ವಿಷಯಕ್ಕೆ ಹೋಗು

ವಿಕಿಪೀಡಿಯ:ನಿರ್ವಾಹಕ ಮನವಿ ಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಈ ಪುಟ ಕನ್ನಡ ವಿಶ್ವಕೋಶದ ನಿರ್ವಾಹಕರಾಗಬಯಸುವ ಅಥವಾ ಸೂಕ್ತರಾದವರನ್ನು ಮನವಿ ಮಾಡಲು ಮೀಸಲಾದ ಪುಟ. ಸದಸ್ಯರ ಸಲಹೆ ಹಾಗೂ ಪರಸ್ಪರ ಚರ್ಚೆಯಿಂದ ನಿರ್ವಾಹಕರನ್ನು ನಿಯಮಿಸಲಾಗುತ್ತದೆ.

ನಿಯಮಗಳು

ವಿಕಿಪೀಡಿಯಾ ದಲ್ಲಿ ನಿರ್ವಾಹಕ ಸ್ಥಾನ ವಿಕಿಪೀಡಿಯಾದ ಕಾರ್ಯವಿಧಿಗಳನ್ನು ತಿಳಿದಿರುವ ಮತ್ತು ನಂಬಿಕಸ್ಥ ಸದಸ್ಯರಿಗೆ ನೀಡಲಾಗುವುದು. ನಿರ್ವಾಹಕರಿಗೆ ವಿಶೇಷ ಅಧಿಕಾರಗಳು ಯಾವುವೂ ಇರುವುದಿಲ್ಲ, ಆದರೆ ನಿರ್ವಾಹಕರಿಂದ ಹೆಚ್ಚಿನ ಗುಣಮಟ್ಟವನ್ನು ಅಪೇಕ್ಷಿಸಲಾಗುತ್ತದೆ, ಮತ್ತು ಹೊಸದಾಗಿ ವಿಕಿಪೀಡಿಯಾ ಅನ್ನು ಸೇರುವ ಸಂಪಾದಕರು ನಿರ್ವಾಹಕರನ್ನು ವಿಕಿಪೀಡಿಯಾದ ಅಧಿಕೃತ ಮುಖವಾಗಿ ಕಾಣುತ್ತಾರೆ. ಇದರಿಂದ ನಿರ್ವಾಹಕರು ಇತರ ಸಂಪಾದಕರ ಬಗ್ಗೆ ಗೌರವ, ತಾಳ್ಮೆ ಮತ್ತು ಉತ್ತಮ ನಿರ್ಧಾರಶೀಲತೆಯನ್ನು ತೋರುವವರಾಗಿರಬೇಕು. ನಿರ್ವಾಹಕರಾಗಲು ನೋಂದಾಯಿತರಾಗುವ ಸದಸ್ಯರು ಸಾಕಷ್ಟು ಕಾಲ ವಿಕಿಪೀಡಿಯಾ ಸಂಪಾದಕರಾಗಿ ಕೆಲಸ ಮಾಡಿರಬೇಕು (ಇತರ ಸದಸ್ಯರು ಅವರ ಕೆಲಸದೊಂದಿಗೆ ಪರಿಚಿತರಾಗುವಷ್ಟು ಸಮಯ). ಕನಿಷ್ಟ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದು ಸಾಕಷ್ಟು ಲೇಖನಗಳ ಸಂಪಾದನೆ ಮತ್ತು ನಿರ್ವಹಣೆಯಲ್ಲಿ ಅನುಭವವನ್ನು ಹೊಂದಿದವರಾಗಿರಬೇಕು. ನೀವು ಸ್ವತಃ ನಿಮ್ಮನ್ನೇ ನೋಂದಾಯಿಸಿಕೊಳ್ಳಬಹುದು, ಆದರೆ ಹೀಗೆ ಮಾಡುವ ಮುನ್ನ ಸಾಮಾನ್ಯ ಅಪೇಕ್ಷೆಗಳನ್ನು ಮೀರುವಷ್ಟು ಕೆಲಸ ಮಾಡಿರುವುದು ಒಳ್ಳೆಯದು. ನಿರ್ವಹಣಾ ಕಾರ್ಯಕ್ಕೆ ಬೇಕಾಗುವ ಕನಿಷ್ಟ ಗುಣಮಟ್ಟಗಳ ಬಗ್ಗೆ ಇಲ್ಲಿ ನೋಡಿ: ಆಂಗ್ಲ ಪುಟ

ನೋಂದಾವಣೆಗಳು ಏಳು ದಿನಗಳ ಕಾಲ ಉಳಿಯುತ್ತವೆ - ಈ ಸಮಯದಲ್ಲಿ ಇತರ ನಿರ್ವಾಹಕರು ಈ ನೋಂದಾವಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿ ತಮ್ಮ ಮತ ಚಲಾಯಿಸಬಹುದು. ಸಾಮಾನ್ಯವಾಗಿ ಶೇ.೮೦ ಬೆಂಬಲ ಯಾವುದೇ ನೋಂದಾವಣೆಗೆ ಸಿಕ್ಕರೆ ಅದನ್ನು ಆದರಿಸಲಾಗುವುದು. ಯಾವುದೇ ಸ್ಪಷ್ಟ ನಿರ್ಣಯಕ್ಕೆ ಈ ಸಮಯ ಸಾಲದಿದ್ದರೆ ಈ ಏಳು ದಿನಗಳ ಗಡಿಯನ್ನು ಮುಂದೂಡಬಹುದು. ಯಾವುದಾದರೂ ನೋಂದಾವಣೆಗೆ ಬೆಂಬಲ ಸಿಗದು ಎಂಬುದು ಸ್ಪಷ್ಟವಾಗಿ ಕಂಡರೆ ಆ ನೋಂದಾವಣೆಯನ್ನು ತೆಗೆಯಲೂ ಬಹುದು. ನಿಮ್ಮ ನೋಂದಾವಣೆ ತಿರಸ್ಕೃತವಾದರೆ, ಮತ್ತೆ ನೋಂದಾವಣೆಯನ್ನು ತರುವ ಇಚ್ಛೆಯಿದ್ದರೆ ದಯವಿಟ್ಟು ಸೂಕ್ತ ಕಾಲದ ನಂತರ ಇದನ್ನು ಮಾಡುವುದೆಂದು ವಿಕಿಪೀಡಿಯ ಸೂಚಿಸುತ್ತದೆ.

ಯಾವುದೇ ಅಭ್ಯರ್ಥಿಯ ಬಗ್ಗೆ ನಿಮ್ಮ ಮತವನ್ನು ಚಲಾಯಿಸಲು ಆ ಅಭ್ಯರ್ಥಿಯ ಬಗ್ಗೆ ಈ ಪುಟದಲ್ಲಿ ಇರುವ ಭಾಗವನ್ನು ಸಂಪಾದಿಸಿ. ನಿಮ್ಮ ಮತದೊಂದಿಗೆ ಅಭ್ಯರ್ಥಿಯ ಬಗ್ಗೆ ನಿಮ್ಮ ಟಿಪ್ಪಣಿಗಳನ್ನು ಸಹ ನೀವು ವ್ಯಕ್ತಪಡಿಸಬಹುದು. ಚರ್ಚೆ ಮತ್ತು ಟಿಪ್ಪಣಿಗಳನ್ನು ಪ್ರತಿ ಅಭ್ಯರ್ಥಿಯ ಕೆಳಗೆ ಇರುವ ಟಿಪ್ಪಣಿಗಳು ಭಾಗದಲ್ಲಿ ನಡೆಸಬೇಕಾಗಿ ವಿನಂತಿ. ನೀವು ಮತ ಚಲಾಯಿಸಿದ ಮೇಲೆ ಆ ನೋಂದಾವಣೆಯ ಬಗ್ಗೆ ಬಂದಿರುವ ಮತಗಳ ಮಾಹಿತಿಯನ್ನು ನವೀಕರಿಸಿ - ಮತಗಳ ಮಾಹಿತಿಗೆ ಈ ಕೆಳಗಿನ ಫಾರ್ಮ್ಯಾಟ್ ಅನ್ನು ಸೂಚಿಸಲಾಗಿದೆ: (ಪರ/ವಿರೋಧ/ತಟಸ್ಥ).

ಅನಾಮಧೇಯ ಸದಸ್ಯರು ಮತ ಚಲಾವಣೆ, ಸ್ವ-ನೋಂದಾವಣೆ ಅಥವಾ ಅನ್ಯರ ನೋಂದಾವಣೆ - ಇವುಗಳಲ್ಲಿ ಪಾಲ್ಗೊಳ್ಳಲಾರರು. ಆದರೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.

ಯಾರನ್ನಾದರು ನಿರ್ವಾಹಕ ಸ್ಥಾನಕ್ಕೆ ನೋಂದಾಯಿಸಲು:

  • ನೀವು ಯಾರನ್ನು ನೋಂದಾಯಿಸಲು ಬಯಸುತ್ತೀರೋ ಅವರ ಅನುಮತಿಯನ್ನು ಪಡೆಯಿರಿ.
  • ಈ ಪುಟವನ್ನು ಸಂಪಾದಿಸಿ ಈ ಕೆಳಗಿನ ಲೇಖವನ್ನು ಸೇರಿಸಿ:
    • === [[User:ಸದಸ್ಯ | ಸದಸ್ಯ]] === ಸದಸ್ಯ ಎಂಬುದರ ಬದಲಾಗಿ ನೋಂದಾಯಿಸಲ್ಪಡುತ್ತಿರುವ ಸದಸ್ಯರ ಯೂಸರ್ ನೇಮ್ ಇರಬೇಕು.
  • ಇದರ ಕೆಳಗೆ ಈ ಸದಸ್ಯರು ನಿರ್ವಾಹಕರಾಗಲು ಏಕೆ ಸೂಕ್ತರು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.

ಯಾವುದೇ ಸದಸ್ಯರು ನಿರ್ವಾಹಕರಾಗಬಯಸಿದಲ್ಲಿ ಅವರ ನೋಂದಾವಣೆಯ ನಂತರ ಈ ಪುಟದಲ್ಲಿ ಅವರು ನೋಂದಾವಣೆಯನ್ನು ಸ್ವೀಕರಿಸಿದ ಬಗ್ಗೆ ಹಾಗೂ ಅವರು ನಿರ್ವಾಹಕರಾದಲ್ಲಿ ಅವರು ಯಾವ ರೀತಿಯ ನಿರ್ವಹಣಾ ಕಾರ್ಯವನ್ನು ಮಾಡುತ್ತಾರೆಂಬುದರ ಬಗ್ಗೆ ತಿಳಿಸಬೇಕಾಗಿ ವಿನಂತಿ.

ಹಳೆ ನೊಂದಾವಣೆಗಳು ಈ ಪುಟದಲ್ಲಿ ಇವೆ.

ನಿರ್ವಾಹಕ ನೊಂದಾವಣೆಗಳು / Nominations for Administrator

ಮೇಲ್ವಿಚಾರಕ ನೊಂದಾವಣೆಗಳು / Nominations for Bureaucrat

ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕರ ಹಕ್ಕುಗಳ ನೊಂದಾವಣೆಗಳು / Nomination for Administrator and Interface admin

~aanzx (talk · contribs) ನಮಸ್ಕಾರ, ನಾನು ಅನೂಪ್ ಕನ್ನಡ ವಿಕಿಪೀಡಿಯದ ಮಾಜಿ ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ. ಈ ವಿಕಿಯಲ್ಲಿ ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ಪುನಃ ಅರ್ಜಿ ಸಲ್ಲಿಸುತ್ತಿದ್ದೇನೆ, ವೈಯಕ್ತಿಕ ಕಾರಣಗಳಿಂದಾಗಿ ನಾನು ನನ್ನ ಹಳೆಯ ಖಾತೆಯನ್ನು ಬಳಸಲಾಗುತ್ತಿಲ್ಲ. ನಾನು ಮತ್ತೆ ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯವಾಗಿರುವುದರಿಂದ ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಹಕ್ಕುಗಳಿಗಾಗಿ ನಾನು ಪುನಃ ಬಯಸುತ್ತೇನೆ.

ಹೊಸ ಜಾಗತಿಕ ನಿಯಮಗಳ ಪ್ರಕಾರ ನಾನು ನನ್ನ ಖಾತೆಯಲ್ಲಿ meta:Steward_requests/Global_permissions/2022-01#2FA_Tester_for_~aanzx 2FA ಅನ್ನು ಸಕ್ರಿಯಗೊಳಿಸಿದ್ದೇನೆ.~aanzx © ೧೦:೩೯, ೧೬ ಸೆಪ್ಟೆಂಬರ್ ೨೦೨೨ (UTC)

ದೃಢೀಕರಣಕ್ಕಾಗಿ ಬಾಟ್ ಖಾತೆಯಿಂದ < https://xtools.wmflabs.org/ec-rightschanges/kn.wikipedia.org/~aanzxbot > ಪ್ರತಿಕ್ರಿಯಿಸುತ್ತಿದ್ದೇನೆ. ★~aanzxbot © ೧೧:೧೬, ೧೬ ಸೆಪ್ಟೆಂಬರ್ ೨೦೨೨ (UTC)

ಸಮ್ಮತಿ ಮತಗಳು/Support

  1. --ವಿಕಾಸ್ ಹೆಗಡೆ| Vikas Hegde (ಚರ್ಚೆ) ೧೨:೩೯, ೧೬ ಸೆಪ್ಟೆಂಬರ್ ೨೦೨೨ (UTC)
  2. --Sudheer Shanbhogue (ಚರ್ಚೆ) ೧೧:೩೭, ೧೭ ಸೆಪ್ಟೆಂಬರ್ ೨೦೨೨ (UTC)
  3. --ಮಹಾವೀರ ಇಂದ್ರ (ಚರ್ಚೆ) ೧೩:೧೦, ೧೭ ಸೆಪ್ಟೆಂಬರ್ ೨೦೨೨ (UTC)
  4. --ವಿದ್ಯಾಧರ ಚಿಪ್ಳಿ (ಚರ್ಚೆ) ೧೫:೧೭, ೧೭ ಸೆಪ್ಟೆಂಬರ್ ೨೦೨೨ (UTC)
  5. --Krishna Kulkarni (ಚರ್ಚೆ) ೧೭:೦೮, ೧೭ ಸೆಪ್ಟೆಂಬರ್ ೨೦೨೨ (UTC)
  6. --Chetan (ಚರ್ಚೆ) ೦೫:೨೧, ೧೮ ಸೆಪ್ಟೆಂಬರ್ ೨೦೨೨ (UTC)
  7. --Gangaasoonu (ಚರ್ಚೆ) ೦೯:೫೬, ೧೮ ಸೆಪ್ಟೆಂಬರ್ ೨೦೨೨ (UTC) ಅನೂಪ್ ಕನ್ನಡಕ್ಕೆ ದೊಡ್ಡ ಆಸ್ತಿ
  8. --ಗೋಪಾಲಕೃಷ್ಣ (ಚರ್ಚೆ) ೦೪:೧೨, ೨೦ ಸೆಪ್ಟೆಂಬರ್ ೨೦೨೨ (UTC)

ಅಸಮ್ಮತಿ ಮತಗಳು/Oppose

ಚರ್ಚೆ/ Discussion

ನಿಮ್ಮನ್ನು ನಿರ್ವಾಹಕ ಮತ್ತು ಇಂಟರ್ಫೇಸ್ ನಿರ್ವಾಹಕ ಮಾಡಲಾಗಿದೆ.--ಪವನಜ ಯು. ಬಿ. (ಚರ್ಚೆ) ೦೫:೫೨, ೨೪ ಸೆಪ್ಟೆಂಬರ್ ೨೦೨೨ (UTC)