ರಚಿತಾ ರಾಮ್
ಈ ಲೇಖನದಲ್ಲಿ ಸರಿಯಾದ ಉಲ್ಲೇಖದ ಅಗತ್ಯವಿದೆ ಸರಿಯಾದ ಉಲ್ಲೇಖಗಳನ್ನು ಸೇರಿಸಿ ಲೇಖನವನ್ನು ಉತ್ತಮಗೊಳಿಸಿ. ಲೇಖನದ ಬಗ್ಗೆ ಚರ್ಚೆ ನಡೆಸಲು ಚರ್ಚೆ ಪುಟವನ್ನು ನೋಡಿ. |
ರಚಿತಾ ರಾಮ್ | |
---|---|
ಜನನ | ಬಿಂದ್ಯ ರಾಮ್ ೨ ಅಕ್ಟೋಬರ್ ೧೯೯೨ ಕರ್ನಾಟಕ, ಭಾರತ |
ರಾಷ್ಟ್ರೀಯತೆ | ಭಾರತೀಯ |
ವೃತ್ತಿ | ನಟಿ |
ಸಕ್ರಿಯ ವರ್ಷಗಳು | ೨೦೧೨ |
ಸಂಬಂಧಿಕರು | ನಿತ್ಯಾ ರಾಮ್ (ಸಹೋದರಿ) |
ಬಿಂದ್ಯಾ ರಾಮ್ (ಹುಟ್ಟಿದ್ದು, 3 ಅಕ್ಟೋಬರ್ ೧೯೯೨), ತನ್ನ ಸಿನಿಮಾ ಕ್ಷೇತ್ರದ ಹೆಸರಿನಿಂದ ಜನಪ್ರಿಯರಾಗಿರುವ ರಚಿತಾ ರಾಮ್, ಅವರು ಭಾರತದ ನಟಿ. ಪ್ರಥಮವಾಗಿ ಕನ್ನಡ ಚಿತ್ರರಂಗದಲ್ಲಿ ನಟಿಸಿದ್ದರು. ಅವರು ಕನ್ನಡದ ಕಿರುತೆರೆಯ ದೈನಿಕ ಧಾರಾವಾಹಿ ಅರಸಿ ಎಂಬ ಧಾರಾವಾಹಿಯಲ್ಲಿ ಕಾಣಿಸಿಕೊಂಡರು.
ದೂರದರ್ಶನ ವೃತ್ತಿಜೀವನದ ನಂತರ, ರಚಿತಾ ಅವರು, ಮೊದಲನೆಯ ಚಿತ್ರ "ಬುಲ್ ಬುಲ್"ನಲ್ಲಿ ದರ್ಶನ್ ಜೊತೆಗ ನಾಯಕಿಯಾಗಿ ನಟಿಸಿದರು. ಮೊದಲಿಗೆ ಅವರು ಯಶಸ್ಸು ಕಂಡ ಚಿತ್ರ ಬುಲ್ ಬುಲ್. ನಂತರ ಅವರು ದಿಲ್ ರಂಗೀಲಾ ಹಾಗು ಅಂಬರೀಶಾ ಚಿತ್ರಗಳಲ್ಲಿ ನಟಿಸಿದರು.
ಆರಂಭಿಕ ಜೀವನ
[ಬದಲಾಯಿಸಿ]ರಚಿತಾ ಅವರು ೨ ಅಕ್ಟೋಬರ್ ೧೯೯೨ರಂದು ಜನಿಸಿದರು. ರಚಿತಾ ಅವರು ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ್ತಿ ಯಾಗಿದ್ದರು. ರಚಿತಾ ಅವರು ೪೦ ಕ್ಕೂ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ ಮತ್ತು ಅವರ ತಂದೆ ಕೂಡ ಭಾರತೀಯ ಶಾಸ್ತ್ರೀಯ ಭರತನಾಟ್ಯ ನೃತ್ಯಗಾರ. ಅವರ ತಂದೆಯವರು ೫೦೦ ಹೆಚ್ಚು ಪ್ರದರ್ಶನಗಳನ್ನು ನೀಡಿದ್ದಾರೆ. ಕಿರುತೆರೆ ಮತ್ತು ಚಲನಚಿತ್ರ ನಟಿಯಾದ ನಿತ್ಯಾ ರಾಮ್ ಅವರು ರಚಿತಾ ರಾಮ್ ಅವರ ಸಹೋದರಿ.[೧]
ಚಲನಚಿತ್ರಗಳ ಪಟ್ಟಿ
[ಬದಲಾಯಿಸಿ]Year | Film | Role |
---|---|---|
೨೦೧೩ | ಬುಲ್ ಬುಲ್ | ಕಾವೇರಿ |
೨೦೧೪ | ದಿಲ್ ರಂಗೀಲಾ | ಖುಷಿ |
೨೦೧೪ | ಅಂಬರೀಶಾ | ಕಾರುಣ್ಯ |
೨೦೧೫ | ರನ್ನ | ರುಕ್ಮಿಣಿ |
೨೦೧೫ | ರಥಾವರ | ನವಮಿ |
೨೦೧೬ | ಚಕ್ರವ್ಯೂಹ | ಅಂಜಲಿ |
೨೦೧೬ | ಭರ್ಜರಿ | ಗೌರಿ |
೨೦೧೭ | ಪುಷ್ಪಕ ವಿಮಾನ | ಪುಟ್ಟಲಕ್ಷಿ |
2019 | ಸೀತಾರಾಮ ಕಲ್ಯಾಣ | ಗೀತಾ |
೨೦೧೯ | ನಟಸಾರ್ವಭೌಮ | ಸಾಕ್ಷಿ |
೨೦೧೯ | ಆಯುಷ್ಮಾನ್ ಭಾವ | ಲಕ್ಷ್ಮಿ |