ದೇರಳಕಟ್ಟೆ
ದೇರಳಕಟ್ಟೆ | |
---|---|
ಉಪನಗರ/ಗ್ರಾಮ | |
Coordinates: 12°48′33″N 74°53′30″E / 12.8092°N 74.8916°E | |
Country | ಭಾರತ |
ರಾಜ್ಯ | ಕರ್ನಾಟಕ |
ಜಿಲ್ಲೆ | ದಕ್ಶಿಣ ಕನ್ನಡ |
ನಗರ | ಮಂಗಳೂರು |
ಅಧಿಕೃತ ಭಾಷೆ | |
• Regional | ತುಳು, ಕೊಂಕಣಿ, ಬ್ಯಾರಿ ಭಾಷೆ |
Time zone | UTC+5:30 (IST) |
ಅಂಚೆ ಸೂಚಕ ಸಂಖ್ಯೆ | ೫೭೫೦೧೮ |
ದೂರವಾಣಿ ಕೋಡ್ | +೯೧೮೨೪ |
ವಾಹನ ನೋಂದಣಿ | ಕೆಎ ೧೯ |
ಹತ್ತಿರದ ನಗರ | ಮಂಗಳೂರು |
ಸಾಕ್ಷರತೆ | ಒಳ್ಳೆಯ % |
ಲೋಕಸಭೆ | ಮಂಗಳೂರು |
ದೇರಳಕಟ್ಟೆ, ಭಾರತದ, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಹೊರವಲಯದಲ್ಲಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯು ಒಂದು ಸಣ್ಣ ಜನಸಂಖ್ಯೆಯೊಂದಿಗೆ ಕೂಡಿದ ಒಂದು ಗುಡ್ಡವಾಗಿತ್ತು. ಈ ಹಳ್ಳಿಯು ಮಂಗಳೂರಿನ ಹೃದಯ ಭಾಗದಿಂದ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆಗೆ ಹೊಗುವ ದಾರಿಯಲ್ಲಿ ಇದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಯೆನೆಪೋಯಾ ಸಮೂಹದಂತ ಹಲವಾರು ಶೈಕ್ಷಣಿಕ ಸಂಸ್ಥೆಗಳ ಸಹಾಯದಿಂದ ಈ ಗ್ರಾಮ ನಿಧಾನವಾಗಿ ಒಂದು ಪಟ್ಟಣಕ್ಕೆ ರೂಪಾಂತರಗೊಂಡಿದೆ. ಈ ಹಳ್ಳಿಯು ಈಗ ಮಂಗಳೂರಿನ ಒಂದು ಶಿಕ್ಷಣ ಕೇಂದ್ರವಾಗಿದೆ.
ಉನ್ನತ ಶಿಕ್ಷಣ ಸಂಸ್ಥೆಗಳು
[ಬದಲಾಯಿಸಿ]ನಿಟ್ಟೆ ಎಜುಕೇಶನ್ ಟ್ರಸ್ಟ್
[ಬದಲಾಯಿಸಿ]ನಿಟ್ಟೆ ವಿಶ್ವವಿದ್ಯಾನಿಲಯವು ದೇರಳಕಟ್ಟೆಯಲ್ಲಿರುವ ಒಂದು ಪರಿಗಣಿತ ವಿಶ್ವವಿದ್ಯಾನಿಲಯವಾಗಿದೆ. ಈ ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟಿನ ಅಡಿಯಲ್ಲಿ ಸ್ಥಾಪಿಸಲಾಗಿದೆ. ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟನ್ನು, ನಿಟ್ಟೆ ಎಜುಕೇಶನ್ ಟ್ರಸ್ಟ್ ಪ್ರಾಯೋಜಿಸಿದೆ. ಈ ಟ್ರಸ್ಟ್ 31 ಸಂಸ್ಥೆಗಳನ್ನು ನಿಟ್ಟೆಯ 3 ಕ್ಯಾಂಪಸ್ ಹಾಗು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.
ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಸಂಸ್ಥೆಗಳು
- ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯು KSHEMA ಎಂದೂ ಕರೆಯಲ್ಪಡುತ್ತದೆ.
- ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು.
- ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ.
- ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್.
- ನಿಟ್ಟೆ ಆರ್ಕಿಟೆಕ್ಚರ್ ಕಾಲೇಜು.
ಯೆನಪೊಯಾ ವಿಶ್ವವಿದ್ಯಾಲಯ
[ಬದಲಾಯಿಸಿ]ಯೆನಪೊಯಾ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯಿದೆ, 1956 ರ ಸೆಕ್ಷನ್ 3 ರಡಿಯಲ್ಲಿ ವಿಶ್ವವಿದ್ಯಾಲಯವೆಂದು ಘೋಷಿಸಲ್ಪಟ್ಟಿದೆ . ಈ ವಿಶ್ವವಿದ್ಯಾನಿಲಯಕ್ಕೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾನಿಲಯವು ೨೦೦೮ ರಲ್ಲಿ ಸ್ಥಾಪಿಸಲಾಯಿತು.[೧]
ದೇರಳಕಟ್ಟೆ ಯುನಪೊಯಾ ವಿಶ್ವವಿದ್ಯಾನಿಲಯದ ಸಂಸ್ಥೆಗಳು
- ಯೆನಪೊಯಾ ಮೆಡಿಕಲ್ ಕಾಲೇಜು.
- ಯೆನಪೊಯಾ ದಂತ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ.
- ಯನಪೊಯಾ ಫಿಸಿಯೋಥೆರಪಿ ಕಾಲೇಜು.
- ಯೆನಪೊಯಾ ನರ್ಸಿಂಗ್ ಕಾಲೇಜು.
- ಯೆನಪೊಯಾ ಸೆಂಟರ್ ಫಾರ್ ಎಥಿಕ್ಸ್.
ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
[ಬದಲಾಯಿಸಿ]ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಒಂದು ಸಂಸ್ಥೆಯಾಗಿದೆ.[೨] ಈ ಕಾಲೇಜಿಗೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ.
ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ
[ಬದಲಾಯಿಸಿ]ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಣಚೂರು ಇಸ್ಲಾಮಿಕ್ ಶಿಕ್ಷಣದ ಒಂದು ಸಂಸ್ಥೆಯಾಗಿದೆ.[೩]
- ಕಣಚೂರು ನರ್ಸಿಂಗ್ ಕಾಲೇಜು,
- ಕಣಚೂರು ಫಿಸಿಯೋಥೆರಫಿ ಕಾಲೇಜು.
- ಕಣಚೂರು ಫಾರಮೆಡಿಕಲ್ ಕಾಲೇಜು.
- ಕಣಚೂರು ಪದವಿ ಕಾಲೇಜು
- ಕಣಚೂರು ಸಿಬಿಎಸ್ಇ ಶಾಲೆ.
ಉಲ್ಲೇಖಗಳು
[ಬದಲಾಯಿಸಿ]- ↑ https://www.karnataka.com/education/medical/yenepoya-medical-college-research-institute-mangalore/
- ↑ "ಆರ್ಕೈವ್ ನಕಲು". Archived from the original on 2017-11-15. Retrieved 2018-04-20.
- ↑ www.kanachurims.com/