ವಿಷಯಕ್ಕೆ ಹೋಗು

ಆಂಗೀರಸ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಆಂಗೀರಸನೊಂದಿಗೆ ರಾಣಿ ಚೊಳದೇವಿ

ಆಂಗೀರಸ ಒಬ್ಬ ವೈದಿಕ ಋಷಿ. ಅಥರ್ವನ ಮುನಿಯೊಡನೆ ನಾಲ್ಕನೇ ವೇದವಾದ ಅಥರ್ವಣವೇದವನ್ನು ರಚಿಸಿದಾತ. ಈತ ಸಪ್ತರ್ಷಿಗಳಲ್ಲಿ ಒಬ್ಬ. ಅಂಗಿರಸಮಹರ್ಷಿ. ದೇವತೆಗಳಿಗೆ ಪುರೋಹಿತ. ಯಾಗಗಳಲ್ಲಿ ಇವನ ಪಾತ್ರ ಹಿರಿದು. ಬ್ರಹ್ಮಮಾನಸಪುತ್ರನೆಂದೂ ಅಗ್ನಿಯ ತಂದೆಯೆಂದೂ ಅಗ್ನಿಯ ಮಗಳಾದ ಆಗ್ನೇಯಿಯ ಪುತ್ರನೆಂದೂ ಈತನ ಕುಲ ಗೋತ್ರದ ವಿಚಾರವಾಗಿ ನಾನಾ ಅಭಿಪ್ರಾಯಗಳಿವೆ. ಸತಿ ಎಂಬ ಪತ್ನಿಯಲ್ಲಿ ಅಥರ್ವಾಂಗಿರಸರನ್ನು ಪಡೆದ. ಒಮ್ಮೆ ಅಗ್ನಿ ಕೋಪಗೊಂಡು ಎಲ್ಲೋ ಅವಿತುಕೊಂಡಾಗ ಬ್ರಹ್ಮ ಅವನ ಸ್ಥಾನಕ್ಕೆ ಅಂಗಿರಸನನ್ನು ನಿಯಮಿಸಿದನೆಂದೂ ಕೊಂಚ ಕಾಲದ ಅನಂತರ ಅಗ್ನಿ ಪಶ್ಚಾತ್ತಾಪದಿಂದ ಹಿಂತಿರುಗಿದಾಗ ಅವನ ಸ್ಥಾನವನ್ನು ಬಿಟ್ಟುಕೊಟ್ಟನೆಂದೂ ಮಹಾಭಾರತದ ವನಪರ್ವದಲ್ಲಿ ಹೇಳಿದೆ.

ಆಂಗೀರಸ ನಾಮ ಸಂವತ್ಸರ ಸ್ತೋತ್ರ149ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹÀರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪಸೂರ್ಯಛಾಯಾಸೂನುಸೂರಿಸಾಧುಗಳಿಗೆಕಾರ್ಯಾನುಕೂಲ ಸರ್ವೇಷ್ಟ ಪೂರೈಸುವನುಕ್ರಿಯಾ ರೂಪದಿ ವಿಷ್ಣುವರವಾಯು ದೇವನೊಳು ಇರುತಸಂವತ್ಸರ ನಾಯಕರೋಳು ಕ್ರಿಯೆಗಳ ಮಾಡಿಸುವ 1ನರಹರಿಯ ಒಲುಮೆ ಶನಿರಾಜನಲಿ ಬಹು ಉಂಟುನರಕ್ಷೇಮೋಪಾಯ ಅಂದು ದಶರಥಗೆ ಪೇಳಿದ ಪಾದ್ಮದಿಹರಿನಾಮೋಚ್ಛಾರಣೆ, ಶನಿಕೃತ ನೃಹರಿ ಸ್ತೋತ್ರ ಪಠಣದಿಪಾರುಗಾಣುವರು ಸಾಧು ಸಜ್ಜನ ಭಕ್ತರು 2ಅನಂದಮಯ ಹರಿಯು ಆಂಗೀರಸ ಸಂವತ್ಸರದಿಜನರಿಗೆ ಯೋಗ್ಯತಾನುಸಾರ ಸುಖವನ್ನೇಈವಜನರಿಗೆ ಆದಿಯಲಿ ಸುಕ್ಷೇಮ ಕಾಲವು ಕಥೆಯಲ್ಲಿ ದುರ್ಭಿಕ್ಷನೂತನ ವಸ್ತು ಉತ್ಪತ್ತಿ, ಧಾನ್ಯಾದಿಗಳು ಸಮೃದ್ಧಿ ಇದ್ದರೂ ಕ್ಷಾಮ 3ಬ್ರಹ್ಮಪಾರ ಸ್ತೋತ್ರವ ಕಂಡು ಋಷಿಗೆ ಉಪದೇಶಿಸಿದಬ್ರಾಹ್ಮಣೌಷಧಿ ಪತಿಯು ಸುಧಾಮೂರ್ತಿ ಚಂದ್ರಮಹಿಗೆ ಅಹ್ಲಾದವ ನೀವನು ಮಂತ್ರಿಸ್ಥಾನವ ವಹಿಸಿಅಜಸ್ಪತಿ, ಬೃಹಸ್ಪತಿ, ಶನಿಕುಜಗೋಪಾಲಸರ್ವರಿಗೂ ನಮೋ ನಮೋ 4ರಸನೆ ಲೋಲ್ಯಾಟವಾಹನಆಟೋಪ ಹೆಚ್ಚಿದರೂರಸನೆ ಸಹ ಭಕ್ತಿಯೂ ಸಹ ಹೆಚ್ಚುವುದು ಮದುವೆ ಜನನ ಕಡಿಮೆಶಾಸ್ತ್ರ, ವಿಜ್ಞಾನ, ವಿಷ್ಣು ಸಹಸ್ರನಾಮ ಪ್ರತಿಪಾದ್ಯಸರಸಿಜಾನನತಾತಪ್ರಸನ್ನ ಶ್ರೀನಿವಾಸನಲಿ ಶರಣು ಶರಣಾದೆ5ಶ್ರೀ ಲಕ್ಷ್ಮೀ ಭೂಮಾ ನೃಸಿಂಹನ್ನ ಆರಾಧಿಸಿಶೀಲ ಉದ್ಭಕ್ತಿಯಲಿ ಸ್ತುತಿಸುವ ಶನೈಶ್ಚರಇಳೆಯಲ್ಲಿ ವಿಂಧ್ಯಾಚಲ ದಕ್ಷಿಣ ದೇಶದಲಿ ಹೊಳೆಯುತಿಹರಾಜನಾಗಿ ಆಂಗೀರಸ ಸಂವತ್ಸರದಿ ತಂ ನಮೋ ಪ

ಉಲ್ಲೇಖಗಳು

[ಬದಲಾಯಿಸಿ]
ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
"https://kn.wikipedia.org/w/index.php?title=ಆಂಗೀರಸ&oldid=718400" ಇಂದ ಪಡೆಯಲ್ಪಟ್ಟಿದೆ