ಕನ್ಯತ್ವ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ಯತ್ವ ಎಂದರೆ ಒಬ್ಬ ವ್ಯಕ್ತಿಯು ಯಾವತ್ತೂ ಸಂಭೋಗದಲ್ಲಿ ತೊಡಗಿಲ್ಲದಿರುವ ಸ್ಥಿತಿ. ಈ ಸ್ಥಿತಿಯ ಮೇಲೆ ವಿಶೇಷ ಮೌಲ್ಯ ಮತ್ತು ಮಹತ್ವವನ್ನಿಡುವ ಸಾಂಸ್ಕೃತಿಕ ಮತ್ತು ಧಾರ್ಮಿಕ ಸಂಪ್ರದಾಯಗಳಿವೆ, ಪ್ರಧಾನವಾಗಿ ಅವಿವಾಹಿತ ಹೆಂಗಸರ ಕಡೆಗೆ, ಮತ್ತು ವೈಯಕ್ತಿಕ ಪವಿತ್ರತೆ, ಗೌರವ ಮತ್ತು ಮೌಲ್ಯದ ಕಲ್ಪನೆಗಳಿಗೆ ಸಂಬಂಧಿಸಿವೆ. ಪರಿಶುದ್ಧತೆಯಂತೆ, ಕನ್ಯತ್ವದ ಪರಿಕಲ್ಪನೆಯು ಸಾಂಪ್ರದಾಯಿಕವಾಗಿ ಲೈಂಗಿಕ ವರ್ಜನೆಯನ್ನು ಒಳಗೊಂಡಿದೆ. ಕನ್ಯತ್ವದ ಪರಿಕಲ್ಪನೆಯು ಸಾಮಾನ್ಯವಾಗಿ ನೈತಿಕ ಅಥವಾ ಧಾರ್ಮಿಕ ಸಮಸ್ಯೆಗಳನ್ನು ಒಳಗೊಂಡಿರುತ್ತದೆ ಮತ್ತು ಸಾಮಾಜಿಕ ಸ್ಥಾನಮಾನದ ರೂಪದಲ್ಲಿ ಮತ್ತು ಅಂತರವ್ಯಕ್ತೀಯ ಸಂಬಂಧಗಳಲ್ಲಿ ಪರಿಣಾಮಗಳನ್ನು ಹೊಂದಿರಬಹುದು.[೧] ಕನ್ಯತ್ವವು ಸಾಮಾಜಿಕ ಸೂಚ್ಯಾರ್ಥಗಳನ್ನು ಹೊಂದಿದೆಯಾದರೂ ಮತ್ತು ಹಿಂದೆ ಕೆಲವು ಸಮಾಜಗಳಲ್ಲಿ ಗಮನಾರ್ಹ ಕಾನೂನಾತ್ಮಕ ಅಂತರಾರ್ಥಗಳನ್ನು ಹೊಂದಿತ್ತಾದರೂ, ಇಂದು ಬಹುತೇಕ ಸಮಾಜಗಳಲ್ಲಿ ಇದು ಯಾವುದೇ ಕಾನೂನಾತ್ಮಕ ಪರಿಣಾಮಗಳನ್ನು ಹೊಂದಿಲ್ಲ.

ಕನ್ಯೆ ಪದವು ಮೂಲತಃ ಲೈಂಗಿಕವಾಗಿ ಅನನುಭವಿ ಸ್ತ್ರೀಯರನ್ನು ಸೂಚಿಸಿತ್ತು, ಆದರೆ ಸಾಂಪ್ರದಾಯಿಕ, ಆಧುನಿಕ ಮತ್ತು ನೈತಿಕ ಪರಿಕಲ್ಪನೆಗಳಲ್ಲಿ ಕಂಡುಬಂದಂತೆ ವ್ಯಾಖ್ಯಾನಗಳ ವ್ಯಾಪ್ತಿಯನ್ನು ಒಳಗೊಳ್ಳುವಂತೆ ವಿಕಸನಗೊಂಡಿದೆ. ಕನ್ಯತ್ವದ ಕಳೆತವು ಕೇವಲ ಶಿಶ್ನವನ್ನು ಯೋನಿಯೊಳಗೆ ನುಗ್ಗಿಸುವುದರಿಂದ ಸಂಭವಿಸುತ್ತದೆ ಎಂದು ಭಿನ್ನಲಿಂಗೀಯ ವ್ಯಕ್ತಿಗಳು ಪರಗಣಿಸಬಹುದು ಅಥವಾ ಪರಿಗಣಿಸದೇ ಇರಬಹುದು. ಇತರ ಲೈಂಗಿಕ ದೃಷ್ಟಿಕೋನಗಳ ವ್ಯಕ್ತಿಗಳು ಹಲವುವೇಳೆ ತಮ್ಮ ಕನ್ಯತ್ವದ ಕಳೆತದ ವ್ಯಾಖ್ಯಾನಗಳಲ್ಲಿ ಬಾಯಿ ಲೈಂಗಿಕತೆ, ಗುದ ಸಂಭೋಗ ಅಥವಾ ಪರಸ್ಪರ ಹಸ್ತಮೈಥುನವನ್ನು ಸೇರಿಸಿಕೊಳ್ಳುತ್ತಾರೆ.

ಹಿಂದೂ ಧರ್ಮದಲ್ಲಿ, ವಧುವಿನ ಕಡೆಯಿಂದ ಮದುವೆ ಮುಂಚಿನ ಕನ್ಯತ್ವವನ್ನು ಅತ್ಯುತ್ತಮವೆಂದು ಪರಿಗಣಿಸಲಾಗುತ್ತದೆ. ಪ್ರಚಲಿತವಿರುವ ಹಿಂದೂ ವಿವಾಹ ಸಮಾರಂಭ, ಅಥವಾ ವೈದಿಕ ವಿವಾಹವು ಕನ್ಯಾದಾನ ಧರ್ಮಾಚರಣೆ ಸುತ್ತ ಕೇಂದ್ರೀಕೃತವಾಗಿದೆ. ಇದರರ್ಥ ಅಕ್ಷರಶಃ ಕನ್ಯೆಯ ತಂದೆಯು ಕನ್ಯೆಯನ್ನು ದಾನ ಮಾಡುವುದು. ಇದರ ಮೂಲಕ ತಾವು ಅತ್ಯಂತ ಹೆಚ್ಚು ಆಧ್ಯಾತ್ಮಿಕ ಅರ್ಹತೆಯನ್ನು ಪಡೆಯುತ್ತೇವೆ ಎಂದು ಹಿಂದೂಗಳು ನಂಬುತ್ತಾರೆ, ಮತ್ತು ಪುತ್ರಿಯರ ವಿವಾಹಗಳನ್ನು ಒಂದು ಆಧ್ಯಾತ್ಮಿಕ ಕರ್ತವ್ಯವೆಂದು ಪರಿಗಣಿಸಲಾಗುತ್ತದೆ. ಹಿಂದೂ ಧರ್ಮವನ್ನು ಅತ್ಯಂತ ಸಾಮಾನ್ಯವಾಗಿ ಆಚರಿಸಲಾಗುವ ದಕ್ಷಿಣ ಏಷ್ಯಾದಲ್ಲಿ ಸ್ತ್ರೀಯರ ಶುದ್ಧತೆಗೆ ವಿಶೇಷವಾಗಿ ಮಹತ್ವ ಕೊಡಲಾಗುತ್ತದೆ. ಪ್ರಾಚೀನ ಭಾರತದಲ್ಲಿ ಲೈಂಗಿಕ ಕ್ರಿಯೆಯು ಎಂದೂ ನಿಷೇಧಿತ ವಿಷಯವಾಗಿರಲಿಲ್ಲ ಮತ್ತು ಯೋನಿ ಪೊರೆಯ ಊನವಾಗಿಲ್ಲದಿರುವಿಕೆ ಮತ್ತು ಕನ್ಯತ್ವಕ್ಕೆ ಯಾವುದೇ ಸಂಬಂಧವಿರಲಿಲ್ಲ.

ಉಲ್ಲೇಖಗಳು[ಬದಲಾಯಿಸಿ]

  1. Linda Rae Bennett (2005). Women, Islam and modernity: single women, sexuality and reproductive health in contemporary Indonesia. Psychology Press. pp. 19–21. ISBN 0-415-32929-9. Retrieved October 9, 2011.
"https://kn.wikipedia.org/w/index.php?title=ಕನ್ಯತ್ವ&oldid=872422" ಇಂದ ಪಡೆಯಲ್ಪಟ್ಟಿದೆ