ಹಲಸಿನ ಬೀಜ
ಹಲಸಿನ ಬೀಜದ ಬಗ್ಗೆ
[ಬದಲಾಯಿಸಿ]ಹಲಸಿನ ಬೀಜ ಇದನ್ನು ತುಳುವಿನಲ್ಲಿ'ಪೆಲತ್ತರಿತುಳು ' ಎಂದು ಕರೆಯುತ್ತೇವೆ. ಇದರಿಂದ ಅನೇಕ ಖಾದ್ಯ ಗಳನ್ನು ಮಾಡುತ್ತಾರೆ. ಹಣ್ಣುಗಳಲ್ಲಿ ಅತ್ಯಂತ ಸುವಾಸನೆ ಮತ್ತು ರುಚಿಯಾದ ಹಣ್ಣುಹಣ್ಣು ಅಂದರೆ ಅದು ಹಲಸಿನ ಹಣ್ಣುಹಲಸಿನ ಹಣ್ಣು. ಮಳೆಗಾಲದಲ್ಲಿ ಹೆಚ್ಚಾಗಿ ಲಭ್ಯವಿರುವ ಈ ಹಣ್ಣು ಬಹುತೇಕರಿಗೆ ಅಚ್ಚುಮೆಚ್ಚು. ಹೀಗಾಗಿ ಈ ಹಣ್ಣಿಗೆ ಬೇಡಿಕೆ ಕೂಡ ಹೆಚ್ಚು. ಇದು ಹಲವಾರು ಆರೋಗ್ಯಕರ ಪ್ರಯೋಜನಗಳನ್ನು ಹೊಂದಿದೆ. ಫೈಬರ್, ಪ್ರೋಟೀನ್ಪ್ರೋಟೀನ್, ವಿಟಮಿನ್ ಎ, ಮೆಗ್ನೀಸಿಯಮ್ಮೆಗ್ನೀಸಿಯಮ್, ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ, ಇತರ ಪ್ರಮುಖ ಪೋಷಕಾಂಶಗಳಲ್ಲಿ ಹಲಸು [೧] ಸಮೃದ್ಧವಾಗಿದೆ. ಹಲಸು ಮಧುಮೇಹಿಗಳಿಗೂ ಪ್ರಯೋಜನಕಾರಿಯಾಗಿದೆ. ಇದರ ಕಡಿಮೆ ಗ್ಲೈಸೆಮಿಕ್ ಅಂಶ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರವಾಗಿಡಲು ಸಹಾಯ ಮಾಡುತ್ತದೆ. ಹಲಸಿನ ಹಣ್ಣಿನಂತೆಯೇ ಹಲಸಿನ ಬೀಜಗಳು ತುಲನಾತ್ಮಕವಾಗಿ ಆರೋಗ್ಯಕರವಾಗಿವೆ ಎಂಬುದು ಅನೇಕರಿಗೆ ತಿಳಿದಿಲ್ಲ.
ಹಲಸಿನ ಬೀಜದಲ್ಲಿರುವ ಪೋಷಕಾಂಶ ಗಳು
[ಬದಲಾಯಿಸಿ]ಈ ಬೀಜಗಳಲ್ಲಿ ಥಯಾಮಿನ್ ಮತ್ತು ರೈಬೋಫ್ಲಾವಿನ್ ಸಮೃದ್ಧವಾಗಿದೆ. ಇದು ಆಹಾರವನ್ನು ಶಕ್ತಿಯನ್ನಾಗಿ ಪರಿವರ್ತಿಸಲು ಮತ್ತು ನಿಮ್ಮ ಕಣ್ಣುಗಳು, ಚರ್ಮ ಮತ್ತು ಕೂದಲಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಹೆಚ್ಚುವರಿಯಾಗಿ, ಈ ಬೀಜಗಳು ಸತು, ಕಬ್ಬಿಣ, ಕ್ಯಾಲ್ಸಿಯಂ, ತಾಮ್ರ, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಅಗತ್ಯವಾದ ಪೋಷಕಾಂಶಗಳನ್ನು ಹೊಂದಿದೆ. ಹಲಸಿನ ಬೀಜಗಳು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಬ್ಯಾಕ್ಟೀರಿಯಾ ಕಡಿಮೆ ಮಾಡಲು ಮತ್ತು ಆಹಾರದಿಂದ ಹರಡುವ ಕಾಯಿಲೆಗಳ ಬೆಳವಣಿಗೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಲಸಿನ ಬೀಜಗಳು ಆರೋಗ್ಯವನ್ನು ವಿವಿಧ ರೀತಿಯಲ್ಲಿ ಸುಧಾರಿತ್ತದೆ.
ಹಲಸಿನ ಬೀಜಗಲಿಂದಾಗುವ ಆರೋಗ್ಯಕರ ಪ್ರಯೋಜನಗಳು
[ಬದಲಾಯಿಸಿ]ಜೀರ್ಣಕ್ರಿಯೆ ಸುಧಾರಣೆ
[ಬದಲಾಯಿಸಿ]ಹಲಸಿನ ಬೀಜಗಳಲ್ಲಿರುವ ಫೈಬರ್ ಸಾಮಾನ್ಯ ಕರುಳಿನಕರುಳು ಚಲನೆಗೆ ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಈ ಕಾಯಿ ಕರುಳಿನ ಚಲನೆಯನ್ನು ಬಲಪಡಿಸುತ್ತದೆ ಮತ್ತು ಜೀರ್ಣಕಾರಿ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.ಈಗಿನ ಬಹಳಷ್ಟು ಮಂದಿ ಅಜೀರ್ಣತೆ, ಗ್ಯಾಸ್ಟ್ರಿಕ್, ಮಲಬದ್ಧತೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅಂತಹವರಿಗೆ ಹಲಸಿನ ಹಣ್ಣಿನ ಬೀಜಗಳ ಪುಡಿ ರಾಮಬಾಣವಾಗಿ ಕೆಲಸ ಮಾಡುತ್ತದೆ. ಹಲಸಿನ ಹಣ್ಣಿನ ಬೀಜಗಳಲ್ಲಿ ನಾರಿನ ಅಂಶ ಹೆಚ್ಚಾಗಿದ್ದು, ವಿಶೇಷವಾಗಿ ವಯಸ್ಸಾದವರಿಗೆ ತಮ್ಮ ಜೀರ್ಣ ಕ್ರಿಯೆಯಲ್ಲಿ ಸಾಕಷ್ಟು ಸಹಾಯ ಮಾಡುತ್ತದೆ. ಬೇಧಿ ಸಮಸ್ಯೆಯನ್ನು ಎದುರಿಸುತ್ತಿರುವವರು ಹಲಸಿನ ಬೀಜಗಳನ್ನು ಬೇಯಿಸಿ ತಿನ್ನಬಹುದು.
ಹೃದಯದ ಆರೋಗ್ಯ
[ಬದಲಾಯಿಸಿ]ಹಲಸಿನ ಹಣ್ಣಿನಲ್ಲಿ ಪೊಟ್ಯಾಸಿಯಮ್ ಅಧಿಕವಾಗಿರುತ್ತದೆ. ಪೊಟ್ಯಾಸಿಯಮ್ ರಕ್ತನಾಳಗಳ ಆರೋಗ್ಯ ಕಾಪಾಡುವ ಮೂಲಕ ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಹೃದಯ ಮತ್ತು ರಕ್ತಪರಿಚಲನಾ ವ್ಯವಸ್ಥೆಯ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಕಡಿಮೆ ಮಾಡುತ್ತದೆ.ಹಲಸಿನ ಹಣ್ಣಿನ ಬೀಜಗಳಲ್ಲಿ ಮ್ಯಾಂಗನೀಸ್ ಅಂಶ ಹೆಚ್ಚಾಗಿದೆ ಎಂದು ಹೇಳುತ್ತಾರೆ. ಸಾಮಾನ್ಯವಾಗಿ ನಮ್ಮ ದೇಹದಲ್ಲಿ ಮ್ಯಾಂಗನೀಸ್ ಅಂಶ ರಕ್ತದ ಹೆಪ್ಪುಗಟ್ಟುವಿಕೆಯನ್ನು ತಡೆಯುವ ಕೆಲಸ ಮಾಡುತ್ತದೆ. ಹಾಗಾಗಿ ಹಲಸಿನ ಹಣ್ಣಿನ ಬೀಜಗಳನ್ನು ನಿತ್ಯ ನಿಯಮಿತವಾಗಿ ಸೇವಿಸುತ್ತಿದ್ದರೆ ರಕ್ತ ನಾಳಗಳಲ್ಲಿ ರಕ್ತ ಹೆಪ್ಪುಗಟ್ಟುವುದು ಕಡಿಮೆಯಾಗಿ, ರಕ್ತ ಸಂಚಾರ ಸುಗಮವಾಗಿ ಹಾರ್ಟ್ ಅಟ್ಯಾಕ್ ಅಂತಹ ಸಮಸ್ಯೆಗಳು ಇಲ್ಲವಾಗುತ್ತವೆ.
ಬಲವಾದ ಮೂಳೆಗಳಿಗೆ ಕ್ಯಾಲ್ಸಿಯಂ ಜೊತೆಗೆ ಇತರ ಅನೇಕ ಪೋಷಕಾಂಶಗಳು ಬೇಕಾಗುತ್ತವೆ. ಅವುಗಳಲ್ಲಿ ಒಂದು ಮೆಗ್ನೀಸಿಯಮ್. ಮೆಗ್ನೀಸಿಯಮ್ ಭರಿತ ಹಲಸಿನ ಬೀಜಗಳು ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯನ್ನು ಉತ್ತೇಜಿಸುವ ಮತ್ತು ಮೂಳೆಗಳನ್ನು ಬಲಪಡಿಸುವ ಮೂಲಕ ಮೂಳೆಯ ಆರೋಗ್ಯವನ್ನು ಕಾಪಾಡುತ್ತವೆ.
ರಕ್ತಹೀನತೆ ತಡೆಗಟ್ಟುವ ಹಲಸಿನ ಬೀಜ
[ಬದಲಾಯಿಸಿ]ಇತ್ತೀಚೆಗೆ ಹೆಚ್ಚಾಗಿ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ. ಹಲಸಿನ ಹಣ್ಣಿನಲ್ಲಿರುವ ಕಬ್ಬಿಣ ಆರೋಗ್ಯಕರ ಕೆಂಪು ರಕ್ತ ಕಣಗಳನ್ನು ಉತ್ಪಾದಿಸಲು ಅತ್ಯುತ್ತಮ ಮೂಲವಾಗಿದೆ. ಇದು ದೇಹದಾದ್ಯಂತ ಆಮ್ಲಜನಕದ ವಿತರಣೆಯನ್ನು ಉತ್ತೇಜಿಸುತ್ತದೆ.
ಒತ್ತಡ ಕಡಿಮೆ
[ಬದಲಾಯಿಸಿ]ಹಲಸಿನ ಬೀಜಗಳು ಪ್ರೋಟೀನ್ ಮತ್ತು ಇತರ ಖನಿಜಗಳಲ್ಲಿ ಸಮೃದ್ಧವಾಗಿವೆ. ಇದು ಒತ್ತಡದ ಮಟ್ಟವನ್ನು ಮತ್ತು ಅನೇಕ ಚರ್ಮದ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಹಲಸಿನ ಬೀಜಗಳು ಅತ್ಯಂತ ಪ್ರಯೋಜನಕಾರಿಯಾಗಿವೆ.
ಚರ್ಮದ ಮೇಲಿನ ಸುಕ್ಕುಗಳು ನಿವಾರಣೆಯಾಗುತ್ತವೆ
[ಬದಲಾಯಿಸಿ]ಹಲಸಿನ ಹಣ್ಣಿನಲ್ಲಿರುವ ಆಂಟಿ - ಆಕ್ಸಿಡೆಂಟ್ ಅಂಶಗಳು ನಮ್ಮ ದೇಹದ ಫ್ರೀ ರಾಡಿಕಲ್ ಗಳ ಜೊತೆ ಹೋರಾಡುವ ಜೊತೆಜೊತೆಗೆ ನಮ್ಮ ಚರ್ಮದ ವಯಸ್ಸಾಗುವಿಕೆಯ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಅಂದರೆ ಚರ್ಮದ ಮೇಲೆ ಸುಕ್ಕುಗಳು, ಅಲ್ಲಲ್ಲಿ ಗೆರೆಗಳು ಮೂಡಿಬರುವುದು ಕಡಿಮೆಯಾಗುತ್ತದೆ.