ಸೀತಾರಾಮ ಕಲ್ಯಾಣ (೨೦೧೯ರ ಚಲನಚಿತ್ರ)
ಸೀತಾರಾಮ ಕಲ್ಯಾಣ | |
---|---|
ನಿರ್ದೇಶನ | ಎ. ಹರ್ಷ |
ನಿರ್ಮಾಪಕ | ನಿರಂಜನ.ಎಂ |
ಚಿತ್ರಕಥೆ | ಎ. ಹರ್ಷ |
ಪಾತ್ರವರ್ಗ | ನಿಖಿಲ್ ಗೌಡ ರಚಿತಾ ರಾಮ್ ಪಿ.ರವಿ ಶಂಕರ್ ಶರತ್ ಕುಮಾರ್ ಮಧು ಸಂಜಯ್ ಕಪೂರ್ ಭಾಗ್ಯಶ್ರೀ ಪಟವರ್ಧನ್ |
ಸಂಗೀತ | ಅನುಪ್ ರುಬೆನ್ಸ್ |
ಛಾಯಾಗ್ರಹಣ | ಸ್ವಾಮಿ.ಜೆ |
ಸಂಕಲನ | ಗಣೇಶ |
ಸ್ಟುಡಿಯೋ | ಚನ್ನಾಂಬಿಕ ಫಿಲ್ಮ್ಸ್ |
ಬಿಡುಗಡೆಯಾಗಿದ್ದು | ಪದವಿನ್ಯಾಸ ದೋಷ: ಗುರುತಿಸಲಾಗದ ವಿರಾಮ ಚಿಹ್ನೆ"೧".
|
ದೇಶ | ಭಾರತ |
ಭಾಷೆ | ಕನ್ನಡ |
ಸೀತಾರಾಮ ಕಲ್ಯಾಣ 2019 ರ ಎ. ಹರ್ಷ ರವರು ಬರೆದು ನಿರ್ದೇಶಿಸಿರುವ ಕನ್ನಡ ಭಾಷೆಯ ಚಲನಚಿತ್ರ. ಈ ಚಿತ್ರವನ್ನು ನಿರಂಜನರವರು ಚನ್ನಾಂಬಿಕ ಫಿಲ್ಮ್ಸ್ ಅಡಿಯಲ್ಲಿ ನಿರ್ಮಿಸಿದ್ದಾರೆ. [೧] ಬಹು ತಾರಾಗಣವನ್ನು ಹೊಂದಿರುವ ಈ ಚಿತ್ರದಲ್ಲಿ ನಿಖಿಲ್ ಕುಮಾರ್ ಮತ್ತು ರಚಿತಾ ರಾಮ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೨] ಪೋಷಕ ಪಾತ್ರಗಳಲ್ಲಿ ಆರ್. ಶರತ್‌ಕುಮಾರ್, ಮಧು, ಕನ್ನಡಕ್ಕೆ ಪದಾರ್ಪಣೆ ಮಾಡುತ್ತಿರುವ ಬಾಲಿವುಡ್ ನಟ ಸಂಜಯ್ ಕಪೂರ್, [೩] ಭಾಗ್ಯಶ್ರೀ, ಆದಿತ್ಯ ಮೆನನ್, ಪಿ. ರವಿಶಂಕರ್, ಚಿಕ್ಕಣ್ಣ, ಸಾಧು ಕೋಕಿಲ ಇದ್ದಾರೆ. [೪]
ಚಿತ್ರದ ತಾಂತ್ರಿಕ ಸಿಬ್ಬಂದಿಗಳಲ್ಲಿ ಸಂಗೀತ ಸಂಯೋಜಕರಾಗಿ ಅನುಪ್ ರುಬೆನ್ಸ್, ಛಾಯಾಗ್ರಾಹಕರಾಗಿ ಸ್ವಾಮಿ.ಜೆ, ಸಂಕಲನಕಾರರಾಗಿ ಗಣೇಶ್ ಮತ್ತು ಸಾಹಸ ನಿರ್ದೇಶಕರಾಗಿ ರಾಮ್-ಲಕ್ಷ್ಮಣ್ ಕಾರ್ಯ ನಿರ್ವಹಿಸಿದ್ದಾರೆ. [೫]
ಗಣರಾಜ್ಯೋತ್ಸವದ ರಜಾದಿನ 25 ಜನವರಿ 2019 ರಂದು ಈ ಚಿತ್ರವು ಬಿಡುಗಡೆಯಾಯಿತು. [೬] ಚಿತ್ರದ ಹಿಂದಿ ಡಬ್ಬಿಂಗ್ ಹಕ್ಕುಗಳನ್ನು ₹ 5.5 ಕೋಟಿಗೆ ಮಾರಾಟ ಮಾಡಲಾಗಿದೆ ಎಂದು ವರದಿಯಾಗಿತ್ತು. [೭] ಈ ಚಿತ್ರವು ರಂಡೋಯ್ ವೇದಿಕ ಚೂಸ್ದಾಮ್ ಚಿತ್ರದ ಅನಧಿಕೃತ ರಿಮೇಕ್ ಆಗಿದೆ.
ಪಾತ್ರವರ್ಗ
[ಬದಲಾಯಿಸಿ]- ಆರ್ಯ ಪಾತ್ರದಲ್ಲಿ ನಿಖಿಲ್ ಕುಮಾರ್
- ಗೀತಾ ಪಾತ್ರದಲ್ಲಿ ರಚಿತಾ ರಾಮ್
- ಶಂಕರ್ ಪಾತ್ರದಲ್ಲಿ ಆರ್.ಶರತ್ ಕುಮಾರ್
- ನರಸಿಂಹನ ಪಾತ್ರದಲ್ಲಿ ಪಿ ರವಿಶಂಕರ್ , ಗೀತಾಳ ತಂದೆ.
- ಗೀತಾ ತಾಯಿಯಾಗಿ ಮಧು
- ಮೀರಾ ಅವರ ಪತಿ ಡಾ.ಶಂಕರ್ ಪಾತ್ರದಲ್ಲಿ ಸಂಜಯ್ ಕಪೂರ್
- ಮೀರಾ ಪಾತ್ರದಲ್ಲಿ ಭಾಗ್ಯಶ್ರೀ , ನರಸಿಂಹನ ಸಹೋದರಿ
- ವಿಶ್ವ ಪಾತ್ರದಲ್ಲಿ ಆದಿತ್ಯ ಮೆನನ್
- ಚಿಕ್ಕಣ್ಣ
- ಗಿರಿಜಾ ಲೋಕೇಶ್
- ಶಿವರಾಜ್ ಕೆ.ಆರ್.ಪೇಟೆ
- ನಯನ
ಧ್ವನಿಪಥ
[ಬದಲಾಯಿಸಿ]ಅನುಪ್ ರುಬೆನ್ಸ್ ಚಿತ್ರಕ್ಕಾಗಿ ಧ್ವನಿಪಥ ಮತ್ತು ಹಿನ್ನೆಲೆ ಸಂಗೀತವನ್ನು ನೀಡಿದ್ದಾರೆ. ಒಟ್ಟು ಮೂರು ಹಾಡುಗಳನ್ನು ಅವರು ಸಂಯೋಜಿಸಿದ್ದಾರೆ. ಆಡಿಯೊವನ್ನು ಲಹರಿ ಮ್ಯೂಸಿಕ್ ಆಡಿಯೊ ಲೇಬಲ್ ಅಡಿಯಲ್ಲಿ ಬಿಡುಗಡೆ ಮಾಡಲಾಯಿತು. [೮] "ನಿನ್ನ ರಾಜ ನಾನು" ಹಾಡನ್ನು 16 ನವೆಂಬರ್ 2018 ರಂದು ಬಿಡುಗಡೆಯಾಯಿತು. [೯]
ಹಾಡುಗಳ ಪಟ್ಟಿ | ||||
---|---|---|---|---|
ಸಂ. | ಹಾಡು | ಸಾಹಿತ್ಯ | ಹಾಡುಗಾರ(ರು) | ಸಮಯ |
1. | "ನಿನ್ನ ರಾಜ ನಾನು" | ವಿ. ಸಾಯಿ ಸುಕನ್ಯ | ಅರ್ಮಾನ್ ಮಲ್ಲಿಕ್ | 04:38 |
2. | "ಓ ಜಾನು ಓ ಜಾನು" | ವಿ. ಸಾಯಿ ಸುಕನ್ಯ | ಸಂಜಿತ್ ಹೆಗ್ಡೆ | 04:03 |
3. | "ಮಾಂಗಲ್ಯಂ ತಂತುನಾನೇನ" | ವಿಜಯ್ ಪ್ರಕಾಶ್ | 4:20 | |
4. | "ಭೂಮಿಯೇ ಮಂಟಪ" | ಕೈಲಾಶ್ ಖೇರ್ | 3:55 | |
5. | "ಯಾರ ಶಾಪ ಇದು" | ಕೈಲಾಶ್ ಖೇರ್ | 3:49 |
ಮಾರ್ಕೆಟಿಂಗ್
[ಬದಲಾಯಿಸಿ]ಚಿತ್ರದ ಟೀಸರ್ 31 ಜುಲೈ 2018 ರಂದು ಬಿಡುಗಡೆಯಾಗಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ಹೆಚ್ಚಿನ ಸಂಖ್ಯೆಯ ವೀಕ್ಷಣೆಗಳನ್ನು ದಾಖಲಿಸಿತ್ತು. [೧೦] ಟೀಸರ್ ಬಿಡುಗಡೆಯ ನಂತರ ಕೆಲ ಸಾಹಸ ಸನ್ನಿವೇಶಗಳು ತೆಲುಗಿನ ಸರ್ರೈನೋಡು ಚಿತ್ರವನ್ನು ಹೋಲುತ್ತವೆ ಎಂಬ ಕಾರಣಕ್ಕೆ ಈ ಚಿತ್ರವು ತೆಲುಗಿನ "ಸರೈನೋಡು" ಚಿತ್ರದ ರಿಮೇಕ್ ಎಂದು ಊಹಿಸಲಾಗಿತ್ತು. [೧೧]
ಚಿತ್ರದ ಅಧಿಕೃತ ಟ್ರೈಲರ್ ಅನ್ನು 19 ಜನವರಿ 2019 ರಂದು ಪ್ರದರ್ಶಿಸಲಾಯಿತು.[೧೨]
ಉಲ್ಲೇಖಗಳು
[ಬದಲಾಯಿಸಿ]- ↑ "Harsha to direct Nikil". Indiaglitz.com. 23 November 2017.
- ↑ "Rachita Ram roped in for Nikhil's next". News Karnataka.com. 9 December 2017. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
- ↑ "Sanjay Kapoor makes Kannada debut". The Mumbai Mirror. 27 September 2018.
- ↑ "130 artistes come together for 'Seetharama Kalyana'". The New Indian Express. 20 November 2018.
- ↑ "Tollywood stuntmen Ram and Lakshman roped in for 'Seetha Rama Kalyana'". The News Minute. 9 January 2018.
- ↑ "Seetharama Kalyana to release on January 25". ದಿ ಟೈಮ್ಸ್ ಆಫ್ ಇಂಡಿಯಾ. 18 December 2018. Retrieved 17 March 2019.
- ↑ "Hindi dubbing rights of Seetharama Kalyana sold for Rs.5.5 Crores". The News Karnataka. 16 September 2018. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
- ↑ "Ninna Raja Naanu Nanna Rani Neenu Lyrics: Seetharama Kalyana". Raaga.com. 16 November 2018.
- ↑ "A romantic song from Seetharama Kalyana". ದಿ ಟೈಮ್ಸ್ ಆಫ್ ಇಂಡಿಯಾ. 16 November 2018.
- ↑ ""Seetharama Kalyana" teaser is a big hit". News Karnataka,com. 3 August 2018. Archived from the original on 26 ಅಕ್ಟೋಬರ್ 2019. Retrieved 26 ಅಕ್ಟೋಬರ್ 2019.
- ↑ "Sarrainodu Fight Remake – Seetharama Kalyana on top 1 trending". Tollywood.net. 1 August 2018.
- ↑ "Seetharama Kalyana - Official Trailer HD- "Yuvaraja" Nikhil Kumar,Rachita Ram". Lahari Music - T series on YouTube.