ವಿಷಯಕ್ಕೆ ಹೋಗು

ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸೀತಾರಾಮ ಕಲ್ಯಾಣ
ಚಿತ್ರದ ಭಿತ್ತಿಪತ್ರ
Directed byಎ. ಹರ್ಷ
Screenplay byಎ. ಹರ್ಷ
Produced byನಿರಂಜನ.ಎಂ
Starringನಿಖಿಲ್ ಗೌಡ
ರಚಿತಾ ರಾಮ್
ಪಿ.ರವಿ ಶಂಕರ್
ಶರತ್ ಕುಮಾರ್
ಮಧು
ಸಂಜಯ್ ಕಪೂರ್
ಭಾಗ್ಯಶ್ರೀ ಪಟವರ್ಧನ್
Cinematographyಸ್ವಾಮಿ.ಜೆ
Edited byಗಣೇಶ
Music byಅನುಪ್ ರುಬೆನ್ಸ್
Production
company
ಚನ್ನಾಂಬಿಕ ಫಿಲ್ಮ್ಸ್
Release date
ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
  • 25 ಜನವರಿ 2019 (2019-01-25)
Countryಭಾರತ
Languageಕನ್ನಡ

ಸೀತಾರಾಮ ಕಲ್ಯಾಣ 2019 ರ ಎ. ಹರ್ಷ ರವರು ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ನಿರಂಜನರವರು ಚನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. [] ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[] ಪೋಷಕ ಪಾತ್ರಗಳಲ್ಲಿ ಆರ್. ಶರತ್‌ಕುಮಾರ್, ಮಧು, ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ಕಪೂರ್, [] ಭಾಗ್ಯಶ್ರೀ, ಆದಿತ್ಯ ಮೆನನ್, ಪಿ. ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಇದ್ದಾರೆ. []

ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್ ಕಾರ್ಯ ನಿರ್ವಹಿಸಿದ್ದಾರೆ. []

ಗಣರಾಜ್ಯೋತ್ಸವದ ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. [] ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. [] ಈ ಚಿತ್ರವು ರಂಡೋಯ್ ವೇದಿಕ ಚೂಸ್ದಾಮ್ ಚಿತ್ರದ ಅನಧಿಕೃತ ರಿಮೇಕ್ ಆಗಿದೆ.

ಪಾತ್ರವರ್ಗ

[ಬದಲಾಯಿಸಿ]
  • ಆರ್ಯ ಪಾತ್ರದಲ್ಲಿ ನಿಖಿಲ್ ಕುಮಾರ್
  • ಗೀತಾ ಪಾತ್ರದಲ್ಲಿ ರಚಿತಾ ರಾಮ್
  • ಶಂಕರ್ ಪಾತ್ರದಲ್ಲಿ ಆರ್.ಶರತ್‌ ಕುಮಾರ್
  • ನರಸಿಂಹನ ಪಾತ್ರದಲ್ಲಿ ಪಿ ರವಿಶಂಕರ್ , ಗೀತಾಳ ತಂದೆ.
  • ಗೀತಾ ತಾಯಿಯಾಗಿ ಮಧು
  • ಮೀರಾ ಅವರ ಪತಿ ಡಾ.ಶಂಕರ್ ಪಾತ್ರದಲ್ಲಿ ಸಂಜಯ್ ಕಪೂರ್
  • ಮೀರಾ ಪಾತ್ರದಲ್ಲಿ ಭಾಗ್ಯಶ್ರೀ , ನರಸಿಂಹನ ಸಹೋದರಿ
  • ವಿಶ್ವ ಪಾತ್ರದಲ್ಲಿ ಆದಿತ್ಯ ಮೆನನ್
  • ಚಿಕ್ಕಣ್ಣ
  • ಗಿರಿಜಾ ಲೋಕೇಶ್
  • ಶಿವರಾಜ್ ಕೆ.ಆರ್.ಪೇಟೆ
  • ನಯನ

ಧ್ವನಿಪಥ

[ಬದಲಾಯಿಸಿ]

ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. [] "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು. []

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರ(ರು)ಸಮಯ
1."ನಿನ್ನ ರಾಜ ನಾನು"ವಿ. ಸಾಯಿ ಸುಕನ್ಯಅರ್ಮಾನ್ ಮಲ್ಲಿಕ್04:38
2."ಓ ಜಾನು ಓ ಜಾನು"ವಿ. ಸಾಯಿ ಸುಕನ್ಯಸಂಜಿತ್ ಹೆಗ್ಡೆ04:03
3."ಮಾಂಗಲ್ಯಂ ತಂತುನಾನೇನ" ವಿಜಯ್ ಪ್ರಕಾಶ್4:20
4."ಭೂಮಿಯೇ ಮಂಟಪ" ಕೈಲಾಶ್ ಖೇರ್3:55
5."ಯಾರ ಶಾಪ ಇದು" ಕೈಲಾಶ್ ಖೇರ್3:49

ಮಾರ್ಕೆಟಿಂಗ್

[ಬದಲಾಯಿಸಿ]

ಚಿತ್ರದ ಟೀಸರ್ 31 ಜುಲೈ 2018 ರಂದು ಬಿಡುಗಡೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ದಾಖಲಿಸಿತ್ತು. [೧೦] ಟೀಸರ್ ಬಿಡುಗಡೆಯ ನಂತರ ಕೆಲ ಸಾಹಸ ಸನ್ನಿವೇಶಗಳು ತೆಲುಗಿನ ಸರ್ರೈನೋಡು ಚಿತ್ರವನ್ನು ಹೋಲುತ್ತವೆ ಎಂಬ ಕಾರಣಕ್ಕೆ ಈ ಚಿತ್ರವು ತೆಲುಗಿನ "ಸರೈನೋಡು" ಚಿತ್ರದ ರಿಮೇಕ್ ಎಂದು ಊಹಿಸಲಾಗಿತ್ತು. [೧೧]

ಚಿತ್ರದ ಅಧಿಕೃತ ಟ್ರೈಲರ್ ಅನ್ನು 19 ಜನವರಿ 2019 ರಂದು ಪ್ರದರ್ಶಿಸಲಾಯಿತು.[೧೨]

ಉಲ್ಲೇಖಗಳು

[ಬದಲಾಯಿಸಿ]
  1. "Harsha to direct Nikil". Indiaglitz.com. 23 November 2017.
  2. "Rachita Ram roped in for Nikhil's next". News Karnataka.com. 9 December 2017. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
  3. "Sanjay Kapoor makes Kannada debut". The Mumbai Mirror. 27 September 2018.
  4. "130 artistes come together for 'Seetharama Kalyana'". The New Indian Express. 20 November 2018.
  5. "Tollywood stuntmen Ram and Lakshman roped in for 'Seetha Rama Kalyana'". The News Minute. 9 January 2018.
  6. "Seetharama Kalyana to release on January 25". ದಿ ಟೈಮ್ಸ್ ಆಫ್‌ ಇಂಡಿಯಾ. 18 December 2018. Retrieved 17 March 2019.
  7. "Hindi dubbing rights of Seetharama Kalyana sold for Rs.5.5 Crores". The News Karnataka. 16 September 2018. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
  8. "Ninna Raja Naanu Nanna Rani Neenu Lyrics: Seetharama Kalyana". Raaga.com. 16 November 2018.
  9. "A romantic song from Seetharama Kalyana". ದಿ ಟೈಮ್ಸ್ ಆಫ್‌ ಇಂಡಿಯಾ. 16 November 2018.
  10. ""Seetharama Kalyana" teaser is a big hit". News Karnataka,com. 3 August 2018. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
  11. "Sarrainodu Fight Remake – Seetharama Kalyana on top 1 trending". Tollywood.net. 1 August 2018.[permanent dead link]
  12. "Seetharama Kalyana - Official Trailer HD- "Yuvaraja" Nikhil Kumar,Rachita Ram". Lahari Music - T series on YouTube.