕಿ , ಮೆಕ್ಕೆಜೋಳ ಹಾಗೂ ಬೇಳೆಕಾಳುಗಳು. ಜವಾರಿ ಎಂದು ಗುರುತಿಸಲ್ಪಡುವ ವಿಶೇಷ ರುಚಿಯ ಕಾಯಿಪಲ್ಯ , ಸೊಪ್ಪುಗಳು ಹೆಸರುವಾಸಿ ಮತ್ತು ಸದಾಕಾಲವೂ ಲಭ್ಯ. ಜೋಳದ ರೊಟ್ಟಿ , ಶೇಂಗಾ ಚಟ್ನಿ , ಎಣ್ಣಿ ಬದನೆಯಕಾಯಿ ಪಲ್ಯ , ಕೆನೆಮೊಸರು ಕರ್ನಾಟಕದ ಮೂಲೆಮೂಲೆಗಳಲ್ಲಿ ಪ್ರಸಿದ್ಧಿ ಪಡೆದಿವೆ.
ಕಲೆ ಮತ್ತು ಸಂಸ್ಕೃತಿ[ಬದಲಾಯಿಸಿ]
ಅಪ್ಪಟ ಉತ್ತರ ಕರ್ನಾಟಕ ಶೈಲಿಯ ಕಲೆಯನ್ನು ಒಳಗೊಂಡಿದೆ. ಪುರುಷರು ದೋತ್ರ , ನೆಹರು ಅಂಗಿ , ಮತ್ತು ರೇಷ್ಮೆ ರುಮಾಲು ಧರಿಸುತ್ತಾರೆ. ಮಹಿಳೆಯರು ಇಳಕಲ ಸೀರೆ ಮತ್ತು ಖಾದಿ ಬಟ್ಟೆಗಳನ್ನು ಧರಿಸುತ್ತಾರೆ.
ಧರ್ಮ[ಬದಲಾಯಿಸಿ]
ಗ್ರಾಮದಲ್ಲಿ ಹಿಂದೂ ಮತ್ತು ಮುಸ್ಲಿಂ ಧರ್ಮದ ಜನರಿದ್ದಾರೆ.
ದೇವಾಲಯಗಳು[ಬದಲಾಯಿಸಿ]
ಗ್ರಾಮದಲ್ಲಿ ಐದು ದೇವಾಲಯಗಳಿವೆ.
ಹನುಮಾನ ದೇವಾಲಯ
ಅಂಬಾ ಭವಾನಿ ದೇವಾಲಯ
ಚೌಡೇಶ್ವರಿ ದೇವಾಲಯ
ಲಕ್ಷ್ಮೀ ದೇವಾಲಯ
ಪಾಂಡುರಂಗ ವಿಠಲ ದೇವಾಲಯ
ಆಶ್ರಮಗಳು[ಬದಲಾಯಿಸಿ]
ಓಂ ಶ್ರೀ ದೇವಿಲಿಂಗ ಹವಾಮಲ್ಲಿನಾಥ ಮಹಾರಾಜ ಆಶ್ರಮ. ಓಂ ಶ್ರೀ ಶಾಂತೇಶ್ವರ ಆಶ್ರಮ.
ಮಸೀದಿ[ಬದಲಾಯಿಸಿ]
ಗ್ರಾಮದಲ್ಲಿ ಮುಸ್ಲಿಂ ಸಮುದಾಯದ ದರ್ಗಾ ಹಾಗೂ ಮಸೀದಿ ಇದೆ.
ಆರ್ಥಿಕತೆ[ಬದಲಾಯಿಸಿ]
ಗ್ರಾಮದಲ್ಲಿ ಆರ್ಥಿಕತೆ ಮಾಧ್ಯಮ ತರಗತಿಯಲ್ಲಿದೆ.
ರಾಜಕೀಯ[ಬದಲಾಯಿಸಿ]
ಗ್ರಾಮವು ಬೀದರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಇದೆ. ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುತ್ತದೆ.ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನಲ್ಲಿದೆ.ಗ್ರಾಮದಲ್ಲಿ 4 ಗ್ರಾಮ ಪಂಚಾಯಿತಿ ವಲಯಗಳಿವೆ.
ಅಂಚೆ ಕಚೇರಿ[ಬದಲಾಯಿಸಿ]
ಉಪ ಅಂಚೆ ಕಚೇರಿ, ಚಲಗೇರಾ
ಶಾಲೆ[ಬದಲಾಯಿಸಿ]
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಚಲಗೇರಾ
ಉಲ್ಲೇಖ[ಬದಲಾಯಿಸಿ]
ಚಲಗೇರಾ ಗ್ರಾಮವು ಕರ್ನಾಟಕ ರಾಜ್ಯದ ಕಲಬುರಗಿ ಜಿಲ್ಲೆಯ ಆಳಂದ ತಾಲ್ಲೂಕಿನಲ್ಲಿದೆ. ಪಿನಕೋಡ : 585236 ಗ್ರಾಮವು ನಿಂಬಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಇದೆ. ಹಾಗೂ ಮಾದನ ಹಿಪ್ಪರಗಾ ಹೋಬಳಿ ವ್ಯಾಪ್ತಿಯಲ್ಲಿ ಇದೆ.
ಆಳಂದ - ಅಫಲಪುರ ರಾಜ್ಯ ಹೆದ್ದಾರಿಯಲ್ಲಿ ಈ ಗ್ರಾಮವಿದೆ. ಮುಖ್ಯ ದೇವಾಲಯ- ಹನುಮಾನ ದೇವಾಲಯ