ಹೂವರ್ ಆಣೆಕಟ್ಟು
ಹೂವರ್ ಆಣೆಕಟ್ಟು | |
Hoover Dam by Ansel Adams (1942) | |
Official name | Hoover Dam |
---|---|
Impounds | Colorado River |
Locale | Clark County, Nevada / Mohave County, Arizona, USA |
Length | ೧೨೪೪ ft (೩೭೯ m) |
Height | ೭೨೬.೪ ft (೨೨೧ m) |
Base width | ೬೬೦ feet (೨೦೧m) |
Construction began | ೧೯೩೧ |
Opening date | ೧೯೩೬ |
Construction cost | $೪೯ million |
Maintained by | U.S. Bureau of Reclamation |
Reservoir information | |
Creates | Lake Mead |
Capacity | 35.2 km3 (28,500,000 acre⋅ft) |
Surface area | 247 square miles (640 km2)[೧] |
Power generation information | |
Turbines | 17 Main |
Installed capacity | 2078 MW |
Annual generation | 4000 GWh[೨] |
Website | Bureau of Reclamation: Lower Colorado Region - Hoover Dam |
Hoover Dam | |
Lua error in ಮಾಡ್ಯೂಲ್:Location_map at line 525: Unable to find the specified location map definition: "ಮಾಡ್ಯೂಲ್:Location map/data/Nevada" does not exist. | |
Nearest city | Boulder City, Nevada |
Built | 1933 |
Architect | Six Companies,Inc. (structural), Gordon Kaufmann (exteriors) |
Architectural style | Art Deco |
MPS | Vehicular Bridges in Arizona MPS (AD) |
NRHP reference # | ೮೧೦೦೦೩೮೨ |
Significant dates | |
Added to NRHP | April 08, 1981[೩] |
Designated NHL | August 20, 1985[೪] |
ಒಂದು ಕಾಲಕ್ಕೆ ಬೌಲ್ಡರ್ ಅಣೆಕಟ್ಟು ಎಂದು ಹೆಸರಾಗಿದ್ದ ಹೂವರ್ ಅಣೆಕಟ್ಟು ಆಮೇರಿಕ ಸಂಯುಕ್ತ ಸಂಸ್ಧಾನದ ಅರಿಜೋನಾ ಮತ್ತು ನೆವಾಡ ರಾಜ್ಯಗಳ ಗಡಿಯಲ್ಲಿರುವ ಕೊಲೊರೆಡೊ ನದಿಯ ಕಪ್ಪು ಕಣಿವೆಯಲ್ಲಿ ಕಾಂಕ್ರೀಟ್‌ನಿಂದ ನಿರ್ಮಿಸಲಾಗಿರುವ ಕಮಾನಿನಾಕಾರದ ಗುರುತ್ವಾಕರ್ಷಕ ಅಣೆಕಟ್ಟು ೧೯೩೬ರಲ್ಲಿ ಅದರ ನಿರ್ಮಾಣ ಕಾರ್ಯ ಮುಗಿದಾಗ ಅದು ಜಗತ್ತಿನ ಅತಿದೊಡ್ಡ ಜಲವಿದ್ಯುತ್ ಸ್ಧಾವರ ಮತ್ತು ಅತಿದೊಡ್ಡ ಕಾಂಕ್ರೀಟ್ ರಚನೆ ಅಥವಾ ಈ ಎರಡೂ ಎಂಬ ಹೆಗ್ಗಳಿಕೆ ಪಡೆದುಕೊಂಡಿತ್ತು. ಈ ದಾಖಲೆಯನ್ನು ಮುರಿದದ್ದು ೧೯೪೫ರಲ್ಲಿ ನಿರ್ಮಿಸಿದ ಗ್ರ್ಯಾಂಡ್‌ಕೌಲಿ ಅಣೆಕಟ್ಟು. ಈಗ ಇದು ಜಗತ್ತಿನ ೩೮ನೆಯ ಅತಿದೊಡ್ಡ ಜಲವಿದ್ಯುತ್ ಸ್ಧಾವರ.[೫] ಈ ಅಣೆಕಟ್ಟು ನೇವಡಾದ ಲಾಸ್‌ವೆಗಾಸ್‌ನ ಅಗ್ನೇಯ ಭಾಗದಲ್ಲಿದೆ, 30 mi (48 km)ಮೊದಲಿಗೆ ಆಮೇರಿಕ ಸಂಯುಕ್ತ ಸಂಸ್ಧಾನದ ವಾಣಿಜ್ಯ ಕಾರ್ಯದರ್ಶಿಯಾಗಿ, ನಂತರ ಅಧ್ಯಕ್ಷನಾಗಿದ್ದ ಹೆರ್ಬರ್ಟ್ ಹೂವರ್ ಇದರ ನಿರ್ಮಾಣದಲ್ಲಿ ಪ್ರಧಾನ ಪಾತ್ರ ವಹಿಸಿದ್ದ; ಆತನ ಹೆಸರನ್ನು ಈ ಅಣೆಕಟ್ಟಿಗೆ ಇಡಲಾಗಿದೆ. ಇದರ ನಿರ್ಮಾಣ ಕಾರ್ಯ ೧೯೩೧ರಲ್ಲಿ ಪ್ರಾರಂಭವಾಗಿ ನಿಗಧಿ ಪಡಿಸಿದ ಅವಧಿಗಿಂತ ಎರಡು ವರ್ಷಗಳಿಗೂ ಹೆಚ್ಚು ಕಾಲ ತೆಗೆದುಕೊಂಡು ೧೯೩೬ರಲ್ಲಿ ಮುಕ್ತಾಯವಾಯಿತು. ಈ ಅಣೆಕಟ್ಟು ಮತ್ತು ವಿದ್ಯುತ್ ಸ್ಧಾವರವನ್ನ ಆಮೇರಿಕ ಸಂಯುಕ್ತ ಸಂಸ್ಧಾನದ ಅಂತರಿಕ ಇಲಾಖೆಯ ಬ್ಯೂರೋ ಆಫ್ ರಿಕ್ಲಮೇಷನ್ ನಿರ್ವಹಿಸುತ್ತದೆ. ೧೯೮೧ರಲ್ಲಿ ರಾಷ್ಟ್ರೀಯ ಚಾರಿತ್ರಿಕ ಸ್ಧಳಗಳ ದಾಖಲೆಗೆ ಸೇರ್ಪಡೆ ಗೊಂಡ ಹೂವರ್ ಅಣೆಕಟ್ಟು ೧೯೮೫ರಲ್ಲಿ ರಾಷ್ಟ್ರೀಯ ಚಾರಿತ್ರಿಕ ಸ್ಧಳವೆಂಬ ಸ್ಧಾನ ಗಳಿಸಿಕೊಂಡಿತು.[೪][೬] ಈ ಅಣೆಕಟ್ಟಿನಿಂದ ಲೇಕ್‌ಮೀಡ್ ಎಂಬ ಜಲಾಶಯ ಸೃಷ್ಟಿಯಾಗಿದ್ದು, ಅಣೆಕಟ್ಟಿನ ನಿರ್ಮಾಣದ ಉಸ್ತುವಾರಿ ನಡೆಸಿದ ಎಲ್‌ವುಡ್ ಮೀಡ್‌ನ ಹೆಸರನ್ನು ಇದಕ್ಕೆ ಇಡಲಾಗಿದೆ.
ಯೋಜನೆ ಮತ್ತು ಒಪ್ಪಂದಗಳು
[ಬದಲಾಯಿಸಿ]೧೯೨೨ರಲ್ಲಿ ಜಲಾನಯನ ರಾಜ್ಯಗಳಿಂದ ತಲಾ ಒಬ್ಬ ಪ್ರತಿನಿಧಿ ಮತ್ತು ಫೆಡರಲ್ ಸರ್ಕಾರದ ಒಬ್ಬ ಪ್ರತಿನಿಧಿಯನ್ನು ಒಳಗೊಂಡಂತೆ ಒಂದು ಆಯೋಗವನ್ನು ರಚಿಸಲಾಯಿತು. ವಾರನ್‌ಹಾರ್ಡಿಂಗ್‌ನ ಅಧ್ಯಕ್ಷೀಯ ಪಾರುಪತ್ಯದಡಿಯಲ್ಲಿ ವಾಣಿಜ್ಯ ಕಾರ್ಯದರ್ಶಿಯಾಗಿದ್ದ ಹೆರ್ಬರ್ಟ್ ಹೂವರ್ ಫೆಡರಲ್ ಸರ್ಕಾರದ ಪ್ರತಿನಿಧಿಯಾಗಿದ್ದ. ೧೯೨೨ರಲ್ಲಿ ಹೂವರ್, ಅರಿಜೋನಾ, ಕ್ಯಾಲಿಫೋರ್ನಿಯಾ, ಕೊಲೊರೆಡೊ, ನೆವಾಡ, ನ್ಯೂಮೆಕ್ಸಿಕೊ,ಉತಾಹ ಮತ್ತು ಮ್ಯೋಮಿಂಗ್ ರಾಜ್ಯಗಳ ರಾಜ್ಯಪಾಲರು ಸಭೆ ಕರೆದು ರಾಜ್ಯಗಳ ಉಪಯೋಗಕ್ಕಾಗಿ ಕೊಲೊರೆಡೊ ನದಿಯ ನೀರಿನ ಸಮಪಾಲು ಪಡೆದು ಕೊಳ್ಳುವಂತೆ ಒಂದು ವ್ಯವಸ್ಧೆಯನ್ನು ರೂಪಿಸಿದ. ೨೪ ನವೆಂಬರ್ ೧೯೨೨ರಲ್ಲಿ ಕೊಲೊರೆಡೊ ನದಿ ನೀರಿನ ಒಪ್ಪಂದಕ್ಕೆ ಸಹಿ ಬಿತ್ತು, ನದಿಯ ಜಲಾಶಯನ ಪ್ರದೇಶವನ್ನು ಮೇಲು ಮತ್ತು ಕೆಳ ಹಂತವಾಗಿ ರಾಜ್ಯಗಳೊಂದಿಗೆ ಮತ್ತು ಪ್ರಾಂತ್ಯಗಳ ಒಳಗೆ ವಿಭಜಿಸಿ ನೀರನ್ನು ಹೇಗೆ ಪಾಲು ಮಾಡಿಕೊಳ್ಳಬೇಕೆಂದು ನಿರ್ಧರಿಸಲಾಯಿತು. ಹೂವರ್ ಸಂಧಾನ ಎಂದು ಹೆಸರಾಗಿರುವ ಈ ಒಪ್ಪಂದ ಬೌಲ್ಡರ್ ಅಣೆಕಟ್ಟು ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟಿತು. ಈ ಬೃಹತ್ ಅಣೆಕಟ್ಟನ್ನು ಪ್ರವಾಹ ತಡೆಗಟ್ಟಿ, ಆ ನೀರನ್ನು ನೀರಾವರಿ ಹರಿವು ಮತ್ತು ಜಲವಿದ್ಯುತ್ ಉತ್ಪಾದನೆಗಾಗಿ ನಿರ್ಮಿಸಲಾಯಿತು.
ಬೌಲ್ಡರ್ ಅಣೆಕಟ್ಟಿನ ನಿರ್ಮಾಣಕ್ಕಾಗಿ ಕಾಂಗ್ರೆಸಿನ ಒಪ್ಪಿಗೆ ಪಡೆದು ಕೊಳ್ಳಲು ೧೯೨೨ರಲ್ಲಿ ಜನಪ್ರತಿನಿಧಿ ಸಭೆ ಮತ್ತು ಸೆನೇಟ್‌ನಲ್ಲಿ ಎರಡು ಮಸೂದೆಗಳನ್ನು ಮಂಡಿಸುವ ಮೂಲಕ ಮೊದಲ ಪ್ರಯತ್ನ ನಡೆಯಿತು. ಕಾಂಗ್ರೆಸಿನ ಸದಸ್ಯ ಫಿಲ್ ಡಿ. ಸ್ವಿಂಗ್ ಮತ್ತು ಸೆನೇಟರ್ ಹಿರಂ W. ಜಾನ್ಸನ್ ಮಂಡಿಸಿದ ಈ ಮಸೂದೆಗಳು ಸ್ವಿಂಗ್-ಜಾನ್ಸನ್ ಮಸೂದೆಗಳೆಂದು ಹೆಸರಾಗಿವೆ. ಈ ಮಸೂದೆಗಳು ಮತದಾನದ ಹಂತಕ್ಕೆ ಬರಲು ವಿಫಲಗೊಂಡು ಅವುಗಳನ್ನು ಅನೇಕ ಸಲ ಮರು ಮಂಡನೆ ಮಾಡಲಾಯಿತು. ಡಿಸೆಂಬರ್ ೧೯೨೮ರಲ್ಲಿ ಕಾಂಗ್ರೆಸ್ ಮತ್ತು ಸೆನೇಟ್‌ಗಳು ಅಂತಿಮವಾಗಿ ಈ ಮಸೂದೆಗಳನ್ನು ಒಪ್ಪಿ ಕೊಂಡು ಅಧ್ಯಕ್ಷೀಯ ಒಪ್ಪಿಗೆಗಾಗಿ ಕಳುಹಿಸಿ ಕೊಟ್ಟವು. ೨೧ ಡಿಸೆಂಬರ್೧೯೨೮ರಲ್ಲಿ ಬೌಲ್ಡರ್ ಕಣಿವೆ ಯೋಜನೆಯನ್ನು ಒಪ್ಪಿದ ಅಧ್ಯಕ್ಷ ಕ್ಯಾಲ್ಪಿನ್ ಕೂಲಿಡ್ಜ್ ಮಸೂದೆ ಸಹಿ ಹಾಕಿದ. ಬೌಲ್ಡರ್ ಕಣಿವೆ ಯೋಜನೆ . ೧೯೩೦ರಲ್ಲಿ ಅದರ ಪ್ರಾರಂಭಿಕ ಕಾಮಗಾರಿ ಶುರುವಾಗುವ ವೇಳೆಗೆ ಹೆರ್ಬರ್ಟ್ ಹೂವರ್ ಅಧ್ಯಕ್ಷ ಪದವಿಗೇರಿದ್ದ. ಈ ಮೊದಲು ಈ ಅಣೆಕಟ್ಟನ್ನು ಬೌಲ್ಡರ್ ಕಣಿವೆಯಲ್ಲಿ ಕಟ್ಟುವ ಯೋಜನೆ ಇತ್ತಾದ್ದರಿಂದ ಇದು ಬೌಲ್ಡರ್ ಕಣಿವೆ ಯೋಜನೆ ಎಂದು ಹೆಸರಾಯಿತು. ಮುಂದೆ ಈ ಅಣೆಕಟ್ಟಿನ ಸ್ಧಳವನ್ನು ಕೆಳ ಹರಿವಿನ ಕಪ್ಪು ಕಣಿವೆಗೆ ಎಂಟು ಮೈಲಿ (೧೩ಕಿ.ಮೀ) ಗಳಷ್ಟು ಮುಂದೂಡಲಾಯಿತು; ಆದರೆ ಯೋಜನೆಯ ಹೆಸರು ಹಾಗೇ ಉಳಿದು ಕೊಂಡಿತು. ಅಣೆಕಟ್ಟನ್ನು ಕಪ್ಪು ಕಣಿವೆಗೆ ಸ್ಧಳಾಂತರ ಮಾಡಲು ಇದ್ದ ಪ್ರೇರಣೆ ಎಂದರೆ, ಅಣೆಕಟ್ಟಿನ ಸ್ಧಳದ ಕೆಳಗಿನ ಭೂಮಿ ನದಿಯ ಭೌತಿಕ ಹತೋಟಿಗೆ ಬೌಲ್ಡರ್ ಜಲಾನಯನ ಅಷ್ಟು ಸ್ಧಿರವಾಗಿರಲಿಲ್ಲ. ಕಪ್ಪು ಕಣಿವೆಗೆ ಅಷ್ಟು ದೂರದ ಕೆಳ ಹರಿವಿನಲ್ಲಿ ಉತ್ತಮವಾದ ಸಂಪೂರ್ಣ ನದಿ ನಿಯಂತ್ರಣವನ್ನು ಒದಗಿಸಿಕೊಟ್ಟಿತು.[೭][೮]
ಗುತ್ತಿಗೆದಾರರು
[ಬದಲಾಯಿಸಿ]ಬೌಲ್ಡರ್ ಅಣೆಕಟ್ಟಿನ ಕಟ್ಟಡ ಕಾಮಗಾರಿಯನ್ನು ೧೧ ಮಾರ್ಚ್ ೧೯೩೧ರಲ್ಲಿ ಇಡಾಹೊದ ಬೋಯಿಸ್‌ನ ಮೋರಿಸನ್ ಕೂಡ್ಸೆನ್ ಎಂಬ ಸಂಯುಕ್ತ ಕಂಪನಿ,[೯] ಉತಾಹದ ಓಗ್ಡೆನ್ನಿನ ಉತಾಹ್ ಕನ್ಸ್‌ಟ್ರಕ್ಷನ್ ಕಂಪನಿ, ಓರೆಗಾನ್‌ನ ಫೋರ್ಟ್‌ಲ್ಯಾಂಡಿನ ಫೆಸಿಫಿಕ್ ಬ್ರಿಡ್ಜ್ ಕಂಪನಿ, ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡಿನ ಹೆನ್ರಿ ಜೆ ಕೈಸರ್ ಮತ್ತು W.A ಕ್ಯಾಲಿಫೋರ್ನಿಯಾದ ಓಕ್‌ಲ್ಯಾಂಡ್‌ನ ಬೆಕ್ಟೆಲ್ ಕಂಪನಿ, ಲಾಸ್‌ಏಂಜೆಲೀಸ್‌ನ ಮ್ಯಾಕ್‌ಡೊನಾಲ್ಡ್ ಮತ್ತು ಕಾಹ್ನ್‌ಲಿಮಿಟೆಡ್ ಮತ್ತು ಓರೆಗಾನ್‌ನ ಫೋರ್ಟ್‌ಲ್ಯಾಂಡಿನ ಜೆ.ಎಫ್ ಷಿಯಾ ಕಂಪನಿ ಎಂಬ ಆರು ಕಂಪನಿಗಳಿಗೆ ಗುತ್ತಿಗೆ ಕೊಡಲಾಯಿತು. ಈ ಆರು ಕಂಪನಿಗಳ ಮುಖ್ಯ ಎಗ್ಸಿಕ್ಯುಟಿವ್ ಆಗಿದ್ದ ಫ್ರಾಂಕ್ ಕ್ರೌವ್ ಅಣೆಕಟ್ಟುಗಳನ್ನು ಕಟ್ಟುವ ಅನೇಕ ತಾಂತ್ರಿಕತೆಗಳನ್ನು ಕಂಡು ಹಿಡಿದಿದ್ದ.
ಕಟ್ಟಡ ಕಾಮಗಾರಿಯ ಕಾಂಕ್ರೀಟ್ ಸುರಿಯುವ ಮತ್ತು ಅದನ್ನು ಬನಿ ಮಾಡುವ ಹಂತದಲ್ಲಿ ಕಾಂಕ್ರೀಟಿನ ಒಳಗಡೆ ನಳಿಕೆಗಳ ಮೂಲಕ ಶೀತಲ ನೀರನ್ನು ಭಾಗಗಳಲ್ಲಿ ಹರಿಸುವ ಅಗತ್ಯವಿರುತ್ತದೆ. ಕಾಂಕ್ರೀಟ್‌ನ್ನು ಘನೀಕರಿಸಲು ನಡೆಯುವ ಕೆಲವು ರಾಸಾಯನಿಕ ಪ್ರತಿಕ್ರಿಯೆಗಳು ಉಂಟುಮಾಡುವ ಶಾಖವನ್ನು ಹೀರಿಕೊಳ್ಳಲು ಇದು ಅವಶ್ಯಕ. ಒಂದೇ ಸಲ ಸುರಿದು, ಅದರ ಜೊತೆಗೆ ಹೆಚ್ಚುವರಿಯಾಗಿ ತಂಪು ಮಾಡಿದಿದ್ದರೆ ಕಾಂಕ್ರೀಟ್ ಸದೃಡವಾಗಿ ಬನಿಯಾಗಲು ಸುಮಾರು ೧೨೫ ವರ್ಷಗಳ ಕಾಲ ತೆಗೆದುಕೊಳ್ಳುತ್ತದೆಂದು ಲೆಕ್ಕ ಹಾಕಲಾಗಿತ್ತು. ಆರು ಕಂಪನಿಗಳು ಇಂಕ್., ಈ ಬಹುಪಾಲು ಕೆಲಸ ಮಾಡಿದವು, ಆದರೆ ಇಷ್ಟು ಬೃಹತ್ ಪ್ರಮಾಣದಲ್ಲಿ ತಂಪು ಮಾಡುವ ಯೋಜನೆ ತಮ್ಮ ತಾಂತ್ರಿಕ ಪರಿಣತಿಗೆ ಮೀರಿದ್ದೆಂದು ಅವರಿಗೆ ಗೊತ್ತಾಗ ತೊಡಗಿತು. ಆದ್ದರಿಂದ ತಂಪು ಮಾಡುವ ಅವಶ್ಯಕತೆಗಳನ್ನು ಪೂರೈಸಲು ಯೂನಿಯನ್ ಕಾರ್ಬೈಡ್ ಕಾರ್ಪೊರೇಷನ್‌ಗೆ ಗುತ್ತಿಗೆ ಕೊಡಲಾಯಿತು. ಕೆಲಸಗಾರರಿಗಾಗಿ "ಬೌಲ್ಡರ್ ಸಿಟಿ" ಎಂಬ ಹೊಸನಗರವನ್ನು ಕಟ್ಟಲು ಆರು ಕಂಪನಿಗಳಿಗೆ ಗುತ್ತಿಗೆ ಕೊಡಲಾಯಿತು. ಆಗಿನ ಅರ್ಥಿಕ ಮುಗ್ಗಟ್ಟನ್ನು ಎದುರಿಸಲು ಹೆಚ್ಚು ಉದ್ಯೋಗ ಸೃಷ್ಟಿ ಮಾಡಲು ಅಣೆಕಟ್ಟಿನ ಕಟ್ಟಡದ ವೇಗವನ್ನು ಹೆಚ್ಚಿಸಲಾಯಿತು; ಆದರೆ ೧೯೩೧ರ ಪ್ರಾರಂಭದಲ್ಲಿ ಅಣೆಕಟ್ಟಿನ ಕೆಲಸಗಾರರ ಮೊದಲ ತಂಡ ನಿವೇಶನಕ್ಕೆ ಬರುವ ಹೊತ್ತಿಗೆ ಆ ನಗರ ನಿರ್ಮಾಣ ಇನ್ನೂ ಮುಗಿದಿರಲಿಲ್ಲ. ಅಣೆಕಟ್ಟಿನ ಕಾಮಗಾರಿಯ ಮೊದಲ ಬೇಸಿಗೆ ಅವಧಿಯಲ್ಲಿ, ನಗರ ನಿರ್ಮಾಣ ಕಾರ್ಯ ಮುಂದುವರೆಯುತ್ತಿದ್ದಾಗ ಕೆಲಸಗಾರರು ಮತ್ತು ಅವರ ಕುಟುಂಬಗಳಿಗೆ ಟಾರ್ಪಾಲುಗಳಿಂದ ಕಟ್ಟಿದ ತಾತ್ಕಾಲಿಕ ಷೆಡ್ಡುಗಳಲ್ಲಿ ವಸತಿ ಕಲ್ಪಿಸಲಾಯಿತು ಈ ಟಾರ್ಪಾಲಿನ್ ಷೆಡ್ಡುಗಳು ಮತ್ತು ಅಣೆಕಟ್ಟೆ ನಿವೇಶನದಲ್ಲಿನ ಕೆಲಸಗಳ ಅಪಾಯಕಾರಿ ಪರಿಸ್ಧಿತಿ ಬಗ್ಗೆ ಕೆಲಸಗಾರರಿಗೆ ಅಸಮಾಧಾನವಾಗಿ ಇದು ೮ ಆಗಸ್ಟ್ ೧೯೩೧ರಲ್ಲಿ ಹರತಾಳಕ್ಕೆ ದಾರಿ ಮಾಡಿಕೊಟ್ಟಿತು. ಆರು ಕಂಪನಿಗಳು ಹರತಾಳ ದಮನಕಾರರಿಗೆ ಬಂದೂಕು ಮತ್ತು ದೊಣ್ಣೆಗಳನ್ನು ಕೊಟ್ಟು ಅದನ್ನು ದಮನ ಮಾಡುವ ರೀತಿಯಲ್ಲಿ ಪ್ರತಿಕ್ರಿಯಿಸಿತು; ಹರತಾಳ ಬೇಗ ತಣ್ಣಗಾಯಿತು. ಆದರೆ ಈ ಅಸಮಾಧಾನ ಬೌಲ್ಡರ್ ಸಿಟಿ ನಿರ್ಮಾಣವನ್ನು ಚುರುಕು ಗೊಳಿಸುವಂತೆ ಅಧಿಕಾರಸ್ತರನ್ನು ಪ್ರೇರೇಪಿಸಿತು; ೧೯೩೨ರ ವಸಂತ ಕಾಲದ ವೇಳೆಗೆ ಟಾರ್ಪಾಲಿನ ಬೌಲ್ಡರ್ ಟೌನ್ ಹಾಳು ಬಿತ್ತು.[೧೦] ಕಾಮಗಾರಿಯ ಅವಧಿಯಲ್ಲಿ ಬೌಲ್ಡರ್ ಸಿಟಿಯಲ್ಲಿ ಜೂಜು, ಕುಡಿತ ಮತ್ತು ಸೂಳೆಗಾರಿಕೆಗೆ ಅವಕಾಶವಿರಲಿಲ್ಲ. ಈ ಇಂದಿನ ತನಕ ಜೂಜಿನ ಗಂಧಗಾಳಿ ಇಲ್ಲ ನೆವಾಡದ ಎರಡು ಪ್ರದೇಶಗಳ ಪೈಕಿ ಬೌಲ್ಡರ್ ಸಿಟಿ ಒಂದು; ಇಲ್ಲಿ ೧೯೬೯ರ ತನಕ ಆಲ್ಕೋಹಾಲ್ ಮಾರಾಟ ಕಾನೂನು ಬಾಹಿರವಾಗಿತ್ತು.[೧೧] ಸುರಂಗಗಳಲ್ಲಿ ಕೆಲಸ ಮಾಡುತ್ತಿರುವಾಗ ಅನೇಕ ಕೆಲಸಗಾರರು ಅಲ್ಲಿನ ಯಂತ್ರಗಳು ಉಗುಳುತ್ತಿದ್ದ ಕಾರ್ಬನ್ ಮಾನಾಕ್ಸೈಡ್‌ನಿಂದ ನರಳ ಬೇಕಾಯಿತು. ಗುತ್ತಿಗೆದಾರರು ಈ ಇದು ನ್ಯೂಮೋನಿಯಾ ಕಾಯಿಲೆ ಇದಕ್ಕೆ ನಾವು ಜವಾಬ್ಧಾರರಲ್ಲ ಎಂದು ಹೇಳಿ ನುಣುಚಿಕೊಂಡರು. ನೆವಾಡದ ಅಧಿಕಾರಿಗಳು ರಾಜ್ಯದ ಗಾಳಿಯ ಗುಣಮಟ್ಟದ ಬಗೆಗಿನ ಕಾನೂನುಗಳನ್ನು ಜಾರಿಗೊಳಿಸಲು ಪ್ರಯತ್ನಿಸಿದಾಗ ಗುತ್ತಿಗೆದಾರರು ಅವರನ್ನು ಕೋರ್ಟಿನ ಮೆಟ್ಟಿಲು ಹತ್ತಿಸಿದರು.[೧೨] ಹೂವರ್ ಅಣೆಕಟ್ಟು ಕಟ್ಟುವಾಗ ಅಧಿಕೃತವಾಗಿ ಸತ್ತ ಕೆಲಸಗಾರರು ಕೇವಲ ೯೬.[೧೩] ಕೆಲವು ಕೆಲಸಗಾರರು ಕಾಯಿಲೆಯಾಗಿ "ನ್ಯೂಮೋನಿಯಾ" ಎಂದು ಹೇಳಲಾದ ಕಾಯಿಲೆಯಾಗಿ ಸತ್ತರು.[೧೪] ಅಧಿಕೃತ ಸಾವಿನ ಪಟ್ಟಿಯಲ್ಲಿ ಅನೇಕ ಸಾವಿನ ಲೆಕ್ಕವಾಗಿಲ್ಲ. [ಸೂಕ್ತ ಉಲ್ಲೇಖನ ಬೇಕು]"ಬ್ಯೂರೋ ಆಫ್ ರೆಕ್ಲಮೇಷನ್ ಸಾವಿನ ಅಂಕಿ ಸಂಖ್ಯೆಗಳು ತೋರಿಸುವಂತೆ ಕಟ್ಟಡ ಕಾಮಗಾರಿ ಅವಧಿಯಲ್ಲಿ ಬೇರೆ ಯಾವುದೇ ಕಾರಣಗಳಿಗಿಂತ ಹೆಚ್ಚಾಗಿ ನ್ಯೂಮೋನಿಯಾದಿಂದ ೪೨ ಸಾವುಗಳು ಸಂಭವಿಸಿವೆ."[೧೫] ಜನವರಿ ೧೯೩೬ರಲ್ಲಿ ಆರು ಕಂಪನಿಗಳು ೫೦ ಗ್ಯಾಸ್ ಸೂಟ್ ಕಕ್ಷಿದಾರರು ಜೊತೆಯಲ್ಲಿ ನ್ಯಾಯಾಲಯದ ಹೊರಗಡೆ ಅಘೋಷಿತ ಮೊತ್ತಕ್ಕೆ ಪರಿಹಾರ ಕಂಡುಕೊಂಡವು.[೧೬]
ನಿರ್ಮಾಣ ಚಟುವಟಿಕೆಗಳು
[ಬದಲಾಯಿಸಿ]ನೆಲ ಕಾಮಗಾರಿ
[ಬದಲಾಯಿಸಿ]ಅಣೆಕಟ್ಟಿನ ಕಟ್ಟಡದ ನಿವೇಶನವನ್ನು ಪ್ರವಾಹದಿಂದ ರಕ್ಷಿಸಲು ಎರಡು ಕಾಫರ್ ಅಣೆಕಟ್ಟುಗಳನ್ನು ಕಟ್ಟಲಾಯಿತು. ನದಿಯನ್ನು ಇನ್ನೂ ಬೇರೆಡೆಗೆ ತಿರುಗಿಸದಿದ್ದರೂ, ಮೇಲು ಹಂತದ ಕಾಫರ್ ಅಣೆಕಟ್ಟುನ್ನು ೧೯೩೨ರ ಸೆಪ್ಟೆಂಬರ್‌ನಲ್ಲಿ ಪ್ರಾರಂಭಿಸಲಾಯಿತು. ನದಿಯ ನೆವಾಡ ಅಂಚಿನಲ್ಲಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಕುದುರೆ ಲಾಳದ ಆಕಾರದ ತಡೆಗೋಡೆ ಕಾಫರ್ ಅಣೆಕಟ್ಟನ್ನು ರಕ್ಷಿಸಿತು. ಅರಿಜೋನಾದ ಸುರುಗಗಳನ್ನು ಪೂರ್ಣ ಗೊಳಿಸಿ, ನದಿಯನ್ನು ಬೇರೆಡೆಗೆ ತಿರುಗಿಸಿದ ನಂತರ ಕಾಮಗಾರಿ ಶೀಘ್ರ ಗತಿಯಲ್ಲಿ ಪೂರ್ಣಗೊಂಡಿತು. ಕಾಫರ್ ಅಣೆಕಟ್ಟುಗಳನ್ನು ಸ್ಧಾಪಿಸಿ, ಕಾಮಗಾರಿ ಸ್ಧಳದ ನೀರನ್ನು ತೆರವು ಮಾಡಿದ ನಂತರ ಅಣೆಕಟ್ಟಿನ ತಳಪಾಯಕ್ಕೆ ಅಗೆತ ಶುರುವಾಯಿತು. ಅಣೆಕಟ್ಟು ಕಠಿಣ ಶಿಲೆಯ ಮೇಲೆ ಸ್ಧಿರವಾಗಿ ನಿಲ್ಲುವಂತೆ ಮಾಡಲು ಕಠಿಣ ಶಿಲೆ ಸಿಗುವ ತನಕ ನದಿಯ ಪಾತ್ರದ ಕೊಚ್ಚಣಿ ಮಣ್ಣು ಇತರೆ ಸಡಿಲ ಪದಾರ್ಥಗಳನ್ನು ತೆಗೆದು ಹಾಕುವುದು ಅವಶ್ಯಕವಾಗಿತ್ತು. ತಳಪಾಯದ ಅಗೆತದ ಕೆಲಸ ೧೯೩೩ ಜೂನ್‌ನಲ್ಲಿ ಪೂರ್ಣಗೊಂಡಿತು. ತಳಪಾಯದ ಅಗೆತದ ಅವಧಿಯಲ್ಲಿ ಅಂದಾಜು 1,500,000 cubic yards (1,100,000 m3)ರಷ್ಟು ಪದಾರ್ಥವನ್ನು ತೆಗೆದು ಹಾಕಲಾಯಿತು. ಅಣೆಕಟ್ಟು ಗುರುತ್ವ ಕಮಾನಿನ ರೂಪದಲ್ಲಿ ವಿನ್ಯಾಸವಾಗಿದ್ದರಿಂದ ಕಣಿವೆಯ ಪಕ್ಕದ ಗೋಡೆಗಳು ಜಲಾಶಯದ ನೀರಿನ ಒತ್ತಡವನ್ನು ತಾಳಿಕೊಳ್ಳುವಂತಿದ್ದವು. ಆದ್ದರಿಂದ ಶಿಥಿಲವಾಗಿರದ ಗಟ್ಟಿ ಕಲ್ಲಿನ ತಳ ಸಿಗುವ ತನಕ, ಅನೇಕ ಶತಮಾನಗಳ ಜೌಗು, ಚಳಿಗಾಲದ ಘನೀಕೃತತೆಯಿಂದ ಉಂಟಾದ ಬಿರುಕುಗಳು ಮತ್ತು ಅರಿಜೋನಾ-ನೆವಾಡ ಮರುಭೂಮಿಗಳ ಬಿಸಿಯಾಗುವ/ತಂಪಾಗುವ ವಾಯು ವರ್ತುಲಕ್ಕೆ ಸಿಗದಂತಹ ತಳ ಪದರ ಸಿಗುವ ತನಕ ಪಕ್ಕದ ಗೋಡೆಗಳನ್ನ ಅಗೆಯಲಾಯಿತು.
ನದಿ ತಿರುವು
[ಬದಲಾಯಿಸಿ]ನಿರ್ಮಾಣ ಕಾಮಗಾರಿಯ ಸುತ್ತಲೂ ನದಿಯ ಹರಿವನ್ನು ಬೇರೆಡೆಗೆ ತಿರುಗಿಸಲು, ನೆವಾಡದ ಕಡೆ ಎರಡು ಮತ್ತು ಅರಿಜೋನಾದ ಕಡೆಗೆ ಎರಡು, ಒಟ್ಟು ನಾಲ್ಕು ತಿರುವು ಸುರಂಗಗಳನ್ನು ಕಣಿವೆಯ ಗೋಡೆಗಳಲ್ಲಿ ಕೊರೆಯಲಾಯಿತು. ಈ ಸುರಂಗಗಳು 56 feet (17 m)ವ್ಯಾಸದಲ್ಲಿದ್ದವು ಅವುಗಳ ಒಟ್ಟು ಉದ್ದ ಹೆಚ್ಚು ಕಡಿಮೆ 16,000 ft (4,900 m) ಅಥವಾ 3 mi (4.8 km) ಗಿಂತ ಹೆಚ್ಚು. ನೆವಾಡದ ಸುರಂಗ ಕೆಳ ಹಂತದಲ್ಲಿ ೧೯೩೧ರಲ್ಲಿ ಸುರಂಗ ಕೊರೆತ ಶುರುವಾಯಿತು. ಇದಾದ ಕೊಂಚ ಕಾಲದಲ್ಲಿ ಅರಿಜೋನಾ ಕಣಿವೆಯ ಗೋಡೆಯಲ್ಲಿ ಇದೇ ರೀತಿಯ ಎರಡು ಸುರಂಗಗಳ ಕೊರೆತ ಶುರುವಾಯಿತು. ಮಾರ್ಚ್ ೧೯೩೨ರಲ್ಲಿ ಸುರಂಗಗಳ ಕಾಂಕ್ರೀಟ್ ಮರಳು ಗಾಜಿನ ಕಾಮಗಾರಿ ಆರಂಭವಾಯಿತು. ಮೊದಲಿಗೆ ತಳಪಾಯಕ್ಕೆ ಕಾಂಕ್ರೀಟ್ ಸುರಿಯಲಾಯಿತು. ಕಾಂಕ್ರೀಟ್ ಸುರಿಯಲು ಪ್ರತಿ ಸುರಂಗದ ಉದ್ದಕ್ಕೂ ಹಳಿಗಳ ಮೇಲೆ ಚಲಿಸುವ ಗ್ಯಾಂಟ್ರಿ ಕ್ರೇನುಗಳನ್ನು ಬಳಸಲಾಯಿತು. ನಂತರ ಪಕ್ಕದ ಗೋಡೆಗಳಿಗೆ ಕಾಂಕ್ರೀಟ್ ಸುರಿಯಲಾಯಿತು. ಚಲಿಸುವಂತಹ ಸ್ಟೀಲ್ ಬಗೆಯ ವಿಭಾಗಳನ್ನು ಸೈಡ್‌ವಾಲ್‌ಗಳಲ್ಲಿ ಬಳಸಲಾಗುತ್ತದೆ. ಅಂತಿಮವಾಗಿ ನ್ಯೂಮ್ಯಾಟಿಕ್ ಗನ್‌ಗಳನ್ನು ಬಳಸಿ ಸುರಂಗದ ಚಾವಣಿಗಳಿಗೆ ಕಾಂಕ್ರೀಟ್ ಸುರಿಯಲಾಯಿತು. ಕಾಂಕ್ರೀಟಿನ ಮೇಲು ಹೊದಿಕೆ 3 ft (0.91 m) ಮಂದವಾಗಿದ್ದು ಸುರಂಗದ ವ್ಯಾಸವನ್ನು 50 ft (15 m) ನಷ್ಟು ತಗ್ಗಿಸಿತು. ಅಣೆಕಟ್ಟಿನ ಕಾಮಗಾರಿ ಪೂರ್ಣಗೊಂಡ ನಂತರ ಎರಡು ಹೊರಮುಖ ಸುರಂಗಗಳ ಪ್ರವೇಶ ದ್ವಾರವನ್ನು ಮುಚ್ಚಲಾಯಿತು. ಮತ್ತು ಸುರಂಗಗಳ ಅರ್ಥಭಾಗದಲ್ಲಿ ಕಾಂಕ್ರೀಟಿನ ಕೊಂಡುಗಳನ್ನು ಜಡಿಯಲಾಯಿತು. ಕಾಂಕ್ರೀಟಿನ ಕೊಂಡುಗಳನ್ನು ಜಡಿದ ಕೆಳಹರಿವಿನ ಅರ್ಥ ಸುರಂಗಗಳು ಈಗ ಅಣೆಕಟ್ಟಿನ ಕೊಂಡಿಯಂತೆ ಕೆಲಸ ಮಾಡುತ್ತಿವೆ.
ಕಲ್ಲಿನ ತೆರವು
[ಬದಲಾಯಿಸಿ]ಪ್ರತಿ ಕಮಾನು ಗೋಡೆಗಳಿಗೆ ಎರಡು ಲಂಬಮುಖಿ ತಳಪಾಯಗಳನ್ನ ( ವಾಡದ ಕಡೆಗೆ ಮತ್ತು ಅರಿಜೋನಾದ ಕಡೆಗೆ ) ಕಠಿಣ ಶಿಲೆಗಳ ಮೇಲೆ ಸ್ಧಾಪಿಸಬೇಕಾಗಿತ್ತು; ಸಾವಿರಾರು ವರ್ಷಗಳಿಂದ ಬಿಸಿಲು ಚಳಿ,ಮಳೆಗೆ ತೆರೆದು ಕೊಂಡು ಶಿಥಿಲವಾಗಿದ್ದ ಕಣಿವೆಯ ಗೋಡೆಗಳ ಮೇಲು ಮೈಯನ್ನು, ಅದರ ಬಿರುಕುಗಳನ್ನು ಕೆತ್ತ ಬೇಕಿತ್ತು. ಈ ಕಲ್ಲಿನ ಬಿರುಕು ಪದರಗಳನ್ನು ತೆಗೆದು ಹಾಕಿದವರನ್ನು ಹೈ-ಸ್ಕೇಲರ್ಸ್ ಎಂದು ಕರೆಯಲಾಗುತ್ತಿತ್ತು. ಕಣಿವೆಯ ಮೇಲ್ತುದಿಯಿಂದ ಇಳಿ ಬಿಟ್ಟ ಹಗ್ಗಗಳಲ್ಲಿ ನೇತಾಡುತ್ತಾ ಈ ಹೈಸ್ಕೇಲರ್ಸ್ ಕಣೆವೆಯ ಗೋಡೆಗಳುದ್ದಕ್ಕೂ ಇಳಿಯುತ್ತಾ ಜಾಕ್ ಹ್ಯಾಮರ್‌ಗಳು ಮತ್ತು ಡೈನಾಮೈಟುಗಳನ್ನು ಬಳಸಿ ಸಡಿಲ ಕಲ್ಲುಗಳನ್ನು ತೆಗೆದು ಹಾಕಿದರು.
ಕಾಂಕ್ರೀಟ್
[ಬದಲಾಯಿಸಿ]೬ ಜೂನ್ ೧೯೩೩ರಂದು ಅಣೆಕಟ್ಟಿಗೆ ಮೊದಲ ಕಾಂಕ್ರೀಟನ್ನು ಸುರಿಯಲಾಯಿತು. ಈವರೆಗೆ ಹೂವರ್ ಅಣೆಕಟ್ಟೆಯಷ್ಟು ದೊಡ್ಡ ಗಾತ್ರದ ಕಟ್ಟಡವನ್ನು ಕಟ್ಟಿರಲಿಲ್ಲವಾಗಿ, ಈ ಅಣೆಕಟ್ಟು ಕಾಮಗಾರಿಯಲ್ಲಿ ಬಳಸಿದ ವಿಧಾನಗಳಿಲ್ಲ ಈ ಹಿಂದೆ ಪ್ರಯತ್ನ ಪಟ್ಟಿರದ ವಿಧಾನಗಳು. ಕಾಂಕ್ರೀಟ್ ಬದಿಗೆ ಬರುತ್ತಿದ್ದಂತೆ ಸಂಕುಚಿತಗೊಳ್ಳುವುದರಿಂದ ಮತ್ತು ಬಿಸಿಯಾಗುವುದರಿಂದ ಕಾಂಕ್ರೀಟಿನ ಅಸಮವಾದ ಸಂಕುಚಿತತೆ ಮತ್ತು ಅಸಮ ತಂಪಾಗುವಿಕೆ ಗಂಭೀರ ಸಮಸ್ಯೆಗಳನ್ನು ಒಡಿತು. ಬ್ಯೂರೋ ಆಫ್ ರಿಕ್ಲಮೇಷನ್‌ನ ಎಂಜಿನಿಯರುಗಳು, ಕಾಂಕ್ರೀಟಿನ ನಿರಂತರ ಒಂದೇ ಒಳ ಸುರಿಯಲ್ಲಿ ಕಟ್ಟಿದರೂ ಅದು ವಾತಾವರಣದ ಸಹಜ ಉಷ್ಣಾಂಶದ ಮಟ್ಟಕ್ಕೆ ಬರಲು ೧೨೫ ವರ್ಷಗಳನ್ನು ತೆಗೆದುಕೊಳ್ಳತ್ತದೆಂದು ಲೆಕ್ಕ ಹಾಕಿದರು ಇದರಿಂದ ಉಂಟಾಗುವ ಒತ್ತಡದಿಂದ ಅಣೆಕಟ್ಟು ಬಿರುಕು ಬಿಟ್ಟು ಕುಸಿದು ಬೀಳುವ ಸಂಭವವಿತ್ತು.[೧೭] ಈ ಸಮಸ್ಯೆಯನ್ನು ಪರಿಹರಿಸಲು ಅಣೆಕಟ್ಟನ್ನು ಅನೇಕ ಸರಣಿಗಳಲ್ಲಿ ಒಳ ಅಗುಣಿ ಹಾಕಿಕೊಳ್ಳುವಂತೆ ಕಾಂಕ್ರೀಟ್ ಸುರಿತದಿಂದ ನಿರ್ಮಿಸಲಾಯಿತು. ಕಾಂಕ್ರೀಟನ್ನು ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ತಂಪು ಮಾಡಲು ಪ್ರತಿ ರಚನೆಯಲ್ಲಿ ೧ ಅಂಗುಲ (೨೫ ಮಿ.ಮಿ) ದಷ್ಟು ತೆಳುವಾದ ಉಕ್ಕಿನ ನಳಿಕೆಗಳ ಸುರುಳಿಗಳನ್ನು ಅಳವಡಿಸಲಾಯಿತು. ಬನಿ ಬರುತ್ತಿರುವ ಕಾಂಕ್ರೀಟಿನಿಂದ ಉಷ್ಣವನ್ನು ಹೀರಿಕೊಳ್ಳುವಂತೆ ಈ ನಳಿಕೆಗಳ ಮೂಲಕ ನದಿಯ ನೀರನ್ನು ಹರಿಸಲಾಯಿತು. ಕಾಂಕ್ರೀಟನ್ನು ಮತ್ತಷ್ಟು ತಂಪು ಮಾಡಲು ಕೆಳ ಹಂತದ ಕಾಫರ್ ಅಣೆಕಟ್ಟಿನ ಶೀತಲ ಸ್ಧಾವರದಿಂದ ತಂಪಗೆ ಕೊರೆಯುತ್ತಿದ್ದ ನೀರನ್ನು ಈ ನಳಿಕೆಗಳ ಸುರುಳಿಗಳ ಮೂಲಕ ಹರಿಸಲಾಯಿತು. ಪ್ರತಿ ಪದರವೂ ಸಾಕಷ್ಟು ತಂಪಾದ ನಂತರ ತಂಪು ಮಾಡುವ ನಳಿಕೆಗಳನ್ನು ಕತ್ತರಿಸಿ ನ್ಯೂಮ್ಯಾಟಿಕ್ ಗ್ರೌಟ್ ಗನ್‌ಗಳ ಮೂಲಕ ಅವುಗಳನ್ನು ಮುಚ್ಚಲಾಯಿತು.[೧೮] ಅಣೆಕಟ್ಟಿನಲ್ಲಿ ವಿನ್ಯಾಸ ಮತ್ತು ಕಾಮಗಾರಿಯ ಉಸ್ತುವಾರಿ ಹೊತ್ತಿದ್ದ ಜಾನ್ ಎಲ್ ಸ್ಯಾವೇಜ್‌ಗೆ ಕಾಂಕ್ರೀಟನ್ನು ತಂಪು ಮಾಡುವ ವಿಧಾನ ರೂಪಿಸುವ ಜವಾಬ್ಧಾರಿ ಕೂಡ ಇತ್ತು.[೧೯] ಈ ಅಣೆಕಟ್ಟಿನಲ್ಲಿ ಎಷ್ಟು ಪ್ರಮಾಣದ ಕಾಂಕ್ರೀಟ್ ಇದೆಯೆಂದರೆ ಈ ಕಾಂಕ್ರೀಟನ್ನು ಬಳಸಿ ಸ್ಯಾನ್ ಫ್ರಾನ್ಸಿಸ್ಕೋನಿಂದ ನ್ಯೂಯಾರ್ಕ್ ತನಕ ಎರಡು ಲೇನುಗಳ ಹೆದ್ದಾರಿ ನಿರ್ಮಾಣ ಮಾಡಬಹುದು.[೨೦]
ವಾಸ್ತು ಶೈಲಿಗಳು
[ಬದಲಾಯಿಸಿ]ಅಣೆಕಟ್ಟು ಮತ್ತು ವಿದ್ಯುತ್ ಸ್ಧಾವರದ ಪೂರ್ಣ ಗೊಂಡ ರಚನೆಗೆ ಇದ್ದ ಮೂಲ ವಿನ್ಯಾಸ ಎಂದರೆ ಗಾಥಿಕ್ ಶೈಲಿಯಿಂದ ಸ್ಪೂರ್ತಿ ಪಡೆದ ಕಲ್ಲು ಉಪ್ಪರಿಗೆ ಮತ್ತು ಸಿಂಗಾರವಿಲ್ಲದ ಸರಳವಾದ ಕಾಂಕ್ರೀಟ್ ಗೋಡೆ ಮತ್ತು ಕೈಗಾರಿಕಾ ಗೋದಾಮಿನಂತೆ ಕಾಣುವ ವಿದ್ಯುತ್ ಸ್ಧಾವರ.[ಸೂಕ್ತ ಉಲ್ಲೇಖನ ಬೇಕು] ಇಷ್ಟೊಂದು ಅಗಾಧ ಪ್ರಮಾಣದ ಕಾಮಗಾರಿಗೆ ಇದು ತಕ್ಕದಲ್ಲದ ವಿನ್ಯಾಸ ಎಂದು ಹಲವಾರು ಟೀಕಿಸಿದರು, ಹೀಗಾಗಿ, ಆಗ್ಗೆ ಡೆನ್ಪೆರ್‌ನಲ್ಲಿ ಫೆಡರಲ್ ಬ್ಯೂರೋ ಆಫ್ ರಿಕ್ಲಮೇಷನ್‌ನ ಪ್ರಧಾನ ಕಚೇರಿಯಲ್ಲಿ ಉಸ್ತುವಾರಿ ವಾಸ್ತು ಶಿಲ್ಪಿಯಾಗಿದ್ದ ಲಾಸ್ ಏಂಜೆಲೀಸ್-ಮೂಲದ ವಾಸ್ತು ಶಿಲ್ಪಿ ಗೊರ್ಡಾನ್.ಬಿ ಕಾಫ್‌ಮನ್‌ನನ್ನು ಕಟ್ಟಡದ ಹೊರಾಂಗಣ ಮರು ವಿನ್ಯಾಸಕ್ಕಾಗಿ ಕರೆಸಿಕೊಳ್ಳಲಾಯಿತು.[ಸೂಕ್ತ ಉಲ್ಲೇಖನ ಬೇಕು] ಕಾಫ್‌ಮನ್ ಅಣೆಕಟ್ಟೆಯ ಕಟ್ಟಡಗಳನ್ನು ಸೊಗಸಾದ ಸಿಂಗಾರ ಕಲಾಶೈಲಿಯ ಮೂಲಕ ಅನುಕ್ರಮಗೊಳಿಸಿದ. ಅಣೆಕಟ್ಟೆಯ ಮುಂಭಾಗದ ಕಟ್ಟಡದಲ್ಲಿ ಕೆತ್ತನೆಯ ಕುಸುರಿಗೆಲಸದ ಗೋಪುರಗಳು, ಪ್ರಮೇಶದ್ವಾರದ ಗೋಪುರಗಳಲ್ಲಿ ನೆವಾಡ ಮತ್ತು ಅರಿಜೋನಾದ ವೇಳೆಯನ್ನು ತೋರಿಸುವ ಗಡಿಯಾರಗಳು, ಪೆಸಿಫಿಕ್ ಸ್ಟ್ಯಾಂಡರ್ಡ್ ಟೈಮ್‌ಜೋನ್ ಅಥವಾ ಡೇಲೈಟ್ ಟೈಮ್‌ಜೋನ್ ಮತ್ತು ಮೌಂಟನ್ ಸ್ಟ್ಯಾಂಡರ್ಡ್ ಟೈಮ್‌ಜೋನ್ ಸೂಚಕ ಗಡಿಯಾರಗಳನ್ನು ಅನುಕ್ರಮವಾಗಿ ಜೋಡಿಸಿದ (ಯಾಕೆಂದರೆ ಅರಿಜೋನಾ ಡೇಲೈಟ್ ಸೇವಿಂಗ್ ಜೋನ್‌ಅನ್ನು ವೀಕ್ಷಿಸುವುದಿಲ್ಲ, ಉತ್ತರದ ಬೇಸಿಗೆಯಲ್ಲಿ ಅರ್ಧ ವರ್ಷದ ಕಾಲ ಎರಡೂ ಗಡಿಯಾರಗಳು ಒಂದೇ ವೇಳೆಯನ್ನು ತೋರಿಸುತ್ತವೆ.)
ಕಾಫ್‌ಮನ್‌ನ ಸಲಹೆಯ ಮೇರೆಗೆ ಹೊಸ ಅಣೆಕಟ್ಟಿನ ಗೋಡೆ ಮತ್ತು ನೆಲದ ಸಿಂಗಾರವನ್ನು ವಿನ್ಯಾಸ ಮಾಡಲು ಡೆನ್ಪೆರ್‌ನ ಕಲಾವಿದ ಆಲೆನ್ ಟಪ್ಪರ್ ಟ್ರೂನನ್ನು[೨೨] ಕರೆಸಿಕೊಂಡು ಆತನಿಗೆ ಆ ಜವಾಬ್ಧಾರಿ ವಹಿಸಿ ಕೊಡಲಾಯಿತು. ಟ್ರೂ ಆ ಪ್ರಾಂತದ ಇಂಡಿಯನ್ ಬುಡಕಟ್ಟು ಜನಾಂಗಗಳಾದ ನವಾಜೊ ಮತ್ತು ಪುಯೆಬ್ಲೊ ಸಂಸ್ಕೃತಿಗಳ ಚಿತ್ರಿಕೆಗಳನ್ನು ವಿನ್ಯಾಸಕ್ಕೆ ಬಳಸಿಕೊಳ್ಳ ತೊಡಗಿದ.[೨೩] ಈ ವಿನ್ಯಾಸವನ್ನು ಪ್ರಾರಂಭದಲ್ಲಿ ಕೆಲವರು ವಿರೋಧಿಸಿದರಾದರೂ ಟ್ರೂಗೆ ಮುಂದುವರೆಯುವಂತೆ ಸೂಚಿಸಿ ಆತನನ್ನು ಸಲಹೆಗಾರ ಕಲಾವಿದನನ್ನಾಗಿ ಅಧಿಕೃತವಾಗಿ ನೇಮಕ ಮಾಡಿಕೊಳ್ಳಲಾಯಿತು.[೨೪] ರಾಷ್ಟ್ರೀಯ ಮಾನವಿಕ ಲ್ಯಾಬೋರೇಟರಿಯ ನೆರವಿನೊಂದಿಗೆ ಟ್ರೂ ಇಂಡಿಯನ್ ಮರಳು ಚಿತ್ರಗಾರಿಕೆ, ಹೆಣಿಗೆ, ಬುಟ್ಟಿಗಳು ಮತ್ತು ಸೆರಮಿಕ್ ಕಲೆಗಳ ಸಿಂಗಾರ ಚಿತ್ರಿಕೆಗಳ ವಿಶ್ವಾಸಾರ್ಹತೆಯ ಬಗ್ಗೆ ಸಂಶೋಧನೆ ಕೈ ಗೊಂಡ.[೨೫] ಈ ಕಲ್ಪನೆಗಳು ಮತ್ತು ಬಣ್ಣಗಳು ಆಮೇರಿಕಾದ ಮೂಲನಿವಾಸಿ ಸಂಸ್ಕೃತಿಗಳು, ಮಳೆ, ಮಿಂಚು, ನೀರು, ಮೋಡಗಳು,ಸ್ಧಳೀಯ ಪ್ರಾಣಿಗಳು, ಹಲ್ಲಿ, ಹಾವು, ಪಕ್ಷಿಗಳು ಮತ್ತು ಅಗ್ನೇಯದ ಮೆಸಾಸ್‌ನ ಭೂವಿನ್ಯಾಸ ಕುರಿತ ಮೂಲನಿವಾಸಿ ದರ್ಶನಗಳ ನೆಲಗಟ್ಟು ಹೊಂದಿದ್ದವು.[೨೩] ನಡಿಗೆಯ ಹಾದಿ ಮತ್ತು ಬೃಹತ್ ಅಣೆಕಟ್ಟಿನ ಆಂತರಿಕ ಗೋಡೆಗಳ ಜೊತೆಗೆ ಜೋಡಿಸಲಾದ ಈ ಕಲಾಕೃತಿಗಳ ಜೊತೆಗೆ ಕಲಾವಿದ ಟ್ರೂ ಸಾಂಕೇತಿಕ ರಚನೆಗಳ ಮೂಲಕ ಯಂತ್ರಗಳ ಕಾರ್ಯಶೀಲತೆಯನ್ನು ಕೂಡ ಪ್ರತಿಫಲಿಸಿದ; ಒಟ್ಟಿಗೇ ಇದು ಪುರಾತನವಾಗಿ ಮತ್ತು ಆಧುನಿಕವಾಗಿ ಕಾಣಿಸುತ್ತಿತ್ತು.[೨೬] ಟೊರಾಜೊ ನೆಲಹಾಸಿನ ಮೇಲೆ ಚಿತ್ರಿತವಾಗಿದ್ದ ಈ ಆಮೇರಿಕನ್ ಭಾರತೀಯ ಸಂಸ್ಕೃತಿಗಳ ಚಿತ್ರಿಕೆಗಳು ಆಗಾಧ ಗಾತ್ರದ ಟರ್ಬೈವಿನ ಜೋಡಿ ಚಕ್ರಗಳಂತೆ ಕಾಣಿಸುತ್ತವೆ; ಆದರೂ ಅವು ಮೂಲದಲ್ಲಿ ತಮ್ಮ ಆಮೇರಿಕದ ಇಂಡಿಯನ್ ಮೂಲ ನಿವಾಸಿ ಸಂಸ್ಕೃತಿಗಳ ವಿಶಿಷ್ಟತೆಗಳನ್ನು ಉಳಿಸಿಕೊಂಡಿದೆ.[೨೨] ಆಮೇರಿಕನ್ ಇಂಡಿಯನ್ ಮೂಲ ನಿವಾಸಿ ಸಂಸ್ಕೃತಿಯ ಆಕಾರ ಮತ್ತು ವಿನ್ಯಾಸಗಳಲ್ಲಿ ಕಲಾವಿದ ಟ್ರೂಗೆ ಪುರಾತನ ಗ್ರೀಕರು ಮತ್ತು ರೋಮನ್ನರ ಕಲಾಕೃತಿಗಳ ಸಾಮ್ಯತೆ ಕಂಡಿದೆ. ಕಲಾವಿದ ಟ್ರೂನ ವಿನ್ಯಾಸಗಳು ಕಾಫ್ ಮನ್ನನ ಸ್ಮಾರಕ ವಾಸ್ತುಶಿಲ್ಪದ ಒಡನಾಡಿಯಂತಾಗಿ ಇವು ಆಮೇರಿಕದ ಆಧುನಿಕ ದೇವಾಲಯವನ್ನ ಸೃಷ್ಟಿಸಿದವು ಅಂತಾ ಹೇಳಬಹುದು.[೨೭] ವಾಸ್ತುಶಿಲ್ಪಿ ಕಾಫ್ ಮನ್ ಮತ್ತು ಇಂಜಿನಿಯರುಗಳ ನಡುವಿನ ಒಪ್ಪಂದದ ಮೇರೆಗೆ ಕಲಾವಿದ ಟ್ರೂ ಪೈಪುಗಳು ಮತ್ತು ಯಂತ್ರಗಳಿಗೆ ವಿಶಿಷ್ಠ. ಹೊಸತನದ ವರ್ಣ ಸಂಕೇತಗಳನ್ನು ರೂಪಿಸಿದ; ಇದನ್ನು ಬ್ಯೂರೋ ಆಫ್ ರಿಕ್ಲಮೇಷನ್‌ನ ಎಲ್ಲ ಯೋಜನೆಗಳಲ್ಲಿ ಜಾರಿಗೆ ತರಲಾಯಿತು.[೨೮] ಕಲಾವಿದ ಟ್ರೂನ ಸಲಹೆಗಾರ ಕಲಾವಿದ ಕೆಲಸ ೧೯೪೨ರ ತನಕ ಮುಂದುವರೆದು ಅವನು ಪಾರ್ಕರ್, ಶಾಸ್ತಾ ಮತ್ತು ಗ್ಯ್ರಾಂಡ್ ಕೌಲೀ ಅಣೆಕಟ್ಟುಗಖ್ಳು ಮತ್ತು ವಿದ್ಯುತ್ ಸ್ಧಾವರಗಳಿಗೆ ಕೂಡ ವಿನ್ಯಾಸದ ಕೆಲಸ ಪೂರ್ಣಮಾಡಿದ. ಈ ಕಾಲದಲ್ಲಿ ನ್ಯೂಯಾರ್ಕರ್ ಮ್ಯಾಗಜಿನ್‌ನಲ್ಲಿ ಪ್ರಕಟವಾದ ಪದ್ಯವೊಂದರಲ್ಲಿ ಬೌಲ್ಡರ್ ಅಣೆಕಟ್ಟಿನಲ್ಲಿ ಕಲಾವಿದ ಟ್ರೂನ ಕಲಾಕೃತಿಗಳ ಬಗ್ಗೆ ತಮಾಷೆ ಮಾಡಿತ್ತು; ಅದರ ಒಂದು ಭಾಗ ಹೀಗಿತ್ತು; " ಕಿಡಿಯನ್ನು ಕಳೆದು ಕೊಂಡರೂ ಕನಸನ್ನು ಸಮರ್ಥಿಸುಕೋ; ಆದರೆ ಗುರುತಿಸಬಹುದಾದ ಮೌಲ್ಯವೆಂದರೆ ಅದರಲ್ಲಿನ ವರ್ಣ ವಿನ್ಯಾಸ. . .”[೨೯]
ಕಾಮಗಾರಿ ಸಾವುಗಳು
[ಬದಲಾಯಿಸಿ]ಅಣೆಕಟ್ಟಿನ ನಿರ್ಮಾಣಕ್ಕೆ ಸಂಬಂಧಿಸಿದಂತೆ ೧೧೨ ಜನರ ಸಾವು ಸಂಭವಿಸಿತು.[೩೦][೩೧] ಅಣೆಕಟ್ಟಿನ ಕಾಮಗಾರಿ ನಡೆಯುವಾಗ ಎಷ್ಟು ಜನ ಸತ್ತರು, ಸತ್ತವರ ಪೈಕಿ ಮೊದಲಿಗರಾರು ಮತ್ತು ಕೊನೆಯವರ್ಯಾರು ಎಂಬ ಬಗ್ಗೆ ಬೇರೆ ಬೇರೆ ಲೆಕ್ಕಾಚಾರಗಳಿವೆ. ಜನಪ್ರಿಯವಾಗಿರುವ ಒಂದು ಕತೆಯ ಪ್ರಕಾರ ಹೂವರ್ ಅಣೆಕಟ್ಟಿನ ನಿರ್ಮಾಣ ಕಾರ್ಯದಲ್ಲಿ ಸತ್ತ ಮೊದಲನೆಯ ಮನುಷ್ಯ, ಅಣೆಕಟ್ಟಿಗಾಗಿ ಜೆ.ಜಿ ಟೈಯೆರ್ನಿ ನೀರಿನಲ್ಲಿ ಮುಳುಗಿ ಹೋದ. ಕಾಕತಾಳೀಯವೆಂದರೆ ಅಣೆಕಟ್ಟು ನಿರ್ಮಾಣವಾಗುತ್ತಿದ್ದಾಗ ೧೩ ವರ್ಷಗಳ ನಂತರ ಸತ್ತ ಕೊನೆಯ ಮನುಷ್ಯ, ಅವನ ಮಗ ಪ್ಯಾಟ್ರಿಕ್ w ಟೈಯೆರ್ನಿ.[೩೦][೩೧] ಸಾವುಗಳ ಪೈಕಿ ೯೬ ಸಾವುಗಳು ನಿವೇಶನದಲ್ಲಿ ನಿರ್ಮಾಣ ಕಾರ್ಯ ನಡೆಯುತ್ತಿದ್ದಾಗ ಸಂಭವಿಸಿದವು. ಏನೇ ಆದರೂ ಅಣೆಕಟ್ಟಿಗಾಗಿ ಪ್ರಚ್ಛನ್ನ ನಿವೇಶನವನ್ನು ಯೋಚನೆ ಮಾಡುತ್ತಿದ್ದಾಗ ನಿರ್ಮಾಣಕ್ಕೆ ಮೊದಲು ಇನ್ನೊಬ್ಬ ಮೋಜಿಣಿದಾರ ಸತ್ತ; ಈ ಅಂಕಿ ಅಂಶಗಳು ನಿರ್ಮಾಣ ಅವಧಿಯ ಇತರೆ ಆಕಸ್ಮಿಕ ಮತ್ತು ಕಾಕತಾಳೀಯ ( ಹೃದಯಾಘಾತ, ಹೃದಯ ಸ್ಧಬ್ಧ ಇತ್ಯಾದಿ) ಸಾವುಗಳನ್ನ ಒಳಗೊಳ್ಳುವುದಿಲ್ಲ.[೩೦]
ನಿರ್ಮಾಣ ಕಾಮಗಾರಿಯ ಚಾರಿತ್ರಿಕ ಸಾಧನ ಸಲಕರಣೆಗಳು
[ಬದಲಾಯಿಸಿ]ಆರು ಕಂಪನಿಗಳು ನಿರ್ಮಾಣ ಕಾಮಗಾರಿಗೆ ಸ್ಧಿರವಾಗಲು, ರೈಲು ಹಳಿಗಳ ಮೇಲೆ ಚಲಿಸುವಂತ ವಿಶೇಷ ಸರಕು ಸಾಗಣೆ ವಾಹನಗಳನ್ನ ರಚಿಸಿ ಕೊಂಡಿದ್ದವು. ಇವುಗಳ ಪೈಕಿ ಒಂದು ಸರಕುವಾಹನ ಕ್ಯಾಲಿಪೋರ್ನಿಯಾದ ಪೊರ್ಟೊಲಾದ ವೆಸ್ಟರ್ನ್ ಪೆಸಿಫಿಕ್ ರೈಲು ರೋಡ್ ಮ್ಯೂಸಿಯಂನಲ್ಲಿ ಇಂದಿಗೂ ಉಳಿದಿದೆ. ಅಣೆಕಟ್ಟಿನ ನಿಮಾರ್ಣ ಕಾಮಗಾರಿ ಮುಗಿದ ನಂತರ ವೆಸ್ಟರ್ನ್ ಪೆಸಿಫಿಕ್ ರೈಲ್ ರೋಡ್ ಇಂತಹ ಅನೇಕ ವಾಹನಗಳನ್ನ ತನ್ನ ವಶಕ್ಕೆ ತೆಗೆದುಕೊಂಡು ಕಂಪನಿಯ ಸೇವೆಗೆ ಬಳಸಿಕೊಂಡಿತು.
ಶಸ್ತ್ರಚಿಕಿತ್ಸೆ
[ಬದಲಾಯಿಸಿ]ವಿದ್ಯುತ್ ಸ್ಥಾವರ
[ಬದಲಾಯಿಸಿ]ಲೇಕ್ ಮೀಡ್‌ನಿಂದ ಕ್ರಮೇಣ ಸಂಕುಚಿತಗೊಳ್ಳುತ್ತಾ ಹೋಗುವ ಪೆನ್ ಸ್ಟಾಕ್‌ಗಳಿಂದ ವಿದ್ಯುತ್ ಸ್ಧಾವರಕ್ಕೆ ಹರಿಯುವ ನೀರಿನ ವೇಗ ಟರ್ಬೈನ್ ತಲುಪುವ ವೇಳೆಗೆ 85 mph (137 km/h)ರಷ್ಟಾಗುತ್ತದೆ. ಕೊಲೊರೆಡೊ ನದಿಯ ನೀರಿನ ಪೂರ್ಣ ಹರಿವು ಟರ್ಬೈನ್‌ಗಳ ಮೂಲಕ ಹಾದು ಹೋಗುತ್ತದೆ. ( ಅದು ಸ್ಧಾಪಿತವಾಗಿರುವ ಅಣೆಕಟ್ಟೆಯ , ಅಂಚುಗಳ ಅರೆ ರಂಧ್ರಮಯ ಜ್ವಾಲಾ ಮುಖಿ ಶಿಲೆಗಳಲ್ಲಿನ ಜಿನುಗುವಿಕೆಯನ್ನು ಹೊರತು ಪಡಿಸಿ) ಕೋಡಿಗಳ ಬಳಕೆ ಅಪರೂಪ ೧೯೮೬ ರಿಂದ ೧೯೯೩ರ ತನಕ ಯೋಜನೆಯ ಉತ್ಪಾದನ ಶೀಲತೆಯ ದರ ನಿಗದಿ ನಂತರ ಸ್ಧಾವರದ ಕೆಲಸ ಕಾರ್ಯಗಳಿಗೆ ಒದಗಿಸಲಾಗುವ ೨.೪ ಮೆಗಾವ್ಯಾಟ್[ಸೂಕ್ತ ಉಲ್ಲೇಖನ ಬೇಕು] ವಿದ್ಯುತ್ ಸೇರಿದಂತೆ ಒಟ್ಟು ವಿದ್ಯುತ್ ಉತ್ಪಾದನೆ ಪ್ರಮಾಣ ಸುಮಾರು ೨೦೮೦ ಮೆಗಾವ್ಯಾಟ್‌ಗಳು.[೩೨] ವಿದ್ಯುತ್ ಸ್ಧಾವರಕ್ಕಾಗಿ ನಡೆದ ಅಗೆತ ಅಣೆಕಟ್ಟಿಗಾಗಿ ನಡೆದ ಅಗೆತದೊಂದಿಗೆ ಏಕಕಾಲಕ್ಕೆ ನಡೆಯಿತು. ಅಣೆಕಟ್ಟಿನ ಕೆಳಹರಿವಿನ ತುದಿಯಲ್ಲಿರುವ U ಆಕಾರದ ಕಟ್ಟಡದ ತಳಪಾಯದ ಅಗೆತ ಕಾಮಗಾರಿ ೧೯೩೩ ರ ಕೊನೆ ಭಾಗದಲ್ಲಿ ಮುಗಿದ ನವೆಂಬರ್ ೧೯೩೩ರಲ್ಲಿ ಮೊದಲನೆ ಕಾಂಕ್ರೀಟ್ ರಚನೆಯನ್ನು ಸ್ಧಾಪಿಸಲಾಯಿತು. ಹೂವರ್ ಜಲವಿದ್ಯುತ್ ಸ್ಧಾವರದ ಜನರೇಟರ್‌ಗಲು ಕೊಲೊರೆಡೊ ನದಿಯಿಂದ ಲಾಸ್ ಏಂಜಲೀಸ್‌ಗೆ ೨೬೬ ಮೈಲಿಗಳಷ್ಟು (೪೨೮ ಕಿ.ಮೀ) ದೂರದ ತನಕ ೨೬ ಅಕ್ಬೋಬರ್ ೧೯೩೬ರಿಂದ ವಿದ್ಯುತ್ ಪ್ರಸರಣವನ್ನು ಶುರು ಮಾಡಿಕೊಂಡಿತು. ೧೯೬೧ರ ತನಕ ಹೆಚ್ಚುವರಿ ವಿದ್ಯುತ್‌ಜನಕ ಘಟಕಗಳನ್ನು ಸೇರಿಸಲಾಯಿತು. ಮೂಲ ಯೋಜನೆ ನದಿಯ ಪ್ರತಿ ಅಂಚೆನಲ್ಲಿ ತಲಾ ೮ ರಂತೆ ಒಟ್ಟು ೧೬ ದೊಡ್ಡ ವಿದ್ಯುತ್‌ಜನಕಗಳನ್ನು ಅಳವಡಿಸುವಂತೆ ರೂಪುಗೊಂಡಿತ್ತು, ಆದರೆ ಅಳವಡಿಸಿದ ಒಟ್ಟು ೧೭ ವಿದ್ಯುತ್‌ಜನಕಗಳ ಪೈಕಿ ಅರಿಜೋನಾ ಕಡೆಗೆ ಒಂದು ದೊಡ್ಡ ವಿದ್ಯುತ್‌ಜನಕದ ಬದಲು ಎರಡು ಕಿರಿಯ ವಿದ್ಯುತ್‌ಜನಕಗಳನ್ನ ಅಳವಡಿಸಲಾಯಿತು. ಪ್ರತಿ ವಿದ್ಯುತ್‌ಜನಕದ ಉತ್ಪಾದನೆಯನ್ನ ಪುರಸಭೆಗಳಿಗೆ ಅರ್ಪಿಸಲಾಗಿದ್ದ ಕಾಲದಲ್ಲಿ ಚಿಕ್ಕ ವಿದ್ಯುತ್‌ಜನಕಗಳ ಉತ್ಪಾದನೆಯನ್ನ ಚಿಕ್ಕ ಪುರಸಭೆಗಳ ಸೇವೆಗಾಗಿ ಬಳಸಿಕೊಳ್ಳಲಾಯಿತು; ಇದು ಆದದ್ದು ಅಣೆಕಟ್ಟೆಯ ಒಟ್ಟು ವಿದ್ಯುತ್ ಉತ್ಪಾದನೆಯನ್ನ ಗ್ರಿಡ್‌ಗೆ ವರ್ಗಾಯಿಸಿ ಹಂಚಿಕೆಗೆ ಸಿದ್ಧಪಡಿಸುವ ಮೊದಲು. ಜಲವಿದ್ಯುತ್ ಸ್ಧಾವರಗಳು ವಿದ್ಯುತ್ತಿನ ಬೇಡಿಕೆಯ ಆಧಾರದ ಮೇಲೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳುವ ಅಥವಾ ಕಡಿಮೆ ಮಾಡಿಕೊಳ್ಳುವ ಸಾಮರ್ಥ್ಯ ಹೊಂದಿವೆ. ಉಗಿ ಚಾಲಿತ ಟರ್ಬೈನಿನ ವಿದ್ಯುತ್ ಸ್ಧಾವರಗಳ ಉತ್ಪಾದನೆಯನ್ನು ಹೆಚ್ಚು ಕಡಿಮೆ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಅವುಗಳ ವ್ಯವಸ್ಧೆಯಲ್ಲಿ ಹುದುಗಿರುವ ಉಷ್ಣ ಚಲನ ಶೀಲತೆಯ ತಟಸ್ತತೆಯಿಂದ ನೀರಿನ ನಿಯಂತ್ರಣ ಅಣೆಕಟ್ಟು. ನಿರ್ಮಾಣದ ಪ್ರಾಥಮಿಕ ಕಾಳಜಿ ಅಣೆಕಟ್ಟು ಸ್ವಯಂ ಸುಸ್ಧಿರವಾಗಿರಲು ವಿದ್ಯುತ್ ಉತ್ಪಾದನೆ ನೆರವಾಯಿತು. ಇದರಿಂದ ೫೦ ವರ್ಷಗಳ ಕಾಲದ ನಿರ್ಮಾಣ ಸಾಲವನ್ನು ಮರುಪಾವತಿ ಮಾಡಲು ಮತ್ತು ವಾರ್ಷಿಕ ನಿರ್ವಹಣಾ ಬಜೆಟ್ಟಿನ ಬಹು ಮಿಲಿಯನ್ ಡಾಲರ್‌ಗಳನ್ನು ಪಾವತಿಸಲು ಸಾಧ್ಯವಯಿತು. ಕೆಳ ಹರಿವಿನ ನೀರಿನ ಬೇಡಿಕೆಗೆ ಪ್ರತಿಯಾಗಿ ಮಾತ್ರ ಬಿಡುಗಡೆ ಮಾಡಲಾಗುವ ನೀರಿನಿಂದ ವಿದ್ಯುತ್ ಉತ್ಪಾದನೆ ಸಾಧ್ಯವಾಯಿತು.
***
[ಬದಲಾಯಿಸಿ]ಬ್ಯೂರೋ ಆಫ್ ರಿಕ್ಲಮೇಷನ್ ವರದಿಯಂತೆ ಶಕ್ತಿ ಬಿಡುಗಡೆಯಾಗುವುದು ಕೆಳಗಿನಂತಿದೆ:[೩೨]
ಪ್ರದೇಶ | ಶೇಕಡಾವಾರು |
---|---|
ಮೆಟ್ರೋಪಾಲಿಟನ್ ವಾಟರ್ ಡಿಸ್ಟ್ರಿಕ್ಟ್ ಆಫ್ ಸದರನ್ ಕ್ಯಾಲಿಫೋರ್ನಿಯಾ | 28.5393% |
ನೇವಡಾ ರಾಜ್ಯ | 23.3706% |
ಅರಿಜೋನಾ ರಾಜ್ಯ | 18.9527% |
ಲಾಸ್ ಏಂಜಲೀಸ್, ಕ್ಯಾಲಿಫೋರ್ನಿಯಾ | 15.4229% |
ಸದರನ್ ಕ್ಯಾಲಿಫೋರ್ನಿಯಾ ಎಡಿಸನ್ ಕಂಪನಿ | 5.5377% |
ಬೌಲ್ಡರ್ ಸಿಟಿ, ನೇವಡಾ | 1.7672% |
ಗ್ಲೆಂಡಾಲೆ, ಕ್ಯಾಲಿಫೋರ್ನಿಯಾ | 1.5874% |
ಪಸಡೆನ, ಕ್ಯಾಲಿಫೋರ್ನಿಯಾ | 1.3629% |
ಅನಾಹೀಮ್, ಕ್ಯಾಲಿಫೋರ್ನಿಯಾ | 1.1487% |
ರಿವರ್‌ಸೈಡ್, ಕ್ಯಾಲಿಫೋರ್ನಿಯಾ | 0.8615% |
ವೆರ್ನಾನ್, ಕ್ಯಾಲಿಫೋರ್ನಿಯಾ | 0.6185% |
ಬರ್ಬಾಂಕ್, ಕ್ಯಾಲಿಫೋರ್ನಿಯಾ | 0.5876% |
ಅಜುಸಾ, ಕ್ಯಾಲಿಫೋರ್ನಿಯಾ | 0.1104% |
ಕಾಲ್ಟನ್, ಕ್ಯಾಲಿಫೋರ್ನಿಯಾ | 0.0884% |
ಬ್ಯಾನಿಂಗ್, ಕ್ಯಾಲಿಫೋರ್ನಿಯಾ | 0.0442% |
ಕೋಡಿಗಳು
[ಬದಲಾಯಿಸಿ]ಅಣೆಕಟ್ಟು ಕಂಠ ಮಟ್ಟಕ್ಕೆ ತುಂಬದಂತೆ ಎರಡು ಕೋಡಿದಾರಿಗಳ ಮೂಲಕ ಅದನ್ನು ರಕ್ಷಿಸಲಾಗಿದೆ. ಕೋಡಿಗಳ ಪ್ರದೇಶ ದ್ವಾರಗಳನ್ನು ಅಣೆಕಟ್ಟಿನ ಪ್ರತಿ ಅಂಬುಟ್‌ಮೆಟಿನ ಹಿಂದೆ ಇದ್ದು ಅವು ಕಣಿವೆಯ ಗೋಡೆಗಳಿಗೆ ಸಮಾನಾಂತರವಾಗಿ ಹರಿಯುತ್ತವೆ. ಕೋಡಿಗಳ ಪ್ರದೇಶ ವ್ಯವಸ್ಧೆ ವಿಶಿಷ್ಟವಾದ ಬದಿ ಹರಿವಿನ ಹೊರದಾರಿಯಾಗಿದ್ದು ಪ್ರತಿ ಕೋಡಿಗೆ ನಾಲ್ಕು ಉದ್ದನೆಯ100 ft (30 m) ಉತ್ತಮ ಉಕ್ಕಿನ ಕೊಂಡುಗಳನ್ನು16 ft (4.9 m) ಅಳವಡಿಸಲಾಗಿದೆ. ಪ್ರತಿ ಬಾಗಿಲು ಐದು ಮಿಲಿಯನ್ ಪೌಂಡುಗಳಷ್ಟು ತೂಕವಿದ್ದು ಅವುಗಳನ್ನ ಮಾನವ ಚಾಲಿತ ಅಥವಾ ಸ್ವಯಂಚಾಲಿತ ಎರಡೂ ರೀತಿಯಲ್ಲಿ ಬಳಸಬಹುದು. ಜಲಾಶಯದ ನೀರಿನ ಮಟ್ಟ ಮತ್ತು ಪ್ರವಾಹ ಪರಿಸ್ಧಿತಿ ಅನುಗುಣವಾಗಿ ಕೋಡಿಯ ಬಾಗಿಲುಗಳನ್ನ ಏರಿಸಲಾಗುತ್ತದೆ ಮತ್ತು ಇಳಿಸಲಾಗುತ್ತದೆ. ನೀರು ಕೋಡಿಗೆ ಪ್ರವೇಶಿಸುವುದನ್ನ ಬಾಗಿಲುಗಳು ಸಂಪೂರ್ಣವಾಗಿ ತಡೆಯಲಾರವು, ಆದರೆ ಜಲಾಶಯದಲ್ಲಿ ಹೆಚ್ಚುವರಿಯಾಗಿ ೧೬ ಅಡಿಗಳಷ್ಟು ನೀರಿನ ಮಟ್ಟ ಕಾದು ಕೊಳ್ಳಲು ನೆರವಾಗುತ್ತವೆ.[೩೩] ಕೋಡಿಗಳ ಮೇಲೆ ಹರಿಯಲು ನೀರು ನಿರ್ಮಾಣದ ತಿರುವು ಸುರಂಗಗಳಿಗೆ ಹರಿಯುವ ಮೊದಲು600 ft (180 m) ಉದ್ದನೆಯ ಮತ್ತು 50 ft (15 m)ವಿಶಾಲವಾದ ಕೋಡಿ ಸುರಂಗಗಳಿಗೆ ಧುಮ್ಮಿಕ್ಕುತ್ತದೆ ನಂತರ ಅಣೆಕಟ್ಟಿನ ಕೆಳಭಾಗದಲ್ಲಿರುವ ನದಿಯ ಪ್ರಧಾನ ಪಾತ್ರವನ್ನು ಸೇರಿ ಮುಂದಕ್ಕೆ ಹರಿಯುತ್ತದೆ. ಜಲಾಶಯದ ಮೇಲು ತುದಿಯಿಂದ ನದಿಯ ತಳಕ್ಕೆ ಇರುವ ಅಂದಾಜು ಇಳಿಜಾರಿನಿಂದ ಕೂಡಿದ ಕೋಡಿಗಳ ಸಂಕೀರ್ಣ700 ft (210 m) ಪ್ರದೇಶ ವ್ಯವಸ್ಧೆ ಜಟಿಲ ಎಂಜಿನಿಯರಿಂಗ್ ಸಮಸ್ಯೆಯಾಗಿದ್ದು ಅನೇಕ ವಿನ್ಯಾಸ ಸವಾಲುಗಳನ್ನು ಒಡ್ಡುತ್ತದೆ. T ಕೋಡಿಯ ಒಟ್ಟಾರೆ ಹರಿವಿನ ಸಾಮರ್ಥ್ಯವನ್ನು ೧೯೪೧ರ ನಿರ್ಮಾಣೋತ್ತರ ಕಾಲದಲ್ಲಿ ಅನುಭವ ಜನತೆಯ ಮೂಲಕ ಪರೀಕ್ಷಿಸಲಾಯಿತು. ಈ ಪರೀಕ್ಷೆಗಳು ಕೋಡಿ ಸುರಂಗಗಳು ಪೂರ್ಣಪ್ರಮಾಣದಲ್ಲಿ ಹರಿಯುವಾಗ ಕುಳಿಗಳು ಉಂಟಾಗಿ ಸುರಂಗಗಳಿಗೆ ಹಾನಿ ಮಾಡಬಹುದೆಂದು ಕೂಡ ತೋರಿಸುತ್ತವೆ. ೧೯೮೩ರ ಬೇಸಿಗೆಯಲ್ಲಿ ಆರು ವಾರಗಳ ಬಳಕೆಯ ಕಾಲದಲ್ಲಿ ಇನ್ನೂ ಹೆಚ್ಚಿನ ಹಾನಿ ಉಂಟಾದ ನಂತರ ಸುರಂಗದ ಗೋಡೆಗಳನ್ನ ದುರಸ್ತಿ ಮಾಡಿ ಕುಳಿಯುಂಟಾಗುವ ಸಾಧ್ಯತೆಗಳನ್ನ ತಗ್ಗಿಸಲು ಸುರಂಗ ವಿನ್ಯಾಸದಲ್ಲಿ ಮಾರ್ಪಾಡು ಮಾಡಲಾಯಿತು. ಆದರೂ ಕೋಡಿಯ200,000 cu ft/s (5,700 m3/s) ಪ್ರತಿ ಸುರಂಗ ನಯಾಗಾರ ಜಲಪಾತದ ಹರಿವಿನಷ್ಟು ನೀರನ್ನು ನಿಭಾಯಿಸಬಲ್ಲುದು.[೩೩] ಕೋಡಿಯ ದೊಡ್ಡ ಸುರಂಗಗಳನ್ನು ಅಣೆಕಟ್ಟೆಯ ಚರಿತ್ರೆಯಲ್ಲಿ ಕೇವಲ ಎರಡು ಸಲ ಬಳಸಲಾಗಿದೆ ೧೯೪೧ರಲ್ಲಿ ಪರೀಕ್ಷೆಯ ಜೊತೆಗೆ ೧೯೮೩ರಲ್ಲಿ ಪ್ರವಾಹ ಪರಿಸ್ಧಿತಿ ತಲೆದೋರಿದ್ದರಿಂದ ಕೋಡಿಗಳನ್ನ ಬಳಸಲಾಯಿತು.[೩೩] ೧೯೯೯ರಲ್ಲಿ ಲೇಕ್‌ಮೀಡ್ ಜಲಾನಯನ ಪ್ರದೇಶದಲ್ಲಿ ವಿಪರೀತ ಮಳೆಯಾಗಿ ನೀರಿನ ಮಟ್ಟ ಏರುತ್ತಿದ್ದರಿಂದ ಅಣೆಕಟ್ಟಿನ ಹಿಂದಕ್ಕೆ ನೀರು ಬದಲು ಕೋಡಿಗಳನ್ನು ಬಳಸಲಾಯಿತು.[೩೪]
ಪರಿಸರಾತ್ಮಕ ಪರಿಣಾಮಗಳು
[ಬದಲಾಯಿಸಿ]ಹೂವರ್ ಅಣೆಕಟ್ಟು ಮತ್ತು ಅದರಿಂದ ಜಲ ಬಳಕೆಯ ಬದಲಾವಣೆಗಳಿಂದ ಕೊಲೊರೆಡೊ ನದಿಯ ಮುಖಜ ಭೂಮಿಯ ಡೆಲ್ಟಾ ಪ್ರದೇಶದಲ್ಲಿ ವಿನಾಶಾತ್ಮಕ ಪರಿಣಾಮಗಳು ಉಂಟಾದವು. ಅಣೆಕಟ್ಟೆಯ ನಿರ್ಮಾಣವನ್ನ ಅಲ್ಲಿನ ಅರಣ್ಯ ಪ್ರದೇಶದ ಕುಗ್ಗುವಿಕೆ ಕಾಲದ ಪ್ರಾರಂಭ ಎಂದು ಹೇಳಲಾಗಿತ್ತು.[೩೫] ೧೯೩೦ರ ಕೊನೆಯ ಆರು ವರ್ಷಗಳಲ್ಲಿ, ಅಣೆಕಟ್ಟೆ ನಿರ್ಮಾಣದ ನಂತರ ಲೇಕ್‌ಮೀಡ್ ಜಲಾಶಯ ಭರ್ತಿಯಾದರೂ ಯಾವುದೇ ನೀರು ನದಿಯ ಮುಖಜ ಭೂಮಿಯನ್ನು ತಲುಪಲಿಲ್ಲ.[೩೬] ನದಿಯ ಡೆಲ್ಟಾ ಪ್ರದೇಶದ ಅರಣ್ಯ 65 kilometres (40 mi)ಧಾಮ ಒಂದು ಕಾಲಕ್ಕೆ ತಾಜಾ ನೀರು ಮತ್ತು ಉಪ್ಪುನೀರು ಮಿಶ್ರವಾಗುವ ವಲಯವಾಗಿದ್ದು ಇದು ನದಿಯ ಮುಖಜ ಭೂಮಿಯ ದಕ್ಷಿಣ ತನಕ ಚಾಚಿಕೊಂಡಿತ್ತು.[೩೭] ಈಗ ಇದು ತಗ್ಗು ಅರಣ್ಯ ಧಾಮವಾಗಿ ಪರಿವರ್ತನೆಯಾಗಿ ನದಿಯ ಮುಖಜ ಭೂಮಿಗೆ ಹೋಲಿಸದರೆ ಇಲ್ಲಿ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿದೆ. ಹೂವರ್ ಅಣೆಕಟ್ಟನ್ನು ನಿರ್ಮಿಸುವುದಕ್ಕೆ ಮೊದಲ ಕೊಲೊರೆಡೊ ನದಿಯಲ್ಲಿ ನೈಸರ್ಗಿಕ ಪ್ರವಾಹ ಉಂಟಾಗುತ್ತಿತ್ತು. ಅಣೆಕಟ್ಟಿನಿಂದ ನೈಸರ್ಗಿಕ ಪ್ರವಾಹ ಕಣ್ಮರೆಯಾದ ದೆಸೆ ಸಸ್ಯ ಮತ್ತು ಪ್ರಾಣಿಗಳೂ ಸೇರಿದಂತೆ ಅನೇಕ ಜೀವ ಪ್ರಭೇಧಗಳು ನಾಶವಾದವು.[೩೮] ಅಣೆಕಟ್ಟೆಯ ನಿರ್ಮಾಣದಿಂದ, ಅಣೆಕಟ್ಟೆಯ ಕೆಳಹರಿವಿನಲ್ಲಿ ಅನೇಕ ಸ್ಧಳೀಯ ಮೀನುಗಳ ಪ್ರಭೇಧ ಮತ್ತು ಪ್ರಮಾಣವನ್ನು ನಾಶ ಮಾಡಿದಂತಾಯಿತು.[೩೯] ಕೊಲೊರೆಡೊ ನದಿಯ ಸ್ಧಳೀಯ ಮೀನುಗಳಾದ ಬೋನಿಟೈಲ್ ಚಬ್, ಕೊಲೊರೆಡೊ ಪಿಕೆಮಿನೌ, ಹಂಪ್‌ಬ್ಯಾಕ್ ಚಬ್ ಮತ್ತು ರೋಜರ್ ಬ್ಯಾಕ್ ಸಕ್ಕರ್ ಪ್ರಭೇಧಗಳನ್ನು ಆಮೇರಿಕ ಫೆಡರಲ್ ಸರ್ಕಾರ ಅಪಾಯಕ್ಕೆ ಒಳಗಾಗಿರುವ ಮತ್ಸ್ಯ ಪ್ರಭೇಧಗಳೆಂದು ಪಟ್ಟಿಮಾಡಿದೆ.[೪೦][೪೧]
ರಸ್ತೆ ಸಾರಿಗೆ ಬಳಕೆ
[ಬದಲಾಯಿಸಿ]ಅಣೆಕಟ್ಟೆಯ ಮೇಲು ಭಾಗದಲ್ಲಿ ವಾಹನ ಸಂಚಾರಕ್ಕೆ ಎರಡು ಲೇನಿನ ದಾರಿಯಿದೆ. ಅದು ಅಮೇರಿಕದ ಮಾರ್ಗ 93ಗೆ ಕೊಲೊರೆಡೊ ನದಿ ದಾಟಲು ಸಹಾಯಕವಾಗಿದೆ. ಅಣೆಕಟ್ಟೆಗೆ ಹತ್ತಿರವಾಗುವ ರಸ್ತೆಯ ಎರಡು ಲೇನ್‌ಗಳ ವಿಭಾಗ ಕಿರಿದಾಗಿದ್ದು, ಅನೇಕ ಅಪಾಯಕಾರಿ ಹೇರ್ ಪಿನ್ ತಿರುವುಗಳಿವೆ ಮತ್ತು ಇಲ್ಲಿ ಕಲ್ಲುಗಳು ಉರುಳಿ ಬೀಳುತ್ತಿರುತ್ತವೆ. ಇನ್ನೂ ಹೆಚ್ಚಿನ ಹೆದ್ದಾರಿ ಸಾಮರ್ಥ್ಯ ಮತ್ತು ಉತ್ತಮ ರಕ್ಷಣೆ ಒದಗಿಸಲು ಉದ್ದೇಶಿಸಲಾಗಿರುವ ಹೂವರ್ ಡ್ಯಾಮ್ ಬೈಪಾಸ್ ರಸ್ತೆ ೨೦೧೦ ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದ್ದು ಅದು ಆಮೇರಿಕದ ೯೩1,500 ft (460 m) ಸಂಚಾರವನ್ನು ಅಣೆಕಟ್ಟಿನ ಕೆಳಭಾಗಕ್ಕೆ ತಿರುಗಿದುತ್ತದೆ.[೪೨] ಈ ಬೈಪಾಸ್ ರಸ್ತೆ ಉಕ್ಕು ಮತ್ತು ಕಾಂಕ್ರೀಟಿನ ಸಂಯುಕ್ತ ಕಮಾನು ಸೇತುವೆಯಾಗಿದ್ದು ತಾತ್ಕಾಲಿಕವಾಗಿ ಅದಕ್ಕೆ ಮೈಕ್ ಓ ಕ್ಯಾಲಘಾನ್-ಪ್ಯಾಟ್ ಟಿಲ್‌ಮನ್ ಸ್ಮಾರಕ ಸೇತುವೆ ಎಂಬ ಹೆಸರು ಕಟ್ಟಲಾಗಿದೆ. ಬೈಪಾಸ್ ರಸ್ತೆ ಕಾಮಗಾರಿ ಮುಗಿದ ನಂತರ ಹಾದು ಹೋಗುವ ವಾಹನಗಳನ್ನ ಹೂವರ್ ಅಣೆಕಟ್ಟಿನ ಹತ್ತಿರ ನಿರ್ಬಂಧಿಸಲಾಗುತ್ತದೆ.[೪೩] ಇದರ ಜೊತೆಗೆ ೧1 ಸೆಪ್ಬೆಂಬರ್ 2001 ರ ಭಯೋತ್ಪಾದಕ ದಾಳಿಯ ನಂತರ ಗಣನೀಯ ಭದ್ರತಾ ಕಾಳಜಿ ವ್ಯಕ್ತವಾಗಿದೆ. ದಾಳಿಯ ಕಾರಣ ಹೂವರ್ ಡ್ಯಾಮ್ ಬೈಪಾಸ್ ರಸ್ತೆ ಯೋಜನೆಯನ್ನ ಚುರುಕುಗೊಳಿಸಲಾಗಿದೆ. ಹೂವರ್ ಅಣೆಕಟ್ಟನ್ನು ಹಾದು ಹೋಗುವ ವಾಹನ ಸಂಚಾರವನ್ನು ನಿಯಮಿತ ಗೊಳಿಸಲಾಗಿದೆ. ಅಣೆಕಟ್ಟನ್ನು ದಾಟುವುದಕ್ಕೆ ಮೊದಲು ಕೆಲವು ಬಗೆಯ ವಾಹನಗಳನ್ನ ತಪಾಸಣೆಗೆ ಒಳಪಡಿಸಲಾಗುತ್ತದೆ, ಸೆಮಿ ಟ್ರೈಲರ್ ಟ್ರಕ್,40 feet (12 m) ಸರಕು ಸಾಗಣಿ ಬಸ್ಸುಗಳು ಮತ್ತು ಪೆಟ್ಟಿಗೆ ಟ್ರಕ್ಕುಗಳ ಸಂಚಾರವನ್ನು ಸಂಪೂರ್ಣ ವಾಗಿ ನಿಷೇಧಿಸಲಾಗಿದೆ.[೪೪] ವಾಹನ ಸಂಚಾರವನ್ನು ನೆವಾಡದ ಲಾಫ್‌ಲಿನ್ ಹತ್ತಿರ ದಕ್ಷಿಣದ ಕೊಲೊರೆಡೊ ನದಿ ಸೇತುವೆಯ ಕಡೆಗೆ ತಿರುಗಿಸಲಾಗಿದೆ.
ನಾಮಕರಣ ವಿವಾದ
[ಬದಲಾಯಿಸಿ]ಮೊದಲಿಗೆ ಈ ಅಣೆಕಟ್ಟನ್ನು ಬೌಲ್ಡರ್ ಕಣಿವೆಯಲ್ಲಿ ಯೋಜಿಸಲಾಗಿತ್ತು, ಆದರ ಸುಸ್ಧಿರತೆಗಾಗಿ ಅದನ್ನ ಕಪ್ಪು ಕಣಿವೆಗೆ ಸ್ಧಳಾಂತರಿಸಲಾಯಿತು, ಆದರೆ ಅದರ ಹೆಸರು ಮಾತ್ರ ಬೌಲ್ಡರ್ ಅಣೆಕಟ್ಟು ಎಂದೇ ಉಳಿದುಕೊಂಡಿತು. ಬೌಲ್ಡರ್ ಕೇನ್ಯಾನ್ ಪ್ರಾಜೆಕ್ಟ್ ಆಕ್ಟ್ ೧೯೨೮ (BCPA) ಅದಕ್ಕೆ ಒಂದು ಹೆಸರನ್ನು ಕೂಡ ಪ್ರಸ್ತಾಪಿಸಿಲ್ಲ. BCPA ಸರ್ಕಾರಕ್ಕೆ ಅವಕಾಶ ಕೊಟ್ಟಿರುವುದು ನಿರ್ಮಾಣ ಮಾಡಿ, ಕಾರ್ಯ ನಿರ್ವಹಿಸಿ ಮತ್ತು ಕೊಲೊರೆಡೊ ನದಿಯ ಕಪ್ಪು ಕಣಿವೆ ಅಥವಾ ಬೌಲ್ಡರ್ ಕಣಿವೆಯಲ್ಲಿ ಅಗಿಂದಾಗ್ಗೆ ಒದಗಿ ಬರುವ ಕಾಮಗಾರಿಗಳನ್ನು ನಿರ್ವಹಿಸಿ ಎಂದು ಮಾತ್ರ.[೪೫] ಈ ಯೋಜನೆಯ ಕೆಲಸ ೭ ಜುಲೈ ೧೯೩೦ ರಂದು ಪ್ರಾರಂಭವಾಯಿತು.
೧೭ ಸೆಪ್ಬೆಂಬರ್ ೧೯೩೦ ರಂದು ಯೋಜನೆ ಅಧಿಕೃತವಾಗಿ ಪ್ರಾರಂಭವಾದಾಗ ಅಧ್ಯಕ್ಷ ಹೂವರ್‌ನ ಆಂತರಿಕ ಕಾರ್ಯದರ್ಶಿ ರೇಲೈಮನ್ ವಿಲ್‌ಬರ್ ಕೊಲೊರೆಡೊ ನದಿಗೆ ಕಟ್ಟಲಾಗುತ್ತಿರುವ ಅಣೆಕಟ್ಟಿಗೆ ಅಂದಿನ ಆಮೇರಿಕಾ ಸಂಯುಕ್ತ ಅಧ್ಯಕ್ಷನ ಗೌರವಾರ್ಥವಾಗಿ ಹೂವರ್ ಅಣೆಕಟ್ಟು ಎಂದು ನಾಮಕರಣ ಮಾಡಲಾಗುತ್ತವೆ ಎಂದು ಘೋಷಿಸಿದ. ಆಯಾ ಮುಖ್ಯ ಅಣೆಕಟ್ಟಗಳನ್ನು ಕಟ್ಟುವಾಗ ಅಧ್ಯಕ್ಷೀಯ ಅಧಿಕಾರದಲ್ಲಿದ್ದವರ ಹೆಸರುಗಳನ್ನು ಅವುಗಳಿಗೆ ಇಡಲಾಗುವ ಅಸ್ತಿತ್ವದಲ್ಲಿದ್ದ ಪರಂಪರೆಯನ್ನು ವಿಲ್‌ಬರ್ ಅನುಸರಿಸಿದ್ದ್ ಅಂತಹ ಅಣೆಕಟ್ಟುಗಳೆಂದರೆ, ಥಿಯೊಡೊರ್ ರೂಸ್‌ವೆಲ್ಟ್ ಅಣೆಕಟ್ಟು, ವಿಲ್ಸನ್ ಅಣೆಕಟ್ಟು ಮತ್ತು ಕೂಲಿಡ್ಜ್ ಅಣೆಕಟ್ಟು. ಆದರೂ ಈ ಯಾವುದೇ ಅಣೆಕಟ್ಟೆಗಳಿಗೆ ಹಾಲಿ ಅಧ್ಯಕ್ಷೀಯ ಅಧಿಕಾರಸ್ತರ ಹೆಸರುಗಳನ್ನ ಇಡಲಾಗಿರಲಿಲ್ಲ, ಆಯಾ ಅಧ್ಯಕ್ಷರುಗಳ ಪದವಿಯ ಅವಧಿ ಮುಗಿದ ನಂತರ ಈ ಅಣೆಕಟ್ಟುಗಳ ನಿರ್ಮಾಣ ಕಾರ್ಯ ಮುಗಿಯಿತು. ಹೇಳ ಬೇಕು ಅಂದರೆ ಅಧ್ಯಕ್ಷ ಹೂವರ್ ಮತ್ತೆ ಅಧ್ಯಕ್ಷೀಯ ಪದವಿಗೆ ಮರು ಚುನಾಯಿತನಾಗಲು ಈಗಾಗಲೇ ಪ್ರಚಾರ ಶುರು ಮಾಡಿಕೊಂಡಿದ್ದ; ಆರ್ಧಿಕ ಮುಗ್ಗಟ್ಟು ಎದುರಾಗಿತ್ತು ಹೆಚ್ಚು ಉದ್ಯೋಗಗಳನ್ನ ಸೃಷ್ಟಿಸಿದ ಕೀರ್ತಿ ಅವನಿಗೆ ಬೇಕಾಗಿತ್ತು. ೧೪ ಫೆಬ್ರುವರಿ ೧೯೩೧ ರಲ್ಲಿ ಜಾರಿಗೆ ಬಂದ ಕಾಂಗ್ರೆಸಿನ ಕಾಯಿದೆ ಹೂವರ್ ಅಣೆಕಟ್ಟು ಎಂಬ ಹೆಸರನ್ನು ಅಧಿಕೃತ ಗೊಳಿಸಿತು. ಆದರೂ ೧೯೩೨ ರಲ್ಲಿ ಹರ್ಬರ್ಟ್ ಹೂವರ್ ಪ್ರತಿಸ್ಪರ್ಧಿ ಫ್ರಾಂಕ್ಲಿನ್ ಡಿಲಾನೊ ರೂಸ್‌ವೆಲ್ಟ್ ಎದುರು ಅವನ ಮರುಚುನಾವಣೆ ಬಿಡ್‌ನಲ್ಲಿ ಸೋತ. ತನ್ನ ನೆನಪುಗಳಲ್ಲಿ ಹೂವರ್ ತಾನು ಸೋತ ನಂತರ ಕ್ಯಾಲಿಫೋರ್ನಿಯಾದ ತನ್ನ ಪಾಲ್ ಆಲ್ಟೊ ಮನೆಯಿಂದ ವಾಷಿಂಗ್ಟ್‌ನ್ನಿಗೆ ಮರಳುವಾಗ ೧೨ ನವೆಂಬರ್ ೧೯೩೨ ರಂದು ಅಣೆಕಟ್ಟೆಯ ಕೆಲಸದ ಪ್ರಗತಿಯನ್ನು ಪರಿಶೀಲಿಸಲು ರಾತ್ರಿ ಹೊತ್ತು ಅಲ್ಲಿಗೆ ಹೋಗಿದ್ದ ಬಗ್ಗೆ ಬರೆದು ಕೊಂಡಿದ್ದಾನೆ. ಅವನು ಹೇಳುತ್ತಾನೆ ನಾನು ಬಹುದಿನಗಳಿಂದ ಕಂಡಿದ್ದ ಮಹಾನ್ ಕನಸು ಈಗ ಕಲ್ಲು ಮತ್ತು ಸಿಮೆಂಟಿನ ಮೂಲಕ ನೈಜ ಆಕಾರ ಪಡೆದು ಕೊಳ್ಳುತ್ತಿರುವುದನ್ನು ಕಾಣಲು ನನಗೆ ಅಪಾರ ಸಂತೋಷವಾಗುತ್ತಿದೆ. ನಾನು ಕೊಲೊರೆಡೊ ನದಿ ಅಯೋಗದ ಅಧ್ಯಕ್ಷನಾಗಿ ಇಂದಿಗೆ ಹತ್ತು ವರ್ಷಗಳಾದವು .... ಈ ಅಣೆಕಟ್ಟು ಮನುಷ್ಯ ಈ ಎರಡು ತನ್ನ ಕೈಗಳಿಂದ ಪ್ರಯತ್ನಿಸದಂತಹ ಮಹಾನ್ ಎಂಜಿನಿಯರಿಂಗ್ ಕಾಮಗಾರಿ. ಅವನು ಅದರ ಉದ್ದೇಶಗಳ ಬಗ್ಗೆ ದೊಡ್ಡ ಪಟ್ಟಿಯನ್ನೇ ಕಟ್ಟುತ್ತಾ ಕೊನೆಯಲ್ಲಿ ಹಾಗೆ ಹೇಳುತ್ತಾನೆ ಅದು ಪೂರ್ಣ ಗೊಂಡ ನಂತರ ನಾನು ಅಲ್ಲಿದ್ದು ವೀಕ್ಷಕನಾಗಿ ನೋಡಲು ಬಯಸುತ್ತೇನೆ. ಇಷ್ಟಾದರೂ ನನಗೆ ಇದರ ಬಗ್ಗೆ ವಿಶೇಷ ವೈಯಕ್ತಿಕ ತೃಪ್ತಿ ಇದೆ. (ಇದಕ್ಕೆ ಹೂವರ್ ಕೆಲವು ಅದೆ ಟಿಪ್ಪಣಿಗಳನ್ನು ಬರೆದಿದ್ದಾನೆ ಕೆಳಗೆ ನೋಡಿ) [೪೬] ೪ ಮಾರ್ಚ್ ೧೯೩೩ರಲ್ಲಿ ರೂಸ್ ವೆಲ್ಟ್ ಅಧಿಕಾರ ವಹಿಸಿ ಕೊಂಡಾಗ ಆಂತರಿಕ ಕಾರ್ಯದರ್ಶಿ ಶೀಲಿನ್ ವಿಲ್‌ಬರ್‌ನನ್ನು ಸ್ಧಳಾಂತರಿಸಲು ತನ್ನ ಜೊತೆಯಲ್ಲಿ ಹೆರಾಲ್ಡ್ ಇಕ್ಸ್‌ನನ್ನು ಕರೆದು ಕೊಂಡು ಬಂದಿದ್ದ ಬೌಲ್ಡರ್ ಕಣಿವೆ ಯೋಜನೆಯಿಂದ ಹೂವರ್‌ನ ಹೆಸರು ತೆಗೆದು ಹಾಕಲು ಇಕ್ಸ್ ಸಮಯ ಹಾಳು ಮಾಡಲಿಲ್ಲ. ೮ ಮೇ ೧೯೩೩ರಂದು ಇಕ್ಸ್ ಅಣೆಕಟ್ಟೆಯ ಉಸ್ತುವಾರಿ ವಹಿಸಿಕೊಂಡಿದ್ದ ಬ್ಯೂರೋ ಆಫ್ ರಿಕ್ಲಮೇಷನ್‌ಗೆ ಮೆಮೊರೆಂಡಮ್ ಕಳಿಸಿದ ಅದರ ಒಕ್ಕಣಿ ಹೀಗಿತ್ತು ಪ್ರಗತಿ ಪ್ರದರ್ಶನ ಶತಕದಲ್ಲಿ ಬಳಸಲು ಬೌಲ್ಡರ್ ಕಣಿವೆ ಯೋಜನೆಯ ಬಗ್ಗೆ ಕಳಿಸಿರುವ ಕರ ಪತ್ರದ ಪಠ್ಯದ ಅಕಾರ ನನ್ನ ಮುಂದಿದೆ ಕರ ಪತ್ರದಲ್ಲಿ ನೀವು ಈ ಅಣೆಕಟ್ಟನ್ನು ಬೌಲ್ಡರ್ ಅಣೆಕಟ್ಟು ಎಂದು ಕರೆದರೆ, ಜೊತೆಗೆ ಮುಂದಿನ ಎಲ್ಲ ಪತ್ರ ವ್ಯವಹಾರ ಮತ್ತು ಭವಿಷ್ಯದ ಯಾವುದೇ ಸಂಧರ್ಭ ಸಮಾರಂಭಗಳಲ್ಲಿ ಅದನ್ನು ಮುಂದುವರೆಸಿ ಕೊಂಡು ಹೋದರೆ ನನಗೆ ಸಂತೋಷವಾಗುತ್ತದೆ."
ಇದು ಅವನು ಹೇಳಿದ ತಕ್ಷಣ ಆಗಲಿಲ್ಲ ಆದರೆ ಮುಂದಿನ ಅನೇಕ ವರ್ಷಗಳಲ್ಲಿ ಅಧಿಕೃತ ಮೂಲಗಳು ಪ್ರವಾಸಿ ಮತ್ತು ಇತರೆ ಪ್ರಚಾರ ಸಾಮಾಗ್ರಿಗಳಲ್ಲಿ ಅಣೆಕಟ್ಟಿಗೆ ಸಂಬಂಧಿಸಿದಂತೆ ಹೂವರ್‌ನ ಹೆಸರು ಅಳಿಸಿ ಹೋಗಿ ಬೌಲ್ಡರ್ ಅಣೆಕಟ್ಟು ಎಂದು ನಮೂದಾಗ ತೊಡಗಿತು. ೧೯೪೫ರಲ್ಲಿ ರೂಸ್‌ವೆಲ್ಟ್ ತೀರಿಕೊಂಡ ೧೯೪೬ರಲ್ಲಿ ಹೆರಾಲ್ಡ್‌ಲಿಕ್ಸ್ ನಿವೃತ್ತವಾದ ೪ ಮಾರ್ಚ್ ೧೯೪೭ರಂದು ರಿಪಬ್ಲಿಕನ ಪಕ್ಷದ ಕ್ಯಾಲಿಫೋರ್ನಿಯಾದ ಕಾಂಗ್ರೆಸ್ ಸದಸ್ಯ ಜಾಕ್ ಆಂಡರ್ ಸನ್ ಅಣೆಕಟ್ಟೆಗೆ ಹೂವರ್ ಹೆಸರನ್ನು ಮರುಸ್ಧಾಪಿಸುವಂತೆ ಸಭಾ ನಿರ್ಣಯ ೧೪೦ನ್ನು ಮಂಡಿಸಿದ ಮಾರ್ಚ್ ೬ ರಂದು ಅಂಡರ್‌ಸನ್‌ನ ನಿರ್ಣಯವನ್ನು ಸಭೆ ಅನುಮೋದಿಸಿತು ಇದಕ್ಕೆ ಸಾಂಗತ್ಯ ಹೊಂದುವಂತೆ ಏಪ್ರಿಲ್ ೨೩ ರಂದು ಸೆನೇಟ್‌ನಲ್ಲಿ ನಿರ್ಣಯ ಅನುಮೋದನೆಯಾಯಿತು ಮತ್ತು ೩೦ ಏಪ್ರಿಲ್ ೧೯೪೭ ರಂದು ಅಧ್ಯಕ್ಷ ಹ್ಯಾರಿ ಎಸ್ ಟ್ರೂಮನ್ ಸಾರ್ವಜನಿಕ ಕಾನೂನು ೪೩ಕ್ಕೆ ಅಧ್ಯಕ್ಷೀಯ ಅಂಕಿತ ಹಾಕಿದ. ಅದು ಹೀಗಿತ್ತು: ಪರಿಹರಿಸಲಾಗಿದೆ ಬೌಲ್ಡರ್ ಕೇನ್ಯಾನ್ ಆಕ್ಟ್‌ನ ಅಧಿಕಾರ ವ್ಯಾಪ್ತಿ ಮಾಡಿ ಕೊಲೊರೆಡೊ ನದಿಯ ಕಪ್ಪು ಕಣಿವೆಯಲ್ಲಿ ನಿರ್ಮಿಸಲಾಗಿರುವ ಅಣೆಕಟ್ಟಿಗೆ ಹೂವರ್ ಅಣೆಕಟ್ಟು ಎಂಬ ಹೆಸರನ್ನು ಇಂದಿನಿಂದಲೇ ಮರುಸ್ಧಾಪಿಸಲಾಗಿದೆ. ಆಮೇರಿಕ ಸಂಯುಕ್ತ ಸಂಸ್ಧಾನದ ಯಾವುದೇ ಕಾನೂನು, ಕಾಯಿದೆ, ದಾಖಲೆ ಅಥವಾ ಪತ್ರಗಳಲ್ಲಿ ಈ ಅಣೆಕಟ್ಟಿಗೆ ಬೌಲ್ಡರ್ ಅಣೆಕಟ್ಟು ಎಂದು ನಮೂದಸಲಾಗುತ್ತಿದ್ದರೆ ಇನ್ನು ಮುಂದೆ ಅವನ್ನು ಹೂವರ್ ಅಣೆಕಟ್ಟು ಎಂದು ನಮೂದಸ ತಕ್ಕದ್ದು ಎಂದು ತಿಳಿಯ ಪಡಿಸಲಾಗಿದೆ. ೧೨ ನವೆಂಬರ್ ೧೯೩೨ ರ ತನ್ನ ಹೇಳಿಕೆಗೆ ಹೂವರ್ ಈ ಅಡಿ ಟಿಪ್ಪಣಿ ಬರೆದಿದ್ದಾನೆ ಹಿರಂ ಜಾನ್‌ಸನ್ನನ ಸಲಹೆ ಮತ್ತು ಅವನ ವಿಚಿತ್ರ ಮನೋಭಾವಕ್ಕೆ ಪ್ರತಿಕ್ರಿಯೆಯಾಗಿ ಕಾರ್ಯದರ್ಶಿ ಇಕ್ಸ್ ಅಣೆಕಟ್ಟಿನ ಹೆಸರನ್ನು ಬದಲಾಯಿಸಿದ. ಈ ಮೇಲಿನ ಭಾಷಣದಲ್ಲಿ ಒಂದು ಸುಳಿವಿದೆ, ಅಣೆಕಟ್ಟನ್ನು ದೇಶಕ್ಕೆ ಅರ್ಪಿಸಲು ಅಧ್ಯಕ್ಷ ರೂಸ್‌ವೆಲ್ಟ್ ನಡೆಸುವ ಸಮಾರಂಭದಲ್ಲಿ ಭಾಗವಹಿಸುವ ಇಚ್ಛೆ ನನಗಿದ್ದರೂ ನನಗೊಂದು ಆಹ್ವಾನ ಪತ್ರಿಕೆ ಬಂದಿಲ್ಲ. ನಾನು ಹೆಸರಿಗೆ ಅಷ್ಟು ಪ್ರಾಮುಖ್ಯತೆ ಕೊಟ್ಟವನಲ್ಲ ಮುಖ್ಯ ಎಂದರೆ ಮಿಲಿಯಗಟ್ಟಲೆ ಜನರಿಗೆ ಸುಖ ಶಾಂತಿ ತರುವ ಈ ಬೃಹತ್ ಎಂಜಿನಿಯರಿಂಗ್ ಕಾಮಗಾರಿ. ೧೯೪೭ರಲ್ಲಿ ವಾಸ್ತವಿಕ ಅವಿರೋಧ ಕ್ರಿಯೆಯೊಂದಿಗೆ ಕಾಂಗ್ರೆಸ್ ಹೂವರ್ ಅಣೆಕಟ್ಟು ಎಂಬ ಹೆಸರನ್ನು ಮರು ಸ್ಧಾಪಿಸಿತು ಇದು ಇಕ್ಸ್‌ನ ಘನತೆಯನ್ನೇ ಪ್ರಶ್ನಿಸುವಂತಿತ್ತು.
ಅಂಕಿಅಂಶಗಳು
[ಬದಲಾಯಿಸಿ]- ನಿರ್ಮಾಣದ ಅವಧಿ: ಏಪ್ರಿಲ್ ೨೦, ೧೯೩೧ – ಮಾರ್ಚ್ ೧, ೧೯೩೬
- ನಿರ್ಮಾಣ ವೆಚ್ಚ: $೪೯ ಮಿಲಿಯನ್ ( ೧೯೩೬ ರಿಂದ ೨೦೦೮ರವರೆಗೆ ಇನ್ಫ್ಲೇಷನ್ಗೆ $೭೩೬ ಮಿಲಿಯನ್ ಹೊಂದಿಸಲಾಯಿತು[೪೭] )
- ನಿರ್ಮಾಣದಲ್ಲಿ ಉಂಟಾದ ಸಾವುಗಳು: ೧೧೨; ಅದರಲ್ಲಿ ೯೬ ನಿರ್ಮಾಣ ಸ್ಥಳದಲ್ಲಿ[೩೦][೩೧][೪೮]
- ಆಣೆಕಟ್ಟಿನ ಎತ್ತರ: 726.4 ft (221.4 m), ಯುನೈಟೆಡ್ ಸ್ಟೇಟ್ಸ್ನ ಎರಡನೇ ಅತಿ ಎತ್ತರದ ಆಣೆಕಟ್ಟು ( ಒರೊವಿಲ್ಲೆ ಅಣೆಕಟ್ಟು ಮಾತ್ರ ಅತಿ ಎತ್ತರವಾಗಿದೆ).
- ಅಣೆಕಟ್ಟಿನ ಉದ್ದ: 1,244 ft (379 m)
- ಅಣೆಕಟ್ಟಿನ ದಪ್ಪ: 660 ft (200 m) ತಳಭಾಗದಲ್ಲಿ; 45 ft (14 m) ಕ್ರೆಸ್ಟ್ ಬಳಿಯಲ್ಲಿ.
- ಸರಾಸರಿ ಹರಿವು ಬಿಡುಗಡೆ: ೨೨,೦೦೦ cfs
- ಕಾಂಕ್ರೀಟ್: 4,360,000 cu yd (3,330,000 m3)
- ವಾಟರ್ ಟರ್ಬೈನ್ಗಳಿಂದ ಉತ್ಪತ್ತಿಯಾಗುವ ಗರಿಷ್ಟ ವಿದ್ಯುಚ್ಛಕ್ತಿ: ೨.೦೮ ಗಿಗಾವ್ಯಾಟ್ಗಳು[೪೯]
- ಅಂದಾಜು ವಿದ್ಯುತ್ ಉತ್ಪಾದನೆ: 4,000,000,000 kWh (1.4×1010 MJ) ಪ್ರತಿ ವರ್ಷ[೫೦] (ಅಂದರೆ $೨೦೦ ಮಿಲಿಯನ್ $೦.೦೫ per kWh)
- ಅಣೆಕಟ್ಟಿನುದ್ದಕ್ಕೂ ಟ್ರಾಫಿಕ್: ಪ್ರತಿದಿನ ೧೩,೦೦೦ ರಿಂದ ೧೬,೦೦೦ ಜನರು, ಫೆಡರಲ್ ಹೈವೇ ಅಡ್ಮಿನಿಸ್ಟ್ರೇಷನ್ ಪ್ರಕಾರ
- ಲೇಕ್ ಮೀಡ್ (ಫುಲ್ ಪೂಲ್)[೫೧]
- ವಿಸ್ತೀರ್ಣ: 157,900 acres (63,900 ha), ಅಣೆಕಟ್ಟಿನ ಹಿಂದಿನ ಭಾಗದಿಂದ 110 mi (180 km) ಮುಂಭಾಗದವರೆಗೆ.
- ಅಳತೆ: ೨೮,೫೩೭,೦೦೦ ಎಕ್ರೆ ಅಡಿ (೩೫.೨೦೦ km³) ಎಲಿವೇಷನ್ 1,221.4 ft (372.3 m)ನೊಂದಿಗೆ.
- ಪ್ರತಿ ವರ್ಷ ೮ ರಿಂದ ೧೦ ಮಿಲಿಯನ್ ಪ್ರವಾಸಿಗರು ಭೇಟಿ ನೀಡುತ್ತಾರೆ, ಲೇಕ್ ಮೀಡ್ ನ್ಯಾಷನಲ್ ರಿಕ್ರಿಯೇಷನ್ ಪ್ರದೇಶವು ಐದನೆಯ ಕಾರ್ಯನಿರತ ನ್ಯಾಷನಲ್ ಪಾರ್ಕ್ ಸರ್ವಿಸ್ ಪ್ರದೇಶ ಆಗಿದೆ.
ಜನಪ್ರಿಯ ಸಂಸ್ಕೃತಿ
[ಬದಲಾಯಿಸಿ]ಹೂವರ್ ಡ್ಯಾಮ್ ಬಹಳಷ್ಟು ಸಂಖ್ಯೆಯ ಚಲನಚಿತ್ರಗಳಲ್ಲಿ ಇದೆ, ಅವೆಂದರೆ ದಿ ಸಿಲ್ವರ್ ಸ್ಟ್ರೀಕ್ , ಸ್ಯಾಬೊಟಿಯರ್ , ವೆಗಾಸ್ ವೆಕೇಷನ್ , ಚೆರ್ರಿ 2000 , ಟ್ರಾನ್ಸ್‌ಫಾರ್ಮರ್ಸ್ , ವಿವಾ ಲಾಸ್ ವೆಗಾಸ್ , ಯೂನಿವರ್ಸಲ್ ಸೋಲ್ಜರ್ , ಸೂಪರ್ಮ್ಯಾನ್ , ಮತ್ತು ಇನ್ನೂ ಹಲವಾರು.[೫೨] ಫೋಲ್ಸ್ ರಷ್ ಇನ್ ಚಿತ್ರಕ್ಕಾಗಿ, ಅರಿಜೋನಾ ಮತ್ತು ನೇವಡಾದ ಮಧ್ಯೆ ಬಾರ್ಡರ್‌ಗೆ ಬಣ್ಣಹಚ್ಚಲಾಯಿತು. ಇತರೆಯವೆಂದರೆ ಬೀವಿಸ್ ಮತ್ತು ಬಟ್-ಹೆಡ್ ಡು ಅಮೇರಿಕಾ ಮತ್ತು ಒಂದು ಮುಂಬರುವ ವೀಡಿಯೋ ಗೇಮ್ Fallout: New Vegas . ಇದು ಅಮೆರಿಕನ್ ಬ್ಯಾಂಡ್ ಶುಗರ್‌ನ ಒಂದು ಹಾಡಿನ ಹೆಸರು, ಇದು ಅವರ ೧೯೯೨ ಆಲ್ಬಮ್ "ಕಾಪರ್ ಬ್ಲೂ"ನಲ್ಲಿದೆ.
ಇವನ್ನೂ ಗಮನಿಸಿ
[ಬದಲಾಯಿಸಿ]- ಹೂವರ್ ಡ್ಯಾಮ್ ಪೋಲಿಸ್
- ಹೂವರ್ಡ್ಯಾಂ ನಿರ್ಮಾಣದ BBC ಶ್ರೇಣಿಯ ಸೆವೆನ್ ವಂಡರ್ಸ್ ಆಫ್ ದಿ ಇಂಡಸ್ಟ್ರಿಯಲ್ ವರ್ಲ್ಡ್.
ಆಕರಗಳು
[ಬದಲಾಯಿಸಿ]- ↑ "Bureau of Reclamation Lake Mead FAQ". Archived from the original on 2016-12-29. Retrieved 2010-06-09.
- ↑ "Hoover Dam Frequently Asked Questions and Answers". Washington, D.C.: U.S. Department of the Interior. 2009. Archived from the original on 2010-03-23. Retrieved 2009-08-04.
Hoover Dam generates, on average, about 4 billion kilowatt-hours of hydroelectric power each year[...]
{{cite web}}
: Cite has empty unknown parameters:|trans_title=
and|coauthors=
(help); Unknown parameter|month=
ignored (help) - ↑ "National Register Information System". National Register of Historic Places. National Park Service. 2007-01-23. Archived from the original on 2009-04-22. Retrieved 2010-06-09.
- ↑ ೪.೦ ೪.೧ "Hoover Dam". National Historic Landmark summary listing. National Park Service. Archived from the original on 2010-07-16. Retrieved 2007-09-27.
- ↑ See Grand Coulee Dam and List of the largest hydroelectric power stations.
- ↑ Joan Middleton and Laura Feller (May 31, 1985), National Register of Historic Places Inventory-Nomination: Hoover Dam (aka Boulder Dam until 1947) (PDF), National Park Service, archived from [National Register of Historic Places Inventory-Nomination: Hoover Dam (aka Boulder Dam until 1947) the original] on ಮೇ 27, 2011, retrieved ಜೂನ್ 9, 2010
{{citation}}
: Check|url=
value (help) (Includes informative drawing of how the dam works) and Accompanying 4 photos, from 1967 and 1997 PDF (1.57 MB) - ↑ Stevens, Joseph (1990). Hoover Dam: An American Adventure. Norman, Oklahoma: University of Oklahoma Press.
{{cite book}}
: Cite has empty unknown parameters:|lastn=
,|laydate=
,|coauthors=
,|nopp=
,|trans_chapter=
,|authorn-link=
,|laysummary=
,|chapterurl=
,|month=
,|lastauthoramp=
, and|firstn=
(help) - ↑ Sutton, Imre (1968). "Geographical Aspects of Construction Planning: Hoover Dam Revisited". Journal of the West. VII (3): 301–344.
{{cite journal}}
: Cite has empty unknown parameters:|laydate=
,|laysummary=
,|trans_title=
,|day=
,|month=
,|laysource=
, and|coauthors=
(help) - ↑ Construction of Hoover Dam: a historic account prepared in cooperation with the Department of the Interior. KC Publications. ೧೯೭೬. ISBN ೦-೪೭೧-೮೦೫೮೦-೭.
- ↑ BBC History: The Building of the Hoover Dam, fighting for Progress
- ↑ Las Vegas Invitational at Boulder City
- ↑ ಜೋಸೆಫ್ ಎ.ಸ್ಟಿವನ್ಸ್, Hoover Dam: An American Adventure . University of Oklahoma Press, ೧೯೯೦, p.೧೦೧-೨, ೨೦೫ff. ISBN ೧-೫೮೬೪೮-೬೮೩-೭
- ↑ ಲೆಸ್ನೇ ಎ. ಡುಟೆಂಪಲ್, The Hoover Dam . ಲರ್ನರ್ ಪಬ್ಲಿಕೇಷನ್ಸ್, ೨೦೦೩, p.೭.
- ↑ ಆಂಡ್ರ್ಯು ಜೆ. ಡುನರ್, ಡೆನ್ನಿಸ್ ಮೆಕ್‌ಬ್ರಿಡ್, Building Hoover Dam: an oral history of the Great Depression . University of Nevada Press, ೨೦೦೧, pp. ೯೭-೧೦೦. ISBN ೧-೫೮೬೪೮-೬೮೩-೭
- ↑ ಸ್ಟೀವನ್ಸ್, ೧೯೯೦,nb. ಪು.೨೮೨
- ↑ ಸ್ಟೀವನ್ಸ್, ೧೯೯೦, ಪು. ೨೧೩.
- ↑
Stevens, Joseph E. (September 1990). Hoover Dam: An American Adventure (Paperback). University of Oklahoma Press. pp. 193–194. ISBN 0-8061-2283-8.
{{cite book}}
: Cite has empty unknown parameter:|coauthors=
(help) - ↑ http://www.riverlakes.com/hoover_dam_info.htm
- ↑ http://books.nap.edu/html/biomems/jsavage.pdf Archived 2011-06-07 ವೇಬ್ಯಾಕ್ ಮೆಷಿನ್ ನಲ್ಲಿ. John Lucian Savage Biography by Abel Wolman & W. H. Lyles, National Academy of Science, ೧೯೭೮.
- ↑ "Lower Colorado Bureau of Reclamation: Hoover Dam, Facts and Figures". Archived from the original on 2012-05-14. Retrieved 2010-06-09.
- ↑ Bureau of Reclamation: Lower Colorado Region - Hoover Dam: Artwork
- ↑ ೨೨.೦ ೨೨.೧ ಉಲ್ಲೇಖ ದೋಷ: Invalid
<ref>
tag; no text was provided for refs namedtk341
- ↑ ೨೩.೦ ೨೩.೧ True & Kirby, pp.೩೪೨-೩೪೩
- ↑ True & Kirby, p.೩೪೬
- ↑ True & Kirby, p.೩೪೩
- ↑ True & Kirby, p.೩೫೮
- ↑ True & Kirby, p.೩೫೩
- ↑ True & Kirby, pp.೩೫೪-೩೫೬
- ↑ True & Kirby, pp.೩೬೧-೩೬೨
- ↑ ೩೦.೦ ೩೦.೧ ೩೦.೨ ೩೦.೩ "Fatalities at Hoover Dam". Archived from the original on 2011-05-15. Retrieved 2007-11-27.
- ↑ ೩೧.೦ ೩೧.೧ ೩೧.೨ "Fatalities During Construction of Hoover Dam". Retrieved 2007-06-11.
- ↑ ೩೨.೦ ೩೨.೧ "Frequently Asked Questions". US Department of the Interior. 2006-01-30. Archived from the original on 2010-03-23. Retrieved 2008-09-23.
- ↑ ೩೩.೦ ೩೩.೧ ೩೩.೨ http://www.usbr.gov/lc/hooverdam/History/essays/spillways.html Archived 2010-03-14 ವೇಬ್ಯಾಕ್ ಮೆಷಿನ್ ನಲ್ಲಿ. Bureau of Reclamation Hoover Dam Spillways
- ↑ A source that supports April ೧೯೯೯ spillway use only: Is it Hoover Dam or Boulder Dam
- ↑ Edward P. Glenn, Christopher Lee, Richard Felger, Scott Zengel, "Effects of Water Management on the Wetlands of the Colorado River Delta, Mexico", Conservation Biology , Vol. 10, No. 4, pp. 1175-1186, Aug. 1996.
- ↑ Peter H. Gleick, William C. G. Burns, The World's Water , Island Press, 2002, pp. 139.
- ↑ CA Rodriguez, KW Flessa, DL Dettman, "Macrofaunal and isotopic estimates of the former extent of the Colorado River Estuary, upper Gulf of California, Mexico", Journal of Arid Environments , Vol. 49, pp. 183-193, 2001.
- ↑ John C. Schmidt, Robert H. Webb, Richard A. Valdez, G. Richard Marzolf, Lawrence E. Stevens, "Science and Values in River Restoration in the Grand Canyon", BioScience , Vol. 48, No. 9, "Flooding: Natural and Managed", Sep. 1998, pp. 735-747.
- ↑ "Jeffrey P. Cohn, "Resurrecting the Dammed: A Look at Colorado River Restoration", BioScience , Vol. 51, No. 12, pp. 998–1003, Dec. 2001". Archived from the original on 2012-03-11. Retrieved 2010-06-09.
- ↑ W. L. Minckley, Paul C. Marsh, James E. Deacon, Thomas E. Dowling, Philip W. Hedrick, William J. Matthews, Gordon Mueller, "A Conservation Plan for Native Fishes of the Lower Colorado River", BioScience , Vol. 53, No. 3, pp. 219-234, 2003.
- ↑ "Upper Colorado River Endangered Fish Recovery Program, Retrieved Mar. 21, 2009". Archived from the original on 2010-05-30. Retrieved 2010-06-09.
- ↑ Hoover Dam Bypass Project, Schedule. ೨೦೦೮-೧೨-೧೩ರಲ್ಲಿ ಮರು ಸಂಪಾದನೆ ಮಾಡಲಾಗಿದೆ.
- ↑ Hoover Dam Bypass Project, FAQ. Retrieved ೧೧/೦೮/೦೯.
- ↑ Bureau of Reclamation, Crossing Hoover Dam: A Guide for Motorists Archived 2010-05-28 ವೇಬ್ಯಾಕ್ ಮೆಷಿನ್ ನಲ್ಲಿ.. ೨೦೦೮-೧೨-೧೩ರಲ್ಲಿ ಮರು ಸಂಪಾದನೆ ಮಾಡಲಾಗಿದೆ.
- ↑ "ಆರ್ಕೈವ್ ನಕಲು". Archived from the original on 2010-05-27. Retrieved 2010-06-09.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ Hoover, Herbert (1952). The Memoirs of Herbert Hoover: The Cabinet and the Presidency 1920-1933 (First ed.). New York: Macmillan. p. 229. ISBN (unknown).
- ↑ Using Bureau of Labor Statistics calculator and the interval from ೧೯೩೬ to ೨೦೦೮
- ↑ Sigmund, Pete (2006-11-13). "Hoover Dam: A Symbol of Simple Strength". Construction Equipment Guide. Retrieved 2007-01-01.[ಶಾಶ್ವತವಾಗಿ ಮಡಿದ ಕೊಂಡಿ]
- ↑ Bureau of Reclamation FAQ "2,080 megawatts" Archived 2010-03-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ Bureau of Reclamation FAQ "Hoover Dam alone generates more than 4 billion kilowatt-hours a year - enough to serve 1.3 million people" Archived 2010-03-23 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "Bureau of Reclamation". Lake Mead statistics FAQ. U.S. Department of the Interior. Archived from the original on 2016-12-29. Retrieved 2006-08-27.
{{cite web}}
: Cite has empty unknown parameter:|coauthors=
(help); External link in
(help)|authorlink=
- ↑ Picture Perfect.
ಗ್ರಂಥಸೂಚಿ
[ಬದಲಾಯಿಸಿ]- ಡಚೆಮಿನ್, ಮೈಕೇಲ್, “Water, Power, and Tourism: Hoover Dam and the Making of the New West,” California History, ೮೬ (no. ೪, ೨೦೦೯), ೬೦–೭೮. Heavily illustrated.
- True, Jere; Kirby, Victoria Tupper (2009-06-24). Allen Tupper True: An American Artist. San Francisco: Canyon Leap. ISBN 978-0981723815.
{{cite book}}
: Cite has empty unknown parameters:|laydate=
,|nopp=
,|trans_title=
,|laysummary=
,|month=
,|editorn-first=
,|authorn-link=
,|trans_chapter=
,|chapterurl=
,|editorn-link=
,|lastauthoramp=
, and|editorn-last=
(help)
ಬಾಹ್ಯ ಕೊಂಡಿಗಳು
[ಬದಲಾಯಿಸಿ]- Hoover Dam's official website
- Official State of Nevada Tourism Site Archived 2018-06-01 ವೇಬ್ಯಾಕ್ ಮೆಷಿನ್ ನಲ್ಲಿ.
- Hoover Dam: Lonely Lands Made Fruitful Archived 2011-05-28 ವೇಬ್ಯಾಕ್ ಮೆಷಿನ್ ನಲ್ಲಿ.
- Historic Construction Company Project - Hoover Dam
- Hoover Dam at Structurae
- BBC - Hoover Dam, industrial and social history
- Hoover Dam page
- Dams of the Lower Colorado River - Hoover Dam Archived 2006-02-14 ವೇಬ್ಯಾಕ್ ಮೆಷಿನ್ ನಲ್ಲಿ.
- Frank Crowe - Builder of Hoover Dam
- "Boulder Dam" – Part I and Parts III and IV, documentary films from the Prelinger Archives at the Internet Archive.
- Picture of Construction of diversion tunnel #4 and spillway tunnel Archived 2016-03-09 ವೇಬ್ಯಾಕ್ ಮೆಷಿನ್ ನಲ್ಲಿ. which drops sharply to enter diversion tunnel
- Las Vegas and Water in the West Archived 2010-07-14 ವೇಬ್ಯಾಕ್ ಮೆಷಿನ್ ನಲ್ಲಿ. The planning and construction of Hoover Dam is the central focus of this digital library. UNLV Special Collections houses the largest collection of primary materials relating to Hoover Dam.
- PBS American experience - Hoover Dam Archived 2009-09-06 ವೇಬ್ಯಾಕ್ ಮೆಷಿನ್ ನಲ್ಲಿ.
- Pages with script errors
- Pages with reference errors
- CS1 errors: unsupported parameter
- CS1 errors: empty unknown parameters
- CS1 errors: URL
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: redundant parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಸೆಪ್ಟೆಂಬರ್ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: external links
- Pages using duplicate arguments in template calls
- Articles with hatnote templates targeting a nonexistent page
- Pages using infobox NRHP with unknown parameters
- Articles with unsourced statements from August 2009
- ಕಡತ ಕೊಂಡಿಗಳು ಮುರಿದಿರುವ ಪುಟಗಳು
- Articles with unsourced statements from December 2008
- Commons link is locally defined
- ಅಮೆರಿಕನ್ ಆರ್ಕಿಟೆಕ್ಚರ್
- ಆರ್ಟ್ ಡೆಕೊ
- ನೇವಡಾ ಕ್ಲಾರ್ಕ್ ಕೌಂಟಿಯಲ್ಲಿ ಕಟ್ಟಡಗಳು ಮತ್ತು ರಚನೆಗಳು
- ಕೊಲೊರಾಡೊ ನದಿ
- ಅರಿಜೋನಾದಲ್ಲಿನ ಆಣೆಕಟ್ಟುಗಳು
- ನೇವಡಾದಲ್ಲಿನ ಆಣೆಕಟ್ಟುಗಳು
- ಐತಿಹಾಸಿಕ ಸ್ಥಳಗಳ ನ್ಯಾಷನಲ್ ರಿಜಿಸ್ಟರ್ನಲ್ಲಿರುವ ಆಣೆಕಟ್ಟುಗಳು
- ಆರ್ಚ್-ಗ್ರ್ಯಾವಿಟಿ ಆಣೆಕಟ್ಟುಗಳು
- ಐತಿಹಾಸಿಕ ಸಿವಿಲ್ ಎಂಜಿನಿಯರಿಂಗ್ ಲ್ಯಾಂಡ್ಮಾರ್ಕ್ಗಳು
- ಆರಿಜೋನಾದಲ್ಲಿರುವ ಹೈಡ್ರೋಎಲೆಕ್ಟ್ರಿಕ್ ಪವರ್ ಪ್ಲ್ಯಾಂಟ್ಗಳು
- ನೇವಡಾದಲ್ಲಿನ ಹೈಡ್ರೋಎಲೆಕ್ಟ್ರಿಕ್ ಪವರ್ ಪ್ಲ್ಯಾಂಟ್ಗಳು
- ಅರಿಜೋನಾ ಮೊಹೆವ್ ಕೌಂಟಿಯಲ್ಲಿನ ಕಟ್ಟಡಗಳು ಮತ್ತು ರಚನೆಗಳು
- ಆರಿಜೋನಾದಲ್ಲಿರುವ ರಾಷ್ಟ್ರೀಯ ಐತಿಹಾಸಿಕ ಲ್ಯಾಂಡ್ಮಾರ್ಕ್ಗಳು
- ನೇವಡಾದಲ್ಲಿನ ರಾಷ್ಟ್ರೀಯ ಐತಿಹಾಸಿಕ ಲ್ಯಾಂಡ್ಮಾರ್ಕ್ಗಳು
- 1961 ವಾಸ್ತುಶಿಲ್ಪ
- ಅಮೇರಿಕನ್ ರಾಷ್ಟ್ರಾಧ್ಯಕ್ಷರ ಗೌರವಾರ್ಥ ಕಟ್ಟಡಗಳು ಮತ್ತು ಸ್ಮಾರಕಗಳು
- ಅಮೇರಿಕ ಸಂಯುಕ್ತ ಸಂಸ್ಥಾನ
- ವಾಸ್ತುಶಿಲ್ಪ