ಹುಮುಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಹುಮುಸ್ ಬೇಯಿಸಿ ಅರೆದ ಕಡಲೆ ಅಥವಾ ಇತರ ಅವರೆಗಳಿಂದ ತಯಾರಿಸಲಾದ ಒಂದು ಲೆವಂಟೈನ್ ಅದ್ದು ವ್ಯಂಜನ ಅಥವಾ ಸ್ಪ್ರೆಡ್. ಇದಕ್ಕೆ ತಾಹೀನಿ, ಆಲಿವ್ ಎಣ್ಣೆ, ನಿಂಬೆರಸ, ಉಪ್ಪು ಮತ್ತು ಬೆಳ್ಳುಳ್ಳಿಯನ್ನು ಸೇರಿಸಲಾಗುತ್ತದೆ.[೧] ಇದು ಮಧ್ಯ ಪ್ರಾಚ್ಯ ಮತ್ತು ಮೆಡಿಟರೇನಿಯನ್ ಪ್ರದೇಶ, ಜೊತೆಗೆ ವಿಶ್ವದಾದ್ಯಂತ ಮಧ್ಯ ಪ್ರಾಚ್ಯ ಪಾಕಪದ್ಧತಿಯಲ್ಲಿ ಜನಪ್ರಿಯವಾಗಿದೆ. ಉತ್ತರ ಅಮೇರಿಕಾ ಮತ್ತು ಯೂರೋಪ್‍ನಲ್ಲಿನ ಬಹುತೇಕ ಕಿರಾಣಿ ಅಂಗಡಿಗಳಲ್ಲಿ ಇದನ್ನು ಕಾಣಬಹುದು.

ಒಂದು ಕ್ಷುಧಾವರ್ಧಕ ಮತ್ತು ಅದ್ದು ವ್ಯಂಜನವಾಗಿ, ಹುಮುಸ್ ಅನ್ನು ಪಿಟಾದಂತಹ ಫ಼್ಲ್ಯಾಟ್‍ಬ್ರೆಡ್‍ನೊಂದಿಗೆ ಬಡಿಸಲಾಗುತ್ತದೆ. ಇದನ್ನು ಮೇಜ಼ೇಯ ಭಾಗವಾಗಿಯೂ, ಅಥವಾ ಫ಼ಲಾಫ಼ಲ್, ಗ್ರಿಲ್ ಮಾಡಿದ ಕೋಳಿಮಾಂಸ, ಮೀನು ಅಥವಾ ಬದನೆಗೆ ಪಕ್ಕಖಾದ್ಯವಾಗಿ ಬಡಿಸಲಾಗುತ್ತದೆ. ಅಲಂಕರಣಗಳಲ್ಲಿ ಕತ್ತರಿಸಿದ ಟೊಮೇಟೊ, ಸೌತೆಕಾಯಿ, ಕೊತ್ತುಂಬರಿ, ಪಾರ್ಸ್ಲೇ, ಕಂದು ಬರುವಂತೆ ಬೇಯಿಸಿದ ಈರುಳ್ಳಿ, ಸಾಟೆಮಾಡಿದ ಅಣಬೆಗಳು, ಇಡೀ ಕಡಲೆಗಳು, ಆಲಿವ್ ಎಣ್ಣೆ, ಗಟ್ಟಿಯಾಗುವಂತೆ ಬೇಯಿಸಿದ ಮೊಟ್ಟೆಗಳು, ಪ್ಯಾಪ್ರಿಕಾ, ಸೂಮ್ಯಾಕ್, ಫ಼ಲ್, ಆಲಿವ್‍ಗಳು, ಉಪ್ಪಿನಕಾಯಿಗಳು ಮತ್ತು ಪೈನ್ ನಟ್‍ಗಳು ಸೇರಿವೆ. ಮಧ್ಯ ಪ್ರಾಚ್ಯದ ಹೊರಗೆ, ಇದನ್ನು ಕೆಲವೊಮ್ಮೆ ತೊರ್ತೀಯಾ ಚಿಪ್ಸ್ ಅಥವಾ ಕ್ರ್ಯಾಕರ್‌ಗಳೊಂದಿಗೆ ಬಡಿಸಲಾಗುತ್ತದೆ.

ಸಾಂಪ್ರದಾಯಿಕ ಹುಮುಸ್‍ನ ಮುಖ್ಯ ಘಟಕಾಂಶವಾದ ಕಡಲೆಯು ಗಣನೀಯ ಪ್ರಮಾಣದಲ್ಲಿ ನಾರು, ಪ್ರೋಟೀನ್, ಬಿ ವಿಟಮಿನ್‍ಗಳು, ಮ್ಯಾಂಗನೀಸ್ ಮತ್ತು ಇತರ ಪೌಷ್ಟಿಕಾಂಶಗಳನ್ನು ಹೊಂದಿದೆ. ಹುಮುಸ್‍ನ ಪಾಕವಿಧಾನಗಳು ಬದಲಾಗುವುದರಿಂದ ಪೋಷಣೀಯ ವಸ್ತುಗಳೂ ಬದಲಾಗುತ್ತವೆ ಮತ್ತು ಮುಖ್ಯವಾಗಿ ಕಡಲೆಗಳು, ತಾಹೀನಿ ಮತ್ತು ನೀರಿನ ತುಲನಾತ್ಮಕ ಅನುಪಾತಗಳನ್ನು ಆಧರಿಸಿವೆ. ೧೦೦ ಗ್ರಾಮ್ ಹುಮುಸ್ ಸುಮಾರು ೧೭೦ ಕ್ಯಾಲೊರಿ ಒದಗಿಸುತ್ತದೆ ಮತ್ತು ಅನೇಕ ಪೌಷ್ಟಿಕಾಂಶಗಳ ಬಹಳ ಒಳ್ಳೆ ಮೂಲವಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. Sami Zubaida, "National, Communal and Global Dimensions in Middle Eastern Food Cultures" in Sami Zubaida and Richard Tapper, A Taste of Thyme: Culinary Cultures of the Middle East, London and New York, 1994 and 2000, ISBN 1-86064-603-4, p. 35.
"https://kn.wikipedia.org/w/index.php?title=ಹುಮುಸ್&oldid=842314" ಇಂದ ಪಡೆಯಲ್ಪಟ್ಟಿದೆ