ವಿಷಯಕ್ಕೆ ಹೋಗು

ಪುರಾತತ್ತ್ವ ಶಾಸ್ತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
2008ರಲ್ಲಿ ಸ್ಪೇನ್‌ನ ಅಟಪ್ಯುಯೆರ್ಕ ಮೌಂಟೇನ್ಸ್‌ನ ಗ್ರ್ಯಾನ್ ಡೋಲಿನ‌ ಪ್ರದೇಶದಲ್ಲಿ ಮಾಡಿದ ಉತ್ಖನನ

ಪುರಾತತ್ತ್ವ ಶಾಸ್ತ್ರ(Archaeology) ಅಥವಾ archeology (ಗ್ರೀಕ್‌ನಲ್ಲಿ ἀρχαιολογία, archaiologia  – ἀρχαῖος, arkhaīos , "ಪುರಾತನ"; ಮತ್ತು -λογία, -logiā , "-logy")ವು ಹಿಂದಿನ ಕಾಲದ ಮಾನವ ಸಮಾಜಗಳ ಅಭಿವೃದ್ಧಿ ಬಗೆಗಿನ ಅಧ್ಯಯನವಾಗಿದೆ, ಇದನ್ನು ಪ್ರಾಥಮಿಕವಾಗಿ ಕೈಗಳಿಂದ ಮಾಡಿದ ಹಸ್ತಕೃತಿಗಳು, ವಾಸ್ತುಶಿಲ್ಪ, ಜೈವಿಕ ಸಂಗತಿಗಳು ಮತ್ತು ಸಾಂಸ್ಕೃತಿಕ ಭೂದೃಶ್ಯಗಳು ಮೊದಲಾದವುಗಳನ್ನು ಒಳಗೊಂಡಂತೆ ಅವರು ಬಿಟ್ಟುಹೋದ ಪರಿಸರದ ಮಾಹಿತಿಗಳ ಮತ್ತು ಭೌತಿಕ ಸಂಸ್ಕೃತಿಯ ಪುನಸ್ಸಂಪಾದನೆ ಮತ್ತು ವಿಶ್ಲೇಷಣೆಯ ಮೂಲಕ ಮಾಡಲಾಗುತ್ತದೆ. ಪುರಾತತ್ತ್ವ ಶಾಸ್ತ್ರವು ಅಸಂಖ್ಯಾತ ಕಾರ್ಯಸರಣಿಗಳನ್ನು ತೊಡಗಿಸಿಕೊಳ್ಳುವುದರಿಂದ, ಇದನ್ನು ವಿಜ್ಞಾನ ಮತ್ತು ಮಾನವಕುಲ ಎಂಬುದಾಗಿ ಪರಿಗಣಿಸಲಾಗುತ್ತದೆ.[] ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಇದನ್ನು ಮಾನವಶಾಸ್ತ್ರದ ಉಪವಿಭಾಗವೆಂದು ಭಾವಿಸಲಾಗುತ್ತದೆ.[] ಆದರೆ ಯುರೋಪ್‌‌ನಲ್ಲಿ ಇದನ್ನು ಒಂದು ಪ್ರತ್ಯೇಕ ವಿಭಾಗವೆಂದು ತಿಳಿಯಲಾಗುತ್ತದೆ.

ಪುರಾತತ್ತ್ವ ಶಾಸ್ತ್ರವು 2.5 ದಶಲಕ್ಷ ವರ್ಷಗಳ ಹಿಂದೆ ಪೂರ್ವ ಆಫ್ರಿಕಾದಲ್ಲಿ ಮೊದಲ ಕಲ್ಲಿನ ಉಪಕರಣಗಳು ಅಭಿವೃದ್ಧಿಯಾದಂದಿನಿಂದ ಇತ್ತೀಚಿನ ದಶಕಗಳವರೆಗಿನ ಮಾನವ ಇತಿಹಾಸವನ್ನು ಅಧ್ಯಯನ ಮಾಡುತ್ತದೆ.[] ಇದು ಇತಿಹಾಸಕಾರರಿಗೆ ಅಧ್ಯಯನ ಮಾಡಲು ಯಾವುದೇ ಲಿಖಿತ ದಾಖಲೆಗಳಿಲ್ಲದ ಕಾಲದ ಇತಿಹಾಸ ಪೂರ್ವ ಸಮಾಜಗಳ ಬಗ್ಗೆ ತಿಳಿಯಲು ಅತಿಮುಖ್ಯವಾಗಿದೆ. ಇದು ಪ್ರಾಚೀನ ಶಿಲಾಯುಗದಿಂದ ಹಿಡಿದು ಸಾಕ್ಷರತೆಯ ಆಗಮನದವರೆಗಿನ ಒಟ್ಟು ಮಾನವ ಇತಿಹಾಸದ ಸುಮಾರು 99%ರಷ್ಟನ್ನು ಒಳಗೊಳ್ಳುತ್ತದೆ.[] ಪುರಾತತ್ತ್ವ ಶಾಸ್ತ್ರವು ಅನೇಕ, ವಿವಿಧ ಗುರಿಗಳನ್ನು ಹೊಂದಿದೆ, ಇವು ಮಾನವ ವಿಕಾಸದ ಅಧ್ಯಯನದಿಂದ ಹಿಡಿದು ಸಾಂಸ್ಕೃತಿಕ ವಿಕಾಸ ಮತ್ತು ಸಂಸ್ಕೃತಿ ಇತಿಹಾಸದ ಅಧ್ಯಯನದವರೆಗೆ ವ್ಯಾಪಿಸಿವೆ.[]

ಇದು ಸಮೀಕ್ಷೆ, ಉತ್ಖನನ ಮತ್ತು ಅಂತಿಮವಾಗಿ ಪ್ರಾಚೀನ ಕಾಲದ ಬಗ್ಗೆ ಹೆಚ್ಚು ತಿಳಿಯಲು ಸಂಗ್ರಹಿಸಿದ ಮಾಹಿತಿಯ ವಿಶ್ಲೇಷಣೆಯನ್ನು ಒಳಗೊಳ್ಳುತ್ತದೆ. ವಿಸ್ತಾರ ವ್ಯಾಪ್ತಿಯಲ್ಲಿ, ಪುರಾತತ್ತ್ವ ಶಾಸ್ತ್ರವು ವೈವಿಧ್ಯಮಯ-ಶಿಸ್ತುಬದ್ಧ ಸಂಶೋಧನೆಯನ್ನು ಅವಲಂಬಿಸಿರುತ್ತದೆ. ಇದು ಮಾನವಶಾಸ್ತ್ರ, ಚರಿತ್ರೆ, ಕಲಾ ಇತಿಹಾಸ, ಶ್ರೇಷ್ಠ ಗ್ರಂಥಗಳು, ಜನಾಂಗಶಾಸ್ತ್ರ, ಭೂಗೋಳಶಾಸ್ತ್ರ,[] ಭೂವಿಜ್ಞಾನ,[][][] ಭಾಷಾಶಾಸ್ತ್ರ, ಭೌತಶಾಸ್ತ್ರ, ಮಾಹಿತಿ ವಿಜ್ಞಾನ, ರಾಸಾಯನಿಕ ಶಾಸ್ತ್ರ, ಸಂಖ್ಯಾಶಾಸ್ತ್ರ, ಪ್ರಾಚೀನ-ಪರಿಸರವಿಜ್ಞಾನ, ಪ್ರಾಗ್ಜೀವಶಾಸ್ತ್ರ, ಪ್ರಾಚೀನ-ಪ್ರಾಣಿಶಾಸ್ತ್ರ, ಪ್ರಾಚೀನ-ಜನಾಂಗೀಯ-ಸಸ್ಯಶಾಸ್ತ್ರ(ಪೇಲಿಯೊಎನ್ನೊಬಾಟನಿ) ಮತ್ತು ಪ್ರಾಚೀನ-ಸಸ್ಯಶಾಸ್ತ್ರ ಮೊದಲಾದವನ್ನು ಒಳಗೊಳ್ಳುತ್ತದೆ.

ಪುರಾತತ್ತ್ವ ಶಾಸ್ತ್ರವು ಯುರೋಪ್‌ನಲ್ಲಿ 19ನೇ ಶತಮಾನದಲ್ಲಿ ಪುರಾತನ-ವಸ್ತು ಶೋಧನೆಯಿಂದ ಅಭಿವೃದ್ಧಿಗೊಂಡಿತು. ಅಲ್ಲಿಂದೀಚೆಗೆ ಅದು ಪ್ರಪಂಚದಾದ್ಯಂತ ಒಂದು ಶಿಸ್ತುಬದ್ಧ ಅಧ್ಯಯನವಾಯಿತು. ಅದರ ಆರಂಭಿಕ ಬೆಳವಣಿಗೆಯಿಂದ ಹಿಡಿದು ಇಂದಿನವರೆಗೆ ಅನೇಕ ವಿಶೇಷ ರೀತಿಯ ಪುರಾತತ್ತ್ವ ಶಾಸ್ತ್ರ ಅಭಿವೃದ್ಧಿಯಾಗಿದೆ; ಉದಾ. ಕಡಲತಡಿಯ ಪುರಾತತ್ತ್ವ ಶಾಸ್ತ್ರ, ಸ್ತ್ರೀಸಮಾನತಾವಾದಿ ಪುರಾತತ್ತ್ವ ಶಾಸ್ತ್ರ ಮತ್ತು ಪುರಾತನ-ಖಗೋಳವಿಜ್ಞಾನ. ಅಲ್ಲದೆ ಪುರಾತತ್ತ್ವ ಶಾಸ್ತ್ರದ ಪರೀಕ್ಷೆಗೆ ಸಹಾಯ ಮಾಡುವಂತಹ ಹಲವಾರು ವಿವಿಧ ವೈಜ್ಞಾನಿಕ ವಿಧಾನಗಳು ಅಭಿವೃದ್ಧಿಯಾಗಿವೆ. ಇಂದು ಪುರಾತತ್ತ್ವಜ್ಞರು ನಕಲಿ-ಪುರಾತತ್ತ್ವ ಶಾಸ್ತ್ರದಿಂದ ಹಿಡಿದು ಪುರಾತನ ಹಸ್ತಕೃತಿಗಳ ಲೂಟಿಮಾಡುವಿಕೆ ಮತ್ತು ಮಾನವ ಅವಶೇಷಗಳ ಉತ್ಖನನಕ್ಕೆ ವಿರೋಧ ವ್ಯಕ್ತಪಡಿಸುವಿಕೆ ಮೊದಲಾದ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ.

ಪುರಾತತ್ತ್ವ ಶಾಸ್ತ್ರದ ಇತಿಹಾಸ

[ಬದಲಾಯಿಸಿ]

(ಇಟಲಿಯ ಕಡಲತೀರದ ನಗರ)ಅಂಕೋನದ ಸಂಚಾರೀ ವಿದ್ವಾಂಸ ಸಿರಿಯಾಕೊ ಪಿಜ್ಜೆಕೊಲ್ಲಿ (1391–1453) ಪುರಾತನ ಕಟ್ಟಡಗಳು ಮತ್ತು ವಸ್ತುಗಳ ಬಗೆಗಿನ ಅವನ ಆವಿಷ್ಕಾರಕ್ಕಾಗಿ ಮೆಡಿಟರೇನಿಯನ್ ಸಮುದ್ರದ ಸುತ್ತಮುತ್ತಲ ಪ್ರದೇಶಗಳಾದ್ಯಂತ ಸಂಚರಿಸಿದನು. ಈ ಕಾರಣಕ್ಕಾಗಿ ಅವನನ್ನು ಪುರಾತತ್ತ್ವ ಶಾಸ್ತ್ರದ "ಪಿತಾಮಹ" ಎಂದು ಕರೆಯಲಾಗುತ್ತದೆ. ಆಧುನಿಕ ಪುರಾತತ್ತ್ವ ಶಾಸ್ತ್ರವು ಅದರ ಮೂಲವನ್ನು 19ನೇ ಶತಮಾನದ ಮಧ್ಯಯುಗದಲ್ಲಿನ ಯುರೋಪ್‌ನಲ್ಲಿ ಕಂಡುಕೊಂಡಿದೆ.ಅಲ್ಲಿ ಅದು ಭೂಮಿಯು ಸಾವಿರಾರು ವರ್ಷಗಳ ಬದಲಿಗೆ ಶತಕೋಟಿ ವರ್ಷಗಳಷ್ಟು ಹಳೆಯದು ಎಂದು ತೋರಿಸಿಕೊಟ್ಟ ಭೂವಿಜ್ಞಾನದ ವೈಜ್ಞಾನಿಕ ಪ್ರಗತಿಯ ನಂತರ ಅಭಿವೃದ್ಧಿಯಾಯಿತು. ಅವನ ನಂತರ 1859ರಲ್ಲಿ ಚಾರ್ಲ್ಸ್ ಡಾರ್ವಿನ್‌ನ ವಿಕಾಸವಾದವನ್ನು ಸ್ಥೂಲವಾಗಿ ವಿವರಿಸುವ ಆನ್ ದಿ ಒರಿಜಿನ್ ಆಫ್ ಸ್ಪೀಸೀಸ್‌ ಪ್ರಕಟಗೊಂಡಿತು. ಇದು ವಿಜ್ಞಾನಿಗಳಲ್ಲಿ ಮಾನವ ಕುಲವು ನಿಜವಾಗಿ ದಶಲಕ್ಷ ವರ್ಷಗಳಷ್ಟು ಹಳೆಯದೆಂಬ ನಂಬಿಕೆಯನ್ನು ಉಂಟುಮಾಡಿತು. ಈ ಮೂಲಕ ಬೆಳೆಯತೊಡಗಿದ ಪುರಾತನ ತತ್ತ್ವಶಾಸ್ತ್ರದ ಕಾರ್ಯಾಚರಣೆಗಳ ಬಗ್ಗೆ ಅಧ್ಯಯನ ಮಾಡಲು ಒಂದು ಕಾಲ ಮಿತಿಯನ್ನು ನೀಡಿತು. ಅದೇ ಸಮಯದಲ್ಲಿ, 1836ರಲ್ಲಿ ಡ್ಯಾನಿಶ್ ಇತಿಹಾಸಕಾರ ಕ್ರಿಶ್ಚಿಯನ್ ಜರ್ಗೆನ್ಸನ್ ಥಾಮ್ಸನ್ ಪ್ರಕಟಿಸಿದ ಎ ಲೆಡೆಟ್ರಾಡ್ ಟಿಲ್ ನಾರ್ಡಿಸ್ಕ್ ಓಲ್ಡ್‌‌ಕಿಂಡಿಘೆಡ್ (ಸ್ಕ್ಯಾಂಡಿನೇವಿಯಾದ ಪುರಾತನತ್ವದ ಮಾರ್ಗದರ್ಶಿ)ಅನ್ನು 1848ರಲ್ಲಿ ಇಂಗ್ಲಿಷ್‌ಗೆ ಅನುವಾದಿಸಲಾಯಿತು. ಅದರಲ್ಲಿ ಆತನು ಯುರೋಪಿನ ಇತಿಹಾಸ ಪೂರ್ವವನ್ನು ಮೂರು ಯುಗಗಳಾಗಿ ವಿಭಾಗಿಸಬಹುದೆಂದು ಸೂಚಿಸಿದ್ದಾನೆ; ಮಾನವ ಬಳಸಿದ ವಸ್ತುಗಳ ಆಧಾರದಲ್ಲಿ ಶಿಲಾಯುಗ, ಕಂಚಿನ ಯುಗ ಮತ್ತು ಕಬ್ಬಿಣದ ಯುಗ. ಮಾನವ ಪುರಾತನತ್ವ, ವಿಕಾಸ ಮತ್ತು ಮೂರು-ಯುಗಗಳ ವ್ಯವಸ್ಥೆ ಈ ಮೂರು ಅಂಶಗಳನ್ನು ಆಧುನಿಕ ಪುರಾತತ್ತ್ವ ಶಾಸ್ತ್ರದ ಮೂಲಾಧಾರಗಳೆಂದು ಪರಿಗಣಿಸಲಾಗುತ್ತದೆ.[]

ಅತಿ ಶೀಘ್ರದಲ್ಲಿ ಆರಂಭಿಕ ಪುರಾತತ್ತ್ವಜ್ಞರು ಪ್ರಪಂಚದಾದ್ಯಂತದ ವಿವಿಧ ಪ್ರದೇಶಗಳನ್ನು ಶೋಧಿಸಲು ಆರಂಭಿಸಿದರು. ಪುರಾತನ ಏಜಿಯನ್ ನಾಗರಿಕತೆಯ ಅಧ್ಯಯನದೊಂದಿಗೆ ಟ್ರಾಯ್‌‌ನಲ್ಲಿ ಹೈನ್ರಿಕ್ ಸ್ಕ್ಲೈಮ್ಯಾನ್ ಮತ್ತು ಕ್ರೆಟೆಯಲ್ಲಿ ಅರ್ಥುರ್ ಇವಾನ್ಸ್ ಉತ್ಖನನ ಮಾಡಲು ಪ್ರೇರೇಪಣೆ ಪಡೆದರು. ಜಾನ್ ಲಾಯ್ಡ್ ಸ್ಟೀಫನ್ಸ್ ಕೇಂದ್ರ ಅಮೆರಿಕದಾದ್ಯಂತ ಮಾಯಾ ನಾಗರಿಕತೆಯನ್ನು ಪುನಶ್ಶೋಧಿಸಿದ ಪ್ರಮುಖ ವ್ಯಕ್ತಿಯಾಗಿದ್ದಾನೆ. ಈ ಪುರಾತತ್ತ್ವಜ್ಞರು ಬಳಸಿದ ವಿಧಾನಗಳು ಹೆಚ್ಚಾಗಿ ಕೇವಲಯುರೋಪ್-ಕೇಂದ್ರಿತ ವಿಷಯವನ್ನು ಹೊಂದಿರುವ ಇಂದಿನ ಪ್ರಮಾಣಕಗಳಿಂದ ನಾಶಗೊಂಡವು. ಹೆಚ್ಚಿನ ಆರಂಭಿಕ ಯುರೋಪಿನ ಪುರಾತತ್ತ್ವಜ್ಞರು ಎಡ್ವರ್ಡ್ ಟೈಲರ್ ಮತ್ತು ಲೆವಿಸ್ ಹೆನ್ರಿ ಮೋರ್ಗನ್ ಒದಗಿಸಿದ ಮಾನವಶಾಸ್ತ್ರದ ಮತ್ತು ಜನಾಂಗ ವಿವರಣೆಯ ದಾಖಲೆಗಳನ್ನು ಅವಲಂಬಿಸಿದ್ದರು, ಆ ಮೂಲಕ ಸ್ಥಳೀಯ ಅಮೆರಿಕನ್ನರಂತಹ ಸಮಕಾಲೀನ ನಾಗರಿಕತೆರಹಿತರನ್ನು ಅಂತಹುದೇ ಸಮಾಜಗಳಲ್ಲಿ ಜೀವಿಸಿದ ಯುರೋಪಿನ ಐತಿಹಾಸಿಕ ಜನರೊಂದಿಗೆ ಹೋಲಿಸಿದರು.[೧೦] ಅತಿ ಶೀಘ್ರದಲ್ಲಿ ಪುರಾತತ್ತ್ವ ಶಾಸ್ತ್ರದ ಹೊಸ ವಿಧಾನಗಳು ಉತ್ತರ ಅಮೆರಿಕಕ್ಕೆ ಹರಡಿದವು, ಅಲ್ಲಿ ಇದರ ಬಗ್ಗೆ ಸ್ಯಾಮ್ಯುಯೆಲ್ ಹ್ಯಾವನ್ ಮತ್ತು ವಿಲಿಯಂ ಹೆನ್ರಿ ಹೋಮ್ಸ್ ಅಧ್ಯಯನ ಮಾಡಿದರು, ಇವರು ಪುರಾತನ ಸ್ಥಳೀಯ ಅಮೆರಿಕನ್ನರ ಸ್ಮಾರಕಗಳನ್ನು ಉತ್ಖನನ ಮಾಡಿದರು.[೧೧]

ಪುರಾತತ್ತ್ವ ಶಾಸ್ತ್ರದಲ್ಲಿನ ಹೆಚ್ಚಿನ ಬೆಳವಣಿಗೆಯು 19ನೇ ಶತಮಾನದ ಉತ್ತರಾರ್ಧದಲ್ಲಿ ಕಂಡುಬಂದಿತು. ಇದರಲ್ಲಿ ಹೆಚ್ಚು ಪ್ರಮುಖವಾದವನೆಂದರೆ ಅಗಸ್ಟಸ್ ಪಿಟ್ ರಿವರ್ಸ್, ಈತನು ದಕ್ಷಿಣ ಇಂಗ್ಲೆಂಡ್‌ನಲ್ಲಿ ಕ್ರ್ಯಾನ್ಬೋರ್ನ್ ಚೇಸ್‌‌ನಲ್ಲಿ ಅತಿ ಸೂಕ್ಷ್ಮವಾಗಿ ಉತ್ಖನನ ಮಾಡಿ, ಇದು ದಾಖಲೆ ಮಾಡಿಕೊಳ್ಳಬೇಕಾದ ಮೌಲ್ಯ ಅಥವಾ ಸೌಂದರ್ಯದ ಅಂಶ ಮಾತ್ರವಾಗಿರದೆ ಪ್ರಾಪಂಚಿಕ ಅಂಶವಾಗಿದೆ ಎಂದು ಒತ್ತಿಹೇಳಿದ್ದಾನೆ; ಆದ್ದರಿಂದ ಆತನು ಪುರಾತತ್ತ್ವ ಶಾಸ್ತ್ರವನ್ನು ಪುರಾತನ ವಸ್ತು ಶೋಧನೆಗಿಂತ ಭಿನ್ನವಾಗಿಸಲು ಸಹಾಯ ಮಾಡಿದನು. 19ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20ನೇ ಶತಮಾನದ ಆರಂಭದಲ್ಲಿ ಈ ವಿಧಾನವನ್ನು ಇನ್ನಷ್ಟು ಉತ್ತಮಪಡಿಸಿದ ಇತರ ಪ್ರಮುಖ ಪುರಾತತ್ತ್ವಜ್ಞರೆಂದರೆ - ಫ್ಲಿಂಡರ್ಸ್ ಪೆಟ್ರೀ (ಈತನು ಈಜಿಪ್ಟ್ ಮತ್ತು ಪ್ಯಾಲೆಸ್ಟೈನ್‌ನಲ್ಲಿ ಉತ್ಖನನ ಮಾಡಿದನು), ಸರ್ ಮಾರ್ಟಿಮರ್ ವೀಲರ್ (ಭಾರತ), ಡೊರೊತಿ ಗ್ಯಾರಡ್ (ಮಧ್ಯ ಪೂರ್ವ), ಮ್ಯಾಕ್ಸ್ ಉಹ್ಲೆ (ಪೆರು) ಮತ್ತು ಅಲ್ಫ್ರೆಡ್ ಕಿಡ್ಡರ್ (ಮೆಕ್ಸಿಕೊ).(11/) ಪುರಾತತ್ತ್ವ ಶಾಸ್ತ್ರದಲ್ಲಿನ ಹೆಚ್ಚಿನ ಹೊಂದಾವಣೆ ಮತ್ತು ಹೊಸ ಬದಲಾವಣೆಗಳು 20ನೇ ಶತಮಾನದವರೆಗೆ, ನಿರ್ದಿಷ್ಟವಾಗಿ 1960ರವರೆಗೆ, ಮುಂದುವರಿಯಿತು. ಆ ಸಂದರ್ಭದಲ್ಲಿ ಜಾರ್ಜ್ ಬಾಸ್ ಕಡಲತಡಿಯ ಪುರಾತತ್ತ್ವ ಶಾಸ್ತ್ರವನ್ನು ಜನಪ್ರಿಯಗೊಳಿಸಿದನು, ನಗರ ಪುರಾತತ್ತ್ವ ಶಾಸ್ತ್ರವು ಹೆಚ್ಚಿನ ಯುರೋಪಿನ ನಗರಗಳಲ್ಲಿ ವ್ಯಾಪಕವಾಗಿ ಪುನಃಅಭಿವೃದ್ಧಿಯಾಯಿತು. ಅಲ್ಲದೇ ಹೆಚ್ಚಿದ ವಾಣಿಜ್ಯ ಪ್ರಗತಿಯಿಂದಾಗಿ ಸಂರಕ್ಷಿತ ಪುರಾತತ್ತ್ವ ಶಾಸ್ತ್ರವು ಬೆಳವಣಿಗೆ ಕಂಡಿತು.[೧೨]

ಸಿದ್ಧಾಂತ

[ಬದಲಾಯಿಸಿ]

ಉದ್ದೇಶ

[ಬದಲಾಯಿಸಿ]
ದಕ್ಷಿಣ ಆಫ್ರಿಕಾದಲ್ಲಿ ಪ್ರಕಟಗೊಂಡ ಟಾಂಗ್ ಮಗುವಿನ ತಲೆಬುರುಡೆ.ಆ ಮಗುವು ಹೋಮಿನಿನ್‌ನ ಆರಂಭಿಕ ರೂಪ ಆಸ್ಟ್ರೇಲಪಿತಿಕಸ್ ಆಫ್ರಿಕಾನಸ್ ಜಾತಿಯ ಶಿಶುವಾಗಿತ್ತು. ಪುರಾತತ್ತ್ವ ಶಾಸ್ತ್ರವಿಲ್ಲದೆ ನಮಗೆ ಮಾನವ ವಿಕಾಸದ ಬಗ್ಗೆ ಏನೂ ತಿಳಿಯುವುದಿಲ್ಲ.

ಪುರಾತತ್ತ್ವ ಶಾಸ್ತ್ರದ ಉದ್ದೇಶವೆಂದರೆ ಹಿಂದಿನ ಸಮಾಜಗಳ ಬಗ್ಗೆ ಮತ್ತು ಮಾನವ ಕುಲದ ಅಭಿವೃದ್ಧಿಯ ಬಗ್ಗೆ ತಿಳಿಯುವುದಾಗಿದೆ. ಸುಮಾರು 99%ನಷ್ಟು ಮನುಷ್ಯವರ್ಗದ ಇತಿಹಾಸವು ಇತಿಹಾಸ-ಪೂರ್ವ ಸಂಸ್ಕೃತಿಗಳಲ್ಲಿ ಕಂಡುಬಂದಿದೆ. ಈ ಸಂಸ್ಕೃತಿಯ ಜನರು ಬರವಣಿಗೆಯನ್ನು ತಿಳಿದಿರಲಿಲ್ಲ, ಆದ್ದರಿಂದ ಆ ಕಾಲದ ಬಗ್ಗೆ ಯಾವುದೇ ಲಿಖಿತ ದಾಖಲೆಗಳು ಸಿಗುವುದಿಲ್ಲ. ಲಿಖಿತ ಆಧಾರಗಳಿಲ್ಲದಿದ್ದಾಗ ಇತಿಹಾಸ-ಪೂರ್ವ ಸಮಾಜಗಳ ಬಗ್ಗೆ ತಿಳಿಯಲು ಇರುವ ಏಕೈಕ ಮಾರ್ಗವೆಂದರೆ ಪುರಾತತ್ತ್ವ ಶಾಸ್ತ್ರ. ಮಾನವ ಇತಿಹಾಸದಲ್ಲಿನ ಹೆಚ್ಚಿನ ಪ್ರಮುಖ ಬೆಳವಣಿಗೆಗಳು ಇತಿಹಾಸ-ಪೂರ್ವದಲ್ಲಿ ಕಂಡುಬಂದಿದೆ. ಮಾನವಕುಲದ ವಿಕಾಸವು ಪ್ರಾಚೀನ ಶಿಲಾಯುಗದ ಸಂದರ್ಭದಲ್ಲಿ ಉಂಟಾಯಿತು, ಈ ಸಂದರ್ಭದಲ್ಲಿ ಹೋಮಿನಿನ್‌ಗಳು ಆಫ್ರಿಕಾದಲ್ಲಿನ ಆರಂಭಿಕ ಹೋಮೊಗಳ ಮೂಲಕ ಆಸ್ಟ್ರೇಲಪಿತಿಸೈನ್‌ನಿಂದ (ಅಂದರೆ ಎರಡು ಕಾಲಿನ ಸರಿಸೃಪಗಳ ಅವಶೇಷಗಳ ಮಾಹಿತಿಯಿಂದ)ಬೆಳವಣಿಗೆ ಹೊಂದಿದವು. ಹಾಗೆಯೇ ಅಂತಿಮವಾಗಿ ಆಧುನಿಕ ಹೋಮೊ ಸೇಪಿಯನ್ಸ್ (ವಿವೇಕ ಪಡೆದ ಮಾನವ ಜೀವಿ) ಆದವು. ಪುರಾತತ್ತ್ವ ಶಾಸ್ತ್ರವು ಮಾನವಕುಲದ ತಾಂತ್ರಿಕ ಪ್ರಗತಿಯ ಮೇಲೆಯೂ ಬೆಳಕು ಚೆಲ್ಲುತ್ತದೆ, ಉದಾಹರಣೆಗಾಗಿ, ಬೆಂಕಿಯನ್ನು ಬಳಸುವ ಸಾಮರ್ಥ್ಯ, ಕಲ್ಲಿನ ಸಾಧನಗಳ ಅಭಿವೃದ್ಧಿ, ಲೋಹವಿದ್ಯೆಯ ಆವಿಷ್ಕಾರ, ಧರ್ಮದ ಆರಂಭ ಮತ್ತು ಕೃಷಿಯ ಹುಟ್ಟು. ಪುರಾತತ್ತ್ವ ಶಾಸ್ತ್ರವಿಲ್ಲದೆ ನಮಗೆ ಬರವಣಿಗೆಯ ಉಗಮಕ್ಕಿಂತ ಮೊದಲಿನ ಮಾನವಕುಲದ ಈ ವಿಕಾಸಾತ್ಮಕ ಮತ್ತು ತಾಂತ್ರಿಕ ಬದಲಾವಣೆಗಳ ಬಗ್ಗೆ ತಿಳಿಯಲು ಆಗುತ್ತಿರಲಿಲ್ಲ.[೧೩]

ಇತಿಹಾಸ ಪೂರ್ವ ಮಾತ್ರವಲ್ಲದೆ ಸಾಕ್ಷರತಾ-ಪೂರ್ವ ಸಂಸ್ಕೃತಿಗಳನ್ನೂ ಪುರಾತತ್ತ್ವ ಶಾಸ್ತ್ರವನ್ನು ಬಳಸಿಕೊಂಡು ಅಧ್ಯಯನ ಮಾಡಬಹುದು. ಅಲ್ಲದೆ ಐತಿಹಾಸಿಕ, ಸಾಕ್ಷರ ಸಂಸ್ಕೃತಿಗಳ ಬಗ್ಗೆ ಐತಿಹಾಸಿಕ ಪುರಾತತ್ತ್ವ ಶಾಸ್ತ್ರದ ಉಪ-ವಿಧಾನದಿಂದ ತಿಳಿಯಬಹುದು. ಪುರಾತನ ಗ್ರೀಸ್ ಮತ್ತು ಮೆಸಪೊಟಮಿಯದಂತಹ ಹೆಚ್ಚಿನ ಸಾಕ್ಷರ ಸಂಸ್ಕೃತಿಗಳ ಉಳಿದುಕೊಂಡ ದಾಖಲೆಗಳು ಹೆಚ್ಚಾಗಿ ಅಪೂರ್ಣವಾಗಿವೆ. ಅದಲ್ಲದೇ ಅವು ಏಕರೂಪವಾಗಿ ಕೆಲವು ಸಂಗತಿಗಳ ಮೇಲೆ ಮಾತ್ರ ಕೇಂದ್ರೀಕೃತವಾಗಿವೆ. ಹೆಚ್ಚಿನ ಸಮಾಜಗಳಲ್ಲಿ ಸಾಕ್ಷರತೆಯು ಕ್ರೈಸ್ತ ಪುರೋಹಿತ ವರ್ಗ ಅಥವಾ ರಾಜಪರಿವಾರದ ಅಥವಾ ದೇವಾಲಯದ ಅಧಿಕಾರಿ ವರ್ಗ ಮೊದಲಾದ ಗಣ್ಯ ವರ್ಗಗಳಿಗೆ ಸೀಮಿತವಾಗಿತ್ತು. ಶ್ರೀಮಂತ ವರ್ಗದವರ ಸಾಕ್ಷರತೆಯು ಕೆಲವೊಮ್ಮೆ ಸಾಹಸಕಾರ್ಯ ಮತ್ತು ಒಪ್ಪಂದಗಳ ಪರಿಮಿತಿಯನ್ನು ಹೊಂದಿತ್ತು. ಗಣ್ಯರ ಆಸಕ್ತಿಗಳು ಮತ್ತು ಪ್ರಾಪಂಚಿಕ-ಜ್ಞಾನವು ಹೆಚ್ಚಾಗಿ ಜನಸಾಮಾನ್ಯರ ಜೀವನ ಪದ್ಧತಿ ಮತ್ತು ಆಸಕ್ತಿಗಳಿಗಿಂತ ಭಿನ್ನವಾಗಿದ್ದವು. ಸಾಮಾನ್ಯ ಜನರ ಪ್ರತಿನಿಧಿಗಳಿಂದ ರಚಿಸಲ್ಪಟ್ಟ ಕೃತಿಗಳನ್ನು ಗ್ರಂಥಾಲಯಗಳಲ್ಲಿ ಸಂಗ್ರಹಿಸಿ, ಮುಂದಿನ ಪೀಳಿಗೆಯವರಿಗಾಗಿ ರಕ್ಷಿಸಲಾಯಿತು. ಆದ್ದರಿಂದ ಲಿಖಿತ ದಾಖಲೆಗಳು ಸೀಮಿತ ವಲಯದ ಜನರ ಒಲವು, ಕಲ್ಪನೆಗಳು, ಸಾಂಸ್ಕೃತಿಕ ಮೌಲ್ಯಗಳು ಮತ್ತು ಸಂಭಾವ್ಯ ವಂಚನೆಗಳನ್ನು ಪ್ರತಿಬಿಂಬಿಸುತ್ತವೆ. ಆದುದರಿಂದ ಲಿಖಿತ ದಾಖಲೆಗಳನ್ನು ಏಕೈಕ ಮೂಲವೆಂದು ನಂಬುವ ಹಾಗಿಲ್ಲ. ಈ ಭೌತಿಕ ದಾಖಲೆಯು ಅದರ ಸ್ವಂತ ತಪ್ಪುಗಳಿಗೆ ಅಧೀನವಾಗಿದ್ದರೂ ಸಮಾಜದ ಸ್ಪಷ್ಟ ಚಿತ್ರಣಕ್ಕೆ ಹತ್ತಿರವಾಗಿದೆ, ಉದಾ. ವ್ಯತ್ಯಾಸದ ಗುಣಪರೀಕ್ಷೆ ಮಾಡುವುದು ಮತ್ತು ವಿಶಿಷ್ಟ ಸಂರಕ್ಷಣೆ.[ಸೂಕ್ತ ಉಲ್ಲೇಖನ ಬೇಕು]

ಮಾರ್ಗಗಳು(ಸಾದೃಶ್ಯ ರೂಪಗಳು)

[ಬದಲಾಯಿಸಿ]

ಪುರಾತತ್ತ್ವ ಶಾಸ್ತ್ರದ ಸಿದ್ಧಾಂತಕ್ಕೆ ಎಲ್ಲಾ ಪುರಾತತ್ತ್ವಜ್ಞರು ಒಂದೇ ರೀತಿಯಲ್ಲಿ ಪಾಲಿಸಬಹುದಾದ ಏಕೈಕ ಮಾರ್ಗವಿಲ್ಲ. ಪುರಾತತ್ತ್ವ ಶಾಸ್ತ್ರ 19ನೇ ಶತಮಾನದಲ್ಲಿ ಅಭಿವೃದ್ಧಿಗೊಂಡಾಗ ಇದ್ದ ಪುರಾತತ್ತ್ವ ಶಾಸ್ತ್ರ ಸಿದ್ಧಾಂತದ ಮೊದಲ ಮಾರ್ಗವೆಂದರೆ ಸಾಂಸ್ಕೃತಿಕ-ಇತಿಹಾಸ ಪುರಾತತ್ತ್ವ ಶಾಸ್ತ್ರ. ಇದು ಸಂಸ್ಕೃತಿಗಳು ಉಂಟುಮಾಡಿದ ಸಂಗತಿಗಳ ಬಗ್ಗೆ ಮಾತ್ರ ಕೇಂದ್ರೀಕರಿಸದೆ ಅವು ಏಕೆ ಬದಲಾದವು ಮತ್ತು ಮಾರ್ಪಾಡುಗೊಂಡವು ಎಂಬುದನ್ನು ವಿವರಿಸುವ ಉದ್ದೇಶವನ್ನು ಹೊಂದಿತ್ತು, ಆ ಮೂಲಕ ಐತಿಹಾಸಿಕ ಪ್ರತ್ಯೇಕತಾವಾದದ ಬಗ್ಗೆ ಒತ್ತಿ ಹೇಳಿತು.[೧೪] ಆರಂಭಿಕ 20ನೇ ಶತಮಾನದಲ್ಲಿ ನೇರವಾಗಿ ಪ್ರಸ್ತುತವಿರುವವರೊಂದಿಗೆ (ಸ್ಥಳೀಯ ಅಮೆರಿಕನ್ನರು, ಸೈಬೀರಿಯನ್ನರು, ಮೀಸೊಅಮೆರಿಕನ್ನರು ಮೊದಲಾದವರು) ಹೋಲಿಸುವ ಮೂಲಕ ಹಿಂದಿನ ಸಮಾಜಗಳ ಬಗ್ಗೆ ಅಧ್ಯಯನ ಮಾಡಿದ ಹೆಚ್ಚಿನ ಪುರಾತತ್ತ್ವಜ್ಞರು ನೇರ ಐತಿಹಾಸಿಕ ಮಾರ್ಗವನ್ನು ಅನುಸರಿಸಿದರು, ಅವರು ಹಿಂದಿನ ಮತ್ತು ಆಧುನಿಕ ಜನಾಂಗೀಯ ಮತ್ತು ಸಾಂಸ್ಕೃತಿಕ ಗುಂಪುಗಳ ನಡುವಿನ ನಿರಂತರತೆಯನ್ನು ಹೋಲಿಸಿದರು.[೧೪] 1960ರಲ್ಲಿ ಲೆವಿಸ್ ಬಿನ್‍‌ಫೋರ್ಡ್ ಮತ್ತು ಕೆಂಟ್ ಫ್ಲಾನರಿ ಮೊದಲಾದ ಅಮೆರಿಕಾದ ಪುರಾತತ್ತ್ವಜ್ಞರು ನಿರ್ವಹಿಸಿದ ಪುರಾತತ್ತ್ವಶಾಸ್ತ್ರದ ಕಾರ್ಯಾಚರಣೆಯು ದೃಢೀಕೃತ ಸಾಂಸ್ಕೃತಿಕ-ಇತಿಹಾಸ ಪುರಾತತ್ತ್ವ ಶಾಸ್ತ್ರದ ವಿರುದ್ಧ ಬೆಳೆಯಿತು.[೧೫][೧೬] ಅವರು (ಕಾಲ್ಪನಿಕ) ಊಹನ ಪರೀಕ್ಷೆ ಮತ್ತು ವೈಜ್ಞಾನಿಕ ವಿಧಾನದೊಂದಿಗೆ ಹೆಚ್ಚು "ಮಾನವಚರಿತ್ರೆಯ" ಮತ್ತು "ವೈಜ್ಞಾನಿಕ"ವಾಗಿರುವ "ಹೊಸ ಪುರಾತತ್ತ್ವ ಶಾಸ್ತ್ರ"ವೊಂದನ್ನು ಪ್ರಸ್ತಾಪಿಸಿದರು; ಇದನ್ನು ಈಗ ಪ್ರೊಸೆಶ್ವಲ್(ನಿರಂತರ ಪ್ರಕ್ರಿಯೆಯಲ್ಲಿರುವ) ಪುರಾತತ್ತ್ವ ಶಾಸ್ತ್ರ ಎಂದು ಕರೆಯುತ್ತಾರೆ.[೧೪]

1980ರಲ್ಲಿ ಮೈಕೆಲ್ ಶಾಂಕ್ಸ್,[೧೭][೧೮][೧೯][೨೦] ಕ್ರಿಸ್ಟೋಫರ್ ಟಿಲ್ಲಿ,[೨೧] ಡೇನಿಯಲ್ ಮಿಲ್ಲರ್,[೨೨][೨೩] ಮತ್ತು ಅಯನ್ ಹಾಡರ್,[೨೪][೨೫][೨೬][೨೭][೨೮][೨೯] ಮೊದಲಾದ ಬ್ರಿಟಿಷ್ ಪುರಾತತ್ತ್ವಜ್ಞರು ನಿರ್ವಹಿಸಿದ ಆಧುನಿಕೋತ್ತರ ಕಾರ್ಯವನ್ನು ಪೋಸ್ಟ್-ಪ್ರೊಸೆಶ್ವಲ್(ಪ್ರಕ್ರಿಯೆ-ನಂತರದ) ಪುರಾತತ್ತ್ವ ಶಾಸ್ತ್ರ ಎಂದು ಕರೆಯಲಾಗುತ್ತದೆ. ಇದು ಪ್ರೊಸೆಶ್ವಲಿಸಮ್‌ನ (ನಿರಂತರ ಪ್ರಕ್ರಿಯೆಯ ಅಧ್ಯಯನ) ವೈಜ್ಞಾನಿಕ ಪ್ರತ್ಯಕ್ಷೀಕೃತ ಪ್ರಮಾಣ ಪದ್ಧತಿ ಮತ್ತು ನಿಷ್ಪಕ್ಷಪಾತತೆಯನ್ನು ಪ್ರಶ್ನಿಸಿತು. ಅದರಲ್ಲಿ ಹೆಚ್ಚು ಸ್ವ-ವಿಮರ್ಶೆಯ ಸೈದ್ಧಾಂತಿಕ ಆತ್ಮಾರ್ಥಕತೆಯ ಪ್ರಾಮುಖ್ಯತೆಯನ್ನು ಒತ್ತಿಹೇಳಿತು.[ಸೂಕ್ತ ಉಲ್ಲೇಖನ ಬೇಕು] ಆದರೆ ಈ ಮಾರ್ಗವು ವೈಜ್ಞಾನಿಕ ನಿಖರತೆಯನ್ನು ಹೊಂದಿಲ್ಲವೆಂದು ಪ್ರೊಸೆಶ್ವಲಿಸ್ಟ್‌ಗಳಿಂದ (ಪ್ರಕ್ರಿಯೆ-ಅಧ್ಯಯನ ತಜ್ಞರು) ಟೀಕೆಗೊಳಗಾಗಿದೆ. ಪ್ರೊಸೆಶ್ವಲಿಸಮ್ ಮತ್ತು ಪೋಸ್ಟ್-ಪ್ರೊಸೆಶ್ವಲಿಸಮ್‌ ಎರಡರ ನ್ಯಾಯಸಮ್ಮತತೆಯು ಈಗಲೂ ವಿವಾದದಲ್ಲಿದೆ. ಅದೇ ಸಂದರ್ಭದಲ್ಲಿ, ಪ್ರಕ್ರಿಯೆ ಮತ್ತು ಪ್ರಕ್ರಿಯೆ-ನಂತರದ ಪುರಾತತ್ತ್ವ ಶಾಸ್ತ್ರದ ಇತಿಹಾಸ ಮತ್ತು ಆತ್ಮಾರ್ಥಕತೆಯ ಕಲ್ಪನೆಯ ಮೇಲೆ ಹೆಚ್ಚು ಗಮನ ಹರಿಸಲು ಐತಿಹಾಸಿಕ ಪ್ರೊಸೆಶ್ವಲಿಸಮ್ ಎಂಬ ಮತ್ತೊಂದು ಸಿದ್ಧಾಂತವು ಬೆಳಕಿಗೆ ಬಂದಿತು.[೩೦]

ಪುರಾತತ್ತ್ವ ಶಾಸ್ತ್ರದ ಸಿದ್ಧಾಂತವು ಈಗ ವ್ಯಾಪಕ ವಲಯ-ಪ್ರಭಾವಗಳಿಂದ ಮಾಹಿತಿಗಳನ್ನು ಪಡೆಯುತ್ತದೆ, ಅವುಗಳೆಂದರೆ ನವ-ಡಾರ್ವಿನ್‌ನ ವಿಕಾಸವಾದದ ಚಿಂತನೆ, ಮನೋವಿಕಾಸ ವಿಜ್ಞಾನ, ಆಧುನಿಕೋತ್ತರ-ಅಧ್ಯಯನ, ಏಜೆನ್ಸಿ ಸಿದ್ಧಾಂತ, ಜ್ಞಾನಗ್ರಹಣದ ವಿಜ್ಞಾನ, ಕಾರ್ಯೋದ್ದೇಶ ವಾದ, ಲಿಂಗ-ಆಧರಿತ ಮತ್ತು ಸ್ತ್ರೀಸಮಾನತಾವಾದಿ ಪುರಾತತ್ತ್ವ ಶಾಸ್ತ್ರ ಹಾಗೂ ನಿಯಮಾವಳಿಗಳ ವಿಧಾನ.

ವಿಧಾನಗಳು(ಪದ್ದತಿಗಳು)

[ಬದಲಾಯಿಸಿ]

ಪುರಾತತ್ತ್ವ ಶಾಸ್ತ್ರದ ಪರೀಕ್ಷೆಯು ಸಾಮಾನ್ಯವಾಗಿ ಅನೇಕ ವಿವಿಧ ಹಂತಗಳನ್ನು ಒಳಗೊಳ್ಳುತ್ತದೆ, ಪ್ರತಿಯೊಂದು ಹಂತವು ಅದರದೇ ಆದ ಭಿನ್ನ ವಿಧಾನಗಳನ್ನು ಹೊಂದಿರುತ್ತದೆ. ಯಾವುದೇ ಪ್ರಾಯೋಗಿಕ ಕಾರ್ಯವನ್ನು ಆರಂಭಿಸುವುದಕ್ಕಿಂತ ಮೊದಲು, ಪುರಾತತ್ತ್ವಜ್ಞರು ಏನನ್ನು ಸಾಧಿಸಲು ಪ್ರಯತ್ನಿಸುತ್ತಿದ್ದೇವೆ ಎಂಬ ಸ್ಪಷ್ಟ ಉದ್ದೇಶವನ್ನು ಹೊಂದಿರಬೇಕು. ಮೊದಲನೆಯದಾಗಿ, ಒಂದು ಪ್ರದೇಶವನ್ನು ಅದರ ಬಗ್ಗೆ ಮತ್ತು ಅದರ ಸುತ್ತಮುತ್ತಲ ಪ್ರದೇಶದ ಬಗ್ಗೆ ಸಾಧ್ಯವಾದಷ್ಟು ತಿಳಿಯುವುದಕ್ಕಾಗಿ ಸಮೀಕ್ಷೆ ಮಾಡಲಾಗುತ್ತದೆ. ಎರಡನೆಯದಾಗಿ, ನೆಲದಡಿಯಲ್ಲಿ ಹೂತುಹೋದ ಯಾವುದೇ ಪುರಾತತ್ತ್ವ ಶಾಸ್ತ್ರದ ವೈಶಿಷ್ಟ್ಯಗಳನ್ನು ಬಯಲು ಮಾಡಲು ಉತ್ಖನನವನ್ನು ಮಾಡಲಾಗುತ್ತದೆ. ಮೂರನೆಯದಾಗಿ, ಉತ್ಖನನದಿಂದ ಪುರಾತತ್ತ್ವಜ್ಞರ ಮೂಲ ಸಂಶೋಧನಾ ಉದ್ದೇಶಗಳನ್ನು ಸಾಧಿಸುವುದಕ್ಕಾಗಿ ಸಂಗ್ರಹಿಸಿದ ಮಾಹಿತಿಯನ್ನು ಅಧ್ಯಯನ ಮಾಡಲಾಗುತ್ತದೆ; ನಂತರ ಅರ್ಹತೆ ನಿರ್ಣಯಿಸಲಾಗುತ್ತದೆ. ಇದನ್ನು ನಂತರ ಪ್ರಕಟಗೊಳಿಸಬಹುದಾದ ಉತ್ತಮ ಮಾಹಿತಿಯೆಂದು ಪರಿಗಣಿಸಲಾಗುತ್ತದೆ. ಆ ಮೂಲಕ ಇದು ಇತರ ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರಿಗೆ ಲಭ್ಯವಾಗುತ್ತದೆ, ಆದರೂ ಕೆಲವೊಮ್ಮೆ ಇದು ನಿರ್ಲಕ್ಷಿಸಲ್ಪಡುತ್ತದೆ.[೩೧]

ಸಮೀಕ್ಷೆ

[ಬದಲಾಯಿಸಿ]
ಮಾಂಟೆ ಆಲ್ಬನ್ ಪುರಾತತ್ತ್ವ ಶಾಸ್ತ್ರದ ಪ್ರದೇಶ

ಆಧುನಿಕ ಪುರಾತತ್ತ್ವ ಶಾಸ್ತ್ರದ ಕಾರ್ಯವು ಹೆಚ್ಚಾಗಿ ಸಮೀಕ್ಷೆಯೊಂದಿಗೆ ಆರಂಭವಾಗುತ್ತದೆ. ಪ್ರಾದೇಶಿಕ ಸಮೀಕ್ಷೆಯು ತಿಳಿದಿರದ ಪ್ರದೇಶಗಳನ್ನು ಒಂದು ವಲಯವಾಗಿ ವ್ಯವಸ್ಥಿತವಾಗಿರಿಸುವ ಪ್ರಯತ್ನವಾಗಿದೆ. ಪ್ರದೇಶಗಳ ಸಮೀಕ್ಷೆಯು ಆ ಪ್ರದೇಶದಲ್ಲಿರುವ ಮನೆಗಳು ಮತ್ತು ಸುತ್ತಮುತ್ತಲಿನ ತ್ಯಾಜ್ಯ ಕಸದ ರಾಶಿ ಮೊದಲಾದ ಆಸಕ್ತಿಯ ವೈಶಿಷ್ಟ್ಯಗಳನ್ನು ವ್ಯವಸ್ಥಿತವಾಗಿರಿಸುವ ಪ್ರಯತ್ನವಾಗಿದೆ. ಈ ಎರಡೂ ಗುರಿಗಳನ್ನು ಹೆಚ್ಚುಕಡಿಮೆ ಒಂದೇ ರೀತಿಯ ವಿಧಾನಗಳಿಂದ ಸಾಧಿಸಲಾಗುತ್ತದೆ.

ಸಮೀಕ್ಷೆಯನ್ನು ಪುರಾತತ್ತ್ವ ಶಾಸ್ತ್ರದ ಆರಂಭಿಕ ದಿನಗಳಲ್ಲಿ ವ್ಯಾಪಕವಾಗಿ ಮಾಡಲಾಗುತ್ತಿರಲಿಲ್ಲ. ಸಾಂಸ್ಕೃತಿಕ ಇತಿಹಾಸಕಾರು ಮತ್ತು ಹಿಂದಿನ ಸಂಶೋಧಕರು ಸಾಮಾನ್ಯವಾಗಿ ಸ್ಥಳೀಯ ಸ್ಮಾರಕ ಪ್ರದೇಶಗಳನ್ನು ಶೋಧಿಸುತ್ತಿದ್ದರು.ಅದಲ್ಲದೇ ಅಲ್ಲಿ ಕೇವಲ ಸ್ಪಷ್ಟವಾಗಿ ಗೋಚರಿಸುವ ವೈಶಿಷ್ಟ್ಯಗಳನ್ನು ಮಾತ್ರ ಉತ್ಖನನ ಮಾಡುತ್ತಿದ್ದರು. ಗಾರ್ಡನ್ ವಿಲ್ಲೆ, ಪ್ರಾದೇಶಿಕ ನೆಲೆಯ ಮಾದರಿಯ ಸಮೀಕ್ಷೆಯ ವಿಧಾನ ಬಳಸುವಲ್ಲಿ ಮೊದಲಿಗನಾಗಿದ್ದಾನೆ, ಈತನು 1949ರಲ್ಲಿ ಪೆರುವಿನ ಕರಾವಳಿಯ ವಿರು ವ್ಯಾಲಿಯ ಸಮೀಕ್ಷೆ ನಡೆಸಿದನು.[೩೨][೩೩] ಎಲ್ಲಾ ಹಂತಗಳ ಸಮೀಕ್ಷೆಯು ಕೆಲವು ವರ್ಷಗಳ ನಂತರ (ನಿರಂತರ ಪ್ರಕ್ರಿಯೆಯ)ಪ್ರೊಸೆಶ್ವಲ್ ಪುರಾತತ್ತ್ವ ಶಾಸ್ತ್ರದ ಪ್ರಗತಿಯಲ್ಲಿ ಪ್ರಮುಖವಾಯಿತು.[೩೪]

ಸಮೀಕ್ಷೆ ಕಾರ್ಯವನ್ನು ಆರಂಭಿಕ ಕಾರ್ಯವಾಗಿ ಮಾಡಿದರೆ ಅಥವಾ ಉತ್ಖನನದ ಬದಲಿಗೆ ಮಾಡಿದರೆ ಅದು ಅನೇಕ ಪ್ರಯೋಜನಗಳನ್ನು ಹೊಂದಿರುತ್ತದೆ. ಇದನ್ನು ಹೆಚ್ಚುಕಡಿಮೆ ಅಲ್ಪಾವಧಿ ಮತ್ತು ಕಡಿಮೆ ಖರ್ಚಿನಲ್ಲಿ ಮಾಡಬಹುದು, ಏಕೆಂದರೆ ಇದಕ್ಕೆ ಹಸ್ತಕೃತಿಗಳನ್ನು ಶೋಧಿಸಲು ಹೆಚ್ಚಿನ ಪ್ರಮಾಣದ ಮಣ್ಣನ್ನು ಸಂಸ್ಕರಿಸುವ ಅವಶ್ಯಕತೆ ಇರುವುದಿಲ್ಲ. (ಆದರೂ, ದೊಡ್ಡ ಪ್ರದೇಶವನ್ನು ಸಮೀಕ್ಷೆ ಮಾಡುವುದು ದುಬಾರಿಯಾಗಿರಬಹುದು, ಆದ್ದರಿಂದ ಪುರಾತತ್ತ್ವಜ್ಞರು ಹೆಚ್ಚಾಗಿ ಮಾದರಿಯ ಮೂಲಕ ಗುಣಮಟ್ಟ ನಿರ್ಧರಿಸುವ ವಿಧಾನಗಳನ್ನು ಬಳಸುತ್ತಾರೆ.)[೩೫] ವಿನಾಶಕಾರಿಯಲ್ಲದ ಪುರಾತತ್ತ್ವ ಶಾಸ್ತ್ರದ ಇತರ ವಿಧಾನಗಳಂತೆ ಸಮೀಕ್ಷೆಯು ಉತ್ಖನನದ ಮೂಲಕ ಪ್ರದೇಶವನ್ನು ನಾಶಮಾಡುವುದಕ್ಕೆ ಸಂಬಂಧಿಸಿದ ನಿಯಮಗಳನ್ನು ಬಳಸುವುದಿಲ್ಲ. ಇದು ನೆಲೆಯ ಮಾದರಿ ಮತ್ತು ನೆಲೆಯ ರಚನೆಯಂತಹ ಕೆಲವು ರೀತಿಯ ಮಾಹಿತಿಯನ್ನು ಪಡೆಯುವ ಏಕೈಕ ಮಾರ್ಗವಾಗಿದೆ. ಸಮೀಕ್ಷೆಯ ಮಾಹಿತಿಯನ್ನು ಸಾಮಾನ್ಯವಾಗಿ ನಕ್ಷೆಗಳಾಗಿ ಒಟ್ಟುಗೂಡಿಸಲಾಗುತ್ತದೆ. ಈ ನಕ್ಷೆಗಳು ಮೇಲ್ಮೆ ಲಕ್ಷಣಗಳನ್ನು ಮತ್ತು/ಅಥವಾ ಹಸ್ತಕೃತಿಗಳ ಹಂಚಿಕೆಯನ್ನು ತೋರಿಸುತ್ತವೆ.

ಮೇಲ್ಮೆ ಸಮೀಕ್ಷೆಯು ಅತ್ಯಂತ ಸರಳ ಸಮೀಕ್ಷಾ ವಿಧಾನವಾಗಿದೆ. ಈ ವಿಧಾನದಲ್ಲಿ, ಪ್ರದೇಶದ ಮೇಲ್ಮೆಯಲ್ಲಿ ಗೋಚರವಾಗುವ ವೈಶಿಷ್ಟ್ಯಗಳು ಅಥವಾ ಹಸ್ತಕೃತಿಗಳನ್ನು ಶೋಧಿಸುವುದಕ್ಕಾಗಿ ಸಾಮಾನ್ಯವಾಗಿ ಕಾಲ್ನಡಿಗೆಯಲ್ಲಿ ಕೆಲವೊಮ್ಮೆ ಯಂತ್ರಚಾಲಿತ ಸಾರಿಗೆಯನ್ನು ಬಳಸಿಕೊಂಡು ಆ ಪ್ರದೇಶದ ಮಾಹಿತಿಯನ್ನು ಸಂಗ್ರಹಿಸಲಾಗುತ್ತದೆ. ಮೇಲ್ಮೆ ಸಮೀಕ್ಷೆಯು ಸಂಪೂರ್ಣವಾಗಿ ಭೂಮಿಯಡಿಯಲ್ಲಿ ಹೂತುಹೋಗಿರುವ ಅಥವಾ ಗಿಡಗಂಟೆಯಿಂದ ಮುಚ್ಚಿದ ಪ್ರದೇಶಗಳನ್ನು ಅಥವಾ ವೈಶಿಷ್ಟ್ಯಗಳನ್ನು ಪತ್ತೆಹಚ್ಚುವುದಿಲ್ಲ. ಮೇಲ್ಮೆ ಸಮೀಕ್ಷೆಯು ಸಣ್ಣ-ಉತ್ಖನನ ವಿಧಾನಗಳನ್ನೂ ಒಳಗೊಳ್ಳಬಹುದು, ಉದಾ. ಬೈರಿಗೆ, ದಿಂಡುಕೊರೆಗ(ಕೋರರ್) ಮತ್ತು ಗೋರು ಯಂತ್ರದಿಂದ ಮಾಡಿದ ಶೋಧಕ ಗುಂಡಿಗಳು. ಯಾವುದೇ ವಸ್ತು ಕಂಡುಬರದಿದ್ದರೆ, ಸಮೀಕ್ಷೆ ಮಾಡಲಾದ ಪ್ರದೇಶವನ್ನು ಬಂಜರು ಭೂಮಿಯೆಂದು ಭಾವಿಸಲಾಗುತ್ತದೆ.

ವೈಮಾನಿಕ ಸಮೀಕ್ಷೆಯನ್ನು ವಿಮಾನಗಳು, ಬಲೂನುಗಳು ಅಥವಾ ಗಾಳಿಪಟಗಳಿಗೆ ಜೋಡಿಸಲಾದ ಕ್ಯಾಮೆರಾಗಳನ್ನು ಬಳಸಿಕೊಂಡು ನಿರ್ವಹಿಸಲಾಗುತ್ತದೆ. ದೊಡ್ಡ ಅಥವಾ ಸಂಕೀರ್ಣ ಪ್ರದೇಶಗಳ ಶೀಘ್ರ ನಕ್ಷೆಗೆ ಆ ಪ್ರದೇಶದ ಒಂದು ಪಕ್ಷಿ-ನೋಟವು ಉಪಯುಕ್ತವಾಗಿರುತ್ತದೆ. ವೈಮಾನಿಕ ಛಾಯಾಚಿತ್ರಗಳನ್ನು ಪುರಾತತ್ತ್ವ ಶಾಸ್ತ್ರದ ತೋಡುಗುಂಡಿಯ ಸ್ಥಿತಿಯನ್ನು ದಾಖಲಿಸಲು ಬಳಸಲಾಗುತ್ತದೆ. ವೈಮಾನಿಕ ಸಮೀಕ್ಷೆಯು ಮೇಲ್ಮೆಯಿಂದ ಗೋಚರವಾಗದ ಅಂಶಗಳನ್ನೂ ಪತ್ತೆಹಚ್ಚಬಹುದು. ಕಲ್ಲಿನ ಗೋಡೆಗಳಂತಹ ಮಾನವ ನಿರ್ಮಿತ ರಚನೆಗಳ ಮೇಲಿನ ಸಸ್ಯಗಳು ತುಂಬಾ ನಿಧಾನವಾಗಿ ಬೆಳೆಯುತ್ತವೆ. ಅದೇ ಇತರ ವೈಶಿಷ್ಟ್ಯಗಳ (ಉದಾ. ಕಸದ ರಾಶಿ ) ಮೇಲಿನ ಸಸ್ಯಗಳು ಹೆಚ್ಚು ವೇಗವಾಗಿ ಬೆಳೆಯುತ್ತವೆ. ಬೆಳವಣಿಗೆಯ ಸಂದರ್ಭದಲ್ಲಿ ತೀವ್ರಗತಿಯಲ್ಲಿ ಬಣ್ಣವನ್ನು ಬದಲಾಯಿಸುವ ಬಲಿಯುತ್ತಿರುವ ಧಾನ್ಯದ ಛಾಯಾಚಿತ್ರವು ಹೂತುಹೋಗಿರುವ ರಚನೆಗಳ ಬಗ್ಗೆ ಹೆಚ್ಚು ನಿಖರವಾದ ಮಾಹಿತಿಯನ್ನು ಪ್ರಕಟಪಡಿಸುತ್ತವೆ. ದಿನದ ಬೇರೆ ಬೇರೆ ಸಮಯದಲ್ಲಿ ತೆಗೆದ ವೈಮಾನಿಕ ಛಾಯಾಚಿತ್ರಗಳು ಪ್ರತಿಬಿಂಬದಲ್ಲಿನ ಬದಲಾವಣೆಗಳ ಮೂಲಕ ರಚನೆಗಳ ರೂಪರೇಖೆಯನ್ನು ತೋರಿಸುತ್ತವೆ. ವೈಮಾನಿಕ ಸಮೀಕ್ಷೆಯು ಅವರೋಹಿತ, ನೆಲ-ಭೇದಿಸಿಕೊಂಡು ಹೋಗುವ ರೇಡಾರ್ ತರಂಗದೂರಗಳು, LiDAR ಮತ್ತು ಉಷ್ಣಲೇಖನ ಮೊದಲಾದವನ್ನೂ ಬಳಸಿಕೊಳ್ಳುತ್ತದೆ.

ಭೂಭೌತವಿಜ್ಞಾನದ ಸಮೀಕ್ಷೆಯು ಭೂಮಿಯ ಕೆಳಗಿರುವುದನ್ನು ನೋಡುವ ಹೆಚ್ಚು ಪರಿಣಾಮಕಾರಿ ಮಾರ್ಗವಾಗಿದೆ. ಮ್ಯಾಗ್ನೆಟೊಮೀಟರ್‌‌ಗಳು ಕಬ್ಬಿಣ ಪ್ರಾಕ್ತನ ಹಸ್ತ ಕೃತಿಗಳು, ಆವಿಗೆ(ಕಿಲ್ನ್), ಕೆಲವು ರೀತಿಯ ಶಿಲಾ ರಚನೆಗಳು, ಹಳ್ಳ ಮತ್ತು ತಿಪ್ಪೆ,ಕಸದ ರಾಶಿ ಮೊದಲಾದವುಗಳಿಂದ ಉಂಟಾಗುವ ಭೂಮಿಯ ಕಾಂತಕ್ಷೇತ್ರದಲ್ಲಿನ ಸಣ್ಣ ಪ್ರಮಾಣದ ವಿಚಲನವನ್ನು ಪತ್ತೆಹಚ್ಚುತ್ತವೆ. ಮಣ್ಣಿನ ವಿದ್ಯುತ್ ರೋಧಶೀಲತೆಯನ್ನು ಅಳೆಯುವ ಸಾಧನಗಳನ್ನೂ ಸಹ ವ್ಯಾಪಕವಾಗಿ ಬಳಸಲಾಗುತ್ತದೆ. ಸುತ್ತಮುತ್ತಲಿನ ಮಣ್ಣಿನ ವಿದ್ಯುತ್ ರೋಧಶೀಲತೆಯೊಂದಿಗೆ ಭೇದವನ್ನು ತೋರಿಸುವ ರೋಧಶೀಲತೆಯ ಪುರಾತತ್ತ್ವ ಶಾಸ್ತ್ರದ ವೈಶಿಷ್ಟ್ಯಗಳನ್ನು ಕಂಡುಹಿಡಿದು, ನಕ್ಷೆ ರೂಪಿಸಲಾಗುತ್ತದೆ. ಕೆಲವು ಪುರಾತತ್ತ್ವ ಶಾಸ್ತ್ರದ ವೈಶಿಷ್ಟ್ಯಗಳು (ಉದಾ. ಕಲ್ಲು ಅಥವಾ ಇಟ್ಟಿಗೆಗಳಿಂದ ರಚಿತವಾದವು.) ಮಾದರಿ ಮಣ್ಣಿಗಿಂತ ಹೆಚ್ಚು ರೋಧಶೀಲತೆಯನ್ನು ಹೊಂದಿರುತ್ತವೆ, ಮತ್ತೆ ಕೆಲವು (ಉದಾ. ಜೈವಿಕ ಸಂಚಯ ಅಥವಾ ಸುಡದ ಜೇಡಿಮಣ್ಣು) ಕಡಿಮೆ ರೋಧಶೀಲತೆಯನ್ನು ಹೊಂದಿರುತ್ತವೆ.

ಕೆಲವು ಪುರಾತತ್ತ್ವಜ್ಞರು ಲೋಹದ ಶೋಧಕಗಳನ್ನು ಬಳಸುವುದು ಸಂಪತ್ತಿನ ಅನ್ವೇಷಣೆಗೆ ಸಮವಾಗಿರುತ್ತದೆಂದು ಪರಿಗಣಿಸುತ್ತಾರೆ, ಮತ್ತೆ ಕೆಲವರು ಅವು ಪುರಾತತ್ತ್ವ ಶಾಸ್ತ್ರ ಸಮೀಕ್ಷೆಯಲ್ಲಿನ ಒಂದು ಪರಿಣಾಮಕಾರಿ ಸಾಧನವೆಂದು ಅಭಿಪ್ರಾಯ ಪಡುತ್ತಾರೆ. ಸಂಪತ್ತಿನ ಅನ್ವೇಷಣೆಗಾಗಿ ಲೋಹದ ಶೋಧಕಗಳ ಪುರಾತತ್ತ್ವ ಶಾಸ್ತ್ರದ-ಬಳಕೆಗೆ ಉದಾಹರಣೆಗಳೆಂದರೆ - ಇಂಗ್ಲಿಷ್ ಆಂತರಿಕ ಕದನದ ಯುದ್ಧ-ಭೂಮಿಯಲ್ಲಿನ ಮಸ್ಕೆಟ್‌ಬಾಲ್‌(ಬಂದೂಕಿನ ಗುಂಡುಗಳು) ಹಂಚಿಕೆಯ ವಿಶ್ಲೇಷಣೆ, ಹತ್ತೊಂಭತ್ತನೇ ಶತಮಾನದ ನೌಕಾಘಾತದ ಉತ್ಖನನಕ್ಕೆ ಮುಂಚಿನ ಲೋಹದ ಹಂಚಿಕೆಯ ವಿಶ್ಲೇಷಣೆ ಮತ್ತು ಯೋಗ್ಯತೆಯ ನಿರ್ಣಯಿಸುವ ಸಂದರ್ಭದಲ್ಲಿ ಸಂವಹನ ಕೇಬಲ್ಅನ್ನು ಇರಿಸುವುದು. ಲೋಹದ ಶೋಧಕಗಳು ಪುರಾತತ್ತ್ವ ಶಾಸ್ತ್ರದ ದಾಖಲೆಯಲ್ಲೂ ಪ್ರಮುಖ ಕೊಡುಗೆಯನ್ನು ನೀಡಿವೆ, ಅಲ್ಲಿ ಅವುಗಳ ಫಲಿತಾಂಶಗಳ ಸವಿವರ ದಾಖಲೆಗಳನ್ನು ಮಾಡಿವೆ. ಅದಲ್ಲದೇ ಪುರಾತತ್ತ್ವ ಶಾಸ್ತ್ರ ಸಾಂದರ್ಭಿಕ ಹಸ್ತ ಕೃತಿಗಳಿಂದ ವಿಮುಖವಾಗಿವೆ. UKಯಲ್ಲಿ ಲೋಹದ ಶೋಧಕಗಳನ್ನು ಪೋರ್ಟೇಬಲ್ ಆಂಟಿಕ್ವಿಟೀಸ್ ಸ್ಕೀಮ್‌ನಲ್ಲಿ ಬಳಸಲು ಅನುಮತಿ ನೀಡಲಾಗಿದೆ.

ನೀರಿನೊಳಗಿನ ಪುರಾತತ್ತ್ವ ಶಾಸ್ತ್ರದ ಪ್ರಾದೇಶಿಕ ಸಮೀಕ್ಷೆಯು ಭೂಭೌತಶಾಸ್ತ್ರದ ಅಥವಾ ದೂರ-ಸಂವೇದನೆಯ ಸಾಧನಗಳಾದ ಸಮುದ್ರ ಮ್ಯಾಗ್ನೆಟೊಮೀಟರ್‌, ಸೈಡ್-ಸ್ಕ್ಯಾನ್ ಸೋನಾರ್ ಅಥವಾ ಸಬ್-ಬಾಟಮ್ ಸೋನಾರ್ ನ್ನು ಬಳಸುತ್ತದೆ.

ಉತ್ಖನನ

[ಬದಲಾಯಿಸಿ]
3800-ವರ್ಷ ಹಳೆಯ ಅಯೋವದ ಎಡ್ಜ್‌ವಾಟರ್ ಪಾರ್ಕ್ ಪ್ರದೇಶದಲ್ಲಿನ ಉತ್ಖನನ
ಆಸ್ಟ್ರಿಯಾದ ವಿಲ್ (ಇನ್ಲ್‌ಬ್ರಕ್)ನಲ್ಲಿ ಇತಿಹಾಸ-ಪೂರ್ವ ಗುಹೆಗಳನ್ನು ಅನ್ವೇಷಿಸಿದ ಪುರಾತತ್ತ್ವ ಶಾಸ್ತ್ರದ ಉತ್ಖನನ
ಒಬ್ಬ ಪುರಾತತ್ತ್ವಜ್ಞ ವೇಕ್ ಐಲ್ಯಾಂಡ್‌ನಲ್ಲಿ POW ಅವಶೇಷಗಳಿಗಾಗಿ ಜರಡಿಯಾಡಿಸುತ್ತಿರುವುದು.

ಪುರಾತತ್ತ್ವ ಶಾಸ್ತ್ರದ ಉತ್ಖನನವು ಅದು ಹವ್ಯಾಸಿಗರ ವ್ಯಾಪ್ತಿಯಲ್ಲಿರುವಾಗಲೇ ಕಂಡುಬಂದಿತ್ತು. ಅಲ್ಲದೇ ಇದು ಹೆಚ್ಚಿನ ಕ್ಷೇತ್ರ ಯೋಜನೆಗಳಲ್ಲಿ ಪುನಃಪಡೆದುಕೊಂಡ ಮಾಹಿತಿಯ ಮೂಲವನ್ನು ಉಳಿಸಿಕೊಂಡಿದೆ. ಇದು ಸಾಮಾನ್ಯವಾಗಿ ಸಮೀಕ್ಷೆಯಿಂದ ಪಡೆಯಲಾಗದ ಹಲವಾರು ಪ್ರಕಾರದ ಮಾಹಿತಿಯನ್ನು ಹೊರಗೆಡವಬಹುದು, ಉದಾ. ಸ್ತರವಿಜ್ಞಾನ, ಮೂರು ಆಯಾಮದ (ಘನಾಕೃತಿಯ) ರಚನೆ ಮತ್ತು ತಾಳೆ ನೋಡಬಹುದಾದ ಪ್ರಾಥಮಿಕ ಸನ್ನಿವೇಶದ ಚಿತ್ರಣ.

ಆಧುನಿಕ ಉತ್ಖನನ ವಿಧಾನಗಳಲ್ಲಿ ವಸ್ತುಗಳ ಮತ್ತು ವೈಶಿಷ್ಟ್ಯಗಳ ನಿಖರವಾದ ಸ್ಥಾನಗಳನ್ನು, ಅವುಗಳ ಮೂಲಸ್ಥಾನವೆಂದು ಕರೆಯಲಾಗುತ್ತದೆ, ದಾಖಲಿಸಿಕೊಳ್ಳುವುದು ಅಗತ್ಯವಾಗಿರುತ್ತದೆ. ಇದರಲ್ಲಿ ಅವುಗಳ ಸಮಾಂತರ ಸ್ಥಾನಗಳನ್ನು ಮತ್ತು ಕೆಲವೊಮ್ಮೆ ಲಂಬವಾಗಿರುವ ಸ್ಥಾನವನ್ನೂ ಗುರುತಿಸಲಾಗುತ್ತದೆ. (ಪುರಾತತ್ತ್ವ ಶಾಸ್ತ್ರದ ಪ್ರಾಥಮಿಕ ನಿಯಮಗಳನ್ನೂ ಗಮನಿಸಿ). ಅದೇ ರೀತಿ, ಹತ್ತಿರದ ವಸ್ತುಗಳು ಮತ್ತು ವೈಶಿಷ್ಟ್ಯಗಳೊಂದಿಗಿನ ಅವುಗಳ ಒಂದುಗೂಡುವಿಕೆ ಅಥವಾ ಸಂಬಂಧವನ್ನು ನಂತರದ ವಿಶ್ಲೇಷಣೆಗಾಗಿ ದಾಖಲಿಸಬೇಕಾಗುತ್ತದೆ. ಇದು ಪುರಾತತ್ತ್ವಜ್ಞರಿಗೆ ಯಾವ ಹಸ್ತಕೃತಿ ನಿರ್ಮಿತಿಗಳು ಮತ್ತು ಅದರ ವೈಶಿಷ್ಟ್ಯಗಳನ್ನು ಒಟ್ಟಿಗೆ ಬಳಸಲು ಅನುಕೂಲಾಗಿದೆ. ಅಲ್ಲದೇ ಯಾವುದು ವಿವಿಧ ಹಂತಗಳ ಕ್ರಿಯಾಶೀಲತೆಯನ್ನು ಹೊಂದಿವೆ ಎಂಬುದನ್ನು ತಿಳಿಯಲು ಅವಕಾಶ ಮಾಡಿಕೊಡುತ್ತದೆ. ಉದಾಹರಣೆಗಾಗಿ, ಒಂದು ಪ್ರದೇಶದ ಉತ್ಖನನವು ಅದರ ಸ್ತರವಿಜ್ಞಾನದ ಬಗ್ಗೆ ತಿಳಿಸುತ್ತದೆ; ಒಂದು ಪ್ರದೇಶದಲ್ಲಿ ವಿಭಿನ್ನ ಸಂಸ್ಕೃತಿಗಳ ಪರಂಪರೆಯಿದ್ದರೆ, ಇತ್ತೀಚಿನ ಸಂಸ್ಕೃತಿಗಳ ಹಸ್ತಕೃತಿ ನಿರ್ಮಾಣಗಳು ಪುರಾತನ ಸಂಸ್ಕೃತಿಗಳ ಆಧಾರದಲ್ಲಿ ಕಂಡುಬರುತ್ತವೆ.

ಉತ್ಖನನವು ಪುರಾತತ್ತ್ವ ಶಾಸ್ತ್ರದ ಸಂಶೋಧನೆಯಲ್ಲಿ ಹೆಚ್ಚು ದುಬಾರಿ ಹಂತವಾಗಿದೆ. ಅಲ್ಲದೆ ಇದು ವಿನಾಶಕಾರಿ ಪ್ರಕ್ರಿಯೆಯಾಗಿದ್ದು, ನೈತಿಕ ಕಳವಳವನ್ನು ಒಳಗೊಂಡಿದೆ. ಆದ್ದರಿಂದ ಕೆಲವು ಪ್ರದೇಶಗಳನ್ನು ಮಾತ್ರ ಸಂಪೂರ್ಣವಾಗಿ ಉತ್ಖನನ ಮಾಡಲಾಗಿದೆ. ಉತ್ಖನನ ಮಾಡಲಾದ ಪ್ರದೇಶದ ಪ್ರಮಾಣವು ಹೆಚ್ಚಾಗಿ ರಾಷ್ಟ್ರವನ್ನು ಮತ್ತು ನೀಡಲಾದ ಕ್ರಮಬದ್ಧ ವಿವರಣೆಯನ್ನು ಆಧರಿಸಿರುತ್ತದೆ. ಅಪರೂಪದ ಸ್ಥಳಗಳಲ್ಲಿ 90% ಉತ್ಖನನವು ಸಾಮಾನ್ಯವಾಗಿರುತ್ತದೆ. ಮಾದರಿಯ ಮೂಲಕ ಗುಣಮಟ್ಟ ನಿರ್ಧರಿಸುವುದು ಸಮೀಕ್ಷೆಗಿಂತ ಉತ್ಖನನದಲ್ಲಿ ಹೆಚ್ಚು ಮುಖ್ಯವಾಗಿರುತ್ತದೆ. ಉತ್ಖನನದಲ್ಲಿ ವಿಶೇಷವಾಗಿ ಮಣ್ಣಿನ ಮೇಲುಪದರವನ್ನು (ಅತಿಭಾರ ) ತೆಗೆದುಹಾಕಲು(ಮಣ್ಣೆತ್ತಲು ಬಳಸುವ ದೊಡ್ಡ ಹರಿವಾಣ) ಬ್ಯಾಕ್‌ಶೂ (JCB) ಮೊದಲಾದ ದೊಡ್ಡ ಯಾಂತ್ರಿಕ ಸಾಧನಗಳನ್ನು ಬಳಸುವುದು ಸಾಮಾನ್ಯವಾಗಿರುತ್ತದೆ, ಆದರೂ ಈ ವಿಧಾನವನ್ನು ತುಂಬಾ ಎಚ್ಚರಿಕೆಯಿಂದ ಮಾಡಲಾಗುತ್ತದೆ. ಇದರಿಂದ ತೆರೆದುಕೊಂಡ ಪ್ರದೇಶವನ್ನು ಸಾಮಾನ್ಯವಾಗಿ ಎತ್ತುಗ(ಟ್ರೋವೆಲ್) ಅಥವಾ ಕಳೆ ತೆಗೆವ ಗುದ್ದಲಿ(ಹೋ)ಗಳನ್ನು ಬಳಸಿಕೊಂಡು ಆ ಎಲ್ಲಾ ವೈಶಿಷ್ಟ್ಯಗಳು ಸ್ಪಷ್ಟವಾಗಿ ಗೋಚರಿಸುವಂತೆ ಸ್ವಚ್ಛಗೊಳಿಸಲಾಗುತ್ತದೆ.

ಮುಂದಿನ ಕಾರ್ಯವೆಂದರೆ ಕ್ಷೇತ್ರ ಯೋಜನೆಯನ್ನು ರೂಪಿಸುವುದು ಮತ್ತು ಅನಂತರ ಅದನ್ನು ಉತ್ಖನನದ ವಿಧಾನವನ್ನು ನಿರ್ಧರಿಸಲು ಬಳಸುವುದು. ನೈಸರ್ಗಿಕ ಕೆಳಮಣ್ಣಿನಲ್ಲಿ ಹೂತುಹೋಗಿರುವ ವೈಶಿಷ್ಟ್ಯಗಳನ್ನು ಸಾಮಾನ್ಯವಾಗಿ ದಾಖಲೆಗಾಗಿ ಸ್ಪಷ್ಟ ಪುರಾತತ್ತ್ವ ಶಾಸ್ತ್ರದ ಭಾಗವನ್ನು ಒದಗಿಸಲು ಭಾಗಶಃ ಉತ್ಖಖನನ ಮಾಡಲಾಗುತ್ತದೆ. ಇದರ ಒಂದು ಲಕ್ಷಣವೆಂದರೆ, ಉದಾಹರಣೆಗಾಗಿ ಒಂದು ಹಳ್ಳ ಅಥವಾ ಕಂದಕ, ಎರಡು ಭಾಗಗಳನ್ನು ಹೊಂದಿರುತ್ತದೆ: (ಸೀಳು ಭಾಗ)ಸಂದು(ಕಟ್) ಮತ್ತು (ಹೂತು ಹಾಕುವ ಪ್ರಕ್ರಿಯೆ)ಭರ್ತಿ(ಫಿಲ್). ಸಂದು, ಈ ವೈಶಿಷ್ಟ್ಯವು ನೈಸರ್ಗಿಕ ಮಣ್ಣನ್ನು ತಲುಪುವ ಅಂಚನ್ನು ನಿರೂಪಿಸುತ್ತದೆ. ಇದು ವೈಶಿಷ್ಟ್ಯದ ಗಡಿರೇಖೆಯಾಗಿರುತ್ತದೆ. ಭರ್ತಿಯು ವೈಶಿಷ್ಟ್ಯವು ಯಾವುದರಿಂದ ಭರ್ತಿಯಾಗಿದೆ ಎಂಬುದನ್ನು ಸೂಚಿಸುತ್ತದೆ. ಅದಲ್ಲದೇ ಇದು ಹೆಚ್ಚಾಗಿ ನೈಸರ್ಗಿಕ ಮಣ್ಣಿನಿಂದ ಸ್ವಲ್ಪ ವಿಭಿನ್ನವಾಗಿರುತ್ತದೆ. ಸಂದು(ಸೀಳಿಹೋದ ಭಾಗ) ಮತ್ತು ಭರ್ತಿಗೆ ದಾಖಲೆಯ ಉದ್ದೇಶಗಳಿಗಾಗಿ ಅನುಕ್ರಮ ಸಂಖ್ಯೆಗಳನ್ನು ನೀಡಲಾಗಿದೆ. ಪ್ರತಿಯೊಂದು ವೈಶಿಷ್ಟ್ಯಗಳ ಅಂದಾಜು ಮಾಡಲಾದ ಯೋಜನೆಗಳ ಮತ್ತು ವಿಭಾಗಗಳ ನಕ್ಷೆ ರೂಪಿಸಲಾಗುತ್ತದೆ, ಅವುಗಳ ಕಪ್ಪು-ಬಿಳುಪು ಮತ್ತು ವರ್ಣಛಾಯಾಚಿತ್ರ ತೆಗೆಯಲಾಗುತ್ತದೆ. ಅಲ್ಲದೇ ಪ್ರತಿಯೊಂದು ಸಂದರ್ಭದ ಸನ್ನಿವೇಶವನ್ನು ವಿವರಿಸಿ ದಾಖಲೆಯ ಪತ್ರಗಳಲ್ಲಿ ನಮೂದಿಸಲಾಗುತ್ತದೆ. ಈ ಎಲ್ಲಾ ಮಾಹಿತಿಯು ಈಗ-ನಾಶವಾಗಿರುವ ಪುರಾತತ್ತ್ವ ಶಾಸ್ತ್ರದ ಶಾಶ್ವತ ದಾಖಲೆಯಾಗುತ್ತದೆ. ಮುಂದೆ ಅದನ್ನು ಆ ಪ್ರದೇಶದ ಬಗ್ಗೆ ವಿವರಿಸುವಾಗ ಬಳಸಿಕೊಳ್ಳಲಾಗುತ್ತದೆ.

ವಿಶ್ಲೇಷಣೆ

[ಬದಲಾಯಿಸಿ]

ಒಮ್ಮೆ ಹಸ್ತಕೃತಿ ನಿರ್ಮಿತಿಗಳನ್ನು ಮತ್ತು ರಚನೆಗಳನ್ನು ಉತ್ಖನನ ಮಾಡಿದ ನಂತರ ಅಥವಾ ಮೇಲ್ಮೆ ಸಮೀಕ್ಷೆಗಳಿಂದ ಸಂಗ್ರಹಿಸಿದ ನಂತರ, ಸಾಧ್ಯವಾದಷ್ಟು ಮಾಹಿತಿ ಪಡೆಯುವುದಕ್ಕಾಗಿ ಅವುಗಳ ಬಗ್ಗೆ ನಿಷ್ಕೃಷ್ಟವಾಗಿ ಅಧ್ಯಯನ ಮಾಡುವುದು ಅಗತ್ಯವಾಗಿರುತ್ತದೆ. ಇದನ್ನು ಉತ್ಖನನ-ನಂತರದ ವಿಶ್ಲೇಷಣೆ ಎಂದು ಕರೆಯುತ್ತಾರೆ. ಅದಲ್ಲದೇ ಇದು ಸಾಮಾನ್ಯವಾಗಿ ಪುರಾತತ್ತ್ವ ಶಾಸ್ತ್ರದ ಪರೀಕ್ಷೆಯಲ್ಲೇ ಹೆಚ್ಚು ಸಮಯ ತೆಗೆದುಕೊಳ್ಳುವ ಭಾಗವಾಗಿದೆ. ಪ್ರಮುಖ ಪ್ರದೇಶಗಳ ಬಗ್ಗೆ ಅಂತಿಮ ಉತ್ಖನನ ವರದಿಗಳನ್ನು ಪ್ರಕಟಿಸಲು ಅನೇಕ ವರ್ಷಗಳು ಬೇಕಾಗುವುದು ಸಾಮಾನ್ಯವಾಗಿರುತ್ತದೆ.

ಮೂಲದಲ್ಲಿ ಕಂಡುಬಂದ ಹಸ್ತಕೃತಿಗಳನ್ನು ಸಂಕೇತದ ಅಧ್ಯಯನಕ್ಕೆ ಸಂಬಂಧಿಸಿದಂತೆ ವರ್ಗೀಕರಿಸಲು ಮತ್ತು ಅಂತಹುದೇ ಹಸ್ತಕೃತಿಯ ಸಂಯೋಜನೆಯ ಇತರ ಪ್ರದೇಶಗಳನ್ನು ಗುರುತಿಸಲು ಅವುಗಳನ್ನು ಸ್ಪಷ್ಟಗೊಳಿಸಿ, ಸೂಚಿ ತಯಾರಿಸಲಾಗುತ್ತದೆ; ಅಲ್ಲದೇ ಪ್ರಕಟಿತ ಸಂಗ್ರಹಗಳೊಂದಿಗೆ ಹೋಲಿಸಲಾಗುತ್ತದೆ. ಪುರಾತತ್ತ್ವ ಶಾಸ್ತ್ರದ ವಿಜ್ಞಾನದ ಮೂಲಕ ಹೆಚ್ಚು ವ್ಯಾಪಕ ವಿಶ್ಲೇಷಣಾತ್ಮಕ ವಿಧಾನಗಳು ಲಭ್ಯವಿರುತ್ತವೆ, ಅಂದರೆ ಆಗ ದೊರೆತ ಹಸ್ತಕೃತಿಗಳ ಕಾಲಗಣನೆ ಮಾಡಿ, ಅವುಗಳ ಸಂಯೋಜನೆಗಳನ್ನು ಪರೀಕ್ಷಿಸಬಹುದು. ಪ್ರದೇಶವೊಂದರಿಂದ ಸಂಗ್ರಹಿಸಿದ ಮೂಳೆ, ಸಸ್ಯ ಮತ್ತು ಪರಾಗಗಳನ್ನು ವಿಶ್ಲೇಷಣೆ ಮಾಡಬಹುದು. (ಪ್ರಾಣಿ-ಪುರಾತತ್ತ್ವ ಶಾಸ್ತ್ರ, ಪ್ರಾಚೀನ-ಕುಲದ-ಸಸ್ಯಶಾಸ್ತ್ರ(ಪೇಲಿಯೊಎತ್ನೊಬಾಟನಿ ಮತ್ತು ಪರಾಗಶಾಸ್ತ್ರವನ್ನು ಬಳಸಿಕೊಂಡು), ಅದೇ ಯಾವುದೇ ಮೂಲಗ್ರಂಥಗಳನ್ನು ಸಂಕೇತಗಳ ಸಹಾಯದಿಂದ ವಿವರಿಸಬಹುದು.

ಈ ವಿಧಾನಗಳು ಹೆಚ್ಚಾಗಿ ತಿಳಿದಿರದ ಮಾಹಿತಿಯನ್ನು ಒದಗಿಸುತ್ತವೆ. ಆದ್ದರಿಂದ ಅವು ಒಂದು ಪ್ರದೇಶದ ಬಗ್ಗೆ ತಿಳಿಯಲು ಹೆಚ್ಚಿನ ಸಹಾಯ ಮಾಡುತ್ತವೆ.

ವಸ್ತುತಃ ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಸುಮಾರು 1995ರಲ್ಲಿ ಪುರಾತತ್ತ್ವಜ್ಞರು ಪ್ರಾಚೀನ ರೋಮ್‌ ಅಥವಾ ಪುರಾತನ ಅಸಿರಿಯನ್ ಅರಮನೆಯ ಸಿಂಹಾಸನವಿರುವ ಕೊಠಡಿಯಂತಹ ಪ್ರದೇಶಗಳ ವಸ್ತುತಃ 3D ಮಾದರಿಗಳನ್ನು ರೂಪಿಸಲು ಕಂಪ್ಯೂಟರ್ ಗ್ರ್ಯಾಫಿಕ್‌ಗಳನ್ನು ಬಳಸಲು ಆರಂಭಿಸಿದರು.[೩೬] ವಸ್ತುತಃ 3D ಮಾದರಿಯನ್ನು ರೂಪಿಸಲು ಸಾಮಾನ್ಯ ಛಾಯಾಚಿತ್ರಗಳನ್ನು ಸಂಗ್ರಹಿಸಿಕೊಂಡು, ಕಂಪ್ಯೂಟರ್ ಗ್ರ್ಯಾಫಿಕ್‌ಗಳನ್ನು ಬಳಸಿಕೊಂಡು ಇದನ್ನು ಮಾಡಲಾಗುತ್ತದೆ.[೩೬] ಸಾಮಾನ್ಯವಾಗಿ, ಕಂಪ್ಯೂಟರ್‌ಗಳನ್ನು ಹಿಂದಿನ ಕಾಲದ ವಸ್ತುಗಳು, ಕಟ್ಟಡಗಳು, ಭೂದೃಶ್ಯಗಳು ಮತ್ತು ಪುರಾತನ ಕದನಗಳು ಮೊದಲಾದ ಅಂದಿನ ಪರಿಸರ ಮತ್ತು ಸ್ಥಿತಿಗಳನ್ನು ಪುನಃರಚಿಸಲು ಬಳಸಲಾಗುತ್ತದೆ.[೩೬] ಕಂಪ್ಯೂಟರ್‌ ಅನುಕರಣವನ್ನು ಪುರಾತನ ಸಮುದಾಯದ ಜೀವನ ಸ್ಥಿತಿಗಳನ್ನು ಅನುಕರಿಸಲು ಮತ್ತು ಅದು ವಿವಿಧ ಘಟನೆಗಳಿಗೆ ಹೇಗೆ ಪ್ರತಿಕ್ರಿಯಿಸಿದೆ; (ಉದಾ. ಎಷ್ಟು ಆಹಾರ ಪದಾರ್ಥಗಳನ್ನು ಬೆಳೆಯುತ್ತಿದ್ದರು, ಎಷ್ಟು ಪ್ರಾಣಿಗಳನ್ನು ಕೊಲ್ಲುತ್ತಿದ್ದರು, ಇತ್ಯಾದಿ) ಎಂಬುದನ್ನು ಗಮನಿಸಲು ಬಳಸಲಾಗುತ್ತದೆ.[೩೬] ಕೆಲವು ರಚನೆಗಳು (ಉದಾ. ಸ್ತಂಭಗಳು) ಅಯನ ಸಂಕ್ರಾಂತಿಯಲ್ಲಿ ಸೂರ್ಯನ ಸ್ಥಾನದಂತಹ ಖಗೋಳೀಯ ಘಟನೆಗಳಿಗೆ ಸರಿಹೊಂದುತ್ತವೆಯೇ ಎಂಬುದನ್ನು ಪರೀಶೀಲಿಸಲು ಕಂಪ್ಯೂಟರ್‌‌ನಿಂದ ರಚಿಸಿದ ಸ್ಥಳಾಕೃತಿಯ ಮಾದರಿಗಳನ್ನು ಖಗೋಳ ವಿಜ್ಞಾನದ ಅಂದಾಜುಗಳೊಂದಿಗೆ ಒಂದುಗೂಡಿಸಲಾಗುತ್ತದೆ.[೩೬]

ಶೈಕ್ಷಣಿಕ ಉಪ-ನಿಯಮಗಳು(ಕಾರ್ಯವಿಧಾನ)

[ಬದಲಾಯಿಸಿ]

ಹೆಚ್ಚಿನ ಶೈಕ್ಷಣಿಕ ನಿಯಮಗಳಂತೆ, ಅನೇಕ ಪುರಾತತ್ತ್ವ ಶಾಸ್ತ್ರದ ಉಪ-ನಿಯಮಗಳಿವೆ, ಇದನ್ನು ನಿರ್ದಿಷ್ಟ ವಿಧಾನ ಅಥವಾ ವಸ್ತುವಿನ ಪ್ರಕಾರ (ಉದಾ. ಕಲ್ಲಿನ ವಿಶ್ಲೇಷಣೆ, ಸಂಗೀತ, ಪುರಾತನ-ಸಸ್ಯಶಾಸ್ತ್ರ), ಭೌಗೋಳಿಕ ಅಥವಾ ಕಾಲಗಣನ ಶಾಸ್ತ್ರದ ಕೇಂದ್ರ (ಉದಾ. ಪೌರಾತ್ಯ ಸಮೀಪದ ಪುರಾತತ್ತ್ವ ಶಾಸ್ತ್ರ, ಮಧ್ಯಕಾಲೀನ ಪುರಾತತ್ತ್ವ ಶಾಸ್ತ್ರ), ಇತರ ವಿಷಯಾಧಾರಿತ ಸಂಬಂಧ (ಉದಾ. ಕಡಲತಡಿಯ ಪುರಾತತ್ತ್ವ ಶಾಸ್ತ್ರ, ಭೂದೃಶ್ಯ ಪುರಾತತ್ತ್ವ ಶಾಸ್ತ್ರ, ಯುದ್ಧಭೂಮಿಯ ಪುರಾತತ್ತ್ವ ಶಾಸ್ತ್ರ) ಅಥವಾ ಒಂದು ನಿರ್ದಿಷ್ಟ ಪುರಾತತ್ತ್ವ ಶಾಸ್ತ್ರದ ಸಂಸ್ಕೃತಿ ಅಥವಾ ನಾಗರಿಕತೆ (ಉದಾ. ಈಜಿಪ್ಟ್‌ಶಾಸ್ತ್ರ, ಭಾರತಶಾಸ್ತ್ರ, ಚೀನೀಶಾಸ್ತ್ರ) ಮೊದಲಾದವುಗಳಿಂದ ನಿರೂಪಿಸಲಾಗುತ್ತದೆ.

ಐತಿಹಾಸಿಕ ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಐತಿಹಾಸಿಕ ಪುರಾತತ್ತ್ವ ಶಾಸ್ತ್ರವು ಕೆಲವು ರೀತಿಯ(ಲಿಪಿ) ಬರವಣಿಗೆಯನ್ನು ಹೊಂದಿರುವ ಸಂಸ್ಕೃತಿಗಳ ಅಧ್ಯಯನವಾಗಿದೆ.

ಇಂಗ್ಲೆಂಡ್‌ನಲ್ಲಿ ಪುರಾತತ್ತ್ವಜ್ಞರು, 14ನೇ ಶತಮಾನದ ಬಿಕ್ಕಟ್ಟಿನ ನಂತರ ಬಿಟ್ಟುಬಿಡಲಾದ ಮಧ್ಯಯುಗದ ಹಳ್ಳಿಗಳ ದೀರ್ಘಕಾಲದ ವಿನ್ಯಾಸರಚನೆಗಳನ್ನು ಮತ್ತು ಶೈಲಿಯ ಬದಲಾವಣೆಯಿಂದಾಗಿ ನಾಶವಾದ 17ನೇ ಶತಮಾನದ ಪುಷ್ಪವಾಟಿ (ಸಭೆ-ಸಮಾರಂಭಗಳಲ್ಲಿ ಬಳಸುವ ಅಲಂಕಾರಿಕ ಹೂವಿನ ಕುಂಡಗಳಲ್ಲಿ ಸಸ್ಯ ಬೆಳೆಸುವ)ಉದ್ಯಾನಗಳ ಕಳೆದುಹೋದ ವಿನ್ಯಾಸರಚನೆಗಳನ್ನು ಬಯಲುಮಾಡಿದರು.[ಸೂಕ್ತ ಉಲ್ಲೇಖನ ಬೇಕು] ಮಧ್ಯಭಾಗದ ನ್ಯೂಯಾರ್ಕ್ ನಗರದ ಪುರಾತತ್ತ್ವಜ್ಞರು ಆಫ್ರಿಕಾದ ಶ್ಮಶಾನದ 18ನೇ ಶತಮಾನದ ಅವಶೇಷಗಳನ್ನು ನೆಲದಿಂದ ಹೊರತೆಗೆದರು.

ಜನಾಂಗ-ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಜನಾಂಗ-ಪುರಾತತ್ತ್ವ ಶಾಸ್ತ್ರವೆಂದರೆ ಜೀವಿಸಿದ ಜನರ ಪುರಾತತ್ತ್ವ ಶಾಸ್ತ್ರದ ಅಧ್ಯಯನವಾಗಿದೆ.[೩೭][೩೮][೩೯][೪೦][೪೧][೪೨] ಈ ವಿಧಾನವು ಮಧ್ಯಯುಗದ ಅಧ್ಯಯನದ ಪ್ರಾಬಲ್ಯತೆಯ ಸಂದರ್ಭದಲ್ಲಿ(ಟೀಕೆಗೊಳಗಾಯಿತು) ಕುಖ್ಯಾತಿ ಗಳಿಸಿತು, ಇದು 1960ರ ದಶಕದ ಪ್ರೊಸೆಶ್ವಲ್ ಕಾರ್ಯಾಚರಣೆಯ ಲಕ್ಷಣವಾಗಿತ್ತು. ಆರಂಭಿಕ ಜನಾಂಗ-ಪುರಾತತ್ತ್ವ ಶಾಸ್ತ್ರದ ಸಂಶೋಧನೆಯು ಬೇಟೆಯಾಡಿ, ಸಂಗ್ರಹಿಸುತ್ತಿದ್ದ ಅಥವಾ ಕೊಳ್ಳೆಹೊಡೆಯುತ್ತಿದ್ದ ಜನಾಂಗದ ಕಾರ್ಯಗಳ ಮೇಲೆ ಕೇಂದ್ರೀಕರಿಸಿತ್ತು. ಜನಾಂಗ-ಪುರಾತತ್ತ್ವ ಶಾಸ್ತ್ರವು ಪೋಸ್ಟ್-ಪ್ರೊಸೆಶ್ವಲ್ ಮತ್ತು ಇತರ ಇತ್ತೀಚಿನ ಪುರಾತತ್ತ್ವ ಶಾಸ್ತ್ರದ ಮಾರ್ಗಗಳ ಸ್ಪಂದಿಸುವ ಅಂಶವಾಗಿ ಮುಂದುವರಿದಿದೆ.[೪೩][೪೪][೪೫][೪೬] ಜನಾಂಗ-ಪುರಾತತ್ತ್ವ ಶಾಸ್ತ್ರವೆಂದರೆ ಸದೃಶ ವಿಷಯಗಳನ್ನು ಹೆಚ್ಚಿಸಲು ಮತ್ತು ಸುಧಾರಿಸಲು ಜನಾಂಗ ವಿವರಣೆಯನ್ನು ಬಳಸುವುದಾಗಿದೆ, ಈ ಸದೃಶ ವಿಷಯಗಳನ್ನು ನಂತರ ಪುರಾತತ್ತ್ವ ಶಾಸ್ತ್ರದ ದಾಖಲೆಯನ್ನು ವಿವರಿಸಲು ಹೋಲಿಕೆಯಾಗಿ ಬಳಸಲಾಗುತ್ತದೆ. ಸಂಕ್ಷಿಪ್ತವಾಗಿ, ಜನಾಂಗ-ಪುರಾತತ್ತ್ವ ಶಾಸ್ತ್ರವೆಂದರೆ ಪುರಾತತ್ತ್ವ ಶಾಸ್ತ್ರಕ್ಕಾಗಿ ಜನಾಂಗ ವಿವರಣೆಯನ್ನು ಬಳಸುವುದಾಗಿದೆ.[೪೭]

ಪ್ರಾಯೋಗಿಕ ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಪ್ರಾಯೋಗಿಕ ಪುರಾತತ್ತ್ವ ಶಾಸ್ತ್ರವು ಪುರಾತತ್ತ್ವ ಶಾಸ್ತ್ರದ ದಾಖಲೆಯನ್ನು ರಚಿಸುವ ಮತ್ತು ಅದರ ಮೇಲೆ ಪ್ರಭಾವ ಬೀರುವ ಪ್ರಕ್ರಿಯೆಗಳ ಹೆಚ್ಚು ನಿಯಂತ್ರಿತ ವೀಕ್ಷಣೆಗಳನ್ನು ಅಭಿವೃದ್ಧಿಪಡಿಸಲು ಪ್ರಾಯೋಗಿಕ ವಿಧಾನದ ಬಳಕೆಯನ್ನು ಸೂಚಿಸುತ್ತದೆ.[೪೮][೪೯][೫೦][೫೧][೫೨] ಪ್ರೊಸೆಶ್ವಲಿಸಮ್‌ನ ತಾರ್ಕಿಕ ಪ್ರತ್ಯಕ್ಷೀಕೃತ ಪ್ರಮಾಣ ಪದ್ಧತಿಯಲ್ಲಿ ಪುರಾತತ್ತ್ವ ಶಾಸ್ತ್ರದ ಜ್ಞಾನಮೀಮಾಂಸೆಯ ವೈಜ್ಞಾನಿಕ ನಿಖರತೆಯನ್ನು ಸುಧಾರಿಸುವ ಗುರಿಗಳೊಂದಿಗೆ ಪ್ರಾಯೋಗಿಕ ವಿಧಾನವು ಪ್ರಾಮುಖ್ಯತೆ ಪಡೆದಿದೆ. ಪ್ರಾಯೋಗಿಕ ವಿಧಾನಗಳು ಪುರಾತತ್ತ್ವ ಶಾಸ್ತ್ರದ ದಾಖಲೆಯನ್ನು ವಿವರಿಸುವ ತಾರ್ಕಿಕ ನಿರ್ಣಯದ ಚೌಕಟ್ಟನ್ನು ಸುಧಾರಿಸುವ ಪ್ರಮುಖ ಅಂಶವಾಗಿವೆ.

ಪುರಾತತ್ತ್ವ ಶಾಸ್ತ್ರದ-ಅಳತೆಗೋಲು ವಿಧಾನ(ಆರ್ಕಿಯೊಮೆಟ್ರಿ)

[ಬದಲಾಯಿಸಿ]

ಪುರಾತತ್ತ್ವ ಶಾಸ್ತ್ರದ-ಅಳತೆಗೋಲು ವಿಧಾನವೆಂದರೆ ಪುರಾತತ್ತ್ವ ಶಾಸ್ತ್ರದ ಮಾಪನವನ್ನು ಕ್ರಮಬದ್ಧವಾಗಿಸುವ ಗುರಿಯನ್ನು ಹೊಂದಿರುವ ಅಧ್ಯಯನದ ಒಂದು ಕ್ಷೇತ್ರವಾಗಿದೆ. ಇದು ಭೌತಶಾಸ್ತ್ರ, ರಸಾಯನಶಾಸ್ತ್ರ ಮತ್ತು ಎಂಜಿನಿಯರಿಂಗ್‌ನ ವಿಶ್ಲೇಷಣಾತ್ಮಕ ವಿಧಾನಗಳ ಬಳಕೆಗೆ ಹೆಚ್ಚು ಮಹತ್ವಕೊಡುತ್ತದೆ. ಇದು ಸಂಶೋಧನೆಯ ಹೆಚ್ಚು ಉತ್ಸಾಹಭರಿತ ಕ್ಷೇತ್ರವಾಗಿದೆ. ಇದು ಹೆಚ್ಚಾಗಿ ಮೂಲದ ವಿಶ್ಲೇಷಣೆಗಾಗಿ ಪುರಾತತ್ತ್ವ ಶಾಸ್ತ್ರದ ಅವಶೇಷಗಳ ರಾಸಾಯನಿಕ ಸಂಯೋಜನೆಯ ನಿರೂಪಣೆಯನ್ನು ಕೇಂದ್ರಿಕರಿಸುತ್ತದೆ.[೫೩] ಪುರಾತತ್ತ್ವ ಶಾಸ್ತ್ರದ ಅಂಶಗಳ ಹೆಚ್ಚುಕಡಿಮೆ ಪ್ರವರ್ಧಮಾನತೆ ಪಡೆಯದ ಉಪ-ಕ್ಷೇತ್ರವಾದ ಇದನ್ನು ಮಾನವನ ಚಟುವಟಿಕೆಯೊಂದಿಗೆ ಸಂಬಂಧಿಸಿದ ವಸ್ತುಗಳ ರಚನೆ ಮತ್ತು ಗುಣಲಕ್ಷಣಗಳ ವೈಜ್ಞಾನಿಕ ವಿಶ್ಲೇಷಣೆಯ ಮೂಲಕ ಇತಿಹಾಸ-ಪೂರ್ವ ಮತ್ತು ಕೈಗಾರಿಕೇತರ ಸಂಸ್ಕೃತಿಯ ಬಗೆಗಿನ ಜ್ಞಾನ ವರ್ಧಿಸಲು ರೂಪಿಸಲಾಗಿದೆ.[೫೪]

ಸಾಂಸ್ಕೃತಿಕ ಸಂಪನ್ಮೂಲಗಳ ನಿರ್ವಹಣೆ

[ಬದಲಾಯಿಸಿ]

ಪುರಾತತ್ತ್ವ ಶಾಸ್ತ್ರವನ್ನು ಕೇವಲ ವೈಜ್ಞಾನಿಕವಾಗಿಯೂ ಅಧ್ಯಯನ ಮಾಡಬಹುದು. ಅಲ್ಲದೆ ಇದನ್ನು ಅನ್ವಯಿಕ ವಿಜ್ಞಾನವಾಗಿಯೂ ಅಧ್ಯಯನ ಮಾಡಬಹುದು, ಉದಾ. ಅಭಿವೃದ್ಧಿಯಿಂದಾಗಿ ಅಪಾಯದಂಚಿನಲ್ಲಿರುವ ಪುರಾತತ್ತ್ವ ಶಾಸ್ತ್ರದ ಪ್ರದೇಶಗಳ ಅಧ್ಯಯನ. ಅಂತಹ ಸಂದರ್ಭಗಳಲ್ಲಿ, ಪುರಾತತ್ತ್ವ ಶಾಸ್ತ್ರವು ಸಾಂಸ್ಕೃತಿಕ ಸಂಪನ್ಮೂಲಗಳ ನಿರ್ವಹಣೆ (CRM)ಯಲ್ಲಿನ ಒಂದು ಸಹಾಯಕಾರಿ ಕಾರ್ಯವಾಗಿರುತ್ತದೆ, ಇದನ್ನು ಯುನೈಟೆಡ್ ಕಿಂಗ್ಡಮ್‌ನಲ್ಲಿ ಆಸ್ತಿ ನಿರ್ವಹಣೆ ಎಂದು ಕರೆಯುತ್ತಾರೆ.[೫೫] ಇಂದು CRM ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಮತ್ತು ಹೆಚ್ಚಿನ ಪಶ್ಚಿಮ ಯುರೋಪ್‌‌ನಲ್ಲಿ ಮಾಡಲಾದ ಹೆಚ್ಚಿನ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗೆ ವಿವರಣೆ ನೀಡುತ್ತದೆ. USನಲ್ಲಿ, CRM ಪುರಾತತ್ತ್ವ ಶಾಸ್ತ್ರವು 1966ರಲ್ಲಿ ನ್ಯಾಷನಲ್ ಹಿಸ್ಟೋರಿಕ್ ಪ್ರಿಸರ್ವೇಶನ್ ಆಕ್ಟ್ (NHPA) ಅಂಗೀಕಾರವಾದಂದಿನಿಂದ ತೀವ್ರಗತಿಯಲ್ಲಿ ಬೆಳೆಯುತ್ತಿದೆ. CRM ರಾಷ್ಟ್ರದ ಹೆಚ್ಚಿನ ಇತಿಹಾಸ ಮತ್ತು ಇತಿಹಾಸ-ಪೂರ್ವ ದಾಖಲೆಗಳನ್ನು ರಕ್ಷಿಸುವಲ್ಲಿ ಸಹಾಯ ಮಾಡಿದೆ, ಇಲ್ಲದಿದ್ದರೆ ಅವು ನಗರಗಳ, ಅಣೆಕಟ್ಟುಗಳ ಮತ್ತು ಹೆದ್ದಾರಿಗಳ ವಿಸ್ತರಣೆಯ ಸಂದರ್ಭದಲ್ಲಿ ಕಳೆದುಹೋಗುತ್ತಿದ್ದವು ಎಂದು ಹೆಚ್ಚಿನ ತೆರಿಗೆದಾರರು, ಪಂಡಿತರು ಮತ್ತು ರಾಜಕಾರಣಿಗಳು ಅಭಿಪ್ರಾಯ ಪಡುತ್ತಾರೆ. ಇತರ ಕಾಯಿದೆಗಳೊಂದಿಗೆ NHPA, ಫೆಡರಲ್ ಭೂಮಿಯ ಮೇಲಿನ ಅಥವಾ ಫೆಡರಲ್ ಬಂಡವಾಳ ಅಥವಾ ಅನುಮತಿಗಳನ್ನು ಒಳಗೊಳ್ಳುವ ಯೋಜನೆಗಳು ಅವು ಪ್ರತಿಯೊಂದು ಪುರಾತತ್ತ್ವ ಶಾಸ್ತ್ರದ ಪ್ರದೇಶದ ಮೇಲೆ ಬೀರುವ ಪರಿಣಾಮಗಳನ್ನು ಪರಿಗಣಿಸಬೇಕೆಂದು ಕಡ್ಡಾಯಗೊಳಿಸುತ್ತದೆ.

ಯುನೈಟೆಡ್ ಕಿಂಗ್ಡಮ್‌ನಲ್ಲಿ CRMನ ಅಳವಡಿಕೆ ಸರ್ಕಾರ-ಬಂಡವಾಳ ಒದಗಿಸುವ ಯೋಜನೆಗಳಿಗೆ ಸೀಮಿತವಾಗಿಲ್ಲ. 1990ರಿಂದ PPG 16[೫೬], ಯೋಜಕರು ಹೊಸ ಬೆಳವಣಿಗೆಗಾಗಿ ಅನ್ವಯಗಳನ್ನು ನಿರ್ಣಯಿಸುವಾಗ ಪುರಾತತ್ತ್ವ ಶಾಸ್ತ್ರವನ್ನು ಮೂಲವಸ್ತುಗಳ ಪರಿಶೀಲನೆಯಾಗಿ ಪರಿಗಣಿಸಬೇಕೆಂದು ಸೂಚಿಸಿತು. ಆದ್ದರಿಂದ ಅಸಂಖ್ಯಾತ ಪುರಾತತ್ತ್ವ ಶಾಸ್ತ್ರದ ಸಂಸ್ಥೆಗಳು ಅಭಿವೃದ್ಧಿಕಾರರ ಖರ್ಚಿನಲ್ಲಿ ಪುರಾತತ್ತ್ವ ಶಾಸ್ತ್ರ-ಸಂವೇದನಾ-ಪ್ರದೇಶಗಳಲ್ಲಿ ನಿರ್ಮಾಣ ಕಾರ್ಯಕ್ಕಿಂತ ಮೊದಲು ಸಂರಕ್ಷಣಾ(ಮಿಟಿಗೇಶನ್) ಕಾರ್ಯವನ್ನು ನಿರ್ವಹಿಸುತ್ತವೆ.

ಇಂಗ್ಲೆಂಡ್‌ನಲ್ಲಿ ಐತಿಹಾಸಿಕ ಪರಿಸರ ಅವಶೇಷಗಳನ್ನು ಸಂರಕ್ಷಿಸುವ ಜವಾಬ್ದಾರಿಯನ್ನು ಇಂಗ್ಲಿಷ್ ಹೆರಿಟೇಜ್‌ ಒಂದಿಗೆ ಡಿಪಾರ್ಟ್ಮೆಂಟ್ ಫಾರ್ ಕಲ್ಚರ್, ಮೀಡಿಯಾ ಆಂಡ್ ಸ್ಪೋರ್ಟ್[೫೭] ವಹಿಸಿಕೊಂಡಿದೆ.[೫೮] ಸ್ಕಾಟ್‌ಲ್ಯಾಂಡ್, ವೇಲ್ಸ್ ಮತ್ತು ಉತ್ತರ ಐರ್ಲ್ಯಾಂಡ್‌ನಲ್ಲಿ ಈ ಜವಾಬ್ದಾರಿಯನ್ನು ಅನುಕ್ರಮವಾಗಿ ಹಿಸ್ಟೋರಿಕ್ ಸ್ಕಾಟ್‌ಲ್ಯಾಂಡ್,[೫೯] ಕ್ಯಾಡ್ವ್[೬೦] ಮತ್ತು ನಾರ್ದರ್ನ್ ಐರ್ಲ್ಯಾಂಡ್ ಎನ್ವೈರ್ನ್ಮೆಂಟ್ ಏಜೆನ್ಸಿ[೬೧] ಸಂಸ್ಥೆಗಳು ನಿರ್ವಹಿಸುತ್ತವೆ.

CRMನ ಗುರಿಗಳೆಂದರೆ ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರಗಳಲ್ಲಿನ ಸಾಂಸ್ಕೃತಿಕ ಪ್ರದೇಶಗಳ ಗುರುತಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆ ಹಾಗೂ ನಿರ್ಮಾಣ ಕಾರ್ಯದಂತಹ ಮಾನವನ ಚಟುವಟಿಕೆಯಿಂದ ನಾಶವಾಗಬಹುದಾದ ಸಾಂಸ್ಕೃತಿಕವಾಗಿ ಬೆಲೆಬಾಳುವ ಅಂಶಗಳನ್ನು ಆ ಪ್ರದೇಶಗಳಿಂದ ಪ್ರತ್ಯೇಕಿಸುವುದು. ಈ ಅಧ್ಯಯನವು ಯಾವುದೇ ಗಮನಾರ್ಹ ಪುರಾತತ್ತ್ವ ಶಾಸ್ತ್ರದ ಪ್ರದೇಶವು, ನಿರ್ಮಾಣ ಕಾರ್ಯದಿಂದ ಪ್ರಭಾವಕ್ಕೊಳಗಾದ ಪ್ರದೇಶದಲ್ಲಿ ಕಂಡುಬರುತ್ತದೆಯೇ ಎಂಬುದನ್ನು ನಿಷ್ಕರ್ಷಿಸಲು ಸ್ಥೂಲಪರೀಕ್ಷೆ ಮಾಡುತ್ತದೆ. ಹಾಗೆ ಕಂಡುಬಂದರೆ, ಆ ಪ್ರದೇಶಗಳ ಉತ್ಖನನಕ್ಕಾಗಿ ಸಮಯ ಮತ್ತು ಹಣವನ್ನು ನಿಗದಿಮಾಡಬೇಕಾಗುತ್ತದೆ. ಆರಂಭಿಕ ಸಮೀಕ್ಷೆ ಮತ್ತು/ಅಥವಾ ಪರೀಕ್ಷಾ ಉತ್ಖನನವು ವಿಶೇಷ ಮೌಲ್ಯಯುತ ಪ್ರದೇಶವಿರುವುದನ್ನು ಸೂಚಿಸಿದರೆ, ನಿರ್ಮಾಣ ಕಾರ್ಯವನ್ನು ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. CRM ವಿಶೇಷವಾಗಿ ಅಮೆರಿಕ ಸಂಯುಕ್ತ ಸಂಸ್ಥಾನ ಮತ್ತು ಯುರೋಪ್‌ನಲ್ಲಿ ಹೆಚ್ಚಿನ ಅಭಿವೃದ್ಧಿಯನ್ನು ಕಾಣುತ್ತಿದೆ, ಇಲ್ಲಿ ಖಾಸಗಿ ಕಂಪನಿಗಳ ಮತ್ತು ಎಲ್ಲಾ ಹಂತದ ಸರ್ಕಾರದ ಪುರಾತತ್ತ್ವಜ್ಞರು ಅವರ ವಿಧಾನದ ಅಭ್ಯಾಸದಲ್ಲಿ ಕಾರ್ಯಪ್ರವೃತ್ತವಾಗಿದ್ದಾರೆ.

ಆದರೂ ಸಾಂಸ್ಕೃತಿಕ ಸಂಪನ್ಮೂಲಗಳ ನಿರ್ವಹಣೆಯು ಟೀಕೆಗೊಳಗಾಗಿದೆ. CRMಅನ್ನು ಖಾಸಗಿ ಕಂಪನಿಗಳಿಂದ ನಿರ್ವಹಿಸಲಾಗುತ್ತದೆ, ಇವು ಮಾಡಬೇಕಾದ ಕೆಲಸದ ಮತ್ತು ನಿರೀಕ್ಷಿತ ಖರ್ಚುವೆಚ್ಚದ ರೂಪರೇಖೆಯನ್ನು ವಿವರಿಸುವ ಸೂಚನೆಗಳನ್ನು ನಿರೂಪಿಸುವ ಮೂಲಕ ಯೋಜನೆಗಳನ್ನು ಆಜ್ಞಾಪಿಸುತ್ತವೆ. ನಿರ್ಮಾಣಕ್ಕೆ ಜವಾಬ್ದಾರವಾಗಿರುವ ಏಜೆನ್ಸಿಯು ಕನಿಷ್ಠ ಬಂಡವಾಳದ ಯೋಜನೆಯನ್ನು ಆರಿಸುವುದು ಸಾಮಾನ್ಯವಾಗಿರುತ್ತದೆ. CRM ಪುರಾತತ್ತ್ವಜ್ಞರು ಗಣನೀಯ ಪ್ರಮಾಣದ ಸಮಯದೊತ್ತಡವನ್ನು ಎದುರಿಸುತ್ತಾರೆ, ಹೆಚ್ಚಾಗಿ ಅವರ ಕೆಲಸವನ್ನು ಅಲ್ಪಾವಧಿಯಲ್ಲಿ ಪೂರ್ಣಗೊಳಿಸಬೇಕೆಂದು ಒತ್ತಾಯಪಡಿಸಲಾಗುತ್ತದೆ, ಅದು ಎಲ್ಲ ರೀತಿಯಿಂದಲೂ ವಿದ್ವತ್ಪೂರ್ಣ ಸಾಹಸವಾಗಿರುತ್ತದೆ. ಸಮಯದೊತ್ತಡವು CRM ಸಂಸ್ಥೆಗಳು ಸೂಕ್ತ ಸ್ಟೇಟ್ ಹಿಸ್ಟೋರಿಕ್ ಪ್ರಿಸರ್ವೇಶನ್ ಆಫೀಸ್ (SHPO)ಗೆ ಸಲ್ಲಿಸಬೇಕಾದ ಪ್ರದೇಶದ ವರದಿಗಳ ಕೂಲಂಕುಷ ಪರೀಕ್ಷಾ ಕ್ರಿಯೆಯನ್ನು ಜಟಿಲಗೊಳಿಸುತ್ತದೆ. SHPOದ ದೃಷ್ಟಿಕೋನದಲ್ಲಿ ಸಮಯದ ಮಿತಿಯಲ್ಲಿ ಕಾರ್ಯನಿರ್ವಹಿಸುವ CRM ಸಂಸ್ಥೆಯು ಸಲ್ಲಿಸಿದ ವರದಿ ಮತ್ತು ಬಹು-ವಾರ್ಷಿಕ ಶೈಕ್ಷಣಿಕ ಯೋಜನೆಯ ಮಧ್ಯೆ ಯಾವುದೇ ವ್ಯತ್ಯಾಸವಿಲ್ಲ. ಸಾಂಸ್ಕೃತಿಕ ಸಂಪನ್ಮೂಲ ನಿರ್ವಹಣಾ ಪುರಾತತ್ತ್ವಜ್ಞರು ಯಶಸ್ವಿ ಆಗಬೇಕಾದರೆ, ಅವರು ಶೈಕ್ಷಣಿಕ ಗುಣಮಟ್ಟದ ದಾಖಲೆಗಳನ್ನು ಸಂಘಟಿತ(ಕೈಗಾರಿಕೆ) ಕಾರ್ಪೊರೇಟ್ ಜಗತ್ತಿನ ಬೆಳವಣಿಗೆಯ ಪೂರಕ ಪ್ರಮಾಣದಲ್ಲಿ ಪ್ರದರ್ಶಿಸಲು ಸಮರ್ಥರಾಗಿರಬೇಕು.

ಮುಕ್ತ ಶೈಕ್ಷಣಿಕ ಪುರಾತತ್ತ್ವ ಶಾಸ್ತ್ರ ಸ್ಥಾನಗಳು (ಪೋಸ್ಟ್-ಡಾಕ್, ತಾತ್ಕಾಲಿಕ ಮತ್ತು ಕಾಲಾವಧಿ-ರಹಿತ ನೇಮಕಾತಿಯನ್ನು ಒಳಗೊಂಡ) ಮತ್ತು ಪುರಾತತ್ತ್ವ ಶಾಸ್ತ್ರ MA/MSc ಮತ್ತು PhD ವಿದ್ಯಾರ್ಥಿಗಳ ವಾರ್ಷಿಕ ಸಂಖ್ಯೆಯ ಅನುಪಾತವು ವಿಷಮ ಪ್ರಮಾಣದಲ್ಲಿದೆ. ಈ ಶೈಕ್ಷಣಿಕ ಸ್ಥಾನಗಳ ಅಭಾವವು ಹೆಚ್ಚು ಶಿಕ್ಷಣ ಪಡೆದವರ ಸಂಖ್ಯೆಯನ್ನು ಅಧಿಕಗೊಳಿಸುತ್ತದೆ, ಇವರು ನಂತರದ ವರ್ಷದ ಶೈಕ್ಷಣಿಕ-ಅರ್ಹತೆಗೆ-ಪೂರಕವಾಗಿಲ್ಲದೆ ನೇಮಕಗೊಂಡ(ಅನುಭವಿ) ಪುರಾತತ್ತ್ವಜ್ಞರ ಸಮೂಹದಲ್ಲಿ ಸೇರಿಕೊಳ್ಳುತ್ತಾರೆ. ಸಾಂಸ್ಕೃತಿಕ ಸಂಪನ್ಮೂಲ ನಿರ್ವಹಣೆಯು ಹೆಚ್ಚು ಅನುಭವವಿರುವ ಮತ್ತು ಕಡಿಮೆ ಶೈಕ್ಷಣಿಕ-ಅರ್ಹತೆ ಇರುವವರನ್ನು[೬೨] ಬುದ್ಧಿಶಕ್ತಿಯ ಜಡತೆಯಾಗಿ ಪರಿಗಣಿಸಿದುದರಿಂದ, ಇದು ಈ ಭಾರಿ ಸಂಖ್ಯೆಯ ಹೆಚ್ಚು ಶಿಕ್ಷಣ ಪಡೆದ ವೃತ್ತಿಪರರ ಪ್ರಯೋಜನವನ್ನು ಪಡೆಯಿತು. ಇದರಿಂದಾಗಿ CRM ಕಛೇರಿಗಳಲ್ಲಿ ಹೆಚ್ಚು ಪದವಿ ಪಡೆದವರ ಸಂಖ್ಯೆಯೂ ಹೆಚ್ಚಿತು, ಅವರು ಹೆಚ್ಚು ಪಾಂಡಿತ್ಯಪೂರ್ಣ ಬರಹಗಳನ್ನು ಕ್ಷೇತ್ರವಾರು ಮಾರ್ಗದರ್ಶಿ ಶಬ್ದಕೋಶ ವಿವರ ಒದಗಿಸಲು ಆಯಾ ವಿಭಾಗವಾರು ಉತ್ಖನನದ ತಂಡವು ಕಾರ್ಯಪ್ರವೃತ್ತವಾಗುತ್ತದೆ.

ಪುರಾತತ್ತ್ವ ಶಾಸ್ತ್ರದ ಜನಪ್ರಿಯ ಅವಲೋಕನಗಳು

[ಬದಲಾಯಿಸಿ]
ಇಸ್ರೇಲ್‌ನ ಬೆಟ್ ಶೆಯನ್‌ನ ಬೃಹತ್ಪ್ರಮಾಣದ ಉತ್ಖನನ

ಆರಂಭಿಕ ಪುರಾತತ್ತ್ವ ಶಾಸ್ತ್ರವು ಅದ್ಭುತ ಹಸ್ತಕೃತಿಗಳು ಮತ್ತು ಅವುಗಳ ವೈಶಿಷ್ಟ್ಯಗಳನ್ನು ಬಯಲು ಮಾಡುವ ಅಥವಾ ವಿಶಾಲ ಮತ್ತು ರಹಸ್ಯಪೂರ್ಣವಾಗಿ ಬಿಟ್ಟುಹೋದ ನಗರಗಳನ್ನು ಅನ್ವೇಷಣೆ ಮಾಡುವ ಪ್ರಯತ್ನವಾಗಿತ್ತು. ಅಂತಹ ಅನ್ವೇಷಣೆಗಳು ಸಾರ್ವಜನಿಕರನ್ನು ಆಕರ್ಷಿಸುತ್ತಾ ಮುಂದುವರಿದಿವೆ. ಪುಸ್ತಕಗಳು, ಚಲನಚಿತ್ರಗಳು ಹಾಗೂ ದಿ ಸಿಟಿ ಆಫ್ ಬ್ರಾಸ್ , ಕಿಂಗ್ ಸೋಲೊಮನ್ಸ್ ಮೈನ್ಸ್ , ಇಂಡಿಯಾನ ಜೋನ್ಸ್ , ಟಾಂಬ್ ರೈಡರ್ , ದಿ ಮಮ್ಮಿ ಮತ್ತು ರೆಲಿಕ್ ಹಂಟರ್ ಮೊದಲಾದ ವೀಡಿಯೊ ಗೇಮ್‌ಗಳು ಪುರಾತತ್ತ್ವ ಶಾಸ್ತ್ರದ ಅನ್ವೇಷಣಾ ದೃಷ್ಟಿಕೋನದಲ್ಲಿ ಸಾರ್ವಜನಿಕರ ಆಸಕ್ತಿಯನ್ನು ರುಜುವಾತು ಪಡಿಸುತ್ತವೆ.

ವಾಸ್ತವವಾಗಿ ಕೊಪೇನ್ ಮತ್ತು ವ್ಯಾಲಿ ಆಫ್ ಕಿಂಗ್ಸ್ ಮೊದಲಾದ ಪ್ರದೇಶಗಳಲ್ಲಿ ಹೆಚ್ಚು ಪರಿಷ್ಕೃತ ಮತ್ತು ಪ್ರತಿಫಲನಾತ್ಮಕ ಫಲಿತಾಂಶಗಳ ಸಂಶೋಧನೆಯನ್ನು ಮಾಡಲಾಯಿತು. ಆದರೆ ಆಧುನಿಕ ಪುರಾತತ್ತ್ವ ಶಾಸ್ತ್ರದ ಹೆಚ್ಚಿನ ಚಟುವಟಿಕೆಗಳು ಮತ್ತು ಅನ್ವೇಷಣೆಗಳು ಹೆಚ್ಚು ಸಂವೇದನಾಶೀಲವಾಗಿಲ್ಲ. ಪುರಾತತ್ತ್ವ ಶಾಸ್ತ್ರದ ಸಾಹಸಕಾರ್ಯದಲ್ಲಿ ತೊಡಗಿರುವವರು ಆಧುನಿಕ ಸಮೀಕ್ಷೆ, ಉತ್ಖನನ ಮತ್ತು ಮಾಹಿತಿ ಸಂಸ್ಕರಣೆ ಮಾಡುವಲ್ಲಿನ ಶ್ರಮದಾಯಕ ಕೆಲಸವನ್ನು ಅಲಕ್ಷಿಸುತ್ತಾರೆ. ಕೆಲವು ಪುರಾತತ್ತ್ವಜ್ಞರು ಅಂತಹ ನಿರೂಪಣೆಗಳನ್ನು "ನಕಲಿ-ಪುರಾತತ್ತ್ವ ಶಾಸ್ತ್ರ" ಎಂದು ಕರೆಯುತ್ತಾರೆ.

ಪುರಾತತ್ತ್ವ ಶಾಸ್ತ್ರವನ್ನು ಪ್ರಮುಖ ಸಮೂಹ ಮಾಧ್ಯಮಗಳಲ್ಲಿ ಸಂವೇದನಾಶೀಲ ಮಾರ್ಗಗಳಲ್ಲಿ ನಿರೂಪಿಸಲಾಗಿದೆ. ಇದು ಅನೇಕ ಅನುಕೂಲಗಳನ್ನು ಮತ್ತು ಅನಾನುಕೂಲಗಳನ್ನು ಹೊಂದಿದೆ. ಇಂಡಿಯಾನ ಜೋನ್ಸ್ ಫಿಲ್ಮ್ ಮತ್ತು ಟಾಂಬ್ ರೈಡರ್ ವೀಡಿಯೊ ಗೇಮ್‌ಗಳ ಬಗೆಗಿನ ಮಕ್ಕಳ ಉದ್ರೇಕವು ಆ ಕ್ಷೇತ್ರಕ್ಕೆ ಪ್ರವೇಶಿಸಲು ತಮಗೆ ಸ್ಫೂರ್ತಿಯಾಗಿದೆಯೆಂದು ಹೆಚ್ಚಿನ ವೃತ್ತಿಗಾರರು ಹೇಳಿದ್ದಾರೆ.[ಸೂಕ್ತ ಉಲ್ಲೇಖನ ಬೇಕು] ಪುರಾತತ್ತ್ವಜ್ಞರು ಸಾರ್ವಜನಿಕ ಬೆಂಬಲವನ್ನೂ ಹೆಚ್ಚು ಅವಲಂಬಿಸಿರುತ್ತಾರೆ, ನಿಜವಾಗಿ ಅವರ ಕೆಲಸವನ್ನು ಮಾಡುವವರ ಬಗ್ಗೆ ಹೆಚ್ಚಾಗಿ ಚರ್ಚಿಸುತ್ತಿರುತ್ತಾರೆ.[೬೩]

ಪ್ರಸ್ತುತ ಸಮಸ್ಯೆಗಳು ಮತ್ತು ವಿವಾದಗಳು

[ಬದಲಾಯಿಸಿ]

ಸಾರ್ವಜನಿಕ ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ಕೊಳ್ಳೆ ಹೊಡೆಯುವುದನ್ನು ತಡೆಯಲು, ನಕಲಿ-ಪುರಾತತ್ತ್ವ ಶಾಸ್ತ್ರವನ್ನು ನಿಗ್ರಹಿಸಲು ಹಾಗೂ ಶಿಕ್ಷಣದ ಮೂಲಕ ಮತ್ತು ಪುರಾತತ್ತ್ವ ಶಾಸ್ತ್ರದ ಆಸ್ತಿಯ ಪ್ರಾಮುಖ್ಯತೆಗೆ ಸಾರ್ವಜನಿಕ ಮನ್ನಣೆಯನ್ನು ಪ್ರೋತ್ಸಾಹಿಸುವ ಮೂಲಕ ಪುರಾತತ್ತ್ವ ಶಾಸ್ತ್ರದ ಪ್ರದೇಶಗಳನ್ನು ಸಂರಕ್ಷಿಸಲು, ಪುರಾತತ್ತ್ವಜ್ಞರು ಸಾರ್ವಜನಿಕರಿಗೆ-ಮನವರಿಕೆ ಮಾಡುವ ಕಾರ್ಯಚಟುವಟಿಕೆಗಳನ್ನು ನಡೆಸುತ್ತಿದ್ದಾರೆ.[೬೪] ಅವರು ಸಂರಕ್ಷಿತ ಸ್ಥಳಗಳಿಂದ ಹಸ್ತಕಲಾಕೃತಿಗಳನ್ನು ಅಕ್ರಮವಾಗಿ ತೆಗೆದುಕೊಳ್ಳುವವರನ್ನು ಹುಡುಕುವ ಮೂಲಕ ಹಾಗೂ ಪುರಾತತ್ತ್ವ ಶಾಸ್ತ್ರದ ಪ್ರದೇಶಗಳ ಹತ್ತಿರದಲ್ಲಿ ವಾಸಿಸುವವರಿಗೆ ಕೊಳ್ಳೆ ಹೊಡೆಯುವ, ದೋಚುವ ಅಪಾಯದ ಎಚ್ಚರಿಕೆಯನ್ನು ನೀಡುವ ಮೂಲಕ ಲೂಟಿಯನ್ನು ನಿಗ್ರಹಿಸಲು ಪ್ರಯತ್ನಿಸುತ್ತಾರೆ. ಸಾರ್ವಜನಿಕರಿಗೆ-ಮನವರಿಕೆ ಮಾಡುವ ಕಾರ್ಯಚಟುವಟಿಕೆಗಳ ಸಾಮಾನ್ಯ ವಿಧಾನಗಳೆಂದರೆ ಭಿತ್ತಿ ಪತ್ರಗಳ ಮೂಲಕ ತಿಳಿವಳಿಕೆ ವಿವರವನ್ನು ಬಿಡುಗಡೆಗೊಳಿಸುವುದು ಮತ್ತು ವೃತ್ತಿಪರ ಪುರಾತತ್ತ್ವಜ್ಞರು ಉತ್ಖನನ ಮಾಡುವ ಪ್ರದೇಶಗಳಿಗೆ ಶಾಲಾ ಕ್ಷೇತ್ರ-ಪ್ರವಾಸವನ್ನು ಪ್ರೋತ್ಸಾಹಿಸುವುದು.[ಸೂಕ್ತ ಉಲ್ಲೇಖನ ಬೇಕು] ಪುರಾತತ್ತ್ವ ಶಾಸ್ತ್ರ ಮತ್ತು ಪುರಾತತ್ತ್ವ ಶಾಸ್ತ್ರದ ಪ್ರದೇಶಗಳ ಪ್ರಾಮುಖ್ಯತೆಯ ಬಗೆಗಿನ ಸಾರ್ವಜನಿಕ ಮನ್ನಣೆಯು ಹೆಚ್ಚಾಗಿ ಅಭಿವೃದ್ಧಿಯ ಅತಿಕ್ರಮಣ ಅಥವಾ ಇತರ ಅಪಾಯಗಳಿಂದ ರಕ್ಷಣೆಯನ್ನು ಒದಗಿಸುತ್ತದೆ.

ಪುರಾತತ್ತ್ವಜ್ಞರ ಕೆಲಸದ ವೀಕ್ಷಕರು ಸಾರ್ವಜನಿಕರಾಗಿರುತ್ತಾರೆ. ಅವರ ಕೆಲಸವು ಶೈಕ್ಷಣಿಕ-ವಲ್ಲದ ಮತ್ತು ಪುರಾತತ್ತ್ವ ಶಾಸ್ತ್ರಕ್ಕೆ ಸಂಬಂಧಿಸಿಲ್ಲದ ಪ್ರೇಕ್ಷಕರಿಗೆ ಪ್ರಯೋಜನ ಒದಗಿಸಬಹುದು. ಅಲ್ಲದೇ ಅವರು ಪುರಾತತ್ತ್ವ ಶಾಸ್ತ್ರದ ಬಗ್ಗೆ ಸಾರ್ವಜನಿಕರಿಗೆ ಶಿಕ್ಷಣ-ಮಾಹಿತಿ ಒದಗಿಸುವ ಮತ್ತು ವಿವರ ನೀಡುವ ಜವಾಬ್ದಾರಿಯನ್ನು ಹೊಂದಿರುತ್ತಾರೆ ಎಂದು ಅವರು ಮನಗಾಣುತ್ತಾರೆ. ಸ್ಥಳೀಯ ಸಾಂಪ್ರದಾಯಿಕ ಸ್ಮಾರಕಗಳ ಬಗೆಗೆ ಜಾಗೃತಿಯು ಸಮುದಾಯ ಉತ್ಖನನ ಯೋಜನೆಗಳ ಮೂಲಕ ಪೌರರ ಮತ್ತು ಪ್ರತಿಯೊಬ್ಬರ ಅಭಿಮಾನವನ್ನು ಹೆಚ್ಚಿಸುವ ಕಾರ್ಯ ಮಾಡಬೇಕಾಗುತ್ತದೆ. ಇದಲ್ಲದೇ ಪುರಾತತ್ತ್ವ ಶಾಸ್ತ್ರದ ಪ್ರದೇಶದ ಮತ್ತು ಅಲ್ಲಿನ ಮಾಹಿತಿ ಅರಿವಿನ ಬಗೆಗಿನ ಸಾರ್ವಜನಿಕ ನಿರೂಪಣೆಗಳನ್ನು ಉತ್ತಮಗೊಳಿಸುವ ಗುರಿ ಹೊಂದಿರುತ್ತದೆ.[ಸೂಕ್ತ ಉಲ್ಲೇಖನ ಬೇಕು] U.S. ಡಿಪಾರ್ಟ್ಮೆಂಟ್ ಆಫ್ ಅಗ್ರಿಕಲ್ಚರ್, ಫಾರೆಸ್ಟ್ ಸರ್ವಿಸ್(USFS) ಒಂದು ಸ್ವಯಂಸೇವಕ ಪುರಾತತ್ತ್ವ ಶಾಸ್ತ್ರ ಮತ್ತು ಐತಿಹಾಸಿಕ ಸಂರಕ್ಷಣಾ ಯೋಜನೆಯನ್ನು ನಡೆಸುತ್ತದೆ, ಇದನ್ನು ಪಾಸ್‌ಪೋರ್ಟ್ ಇನ್ ಟೈಮ್ (PIT) ಎಂದು ಕರೆಯುತ್ತಾರೆ. U.S. ಸ್ವಯಂಸೇವಕರೊಂದಿಗೆ ರಾಷ್ಟ್ರೀಯ ಅರಣ್ಯಗಳಲ್ಲಿ ವೃತ್ತಿಪರ USFS ಪುರಾತತ್ತ್ವಜ್ಞರು ಮತ್ತು ಇತಿಹಾಸಕಾರರೊಂದಿಗೆ ಕೆಲಸ ಮಾಡುವ ಸ್ವಯಂಸೇವಕರು ನಿಪುಣ-ತಜ್ಞರ ಮೇಲ್ವಿಚಾರಣೆಯಡಿಯಲ್ಲಿ ವೃತ್ತಿಪರ ಪುರಾತತ್ತ್ವ ಶಾಸ್ತ್ರದ ಎಲ್ಲಾ ಭಾಗಗಳಲ್ಲೂ ತೊಡಗುತ್ತಾರೆ.[೬೫]

UKಯಲ್ಲಿ, ಟೈಮ್ ಟೀಮ್ ಮತ್ತು ಮೀಟ್ ದಿ ಆನ್ಸಿಸ್ಟರ್ಸ್ ಮೊದಲಾದ ಪ್ರಸಿದ್ಧ ಪುರಾತತ್ತ್ವ ಶಾಸ್ತ್ರ ಯೋಜನೆಗಳು ಅತಿ ಹೆಚ್ಚಿನ ಪ್ರಮಾಣದ ಸಾರ್ವಜನಿಕ ಆಕರ್ಷಣೆ-ಆಸಕ್ತಿಯನ್ನು ಪಡೆದವು.[ಸೂಕ್ತ ಉಲ್ಲೇಖನ ಬೇಕು] ಇಲ್ಲಿ ಪುರಾತತ್ತ್ವಜ್ಞರು ದೊಡ್ಡ ಯೋಜನೆಗಳಲ್ಲಿ ಸಾರ್ವಜನಿಕರನ್ನು ತೊಡಗಿಸಿಕೊಳ್ಳಲು ಮತ್ತು ಅವರಿಗೆ ಅದರ ಬಗ್ಗೆ ಮನವರಿಕೆ ಮಾಡಲು ಹಿಂದಿನದಕ್ಕಿಂತ ಈಗ ಅಧಿಕ ಆದ್ಯತೆಗಳನ್ನು ನೀಡುತ್ತಿದ್ದಾರೆ. ಅಲ್ಲದೆ ಹೆಚ್ಚಿನ ಸ್ಥಳೀಯ ಪುರಾತತ್ತ್ವ ಶಾಸ್ತ್ರ ಸಂಸ್ಥೆಗಳು ಸಣ್ಣ ಪ್ರಮಾಣದ, ಹೆಚ್ಚು ಸ್ಥಳೀಯ ಯೋಜನೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯನ್ನು ಹೆಚ್ಚಿಸಲು ಸಮುದಾಯ ಪುರಾತತ್ತ್ವ ಶಾಸ್ತ್ರದ ಚೌಕಟ್ಟಿನೊಳಗೆ ಕಾರ್ಯನಿರ್ವಹಿಸುತ್ತವೆ. ಪುರಾತತ್ತ್ವ ಶಾಸ್ತ್ರದ ಉತ್ಖನನವನ್ನು ಹೆಚ್ಚು-ತರಬೇತಿ ಪಡೆದ ಕಾರ್ಯಕರ್ತರು ನಿರ್ವಹಿಸುತ್ತಾರೆ, ಇದರಿಂದ ಕೆಲಸವು ಶೀಘ್ರಗೊಳ್ಳುತ್ತದೆ ಮತ್ತು ಹೆಚ್ಚು ಕರಾರುವಾಕ್ಕಾಗುತ್ತದೆ. ಬಿಗಿ ಸಮಯ ಮಿತಿಯೊಂದಿಗೆ ಆಧುನಿಕ ನಿರ್ಮಾಣ ಪ್ರದೇಶದಲ್ಲಿ ಕೆಲಸ ಮಾಡುವಲ್ಲಿ ಕಂಡುಬರುವ ಅವಶ್ಯಕ ಆರೋಗ್ಯ ಮತ್ತು ಸುರಕ್ಷತೆ ಹಾಗೂ ನಷ್ಟಪರಿಹಾರ ರಕ್ಷಣಾ ಸಮಸ್ಯೆಗಳನ್ನು ಗಮನಿಸುವುದು ಅಗತ್ಯವಾಗಿರುತ್ತದೆ. ಕೆಲವು ಚಾರಿಟಿಗಳು ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳು ಕೆಲವೊಮ್ಮೆ ಸಂಶೋಧನಾ ಯೋಜನೆಗಳಿಗೆ ಶೈಕ್ಷಣಿಕ ಕಾರ್ಯದ ಭಾಗವಾಗಿ ಅಥವಾ ನಿರೂಪಿಸಲಾದ ಸಮುದಾಯ ಯೋಜನೆಯಾಗಿ ಪ್ರದೇಶಗಳನ್ನು ಒದಗಿಸುತ್ತವೆ.[ಸೂಕ್ತ ಉಲ್ಲೇಖನ ಬೇಕು] ವಾಣಿಜ್ಯ ತರಬೇತಿ ನೀಡುವ ಉತ್ಖನನ ಮತ್ತು ಪುರಾತತ್ತ್ವ ಶಾಸ್ತ್ರದ ರಜಾದಿನದ ಪ್ರವಾಸಗಳಿಗೆ ಸ್ಥಳಗಳನ್ನು ಒದಗಿಸುವ ಬೆಳವಣಿಗೆ ಹೊಂದುತ್ತಿರುವ ಉದ್ಯಮವೂ ಸಹ ಇದೆ.[ಸೂಕ್ತ ಉಲ್ಲೇಖನ ಬೇಕು]

ಪುರಾತತ್ತ್ವಜ್ಞರು ಸ್ಥಳೀಯ ಜ್ಞಾನಕ್ಕೆ ಹೆಚ್ಚು ಮಹತ್ವಕೊಡುತ್ತಾರೆ. ಅಲ್ಲದೇ ಸ್ಥಳೀಯ ಐತಿಹಾಸಿಕ ಮತ್ತು ಪುರಾತತ್ತ್ವ ಶಾಸ್ತ್ರದ ಸಮಾಜಗಳೊಂದಿಗೆ ಸಂಪರ್ಕ ಕಲ್ಪಿಸುತ್ತಾರೆ, ಇದು ಇಂದು ಸಮುದಾಯ ಪುರಾತತ್ತ್ವ ಶಾಸ್ತ್ರ ಯೋಜನೆಗಳು ಹೆಚ್ಚು ಸುಲಭ ಮತ್ತು ಸಾಮಾನ್ಯವಾಗಲು ಒಂದು ಕಾರಣವಾಗಿದೆ. ಹೆಚ್ಚಿನ ಪುರಾತತ್ತ್ವಜ್ಞರು ಪುರಾತತ್ತ್ವ ಶಾಸ್ತ್ರದ ಪ್ರದೇಶಗಳನ್ನು ಪತ್ತೆಹಚ್ಚುವಲ್ಲಿ ಸಾರ್ವಜನಿಕರ ಸಹಾಯವನ್ನು ಪಡೆಯುತ್ತಾರೆ, ವೃತ್ತಿಪರ ಪುರಾತತ್ತ್ವಜ್ಞರು ಹಾಗೆ ಮಾಡಲು ಬಂಡವಾಳವನ್ನು ಮಾತ್ರವಲ್ಲದೆ ಸಮಯವನ್ನೂ ಹೊಂದಿರುವುದಿಲ್ಲ.

ನಕಲಿ-ಪುರಾತತ್ತ್ವ ಶಾಸ್ತ್ರ

[ಬದಲಾಯಿಸಿ]

ನಕಲಿ-ಪುರಾತತ್ತ್ವ ಶಾಸ್ತ್ರವೆಂದರೆ ಪುರಾತತ್ತ್ವ ಶಾಸ್ತ್ರವೆಂದು ನಿರೂಪಿಸಲಾಗುವ ಎಲ್ಲಾ ಚಟುವಟಿಕೆಗಳ ಆಶ್ರಯ-ಪದವಾಗಿದೆ, ಆದರೆ ಇದು ವಾಸ್ತವವಾಗಿ ಸಾಮಾನ್ಯವಾಗಿ-ಅಂಗೀಕೃತವಾದ ಮತ್ತು ವೈಜ್ಞಾನಿಕ ಪುರಾತತ್ತ್ವ ಶಾಸ್ತ್ರದ ಅಭ್ಯಾಸಗಳನ್ನು ಉಲ್ಲಂಘಿಸುತ್ತದೆ. ಇದು ಹೆಚ್ಚು ಕಾಲ್ಪನಿಕ ಪುರಾತತ್ತ್ವ ಶಾಸ್ತ್ರದ ಕೆಲಸವನ್ನು (ಮೇಲೆ ವಿವರಿಸಿದ) ಮತ್ತು ಕೆಲವು ನೈಜ ಚಟುವಟಿಕೆಯನ್ನು ಒಳಗೊಳ್ಳುತ್ತದೆ. ಅನೇಕ ಕಾಲ್ಪನಿಕವಲ್ಲದ ಲೇಖಕರು ಪ್ರೊಸೆಶ್ವಲ್ ಪುರಾತತ್ತ್ವ ಶಾಸ್ತ್ರದ ವೈಜ್ಞಾನಿಕ ವಿಧಾನಗಳನ್ನು ಅಥವಾ ಪೋಸ್ಟ್-ಪ್ರೊಸೆಶ್ವಲಿಸಮ್‌ನಲ್ಲಿನ ಅದರ ವಿಶೇಷ ವಿಮರ್ಶೆಗಳನ್ನು ಕಡೆಗಣಿಸಿದ್ದಾರೆ.

ಈ ಪ್ರಕಾರಕ್ಕೆ ಒಂದು ಉದಾಹರಣೆಯೆಂದರೆ ಎರಿಕ್ ವನ್ ಡ್ಯಾನಿಕೆನ್‌ನ ಕೃತಿ. ಆತನ 1968ರ ಪುಸ್ತಕ ಟ್ಯಾರಿಯಟ್ಸ್ ಆಫ್ ದಿ ಗಾಡ್ಸ್? , ಅನೇಕ ಅನಂತರದ ಕಡಿಮೆ-ಜನಪ್ರಿಯವಾದ ಕೃತಿಗಳೊಂದಿಗೆ, ಭೂಮಿಯ ಮೇಲಿನ ಮಾನವ ನಾಗರಿಕತೆ ಮತ್ತು ಹೆಚ್ಚು ತಾಂತ್ರಿಕವಾಗಿ ಮುಂದುವರಿದ ಭೂಮಿಯಿಂದ ಆಚೆಯಿರುವ ನಾಗರಿಕತೆಗಳ ನಡುವಿನ ಪುರಾತನ ಸಂಬಂಧಗಳ ಸಿದ್ಧಾಂತವನ್ನು ನಿರೂಪಿಸುತ್ತದೆ. ಪುರಾತನ-ಸಂಬಂಧ ಸಿದ್ಧಾಂತ ಅಥವಾ ಪುರಾತನ ಅಂತರಿಕ್ಷ ಸಿದ್ಧಾಂತ ಎಂದು ಕರೆಯುವ ಈ ಸಿದ್ಧಾಂತವು ಡ್ಯಾನಿಕೆನ್‌ನದಲ್ಲ ಅಥವಾ ಅವನಿಂದ ಹುಟ್ಟಿಕೊಂಡ ಕಲ್ಪನೆಯೂ ಅಲ್ಲ. ಈ ಗುಣಲಕ್ಷಣದ ಕೃತಿಗಳನ್ನು ಸಾಮಾನ್ಯವಾಗಿ, ಸೀಮಿತ ಸಾಕ್ಷ್ಯದ ಆಧಾರದಲ್ಲಿ ಪ್ರಸಿದ್ಧ ಸಿದ್ಧಾಂತಗಳನ್ನು ತ್ಯಜಿಸಿ, ಪೂರ್ವಭಾವಿಯಾಗಿ ಕಲ್ಪಿಸಿಕೊಂಡ ಸಿದ್ಧಾಂತದೊಂದಿಗೆ ಸಾಕ್ಷ್ಯವನ್ನು ವಿವರಿಸುವ ಮೂಲಕ ಸೂಚಿಸಲಾಗಿದೆ.

ಚಿತ್ರ:Looting rontoy2007.jpg
ಪೆರುವಿನ ಹೌರ ವ್ಯಾಲಿಯ ರಾಂಟೊದಲ್ಲಿ 2007ರ ಜೂನ್‌ನಲ್ಲಿ ಉತ್ಖನನ ಮಾಡಲಾದ ಲೂಟಿಗಾರರ ಹಳ್ಳ.ಲೂಟಿಗಾರರು ಅನ್ವೇಷಣೆ ಮಾಡುವಾಗ ಉಂಟಾದ ಕೆಲವು ಸಣ್ಣ ರಂಧ್ರಗಳು ಮತ್ತು ಅವರ ಹೆಜ್ಜೆಗುರುತುಗಳನ್ನು ಕಾಣಬಹುದು.
ಅದಾದ್-ನಿರಾರಿ ಎಂಬ ಹೆಸರಿನ ರಾಜನ ಸ್ಮಾರಕ ಸ್ತಂಭ.2003ರ ಇರಾಕ್ ಯುದ್ಧಕ್ಕೆ ಸಂಬಂಧಿಸಿದಂತೆ ಇರಾಕ್ ನ್ಯಾಷನಲ್ ಮ್ಯೂಸಿಯಂನಿಂದ ದರೋಡೆ ಮಾಡಲಾದ ವಸ್ತು.

ಪುರಾತತ್ತ್ವ ಶಾಸ್ತ್ರ ವಿಭಾಗ ಗುರ್ತಿಸಿದ ಪ್ರದೇಶಗಳನ್ನು ಲೂಟಿ ಮಾಡುವುದು ಒಂದು ಪುರಾತನ ಸಮಸ್ಯೆಯಾಗಿದೆ. ಉದಾಹರಣೆಗಾಗಿ, ಈಜಿಪ್ಟಿನ ಫೇರೋಗಳ ಹೆಚ್ಚಿನ ಸಮಾಧಿಗಳನ್ನು ಪ್ರಾಚೀನ ಕಾಲದಲ್ಲಿ ಲೂಟಿಮಾಡಲಾಗಿತ್ತು.[೬೬] ಪುರಾತತ್ತ್ವ ಶಾಸ್ತ್ರವು ಪ್ರಾಚೀನ ವಸ್ತುಗಳ ಮೇಲೆ ಆಸಕ್ತಿಯನ್ನು ಕೆರಳಿಸುತ್ತದೆ. ಪ್ರಾಕ್ತನ(ಹಸ್ತ) ಕೃತಿಗಳ ಅಥವಾ ಸಂಪತ್ತಿನ ಹುಡುಕಾಟದಲ್ಲಿರುವವರು ಪುರಾತತ್ತ್ವ ಶಾಸ್ತ್ರದ ಪ್ರದೇಶಗಳಿಗೆ ಹಾನಿಯನ್ನುಂಟುಮಾಡುತ್ತಾರೆ. ಪ್ರಾಕ್ತನ ಕೃತಿಗಳ ವಾಣಿಜ್ಯ ಮತ್ತು ಶೈಕ್ಷಣಿಕ ಬೇಡಿಕೆಯು ದುರದೃಷ್ಟವಶಾತ್ ನೇರವಾಗಿ ಪ್ರಾಚೀನಾವಶೇಷಗಳ ನ್ಯಾಯಬಾಹಿರ ವ್ಯಾಪಾರಕ್ಕೆ ಸಹಾಯ ಮಾಡುತ್ತದೆ. ಪ್ರಾಚೀನಾವಶೇಷಗಳನ್ನು ವಿದೇಶಿ ಖಾಸಗಿ ಸಂಗ್ರಹಕಾರರಿಗೆ ಕಳ್ಳಸಾಗಣೆ ಮಾಡುವುದು, ಸಂಪನ್ಮೂಲಗಳ ಕೊರತೆಯನ್ನು ಹೊಂದಿರುವ ರಾಷ್ಟ್ರಗಳಲ್ಲಿ ಅತಿ ಹೆಚ್ಚಿನ ಪ್ರಮಾಣದ ಸಾಂಸ್ಕೃತಿಕ ಮತ್ತು ಆರ್ಥಿಕ ಹಾನಿಯನ್ನು ಉಂಟುಮಾಡಿದೆ. ಲೂಟಿ ಮಾಡುವವರು ಪುರಾತತ್ತ್ವ ಶಾಸ್ತ್ರದ ಪ್ರದೇಶಗಳನ್ನು ನಾಶ ಮಾಡುತ್ತಾರೆ. ಆ ಮೂಲಕ ಮುಂದಿನ ಪೀಳಿಗೆಯವರಿಗೆ ಅವರ ಜನಾಂಗೀಯ ಮತ್ತು ಸಾಂಸ್ಕೃತಿಕ ಆಸ್ತಿಯ ಬಗ್ಗೆ ಮಾಹಿತಿಯು ಇಲ್ಲದಂತೆ ಮಾಡುತ್ತಾರೆ. ಸ್ಥಳೀಯರು ವಿಶೇಷವಾಗಿ ಅವರ 'ಸಾಂಸ್ಕೃತಿಕ ಸಂಪನ್ಮೂಲ'ಗಳಿಗೆ ಪ್ರವೇಶವನ್ನು ಮತ್ತು ಅದರ ಮೇಲಿನ ನಿಯಂತ್ರಣವನ್ನು ಕಳೆದುಕೊಳ್ಳುತ್ತಾರೆ. ಅಂತಿಮವಾಗಿ ಅವರಿಗೆ ಹಿಂದಿನವರ ಬಗ್ಗೆ ತಿಳಿಯುವ ಅವಕಾಶವಿಲ್ಲದಂತಾಗುತ್ತದೆ.[೬೭]

ಬಡ ತೃತೀಯ ಪ್ರಪಂಚದ ರಾಷ್ಟ್ರಗಳು ಹೆಚ್ಚು ಲೂಟಿಯಾಗುತ್ತವೆ,[ಸೂಕ್ತ ಉಲ್ಲೇಖನ ಬೇಕು] ಆದರೆ ಇದು ಒಂದು ತಪ್ಪು ಕಲ್ಪನೆಯಾಗಿದೆ.[೬೭] ಆರ್ಥಿಕ ಸಂಪನ್ಮೂಲಗಳ ಕೊರತೆ ಮತ್ತು ಗುರಿ ಇರದ ರಾಜಕಾರಣವು ಪ್ರಪಂಚದಾದ್ಯಂತವಿರುವ ತೀವ್ರ ಸಮಸ್ಯೆಗಳಾಗಿವೆ, ಇವು ಪುರಾತತ್ತ್ವ ಶಾಸ್ತ್ರದ ಪ್ರದೇಶಗಳ ಪರಿಣಾಮಕಾರಿ ರಕ್ಷಣೆಗೆ ತಡೆಯನ್ನುಂಟುಮಾಡುತ್ತವೆ. ವೈನ್ ಡೆಲೋರಿಯ ಜೂನಿಯರ್ ಮೊದಲಾದ ಅನೇಕ ಅಮೆರಿಕಾದ-ಭಾರತೀಯ-ಮೂಲನಿವಾಸಿಗಳು ಇಂದು ಅಮೆರಿಕಾದ ಭಾರತೀಯ-ಮೂಲನಿವಾಸಿಗಳ-ಪ್ರದೇಶದಿಂದ ಸಾಂಸ್ಕೃತಿಕ ಪ್ರಾಕ್ತನ ಕೃತಿಗಳ ವರ್ಗಾವಣೆಯನ್ನು ಕಳ್ಳತನವೆಂದು ಹಾಗೂ ಹೆಚ್ಚಿನ ವೃತ್ತಿಪರ ಪುರಾತತ್ತ್ವ ಶಾಸ್ತ್ರವನ್ನು ಶೈಕ್ಷಣಿಕ ಲೂಟಿಯೆಂದು ಪರಿಗಣಿಸುತ್ತಾರೆ.

1937ರಲ್ಲಿ ಲಾಸ್ ಏಂಜಲೀಸ್ CA ಯಲ್ಲಿನ ಸೌತ್‌ವೆಸ್ಟ್ ಮ್ಯೂಸಿಯಂನ ನಿರ್ದೇಶಕ W. F. ಹಾಡ್ಗೆ, ಮ್ಯೂಸಿಯಂ ಲೂಟಿ ಮಾಡಿದವರಿಂದ ಸಂಗ್ರಹಗಳನ್ನು ಖರೀದಿಸುವುದಿಲ್ಲ ಅಥವಾ ಸ್ವೀಕರಿಸುವುದಿಲ್ಲವೆಂಬ ಹೇಳಿಕೆಯನ್ನು ಪ್ರಕಟಿಸಿದನು.[೬೮] ಪ್ರಾಕ್ತನ ಕೃತಿಗಳ ಅಕ್ರಮ ಸಾಗಣೆಯನ್ನು ಮೊದಲ ಬಾರಿಗೆ ಆರ್ಕಿಯಲಾಜಿಕಲ್ ರಿಸೋರ್ಸಸ್ ಪ್ರೊಟೆಕ್ಷನ್ ಆಕ್ಟ್ (ARPA; ಪಬ್ಲಿಕ್ ಲಾ 96-95; 93 ಸ್ಟ್ಯಾಟ್ಯೂಟ್ 721; 16 U.S.C. 470aamm) ನಡಿಯಲ್ಲಿ 1992ರಲ್ಲಿ ಇಂಡಿಯಾನ ರಾಜ್ಯದಲ್ಲಿ ರದ್ದುಗೊಳಿಸಲಾಯಿತು.[೬೯]

ಮೂಲನಿವಾಸಿಗಳು

[ಬದಲಾಯಿಸಿ]

ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ, ಕೆನ್ನೆವಿಕ್ ಮ್ಯಾನ್ ಮೊದಲಾದ ಉದಾಹರಣೆಗಳು ಅಮೆರಿಕಾದ ಮೂಲನಿವಾಸಿಗಳು ಮತ್ತು ಪುರಾತತ್ತ್ವಜ್ಞರ ನಡುವಿನ ಬಿಕ್ಕಟ್ಟನ್ನು ಸ್ಪಷ್ಟಪಡಿಸುತ್ತದೆ. ಇದನ್ನು ಸಮಾಧಿಗಳಿಗೆ ಮೀಸಲಾದ ಪ್ರದೇಶಗಳ ಬಗ್ಗೆ ಗೌರವವನ್ನು ಉಳಿಸಿಕೊಳ್ಳುವ ಅವಶ್ಯಕತೆ ಮತ್ತು ಅವುಗಳನ್ನು ಅಧ್ಯಯನ ಮಾಡುವುದರಿಂದಾಗುವ ಶೈಕ್ಷಣಿಕ ಪ್ರಯೋಜನದ ನಡುವಿನ ಸಂಘರ್ಷವೆಂದು ಸಂಕ್ಷೇಪಿಸಬಹುದು. ಅನೇಕ ವರ್ಷಗಳ ಕಾಲ ಅಮೆರಿಕಾದ ಪುರಾತತ್ತ್ವಜ್ಞರು ಭಾರತೀಯ ಶ್ಮಶಾನಗಳನ್ನು ಮತ್ತು ಪವಿತ್ರವೆಂದು ಪರಿಗಣಿಸಲಾದ ಇತರ ಸ್ಥಳಗಳನ್ನು ಅಗೆದು, ಅಲ್ಲಿನ ಪ್ರಾಕ್ತನ ಕೃತಿಗಳು ಮತ್ತು ಮಾನವ ಅವಶೇಷಗಳನ್ನು ಹೆಚ್ಚಿನ ಅಧ್ಯಯನಕ್ಕೆ ಸೌಕರ್ಯದ ಅಂಶಗಳನ್ನು ಸಂಗ್ರಹಿಸುವುದಕ್ಕಾಗಿ ತೆಗೆದುಕೊಂಡರು. ಕೆಲವು ಸಂದರ್ಭಗಳಲ್ಲಿ ಮಾನವ ಅವಶೇಷಗಳನ್ನು ಸಂಪೂರ್ಣವಾಗಿ ಅಧ್ಯಯನ ಮಾಡಲಿಲ್ಲ, ಬದಲಿಗೆ ಕೇವಲ ದಾಖಲೆಯಲ್ಲಿ ಮಾತ್ರ ನಮೂದಿಸಿಕೊಳ್ಳಲಾಯಿತು, ಅವುಗಳನ್ನು ಮತ್ತೆ ಹೂಳಲೂ ಇಲ್ಲ. ಪಾಶ್ಚಿಮಾತ್ಯ ಪುರಾತತ್ತ್ವಜ್ಞರ ಪ್ರಾಚೀನಕಾಲದ ಅವಲೋಕನವು ಬುಡಕಟ್ಟು ಜನಾಂಗದವರ ಅವಲೋಕನಕ್ಕಿಂತ ಭಿನ್ನವಾಗಿದೆ. ಪಾಶ್ಚಿಮಾತ್ಯರು ಸಮಯವನ್ನು ರೇಖೀಯವಾಗಿ ಪರಿಗಣಿಸುತ್ತಾರೆ; ಅದೇ ಹೆಚ್ಚಿನ ಸ್ಥಳೀಯರಿಗೆ ಇದು ಆವರ್ತವಾಗಿದೆ. ಪಾಶ್ಚಿಮಾತ್ಯರ ದೃಷ್ಟಿಕೋನದಿಂದ, ಗತಕಾಲವು ಬಹುಹಿಂದೆಯೇ ಆಗಿಹೋಗಿದೆ; ಸ್ಥಳೀಯರ ದೃಷ್ಟಿಕೋನದಿಂದ, ಗತಕಾಲವನ್ನು ಕೆದಕುವುದರಿಂದ ಪ್ರಸ್ತುತ ಕಾಲದ ಮೇಲೆ ಘೋರ ಪರಿಣಾಮ ಉಂಟಾಗುತ್ತದೆ.

ಇದರ ಪರಿಣಾಮವಾಗಿ, ಅಮೆರಿಕಾದ-ಭಾರತೀಯರು ಅವರ ಪೂರ್ವಜರು ನಿಷೇಧಿಸಿದ ಪ್ರದೇಶಗಳ ಪುರಾತತ್ತ್ವ ಶಾಸ್ತ್ರದ ಉತ್ಖನನವನ್ನು ತಡೆಗಟ್ಟಲು ಪ್ರಯತ್ನಿಸಿದರು. ಅಮೆರಿಕಾದ ಪುರಾತತ್ತ್ವಜ್ಞರು ವೈಜ್ಞಾನಿಕ ಜ್ಞಾನದ ಬೆಳವಣಿಗೆಯು ಅವರ ಅಧ್ಯಯನಗಳನ್ನು ಮುಂದುವರಿಸಲು ಒಂದು ತರ್ಕಬದ್ಧ ಕಾರಣವಾಗಿದೆ ಎಂದು ನಂಬಿದ್ದರು. ಈ ವಿವಾದಾತ್ಮಕ ಸ್ಥಿತಿಯನ್ನು ನೇಟಿವ್ ಅಮೆರಿಕನ್ ಗ್ರೇವ್ಸ್ ಪ್ರೊಟೆಕ್ಷನ್ ಆಂಡ್ ರಿಪ್ಯಾಟ್ರಿಯೇಶನ್ ಆಕ್ಟ್ (NAGPRA, 1990) ಸೂಚಿಸಿತು. ಇದು ಸಂಶೋಧನಾ ಸಂಸ್ಥೆಗಳ ಮಾನವ ಅವಶೇಷಗಳನ್ನು ಪಡೆಯುವ ಹಕ್ಕನ್ನು ನಿಯಂತ್ರಿಸುವ ಮೂಲಕ ಸಂಧಾನ ಮಾಡಲು ಪ್ರಯತ್ನಿಸಿತು. ಪೋಸ್ಟ್-ಪ್ರೊಸೆಶ್ವಲಿಸಮ್‌ನ ಉತ್ತೇಜನದಿಂದಾಗಿ, ಕೆಲವು ಪುರಾತತ್ತ್ವಜ್ಞರು ಸ್ಥಳೀಯರ ಸಹಾಯವನ್ನು ಪಡೆಯಲು ಆರಂಭಿಸಿದರು.

ಪುರಾತತ್ತ್ವಜ್ಞರು ಪವಿತ್ರ ಸ್ಥಳವೆಂದು ನಂಬುವ ಸ್ಥಳೀಯರ ದೃಷ್ಟಿಕೋನದಲ್ಲಿ ಪುರಾತತ್ತ್ವ ಶಾಸ್ತ್ರದ ಪ್ರದೇಶವು ಏನನ್ನು ಒಳಗೊಳ್ಳುತ್ತದೆ ಎಂಬುದನ್ನು ಪುನಃಪರಿಶೀಲಿಸುವ ನಿರ್ಬಂಧಕ್ಕೊಳಗಾದರು. ಹೆಚ್ಚಿನ ಸ್ಥಳೀಯರ ಪ್ರಕಾರ ಕೊಳಗಳು, ಪರ್ವತಗಳು ಅಥವಾ ಮರಗಳಂತಹ ನೈಸರ್ಗಿಕ ವೈಶಿಷ್ಟ್ಯಗಳು ಸಾಂಸ್ಕೃತಿಕ ಪ್ರಾಮುಖ್ಯತೆಯನ್ನು ಹೊಂದಿರುತ್ತವೆ. ಆಸ್ಟ್ರೇಲಿಯಾದ ಪುರಾತತ್ತ್ವಜ್ಞರು ವಿಶೇಷವಾಗಿ ಈ ಸಮಸ್ಯೆಯನ್ನು ಪರಿಶೋಧಿಸಿದರು. ಅಲ್ಲದೇ ಈ ಪ್ರದೇಶಗಳ ಅಭಿವೃದ್ಧಿಯಾಗುವುದರಿಂದ ರಕ್ಷಿಸುವುದಕ್ಕಾಗಿ ಸಮೀಕ್ಷೆ ಮಾಡಲು ಪ್ರಯತ್ನಿಸಿದರು. ಅಂತಹ ಕಾರ್ಯಗಳಿಗೆ ಪುರಾತತ್ತ್ವಜ್ಞರ ಹಾಗೂ ಅವರು ಸಹಾಯ ಮಾಡಲು ಪ್ರಯತ್ನಿಸುವ ಜನರ ಮಧ್ಯೆ ಹತ್ತಿರದ ಸಂಪರ್ಕ ಮತ್ತು ನಂಬಿಕೆಯು ಅಗತ್ಯವಾಗಿರುತ್ತದೆ.

ಈ ಸಹಯೋಗವು ಕ್ಷೇತ್ರಕಾರ್ಯಕ್ಕೆ ಹಲವಾರು ಹೊಸ ಸಮಸ್ಯೆಗಳನ್ನು ಮತ್ತು ತೊಡಕುಗಳನ್ನು ಉಂಟುಮಾಡಿದರೂ, ಅದರಲ್ಲಿ ಭಾಗವಹಿಸುವ ಎಲ್ಲಾ ಪಕ್ಷಗಳಿಗೆ ಅದು ಪ್ರಯೋಜನಗಳನ್ನು ಹೊಂದಿದೆ. ಪುರಾತತ್ತ್ವಜ್ಞರೊಂದಿಗೆ ಸಹಕರಿಸುವ ಬುಡಕಟ್ಟು ಜನಾಂಗದ ಹಿರಿಯರು ಅವರು ಪವಿತ್ರವೆಂದು ಪರಿಗಣಿಸುವ ಪ್ರದೇಶಗಳ ಉತ್ಖನನವನ್ನು ತಡೆಗಟ್ಟಬಹುದು. ಪುರಾತತ್ತ್ವಜ್ಞರು ಅವರ ಅನ್ವೇಷಣೆಗಳನ್ನು ವಿವರಿಸುವಾಗ ಈ ಹಿರಿಯರ ಸಹಾಯವನ್ನು ಪಡೆಯುತ್ತಾರೆ. ಪುರಾತತ್ತ್ವ ಶಾಸ್ತ್ರದ ವೃತ್ತಿಗೆ ಮೂಲನಿವಾಸಿಗಳನ್ನು ನೇರವಾಗಿ ನೇಮಕಮಾಡಿಕೊಳ್ಳುವ ಸಕ್ರಿಯ ಪ್ರಯತ್ನಗಳೂ ನಡೆಯುತ್ತಿವೆ.

ವಾಪಸಾತಿ

[ಬದಲಾಯಿಸಿ]
ರಿಪ್ಯಾಟ್ರಿಯೇಶನ್ ಆಂಡ್ ರಿಬರಿಯಲ್ ಆಫ್ ಹ್ಯೂಮನ್ ರಿಮೈನ್ಸ್ಅನ್ನು ಗಮನಿಸಿ

ಮೊದಲ ರಾಷ್ಟ್ರಗಳ ಗುಂಪುಗಳು ಮತ್ತು ವಿಜ್ಞಾನಿಗಳ ನಡುವಿನ ಹೊಸ ಶೈಲಿಯ ಪ್ರಬಲ ವಿವಾದವೆಂದರೆ ಸ್ಥಳೀಯ ಪ್ರಾಕ್ತನ ಕೃತಿಗಳನ್ನು ಮೂಲಪ್ರದೇಶಗಳಿಗೆ ಹಿಂದಿರುಗಿಸುವುದಾಗಿದೆ. ಇದರ ಒಂದು ಉದಾಹರಣೆಯು 2005ರ ಜೂನ್ 21ರಂದು ಕಂಡುಬಂದಿತು, ಅಂದು 6,000 ವರ್ಷಗಳಷ್ಟು ಹಿಂದಿನ ಮಾನವ ಅವಶೇಷಗಳನ್ನು ಮತ್ತು ಸಮಾಧಿಯ ಸಾಮಗ್ರಿಗಳನ್ನು ಇರಿಸುವುದಕ್ಕಾಗಿ ಒಟ್ಟಾವ ಪ್ರದೇಶದಲ್ಲಿನ 10 ಆಲ್ಗಾಂಕಿಯನ್ ರಾಷ್ಟ್ರಗಳ ಸಮುದಾಯ ಸದಸ್ಯರು ಮತ್ತು ಹಿರಿಯರು ಕ್ವೆಬೆಕ್‌ನ ಮ್ಯಾನಿವಾಕಿಯ ಹತ್ತಿರದ ಕಿಟಿಗನ್ ಜಿಬಿ ಸಂರಕ್ಷಣಾ ಪ್ರದೇಶದಲ್ಲಿ ಸಭೆಸೇರಿದರು. ಆ ಅವಶೇಷಗಳು ಈಗ ಆ ಪ್ರದೇಶದಲ್ಲಿ ವಾಸಿಸುತ್ತಿರುವ ಆಲ್ಗಾಂಕಿನ್ ಜನರಿಗೆ ಸೇರಿತ್ತೇ ಎಂಬುದು ಖಚಿತವಾಗಿರಲಿಲ್ಲ. ಆ ಅವಶೇಷಗಳು ಐರೋಕ್ವಿಯಿನ್ ಸಂತತಿಗೆ ಸೇರಿದ್ದಾಗಿರಬಹುದು, ಏಕೆಂದರೆ ಅಲ್ಲಿ ಆಲ್ಗಾಂಕಿನ್ ಜನರಿಗಿಂತ ಮೊದಲು ಐರೋಕ್ವಿಯಿನ್ ಸಂತತಿಯವರು ವಾಸಿಸುತ್ತಿದ್ದರು. ಈ ಅವಶೇಷಗಳಲ್ಲಿ ಹೆಚ್ಚು ಹಳೆಯವು ಐರೋಕ್ವಿಯಿನ್ ಅಥವಾ ಆಲ್ಗಾಂಕಿನ್ ಜನರಿಗೆ ಯಾವುದೇ ಸಂಬಂಧವನ್ನು ಹೊಂದಿಲ್ಲ ಹಾಗೂ ಇವು ಆ ಪ್ರದೇಶದಲ್ಲಿ ಹಿಂದೆ ವಾಸಿಸುತ್ತಿದ್ದ ಆರಂಭಿಕ ಸಂಸ್ಕೃತಿಗೆ ಸೇರಿವೆ.

ಆಭರಣಗಳು, ಸಲಕರಣೆಗಳು ಮತ್ತು ಆಯುಧಗಳನ್ನೂ ಒಳಗೊಂಡಂತೆ ಅವಶೇಷಗಳು ಮತ್ತು ಪ್ರಾಕ್ತನ ಕೃತಿಗಳನ್ನು ಮೂಲತಃ ಮೋರಿಸನ್ ಮತ್ತು ಅಲ್ಯುಮೆಟೆ ದ್ವೀಪಗಳನ್ನೂ ಒಳಗೊಂಡಂತೆ ಒಟ್ಟಾವ ಕಣಿವೆಯ ಅನೇಕ ಪ್ರದೇಶಗಳಿಂದ ಉತ್ಖನನ ಮಾಡಲಾಗಿತ್ತು. ಅವು ಹಲವು ದಶಕಗಳ ನಂತರ 1800ರ ಉತ್ತರಾರ್ಧದಿಂದ ಕೆನಡಿಯನ್ ಮ್ಯೂಸಿಯಂ ಆಫ್ ಸಿವಿಲೈಸೇಶನ್‌ನ ಸಂಶೋಧನಾ ಸಂಗ್ರಹದ ಭಾಗವಾದವು. ವಿವಿಧ ಆಲ್ಗಾಂಕಿನ್ ಸಮುದಾಯಗಳ ಹಿರಿಯರು ರೆಡ್ಸೆಡಾರ್ ಚಕ್ಕೆಗಳು, ಮಸ್ಕ್‌ರಾಟ್ ಮತ್ತು ಬೀವರ್ ಚರ್ಮಗಳ ಪದರವಿರುವ ಸಾಂಪ್ರದಾಯಿಕ ರೆಡ್ಸೆಡಾರ್ ಮತ್ತು ಬರ್ಚ್‌ಬಾರ್ಕ್ ಪೆಟ್ಟಿಗೆಗಳನ್ನು ಬಳಸಿ ಸೂಕ್ತ ರೀತಿಯಲ್ಲಿ ಪುನಃಹೂಳುವ ಕ್ರಿಯೆಯನ್ನು ನಡೆಸಿದರು.

ಈಗ ಅಷ್ಟೊಂದು ಎದ್ದು ಕಾಣದ ಶಿಲಾ ದಿಬ್ಬವು ಪುನಃಹೂಳಿದ ಪ್ರದೇಶವನ್ನು ಸೂಚಿಸುತ್ತದೆ, ಅಲ್ಲಿ ವಿವಿಧ ಗಾತ್ರದ ಸುಮಾರು 90 ಪೆಟ್ಟಿಗೆಗಳನ್ನು ಹೂಳಲಾಗಿದೆ. ಅವುಗಳಿಂದ ಮತ್ತಷ್ಟು ವೈಜ್ಞಾನಿಕ ಅಧ್ಯಯನವು ಸಾಧ್ಯವಿಲ್ಲ. ಕಿಟಿಗನ್ ಜಿಬಿ ಸಮುದಾಯ ಮತ್ತು ಮ್ಯೂಸಿಯಂನ ನಡುವಿನ ಸಂಧಾನಗಳು ಬಿಗುವಾಗಿದ್ದರೂ, ಒಪ್ಪಂದವನ್ನು ಅನುಸರಿಸಲು ಸಮರ್ಥರಾಗಿದ್ದರು.[೭೦]

ಕೆನ್ನೆವಿಕ್ ಮ್ಯಾನ್ ಮತ್ತೊಂದು (ಮರುಕಳಿಸಿದ)ವಾಪಸಾತಿ ಅವಶೇಷವಾಗಿದೆ, ಇದು ಹೆಚ್ಚು ಕಾವೇರಿದ ವಿವಾದದ ಮೂಲವಾಗಿತ್ತು.

ಇವನ್ನೂ ಗಮನಿಸಿ

[ಬದಲಾಯಿಸಿ]
  • ಪುರಾತತ್ತ್ವ ಶಾಸ್ತ್ರದ ಕಾಲಾವಧಿಗಳ ಪಟ್ಟಿ
  • ರಾಷ್ಟ್ರದ ಆಧಾರದಲ್ಲಿ ವರ್ಗೀಕರಿಸಲಾದ ಪುರಾತತ್ತ್ವ ಶಾಸ್ತ್ರದ ಪ್ರದೇಶಗಳ ಪಟ್ಟಿ
  • ಪುರಾತತ್ತ್ವಜ್ಞರ ಪಟ್ಟಿ
  • ಪ್ರಮುಖ ಪುರಾತನ-ಕುಲದ-ಸಸ್ಯಶಾಸ್ತ್ರಜ್ಞರ ಪಟ್ಟಿ
  • ಪುರಾತನ-ಧ್ವನಿವಿಜ್ಞಾನ
  • ಪುರಾತನ-ಖಗೋಳ ವಿಜ್ಞಾನ
  • ಪುರಾತನ-ಜೀವಶಾಸ್ತ್ರ
  • ಪುರಾತತ್ತ್ವ ಶಾಸ್ತ್ರದ ಸಂಭಾವ್ಯ ಪ್ರದೇಶ
  • ಬೈಬಲ್‌ನ ಪುರಾತತ್ತ್ವ ಶಾಸ್ತ್ರ
  • ಡೇಟಿಂಗ್ ವಿಧಾನಶಾಸ್ತ್ರ (ಪುರಾತತ್ತ್ವ ಶಾಸ್ತ್ರ)
  • ಕಸದ,ತ್ಯಾಜ್ಯದ ತಿಪ್ಪೆ ಶೋಧನೆ
  • ಪುರಾತತ್ತ್ವ ಶಾಸ್ತ್ರದಲ್ಲಿ GIS
  • ಪುರಾತತ್ತ್ವ ಶಾಸ್ತ್ರದಲ್ಲಿ ಉತ್ಕರ್ಷ ಪಡೆದ ಯೋಜನೆಗಳು
  • ಸಮಾಧಿ ದರೋಡೆ
  • ಹ್ಯಾರಿಸ್ ಮ್ಯಾಟ್ರಿಕ್ಸ್
  • ಐತಿಹಾಸಿಕ ಅನ್ವೇಷಣೆ
  • ಸಾಂಸ್ಕೃತಿಕ ಆಸ್ತಿಯಲ್ಲಿನ ಬೌದ್ಧಿಕ ಗುಣದ ಸಮಸ್ಯೆಗಳು (IPinCH)
  • ಕಳೆದುಹೋದ ನಗರಗಳು
  • ಪ್ರಾಚೀನ-ಪುರಾತತ್ತ್ವ ಶಾಸ್ತ್ರ
  • ವಸ್ತುತಃ ಪ್ರಾಕ್ತನ-ಕೃತಿ
  • ಕ್ಸೆನೊ-ಆರ್ಕಿಯಾಲಜಿ

ಟಿಪ್ಪಣಿಗಳು

[ಬದಲಾಯಿಸಿ]
  1. ೧.೦ ೧.೧ ರೆನ್‌ಫ್ರೆವ್ ಮತ್ತು ಬ್ಯಾಹ್ನ್ (2004 [1991]:13)
  2. ಕಲ್ಚರಲ್ ಆಂಥ್ರೊಪಾಲಜಿ ದಿ ಹ್ಯೂಮನ್ ಚಾಲೆಂಜ್ (2005)
  3. ವೈನ್ರೈಟ್, ಮಾರ್ಟಿನ್. "ಆರ್ಕಿಯಾಲಜಿಸ್ಟ್ಸ್ ಡಿಗ್ ಇನ್ಟು ಗ್ರೀನ್‌ಹ್ಯಾಮ್ ಪೀಸ್ ಕ್ಯಾಂಪ್" - ದಿ ಗಾರ್ಡಿಯನ್
  4. Wylie, Alison (2002), Thinking from things: essays in the philosophy of archaeology, Berkeley: University of California Press, p. 31, ISBN 0-520-22361-6
  5. ಆಲ್ಡೆಂಡರ್ಫರ್ ಮತ್ತು ಮ್ಯಾಸ್ಚ್ನರ್ (1996)
  6. ‌ಗ್ಲ್ಯಾಡ್‌ಫೆಲ್ಟರ್ (1977)
  7. ವಾಟ್ಟರ್ಸ್ (1992)
  8. ವಾಟ್ಟರ್ಸ್ (2000)
  9. ರೆನ್‌ಫ್ರೆವ್ ಮತ್ತು ಬ್ಯಾಹ್ನ್‌ (2004 [1991]:26)
  10. ರೆನ್‌ಫ್ರೆವ್ ಮತ್ತು ಬ್ಯಾಹ್ನ್‌ (2004 [1991]:29)
  11. ರೆನ್‌ಫ್ರೆವ್ ಮತ್ತು ಬ್ಯಾಹ್ನ್‌ (2004 [1991]:30-31)
  12. ಉಲ್ಲೇಖ ದೋಷ: Invalid <ref> tag; no text was provided for refs named Renfrew_Bahn1991#5
  13. "Kevin Greene - ''Archaeology: an Introduction''". Staff.ncl.ac.uk. Archived from the original on 2013-01-23. Retrieved 2010-08-12.
  14. ೧೪.೦ ೧೪.೧ ೧೪.೨ ಟ್ರಿಗ್ಗರ್ (1989)
  15. ಬಿನ್ಫರ್ಡ್ (1962)
  16. ಫ್ಲ್ಯಾನರಿ (1967)
  17. ಶ್ಯಾಂಕ್ಸ್ ಮತ್ತು ಟಿಲ್ಲಿ (1987)
  18. ಶ್ಯಾಂಕ್ಸ್ ಮತ್ತು ಟಿಲ್ಲಿ (1988)
  19. ಶ್ಯಾಂಕ್ಸ್ (1991)
  20. ಶ್ಯಾಂಕ್ಸ್ (1993)
  21. ಟಿಲ್ಲಿ (1993)
  22. ಮಿಲ್ಲರ್‌ ಮತ್ತು ಟಿಲ್ಲಿ1984
  23. ಮಿಲ್ಲರ್‌ ಮತ್ತು ಇತರರು (1989)
  24. ಹಾಡ್ಡರ್ (1982)
  25. ಹಾಡ್ಡರ್ (1985)
  26. ಹಾಡ್ಡರ್ (1987)
  27. ಹಾಡ್ಡರ್ (1990)
  28. ಹಾಡ್ಡರ್ (1991)
  29. ಹಾಡ್ಡರ್ (1992)
  30. ಪಾಕೆಟಾಟ್, ಟಿಮಥಿ R. (2001)
  31. ರೆನ್‌ಫ್ರೆವ್ ಮತ್ತು ಬ್ಯಾಹ್ನ್‌ (2004 [1991]:75)
  32. ವಿಲ್ಲಿ (1953)
  33. ವಿಲ್ಲಿ (1968)
  34. ಬಿಲ್‌ಮ್ಯಾನ್ ಮತ್ತು ಫಿಯೆನ್‌ಮ್ಯಾನ್ (1999)
  35. ರೆಡ್‌ಮ್ಯಾನ್ (1974)
  36. ೩೬.೦ ೩೬.೧ ೩೬.೨ ೩೬.೩ ೩೬.೪ ಮೈಕೆಲ್ ಬವಾಯ, "ವರ್ಚ್ವುಲ್ ಆರ್ಕಿಯಾಲಜಿಸ್ಟ್ಸ್ ರಿಕ್ರಿಯೇಟ್ ಪಾರ್ಟ್ಸ್ ಆಫ್ ಏನ್ಶಿಯೆಂಟ್ ವರ್ಲ್ಡ್ಸ್", ಸೈನ್ಸ್ , 8 ಜನವರಿ 2010, ಗಾತ್ರ 327, ಪುಟ 140.
  37. ಗೌಲ್ಡ್ (1971a)
  38. ಗೌಲ್ಡ್ (1971b)
  39. ಯೆಲ್ಲೆನ್ (1972)
  40. ಯೆಲ್ಲೆನ್ (1977)
  41. ಗೌಲ್ಡ್ ಮತ್ತು ಯೆಲ್ಲೆನ್ 1987
  42. ಯೆಲ್ಲೆನ್ (1991)
  43. ಸಿಲ್ಲೆಟ್ ಮತ್ತು ಇತರರು (2006)
  44. ಸ್ಕಾಟ್ ಆಂಡ್ ಸಿಲ್ಲಿಟೊ (2005)
  45. ಓಗುಂಡೆಲ್ (2005)
  46. ಕುಜ್ನಾರ್ (2001)
  47. ಆಶ್ಕರ್ (1961) ವೈಲಿ (1985)ಯಲ್ಲಿ ಉಲ್ಲೇಖಿಸಿದಂತೆ
  48. ಆಸ್ಕರ್ (1961)
  49. ಸರಯ್ಡರ್ ಮತ್ತು ಶಿಮಾಡ (1971)
  50. ಸರಯ್ಡರ್ ಮತ್ತು ಶಿಮಾಡ (1973)
  51. ಗಿಫ್ಫರ್ಡ್-ಗಾಂಜಲೆಜ್ (1985)
  52. ಫ್ರಿಸನ್ (1989)
  53. ಗ್ಲಾಸ್‌ಕಾಕ್ ಮತ್ತು ಇತರರು 1994
  54. "MIT ಆರ್ಕಿಯಲಾಜಿಕಲ್ ಮೆಟೀರಿಯಲ್ಸ್ ಆಂಡ್ CMRAE ಮಿಶನ್ ಸ್ಟೇಟ್ಮೆಂಟ್". Archived from the original on 2008-07-25. Retrieved 2010-09-14.
  55. The University of Exeter - SoGAER - Department of Archaeology, Sogaer.ex.ac.uk, 2008-10-28, retrieved 2009-05-05
  56. "Planning Policy Guidance 16: Archaeology and planning - Planning, building and the environment - Communities and Local Government". Web.archive.org. Archived from the original on 2008-02-12. Retrieved 2009-07-25.
  57. Department for Culture Media and Sport - historic environment, Culture.gov.uk, 2009-04-28, retrieved 2009-05-05
  58. English Heritage - Stonehenge & the History of England: English Heritage, English Heritage<!, retrieved 2009-05-05
  59. Bot generated title ->, Historic Scotland<!, archived from the original on 2009-04-26, retrieved 2009-05-05
  60. Cadw, Cadw.wales.gov.uk, archived from the original on 2009-04-29, retrieved 2009-05-05
  61. Built Environment, Ehsni.gov.uk, archived from the original on 2007-12-25, retrieved 2009-05-05
  62. ಫ್ಲ್ಯಾನರಿ (1982)
  63. "Denning 2004, Internet Archaeology 15". Intarch.ac.uk. 2004-01-28. Retrieved 2010-08-12.
  64. Anthropological Studies Center (ASC), Sonoma.edu, retrieved 2009-05-05
  65. "^ ''Rapid City Journal'' Published Online: 14 Nov 2008". Rapidcityjournal.com. 2008-11-14. Retrieved 2010-08-12.
  66. ಟೈಮ್ ಲೈಫ್ ಲಾಸ್ಟ್ ಸಿವಿಲೈಸೇಶನ್ಸ್ ಸೀರೀಸ್: ರಾಮ್ಸೆಸ್ II: ಮ್ಯಾಗ್ನಿಫಿಕೆನ್ಸ್ ಆನ್ ದಿ ನೈಲ್ (1993)
  67. ೬೭.೦ ೬೭.೧ ಶೀಟ್ಸ್ (1973)
  68. ಹಾಡ್ಗ್ (1937)
  69. ಮುನ್ಸನ್ ಮತ್ತು ಇತರರು (1995)
  70. Canadian Geographic Online


ಉಲ್ಲೇಖಗಳು

[ಬದಲಾಯಿಸಿ]
  • Aldenderfer, M. S. & Maschner, H. D. G., ed. (1996), Anthropology, Space, and Geographic Information Systems, New York: Oxford University Press{{citation}}: CS1 maint: multiple names: editors list (link)
  • Ascher, R. (1961), "Analogy in archaeological interpretation", Southwestern Journal of Anthropology, vol. 17, no. 4, pp. 317–325
  • Ascher, R. (1961), "Experimental Archeology", American Anthropologist, vol. 63, pp. 793–816, doi:10.1525/aa.1961.63.4.02a00070
  • Billman, B. R. & Feinman, G. (1999), Settlement Pattern Studies in the Americas—Fifty Years Since Virú, Washington DC: Smithsonian Institution Press{{citation}}: CS1 maint: multiple names: authors list (link)
  • Binford, L. (1962), "Archaeology as Anthropology", American Antiquity, vol. 28, no. 4, pp. 217–225, doi:10.2307/278380
  • Denning, K. (2004), "The Storm of Progress' and Archaeology for an Online Public", Internet Archaeology, vol. 15
  • Ebrey, Patricia Buckley (1999), The Cambridge Illustrated History of China, Cambridge: Cambridge University Press, ISBN 0521435196, OCLC 223427870 33047244 59615754 {{citation}}: Check |oclc= value (help)
  • Flannery, K. V. (1967), "Culture History v. Culture Process: A Debate in American archaeology", Scientific American, vol. 217, pp. 119–122
  • Flannery, K. V. (1982), "The Golden Marshalltown: A Parable for the Archaeology of the 1980s", American Anthropologist, vol. 84, pp. 265–278, doi:10.1525/aa.1982.84.2.02a00010
  • Fraser, Julius Thomas and Francis C. Haber. (1986), Time, Science, and Society in China and the West, Amherst: University of Massachusetts Press
  • Frison, G. C. (1989), "Experimental Use of Clovis Weaponry and Tools on African Elephants", American Antiquity, vol. 54, no. 4, pp. 766–784, doi:10.2307/280681
  • Glascock, M. D., Neff, H., Stryker, K. S. & Johnson, T. N. (1994), "Sourcing Archaeological Obsidian by an Abbreviated NAA Procedure", Journal of Radioanalytical and Nuclear Chemistry, vol. 180, pp. 29–35, doi:10.1007/BF02039899{{citation}}: CS1 maint: multiple names: authors list (link)
  • Gifford-Gonzalez, D. P., Damrosch, D. B., Damrosch, D. R., Pryor, J. & Thunen, R. L. (1985), "The Third Dimension in Site Structure: An Experiment in Trampling and Vertical Dispersal", American Antiquity, vol. 50, no. 4, pp. 803–818, doi:10.2307/280169{{citation}}: CS1 maint: multiple names: authors list (link)
  • Gladfelter, B. G. (1977), "Geoarchaeology: The Geomorphologist and Archaeology", American Antiquity, vol. 42, no. 4, pp. 519–538, doi:10.2307/278926
  • Gould, R. (1971a), "The Archaeologist as Ethnographer: A Case from the Western Desert of Australia", World Archaeology, vol. 3, pp. 143–177
  • Gould, R., Koster, D. A. & Sontz, A. H. L. (1971b), "The Lithic Assemblage of the Western Desert Aborigines of Australia", American Antiquity, vol. 36, no. 2, pp. 149–169, doi:10.2307/278668{{citation}}: CS1 maint: multiple names: authors list (link)
  • Gould, R. & Yellen, J. (1987), "Man the Hunted: Determinants of Household Spacing in Desert and Tropical Foraging Societies", Journal of Anthropological Archaeology, vol. 6, p. 77, doi:10.1016/0278-4165(87)90017-1{{citation}}: CS1 maint: multiple names: authors list (link)
  • Hodder, I. (1982), Symbols in Action, Cambridge: Cambridge University Press
  • Hodder, I. (1985), "Post-Processual Archaeology", in SCHIFFER, M. B. (ed.), Advances in Archaeological Method and Theory, New York: Academic Press
  • Hodder, I., ed. (1987), The Archaeology of Contextual Meaning, New York: Cambridge University Press
  • Hodder, I. (1990), "Style as Historical Quality", in HASTORF, M. C. A. C. (ed.), The Uses of Style in Archaeology, Cambridge: Cambridge University Press
  • Hodder, I. (1991), "Interpretive Archaeology and Its Role", American Antiquity, vol. 56, no. 1, pp. 7–18, doi:10.2307/280968
  • Hodder, I. (1992), Theory and Practice in Archaeology, London: Routeldge
  • Munson, C. A., Jones, M. M. & Fry, R. E. (1995), "The GE Mound: An ARPA Case Study", American Antiquity, vol. 60, no. 1, pp. 131–159, doi:10.2307/282080{{citation}}: CS1 maint: multiple names: authors list (link)
  • Kuznar, L, ed. (2001), Ethnoarchaeology of Andean South America, Ann Arbor: International Monographs in Prehistory
  • Miller, D. & Tilley, C. (1984), "Ideology, Power and Prehistory: An Introduction", in Miller, D. & Tilley, C. (ed.), Ideology, Power, and Prehistory, Cambridge: Cambridge University Press, ISBN 0521255260, OCLC 241599209 9827625 {{citation}}: Check |oclc= value (help)CS1 maint: multiple names: authors list (link)
  • Miller, D., Rowlands, M., Tilley, C., ed. (1989), Dominion and Resistance, New York: Routledge{{citation}}: CS1 maint: multiple names: editors list (link)
  • Munson, C. A., Jones, M. M. & Fry, R. E. (1995), "The GE Mound: An ARPA Case Study", American Antiquity, vol. 60, no. 1, pp. 131–159, doi:10.2307/282080{{citation}}: CS1 maint: multiple names: authors list (link)
  • Ogundele, S. O. (2005), "Ethnoarchaeology of Domestic Space and Spatial Behaviour Among the Tiv and Ungwai of Central Nigeria", African Archaeological Review, vol. 22, pp. 25–54, doi:10.1007/s10437-005-3158-2
  • Pauketat, T. R. (2001), "Practice and History in Archaeology: An Emerging Paradigm", Anthropological Theory, vol. 1, pp. 73–98, doi:10.1177/14634990122228638
  • Redman, C. L. (1974), Archaeological Sampling Strategies, Binghamton: State University of New York at Binghamton
  • Renfrew, C. & Bahn, P. G. (1991), Archaeology: Theories, Methods, and Practice, London: Thames and Hudson Ltd, ISBN 0500278679, OCLC 185808200 34521234 {{citation}}: Check |oclc= value (help)CS1 maint: multiple names: authors list (link)
  • Saraydar, S. & Shimada, I. (1971), "A Quantitative Comparison of Efficiency Between A Stone Axe and A Steel Axe", American Antiquity, vol. 36, no. 2, pp. 216–217, doi:10.2307/278680{{citation}}: CS1 maint: multiple names: authors list (link)
  • Saraydar, S. C. & Shimada, I. (1973), "Experimental Archaeology: A New Outlook", American Antiquity, vol. 38, no. 3, pp. 344–350, doi:10.2307/279722{{citation}}: CS1 maint: multiple names: authors list (link)
  • Sellet, F., Greaves, R. & Yu, P.-L. (2006), Archaeology and Ethnoarchaeology of Mobility, Gainesville: University Press of Florida{{citation}}: CS1 maint: multiple names: authors list (link)
  • Shanks, M. & Tilley, C. (1987), Reconstructing Archaeology, New York: Cambridge university Press{{citation}}: CS1 maint: multiple names: authors list (link)
  • Shanks, M. & Tilley, C. (1988), Social Theory and Archaeology, Albuquerque: University of New Mexico Press, ISBN 0745601847, OCLC 16465065 185783860 {{citation}}: Check |oclc= value (help)CS1 maint: multiple names: authors list (link)
  • Shanks, M. (1991), "Some recent approaches to style and social reconstruction in classical archaeology", Archaeological Review from Cambridge, vol. 10, pp. 164–174
  • Shanks, M. (1993), "Style and the design of a perfume jar from an Archaic Greek city state", Journal of European Archaeology, vol. 1, pp. 77–106
  • Sheets, P. D. (1973), "The Pillage of Prehistory", American Antiquity, vol. 38, no. 3, pp. 317–320, doi:10.2307/279718
  • Shott, M. J. & Sillitoe, P. (2005), "Use life and curation in New Guinea experimental used flakes", Journal of Archaeological Science, vol. 32, pp. 653–663, doi:10.1016/j.jas.2004.11.012{{citation}}: CS1 maint: multiple names: authors list (link)
  • Tassie, G. J., Owens, L.S. (2010), Standards of Archaeological Excavations: A Fieldguide to the Methology, Recording Techniques and Conventions, London: GHP, ISBN 978-1906137175{{citation}}: CS1 maint: multiple names: authors list (link)
  • Taylor, W. W. (1948), A Study of Archaeology, Menasha: American Anthropological Association, ISBN 0906367123, OCLC 9714935
  • Tilley, Christopher, ed. (1993), Interpretive Archaeology, Oxford: Berg, ISBN 0854968423, OCLC 185494001 26263158 {{citation}}: Check |oclc= value (help)
  • Trigger, B. G. (1989), A History of Archaeological Thought, Cambridge: Cambridge University Press
  • Watters, M.R. (1992), Principles of Geoarchaeology: A North American Perspective, Tucson: The University of Arizona Press
  • Watters, M.R. (2000), "Alluvial stratigraphy and geoarchaeology in the American Southwest", Geoarchaeology, vol. 15, pp. 537–557, doi:10.1002/1520-6548(200008)15:6<537::AID-GEA5>3.0.CO;2-E
  • Willey, G. R. (1953), Prehistoric Settlement Patterns in the Virú Valley, Perú, Washington DC{{citation}}: CS1 maint: location missing publisher (link)
  • Willey, G. (1968), Settlement Archaeology, Palo Alto: National Press
  • Wylie, A. (1985), "The Reaction Against Analogy", in Schiffer, Michael B. (ed.), Advances in Archaeological Method and Theory, Orlando, FL: Academic Press, pp. 63–111
  • Yellen, J. & Harpending, H. (1972), "Hunter-Gatherer Populations and Archaeological Inference", World Archaeology, vol. 4, pp. 244–253{{citation}}: CS1 maint: multiple names: authors list (link)
  • Yellen, J. (1977), Archaeological Approaches to the Present, New York: Academic Press, ISBN 0127703500, OCLC 2911020

ಹೆಚ್ಚಿನ ಓದಿಗಾಗಿ

[ಬದಲಾಯಿಸಿ]
  • ಆರ್ಕಿಯಾಲಜಿ (ನಿಯತಕಾಲಿಕ)
  • C. U. ಲಾರ್ಸೆನ್ - ಸೈಟ್ಸ್ ಆಂಡ್ ಮಾನ್ಯುಮೆಂಟ್ಸ್ (1992)
  • ಕೋಲಿನ್ ರೆನ್‌ಫ್ರೆವ್ ಮತ್ತು ಪಾಲ್ ಬ್ಯಾಹ್ನ್ - ಆರ್ಕಿಯಾಲಜಿ: ಥಿಯರೀಸ್, ಮೆಥಡ್ಸ್ ಆಂಡ್ ಪ್ರಾಕ್ಟೀಸ್ 2ನೇ ಆವೃತ್ತಿ (1996)
  • ಡೇವಿಡ್ ಹರ್ಸ್ಟ್ ಥೋಮಸ್ - ಆರ್ಕಿಯಾಲಜಿ 3ನೇ ಆವೃತ್ತಿ (1998)
  • ಗ್ಲಿನ್ ಡೇನಿಯಲ್ - ಎ ಶಾರ್ಟ್ ಹಿಸ್ಟರಿ ಆಫ್ ಆರ್ಕಿಯಾಲಜಿ (1991)
  • ಇಂಟರ್‌ನ್ಯಾಷನಲ್ ಜರ್ನಲ್ ಆಫ್ ಸೌತ್ ಅಮೆರಿಕನ್ ಆರ್ಕಿಯಾಲಜಿ - IJSA (ನಿಯತಕಾಲಿಕ)
  • ಇಂಟರ್ನೆಟ್ ಆರ್ಕಿಯಾಲಜಿ ಇ-ಜರ್ನಲ್
  • ಕೆವಿನ್ ಗ್ರೀನೆ - ಇಂಟ್ರೊಡಕ್ಷನ್ ಟು ಆರ್ಕಿಯಾಲಜಿ (1983)
  • ಲೆವಿಸ್ ಬಿನ್‌ಫರ್ಡ್ - ನ್ಯೂ ಪರ್ಸ್ಪೆಕ್ಟಿವ್ಸ್ ಇನ್ ಆರ್ಕಿಯಾಲಜಿ (1968) ISBN 0-202-33022-2
  • ರಾಬರ್ಟ್ J. ಶರೆರ್ ಮತ್ತು ವೆಂಡಿ ಆಶ್ಮೋರ್ - ಆರ್ಕಿಯಾಲಜಿ: ಡಿಸ್ಕವರಿಂಗ್ ಅವರ್ ಪಾಸ್ಟ್ 2ನೇ ಆವೃತ್ತಿ (1993)
  • ಥೋಮಸ್ ಹೆಸ್ಟರ್, ಹ್ಯಾರಿ ಶಫರ್ ಮತ್ತು ಕೆನೆತ್ L. ಪೆಡೆರ್- ಫೀಲ್ಡ್ ಮೆಥಡ್ಸ್ ಇನ್ ಆರ್ಕಿಯಾಲಜಿ 7ನೇ ಆವೃತ್ತಿ (1997)
  • ಅಲಿಸನ್ ವೈಲಿ - ಥಿಂಕಿಂಗ್ ಫ್ರಮ್ ಥಿಂಗ್ಸ್: ಎಸ್ಯೇಸ್ ಇನ್ ದಿ ಫಿಲಾಸಫಿ ಆಫ್ ಆರ್ಕಿಯಾಲಜಿ , ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ ಪ್ರೆಸ್, ಬರ್ಕ್ಲಿ CA, 2002
  • ಸ್ಮೆಕಲೋವ T. N., ವೋಸ್ O., ಸ್ಮೆಕಲೋವ S. L. "ಮ್ಯಾಗ್ನೆಟಿಕ್ ಸರ್ವೇಯಿಂಗ್ ಇನ್ ಆರ್ಕಿಯಾಲಜಿ. ಮೋರ್ ದ್ಯಾನ್ 10 ಯಿಯರ್ಸ್ ಆಫ್ ಯೂಸಿಂಗ್ ದಿ ಓವರ್‌ಹಾಸರ್ GSM-19 ಗ್ರೇಡಿಯೊಮೀಟರ್", ವೋರ್ಮಿಯನಮ್ 2008.
  • ಬ್ರೂಸ್ ಟ್ರಿಗ್ಗರ್ - "ಎ ಹಿಸ್ಟರಿ ಆಫ್ ಆರ್ಕಿಯಲಾಜಿಕಲ್ ಥಾಟ್" 2ನೇ ಆವೃತ್ತಿ (2007)
  • ಅಯನ್ ಹಾಡರ್ ಮತ್ತು ಸ್ಕಾಟ್ ಹಟ್ಸನ್ - "ರೀಡಿಂಗ್ ದಿ ಪಾಸ್ಟ್" 3ನೇ ಆವೃತ್ತಿ (2003)
  • ಆಡ್ರಿಯನ್ ಪ್ರೇಟ್ಜೆಲ್ಲಿಸ್ - "ಡೆತ್ ಬೈ ಥಿಯರಿ", ಆಲ್ಟಮಿರ ಪ್ರೆಸ್ (2000). ISBN 0742503593 / 9780742503595

ಬಾಹ್ಯ ಕೊಂಡಿಗಳು

[ಬದಲಾಯಿಸಿ]