ವಿಷಯಕ್ಕೆ ಹೋಗು

ಉಡುಪಿ ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಉಡುಪಿ ಮಲ್ಲಿಗೆ
ಉಡುಪಿ ಮಲ್ಲಿಗೆ ಗಿಡ.
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಪಂಗಡ: ಜಾಸ್ಮಿನೀ
ಕುಲ: ಜಾಸ್ಮಿನಮ್
ಪ್ರಜಾತಿ:
J. sambac
Binomial name
Jasminum sambac
Synonyms[][]
  • Nyctanthes sambac L.
  • Mogorium sambac (L.) Lam.
  • Jasminum fragrans Salisb.
  • Jasminum sambac var. normale Kuntze
  • Jasminum bicorollatum Noronha
  • Jasminum blancoi Hassk.
  • Jasminum heyneanum Wall. ex G.Don
  • Jasminum odoratum Noronha
  • Jasminum pubescens Buch.-Ham. ex Wall.
  • Jasminum quadrifolium Buch.-Ham. ex Wall.
  • Jasminum quinqueflorum B.Heyne ex G.Don
  • Jasminum quinqueflorum var. pubescens G.Don
  • Jasminum sambac var. duplex Voigt
  • Jasminum sambac var. gimea (Zuccagni) DC.
  • Jasminum sambac var. goaense (Zuccagni) DC.
  • Jasminum sambac var. heyneanum Wall. ex G.Don) C.B.Clarke in J.D.Hooker
  • Jasminum sambac var. kerianum Kuntze
  • Jasminum sambac var. nemocalyx Kuntze
  • Jasminum sambac var. plenum Stokes
  • Jasminum sambac var. syringifolium Wall. ex Kuntze
  • Jasminum sambac var. trifoliatum Vahl
  • Jasminum sambac var. undulatum (L.) Kuntze
  • Jasminum sambac var. verum DC.
  • Jasminum sanjurium Buch.-Ham. ex DC.
  • Jasminum undulatum (L.) Willd.
  • Mogorium gimea Zuccagni
  • Mogorium goaense Zuccagni
  • Mogorium undulatum (L.) Lam.
  • Nyctanthes goa Steud.
  • Nyctanthes grandiflora Lour.
  • Nyctanthes undulata L.

ಉಡುಪಿ ಮಲ್ಲಿಗೆ ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ ಭಾರತದ ಭೌಗೋಳಿಕ ಚೆನ್ಹೆಯ ಮಾನ್ಯತೆ ದೊರೆತಿದೆ.[]

ವೈಜ್ಞಾನಿಕ ವರ್ಗೀಕರಣ

[ಬದಲಾಯಿಸಿ]

ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ಜಾಸ್ಮಿನಮ್ ಸಂಬಾಕ್ ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ ಶಂಕರಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ.

ಲಕ್ಷಣಗಳು

[ಬದಲಾಯಿಸಿ]

ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ. ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ.

ಬೇಸಾಯ

[ಬದಲಾಯಿಸಿ]

ಮರಳು ಮಿಶ್ರಿತಮಣ್ಣು ,ಮತ್ತು ಇಳಿಜಾರು ಪ್ರದೇಶದಲ್ಲಿ ಈ ಗಿಡವನ್ನು ನೆಡುತ್ತಾರೆ. ದೊಡ್ಡ ಮರದ ಬೇರು ಬರದಂತೆ ನೋಡಿಕೊಳ್ಳಬೇಕು ಸಸ್ಯ ನಡಿವಾಗ ಅಗತ್ಯಕ್ಕೆ ಅನುಸಾರವಾಗಿ ಗುಂಡಿಯನ್ನು ತೆಗೆಯಬೇಕು. ಹೆಚ್ಚು ಬಿಸಿಲು ಬೀಳುವ ಪ್ರದೇಶವಾಗಿರಬೇಕು. ಅಗತ್ಯಕ್ಕೆ ಅನುಸಾರವಾಗಿ ನೀರನ್ನು ನೀಡಬೇಕು. ಇದಕ್ಕೆ ಕೀಟಬಾದೆ ಇರುವುದರಿಂದ ಕೀಟನಾಶಗಳ ಸಿಂಪಡಣೆ ಅಗತ್ಯ. ಅದರ ಬುಡದಲ್ಲಿ ಬೆಳೆಯುವ ಕಳೆಯನ್ನು ಆಗಾಗ ತೆಗೆಯುತ್ತಿರಬೇಕು. ಮಳೆಗಾಲದ ಸಮಯದಲ್ಲಿ ಬಿಸಿಲು ಸರಿಯಾಗಿ ಬೀಳದೆ ಮೊಗ್ಗುಗಳು ಸಣ್ಣದಾಗುತ್ತದೆ . ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ.

ಉಪಯೋಗಗಳು

[ಬದಲಾಯಿಸಿ]

ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು, ಮುಡಿಯಲು ಉಪಯೋಗಿಸುತ್ತಾರೆ. ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ.

ಔಷಧೀಯ ಗುಣಗಳು

[ಬದಲಾಯಿಸಿ]

ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.[]

ವಾಣಿಜ್ಯ ಪ್ರಾಮುಖ್ಯತೆ

[ಬದಲಾಯಿಸಿ]

ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ ಮಂಗಳೂರು, ಮುಂಬಯಿಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. "Jasminum sambac (L.) Aiton". Germplasm Resources Information Network (GRIN). Agricultural Research Service (ARS), United States Department of Agriculture (USDA). Retrieved March 8, 2011.
  2. Ginés López González (2006). Los árboles y arbustos de la Península Ibérica e Islas Baleares: especies silvestres y las principales cultivadas (in Spanish) (2 ed.). Mundi-Prensa Libros. p. 1295. ISBN 978-84-8476-272-0.{{cite book}}: CS1 maint: unrecognized language (link)
  3. "Mysore, Udupi, Hadagali Mallige flowers patented".
  4. http://www.incensum.in/Jasmine.aspx Archived 2009-02-27 ವೇಬ್ಯಾಕ್ ಮೆಷಿನ್ ನಲ್ಲಿ..
  5. Jasmine to dazzle Europe with her fragrance http://mangalorevideos.com/news.php?newsid=73873&newstype=local Archived 2011-07-14 ವೇಬ್ಯಾಕ್ ಮೆಷಿನ್ ನಲ್ಲಿ.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]