ಹಿಲರಿ ಡಫ್‌

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಹಿಲರಿ ಡಫ಼್
Hilary Duff (2009).jpg
ಹಿಲರಿ ಡಫ್
ಹಿನ್ನೆಲೆ ಮಾಹಿತಿ
ಜನ್ಮ ನಾಮ ಹಿಲರಿ ಎರ್ಹಾರ್ಡ್ ಡಫ್
ಶೈಲಿ/ಗಳು ಪಾಪ್, ನೃತ್ಯ, ರಾಕ್
ವೃತ್ತಿಗಳು ನಟಿ, ಗಾಯಕಿ, ಗೀತರಚನಗಾರ್ತಿ, ವಸ್ತ್ರ ವಿನ್ಯಾಸಕಿ, ಚಲನಚಿತ್ರ ನಿರ್ಮಾಪಕಿ, ವಕ್ತಾರೆ
ವಾಧ್ಯಗಳು ಗಾಯನ
ಸಕ್ರಿಯ ವರುಷಗಳು 1997–ಪ್ರಸಕ್ತ
L‍abels ಹಾಲಿವುಡ್, ಬುಯೆನಾ ವಿಸ್ಟಾ
ಜಾಲತಾಣ www.hilaryduff.com/

ಹಿಲರಿ ಎಹಾರ್ಡ್‌ ಡಫ್‌ (ಜನನ: 1987ರ ಸಪ್ಟೆಂಬರ್‌ 28) ಅಮೆರಿಕದ ನಟಿ ಮತ್ತು ರೆಕಾರ್ಡಿಂಗ್‌ ಕಲಾವಿದೆ. ಬಾಲ್ಯದಲ್ಲಿ ಸ್ಥಳೀಯ ರಂಗಮಂದಿರಗಳ ನಾಟಕಗಳು ಮತ್ತು ದೂರದರ್ಶನ ಜಾಹೀರಾತುಗಳಲ್ಲಿ ನಟಿಸಿದ ನಂತರ, ಡಫ್‌ ದೂರದರ್ಶನ ಸರಣಿಯಾದ ಲಿಜ್ಜೀ ಮ್ಯಾಕ್‌ಗುಯಿರ್‌ ನಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿ, ಜನಪ್ರಿಯತೆಯನ್ನು ಪಡೆದುಕೊಂಡಳು. ನಂತರ ಡಫ್‌ ಹಲವು ಚಲನಚಿತ್ರಗಳಲ್ಲಿ ಕಾಣಿಸಿಕೊಂಡಳು. ಅವುಗಳಲ್ಲಿ ಚೀಪರ್‌ ಬೈ ದಿ ಡಜನ್‌ (2003), ದಿ ಲಿಜ್ಜೀ ಮ್ಯಾಕ್‌ಗುಯಿರ್‌ ಮೂವಿ (2003), ಮತ್ತು ಎ ಸಿಂಡರೆಲ್ಲಾ ಸ್ಟೋರಿ (2004) ಗಳಿಕೆಯಲ್ಲಿ ವಾಣಿಜ್ಯಿಕ ಯಶಸ್ಸನ್ನು ಕಂಡವು.

ಮೂರು RIAA-ಪ್ರಮಾಣಿತ ಪ್ಲ್ಯಾಟಿನಮ್‌ ಆಲ್ಬಮ್‌ಗಳ ಬಿಡುಗಡೆಯೊಂದಿಗೆ ಡಫ್‌ ತನ್ನ ಕಲಾಭಂಡಾರವನ್ನು ಪಾಪ್‌ ಸಂಗೀತದಲ್ಲಿ ವಿಸ್ತರಿಸಿದಳು. 2007ರ ಅಂಕಿಅಂಶದ ಪ್ರಕಾರ ಈ ಆಲ್ಬಮ್‌ ವಿಶ್ವಾದ್ಯಂತ ಹದಿಮೂರು ದಶಲಕ್ಷ ಮುದ್ರಿಕೆಗಳಿಗಿಂತ ಹೆಚ್ಚು ಮಾರಾಟವಾಗಿದ್ದವು.[೧] ಅವಳು ಮೊದಲ ಸ್ಟುಡಿಯೊ ಆಲ್ಬಮ್‌, ಮೆಟಾಮೊರ್ಫೊಸಿಸ್‌ (2003) ತ್ರಿವಳಿ ಪ್ಲ್ಯಾಟಿನಮ್‌ ಎಂದು ಪ್ರಮಾಣೀಕರಿಸಲಾಗಿದೆ. ನಂತರ ಅವಳು ಇನ್ನೆರಡು ಪ್ಲ್ಯಾಟಿನಮ್‌ ಆಲ್ಬಮ್‌ಗಳು ಹಿಲರಿ ಡಫ್‌ (2004) ಮತ್ತು ಮೊಸ್ಟ್‌ ವಾಂಟೆಡ್‌ (2005)ಪ್ರಮಾಣೀಕರಿಸಲಾಗಿದೆ. ಡಫ್‌ ತನ್ನ ಮೂರನೇ ಸ್ಟುಡಿಯೊ ಆಲ್ಬಮ್‌ ಡಿಗ್ನಿಟಿ ಯನ್ನು (2007) ಬಿಡುಗಡೆ ಮಾಡಿದಳು. ಅದನ್ನು 2007ರ ಆಗಸ್ಟ್‌ನಲ್ಲಿ ಚಿನ್ನ ಕ್ರಮಾಂಕವೆಂದು ಪ್ರಮಾಣೀಕರಿಸಲಾಗಿತ್ತು[೨] ಮತ್ತು ಎರಡು ಏಕಗೀತೆಗಳಾದ "ವಿದ್‌ ಲವ್‌" ಮತ್ತು ಅವಳ ಈವರೆಗಿನ ಜನಪ್ರಿಯ US ಏಕಗೀತೆ "ಸ್ಟ್ರೇಂಜರ್‌" ಅನ್ನು ಬಿಡುಗಡೆ ಮಾಡಿದಳು. 2008ರ ನವೆಂಬರ್‌‌‌ನಲ್ಲಿ ಅವಳ ಬಿಲ್‌ಬೋರ್ಡ್‌ ಹಾಟ್‌ ಡಾನ್ಸ್‌ ಕ್ಲಬ್‌ ಪ್ಲೇಯಲ್ಲಿ ಮೂರನೆಯ #೧ ಸ್ಥಾನದ ಹಾಡು "ರೀಚ್‌ ಔಟ್‌"ಯೊಂದಿಗೆ ಅವಳ ಅತ್ಯುತ್ತಮ ಶ್ರೇಷ್ಠ ಸಂಕಲನವಾದ ಬೆಸ್ಟ್‌ ಆಫ್‌ ಹಿಲರಿ ಡಫ್‌ ಅನ್ನು ಬಿಡುಗಡೆ ಮಾಡಿದಳು.

ಡಫ್‌ "ಸ್ಟಫ್‌ ಬೈ ಹಿಲರಿ ಡಫ್‌" ಮತ್ತು ಪೆಮ್ಮ್‌ ಫಾರ್‌ DKNY ಜೀನ್ಸ್‌ ಮತ್ತು ಎಲಿಜಬೆತ್‌ ಎರ್ಡನ್‌ನೊಂದಿಗೆ ಎರಡು ವಿಶೇಷ ಸುಗಂಧ ಸಂಗ್ರಹಣೆಗಳು ಸೇರಿದಂತೆ ವಸ್ತ್ರವಿನ್ಯಾಸ ಮಾದರಿಯನ್ನು ಬಿಡುಗಡೆ ಮಾಡಿದಳು. ಮೆಟಿರಿಯಲ್‌ ಗರ್ಲ್ಸ್‌ ಚಲನಚಿತ್ರಕ್ಕಾಗಿ ಡಫ್‌ ಮತ್ತು ಅವಳ ತಾಯಿಯನ್ನು ನಿರ್ಮಾಪಕರು ಎಂದು ಪಟ್ಟಿಮಾಡಲಾಗಿದೆ. ಮುಂದಿನ ಚಲನಚಿತ್ರ ಎಕಾರ್ಡಿಂಗ್ ಟು ಗ್ರೇಟಾ ಕ್ಕೆ ಡಫ್‌ ಕಾರ್ಯನಿರ್ವಾಹಕ ನಿರ್ಮಾಪಕಿಯಾಗುವ ಗೌರವ ಪಡೆದಳು.[೩]

ಬಾಲ್ಯ ಜೀವನ ಮತ್ತು ವೃತ್ತಿ[ಬದಲಾಯಿಸಿ]

ಡಫ್‌ 1987ರ ಸಪ್ಟೆಂಬರ್‌ 28ರಂದು ಟೆಕ್ಸಾಸ್‌ಹಸ್ಟನ್‌ನಲ್ಲಿ ಜನಿಸಿದಳು.[೪] ಡಫ್‌ ಗೃಹಿಣಿ ಮತ್ತು ಚಲನಚಿತ್ರ ನಿರ್ಮಾಪಕಿಯಾಗಿದ್ದ ಸುಸೇನ್‌ ಕೊಲೀನ್‌ (ಕುಟುಂಬದ ಹೆಸರು ಕೋಬ್‌) ಮತ್ತು ದಿನಸಿ ಅಂಗಡಿಗಳ ಸಮೂಹದ ಪಾಲುದಾರನಾಗಿದ್ದ ಪತಿ ರಾಬರ್ಟ್‌ ಎರ್ಹಾರ್ಡ್‌ ಡಫ್‌ರಿಗೆ ಎರಡನೇ ಮಗಳಾಗಿದ್ದಳು. ಕುಟುಂಬದ ಸಿದ್ಧಪಡಿಸಿದ ಆಹಾರದ ಅಂಗಡಿಯ ವ್ಯವಹಾರವನ್ನು ನೋಡಿಕೊಳ್ಳಲು ಹಸ್ಟನ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಅವರು ನೆಲೆಸಿದ್ದರು.[೫] ಅವಳು ಅಕ್ಕ ಹೇಯ್‌ಲಿ ಡಫ್‌ ಸಹ ನಟಿ/ಗಾಯಕಿ ಆಗಿದ್ದಳು. ಡಫ್‌ಳ ತಾಯಿ ಅವಳ ಅಕ್ಕ ಹೇಯ್‌ಲಿಯೊಂದಿಗೆ ನಟನಾ ತರಗತಿಗಳನ್ನು ಪಡೆದುಕೊಳ್ಳಲು ಹಿಲರಿಗೆ ಪ್ರೋತ್ಸಾಹಿಸಿದಳು. ಇದರಿಂದಾಗಿ ಇವರಿಬ್ಬರು ಹಲವು ಸ್ಥಳೀಯ ರಂಗಮಂದಿರ ನಿರ್ಮಾಣಗಳ ಪಾತ್ರಗಳನ್ನು ಗೆಲ್ಲುತ್ತಿದ್ದರು.[೬] ಡಫ್‌ ಸಹೋದರಿಯರು ಅನುಕ್ರಮವಾಗಿ ಎಂಟು ಮತ್ತು ಆರನೇ ವಯಸ್ಸಿನಲ್ಲಿ ಸ್ಯಾನ್‌ ಅಂಟೊನಿಯೊನಲ್ಲಿ ಕೋಲಂಬಸ್‌ ಬಲ್ಲೆಮೆಟ್‌ಯೊಂದಿಗೆ ದಿ ನಟ್‌ಕ್ರ್ಯಾಕರ್‌ ಸುಟ್‌ ಎಂಬ ಬ್ಯಾಲೆಟ್‌ನಲ್ಲಿ ಭಾಗವಹಿಸಿದ್ದರು.[೪] ಅಕ್ಕತಂಗಿಯರು ನಟನೆಯನ್ನು ವೃತ್ತಿಯಾಗಿ ಸ್ವೀಕರಿಸಲು ಉತ್ಸುಕರಾಗಿದ್ದರು. ಹಾಗೇಯೆ ಕ್ರಮೇಣವಾಗಿ ತಮ್ಮ ತಾಯಿಯೊಂದಿಗೆ ಕ್ಯಾಲಿಪೋರ್ನಿಯಾಕ್ಕೆ ಸ್ಥಳಾಂತರಗೊಂಡರು. ಡಫ್‌ನ ತಂದೆ ತಮ್ಮ ವ್ಯವಹಾರವನ್ನು ನೋಡಿಕೊಳ್ಳಲು ಹಸ್ಟನ್‌ನಲ್ಲಿರುವ ಕುಟುಂಬದ ಮನೆಯಲ್ಲಿ ಉಳಿದರು.[೫][೬] ಹಲವು ವರ್ಷಗಳ ಕಾಲ ನಟನಾ ಪರೀಕ್ಷೆ ಮತ್ತು ಬೇಟಿಗಳ ನಂತರ ಡಫ್‌ ಸಹೋದರಿಯರು ಹಲವು ದೂರದರ್ಶನ ಜಾಹೀರಾತುಗಳಲ್ಲಿ ಅಭಿನಯಿಸಿದರು.[೫]

ವೃತ್ತಿಜೀವನ[ಬದಲಾಯಿಸಿ]

ಆರಂಭಿಕ ಕಾರ್ಯಗಳು[ಬದಲಾಯಿಸಿ]

ಪ್ರಾರಂಭದಲ್ಲಿ ಡಫ್‌ ಚಿಕ್ಕ ಪಾತ್ರಗಳನ್ನು ಮಾಡುತ್ತಿದ್ದಳು. 1997ರಲ್ಲಿ ಹಾಲ್‌ಮಾರ್ಕ್‌ ಎಂಟರ್ಟೈನ್‌ಮೆಂಟ್‌ ಪಾಶ್ಚಿಮಾತ್ಯ ಚಿಕ್ಕಸರಣಿ ಟ್ರು ವುಮೆನ್‌ ಯಲ್ಲಿ ಹೆಸರು ಗಳಿಸದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಳು. 1998ರಲ್ಲಿ ಅವಳು ಬರಹಗಾರ-ನಿರ್ದೇಶಕನಾಗಿರುವ ವಿಲ್ಲರ್ಡ್‌ ಕ್ಯಾರೊಲ್‌ನ ಹಾಸ್ಯ ನಾಟಕ ಪ್ಲೇಯಿಂಗ್ ಬೈ ಹಾರ್ಟ್‌ ನಲ್ಲಿ ಹೆಸರು ಗಳಿಸಿರದಪೋಷಕ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾಳೆ. ಅವಳು 1998ರಲ್ಲಿ ಕ್ಯಾಸ್ಪರ್‌ ಮೀಟ್ಸ್‌ ವೆಂಡಿ ಚಲನಚಿತ್ರದಲ್ಲಿ ಮೊದಲ ಬಾರಿಗೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾಳೆ. ಕ್ಯಾಸ್ಪರ್: ಎ ಸ್ಪಿರಿಟೆಡ್ ಬಿಗಿನಿಂಗ್‌ಗೆ Casper: A Spirited Beginning ನೇರವಾಗಿ ವಿಡಿಯೊ ಭಾಗದಲ್ಲಿ, ಕ್ಯಾಸ್ಪರ್‌ ಎನ್ನುವ ಎನಿಮೇಟ್ ಪಾತ್ರದೊಂದಿಗೆ ಸ್ನೇಹ ಬೆಳೆಸುವ ಯುವ ಮಾಟಗಾತಿ ವೆಂಡಿಯ ಪಾತ್ರದಲ್ಲಿ ನಟಿಸಿದ್ದಾಳೆ. ಚಲನಚಿತ್ರವು ಬಿಡುಗಡೆಯಾದರೂ, ಇದಕ್ಕೆ ಉತ್ಸಾಹಿ ವಿಮರ್ಶೆಗಳು ಬಂದಿಲ್ಲ.[೭][೮]

1999ರಲ್ಲಿ ಡಫ್‌ ಕ್ಯಾತ್ಲೀನ್‌ ಕೇನ್‌ ಕಾದಂಬರಿ ಆಧಾರಿತ ದೂರದರ್ಶನ ಚಲನಚಿತ್ರ ದಿ ಸೋಲ್‌ ಕಲೆಕ್ಟರ್‌ ನಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಡಫ್‌ ಚಿತ್ರದಲ್ಲಿ ತನ್ನ ಪಾತ್ರಕ್ಕಾಗಿ "TV ಚಿತ್ರದಲ್ಲಿ ಉತ್ತಮ ಅಭಿನಯ ಅಥವಾ ಪೈಲಟ್(ಯುವ ಪೋಷಕ ನಟಿ)"ಗಾಗಿ ಯಂಗ್‌ ಆರ್ಟಿಸ್ಟ್‌ ಅವಾರ್ಡ್‌ಗೆದ್ದಳು.[೯]

2000ರಲ್ಲಿ NBC ಸಿಟ್ಕಾಮ್‌ನ ಡಾಡಿಯೊಮೊದಲ ಸಂಚಿಕೆಯಲ್ಲಿ ಡಫ್‌ ಮಕ್ಕಳಲ್ಲಿ ಒಬ್ಬಳಾಗಿ ನಟಿಸಿದಾಗ,ಡಫ್ ಖ್ಯಾತಿಯ ಶಿಖರವನ್ನು ಗಂಭೀರವಾಗಿ ಮೊದಲಬಾರಿಗೆ ಏರಿದಳು. ಅವಳೊಂದಿಗೆ ನಟಿಸಿದ ಸಹನಟ ಮಿಚೆಲ್‌ ಚಿಕ್ಲಿಸ್‌ ಇದಕ್ಕೆ ಪ್ರತಿಕ್ರಿಯಿಸಿ, "ನಾನು ಅವಳೊಂದಿಗೆ ಮೊದಲ ದಿನ ಕೆಲಸ ಮಾಡಿದ ನಂತರ, ನನ್ನ ಪತ್ನಿಯ ಬಳಿ 'ಈ ಚಿಕ್ಕ ಹುಡುಗಿ ಮುಂದೊಂದು ದಿನ ಚಿತ್ರ ತಾರೆಯಾಗುವಳು' ಎಂದು ನಾನು ಹೇಳಿದ್ದೇನೆ. ಅವಳು ಸಂಪೂರ್ಣ ನಿರಾತಂಕವಾಗಿ ಹಾಗೂ ನಿಶ್ಚಿಂತೆಯಾಗಿ ಇದ್ದಳು."[೫] ಡ್ಯಾಡಿಯೊ ಪ್ರಸಾರವಾಗುವ ಮೊದಲೇ, ಡಫ್‌ಳನ್ನು ಪಾತ್ರವರ್ಗದಿಂದ ತೆಗೆದುಹಾಕಲಾಯಿತು. ಇದರಿಂದಾಗಿ ಅವಳು ನಟನಾ ವೃತ್ತಿಯಲ್ಲಿ ಮುಂದುವರಿಯಲು ಹಿಂಜರಿದಳು.[೫] ಆದರೂ, ಅವಳ ನಿರ್ವಾಹಕ ಮತ್ತು ತಾಯಿ ಅವಳಿಗೆ ಒತ್ತಾಯಿಸುತ್ತಿದ್ದರು. ಇದಾದ ಒಂದು ವಾರದ ನಂತರ ಅವಳು ಮಕ್ಕಳ ದೂರದರ್ಶನ ಸರಣಿ ಲಿಜ್ಜೀ ಮ್ಯಾಕ್‌ಗುಯಿರ್‌ ನಟನೆ ಪರೀಕ್ಷೆಯಲ್ಲಿ ಯಶಸ್ವಿಯಾದಳು.ಅದರಲ್ಲಿ ಅವಳಿಗೆ ಪ್ರಮುಖ ಪಾತ್ರವಾದ ಅಂದಗೆಟ್ಟ ಸಾಮಾನ್ಯ ದರ್ಜೆಯ ಮಾಧ್ಯಮಿಕ ಶಾಲಾ ಹುಡುಗಿಯ ಪಾತ್ರ ಲಭಿಸಿತ್ತು.[೫] ಹದಿಹರೆಯದವಳಾಗಿ ಅವಳ ಬೆಳವಣಿಗೆಯ ಬಗ್ಗೆ ಪ್ರದರ್ಶನವು ಗಮನ ಕೇಂದ್ರೀಕರಿಸಿತ್ತು.

2001–2003[ಬದಲಾಯಿಸಿ]

ಲಿಜ್ಜೀ ಮ್ಯಾಕ್‌ಗುಯಿರ್‌ ವು ಮೊದಲ ಬಾರಿಗೆ ಡಿಸ್ನಿ ಚ್ಯಾನಲ್‌ನಲ್ಲಿ ಪ್ರಸಾರವಾಯಿತು. ಈ ಪ್ರದರ್ಶನದಲ್ಲಿ ಅವಳ ಅಭಿನಯವು ಏಳು ಮತ್ತು ಹದಿನಾಲ್ಕು ವರ್ಷಗಳ ನಡುವಿನ ಮಕ್ಕಳಲ್ಲಿ ಅತ್ಯಂತ ಜನಪ್ರಿಯವಾಗಿತ್ತು.[೧೦] ಅವಳನ್ನು "ಅನ್ನಟ್ಟೆ ಫುನಿಸೆಲ್ಲೊನ 2002ರ ಆವೃತ್ತಿ" ಎಂದು ನ್ಯೂಯಾರ್ಕ್‌ ಡೈಲಿ ನ್ಯೂಸ್‌ ನ ವಿಮರ್ಶಕ ರಿಚರ್ಡ್‌ ಹಫ್‌ ಕರೆದಿದ್ದರು.[೫] ಡಫ್‌ ಲಿಜ್ಜೀ ಮ್ಯಾಕ್‌ಗುಯಿರ್‌ ಯೊಂದಿಗೆ ತನ್ನ 65 ಸಂಚಿಕೆಗಳ ಒಪ್ಪಂದ ಪೂರ್ಣಗೊಳಿಸಿದ ನಂತರ, ಚಲನಚಿತ್ರಗಳು ಮತ್ತು ABCಯಲ್ಲಿ ಪ್ರಮುಖ ಅವಧಿಯಲ್ಲಿ ಪ್ರಸಾರವಾಗುವ ದೂರದರ್ಶನ ಸರಣಿಗಾಗಿ, ಡಿಸ್ನಿ ಈ ಸಂಸ್ಥೆಯೊಂದಿಗಿನ ಒಪ್ಪಂದವನ್ನು ಮುಂದುವರಿಸಲು ಪರಿಗಣಿಸಿತು. ಆದರೆ ಡಫ್‌ಳಿಗೆ ಸಾಕಷ್ಟು ಸಂಭಾವನೆ ಪಾವತಿಸಲಿಲ್ಲ ಎನ್ನುವುದಕ್ಕಾಗಿ, ಈ ಯೋಜನೆಗಳು ವಿಫಲವಾಯಿತು.[೧೧] ಡಫ್‌ ಅಭಿನಯಿಸಿದ ಡಿಸ್ನಿ ಚ್ಯಾನಲ್‌ ದೂರದರ್ಶನ ಚಲನಚಿತ್ರ ಕ್ಯಾಡೆಟ್‌ ಕೆಲಿ ವು (2002) ಚ್ಯಾನಲ್‌ನ 19-ವರ್ಷಗಳ ಇತಿಹಾಸದಲ್ಲಿ ಅತಿ ಹೆಚ್ಚು ವೀಕ್ಷಿಸಿದ ಕಾರ್ಯಕ್ರಮವಾಗಿದೆ.[೫] ಚಲನಚಿತ್ರದಲ್ಲಿ ಅವಳು ಸ್ವತಂತ್ರ ಮನೋಭಾವದ ಬಾಲಕಿಯಾಗಿ ಸೈನಿಕ ಶಾಲೆಯಲ್ಲಿ ದಾಖಲಾಗಿ ಅಲ್ಲಿನ ಕಟ್ಟುನಿಟ್ಟು ಮತ್ತು ಶಿಸ್ತಿನ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿ ಕಾಣಿಸುವ ಪಾತ್ರದಲ್ಲಿ ನಟಿಸಿದ್ದಾಳೆ.

ಡಫ್‌ಳು ಮೊದಲ ಬಾರಿಗೆ ನಾಟಕ ಆಧಾರಿತ ಚಲನಚಿತ್ರವಾದ ಹ್ಯುಮನ್‌ ನೆಚರ್‌ ನಲ್ಲಿ (2002) ನಟಿಸಿದಳು. ಲಿಜ್ಜೀ ಮ್ಯಾಕ್‌ಗುಯಿರ್‌ ಸರಣಿ ಪ್ರಾರಂಭವಾಗುವ ಸಮಯದಲ್ಲಿ ಚಿತ್ರೀಕರಣವಾದ ಸ್ವತಂತ್ರ ಚಿತ್ರ ಇದಾಗಿತ್ತು. ಈ ಚಿತ್ರವು ಕ್ಯಾನಸ್‌ ಮತ್ತು ಸುಂಡಾನ್ಸ್‌ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು.[೧೨] ಚಾರ್ಲಿ ಕೊಫ್‌ಮ್ಯಾನ್‌ರು ಬರೆದ ಮತ್ತು ಮೈಕಲ್‌ ಗೊಂಡ್ರಿರು ನಿರ್ದೇಶಿಸಿದ ಈ ಚಲನಚಿತ್ರದಲ್ಲಿ ಪ್ಯಾಟ್ರಿಕಿಯಾ ಅರ್ಕ್ವೆಟ್ಟೆ ಮಹಿಳಾ ಪ್ರಕೃತಿಶಾಸ್ತ್ರಜ್ಞೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆ. ಅರ್ಕ್ವೆಟ್ಟೆ ಪಾತ್ರದಲ್ಲಿ ಡಫ್‌ ಕಿರಿಯ ಆವೃತ್ತಿಯಲ್ಲಿ ನಟಿಸಿದ್ದಾಳೆ. ಅದೇ ವರ್ಷ ಡಫ್‌ ಲಿಜ್ಜೀ ಮ್ಯಾಕ್‌ಗುಯಿರ್‌ ಮುದ್ರಿಕೆಗಾಗಿ ಬ್ರೂಕ್‌ ಮ್ಯಾಕ್‌ಕ್ಲೈಮೊಂಟ್‌ಹೊಸ ಆವೃತ್ತಿ"ಐ ಕಾನ್ಟ್‌ ವೆಯ್ಟ್‌" ಮತ್ತು ಮೊದಲ ಡಿಸ್ನಿಮೆನಿಯಾ ಸಂಕಲನ ಆಲ್ಬಮ್‌ಗಾಗಿ "ದಿ ಟಿಕಿ ಟಿಕಿ ಟಿಕಿ ರೂಮ್‌" ಧ್ವನಿಮುದ್ರಿಸಿದಳು. ಕ್ರಿಸ್ಮಸ್‌ ಹಾಡುಗಳ ಸಂಗ್ರಹವಾದ ಸಾಂಟಾ ಕ್ಲಾಸ್‌ ಲೇನ್‌ ವು (2002) ಅವಳ ಮೊದಲ ಆಲ್ಬಮ್‌ ಆಗಿತ್ತು. ಇದು ಅವಳ ಸಹೋದರಿ ಹೇಲೀ, ಲಿಲ್‌' ರೊಮಿಯೊ, ಮತ್ತು ಕ್ರಿಸ್ಟಿನಾ ಮಿಲಿಯನ್‌ಯೊಂದಿಗೆ ಯುಗಳಗೀತೆಗಳನ್ನು ಒಳಗೊಂಡಿತ್ತು. ಡಿಸ್ನಿ ಚ್ಯಾನಲ್‌ನ "ಟೆಲ್‌ ಮಿ ಎ ಸ್ಟೋರಿ (ಎಬೌಟ್‌ ದಿ ನೈಟ್‌ ಬಿಫೋರ್‌)" ಏಕಗೀತೆಯ ಜತೆಯಲ್ಲಿ ಇದು U.S. ಬಿಲ್‌ಬೋರ್ಡ್‌ 200 ಆಲ್ಬಮ್‌ಗಳ ಪಟ್ಟಿಯಲ್ಲಿ 154ನೇ ಸ್ಥಾನವನ್ನು ಪಡೆದುಕೊಂಡಿತು ಮತ್ತು ಇದನ್ನು ಚಿನ್ನದ ಕ್ರಮಾಂಕದಲ್ಲಿ ಪ್ರಮಾಣೀಕರಿಸಲಾಗಿತ್ತು.[೧೩][೧೪]

2003ರಲ್ಲಿ ಡಫ್‌ ಎಜೆಂಟ್‌ ಕೋಡಿ ಬ್ಯಾಂಕ್ಸ್‌ ನಲ್ಲಿ ಫ್ರ್ಯಾಂಕಿ ಮುನಿಜ್‌ನೊಂದಿಗೆ ನಟಿಸುವ ಮೂಲಕ ಚಲನಚಿತ್ರದಲ್ಲಿ ಅವಳಿಗೆ ದೊರೆತ ಮೊದಲ ಪ್ರಮುಖ ಪಾತ್ರವಾಗಿದೆ. ಈ ಚಲನಚಿತ್ರವು ಉತ್ತಮ ಸಕಾರಾತ್ಮಕ ವಿಮರ್ಶೆಗಳನ್ನು ಪಡೆಯಿತು ಮತ್ತು ಅದರ ಮುಂದಿನ ಭಾಗಳನ್ನು ತಯಾರಿಸುವಷ್ಟು, ಯಶಸ್ವಿಯಾಯಿತು. ಮತ್ತು ಅವುಗಳಲ್ಲಿ ಡಫ್‌ ಪಾತ್ರವಹಿಸಲಿಲ್ಲ. ಅದೇ ವರ್ಷ ಡಫ್‌ ದಿ ಲಿಜ್ಜೀ ಮ್ಯಾಕ್‌ಗುಯಿರ್‌ ಮೂವಿ ಯಲ್ಲಿ ಲಿಜ್ಜೀ ಮ್ಯಾಕ್‌ಗುಯಿರ್‌ನ ತನ್ನ ಪಾತ್ರವನ್ನು ಪುನರಾವರ್ತಿಸಿದಳು. ಇದಕ್ಕೆ ಜನರಿಂದ ಮಿಶ್ರಪ್ರತಿಕ್ರಿಯೆ ವ್ಯಕ್ತವಾಯಿತು. ಕೆಲವು ವಿಮರ್ಶಕರು ಇದನ್ನು, "ಸ್ಪೀಯರ್ಸ್‌ಗೆ ಕ್ರಾಸ್‌ವರ್ಡ್ಸ್‌ ಇದ್ದಂತೆ, ಡಫ್‌ಳ ಪ್ರತಿಷ್ಠೆ ಯಾವುದೇ ಮುಜುಗರವಿಲ್ಲದೆ ಪ್ರಚಾರವಾಯಿತು" ಎಂದು ಬರೆಯಲಾಗಿತ್ತು.[೧೫] ಇತರ ವಿಮರ್ಶೆಗಳು ಸಕಾರಾತ್ಮಕವಾಗಿದ್ದು, ಉತ್ತೇಜಕವಾಗಿದ್ದವು.[೧೬][೧೭] ಆ ವರ್ಷದ ನಂತರ ಡಫ್‌ ಚೀಪರ್‌ ಬೈ ದಿ ಡಜನ್‌ ಎನ್ನುವ ಕೌಟುಂಬಿಕ ಚಲನಚಿತ್ರದಲ್ಲಿ ಸ್ಟೀವ್‌ ಮಾರ್ಟಿನ್‌ ಮತ್ತು ಬೊನೀ ಹಂಟ್‌ರ 12 ಮಕ್ಕಳಲ್ಲಿ ಒಬ್ಬಳಾಗಿ ನಟಿಸಿದಳು. ಇದು ಡಫ್‌ ನಟಿಸಿದ ಚಿತ್ರಗಳಲ್ಲಿ ಅತಿ ಹೆಚ್ಚು ಆದಾಯ ತಂದುಕೊಟ್ಟ ಚಿತ್ರವಾಗಿದೆ.[೧೮] ಚೀಪರ್‌ ಬೈ ದಿ ಡಜನ್‌ 2 ನ (2005) ಮುಂದುವರಿದ ಭಾಗದಲ್ಲಿ ಅವಳು ಪಾತ್ರವನ್ನು ಪುನರಾವರ್ತಿಸಿದಳು. ಇದು ಮೂಲ ಚಿತ್ರದಂತೆ ಯಶಸ್ವಿಯಾಗಲು ವಿಫಲವಾಯಿತು ಮತ್ತು ಇದು ವಿಮರ್ಶಕರಿಂದ ಟೀಕೆಗೆ ಗುರಿಯಾಯಿತು.[೧೯]

ಡಫ್‌ಳ ಮೊದಲ ಪೂರ್ಣ-ಉದ್ದದ ಸ್ಟುಡಿಯೊ ಆಲ್ಬಮ್‌ ಮೆಟಾಮೊರ್ಫೊಸಿಸ್‌ (2003) U.S. ಮತ್ತು ಕೇನಡಿಯನ್‌ ಪಟ್ಟಿಗಳಲ್ಲಿ ಮೊದಲನೇ ಸ್ಥಾವನ್ನು ಪಡೆದುಕೊಂಡಿತು[೨೦] ಮತ್ತು 2005ರ ಮೇ ಅಂಕಿಅಂಶದ ಪ್ರಕಾರ ಇದರ 3.7 ದಶಲಕ್ಷ ಪ್ರತಿಗಳು ಮಾರಾಟವಾಗಿತ್ತು .[೨೧] "ಸೊ ಯಸ್ಟರ್‌ಡೇ" (ದಿ ಮೆಟ್ರಿಕ್ಸ್‌ ಸಹ-ಸಾಹಿತ್ಯ ಮತ್ತು ನಿರ್ಮಾಣ) ಎನ್ನುವ ಪ್ರಮುಖ ಏಕಗೀತೆ , ಹಲವು ದೇಶಗಳಲ್ಲಿ ಜನಪ್ರಿಯ ಹತ್ತು ಹಾಡುಗಳ ಪೈಕಿ ಒಂದೆನಿಸಿತ್ತು;[೨೨] ಲಗುನಾ ಬೀಚ್‌ ಆವರ್ತಕ ರಾಗದ ಹಾಡು "ಕಮ್‌ ಕ್ಲೀನ್‌" ಇದರ ನಂತರದ ಸ್ಥಾನವನ್ನು ಪಡೆದಿತ್ತು. "ಲಿಟಲ್‌ ವಾಯಿಸ್‌" ಎನ್ನುವ ಮೂರನೇ ಏಕಗೀತೆ U.S.ನಲ್ಲಿ ಬಿಡುಗಡೆಯಾಗಲಿಲ್ಲ ಮತ್ತು ಇದು ಆಸ್ಟ್ರೇಲಿಯಾದಲ್ಲಿ ಚಿಕ್ಕ ಪ್ರಮಾಣದ ಯಶಸ್ಸು ಕಂಡಿತು.[೨೩] 2003ರ ಕೊನೆಯಲ್ಲಿ ಡಫ್‌ ತನ್ನ ಮೊದಲ ಸಂಗೀತ ಗೋಷ್ಠಿ ಪ್ರವಾಸವಾದ ಮೆಟಾಮೊರ್ಫೊಸಿಸ್‌ ಪ್ರವಾಸ ಆರಂಭಿಸಿದಳು ಮತ್ತು ನಂತರ ಮೊಸ್ಟ್‌ ವಾಂಟೆಡ್‌ ಪ್ರವಾಸ ಕೈಗೊಂಡಳು. ಹೆಚ್ಚಿನ ಪ್ರದರ್ಶನವನ್ನು ಪ್ರಮುಖ ನಗರಗಳಲ್ಲಿ ನಿಗದಿಪಡಿಸಿದ್ದು, ಅದರ ಟಿಕೇಟುಗಳು ಸಂಪೂರ್ಣವಾಗಿ ಮಾರಾಟವಾಗಿದ್ದವು.[೨೪]

ಡಫ್‌ ದೂರದರ್ಶನ ಪ್ರದರ್ಶನಗಳಲ್ಲಿ ಹಲವು ಬಾರಿ ಅತಿಥಿ ನಟಿಯಾಗಿ ಕಾಣಿಸಿಕೊಂಡಿದ್ದಾಳೆ. 2000ರ ಮಾರ್ಚ್‌ನಲ್ಲಿ ಅವಳ ವೈದ್ಯಕೀಯ ನಾಟಕ ಚಿಕಾಗೊ ಹೋಪ್‌ ದಲ್ಲಿ ಮೊದಲ ಬಾರಿಗೆ ರೋಗಪೀಡಿತ ಮಗುವಿನ ಪಾತ್ರದಲ್ಲಿ ನಟಿಸಿದ್ದಳು.[೨೫] 2003ರಲ್ಲಿ ಜಾರ್ಜ್‌ ಲೋಪೆಜ್‌ ನ ಸಂಚಿಕೆಯಲ್ಲಿ ಅವಳು ಸೌಂದರ್ಯ ಸಾಧನಗಳ ಮಾರಾಟಗಾರ್ತಿಯಾಗಿ ನಟಿಸಿದ್ದಳು; ಮತ್ತೆ 2005ರಲ್ಲಿ ಕೆಂಜೀ ಪಾತ್ರದಲ್ಲಿ ಅವಳು ಪುನಃ ಕಾಣಿಸಿಕೊಂಡಳು. ಕಾರ್ಮೆನ್ (ಮಸೀಲಾ ಲುಶಾ)ಪಾತ್ರದ ಮಹಿಳಾ ಕವಯತ್ರಿ ಸ್ನೇಹಿತೆಯಾಗಿ ಅವಳು ಪಾತ್ರವಹಿಸಿದಳು. 2003ರಲ್ಲಿ ಅವಳು ಅಮೆರಿಕನ್‌ ಡ್ರೀಮ್ಸ್‌ ನಲ್ಲಿ ತನ್ನ ಸಹೋದರಿ ಹೈಲಿಗೆ ಎದುರಾದ ಪಾತ್ರದಲ್ಲಿ ನಟಿಸಿದಳು. 2005ರಲ್ಲಿ ಪ್ರಮುಖ ಪಾತ್ರ ಜೋನ್ ಆಫ್ ಅರ್ಕಾಡಿಯಾ ನ ಸಹಪಾಠಿ ಮತ್ತು ಆ ಪಾತ್ರದ ಬಗ್ಗೆ ಕುರುಡು ಅಭಿಮಾನ ಹೊಂದಿದ ಪಾತ್ರದಲ್ಲಿ ನಟಿಸಿದಳು.

2004–2006[ಬದಲಾಯಿಸಿ]

ಉತ್ತರ ಕ್ಯಾರೋಲಿನಾದ ಫಾಯೆಟ್ಟೆವಿಲ್ಲೆಯಲ್ಲಿ ಸೈನಿಕ ಕುಟುಂಬಗಳಿಗಾಗಿ ಡಫ್‌ ನಡೆಸಿಕೊಟ್ಟ ವಾರ್ಷಿಕ ಗೋಷ್ಠಿಗೆ ಮುಂಚಿತವಾಗಿ ಅಭಿಮಾನಿಯೊಬ್ಬನೊಂದಿಗೆ ಢಫ್ ಛಾಯಾಚಿತ್ರಕ್ಕೆ ನೀಡಿದ ಭಂಗಿ.

ಡಫ್‌ನ ಎರಡನೇ ಪೂರ್ಣ ಅಳತೆಯ ಆಲ್ಬಮ್‌ ಅವಳದ್ದೆ ಹೆಸರಿನ ಹಿಲರಿ ಡಫ್‌ ಆಗಿತ್ತು. ಇದಕ್ಕಾಗಿ ಕೆಲವು ಹಾಡುಗಳಿಗೆ ಡಫ್‌ ಸಹ-ಸಾಹಿತ್ಯ ನೀಡಿದ್ದಾಳೆ.[೨೬] ಈ ಆಲ್ಬಮ್‌ ಅವಳ ಹದಿನೇಳನೇ ಜನ್ಮದಿನದಂದು (2004 ಸಪ್ಟೆಂಬರ್‌ನಲ್ಲಿ) ಬಿಡುಗಡೆಯಾಯಿತು ಮತ್ತು U.S.ನಲ್ಲಿ #2ನೇ ಮತ್ತು ಕೆನಡಾದಲ್ಲಿ #1 ಸ್ಥಾನವನ್ನು ಪಡೆದುಕೊಂಡಿತು. ಕೇವಲ ಆಲ್ಬಮ್‌ನ ಏಕಗೀತೆಫ್ಲೈ ಹಾಡಿನೊಂದಿಗೆ U.S.ನಲ್ಲಿ ಎಂಟು ತಿಂಗಳಲ್ಲಿ 1.5 ದಶಲಕ್ಷಕ್ಕೂ ಹೆಚ್ಚಿನ ಪ್ರತಿಗಳು ಮಾರಾಟವಾಗಿದ್ದವು.[೨೧]

2004ರಲ್ಲಿ ಡಫ್‌ ಭಾವಪ್ರಧಾನ ಹಾಸ್ಯ ಚಿತ್ರವಾದ ಎ ಸಿಂಡರೆಲ್ಲಾ ಸ್ಟೋರಿ ಯಲ್ಲಿ ನಟಿಸಿದಳು. ಚಿತ್ರಕ್ಕೆ ಹೆಚ್ಚಾಗಿ ಋಣಾತ್ಮಕ ವಿಮರ್ಶೆಗಳು ಬಂದರೂ ಸಹ ಚಲನಚಿತ್ರವು ಸಾಧಾರಣ ಗಲ್ಲಾ ಪೆಟ್ಟಿಗೆ ಯಶಸ್ಸನ್ನು ಗಳಿಸಿತು. ವಿಮರ್ಶಕರು ಡಫ್‌ನ ಅಭಿನಯವನ್ನು ಮೆಚ್ಚಿಕೊಂಡರು.[೨೭] ಆ ವರ್ಷದ ನಂತರ, ಅವಳು ರೈಸ್‌ ಯುವರ್‌ ವಾಯಿಸ್‌ ನಲ್ಲಿ ನಟಿಸಿದಳು. ಅದು ಅವಳ ನಾಟಕಾಧಾರಿತ ಚಲನಚಿತ್ರದಲ್ಲಿ ಅಭಿನಯಿಸುತ್ತಿರುವ ಮೊದಲ ಪಾತ್ರವಾಗಿತ್ತು. ಅವಳ ಹಿಂದಿನ ಚಲನಚಿತ್ರಗಳಗಿಂತ ಹೆಚ್ಚು ಪ್ರಬುದ್ಧ ಮತ್ತು ಗಂಭೀರ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾಳೆಂದು ವಿಮರ್ಶೆಗಳಲ್ಲಿ ಹೊಗಳಿದರೆ, ಚಲನಚಿತ್ರ ಸ್ವತಃ ಟೀಕೆಗೊಳಗಾಯಿತು.[೨೮] ಹಲವು ವಿಮರ್ಶೆಗಳು ಡಫ್‌ಳ ಅಭಿನಯದ ಬಗ್ಗೆ ಉದಾಸೀನ ಮನೋಭಾವ ತಾಳಿದ್ದರು. ವಿಶೇಷವಾಗಿ ಅವಳ ಧ್ವನಿಯ ಬಗ್ಗೆ ಕಟುವಾದ ವಿಮರ್ಶೆ ಬರೆದಿರುವ ಅವರು, ಡಿಜಿಟಲ್‌ ತಂತ್ರಜ್ಞಾನದ ಮೂಲಕ ಹೆಚ್ಚಿಸಿದ ಧ್ವನಿಯಂತೆ ಕಂಡುಬಂದ ಬಗ್ಗೆ ಗಮನಸೆಳೆದಿದ್ದರು.[೨೯][೩೦][೩೧][೩೨] ಅದೇ ವರ್ಷ, ಡಫ್‌ ರೈಸ್‌ ಯುವರ್‌ ವಾಯಿಸ್‌ ಮತ್ತು ಎ ಸಿಂಡರೆಲ್ಲಾ ಸ್ಟೋರಿ ನಲ್ಲಿ ತನ್ನ ಪಾತ್ರಗಳಿಗಾಗಿ ಮೊದಲ ಬಾರಿಗೆ ಕೆಟ್ಟ ನಟನೆಗಾಗಿ ರಾಜೀ ನಾಮನಿರ್ದೇಶನ ಪಡೆದಳು.[೩೩]

2005ರಲ್ಲಿ ಡಫ್‌ ದಿ ಪರ್ಫೆಕ್ಟ್‌ ಮ್ಯಾನ್‌ ನಲ್ಲಿ ನಟಿಸಿದಳು. ಇದರಲ್ಲಿ ಅವಳು ವಿಚ್ಛೇದಿತ ಮಹಿಳೆಯ (ಹೀದರ್‌ ಲಾಕ್‌ಲೀಯರ್‌) ಹಿರಿಯ ಮಗಳ ಪಾತ್ರದಲ್ಲಿ ನಟಿಸಿದ್ದಾಳೆ. ಅದೇ ವರ್ಷದಲ್ಲಿ, ಡಫ್‌ ಮತ್ತೆ ದಿ ಪರ್ಫೆಕ್ಟ್‌ ಮ್ಯಾನ್‌ ಮತ್ತು ಚೀಪರ್‌ ಬೈ ದಿ ಡಜನ್‌ 2 ಚಿತ್ರಗಳಲ್ಲಿನ ಅಭಿನಯಕ್ಕಾಗಿ ರಾಜೀ ಅವಾರ್ಡ್‌ಗೆ ನಾಮನಿರ್ದೇಶನಗೊಂಡಳು.[೩೪] 2006ರಲ್ಲಿ ಅವಳು ವಿಡಂಬನ ಹಾಸ್ಯಚಿತ್ರ ಮೆಟಿರಿಯಲ್‌ ಗರ್ಲ್ಸ್‌ ದಲ್ಲಿ ತನ್ನ ಸಹೋದರಿ ಹೈಲಿ ಡಫ್‌ಳೊಂದಿಗೆ ಕಾಣಿಸಿಕೊಂಡಿದ್ದಾಳೆ.[೩೫] ಚಲನಚಿತ್ರದಲ್ಲಿ ಡಫ್‌ ತನ್ನ ಸಹೋದರಿ ಹೈಲೀಯೊಂದಿಗೆ ರಾಜೀ ಪ್ರಶಸ್ತಿಗಳಿಗಾಗಿ ಎರಡು ನಾಮನಿರ್ದೇಶನಗಳನ್ನು ಪಡೆದಳು.[೩೬]

ಡಫ್‌ಳ ಮೂರನೇ ಆಲ್ಬಮ್‌ ಮೊಸ್ಟ್‌ ವಾಂಟೆಡ್‌ (2005) ಅವಳ ಹಿಂದಿನ ಎರಡು ಆಲ್ಬಮ್‌ಗಳಿಂದ ಮತ್ತು ಹೊಸ ಧ್ವನಿಮುದ್ರಿಕೆ ಆವೃತ್ತಿಗಳಿಂದ ನೆಚ್ಚಿನ ದ್ವನಿಮುದ್ರಿಕೆಗಳನ್ನು ಒಳಗೊಂಡಿದೆ. ಅವಳ ಹೊಸ ಹಾಡುಗಳು ದಿ ಕಿಲ್ಲರ್ಸ್‌ ಮತ್ತು ಮ್ಯುಸ್‌ರಂತಹ ಪಾಪ್‌-ರಾಕ್‌ ಸಂಗೀತಗಾರರಿಂದ ಸ್ಪೂರ್ತಿಗೊಂಡಿದೆ.[ಸೂಕ್ತ ಉಲ್ಲೇಖನ ಬೇಕು] ಟೋಟಲ್‌ ರಿಕ್ವಿಸ್ಟ್‌ ಲೈವ್‌ ನಲ್ಲಿ ಕಾಣಿಸಿಕೊಂಡಿದ್ದಕ್ಕಾಗಿ, ಅದೊಂದು ಅತ್ಯಂತ ಯಶಸ್ವಿ ಆಲ್ಬಮ್‌ ಅಲ್ಲ ಎಂದು ಡಫ್‌ ಹೇಳಿದಳು. ಆದರೆ ಅವಳ ಸಂಗೀತ ಕಂಪೆನಿಯು ಅದು ಹೊಸ ಆಲ್ಬಮ್‌ ಬಿಡುಗಡೆ ಮಾಡುವ ಸಮಯವೆಂದು ಅವಳಿಗೆ ಹೇಳಿತು.[ಸೂಕ್ತ ಉಲ್ಲೇಖನ ಬೇಕು] ಅವಳ ಹಿಂದಿನ ಬಿಡುಗಡೆಯಾದ ಆಲ್ಬಂಗಳಿಗೆ ಹೋಲಿಸಿದರೆ, ಮೊಸ್ಟ್‌ ವಾಂಟೆಡ್‌ ನಲ್ಲಿ ಅವಳು ಹೆಚ್ಚು ಕ್ರಿಯಾಶೀಲ ನಿಯಂತ್ರಣ ಇರಿಸಿದ್ದಳು.[ಸೂಕ್ತ ಉಲ್ಲೇಖನ ಬೇಕು] ನಿರ್ಮಾಪಕರಾದ ಜೊಯೆಲ್‌ ಮಡೇನ್‌ ಮತ್ತು ಸಹೋದರ ಬೆಂಜಿರೊಂದಿಗೆ ಹೊಸ ವಸ್ತುವಿಗೆ ಸಹ-ಸಾಹಿತ್ಯ ಬರೆದಿದ್ದಾಳೆ. ಅವರಿಬ್ಬರೂ ಗುಡ್‌ ಚಾರ್ಲೊಟ್ಟೆನ ಸದಸ್ಯರಾಗಿದ್ದಾರೆ. ಈ ಆಲ್ಬಮ್‌ ಬಿಲ್‌ಬೋರ್ಡ್‌ 200[೩೭] ನಲ್ಲಿ ಮೊದಲನೇ ಸ್ಥಾನವನ್ನು ಪಡೆದುಕೊಂಡಿದೆ ಮತ್ತು ಕೆನಡಾದಲ್ಲಿ ಮೊದಲ ಬಾರಿಗೆ ಅವಳ ಮೂರನೇ ಪ್ರಥಮ ಕ್ರಮಾಂಕದ ಚೊಚ್ಚಲ ಆಲ್ಬಂ ಎನಿಸಿತು. 2006ರಲ್ಲಿ ಇಟಲಿಯ ಹಾಡುಗಳ ಸಂಗ್ರಹ 4ಎವರ್‌ ಬಿಡುಗಡೆಯಾಯಿತು. ಡಫ್ ತನ್ನ ಮೆಟಿರಿಯಲ್‌ ಗರ್ಲ್ಸ್‌ ಚಲನಚಿತ್ರಕ್ಕಾಗಿ ಹೊಸ ಹಾಡುಗಳನ್ನು ಧ್ವನಿಮುದ್ರಿಸಿದಳು.[೩೮]ಟಿಂಬಲೆಂಡ್‌-ನಿರ್ಮಿಸಿದ ಮಡೊನ್ನಾ ಅವಳ ಸಹೋದರಿಯೊಂದಿಗೆ "ಮೇಟಿರಿಯಲ್‌ ಗರ್ಲ್‌"ನ ಕವರ್ ಆವೃತ್ತಿ ಸಹ ಸೇರಿದೆ.[೩೮]

2007—ಇಂದಿನವರೆಗೆ[ಬದಲಾಯಿಸಿ]

2008ರ ಎಪ್ರಿಲ್‌ನಲ್ಲಿ ಟ್ರಿಬೆಕಾ ಚಲನಚಿತ್ರೋತ್ಸವದಲ್ಲಿ ವಾರ್‌, ಇಂಕ್‌ನ ಪ್ರಥಮ ಪ್ರದರ್ಶನದಲ್ಲಿ ಡಫ್‌

ಅವಳ ಸ್ಟಿಲ್‌ ಮೊಸ್ಟ್‌ ವಾಂಟೆಡ್‌ ಪ್ರವಾಸದ ಅವಧಿಯಲ್ಲಿ ಅವಳು ಮೆಕ್ಸಿಕೊಗೌದಲಜಾರದಲ್ಲಿ ಪ್ರದರ್ಶವನ್ನು ನೀಡಿದಳು. ಸೋಪ್ ಒಪೆರಾ ರೆಬಲ್ಡೆ ದಲ್ಲಿ ಅವಳ ಸಂಕ್ಷಿಪ್ತ ಪ್ರದರ್ಶನವನ್ನು ಚಿತ್ರೀಕರಿಸಲಾಯಿತು. 2007ರಲ್ಲಿ ದಿ ಆಂಡಿ ಮಿಲೊನಕಿಸ್‌ ಶೋ ಮೂರನೇ ಭಾಗದ ಪ್ರಥಮ ಪ್ರದರ್ಶನದಲ್ಲಿ ಅತಿಥಿ ನಟಿಯಾಗಿದ್ದಳು.[೩೯] 2008ರ ಎಪ್ರಿಲ್‌ನಲ್ಲಿ, ಡಫ್‌ಳನ್ನು CW ನೆಟ್‌ವರ್ಕ್‌ನ ಬೆವರ್ಲಿ ಹಿಲ್ಸ್‌, 90210 ಸ್ಪಿನ್‌ಆಫ್‌‌ನಲ್ಲಿ ಪ್ರಮುಖ ಅನ್ನೆ ಮಿಲ್ಸ್‌ ಪಾತ್ರವನ್ನು ಮಾಡುವಂತೆ ಕೇಳಲಾಯಿತು. ಆದರೆ ಡಫ್‌ ಅದನ್ನು ತಿರಸ್ಕರಿಸಿದಳು. ಏಕೆಂದರೆ ಹದಿಹರೆಯದ ಪ್ರಕಾರಗಳಿಗಿಂತ ಹೊರಗಿನ ಇತರ ಯೋಜನೆಗಳನ್ನು ಎದುರುನೋಡುವುದರಲ್ಲಿ ಅವಳು ಹೆಚ್ಚು ಆಸಕ್ತಿವಹಿಸಿದ್ದಳು.[೪೦][೪೧] ಅವಳು ನ್ಯೂಯಾರ್ಕ್‌ನ IMG ಮಾಡೆಲ್ಸ್‌ಗೆ ರೂಪದರ್ಶಿಯಾಗಿ ಕೂಡ ಒಪ್ಪಂದ ಮಾಡಿಕೊಂಡಳು.[೪೨]

2007ರಲ್ಲಿ ನಡೆದ ಮಚ್‌ಮ್ಯುಸಿಕ್‌ ವಿಡಿಯೊ ಪ್ರಶಸ್ತಿಗಳ ಸಮಾರಂಭದಲ್ಲಿ ಹಿಲರಿ ಡಫ್‌.

ಡಫ್‌ ತನ್ನ ಮೂರನೇ ಸ್ಟುಡಿಯೊ ಆಲ್ಬಮ್‌ ಡಿಗ್ನಿಟಿ ಗಾಗಿ ಕರಾ ಡಿಯೊಗಾರ್ಡಿರೊಂದಿಗೆ ಸಹ-ಸಾಹಿತ್ಯವನ್ನು ಬರೆದಳು ಮತ್ತು ಡಿಯೋಗಾರ್ಡಿ ಇದನ್ನು ರೆಟ್‌ ಲಾರೆನ್ಸ್‌, ಟಿಮ್‌ ಆಂಡ್ ಬಾಬ್‌, ಮತ್ತು ರಿಚರ್ಡ್‌ ವಿಶನ್‌ನೊಂದಿಗೆ ಸಹನಿರ್ಮಾಣ ಮಾಡಿದರು. ಡಫ್‌ ಆಲ್ಬಮ್‌ನ ಬಗ್ಗೆ ಮಾತನಾಡುತ್ತಾ, ತನ್ನ ಹಿಂದಿನ ಸಂಗೀತಕ್ಕೆ ಹೋಲಿಸಿದರೆ ಇದು "ಹೆಚ್ಚು ನೃತ್ಯಶೈಲಿ"ಯಾಗಿದೆ ಹಾಗೂ ಇದರಲ್ಲಿ ಹೆಚ್ಚಾಗಿ ನೈಜ ಸಂಗೀತ ಸಾಧನಗಳನ್ನು ಬಳಸಿಕೊಳ್ಳಲಾಗಿದೆ ಎಂದು ಹೇಳಿದಳು. ಮುಂದುವರಿಸಿ, "ನಾವು ಆಲ್ಬಮ್‌ನಲ್ಲಿ ಏನು ಮಾಡಿದ್ದೇವೆ ಎಂದು ಕರಾರುವಕ್ಕಾಗಿ ಹೇಳಲಿಕ್ಕಾಗುವುದಿಲ್ಲ, ಆದರೆ ನನಗೆ ಇದೊಂದು ವಿನೋದ ಮತ್ತು ನಾಜೂಕಾದ ವಿಭಿನ್ನ ಮತ್ತು ಸ್ವಲ್ಪ ಹೊಸತನದಿಂದ ಕೂಡಿದೆ. ಇದು ನಿಜವಾಗಲೂ ಸರಾಗವಾದ ಸಂಗೀತದಿಂದ ಕೂಡಿದೆ" ಎಂದು ಹೇಳಿದಳು.[೪೩] 2005 ಕೊನೆಯಲ್ಲಿ, ಡಫ್‌ ಸಹೋದರಿಯರು ಕಂಪ್ಯೂಟರ್ ಎನಿಮೇಟ್ ಮಾಡಿದ ಹಾಸ್ಯ ಚಿತ್ರಕ್ಕೆ ಫೂಡ್‌ಪೈಟ್‌! ಗೆ ತಮ್ಮ ಧ್ವನಿಯನ್ನು ನೀಡಿದರು. ಲಯನ್ಸ್‌ ಗೇಟ್‌ ಎಂಟರ್ಟೈನ್‌ಮೆಂಟ್‌ ಈ ಚಿತ್ರದ ವಿತರಣೆ ಕಾರ್ಯ ನೋಡಿಕೊಂಡಿತು. ಆದರೆ ಅದಕ್ಕೆ ಯಾವುದೇ ಪೂರ್ವನಿಗದಿತ ಬಿಡುಗಡೆ ದಿನಾಂಕವಿರಲಿಲ್ಲ. ಚಲನಚಿತ್ರದ ನಿರ್ದೇಶಕ ಲಾರಿ ಕ್ಯಾಸನೊಫ್‌‌‌‌‌ ಇದರ ಬಗ್ಗೆ ಮಾತನಾಡುತ್ತಾ, "ಚಿತ್ರದ ಪಾತ್ರವರ್ಗದಲ್ಲಿ ಡಫ್‌ ಸಹೋದರಿಯರನ್ನು ಒಳಗೊಂಡಿರುವುದರಿಂದ ತಾವು ಪುಳಕಗೊಂಡಿದ್ದೇನೆ" ಎಂದು ಹೇಳಿದರು.[೪೪] ವಾರ್‌, ಇಂಕ್‌. ನಲ್ಲಿ ಜಾನ್‌ ಕುಸಾಕ್‌ನ ಎದುರು ಡಫ್‌ ನಟಿಸಿದ್ದಾಳೆ. ಇದು 2008 ಮೇ 23ರಲ್ಲಿ ನ್ಯೂಯಾರ್ಕ್‌ನ ಲಾಸ್‌ ಎಂಜೆಲ್ಸ್‌ ಮತ್ತು ಮ್ಯಾನ್‌ಹ್ಯಾಟನ್‌ನಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

2007ರ ಸಪ್ಟೆಂಬರ್‌ 7ರಲ್ಲಿ ಎಕಾರ್ಡಿಂಗ್ ಟು ಗ್ರೇಟಾ ಮತ್ತು ವಾಟ್‌ ಗೋಸ್‌ ಅಪ್‌ ಎಂಬ ಎರಡು ಸ್ವತಂತ್ರ ಚಿತ್ರಗಳ ಚಿತ್ರೀಕರಣ ಮಾಡುವುದಾಗಿಮಚ್‌ಆನ್‌ಡಿಮಾಂಡ್‌ ನಲ್ಲಿ ಖಚಿತಪಡಿಸಿತು.[೪೫] 2008ರ ಜೂನ್‌ನಲ್ಲಿ ಡಫ್‌ ಪೋಲಿಷ್‌ ಸಹೋದರರ ಹಾಸ್ಯ ಚಿತ್ರ ಸ್ಟೇ ಕೂಲ್‌ ನ ಪಾತ್ರವರ್ಗಕ್ಕೆ ಸೇರಿದಳು. ವಿನೊನಾ ರೈಡರ್‌, ಮಾರ್ಕ್‌ ಪೋಲಿಷ್‌, ಸೀನ್‌ ಆಸ್ಟಿನ್‌, ಚೇವಿ ಚೇಸ್‌, ಮತ್ತು ಜೋನ್‌ ಕ್ರಿಯರ್‌ರೊಂದಿಗೆ ಅವಳು ನಟಿಸಿದಳು. ಈ ಚಲನಚಿತ್ರದಲ್ಲಿ ಅವಳು ಶಾಸ್ಟ ಒ'ನೀಲ್‌ ಪಾತ್ರದಲ್ಲಿ ನಟಿಸಿದ್ದಾಳೆ. ಅವಳು ಲೈಂಗಿಕಾಕರ್ಷಣೆಯ ಪ್ರೌಢಶಾಲಾ ಹಿರಿಯ ವಿದ್ಯಾರ್ಥಿನಿಯೆಂದು ಅದರಲ್ಲಿ ಬಣ್ಣಿತವಾಗಿದ್ದು, ಚಿತ್ರವು 2009ರಲ್ಲಿ ಬಿಡುಗಡೆಯಾಗುವುದೆಂದು ನಿಗದಿಪಡಿಸಲಾಗಿದೆ.[೪೬]

2008ರ ನವೆಂಬರ್‌‌‌ನಲ್ಲಿ ಡಫ್‌ಳ ಎರಡನೇ ಯಶಸ್ವಿ ಆಲ್ಬಮ್‌ ಬೆಸ್ಟ್‌ ಆಫ್‌ ಹಿಲರಿ ಡಫ್‌ ಅನ್ನು ಬಿಡುಗಡೆ ಮಾಡಲಾಯಿತು[೪೭] ಮತ್ತು ಡಿಪೆಚೆ ಮೋಡ್‌ನ "ಪರ್ಸನಲ್‌ ಜೀಸಸ್‌" ಮಾದರಿಯಾಗಿರುವ ಆಲ್ಬಮ್‌ನ ಮೊದಲ ಹಾಡು "ರೀಚ್‌ ಔಟ್‌", ಇದರ ಹಿಂದಿನ ತಿಂಗಳು ಬಿಡುಗಡೆಯಾಯಿತು. ಡಫ್‌ಳ #1 ನೇ ಸ್ಥಾನವನ್ನು ಗಳಿಸಿದ ಮೂರನೇ ಯಶಸ್ವಿ ನೃತ್ಯಾಧಾರಿತ ಹಾಡಾಗಿದೆ.[೪೮][೪೯] ಅದರ ನಂತರ ಡಫ್‌ ತನ್ನ ಆರು ವರ್ಷದ ಸೇವೆಯ ನಂತರ ತನ್ನ ಹಾಲಿವುಡ್‌ ರೆಕಾರ್ಡ್ ‌ಕಂಪೆನಿಯನ್ನು ತ್ಯಜಿಸುವುದಾಗಿ ಪ್ರಕಟಿಸಿದಳು.[೫೦] ನಂತರ ಅವಳು MTV ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ, 2008ರ ಡಿಸೆಂಬರ್‌ನಲ್ಲಿ ತನ್ನ ಹೊಸ ಆಲ್ಬಮ್‌ನ ಕಾರ್ಯವು ಪ್ರಾರಂಭವಾಗುವುದು ಎಂದು ಹೇಳಿದಳು.[೫೧]

2009ರ ಜನವರಿಯಲ್ಲಿ ಸ್ವತಂತ್ರ ಚಿತ್ರ‌, ದಿ ಸ್ಟೋರಿ ಆಫ್ ಬೊನೀ ಆಂಡ್ ಕ್ಲೈಡ್‌ , ಬೊನೀ ಆಂಡ್ ಕ್ಲೈಡ್‌ ನ ರೂಪಾಂತರದಲ್ಲಿ ಡಫ್‌ ನಟಿಸುವುದಾಗಿ ಪ್ರಕಟವಾಗಿತ್ತು.[೫೨] 2009ರ ಎಪ್ರಿಲ್‌ನಲ್ಲಿ ವಿಲಿಯಮ್‌ ಗೇರವರು ಬರೆದ ಪ್ರೋವಿಸನ್ಸ್‌ ಆಫ್ ನೈಟ್‌ ಎಂಬ ಪುಸ್ತಕ ಆಧಾರಿತ ಅದೇ ಹೆಸರಿನ ಚಿತ್ರದಲ್ಲಿ ಡಫ್‌ ಚಿತ್ರೀಕರಣವನ್ನು ಪ್ರಾರಂಭಿಸಿದಳು. ಲಂಪಟ, ಮದ್ಯವ್ಯಸನಿ ತಾಯಿಯ ಮಗಳಾದ ಹದಿಹರೆಯದ ಹುಡುಗಿ ರೇವನ್‌ ಹಾಫಾಕೇರ್‌ಳ ಪಾತ್ರದಲ್ಲಿ ಡಫ್‌ ನಟಿಸಿದ್ದಳು.[೫೩] ಡಫ್‌ ಒಲಿವಿಯಾ ಬರ್ಕ್‌ನಂತೆ ಏಳು-ಸಂಚಿಕೆ ಆರ್ಕ್‌ಗೆ ಒಲಿವಿಯಾ ಬುರ್ಕ್ ಪಾತ್ರಕ್ಕೆ ಸಹಿ ಹಾಕಿದಳು. ಗಾಸಿಪ್ ಗರ್ಲ್‌ ನಲ್ಲಿ ಚಿತ್ರನಟಿಯೊಬ್ಬಳು ಸಾಂಪ್ರದಾಯಿಕ ಕಾಲೇಜಿನ ಅನುಭವವನ್ನು ಹುಡುಕುತ್ತಾ NYUಯಲ್ಲಿ ನೋಂದಣಿ ಯಾಗುತ್ತಾಳೆ ಮತ್ತು ವೆನೆಸ್ಸಾನೊಂದಿಗೆ(ಜೆಸಿಕಾ ಶೋರ್‌)ನ ಸಹವಾಸಿಯಾಗುತ್ತಾಳೆ.[೫೪]

2009ರ ಆಗಸ್ಟ್‌‌ನಲ್ಲಿ ಗಿಲ್ ಜಂಗರ್ ನಿರ್ದೇಶಿಸಿದ ಡೇನಿಯಲ್ಲಾ ಬ್ರೊಡ್‌ಸ್ಕಿರವರ "ಡೈರಿ ಆಫ್ ಎ ವರ್ಕಿಂಗ್ ಗರ್ಲ್‌" ಪುಸ್ತಕ ಆಧರಿಸಿದ ಬಾವಪ್ರಧಾನ ಹಾಸ್ಯ ಚಿತ್ರವಾದ ದಿ ಬ್ಯುಸಿನೆಸ್‌ ಆಫ್‌ ಫಾಲಿಂಗ್ ಇನ್‌ ಲವ್‌ ನಲ್ಲಿ ಡಫ್‌ ನಟಿಸುವುದಾಗಿ ಪ್ರಕಟಗೊಂಡಿತು. ಈ ಚಲನಚಿತ್ರವು ABC ಫ್ಯಾಮಿಲಿಗೆ ಕಿರುತೆರೆಗಾಗಿ ಮಾಡಲಾಗಿತ್ತು. ಚಿತ್ರದಲ್ಲಿ ಫ್ಯಾಷನ್ ವರದಿಗಾರ್ತಿ ಪಾತ್ರವನ್ನು ವಹಿಸಿದ್ದಾಳೆ. ಉದ್ಯಮಪ್ರಪಂಚದಲ್ಲಿ ಅಜ್ಞಾತಳಾಗಿ ಪ್ರೀತಿಯನ್ನು ಹುಡುಕುವ ಆಶಯದೊಂದಿಗೆ ಸೂಟ್‌ಗಳನ್ನು ಧರಿಸಿದ ಪುರುಷರ ವಿಹಾರದ ಬಗ್ಗೆ ಲೇಖನ ಬರೆಯುತ್ತಾಳೆ.[೫೫] 2009ರ ಸಪ್ಟೆಂಬರ್‌ನಲ್ಲಿ ಡಫ್‌ ಪೆಮ್ಮ್‌ ಫಾರ್‌ DKNYನಂತೆ DKNY ಜೀನ್ಸ್‌ಯೊಂದಿಗೆ ಎರಡನೇ ವಸ್ತ್ರ ವಿನ್ಯಾಸವನ್ನು ಬಿಡುಗಡೆ ಮಾಡಿದಳು.[೫೬] ಅವಳು ತನ್ನ ವಯಸ್ಸಿನ ಹುಡುಗಿಯರಿಗಾಗಿ ಕಳಚಬಹುದಾದ ಶಿರೋವಸ್ತ್ರಗಳು ಮತ್ತು ಹೊಂದಿಸಬಹುದಾದ ಸೊಂಟಪಟ್ಟಿಯನ್ನು ಹೊಂದಿರುವ ಹೊಸ ರೀತಿಯ ವಸ್ತ್ರ ವಿನ್ಯಾಸವನ್ನು ಮಾಡಲು ನಿರ್ಧರಿಸಿದಳು.[೫೭]

ಉದ್ಯಮಶೀಲತೆ[ಬದಲಾಯಿಸಿ]

2004ರ ಮಾರ್ಚ್‌ನಲ್ಲಿ ಡಫ್‌ ತನ್ನ ವಸ್ತ್ರ ವಿನ್ಯಾಸವಾದ "ಸ್ಟಫ್‌ ಬೈ ಹಿಲರಿ ಡಫ್‌" ಅನ್ನು ಬಿಡುಗಡೆಗೊಳಿಸಿದಳು. ಈ ವಸ್ತ್ರ ವಿನ್ಯಾಸವನ್ನು ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ ಟಾರ್ಗೆಟ್‌ ಸಂಸ್ಥೆ, ಆಸ್ಟ್ರೇಲಿಯಾದಲ್ಲಿ ಕ್ಮಾರ್ಟ್‌ ಸಂಸ್ಥೆ, ಕೆನಡಾದಲ್ಲಿ ಜೆಲ್ಲರ್ಸ್‌ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಎಡ್ಗರ್ಸ್‌ ಸ್ಟೋರ್ಸ್‌ ಸಂಸ್ಥೆಯ ಮೂಲಕ ವಿತರಿಸಲಾಯಿತು. ಆರಂಭದಲ್ಲಿ ಉಡುಪಿನ ವಿನ್ಯಾಸ ಆರಂಭಿಸಿದ ಕಂಪನಿ,ತನ್ನ ವ್ಯವಹಾರವನ್ನು ನಂತರ ಪೀಠೋಪಕರಣ, ಸುಗಂಧ ದ್ರವ್ಯಗಳು ಮತ್ತು ಆಭರಣಗಳ ವ್ಯಾಪಾರಕ್ಕೆ ವಿಸ್ತರಿಸಿತು. ಈ ಸಂಸ್ಥೆಯು ಮುಖ್ಯವಾಗಿ ಹದಿಹರೆಯ ಮತ್ತು ಅವರಿಗಿಂತ ಚಿಕ್ಕವರ ಗುಂಪನ್ನು ಗುರಿಯಿರಿಸಿತ್ತು.[೫೮] 2007ರಲ್ಲಿ Stardoll.com ಎನ್ನುವ ಅಂತರ್ಜಾಲ ವೆಬ್‌ಸೈಟ್‌ನಲ್ಲಿ ಗ್ರಾಹಕರಿಗೆ ಕಾಗದದ ಗೊಂಬೆಗೆ (ಹಿಲರಿ ಡಫ್‌ಳ ಸ್ವಂತ ಗೊಂಬೆ ಸೇರಿದಂತೆ) ಬಟ್ಟೆತೊಡಿಸುವುದಕ್ಕೆ ಅವಕಾಶ ನೀಡುವ ಮೂಲಕ ಡಫ್‌ಳ ವಸ್ತ್ರ ವಿನ್ಯಾಸವನ್ನು ವಿಮರ್ಶಿಸಿದೆ.

2009ರ ಫೆಬ್ರುವರಿಯಲ್ಲಿ, ಡಫ್‌ ಮತ್ತು DKNY ಜೀನ್ಸ್‌ ಸಂಸ್ಥೆಯು ತಮ್ಮ ಸಹಭಾಗಿತ್ವದ ಹೊಸ ವಿನ್ಯಾಸವನ್ನು ಪ್ರಕಟಿಸಿತು ಮತ್ತು ತಮ್ಮ ಸಹಯೋಗದ ಇಡುಪಿನ ಸರಣಿಯನ್ನು ಬಿಡುಗಡೆ ಮಾಡಿದರು. ಡಫ್‌ಳು ಪೆಮ್ಮ್‌ ಫಾರ್‌ DKNY ಜೀನ್ಸ್‌ ಎನ್ನುವ DKNY ಜೀನ್ಸ್‌ ಬ್ರಾಂಡ್‌ನ ವಿಶೇಷ ಉಡುಪುಗಳ ಸಂಗ್ರಹಕ್ಕೆ ಸಹ-ವಿನ್ಯಾಸ ಮಾಡಿದಳು. 2009ರ ಆಗಸ್ಟ್‌ನಲ್ಲಿ ದೇಶಾದ್ಯಂತ ಅಂಗಡಿಗಳು ಮತ್ತು ವಿಶೇಷ ಮಳಿಗೆಗಳಲ್ಲಿ ಪ್ರಥಮ ಬಾರಿಗೆ ತಮ್ಮ ಉಡುಪಿನ ವಿನ್ಯಾಸವನ್ನು ಬಿಡುಗಡೆ ಮಾಡಿತು.[೫೯][೬೦]

2004ರಲ್ಲಿ ಪ್ಲೇಮೇಟ್ಸ್‌ ಟಾಯ್ಸ್‌ ಅವಳ ಪ್ರಸಿದ್ಧ ಗೊಂಬೆಯನ್ನು ಬಿಡುಗಡೆ ಮಾಡಿತು.[೬೧] 2006ರ ಕೊನೆಯಲ್ಲಿ ಮೇಟಲ್‌ಸಂಸ್ಥೆಯು ಹಿಲರಿ ಡಫ್‌ಳ ಬಾರ್ಬಿ ಗೊಂಬೆಯನ್ನು ಬಿಡುಗಡೆ ಮಾಡಿತು. ಹಿಂದೆ ಫ್ಯಾಷನ್ ವಿನ್ಯಾಸಗಾರ್ತಿಯಾಗಿ ಬಾರ್ಬಿ ಗೊಂಬೆಗಳನ್ನು ಡಫ್‌ ವಿನ್ಯಾಸಗೊಳಿಸಿದ್ದಳು[೬೨] ಆಕೆಯ ಗೊಂಬೆಯ ಬಿಡುಗಡೆಯೊಂದಿಗೆ,ಅವಳು ಸ್ವಯಂ ಪ್ರಸಿದ್ಧರ ಗೊಂಬೆ ಹೊಂದಿರುವ ರೀಸ್ ವಿದರ್‍ಸ್ಪೂನ್, ಬೆಯೋನ್ಸೆ ನೋಲೆಸ್ ಮತ್ತು ಲುಸಿಲೆ ಬಾಲ್‌ ಸಾಲಿನಲ್ಲಿ ಸೇರಿದಳು.[೬೨]

2006ರ ಸಪ್ಟೆಂಬರ್‌ನಲ್ಲಿ, ಡಫ್‌ ತನ್ನ "ವಿದ್‌ ಲವ್‌... ಹಿಲರಿ ಡಫ್‌" ಎನ್ನುವ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡಿದಳು. ಇದನ್ನು ಎಲಿಜಬೆತ್‌ ಎರ್ಡನ್‌ ಸಂಸ್ಥೆಯ ವಿತರಿಸಿತು. ಆರಂಭದಲ್ಲಿ ಈ ಸುಗಂಧ ದ್ರವ್ಯವನ್ನು U.S.ನ ಮ್ಯಾಕಿಸ್‌ನಲ್ಲಿ ಮಾತ್ರ ಮಾರಾಟಮಾಡಲಾಗುತ್ತಿತ್ತು. ನಂತರ ಜಪಾನ್‌ ಮತ್ತು ಕೆನಡಾದಂತಹ ಇತರ ದೇಶಗಳಲ್ಲಿ ಮಾರಾಟ ಮಾಡಲಾಯಿತು. "ವಿದ್‌ ಲವ್‌..."ವಿದ್‌ ಲವ್‌...ಹಿಲರಿ ಡಫ್‌"ವು 2006ಯ ಕೊನೆಯ ಅವಧಿಯಲ್ಲಿ U.S. ಮಳಿಗೆಗಳಲ್ಲಿ ಆರಂಭಿಸಿದ ಉತ್ತಮವಾಗಿ ಮಾರಾಟವಾದ ಮೂರು ಸುಗಂಧ ದ್ರವ್ಯಗಳಲ್ಲಿ ಒಂದಾಗಿದೆ. 2007ರಲ್ಲಿ "ರಾಪಡ್‌ ವಿದ್‌ ಲವ್‌" ಎಂಬ ಹೆಸರಿನ ಬೇಸಿಗೆ ಆವೃತ್ತಿಯ ಸುಗಂಧ ದ್ರವ್ಯವನ್ನು ಬಿಡುಗಡೆ ಮಾಡುವುದಾಗಿ ಡಫ್‌ ಪ್ರಕಟಿಸಿದಳು. ಅದು 2008ರ ಜನವರಿಯಲ್ಲಿ ಬಿಡುಗಡೆಯಾಯಿತು ಮತ್ತು ಸ್ಪ್ರಿಂಗ್‌ ಗಿಫ್ಟ್‌ ಸೆಟ್‌ ಆವೃತ್ತಿಯನ್ನು ಪ್ರೇಮಿಗಳ ದಿನದ ಸಮಯದಲ್ಲಿ ಬಿಡುಗಡೆ ಮಾಡಲಾಯಿತು.[೬೩]

ಡಫ್‌ ಮತ್ತು ಅವಳ ಸಾಕುನಾಯಿ ಲೋಲಾ ಎಲೆಕ್ಟ್ರಾನಿಕ್ಸ್‌ ಆರ್ಟ್ಸ್‌ ಆಟದಲ್ಲಿ ಕಾಣಿಸಿಕೊಂಡಿದ್ದರು. The Sims 2: Pets ಈ ಆಟವು 2006ರ ಅಕ್ಟೋಬರ್‌ನಲ್ಲಿ ಬಿಡುಗಡೆಯಾಯಿತು. ಆಟದ ಕನ್ಸೊಲ್‌ ಆವೃತ್ತಿಗಳಲ್ಲಿ, ಡಫ್‌ಳ ಪಾತ್ರವು ಸಾರ್ವಜನಿಕ ಪ್ರದೇಶಗಳಿಗೆ ಭೇಟಿನೀಡುತ್ತದೆ ಮತ್ತು ಆಟಗಾರರ ಅನುಕರಣೆಗಳಿಗೆ ಡಫ್‌ ಮತ್ತು ಲೋಲಾ ಜತೆ ಸ್ನೇಹಪೂರ್ವಕವಾಗಿ ಬೆರೆಯಲು ಅವಕಾಶ ನೀಡುತ್ತದೆ.[೬೪] ಡಫ್‌ ಸೇರಿದಂತೆ,ಖ್ಯಾತನಾಮರಾದ ಪ್ಯಾರಿಸ್‌ ಹಿಲ್ಟನ್‌ ಮತ್ತು ಜೆಸ್ಸಿಕಾ ಸಿಂಪ್ಸನ್‌ರಂತಹ ವ್ಯಕ್ತಿಗಳು ತಮ್ಮ ನಾಯಿಗಳನ್ನು ಮುದ್ದಿನ ಪ್ರಾಣಿಗಿಂತ ಹೆಚ್ಚಾಗಿ ಫ್ಯಾಷನ್ ವಸ್ತುಗಳಂತೆ ಬಳಸುತ್ತಿದ್ದಾರೆ ಎಂದು "ಎನಿಮಲ್‌ ವೆಲ್‌ಫೇರ್‌ ಲೀಗ್‌" ಎನ್ನುವ ಪ್ರಾಣಿ ಹಕ್ಕು ರಕ್ಷಣೆ ಸಂಸ್ಥೆಯು ಟೀಕಿಸಿದೆ.[೬೫]

ಲೋಕೋಪಕಾರ[ಬದಲಾಯಿಸಿ]

ಡಫ್‌ ಹಲವು ದತ್ತಿನಿಧಿಗಳಲ್ಲಿ ತೊಡಗಿಕೊಂಡಿದ್ದು, ಅವಳು ಪ್ರಾಣಿ ಹಕ್ಕುಗಳ ಬೆಂಬಲಿಗಳು ಮತ್ತು ಕಿಡ್ಸ್‌ ವಿದ್‌ ಕಾಸ್‌ ಸಂಸ್ಥೆಯ ಸದಸ್ಯಳಾಗಿದ್ದಾಳೆ.[೬೬] ಅವಳು ಚಂಡಮಾರುತ ಕತ್ರಿನಾದಿಂದ ಸಂತ್ರಸ್ತರಾದವರಿಗೆ ಸಹಾಯ ಮಾಡುವುದಕ್ಕಾಗಿ $250,000ನಷ್ಟು ದೇಣಿಗೆಯನ್ನು ನೀಡಿದಳು.[೬೭] 2005ನಲ್ಲಿ ದಕ್ಷಿಣದಲ್ಲಿ ಚಂಡಮಾರುತ ಕತ್ರಿನಾ ಪ್ರಭಾವಕ್ಕೆ ಒಳಗಾದ ಸಂತ್ರಸ್ತರಿಗೆ ಸುಮಾರು 2.5 ದಶಲಕ್ಷ ಊಟಗಳನ್ನು ದೇಣಿಗೆಯಾಗಿ ನೀಡಿದಳು. 2006ರ ಆಗಸ್ಟ್‌ನಲ್ಲಿ ಡಫ್‌ ನ್ಯೂಒರ್ಲೀನ್ಸ್‌ ಪ್ರಾಥಮಿಕ ಶಾಲೆಗೆ ಹೋಗಿ, ಊಟವನ್ನು ವಿತರಿಸಲು USA ಹಾರ್ವೆಸ್ಟ್‌ನೊಂದಿಗೆ ಕೆಲಸ ಮಾಡಿದಳು.[೬೮] ಅವಳು "ಅಡ್ರೆ ಹೆಪ್ಬರ್ನ್‌ ಚೈಲ್ಡ್‌ ಬೆನೆಫಿಟ್‌ ಫಂಡ್‌"ನ ಸಲಹೆಗಾರರ ಮಂಡಳಿ ಮತ್ತು "ಕಿಡ್ಸ್‌ ವಿದ್‌ ಕಾಸ್‌"ನ ಸೆಲೆಬ್ರಿಟಿ ಮಂಡಳಿಯಲ್ಲಿ ಸಹ ಕೆಲಸ ಮಾಡಿದ್ದಾಳೆ.[೬೯] 2008ರ ಅಕ್ಟೋಬರ್‌ 8ನಲ್ಲಿ, "ದ್ಯಾಟ್ಸ್‌ ಸೊ ಗೇ"ನಂತಹ LGBT ವಿರೋಧಿ ಶಬ್ದಗಳನ್ನು ಯುವಕರು ಬಳಸದಂತೆ ತಡೆಯಲು ಏಡ್‌ ಕೌನ್ಸಿಲ್‌ರ ದಿ ಥಿಂಕ್‌ ಬಿಪೋರ್‌ ಯು ಸ್ಪೀಕ್‌ ಅಭಿಯಾನ‌ ಮತ್ತು GLSENಗಳು ನಡೆಸಿದ ಸಾರ್ವಜನಿಕ ಸೇವೆಯ ಪ್ರಕಟಣೆಯಲ್ಲಿ ಡಫ್‌ ಅಭಿನಯಿಸಿದ್ದಾಳೆ.[೭೦] ಜುಲೈ 2009ರಲ್ಲಿ ಡಫ್ ಕೊಲಂಬಿಯ ರಾಜಧಾನಿ ಬೊಗೊಟಾದ ಮಕ್ಕಳಿಗೆ ಯುವ ರಾಯಭಾರಿಯಾಗಿ ಹೆಸರಿಸಲ್ಪಟ್ಟಳು. ಯುವ ರಾಯಭಾರಿಯಾಗಿ ದೇಶದಲ್ಲಿ ಐದು ದಿನಗಳ ಕಾಲ ಉಳಿದು ಆಹಾರ ತುಂಬಿದ ಬೆನ್ನಿನ ಚೀಲಗಳನ್ನು ಅಗತ್ಯವಾದ ಮಕ್ಕಳಿಗೆ ವಿತರಿಸಲಿದ್ದಾಳೆ.[೭೧]

ಡಫ್‌ ತಾನು ಪ್ರಾಣಿ ಹಕ್ಕುಗಳ ರಕ್ಷಣೆ ಬೆಂಬಲಿಗಳು ಎಂದು ಹಲವು ಬಾರಿ ಹೇಳಿದ್ದಾಳೆ. ಒಂದು ವೇಳೆ ಅವಳು ಪ್ರಸಿದ್ಧ ತಾರೆಯಾಗದಿದ್ದರೆ ಏನಾಗಿರುತ್ತಿದ್ದಳು ಎಂದು ಡಫ್‌ಳಿಗೆ ಪ್ರಶ್ನೆ ಕೇಳಿದಾಗ, "ನಾನು ಚಿಕ್ಕವಳಿದ್ದಾಗ ಸದಾ ಪಶುವೈದ್ಯೆಯಾಗಬೇಕೆಂದು ಬಯಸುತ್ತಿದ್ದೆ. ಆದರೆ ಅಲ್ಲಿ ವಾಸ್ತವವಾಗಿ ಪ್ರಾಣಿಗಳು ಸಾಯುತ್ತವೆ ಎಂದು ನನಗೆ ನಂತರ ತಿಳಿಯಿತು. ಹಾಗಾಗಿ ಅದು ನನಗೆ ಸರಿಯಾದ ವೃತ್ತಿಯಲ್ಲವೆಂದು ಭಾವಿಸಿದೆ. ಮಕ್ಕಳು ಅಥವಾ ಪ್ರಾಣಿಗಳು ಅಥವಾ ಅವುಗಳಂತಿರುವ ಜೀವಿಗಳಲ್ಲಿ ಏನೋ ಒಂದು ವಿಶೇಷತೆ ಇದೆ" ಎಂದು ಹೇಳಿದಳು.[೭೨]

ಸಾರ್ವಜನಿಕ ಪ್ರತಿಷ್ಠೆ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

2006ರ ಜೂನ್‌ನಲ್ಲಿ ಎಲ್ಲೆ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ, "...(ಕನ್ಯತ್ವ)ವು ನನ್ನ ಬಗ್ಗೆ ಖಂಡಿತವಾಗಿ ಇಷ್ಟಪಡುವ ಸಂಗತಿಯಾಗಿದೆ. ಹಾಗಂತ ನಾನು ಲೈಂಗಿಕತೆ ಬಗ್ಗೆ ಯೋಚಿಸಿಲ್ಲವೆಂದಲ್ಲ.ಏಕೆಂದರೆ ನಾನು ತಿಳಿದಿರುವ ಪ್ರತಿಯೊಬ್ಬರೂ ಅದನ್ನು ಅನುಭವಿಸಿದ್ದಾರೆ ಮತ್ತು ನೀವು ಅದಕ್ಕೆ ಹೊಂದಿಕೊಳ್ಳಲು ಬಯಸುತ್ತೀರಿ" ನಂತರ ಡಫ್‌ ಮಚ್‌ಮ್ಯುಸಿಕ್‌ಗೆ ನೀಡಿದ ಸಂದರ್ಶನದಲ್ಲಿ, ತಾನು ಲೇಖನದಲ್ಲಿರುವಂತೆ ಹೇಳಿರಲಿಲ್ಲ ಮತ್ತು ಆ ವಿಷಯವು "ನಾನು ಹೇಳಬೇಕೆಂದಿರುವ ವಿಷಯವನ್ನು..." ಒಳಗೊಂಡಿರಲಿಲ್ಲ ಎಂದು ಹೇಳಿದಳು.[೭೩] 2008ದಲ್ಲಿ ಮ್ಯಾಕ್ಸಿಮ್‌ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಮತ್ತೊಮ್ಮೆ ಈ ಹೇಳಿಕೆಯನ್ನು ನಿರಾಕರಿಸಿದಳು.[೭೪]

2001ರಲ್ಲಿ ಡಫ್‌ ಗಾಯಕ ಅರೋನ್‌ ಕಾರ್ಟರ್‌ನೊಂದಿಗೆ ವಿಹಾರ ನಡೆಸಲು ಪ್ರಾರಂಭಿಸಿದಳು. ಇವರಿಬ್ಬರೂ ಕ್ರಿಸ್ಮಸ್‌ ಸಂಚಿಕೆಗಾಗಿ ಕಾರ್ಟರ್‌ನ ಅತಿಥಿ ಪಾತ್ರ ಮಾಡುತ್ತಿರುವ ಸಮಯದಲ್ಲಿ ಲಿಜ್ಜೀ ಮ್ಯಾಕ್‌ಗುಯಿರ್‌ ಯ ಚಿತ್ರೀಕರಣ ಸ್ಥಳದಲ್ಲಿ ಭೇಟಿಯಾಗುತ್ತಿದ್ದರು. ನಂತರದ ಎರಡು ವರ್ಷಗಳ ನಂತರ ಇವರಿಬ್ಬರ ನಡುವಿನ ಸಂಬಂಧವು ಕೊನೆಗೊಂಡಿತು.[೭೫][೭೬] ಲಿಂಡ್ಸೆ ಲೋಹನ್‌ಳಿಗಾಗಿ ಕಾರ್ಟರ್‌ ಡಫ್‌ಳನ್ನು ಬಿಟ್ಟನು ಎಂದು ವರದಿಯಾಗಿದೆ. ಆದರೆ ಅವನ ಮತ್ತು ಲೋಹನ್‌ ನಡುವಿನ ಸಂಬಂಧ ಕೆಲವೇ ದಿನಗಳಲ್ಲಿ ಮುರಿದುಬಿತ್ತು ಮತ್ತು ಡಫ್‌ಳೊಂದಿಗೆ ವಿಹಾರವನ್ನು ಮುಂದುವರಿಸಿದನು. ನಂತರ ಡಫ್‌ ಆಪ್ತ ಸ್ನೇಹಿತೆ ಜತೆಗೆ ಡಫ್‌ಳಿಗೆ ತಾನು ಮೋಸ ಮಾಡಿರುವುದಾಗಿ ಕಾರ್ಟರ್‌ ಹೇಳಿಕೆ ನೀಡಿದ. ಮತ್ತು ಇದರಿಂದ ಡಫ್‌ಳ "ಹೃದಯ ಒಡೆಯಿತು" ಮತ್ತು ಅವನು ತಾನು ಮಾಡಿದ ತಪ್ಪಿಗಾಗಿ "ಕ್ಷಮೆ" ಯಾಚಿಸುವುದಾಗಿ ಹೇಳಿದ..[೭೭]

2004ರಲ್ಲಿ ಡಫ್‌ ಗುಡ್‌ ಚಾರ್ಲೊಟ್ಟೆ ಗಾಯಕ ಜೊಯೆಲ್‌ ಮಡೇನ್‌ನೊಂದಿಗೆ ವಿಹಾರ ನಡೆಸುವುದನ್ನು ಪ್ರಾರಂಭಿಸಿದಳು.[೭೬] ನಿಯತಕಾಲಿಕೆಯ ದೀರ್ಘಾವಧಿಯ ಊಹಾಪೋಹದ ನಂತರ, 2005ರ ಜೂನ್‌ನಲ್ಲಿ ಸೆವೆನ್ಟೀನ್‌ ನಿಯತಕಾಲಿಕೆಗೆ ನೀಡಿದ ಸಂದರ್ಶನದಲ್ಲಿ ಡಫ್‌ಳ ತಾಯಿ ಸುಸೇನ್‌ ಅವರಿಬ್ಬರ ನಡುವಿನ ಸಂಬಂಧದ ಬಗ್ಗೆ ಪ್ರಕಟಿಸಿದಳು.[೭೮] 2006ರ ನವೆಂಬರ್‌‌‌ನಲ್ಲಿ ಡಫ್‌ ಮತ್ತು ಮಡೇನ್‌ರ ನಡುವಿನ ಸಂಬಂಧ ಮುರಿದುಬಿತ್ತು.[೭೯] ಅದೇ ವರ್ಷ 22 ವರ್ಷಗಳ ವೈವಾಹಿಕ ಜೀವನದ ನಂತರ, ಡಫ್‌ಳ ತಂದೆತಾಯಿಗಳು,ತಂದೆಯ ಕಡೆಯಿಂದ ಉಂಟಾದ ದಾಂಪತ್ಯ ದ್ರೋಹದಿಂದಾಗಿ ಬೇರೆಬೇರೆಯಾದರು. ತನ್ನ ಪೋಷಕರ ಬೇರ್ಪಡುವಿಕೆಯಿಂದಾದ ನೋವನ್ನು ಅವಳು ತನ್ನ ಹಾಡುಗಳಾದ "ಸ್ಟ್ರೇಂಜರ್‌" ಮತ್ತು "ಜಿಪ್ಸಿ ವುಮನ್‌"ನಲ್ಲಿ ಬರೆದಿದ್ದಾಳೆ.[೮೦]

2007ರಲ್ಲಿ ಡಫ್‌ NHL ಆಟಗಾರನಾದ ಮೈಕ್‌ ಕೊಮ್ರೀಯೊಂದಿಗೆ ವಿಹಾರ ನಡೆಸಲು ಪ್ರಾರಂಭಿಸಿದಳು. ಅವಳು ಆಗಾಗ್ಗೆ ಮೈಕ್‌ನ ಆಟಗಳಲ್ಲಿ ಹಾಜರಾಗುತ್ತಿದ್ದಳು. ಡಫ್‌ಳ 20ನೇ ವರ್ಷದ ಹುಟ್ಟುಹಬ್ಬಕ್ಕೆ ಉಡುಗೊರೆಯಾಗಿ ಮರ್ಸಿಡೀಸ್-ಬೆಂಜ್‌ ಅನ್ನು ಕೊಮ್ರೀ ಖರೀದಿ ಮಾಡಿದ.[೮೧]

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

2001

ಚಲನಚಿತ್ರ
ವರ್ಷ ಚಲನಚಿತ್ರ ಪಾತ್ರ ಟಿಪ್ಪಣಿಗಳು
ಹ್ಯುಮನ್‌ ನೆಚರ್‌ ಯಂಗ್‌ ಲೈಲಾ ಜ್ಯುಟ್‌
2003 ಎಜೆಂಟ್‌ ಕೋಡಿ ಬ್ಯಾಂಕ್ಸ್‌ ನಟಾಲಿಯಾ ಕ್ಯಾನೊರ್ಸ್‌
ದಿ ಲಿಜ್ಜೀ ಮ್ಯಾಕ್‌ಗುಯಿರ್‌ ಮೂವಿ ಲಿಜ್ಜೀ ಮ್ಯಾಕ್‌ಗುಯಿರ್‌/ಇಸಾಬೆಲ್ಲಾ ಪರಿಗಿ
ಚೀಪರ್‌ ಬೈ ದಿ ಡಜನ್‌ ಲೊರೈನ್‌ ಬ್ಯಾಕರ್‌
2004 ಎ ಸಿಂಡರೆಲ್ಲಾ ಸ್ಟೋರಿ ಸಮಂಥಾ "ಸ್ಯಾಮ್‌" ಮೊಂಟ್ಗೊಮೆರಿ (ಸಿಂಡರೆಲ್ಲಾ)
ರೈಸ್‌ ಯುವರ್‌ ವಾಯಿಸ್‌ ತೆರೆಸಾ "ಟೆರ್ರಿ" ಫ್ಲೆಚ್ಚರ್‌
2005 ದಿ ಪರ್ಫೆಕ್ಟ್‌ ಮ್ಯಾನ್‌ ಹೋಲಿ ಹ್ಯಾಮಿಲ್ಟನ್‌
ಚೀಪರ್‌ ಬೈ ದಿ ಡಜನ್‌ 2 ಲೊರೈನ್‌ ಬ್ಯಾಕರ್‌
2006 ಮೆಟಿರಿಯಲ್‌ ಗರ್ಲ್ಸ್‌ ಟಾಂಜನಿಯಾ "ಟಾಂಜೀ" ಮರ್ಚೆಟ್ಟಾ ನಿರ್ಮಾಪಕರು ಸಹ
2008 ವಾರ್‌, ಇಂಕ್‌. ಯೋನಿಕಾ ಬಾಬಿಯೀಹ್‌
2009 ವಾಟ್‌ ಗೋಸ್‌ ಅಪ್‌ ಲುಸಿ ಡೈಮಂಡ್‌ 3ನೇ ವಾರ್ಷಿಕ ಬಫೆಲೊ ನಯಾಗಾರ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನ ಕಂಡಿತು
ಎಕಾರ್ಡಿಂಗ್ ಟು ಗ್ರೇಟಾ ಗ್ರೇಟಾ ಕಾರ್ಯಕಾರಿ ನಿರ್ಮಾಪಕ ಸಹ
2010 ಸ್ಟೇ ಕೂಲ್‌ ಶಾಸ್ಟ ಒ'ನೀಲ್‌ 2009ರ ಟ್ರಿಬೆಕಾ ಚಲನಚಿತ್ರೋತ್ಸವ‌ದಲ್ಲಿ ಪ್ರಥಮ ಪ್ರದರ್ಶನ ಕಂಡಿತು
ಪ್ರೋವಿಸನ್ಸ್‌ ಆಫ್ ನೈಟ್‌ ರೇವನ್‌ ಹಾಫ್‌ಎಕ್ರೆ [ನಿರ್ಮಾಣದ ನಂತರದ ಹಂತ] [೮೨]
ದಿ ಸ್ಟೋರಿ ಆಫ್ ಬೊನೀ ಆಂಡ್ ಕ್ಲೈಡ್‌ ಬೊನೀ ಪಾರ್ಕರ್‌ [ನಿರ್ಮಾಣದ ಮುಂಚಿನ ಹಂತ]
ಬಿಡುಗಡೆಯಾಗದ ಫುಡ್‌ಪೈಟ್‌! ಸನ್‌ಶೈನ್‌ ಗುಡ್‌ನೆಸ್‌ (ಧ್ವನಿ ಮಾತ್ರ)

(2002) 2004

ದೂರದರ್ಶನ ಅಥವಾ ವಿಡಿಯೊಗಾಗಿ ಮಾಡಿದ ಚಲನಚಿತ್ರಗಳು
ವರ್ಷ ಶೀರ್ಷಿಕೆ ಪಾತ್ರ ವಿತರಕರು
1998 ಕ್ಯಾಸ್ಪರ್‌ ಮೀಟ್ಸ್‌ ವೆಂಡಿ ವೆಂಡಿ

20ನೇ ಸೆಂಚುರಿ ಫಾಕ್ಸ್‌ ಹೋಮ್‌ ಎಂಟರ್‌ಟೈನ್‌ಮೆಂಟ್‌

1999 ದಿ ಸೋಲ್‌ ಕಲೆಕ್ಟರ್‌ ಎಲಿ CBS
ಕ್ಯಾಡೆಟ್‌ ಕೆಲಿ ಕೆಲಿ

ಡಿಸ್ನಿ ಚ್ಯಾನಲ್‌

ಇನ್‌ ಸರ್ಚ್‌ ಆಫ್‌‌ ಸಂಟಾ

ಕ್ರಿಸ್ಟಲ್‌

ಮಿರಾಮ್ಯಾಕ್ಸ್‌ ಫ್ಯಾಮಿಲಿ ಫಿಲ್ಮ್ಸ್‌
2010 ದಿ ಬಿಸಿನೆಸ್‌ ಆಫ್‌ ಫಾಲಿಂಗ್ ಇನ್‌ ಲವ್‌ ಲೇನ್‌ ಡೆನಿಯಲ್‌ ABC ಫ್ಯಾಮಿಲಿ[೫೫]
ದೂರದರ್ಶನ
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2001–2004 ಲಿಜ್ಜೀ ಮ್ಯಾಕ್‌ಗುಯಿರ್‌ ಲಿಜ್ಜೀ ಮ್ಯಾಕ್‌ಗುಯಿರ್‌ ಪ್ರಮುಖ ಪಾತ್ರ
2009 ಗಾಸಿಪ್‌ ಲವ್‌ ಒಲಿವಿಯಾ ಬರ್ಕ್‌ ಪುನರಾವರ್ತನೆಯಾಗುವ ಪಾತ್ರ (ಭಾಗ 3, ಹಲವು ಸಂಚಿಕೆಗಳು)
ದೂರದರ್ಶನ ಅತಿಥಿ ಪಾತ್ರಗಳು
ವರ್ಷ ಶೀರ್ಷಿಕೆ ಪಾತ್ರ ಟಿಪ್ಪಣಿಗಳು
2000 ಚಿಕಾಗೊ ಹೋಪ್‌ ಜೆಸ್ಸಿ ಸೆಲ್ಡನ್‌ "ಕೋಲ್ಡ್‌ ಹಾರ್ಟ್ಸ್‌" (ಭಾಗ 6, ಸಂಚಿಕೆ 17)
2003 ಅಮೆರಿಕನ್‌ ಡ್ರೀಮ್ಸ್‌ ಶಂಗ್ರಿ-ಲಾಸ್‌ "ಚೇಂಜ್‌ ಎ ಕಮಿಂಗ್‌" (ಭಾಗ 2, ಸಂಚಿಕೆ 8)
ಜಾರ್ಜ್‌ ಲೋಪೆಜ್‌ ಸ್ಟೀಫನಿ "ಟೀಮ್‌ ಲೀಡರ್‌" (ಭಾಗ 2, ಸಂಚಿಕೆ 22)
2004 ಫ್ರಾಸಿಯರ್‌ ಬ್ರಿಟ್ನಿ "ಫ್ರಾಸಿಯರ್‌-ಲೈಟ್‌" (ಭಾಗ 11, ಸಂಚಿಕೆ 12)
2005 ಜೋನ್ ಆಫ್ ಅರ್ಕಾಡಿಯಾ ಡಿಲಾನ್‌ ಸ್ಯಾಮುಲ್ಸ್‌ "ದಿ ರೈಸ್‌ ಆಂಡ್‌ ಫಾಲ್ ಆಫ್‌ ಜೋನ್‌ ಗಿರರ್ಡಿ" (ಭಾಗ 2, ಸಂಚಿಕೆ 14)
ಜಾರ್ಜ್‌ ಲೋಪೆಜ್‌ ಕೆಂಜಿ "ಜಾರ್ಜ್‌'ಸ್‌ ಗ್ರ್ಯಾಂಡ್‌ ಸ್ಲ್ಯಾಮ್‌" (ಭಾಗ 4, ಸಂಚಿಕೆ 19)
2007 ದಿ ಆಂಡಿ ಮಿಲೊನಕಿಸ್‌ ಶೋ ಸ್ವಯಂ ಪಾತ್ರ "ಆಂಡಿ ಮೂಸ್‌ ಟು L.A." (ಸಂಚಿಕೆ 1, ಭಾಗ 3)
2009 ಗೋಸ್ಟ್‌ ವಿಸ್ಪರರ್‌ ಮೋರ್ಗನ್‌ ಜೆಫ್ರೀಸ್‌ "ಥ್ರಿಲ್ಡ್‌ ಟು ಡೆತ್‌" (ಭಾಗ 4, ಸಂಚಿಕೆ 19)
ಲಾ ಆಂಡ್‌ ಆರ್ಡರ್‌: SVU ಆಶ್ಲೀ ವಾಕರ್‌ "ಸೆಲ್‌ಫಿಶ್‌" (ಭಾಗ 10, ಸಂಚಿಕೆ 19)

ಧ್ವನಿಮುದ್ರಿಕೆ ಪಟ್ಟಿ[ಬದಲಾಯಿಸಿ]

ಸ್ಟುಡಿಯೋ ಆಲ್ಬಮ್‌ಗಳು
ಬೇರೆ ಆಲ್ಬಮ್‌ಗಳು

ಪ್ರಶಸ್ತಿಗಳು[ಬದಲಾಯಿಸಿ]

ವರ್ಷ ಪ್ರಶಸ್ತಿ ಪ್ರಶಸ್ತಿ ಸಮಾರಂಭ
2000 TV ಚಿತ್ರದಲ್ಲಿ ಅಥವಾ ಪೈಲಟ್ - ಯುವ ಪೋಷಕ ನಟಿಯಾಗಿ ಅತ್ಯುತ್ತಮ ಅಭಿನಯ (ದಿ ಸೋಲ್‌ ಕಲೆಕ್ಟರ್‌ )[೮೩] ಯುವ ಕಲಾವಿದ ಪ್ರಶಸ್ತಿಗಳು
2003 ವರ್ಷದ ಹದಿಹರಯ[೮೪] ರೊಲಿಂಗ್‌ ಸ್ಟೋನ್‌
2004 ನೆಚ್ಚಿನ ಗಾಯಕಿ[೮೫] ನಿಕೆಲೊಡಿಯೊನ್‌ ಕಿಡ್ಸ್‌' ಚಾಯಿಸ್‌ ಅವಾರ್ಡ್ಸ್‌, USA
ವಿಶೇಷ ಚಲನಚಿತ್ರದಲ್ಲಿ ಉತ್ತಮ ಸಂಗೀತಗಾರರ ತಂಡ (ಚೀಪರ್‌ ಬೈ ದಿ ಡಜನ್‌ )[೮೬] ಯುವ ಕಲಾವಿದ ಪ್ರಶಸ್ತಿಗಳು

ಹೆಚ್ಚಿನ ಓದಿಗೆ[ಬದಲಾಯಿಸಿ]

ಆಕರಗಳು[ಬದಲಾಯಿಸಿ]

 1. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 2. "RIAA Database search". RIAA.com. 2008-01-08. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. ೪.೦ ೪.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. ೫.೦ ೫.೧ ೫.೨ ೫.೩ ೫.೪ ೫.೫ ೫.೬ ೫.೭ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. ೬.೦ ೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 7. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 8. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 9. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 10. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 11. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 12. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 13. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 14. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 15. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 16. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 17. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 18. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 19. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 20. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 21. ೨೧.೦ ೨೧.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 22. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 23. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 24. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 25. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 26. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 27. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 28. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 29. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 30. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 31. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 32. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 33. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 34. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 35. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 36. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 37. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 38. ೩೮.೦ ೩೮.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 39. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 40. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 41. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 42. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 43. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 44. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 45. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 46. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 47. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 48. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 49. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 50. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 51. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 52. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 53. http://www.starnewsonline.com/article/20090424/ARTICLES/904249983?Title=Hilary-Duff-among-actors-filming-Provinces-in-Pender-County
 54. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 55. ೫೫.೦ ೫೫.೧ http://web.archive.org/20090812140119/www.hollywoodreporter.com/hr/content_display/news/e3i0cdf40bc01587c41c6b46149b37d5df8
 56. http://stylenews.peoplestylewatch.com/2009/09/18/video-hilary-duff-takes-her-femme-for-dkny-jeans-line-on-a-chase/
 57. http://www.celebrityclothingline.com/celebrity-entrepreneurs/hilary-duff-joins-forces-with-dkn/
 58. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 59. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 60. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 61. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 62. ೬೨.೦ ೬೨.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 63. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 64. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 65. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 66. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 67. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 68. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 69. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 70. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 71. "Duff made youth ambassador in Colombia". DigitalSpy.com. 2009-07-09. 
 72. http://www.peta2.com/OUTTHERE/o-gossip104.asp
 73. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 74. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 75. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 76. ೭೬.೦ ೭೬.೧ Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 77. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 78. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 79. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 80. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 81. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 82. ಹಾಟ್ಸ್‌, ಎಮಿ. "ಹಿಲರಿ ಢಫ್ ಎಮಾಂಗ್ ಆಕ್ಟರ್ಸ್ ಪಿಲ್ಮಿಂಗ್ 'ಪ್ರಾವಿನ್ಸಸ್' ಇನ್ ಪೆಂಡರ್ ಕೌಂಟಿ." ಸ್ಟಾರ್‌ ನ್ಯೂಸ್‌ ಆನ್‌ಲೈನ್‌ . 2009ರ ಏಪ್ರಿಲ್‌ 24.
 83. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 84. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 85. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 86. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.

ಹೊರಗಿನ ಕೊಂಡಿಗಳು[ಬದಲಾಯಿಸಿ]