ದಾನ ಬಿಡುವುದು
ದಾನ ಬಿಡುವುದು
ಆಟಿ ತಿಂಗಳು
[ಬದಲಾಯಿಸಿ]ಆಟಿ ತಿಂಗಳು ತುಳುನಾಡಿನವರಿಗೆ ತುಂಬಾ ಕಷ್ಟಕರವಾದ ಕಾಲವಾಗಿತ್ತು. ಆದರೆ ಕಾಲಘಟ್ಟ ಬದಲಾಗಿ ಬಡತನ, ರೋಗರುಜಿನಗಳು ಕಡಿಮೆಯಾಗಿ, ತುಳುನಾಡು ಈಗ ತುಂಬಾ ಬದಲಾಗಿದೆ. ಆದರೂ ಹಿರಿಯೆರು ಪ್ರಾರಂಭಿಸಿದ ಆಟಿ ತಿಂಗಳ ಕೆಲವು ಕ್ರಮಗಳು ಈಗ ಕೂಡಾ ತುಳುಜನರು ಪಾಲನೆ ಮಾಡುತ್ತಾ ಇದ್ದಾರೆ. ಅಂತಹ ಒಂದು ಕ್ರಮ ಅಂದರೆ ದಾನ ಬಿಡುವುದು.
ದಾನ ಬಿಡುವುದು
[ಬದಲಾಯಿಸಿ]ಮನೆಯವರಿಗೆ ಒಳ್ಳೆಯದಾಗಲಿ ಎನ್ನುವ ದೃಷ್ಟಿಯಿಂದ ಆಟಿ ಅಮಾವಾಸ್ಯೆ ಯ ದಿನದಂದು ದಾನ ಬಿಡುವ ಕ್ರಮ ಇದೆ. ದಾನ ಬಿಡುವ ದಿನ ನದಿಯಲ್ಲಿ ಅಥಾವ ತೊರೆಯಲ್ಲಿ ಯಾವುದೇ ಆಗಲಿ, ಹರಿಯುವ ನೀರಿನಲ್ಲಿ ದಾನ ಬಿಡುವುದು ಕ್ರಮ.[೧]
ದಾನ ಬಿಡುವ ಕ್ರಮ
[ಬದಲಾಯಿಸಿ]ತುಂಬೆ, ನೈಕೂರ್ಲು, ಹಾಲು, ಅಯಿದು ಅಥಾವ ಏಳು ಬಗೆಯ ಹೂವುಗಳು, ತೆಂಗಿನ ಕಾಯಿ, ಧವಸ ಧಾನ್ಯಗಳು, ಸ್ವಲ್ಪ ಹಣ, ದೀಪದ ಬತ್ತಿ ಮತ್ತು ಗಂಧ, ಕದಳಿ ಬಾಳೆ ಹಣ್ಣು, ಎಲ್ಲವನ್ನೂ ಬಾಳೆ ಎಲೆಯ ತುದಿಯಲ್ಲಿ ಇಟ್ಟು, ಗಂಧವನ್ನು ಮನೆಯ ಎಲ್ಲಾರ ಹಣೆಗೆ ಮುಟ್ಟಿಸಿ , ನಮಸ್ಕಾರ ಮಾಡಿ ಮನೆಯ ಯಜಮಾನರು ದೀಪದ ಬತ್ತಿಯನ್ನು ಹಚ್ಚಿ, ಎಲೆಯ ಮೇಲೆ ಇಟ್ಟು, ಮನೆಯ ಎಲ್ಲರ ತಲೆಯ ಮೇಲೆ ಮೂರು ಅಥಾವ ಒಂದು ಸುತ್ತು ತಂದು, ಅದನ್ನು ನೀರಿನಲ್ಲಿ ಬಿಡುತ್ತಾರೆ. ಇದನ್ನು ದಾನ ಬಿಡುವುದು ಎಂದೂ ಕರೆಯುತ್ತಾರೆ. ಕೆಲವರು ನೀರಿನಲ್ಲಿ ಮುಳುಗಿ ದಾನ ಮಾಡುತ್ತಾರೆ. ಕೆಲವೆರು ತೆಂಗಿನಕಾಯಿ ಒಡೆಯುತ್ತಾರೆ. ಸಂಸಾರದಲ್ಲಿರು ಎಲ್ಲರೂ ನೀರಲ್ಲಿ ಸ್ನಾನ ಮಾಡಿ, ಹೊಸ ಹೊಸ ಬಟ್ಟೆಗಳನ್ನು ಹಾಕಿ, ಒಟ್ಟಾಗಿ ಮನೆಗೆ ಬಂದು, ಆಟಿ ತಿಂಗಳಲ್ಲಿ ಮಾಡುವ ಹಾಲೆ ಮರದ ಕೆತ್ತೆಯ ಕಷಾಯವನ್ನು ಕುಡಿತ್ತಾರೆ.[೧] ಈ ಮದ್ದು ದೇಹಕ್ಕೆ ತುಂಬಾ ಉಷ್ಣ ಹಾಗಾಗಿ ಕಷಾಯ ಕುಡಿದವರು ಮೆತ್ತೆಯ ಗಂಜಿಯನ್ನು ತಿನ್ನಬೇಕು.