ವಿಷಯಕ್ಕೆ ಹೋಗು

ದೇರಳಕಟ್ಟೆ

ನಿರ್ದೇಶಾಂಕಗಳು: 12°48′33″N 74°53′30″E / 12.8092°N 74.8916°E / 12.8092; 74.8916
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ದೇರಳಕಟ್ಟೆ
ಉಪನಗರ/ಗ್ರಾಮ
ದೇರಳಕಟ್ಟೆ ಯೆನಪೊಯ ವಿಶ್ವವಿದ್ಯಾನಿಲಯದ ಹಕ್ಕಿ ನೋಟ
ದೇರಳಕಟ್ಟೆ ಯೆನಪೊಯ ವಿಶ್ವವಿದ್ಯಾನಿಲಯದ ಹಕ್ಕಿ ನೋಟ
ದೇರಳಕಟ್ಟೆ is located in Karnataka
ದೇರಳಕಟ್ಟೆ
ದೇರಳಕಟ್ಟೆ
Location in Karnataka, India
ದೇರಳಕಟ್ಟೆ is located in India
ದೇರಳಕಟ್ಟೆ
ದೇರಳಕಟ್ಟೆ
ದೇರಳಕಟ್ಟೆ (India)
Coordinates: 12°48′33″N 74°53′30″E / 12.8092°N 74.8916°E / 12.8092; 74.8916
Country ಭಾರತ
ರಾಜ್ಯಕರ್ನಾಟಕ
ಜಿಲ್ಲೆದಕ್ಶಿಣ ಕನ್ನಡ
ನಗರಮಂಗಳೂರು
ಅಧಿಕೃತ ಭಾಷೆ
 • Regionalತುಳು, ಕೊಂಕಣಿ, ಬ್ಯಾರಿ ಭಾಷೆ
Time zoneUTC+5:30 (IST)
ಅಂಚೆ ಸೂಚಕ ಸಂಖ್ಯೆ
೫೭೫೦೧೮
ದೂರವಾಣಿ ಕೋಡ್+೯೧೮೨೪
ವಾಹನ ನೋಂದಣಿಕೆಎ ೧೯
ಹತ್ತಿರದ ನಗರಮಂಗಳೂರು
ಸಾಕ್ಷರತೆಒಳ್ಳೆಯ %
ಲೋಕಸಭೆಮಂಗಳೂರು

ದೇರಳಕಟ್ಟೆ, ಭಾರತದ, ಕರ್ನಾಟಕ ರಾಜ್ಯದ, ದಕ್ಷಿಣ ಕನ್ನಡ ಜಿಲ್ಲೆಯ, ಮಂಗಳೂರು ಹೊರವಲಯದಲ್ಲಿರುವ ಒಂದು ಚಿಕ್ಕ ಹಳ್ಳಿ. ಈ ಹಳ್ಳಿಯು ಒಂದು ಸಣ್ಣ ಜನಸಂಖ್ಯೆಯೊಂದಿಗೆ ಕೂಡಿದ ಒಂದು ಗುಡ್ಡವಾಗಿತ್ತು. ಈ ಹಳ್ಳಿಯು ಮಂಗಳೂರಿನ ಹೃದಯ ಭಾಗದಿಂದ ಮಂಗಳೂರು ವಿಶ್ವವಿದ್ಯಾನಿಲಯ, ಕೊಣಾಜೆಗೆ ಹೊಗುವ ದಾರಿಯಲ್ಲಿ ಇದೆ. ನಿಟ್ಟೆ ಎಜುಕೇಶನ್ ಟ್ರಸ್ಟ್ ಮತ್ತು ಯೆನೆಪೋಯಾ ಸಮೂಹದಂತ ಹಲವಾರು ಶೈಕ್ಷಣಿಕ ಸಂಸ್ಥೆಗಳ ಸಹಾಯದಿಂದ ಈ ಗ್ರಾಮ ನಿಧಾನವಾಗಿ ಒಂದು ಪಟ್ಟಣಕ್ಕೆ ರೂಪಾಂತರಗೊಂಡಿದೆ. ಈ ಹಳ್ಳಿಯು ಈಗ ಮಂಗಳೂರಿನ ಒಂದು ಶಿಕ್ಷಣ ಕೇಂದ್ರವಾಗಿದೆ.

ಉನ್ನತ ಶಿಕ್ಷಣ ಸಂಸ್ಥೆಗಳು

[ಬದಲಾಯಿಸಿ]

ನಿಟ್ಟೆ ಎಜುಕೇಶನ್ ಟ್ರಸ್ಟ್

[ಬದಲಾಯಿಸಿ]

ನಿಟ್ಟೆ ವಿಶ್ವವಿದ್ಯಾನಿಲಯವು ದೇರಳಕಟ್ಟೆಯಲ್ಲಿರುವ ಒಂದು ಪರಿಗಣಿತ ವಿಶ್ವವಿದ್ಯಾನಿಲಯವಾಗಿದೆ. ಈ ಸಂಸ್ಥೆಯು ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟಿನ ಅಡಿಯಲ್ಲಿ ಸ್ಥಾಪಿಸಲಾಗಿದೆ. ನಿಟ್ಟೆ ವಿಶ್ವವಿದ್ಯಾನಿಲಯ ಟ್ರಸ್ಟನ್ನು, ನಿಟ್ಟೆ ಎಜುಕೇಶನ್ ಟ್ರಸ್ಟ್ ಪ್ರಾಯೋಜಿಸಿದೆ. ಈ ಟ್ರಸ್ಟ್ 31 ಸಂಸ್ಥೆಗಳನ್ನು ನಿಟ್ಟೆಯ 3 ಕ್ಯಾಂಪಸ್ ಹಾಗು ಮಂಗಳೂರು ಮತ್ತು ಬೆಂಗಳೂರಿನಲ್ಲಿ ಸ್ಥಾಪಿಸಲಾಗಿದೆ.

ದೇರಳಕಟ್ಟೆ ನಿಟ್ಟೆ ವಿಶ್ವವಿದ್ಯಾನಿಲಯದ ಸಂಸ್ಥೆಗಳು

  • ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡೆಮಿಯು KSHEMA ಎಂದೂ ಕರೆಯಲ್ಪಡುತ್ತದೆ.
  • ಎ.ಬಿ ಶೆಟ್ಟಿ ಸ್ಮಾರಕ ದಂತ ವೈದ್ಯಕೀಯ ಕಾಲೇಜು.
  • ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಫಿಸಿಯೋಥೆರಪಿ.
  • ನಿಟ್ಟೆ ಉಷಾ ಇನ್ಸ್ಟಿಟ್ಯೂಟ್ ಆಫ್ ನರ್ಸಿಂಗ್ ಸೈನ್ಸ್.
  • ನಿಟ್ಟೆ ಆರ್ಕಿಟೆಕ್ಚರ್ ಕಾಲೇಜು.

ಯೆನಪೊಯಾ ವಿಶ್ವವಿದ್ಯಾಲಯ

[ಬದಲಾಯಿಸಿ]

ಯೆನಪೊಯಾ ವಿಶ್ವವಿದ್ಯಾನಿಲಯವು ಯು.ಜಿ.ಸಿ ಕಾಯಿದೆ, 1956 ರ ಸೆಕ್ಷನ್ 3 ರಡಿಯಲ್ಲಿ ವಿಶ್ವವಿದ್ಯಾಲಯವೆಂದು ಘೋಷಿಸಲ್ಪಟ್ಟಿದೆ . ಈ ವಿಶ್ವವಿದ್ಯಾನಿಲಯಕ್ಕೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ. ಈ ವಿಶ್ವವಿದ್ಯಾನಿಲಯವು ೨೦೦೮ ರಲ್ಲಿ ಸ್ಥಾಪಿಸಲಾಯಿತು.[]


ದೇರಳಕಟ್ಟೆ ಯುನಪೊಯಾ ವಿಶ್ವವಿದ್ಯಾನಿಲಯದ ಸಂಸ್ಥೆಗಳು

  • ಯೆನಪೊಯಾ ಮೆಡಿಕಲ್ ಕಾಲೇಜು.
  • ಯೆನಪೊಯಾ ದಂತ ವೈದ್ಯಕಿಯ ಕಾಲೇಜು ಮತ್ತು ಆಸ್ಪತ್ರೆ.
  • ಯನಪೊಯಾ ಫಿಸಿಯೋಥೆರಪಿ ಕಾಲೇಜು.
  • ಯೆನಪೊಯಾ ನರ್ಸಿಂಗ್ ಕಾಲೇಜು.
  • ಯೆನಪೊಯಾ ಸೆಂಟರ್ ಫಾರ್ ಎಥಿಕ್ಸ್.

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

[ಬದಲಾಯಿಸಿ]

ಫಾದರ್ ಮುಲ್ಲರ್ ಹೋಮಿಯೋಪತಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಫಾದರ್ ಮುಲ್ಲರ್ ಚಾರಿಟಬಲ್ ಸಂಸ್ಥೆಯ ಒಂದು ಸಂಸ್ಥೆಯಾಗಿದೆ.[] ಈ ಕಾಲೇಜಿಗೆ NAAC ನಿಂದ 'A' ಶೇಣಿಯ ಮಾನ್ಯತೆ ಪಡೆದಿದೆ.

ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ

[ಬದಲಾಯಿಸಿ]

ಕಣಚೂರು ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ, ಕಣಚೂರು ಇಸ್ಲಾಮಿಕ್ ಶಿಕ್ಷಣದ ಒಂದು ಸಂಸ್ಥೆಯಾಗಿದೆ.[]

  • ಕಣಚೂರು ನರ್ಸಿಂಗ್ ಕಾಲೇಜು,
  • ಕಣಚೂರು ಫಿಸಿಯೋಥೆರಫಿ ಕಾಲೇಜು.
  • ಕಣಚೂರು ಫಾರಮೆಡಿಕಲ್ ಕಾಲೇಜು.
  • ಕಣಚೂರು ಪದವಿ ಕಾಲೇಜು
  • ಕಣಚೂರು ಸಿಬಿಎಸ್ಇ ಶಾಲೆ.

ಉಲ್ಲೇಖಗಳು

[ಬದಲಾಯಿಸಿ]
  1. https://www.karnataka.com/education/medical/yenepoya-medical-college-research-institute-mangalore/
  2. "ಆರ್ಕೈವ್ ನಕಲು". Archived from the original on 2017-11-15. Retrieved 2018-04-20.
  3. www.kanachurims.com/


ಬಾಹ್ಯಕೊಂಡಿಗಳು

[ಬದಲಾಯಿಸಿ]