ವಿಕಿಪೀಡಿಯ:ನಿರ್ವಾಹಕ ಮನವಿ ಪುಟ
ನಿರ್ವಾಹಕ ಮನವಿ ಪುಟ ಕನ್ನಡ ವಿಶ್ವಕೋಶದ ನಿರ್ವಾಹಕರಾಗಬಯಸುವ ಅಥವಾ ಸೂಕ್ತರಾದವರನ್ನು ಮನವಿ ಮಾಡಲು ಮೀಸಲಾದ ಪುಟ. ಸದಸ್ಯರ ಸಲಹೆ ಹಾಗೂ ಪರಸ್ಪರ ಚರ್ಚೆಯಿಂದ ನಿರ್ವಾಹಕರನ್ನು ನಿಯಮಿಸಲಾಗುತ್ತದೆ.
ನಿಯಮಗಳು
ವಿಕಿಪೀಡಿಯಾ ದಲ್ಲಿ ನಿರ್ವಾಹಕ ಸ್ಥಾನ ವಿಕಿಪೀಡಿಯಾದ ಕಾರ್ಯವಿಧಿಗಳನ್ನು ತಿಳಿದಿರುವ ಮತ್ತು ನಂಬಿಕಸ್ಥ ಸದಸ್ಯರಿಗೆ ನೀಡಲಾಗುವುದು. ನಿರ್ವಾಹಕರಿಗೆ ವಿಶೇಷ ಅಧಿಕಾರಗಳು ಯಾವುವೂ ಇರುವುದಿಲ್ಲ, ಆದರೆ ನಿರ್ವಾಹಕರಿಂದ ಹೆಚ್ಚಿನ ಗುಣಮಟ್ಟವನ್ನು ಅಪೇಕ್ಷಿಸಲಾಗುತ್ತದೆ, ಮತ್ತು ಹೊಸದಾಗಿ ವಿಕಿಪೀಡಿಯಾ ಅನ್ನು ಸೇರುವ ಸಂಪಾದಕರು ನಿರ್ವಾಹಕರನ್ನು ವಿಕಿಪೀಡಿಯಾದ ಅಧಿಕೃತ ಮುಖವಾಗಿ ಕಾಣುತ್ತಾರೆ. ಇದರಿಂದ ನಿರ್ವಾಹಕರು ಇತರ ಸಂಪಾದಕರ ಬಗ್ಗೆ ಗೌರವ, ತಾಳ್ಮೆ ಮತ್ತು ಉತ್ತಮ ನಿರ್ಧಾರಶೀಲತೆಯನ್ನು ತೋರುವವರಾಗಿರಬೇಕು. ನಿರ್ವಾಹಕರಾಗಲು ನೋಂದಾಯಿತರಾಗುವ ಸದಸ್ಯರು ಸಾಕಷ್ಟು ಕಾಲ ವಿಕಿಪೀಡಿಯಾ ಸಂಪಾದಕರಾಗಿ ಕೆಲಸ ಮಾಡಿರಬೇಕು (ಇತರ ಸದಸ್ಯರು ಅವರ ಕೆಲಸದೊಂದಿಗೆ ಪರಿಚಿತರಾಗುವಷ್ಟು ಸಮಯ). ಕನಿಷ್ಟ ಕೆಲವು ತಿಂಗಳುಗಳ ಕಾಲ ಕೆಲಸ ಮಾಡಿದ್ದು ಸಾಕಷ್ಟು ಲೇಖನಗಳ ಸಂಪಾದನೆ ಮತ್ತು ನಿರ್ವಹಣೆಯಲ್ಲಿ ಅನುಭವವನ್ನು ಹೊಂದಿದವರಾಗಿರಬೇಕು. ನೀವು ಸ್ವತಃ ನಿಮ್ಮನ್ನೇ ನೋಂದಾಯಿಸಿಕೊಳ್ಳಬಹುದು, ಆದರೆ ಹೀಗೆ ಮಾಡುವ ಮುನ್ನ ಸಾಮಾನ್ಯ ಅಪೇಕ್ಷೆಗಳನ್ನು ಮೀರುವಷ್ಟು ಕೆಲಸ ಮಾಡಿರುವುದು ಒಳ್ಳೆಯದು. ನಿರ್ವಹಣಾ ಕಾರ್ಯಕ್ಕೆ ಬೇಕಾಗುವ ಕನಿಷ್ಟ ಗುಣಮಟ್ಟಗಳ ಬಗ್ಗೆ ಇಲ್ಲಿ ನೋಡಿ: ಆಂಗ್ಲ ಪುಟ
ನೋಂದಾವಣೆಗಳು ಏಳು ದಿನಗಳ ಕಾಲ ಉಳಿಯುತ್ತವೆ - ಈ ಸಮಯದಲ್ಲಿ ಇತರ ನಿರ್ವಾಹಕರು ಈ ನೋಂದಾವಣೆಯ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಚರ್ಚಿಸಿ ತಮ್ಮ ಮತ ಚಲಾಯಿಸಬಹುದು. ಸಾಮಾನ್ಯವಾಗಿ ಶೇ.೮೦ ಬೆಂಬಲ ಯಾವುದೇ ನೋಂದಾವಣೆಗೆ ಸಿಕ್ಕರೆ ಅದನ್ನು ಆದರಿಸಲಾಗುವುದು. ಯಾವುದೇ ಸ್ಪಷ್ಟ ನಿರ್ಣಯಕ್ಕೆ ಈ ಸಮಯ ಸಾಲದಿದ್ದರೆ ಈ ಏಳು ದಿನಗಳ ಗಡಿಯನ್ನು ಮುಂದೂಡಬಹುದು. ಯಾವುದಾದರೂ ನೋಂದಾವಣೆಗೆ ಬೆಂಬಲ ಸಿಗದು ಎಂಬುದು ಸ್ಪಷ್ಟವಾಗಿ ಕಂಡರೆ ಆ ನೋಂದಾವಣೆಯನ್ನು ತೆಗೆಯಲೂ ಬಹುದು. ನಿಮ್ಮ ನೋಂದಾವಣೆ ತಿರಸ್ಕೃತವಾದರೆ, ಮತ್ತೆ ನೋಂದಾವಣೆಯನ್ನು ತರುವ ಇಚ್ಛೆಯಿದ್ದರೆ ದಯವಿಟ್ಟು ಸೂಕ್ತ ಕಾಲದ ನಂತರ ಇದನ್ನು ಮಾಡುವುದೆಂದು ವಿಕಿಪೀಡಿಯ ಸೂಚಿಸುತ್ತದೆ.
ಯಾವುದೇ ಅಭ್ಯರ್ಥಿಯ ಬಗ್ಗೆ ನಿಮ್ಮ ಮತವನ್ನು ಚಲಾಯಿಸಲು ಆ ಅಭ್ಯರ್ಥಿಯ ಬಗ್ಗೆ ಈ ಪುಟದಲ್ಲಿ ಇರುವ ಭಾಗವನ್ನು ಸಂಪಾದಿಸಿ. ನಿಮ್ಮ ಮತದೊಂದಿಗೆ ಅಭ್ಯರ್ಥಿಯ ಬಗ್ಗೆ ನಿಮ್ಮ ಟಿಪ್ಪಣಿಗಳನ್ನು ಸಹ ನೀವು ವ್ಯಕ್ತಪಡಿಸಬಹುದು. ಚರ್ಚೆ ಮತ್ತು ಟಿಪ್ಪಣಿಗಳನ್ನು ಪ್ರತಿ ಅಭ್ಯರ್ಥಿಯ ಕೆಳಗೆ ಇರುವ ಟಿಪ್ಪಣಿಗಳು ಭಾಗದಲ್ಲಿ ನಡೆಸಬೇಕಾಗಿ ವಿನಂತಿ. ನೀವು ಮತ ಚಲಾಯಿಸಿದ ಮೇಲೆ ಆ ನೋಂದಾವಣೆಯ ಬಗ್ಗೆ ಬಂದಿರುವ ಮತಗಳ ಮಾಹಿತಿಯನ್ನು ನವೀಕರಿಸಿ - ಮತಗಳ ಮಾಹಿತಿಗೆ ಈ ಕೆಳಗಿನ ಫಾರ್ಮ್ಯಾಟ್ ಅನ್ನು ಸೂಚಿಸಲಾಗಿದೆ: (ಪರ/ವಿರೋಧ/ತಟಸ್ಥ).
ಅನಾಮಧೇಯ ಸದಸ್ಯರು ಮತ ಚಲಾವಣೆ, ಸ್ವ-ನೋಂದಾವಣೆ ಅಥವಾ ಅನ್ಯರ ನೋಂದಾವಣೆ - ಇವುಗಳಲ್ಲಿ ಪಾಲ್ಗೊಳ್ಳಲಾರರು. ಆದರೆ ತಮ್ಮ ಅಭಿಪ್ರಾಯಗಳನ್ನು ತಿಳಿಸಬಹುದು.
ಯಾರನ್ನಾದರು ನಿರ್ವಾಹಕ ಸ್ಥಾನಕ್ಕೆ ನೋಂದಾಯಿಸಲು:
- ನೀವು ಯಾರನ್ನು ನೋಂದಾಯಿಸಲು ಬಯಸುತ್ತೀರೋ ಅವರ ಅನುಮತಿಯನ್ನು ಪಡೆಯಿರಿ.
- ಈ ಪುಟವನ್ನು ಸಂಪಾದಿಸಿ ಈ ಕೆಳಗಿನ ಲೇಖವನ್ನು ಸೇರಿಸಿ:
- === [[User:ಸದಸ್ಯ | ಸದಸ್ಯ]] === ಸದಸ್ಯ ಎಂಬುದರ ಬದಲಾಗಿ ನೋಂದಾಯಿಸಲ್ಪಡುತ್ತಿರುವ ಸದಸ್ಯರ ಯೂಸರ್ ನೇಮ್ ಇರಬೇಕು.
- ಇದರ ಕೆಳಗೆ ಈ ಸದಸ್ಯರು ನಿರ್ವಾಹಕರಾಗಲು ಏಕೆ ಸೂಕ್ತರು ಎಂಬುದರ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ.
ಯಾವುದೇ ಸದಸ್ಯರು ನಿರ್ವಾಹಕರಾಗಬಯಸಿದಲ್ಲಿ ಅವರ ನೋಂದಾವಣೆಯ ನಂತರ ಈ ಪುಟದಲ್ಲಿ ಅವರು ನೋಂದಾವಣೆಯನ್ನು ಸ್ವೀಕರಿಸಿದ ಬಗ್ಗೆ ಹಾಗೂ ಅವರು ನಿರ್ವಾಹಕರಾದಲ್ಲಿ ಅವರು ಯಾವ ರೀತಿಯ ನಿರ್ವಹಣಾ ಕಾರ್ಯವನ್ನು ಮಾಡುತ್ತಾರೆಂಬುದರ ಬಗ್ಗೆ ತಿಳಿಸಬೇಕಾಗಿ ವಿನಂತಿ.
| ಹಳೆ ನೊಂದಾವಣೆಗಳು ಈ ಪುಟದಲ್ಲಿ ಇವೆ. |
ನಿರ್ವಾಹಕ ನೊಂದಾವಣೆಗಳು / Nominations for Administrator
Gopala Krishna A (sysop rights/admin rights)
ಕನ್ನಡ ವಿಕಿಪೀಡಿಯದಲ್ಲಿ ೨೦೧೫ ರಿಂದ ಸಕ್ರಿಯ ಸದಸ್ಯನಾಗಿ ಕೆಲಸಮಾಡುತ್ತಾ ಬಂದಿದ್ದೇನೆ. ಹಲವಾರು ನೀತಿ/ನಿಯಮಗಳ ಪುಟಗಳ ಸಂಪಾದನೆಯಲ್ಲೂ ಕೊಡುಗೆ ನೀಡಿದ್ದೇನೆ. ಸಮುದಾಯದ ಸದಸ್ಯರಿಗೆ ವಿಕಿ ಸಂಬಂಧಿತ ಕೆಲಸಗಳಿಗೆ ಯಾವತ್ತೂ ಉತ್ತೇಜನ ನೀಡುತ್ತಾ ಬಂದಿದ್ದೇನೆ. ಸನ್ನಡತೆಯಿಂದ ಇದ್ದು ಸಮುದಾಯದ ಎಲ್ಲಾ ಕಾರ್ಯಗಳಿಗೂ ಸಹಕಾರ ನೀಡುತ್ತಾ ಬಂದಿದ್ದೇನೆ. ಕನ್ನಡ ವಿಕಿಪೀಡಿಯದಲ್ಲಿ ನಿರ್ವಾಹಕರು ಮಾಡಬಹುದಾದ ಕೆಲಸಗಳು ಸಾಕಷ್ಟಿವೆ. ಈಗಾಗಲೇ ನಿರ್ವಾಹಕರು ಮಾಡುತ್ತಿರುವ ಕೆಲಸಳೊಂದಿಗೆ ಕೈಜೋಡಿಸಿ, ಕೆಲಸವು ಇನ್ನೂ ಸರಾಗವಾಗಿ ಸಾಗುವಂತೆ ಮಾಡಲು ಬಯಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ) ೧೫:೪೩, ೧೬ ಆಗಸ್ಟ್ ೨೦೨೫ (IST)
- @Gopala Krishna A: - ನಿಮ್ಮನ್ನು ೬ ತಿಂಗಳುಗಳ ಅವಧಿಗೆ ನಿರ್ವಾಹಕರನ್ನಾಗಿ ನೇಮಕ ಮಾಡಲಾಗಿದೆ. ಈ ಅವಧಿಯಲ್ಲಿ ನಿಮ್ಮ ನಿರ್ವಾಹಕ ಕಾರ್ಯವನ್ನು ನೋಡಿಕೊಂಡು ಮುಂದೆಯೂ ಅಗತ್ಯವಿದ್ದಲ್ಲಿ ನಿರ್ವಾಹಕತ್ವವನ್ನು ಮುಂದುವರೆಸಬಹುದು.--ಪವನಜ ಯು. ಬಿ. (ಚರ್ಚೆ) ೧೧:೪೫, ೨೪ ಆಗಸ್ಟ್ ೨೦೨೫ (IST)
ನಿರ್ವಾಹಕ ಅಭ್ಯರ್ಥಿ ಪ್ರಶ್ನಾವಳಿ (ಕನ್ನಡ ವಿಕಿಪೀಡಿಯ)
- ೧. ನೀವು ಕನ್ನಡ ವಿಕಿಪೀಡಿಯಾದ ನಿರ್ವಾಹಕರಾಗಿ ಸೇವೆ ಸಲ್ಲಿಸಲು ಯಾಕೆ ಆಸಕ್ತರಾಗಿದ್ದೀರಿ?
- ಉ: ಧನ್ಯವಾದಗಳು @Chik ಈ ಪ್ರಶ್ನೆಗಳಿಗೆ. ಕನ್ನಡ ವಿಕಿಪೀಡಿಯದಲ್ಲಿ ಸಕ್ರಿಯರಾಗಿ ಎರಡು ನಿರ್ವಾಹಕರಿದ್ದಾರೆ. ವಿಕಿಪೀಡಿಯಕ್ಕೆ ಏನಾದರೂ ಬೇಕಾದಲ್ಲಿ ಎರಡು ನಿರ್ವಾಹಕರ ಬಳಿಗ ಹೋಗಬೇಕಾಗುತ್ತದೆ. ಇದರಿಂದ ಇಬ್ಬರ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. (ಇತರ ನಿರ್ವಾಹಕರ ಬಳಿ ಕೇಳಿದರೆ ಅವರು ಸ್ಪಂದಿಸುವುದಿಲ್ಲ ಎಂದಲ್ಲ. ಅವರೂ ಸ್ಪಂದಿಸುತ್ತಾರೆ. ಸದ್ಯದ ಪರಿಸ್ಥಿತಿ ಹೇಳುತ್ತಿದ್ದೇನೆ ಅಷ್ಟೇ.) ಈ ಹೊರೆಯನ್ನು ಕಡಿಮೆ ಮಾಡಲು ಮತ್ತು ವಿಕಿಪೀಡಿಯದ ಮೇಲೆ ಹೆಚ್ಚಿನ ನಿಗಾ ಇಡಲು ಈ ಸೇವೆ ಸಲ್ಲಿಸಲು ಬಯಸುತ್ತಿದ್ದೇನೆ. ಕಳೆದ ಒಂದು ವರ್ಷದ ಮಾಹಿತಿ ಇಲ್ಲಿದೆ. (https://xtools.wmcloud.org/adminstats/kn.wikipedia.org/2022-01-01/2025-08-16) --ಗೋಪಾಲಕೃಷ್ಣ (ಚರ್ಚೆ)
- ೨. ೨೦೧೪ ರಿಂದ ನೀವು ವಿಕಿಪೀಡಿಯಗೆ ನೀಡಿರುವ ಪ್ರಮುಖ ಕೊಡುಗೆಗಳು ಯಾವುವು? ದಯವಿಟ್ಟು ಉದಾಹರಣೆಗಳೊಂದಿಗೆ ವಿವರಿಸಿ
- ಉ: ೨೦೧೫ರಲ್ಲಿ ನಾನು ಸಂತ ಅಲೋಶಿಯಸ್ ಕಾಲೇಜಿನ ವಿಕಿಪೀಡಿಯ ಶೈಕ್ಷಣಿಕ ಯೋಜನೆಯಿಂದಾಗಿ ವಿಕಿಪೀಡಿಯದಲ್ಲಿ ಕೊಡುಗೆ ನೀಡಲು ಆರಂಭಿಸಿದೆ. ನನ್ನ ಮೊದಲು ರಚಿಸಿದ ಲೇಖನ ದೇವಾನಂದ್. ಇದು ಅಳಿಸಲ್ಪಟ್ಟಿತು. ನಂತರ ನನ್ನ ತಪ್ಪುಗಳನ್ನು ತಿದ್ದಿಕೊಂಡು ಬರೆದ ಲೇಖನ ಅಧಿವಾಹಕತೆ. ಒಟ್ಟು ಸೃಷ್ಟಿಸಿದ ೬೯ ಹೊಸ ಪುಟಗಳಲ್ಲಿ ೬೭ ವಿಕಿಯಲ್ಲಿ ಇವೆ. (https://xtools.wmcloud.org/pages/kn.wikipedia.org/Gopala%20Krishna%20A/0/noredirects/all/2014-12-16/2025-08-16). ನಂತರ ಚುಟುಕು ಲೇಖನಗಳನ್ನು ಸರಿಯಾದ ವರ್ಗಕ್ಕೆ ಸೇರಿಸುವ ಕೆಲಸವನ್ನು ಮಾಡಿದ್ದೇನೆ. ಇದಲ್ಲದೇ ನೀತಿ ನಿಯಮಗಳ ಪುಟಗಳಿಗೂ ಕೊಡುಗೆ ನೀಡಿದ್ದೇನೆ. ನನ್ನ ಎಲ್ಲಾ ಕೊಡುಗೆಗಳನ್ನು ಇಲ್ಲಿ ನೋಡಬಹುದು. (https://xtools.wmcloud.org/ec-generalstats/kn.wikipedia.org/Gopala%20Krishna%20A) --ಗೋಪಾಲಕೃಷ್ಣ (ಚರ್ಚೆ)
- ೩. ವಿಕಿಪೀಡಿಯದ ನೀತಿಗಳು ಮತ್ತು ಮಾರ್ಗದರ್ಶನಗಳ ಕುರಿತು ನಿಮ್ಮ ತಿಳುವಳಿಕೆ ಏನು? ನೀವು ಅವುಗಳನ್ನು ಹೇಗೆ ಪಾಲಿಸುತ್ತೀರಿ?
- ಉ: ಕನ್ನಡ ವಿಕಿಪೀಡಿಯದ ಐದು ಆಧಾರ ಸ್ತಂಭಗಳು ನೀತಿಯ ಬಗ್ಗೆ ಸರಿಯಾಗಿ ತಿಳಿದುಕೊಂಡಿದ್ದೇನೆ. ಇದಲ್ಲದೇ, ವಿಕಿಪೀಡಿಯದ ನಿರ್ವಾಹಕರು ಯಾವ ರೀತಿ ಇರಬೇಕು, ತಮ್ಮ ಹಕ್ಕನ್ನು ಯಾವ ರೀತಿ ಚಲಾಯಿಸಬೇಕು ಎಂಬುದರ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಇದಕ್ಕಾಗಿ ನಾನು SYSOP ಪುಟ ಮತ್ತು ಇದರಿಂದ ಬೇರೆ ಕಡೆಗೆ ಹೋಗುವ ಸಾಕಷ್ಟು ಪುಟಗಳನ್ನೂ ಓದಿ ಅರ್ಥ ಮಾಡಿಕೊಂಡಿದ್ದೇನೆ.
- ೪. ಸಮುದಾಯದ ಇತರೆ ಸದಸ್ಯರಿಗೆ ನೀಡಿರುವ ಬೆಂಬಲ ಅಥವಾ ಮಾರ್ಗದರ್ಶನದ ಘಟನೆಗಳನ್ನು ವಿವರಿಸಿ
- ಉ: ಈವರೆಗೆ ನಾನು ಅನೇಕ ಕಾರ್ಯಾಗಾರಗಳನ್ನು ನಡೆಸಿದ್ದೇನೆ. ಇದು ನನ್ನ ಹಿಂದಿನ CIS-A2Kಯ ಸದಸ್ಯನಾಗಿಯೂ ಹೌದು ಜೊತೆಗೆ ನನ್ನ ಸ್ವಯಂಸೇವೆಯ ಮೂಲಕವೂ ಕಾರ್ಯಾಗಾರಗಳಲ್ಲಿ ಭಾಗವಹಿಸಿ ಇತರರಿಗೆ ಹೇಳಿಕೊಟ್ಟಿದ್ದೇನೆ. ಮುಂದೆಯೂ ಹೇಳಿಕೊಡುತ್ತೇನೆ. --ಗೋಪಾಲಕೃಷ್ಣ (ಚರ್ಚೆ)
- ೫. ನಿರ್ವಾಹಕ ಹುದ್ದೆಯ ಹೊಣೆಗಾರಿಕೆಗಳ ಬಗ್ಗೆ ನಿಮಗೆ ಇರುವ ಅರಿವೇನು?
- ಉ: ಈಗಾಗಲೇ ಹೇಳಿರುವಂತೆ ನಿರ್ವಾಹಕರ ಹುದ್ದೆಯ ಹೊಣೆಗಾರಿಕೆಗಳ ಬಗ್ಗೆ ಇಲ್ಲಿ ಹೆಚ್ಚಾಗಿ ತಿಳಿದುಕೊಂಡಿದ್ದೇನೆ. ಮುಂದೆಯೂ ಕಲಿಯುವುದನ್ನು ಮುಂದುವರೆಸುತ್ತೇನೆ. ಕೆಲವು ಪುಟಗಳು ಕನ್ನಡ ವಿಕಿಪೀಡಿಯದಲ್ಲಿ ಸ್ಪಷ್ಟವಾಗಿಲ್ಲ. ಅವುಗಳನ್ನು ರಚಿಸಬೇಕೆಂದಿದ್ದೇನೆ. --ಗೋಪಾಲಕೃಷ್ಣ (ಚರ್ಚೆ)
- ೬. ನಿರ್ವಾಹಕರ ವಿಶೇಷಾಧಿಕಾರಗಳನ್ನು (ಬ್ಲಾಕ್, ಪುಟ ರಕ್ಷಣೆ, ಪುಟ ಪುನಃನಿರ್ದೇಶನ ಮೊದಲಾದವು) ನೀವು ಹೇಗೆ ಜವಾಬ್ದಾರಿಯಿಂದ ಉಪಯೋಗಿಸುವಿರಿ?
- ಉ: ಮೇಲಿನ ವಿಶೇಷ ಅಧಿಕಾರಗಳಲ್ಲಿ ಕೆಲವು (ಬ್ಲಾಕ್, ಅಳಿಸುವುದು) ಮುಂತಾದವುಗಳನ್ನು ಸಮುದಾಯದ ಸಮ್ಮತಿ ಇದ್ದರೆ ಮಾತ್ರ ಮಾಡುತ್ತೇನೆ. ವಿಕಿ ನಿಯಮದಂತೆ ಸಮುದಾಯದ ಚರ್ಚೆಗೆ ಸಾಕಷ್ಟು ಸಮಯ ನೀಡಿಯೇ ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳುತ್ತೇನೆ. (ಪುಟ ರಕ್ಷಣೆ) ಬಗ್ಗೆ ಕನ್ನಡ ವಿಕಿಪೀಡಿಯದಲ್ಲಿ ಇನ್ನೂ ನಿಯಮ ಸರಿಯಾಗಿ ಇಲ್ಲ. ಇದಕ್ಕಾಗಿ ಇಂಗ್ಲಿಷ್ ವಿಕಿಪೀಡಿಯದಲ್ಲಿ ಮಾಡಿರುವ ನಿಯಮವನ್ನೇ ಅನುಸರಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ)
- ೭. ವಿಕಿಪೀಡಿಯ ಸಮುದಾಯದಲ್ಲಿ ಉಂಟಾದ ಯಾವುದೇ ವಿವಾದ ಅಥವಾ ಗೊಂದಲವನ್ನು ನೀವು ಹೇಗೆ ನಿರ್ವಹಿಸಿದ್ದೀರಿ?
- ಉ: ವಿಕಿಪೀಡಿಯ ಸಮುದಾಯದಲ್ಲಿ ಉಂಟಾದ ವಿವಾದ ಮತ್ತು ಗೊಂದಲವನ್ನು ವಿಕಿಪೀಡಿಯ ನಿಮಗಳಿಗೆ ಅನುಸಾರವಾಗಿ ತಟಸ್ಥವಾಗಿ ನಿರ್ವಹಿಸಿದ್ದೇನೆ. ಮುಂದೆಯೂ ಹಾಗೆಯೇ ನಿಯಮಕ್ಕನುಸಾರವಾಗಿ ತಟಸ್ಥವಾಗಿ ನಿರ್ವಹಿಸುತ್ತೇನೆ. --ಗೋಪಾಲಕೃಷ್ಣ (ಚರ್ಚೆ)
- ೮. ನಿರ್ವಾಹಕರಾಗಿ, ನೀವು ಕನ್ನಡ ವಿಕಿಪೀಡಿಯದ ಅಭಿವೃದ್ಧಿಗೆ ಏನೆಲ್ಲಾ ಬದಲಾವಣೆಗಳನ್ನು ಅಥವಾ ಸುಧಾರಣೆಗಳನ್ನು ಮಾಡಲಿಚ್ಛಿಸುತ್ತೀರಿ?
- ಉ: ನಿರ್ವಾಹಕರಾಗಿ, ಮೇಲೆ ಹೇಳಿದಂತೆ ಹಲವು ನೀತಿ ನಿಯಮಗಳ ಬಗ್ಗೆ ಅರಳಿಕಟ್ಟೆಯಲ್ಲಿ ಚರ್ಚೆ ನಡೆಸಿ ಅವುಗಳನ್ನು ಕನ್ನಡ ವಿಕಿಪೀಡಿಯಕ್ಕೆ ತಕ್ಕಂತೆ ಮಾಡಬೇಕಿದೆ. ಅದಲ್ಲದೇ, ಈಗಿರುವ ನಿರ್ವಾಹಕರ ಜೊತೆ ಸೇರಿಕೊಂಡು ನಡೆಯುತ್ತಿರುವ ಕೆಲಸದಲ್ಲಿ ಕೈಜೋಡಿಸುತ್ತೇನೆ. ಮುಂದೆ ಸಮುದಾಯ ಯಾವ ಕೆಲಸ ಮಾಡಬೇಕೆಂದು ಬಯಸುತ್ತದೆಯೋ, ಆ ಕೆಲಸವನ್ನು ನಿಯಮಗಳ ಅನುಸಾರವಾಗಿ ಮಾಡುತ್ತೇನೆ. --ಗೋಪಾಲಕೃಷ್ಣ (ಚರ್ಚೆ)
- ೯. ತಾಂತ್ರಿಕ ಸವಾಲುಗಳು ಅಥವಾ ಸಂಪಾದನಾ ತಾರತಮ್ಯಗಳನ್ನು ನೀವು ಹೇಗೆ ಸದುಪಾಯವಾಗಿ ಹತೋಟಿಗೆ ತರಬಲ್ಲಿರಿ?
- ಉ: ತಾಂತ್ರಿಕ ಸವಾಲುಗಳಾದ ಟೆಂಪ್ಲೇಟು, User Script ಬಗ್ಗೆಯೂ ತಿಳಿದುಕೊಂಡಿದ್ದೇನೆ. ಅವುಗಳನ್ನು ಹೇಗೆ ಇಲ್ಲಿಗೆ ತರುವುದು, ಯಾವಾಗ ತರಬೇಕು ಎಂಬುದರ ಬಗ್ಗೆಯೂ ತಿಳಿದುಕೊಂಡಿದ್ದೇನೆ. ಮುಂದೆ ನುರಿತ ವಿಕಿಯ ನಿರ್ವಾಹಕರ ಬಳಿ ಒಂದು ನಿರ್ವಾಹಕರ ತರಬೇತಿಯೂ ಪಡೆಯಬೇಕೆಂದಿದ್ದೇನೆ.--ಗೋಪಾಲಕೃಷ್ಣ (ಚರ್ಚೆ)
- ೧೦. ಇತರ ಸಂಪಾದಕರು ಮತ್ತು ಸಮುದಾಯದೊಂದಿಗೆ ಸಮರ್ಪಕ ಸಹಕಾರ ಸಾಧಿಸಲು ನೀವು ಕೈಗೊಂಡ ಕ್ರಮಗಳು ಯಾವುವು?
- ಉ: ಈ ಪ್ರಶ್ನೆ ಅಷ್ಟೊಂದು ಸರಿಯಾಗಿ ಅರ್ಥವಾಗುತ್ತಿಲ್ಲ. ನನಗೆ ಅರ್ಥವಾದಂತೆ ಒಂದು ವಿಷಯವನ್ನು ಧ್ಯೇಯವಾಗಿಟ್ಟುಕೊಂಡು ಕೆಲಸ ಮಾಡುತ್ತಿರುವ ಸಂಪಾದಕರಿಂದಲೇ ಸಮುದಾಯವಾಗುತ್ತದೆ. ಯಾವಗೆಲ್ಲ ಸಂಪಾದಕರ ನಡುವೆ ಸಂಘರ್ಷವಾಗಿದೆಯೋ ನಾನು ಅಲ್ಲಿ ತಟಸ್ಥವಾಗಿದ್ದು, ಜಗಳ ಪರಿಹಾರಕ್ಕಾಗಿ ಕೆಲಸ ಮಾಡಿದ್ದೇನೆ. --ಗೋಪಾಲಕೃಷ್ಣ (ಚರ್ಚೆ)
@ChiK ನಾನು ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಸಮರ್ಪಕವಾಗಿ ಉತ್ತರಿಸಿದ್ದೇನೆ ಎಂದು ಭಾವಿಸುತ್ತೇನೆ. ನಿಮಗೆ ಮುಂದೆ ಏನಾದರೂ ಪ್ರಶ್ನೆಗಳಿದ್ದರೆ ದಯವಿಟ್ಟು ಕೇಳಿ ಎಂದು ವಿನಂತಿ. ನಿಮ್ಮ ಪ್ರಶ್ನೆಗಳನ್ನು ದಯವಿಟ್ಟು ಚರ್ಚೆ ವಿಭಾಗದಲ್ಲಿ ಸೇರಿಸಿ. ನಿಮ್ಮ ಸಹಿಯನ್ನೂ ಜೊತೆಗೆ ಸೇರಿಸಬೇಕಾಗಿ ವಿನಂತಿ. --ಗೋಪಾಲಕೃಷ್ಣ (ಚರ್ಚೆ) ೨೧:೧೭, ೧೬ ಆಗಸ್ಟ್ ೨೦೨೫ (IST)
- ಈ ಪುಟವು ಕನ್ನಡ ವಿಕಿಪೀಡಿಯಾದ ಸಾಮಾನ್ಯ ಪ್ರಶ್ನೆ-ಉತ್ತರಗಳ (FAQ) ವಿಭಾಗಕ್ಕೆ ಸೇರಿರುವುದರಿಂದ, ಇಲ್ಲಿ ಬಳಕೆದಾರರ ಸಹಿ ಅಗತ್ಯವಿಲ್ಲ ಎಂದು ಭಾವಿಸಿದ್ದು, ಸಾಮಾನ್ಯವಾಗಿ ಚರ್ಚಾ ಪುಟಗಳಲ್ಲಿ ಅಥವಾ ನಿರ್ದಿಷ್ಟ ಪ್ರತಿಕ್ರಿಯೆಗಳ ಸಂದರ್ಭದಲ್ಲಿ ಮಾತ್ರ ಸಹಿ ಸೇರಿಸುವುದು ಶಿಷ್ಟಾಚಾರವಾಗಿದ್ದು, ಜ್ಞಾನಕೋಶದ ವಿಷಯವಸ್ತುವಿನಲ್ಲಿ ಸಹಿಗಳನ್ನು ಬಳಸುವುದಿಲ್ಲ. ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾದಲ್ಲಿ ಸಂಬಂಧಿತ ಪೂರ್ವನಿಯೋಜಿತ ಟೆಂಪ್ಲೇಟ್ ಲಭ್ಯವಿಲ್ಲದ ಕಾರಣ, ಅದರ ಬಳಕೆಯ ತಾತ್ಪರ್ಯವನ್ನು ಪ್ರತಿನಿಧಿಸುವ ರೀತಿಯಲ್ಲಿ ಈ ವಿಭಾಗವನ್ನು ಕೈಯಾರೆ (ಕೃತಕವಾಗಿ) ಸೇರಿಸಲಾಗಿದೆ. ChiK (ಚರ್ಚೆ) ೨೦:೦೫, ೧೮ ಆಗಸ್ಟ್ ೨೦೨೫ (IST)
ಚರ್ಚೆ
✓- ನಾನು ಈ ವಿನಂತಿಯನ್ನು ಬೆಂಬಲಿಸುತ್ತೇನೆ - ಗೋಪಾಲಕೃಷ್ಣ ಅವರು ದೀರ್ಘಾವಧಿಯ ವಿಕಿ ಬಳಕೆದಾರರಾಗಿದ್ದಾರೆ, ಹೆಚ್ಚಿನ ಬಳಕೆದಾರರು ನಿರ್ವಾಹಕ ಹಕ್ಕುಗಳ ಅಗತ್ಯವಿರುವ ಹಲವಾರು ಕಾರ್ಯಗಳಲ್ಲಿ ಕೆಲಸ ಮಾಡಲು ಮುಂದೆ ಬರುತ್ತಾರೆ ಎಂದು ನಾನು ಭಾವಿಸುತ್ತೇನೆ.--A826 · ✉ · © ೧೬:೦೧, ೧೬ ಆಗಸ್ಟ್ ೨೦೨೫ (IST)
✓- ನಾನು ಈ ವಿನಂತಿಯನ್ನು ಬೆಂಬಲಿಸುತ್ತೇನೆ - ಕನ್ನಡ ವಿಕಿಪೀಡಿಯಕ್ಕೆ ಹೆಚ್ಚಿನ ನಿರ್ವಾಹಕರು ಬೇಕು. ಇದರಿಂದ ಈಗಿರುವ ನಿರ್ವಾಹಕರೊಡನೆ ಕೈಗೂಡಿಸಿ ಕೆಲಸ ಮಾಡಲು ಮತ್ತು ಸಮುದಾಯದ ಬೆಳವಣಿಗೆಗೆ ಸಹಾಯವಾಗುತ್ತದೆ. ಗೋಪಾಲಕೃಷ್ಣ ಈ ಅಂಶಗಳನ್ನು ಉಲ್ಲೇಖಿಸಿರುವುದರಿಂದ ಮತ್ತು ಅವರು ಹಳೆಯ ವಿಕಿಪೀಡಿಯನ್ ಆಗಿದ್ದು ವಿಕಿಯ ಒಳಹೊರಗು ಗೊತ್ತಿರುವುದರಿಂದ ಸೂಕ್ತವಾಗುತ್ತಾರೆ ಎಂದು ಭಾವಿಸುತ್ತೇನೆ.--ವಿಕಾಸ್ ಹೆಗಡೆ | Vikas Hegde (ಚರ್ಚೆ) ೧೬:೫೩, ೧೬ ಆಗಸ್ಟ್ ೨೦೨೫ (IST)
✓- ನಾನು ಬೆಂಬಲಿಸುತ್ತೇನೆ - ಕನ್ನಡ ವಿಕಿಪೀಡಿಯ ಇತ್ತೀಚೆಗೆ ತನ್ನ ಬೆಳವಣಿಗೆಯನ್ನು ಕಡಿಮೆಗೊಳಿಸಿದೆ. ಇನ್ನಷ್ಟು ಹೊಸ ಮತ್ತು ಹಳೆಯ ಸಂಪಾದಕರ ಸಮ್ಮಿಲನದ ಅಗತ್ಯವಿದೆ. ನಿರ್ವಾಹಕರು ಹೆಚ್ಚಾದಂತೆ ಸಂಪಾದಕರೂ ಹೆಚ್ಚಾಗಬೇಕು. ಗೋಪಾಲ್‌ಗೆ ಅಂತಹ ಸಂಘಟಿಸುವ ಸಾಮರ್ಥ್ಯವಿದೆ. ಕನ್ನಡ ವಿಕಿಪೀಡಿಯದ ಪಾಲಿಸಿ ವಿಚಾರಕ್ಕೆ ಸಂಬಂಧಿಸಿಂತೆ ಇನ್ನಷ್ಟು ಕೆಲಸಗಳು ಪೂರ್ಣಗೊಳ್ಳಲಿ. ನನ್ನ ಸಹಕಾರವಿದೆ.Vishwanatha Badikana (ಚರ್ಚೆ) ೨೦:೦೭, ೧೬ ಆಗಸ್ಟ್ ೨೦೨೫ (IST)
✓- ನಾನು ಬೆಂಬಲಿಸುತ್ತೇನೆ - ಕನ್ನಡಕ್ಕೆ ಇನ್ನು ಹೆಚ್ಚು ಕಾರ್ಯನಿರ್ವಾಹಕರು ಬೇಕು. ಇದು ಕನ್ನಡ ಸಮುದಾಯದ ಬೆಳವಣಿಗೆಗೆ ಅತ್ಯಗತ್ಯ. ಗೋಪಾಲಕೃಷ್ಣ ಅವರು ಉತ್ತಮ ಕಾರ್ಯಗಳನ್ನು ನಿರ್ವಹಿಸುತ್ತಿದ್ದಾರೆ. ಇವರಿಗೆ ನನ್ನ ಸಂಪೂರ್ಣ ಬೆಂಬಲವಿದೆ --Santhosh Notagar99 (ಚರ್ಚೆ) ೧೪:೦೧, ೧೭ ಆಗಸ್ಟ್ ೨೦೨೫ (IST)
✓- ನನ್ನ ಬೆಂಬಲ ಇದೆ - ಕನ್ನಡ ವಿಕಿಪೀಡಿಯದ ಕಾರ್ಯನಿರ್ವಾಹಕರಾಗಿ ಸಲ್ಲಿಸಿದ ನಿಮ್ಮ ಮನವಿಗೆ ನನ್ನ ಬಂಬಲ ಇದೆ. ಇದರಿಂದ ಕನ್ನಡ ಸಮುದಾಯದ ಬೆಳವಣಿಗೆ ಆಗಲಿ ಮತ್ತು ವಿಕಿಪೀಡಿಯಕ್ಕೆ ಸತತ ಕೊಡುಗೆ ನೀಡುವವರ ಸಂಖ್ಯೆ ಹೆಚ್ಚಾಗಲಿ. --Babitha Shetty (ಚರ್ಚೆ) ೧೫:೧೨, ೧೭ ಆಗಸ್ಟ್ ೨೦೨೫ (IST)
✓ ಬೆಳೆಯುತ್ತಿರುವ ಕನ್ನಡ ವಿಕಿಪೀಡಿಯಾಕ್ಕೆ ಹೆಚ್ಚಿನ ನಿರ್ವಾಹಕರ ಅವಶ್ಯಕತೆ ಇರುವುದರಿಂದ ವಿಕಿಪೀಡಿಯಾದಲ್ಲಿ ಸಕ್ರೀಯವಾಗಿರುವ ಗೋಪಾಲಕೃಷ್ಣರವರ ನಿರ್ವಾಹಕ ವಿನಂತಿಯನ್ನು ನಾನು ಬೆಂಬಲಿಸುತ್ತೇನೆ.--Kavitha G. Kana (ಚರ್ಚೆ) ೨೨:೧೫, ೧೭ ಆಗಸ್ಟ್ ೨೦೨೫ (IST)
✓ ನನ್ನ ಬೆಂಬಲ ಇದೆ - ಶ್ರೀಯುತ ಗೋಪಾಲಕೃಷ್ಣ ಅವರು ದೀರ್ಘಾವಧಿಯ ವಿಕಿ ಬಳಕೆದಾರರಾಗಿದ್ದಾರೆ, ಅಲ್ಲದೆ ಸಾಕಾಷ್ಟು ಅನುಭವವನ್ನೂ ಹೊಂದಿದ್ದಾರೆ. ಕನ್ನಡಕ್ಕೆ ಹೆಚ್ಚು ಕಾರ್ಯನಿರ್ವಾಹಕರುಗಳು ಇದ್ದರೆ ಇನ್ನೂ ಉತ್ತಮವಾದ ಬೆಳವಣಿಗೆಗಳಿಗೆ ಸಾಕಾಷ್ಟು ಅವಕಾಶಗಳು ಉಂಟಾಗಬಹುದು. ಗೋಪಾಲಕೃಷ್ಣರಿಗೆ ನನ್ನ ಸಂಪೂರ್ಣ ಬೆಂಬಲವಿದೆ.Hariprasad Shetty10 (ಚರ್ಚೆ) ೧೫:೧೦, ೨೦ ಆಗಸ್ಟ್ ೨೦೨೫ (IST)
✓ ನನ್ನ ಬೆಂಬಲ ಇದೆ - ಗೋಪಾಲಕೃಷ್ಣ ಉತ್ಸಾಹಿ ಮತ್ತು ಅನುಭವಿ ತರುಣ. ಅವರು ಕನ್ನಡ ವಿಕಿಯ ನಿರ್ವಾಹಕ ಆದಲ್ಲಿ, ಹೆಚ್ಚಿನ ಪ್ರಮಾಣದಲ್ಲಿ ಒಳ್ಳೆಯ ಕೆಲಸ ಆಗುತ್ತದೆ. ಅನೂಪ್ ಮತ್ತು ಗೋಪಾಲಕೃಷ್ಣ ಇಬ್ಬರೂ ಸೇರಿದರೆ, ಬಲು ಒಳ್ಳೆಯದು. ಜೈ ಮಾಂಕಾಳಮ್ಮ.Mallikarjunasj (talk) ೨೩:೩೬, ೨೧ ಆಗಸ್ಟ್ ೨೦೨೫ (IST)