ಉಡುಪಿ ಮಲ್ಲಿಗೆ

ವಿಕಿಪೀಡಿಯ ಇಂದ
Jump to navigation Jump to search
ಉಡುಪಿ ಮಲ್ಲಿಗೆ
Udupi Mallige.JPG
ಉಡುಪಿ ಮಲ್ಲಿಗೆ ಗಿಡ.
Scientific classification e
Unrecognized taxon (fix): Jasminum
Species:
J. sambac
Binomial name
Jasminum sambac
Synonyms[೧][೨]
 • Nyctanthes sambac L.
 • Mogorium sambac (L.) Lam.
 • Jasminum fragrans Salisb.
 • Jasminum sambac var. normale Kuntze
 • Jasminum bicorollatum Noronha
 • Jasminum blancoi Hassk.
 • Jasminum heyneanum Wall. ex G.Don
 • Jasminum odoratum Noronha
 • Jasminum pubescens Buch.-Ham. ex Wall.
 • Jasminum quadrifolium Buch.-Ham. ex Wall.
 • Jasminum quinqueflorum B.Heyne ex G.Don
 • Jasminum quinqueflorum var. pubescens G.Don
 • Jasminum sambac var. duplex Voigt
 • Jasminum sambac var. gimea (Zuccagni) DC.
 • Jasminum sambac var. goaense (Zuccagni) DC.
 • Jasminum sambac var. heyneanum Wall. ex G.Don) C.B.Clarke in J.D.Hooker
 • Jasminum sambac var. kerianum Kuntze
 • Jasminum sambac var. nemocalyx Kuntze
 • Jasminum sambac var. plenum Stokes
 • Jasminum sambac var. syringifolium Wall. ex Kuntze
 • Jasminum sambac var. trifoliatum Vahl
 • Jasminum sambac var. undulatum (L.) Kuntze
 • Jasminum sambac var. verum DC.
 • Jasminum sanjurium Buch.-Ham. ex DC.
 • Jasminum undulatum (L.) Willd.
 • Mogorium gimea Zuccagni
 • Mogorium goaense Zuccagni
 • Mogorium undulatum (L.) Lam.
 • Nyctanthes goa Steud.
 • Nyctanthes grandiflora Lour.
 • Nyctanthes undulata L.

ಉಡುಪಿ ಮಲ್ಲಿಗೆ ಉಡುಪಿ ಸಮೀಪದ ಶಂಕರಪುರ ಎಂಬಲ್ಲಿ ಬೆಳೆಯುವ ಮಲ್ಲಿಗೆಯ ಒಂದು ಪ್ರಭೇದ. ಇದು ಅತ್ಯಂತ ಸುವಾಸನಾಯುಕ್ತವಾಗಿದ್ದು, ಇದಕ್ಕೆ ಭಾರತದ ಭೌಗೋಳಿಕೆ ಚೆನ್ಹೆಯ ಮಾನ್ಯತೆ ದೊರೆತಿದೆ.[೩]

ವೈಜ್ಞಾನಿಕ ವರ್ಗೀಕರಣ[ಬದಲಾಯಿಸಿ]

ಉಡುಪಿ ಮಲ್ಲಿಗೆಯು ಮಲ್ಲಿಗೆ ಹೂವಿನ ಒಂದು ಪ್ರಭೇದವಾಗಿದ್ದು,ವೈಜ್ಞಾನಿಕವಾಗಿ ಜಾಸ್ಮಿನಮ್ ಸಂಬಾಕ್ ಎಂದು ಕರೆಯಲ್ಪಡುತ್ತದೆ.ಈ ಪ್ರಭೇದವು ಭಾರತದ ಹಲವಾರು ಕಡೆ ಮಾತ್ರವಲ್ಲದೆ ದಕ್ಷಿಣ ಏಷಿಯಾ ಪ್ರದೇಶ ಬಹುತೇಕ ಕಡೆ ಬೆಳೆಯುವುದಾದರೂ ಉಡುಪಿ ಮಲ್ಲಿಗೆಯ ಸುವಾಸನೆಯು ಈ ಪ್ರದೇಶಕ್ಕೇ ಸೀಮಿತವಾಗಿದೆ. ಅದರಲ್ಲೂ ಶಂಕರಪುರ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಬೆಳೆದ ಮಲ್ಲಿಗೆಯಲ್ಲಿ ಈ ಸುವಾಸನೆಯು ವಿಶಿಷ್ಟವಾಗಿರುವುದರಿಂದ ಅದಕ್ಕೆ ಭೌಗೋಳಿಕ ಚಿನ್ಹೆಯ ಮಾನ್ಯತೆ ದೊರೆತಿದೆ.

ಲಕ್ಷಣಗಳು[ಬದಲಾಯಿಸಿ]

ಇದು ಸಣ್ಣ ಪೊದೆಯಂತೆ ಬೆಳೆಯುವ ಸಸ್ಯ. ಇದರ ಎಲೆಯು ಹಸಿರು ಬಣ್ಣವನ್ನು ಹೊಂದಿದ್ದು ಹಳದಿ ಬಣ್ಣದ ಛಾಯೆ ಇದೆ.ಎಲೆಯ ಉದ್ದಳತೆ ೫ ರಿಂದ ೭ ಸೆಂ.ಮೀ ಉದ್ದ ಹಾಗೂ ೨.೫ ರಿಂದ ೩.೫ ಸೆಂಟಿಮೀಟರ್ ಅಗಲವಿದೆ.ಬಿಳಿಯ ಬಣ್ಣದ ಹೂವು ಸುವಾಸನಾಯುಕ್ತವಾಗಿದೆ.

ಬೇಸಾಯ[ಬದಲಾಯಿಸಿ]

ಮುರಕಲ್ಲಿನಿಂದ ಕೂಡಿದ ಮಣ್ಣು, ತೀವ್ರವಾದ ಮಳೆ, ತೀವ್ರ ಪ್ರಮಾಣದ ತೇವಾಂಶ ಇದಕ್ಕೆ ಪೂರಕವಾದ ವಾತಾವರಣ.ಗಿಡದ ಕತ್ತರಿಸಿದ ತುಂಡುಗಳಿಂದ ಇದರ ಗಿಡವನ್ನು ಬೆಳೆಸುತ್ತಾರೆ.

ಉಪಯೋಗಗಳು[ಬದಲಾಯಿಸಿ]

ಉಡುಪಿ ಮಲ್ಲಿಗೆಯನ್ನು ದೇವರ ಪೂಜೆಗೆ, ಹೂಮಾಲೆ ತಯಾರಿಸಲು,ಮುಡಿಯಲು ಉಪಯೋಗಿಸುತ್ತಾರೆ.ಈ ಪ್ರದೇಶದ ಮದುವೆ ಹಾಗೂ ಇತರ ಸಮಾರಂಭಗಳಲ್ಲಿ ಉಡುಪಿ ಮಲ್ಲಿಗೆಯ ಮಾಲೆ ಅನಿವಾರ್ಯ ಎಂಬಷ್ಟು ಇದು ಉಪಯೋಗದಲ್ಲಿದೆ.

ಔಷಧೀಯ ಗುಣಗಳು[ಬದಲಾಯಿಸಿ]

ಮಲ್ಲಿಗೆ ಹಲವಾರು ಔಷಧೀಯ ಗುಣಗಳನ್ನು ಹೊಂದಿದ್ದು ಅದರಲ್ಲಿ ನಂಜು ನಿರೋಧಕ, ಕಾಮೋತ್ತೇಜಕ,ಉಪಶಮನಕಾರಿ ಗುಣಗಳು ಮುಖ್ಯವಾದವುದಗಳು.[೪]

ವಾಣಿಜ್ಯ ಪ್ರಾಮುಖ್ಯತೆ[ಬದಲಾಯಿಸಿ]

ಉಡುಪಿಯ ಸುತ್ತಮುತ್ತ ಉಡುಪಿ ಮಲ್ಲಿಗೆಯ ಕೃಷಿ ಮತ್ತು ಮಾರಾಟ ಒಂದು ಉದ್ಯಮದ ರೂಪವನ್ನು ಪಡೆದಿದೆ. ಸ್ಥಳೀಯವಾಗಿ ಹಾಗೂ ಮಂಗಳೂರು, ಮುಂಬಯಿಹಾಗೂ ದುಬೈ ಹೂವಿನ ಮಾರುಕಟ್ಟೆಯಲ್ಲಿ ಇದು ಪ್ರಮುಖ ಸ್ಥಾನವನ್ನು ಪಡೆದಿದೆ.[೫]

ಉಲ್ಲೇಖಗಳು[ಬದಲಾಯಿಸಿ]

 1. "Jasminum sambac (L.) Aiton". Germplasm Resources Information Network (GRIN) online database. Retrieved March 8, 2011.
 2. Ginés López González (2006). Los árboles y arbustos de la Península Ibérica e Islas Baleares: especies silvestres y las principales cultivadas (in Spanish) (2 ed.). Mundi-Prensa Libros. p. 1295. ISBN 978-84-8476-272-0.CS1 maint: unrecognized language (link)
 3. "Mysore, Udupi, Hadagali Mallige flowers patented".
 4. http://www.incensum.in/Jasmine.aspx.
 5. Jasmine to dazzle Europe with her fragrance http://mangalorevideos.com/news.php?newsid=73873&newstype=local

ಬಾಹ್ಯ ಸಂಪರ್ಕಗಳು[ಬದಲಾಯಿಸಿ]