ವಿಷಯಕ್ಕೆ ಹೋಗು

ಗಾಣಿಗರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗಾಣಿಗರು ಗಾಣದ ಮೂಲಕ ಎಣ್ಣೆ ತಗೆಯುವ ವೃತ್ತಿಯನ್ನು ಅವಲಂಬಿಸಿದವರನ್ನು ಈ ಹೆಸರಿನಿಂದ ಗುರುತಿಸಲಾಗುತ್ತದೆ. ಇವರಲ್ಲಿ ಪ್ರಧಾನವಾಗಿ ಜ್ಯೋತಿನಾಗರ, ಸಜ್ಜನ, ಜ್ಯೋತಿಪಾದ ಎಂಬ ಮೂರೂ ಗುಂಪುಗಳನ್ನು ನೋಡಬಹುದು. ಕಡಲೇಕಾಯಿ, ಹುಚ್ಚೆಳ್ಳು, ಎಳ್ಳು, ಸೂರ್ಯಕಾಂತಿ ಮುಂತಾದ ಎಣ್ಣೆ ಬೀಜಗಳನ್ನು ಗಾಣಕ್ಕೆ ಹಾಕಿ ಒಂಟಿ ಎತ್ತು (ಕರಿಗಾಣಿಗ) ಅಥವಾ ಜೋಡಿ ಎತ್ತುಗಳನ್ನು(ಹೆಗ್ಗಾಣಿಗ) ಕಟ್ಟಿ ತಿರುಗಿಸುವುದರ ಮುಲಕ ಎಣ್ಣೆ ತಗೆಯುವುದು ಇವರ ಸಾಂಪ್ರದಾಯಕ ಪದ್ದತಿಯಾಗಿದ್ದಿತು. ಸೋಮವಾರವನ್ನು ಇವರು ದೈವದ ವಾರವೆಂದೇ ಪರಿಗಣಿಸುತ್ತಾರೆ. ಆ ದಿನ ಪೂಜೆ ಪುರಸ್ಕಾರ, ದೀಪ, ಧೂಪ, ನೈವೇದ್ಯಗಳೆಲ್ಲಾ ಉಂಟು. ಶುಕ್ರವಾರ, ಶನಿವಾರ, ಅಮಾವಾಸ್ಯೆ, ಷಷ್ಠಿ, ಪೌರ್ಣಮಿಗಳು ಕೂಡ ಇವರಿಗೆ ಮುಖ್ಯವಾದ ದಿನಗಳಾಗಿವೆ.

ಉಳಿದೆಲ್ಲಾ ಹಬ್ಬಗಳನ್ನು ಮಾಮೂಲಾಗಿ ಆಚರಿಸುವ ಇವರಿಗೆ ಸಂಕ್ರಾಂತಿ ಹಬ್ಬ ಮಹತ್ವದ್ದಾಗಿದೆ. ಪೊಂಗಲ್ ಎಂದು ಕರೆಯುವ ಈ ಹಬ್ಬವನ್ನು ಮೂರೂ ದಿನಗಳ ಕಾಲ ಆಚರಿಸುತ್ತಾರೆ. ಮೊದಲ ದಿನದಂದು 'ಅವರೇ ಪೊಂಗಲ್'. ಮನೆ ಶುದ್ಧ ಮಾಡಿ ಮಾವು, ಬೇವು, ಅವರೆ ಸೊಪ್ಪುಗಳ ತಳಿರನ್ನು ಮನೆಗೆ ಕಟ್ಟಿ ಪೂಜಿಸುತ್ತಾರೆ ಅಂದು ಸಂಜೆ ಸಿಹಿಗೆಣಸು ಮತ್ತು ಹಸಿ ಅವರೆಕಾಯಿಗಳನ್ನು ಸಿಪ್ಪೆಸಹಿತ ಸ್ವಲ್ಪ ಉಪ್ಪು ಹಾಕಿ ಬೇಯಿಸಿ ತಿನ್ನುತ್ತಾರೆ. ಹಾಗೆ ತಿನ್ನದಿದ್ದಾರೆ ಮುಂದಿನ ಜನ್ಮದಲ್ಲಿ ಕತ್ತೆ ಆಗಿ ಹುಟ್ಟಬೇಕಾಗುತ್ತದೆ ಎಂಬ ನಂಬಿಕೆ ಇವರದ್ದು. ಎರಡನೇ ದಿನ 'ಸಕ್ಕರೆ ಪೊಂಗಲ್'. ಅಂದು ಸೂರ್ಯೋದಯದ ವೇಳೆಗೆ ಸಕ್ಕರೆ ಪೊಂಗಲ್ ಅನ್ನು ಹೊಸ ಮಡಕೆಯಲ್ಲಿ ಅಣಿಗೊಳಿಸುತ್ತಾರೆ. ಮನೆ ಸದಸ್ಯರೆಲ್ಲರೂ ಒಂದೊಂದು ಹಿಡಿ ಅಕ್ಕಿಯನ್ನು ಈ ಮಡಕೆಗೆ ಹಾಕಿ 'ಪೊಂಗಲೊ ಪೊಂಗಲೊ' ಎಂದು ಹೇಳಿಕೊಳ್ಳುತ್ತಾರೆ. ಮಾರನೇ ದಿನ 'ಮಾತು ಪೊಂಗಲ್' ಅಂದರೆ ಹಸುಗಳನ್ನು ತೊಳೆದು ಅಲಂಕರಿಸಿ, ಪೂಜಿಸಿ ಪೊಂಗಲ್ ತಿನ್ನಿಸುತ್ತಾರೆ.

"https://kn.wikipedia.org/w/index.php?title=ಗಾಣಿಗರು&oldid=1236135" ಇಂದ ಪಡೆಯಲ್ಪಟ್ಟಿದೆ