ವಿಷಯಕ್ಕೆ ಹೋಗು

ಹಳ್ಳಿಗಾಡಿನ ಸಂಗೀತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಚಿತ್ರ:Village of karnataka
Country music
Stylistic originsAppalachian folk music, Maritime folk music, Gospel, Anglo, Celtic music and Old-time music
Cultural originsEarly 20th century Atlantic Canada and the Southern United States
Typical instrumentsGuitar - Bass - Dobro - Steel Guitar - Mandolin - Banjo - Double Bass - Fiddle - Piano - electronic keyboard - Drums - Harmonica - Vocals
Derivative formsRock and Roll, Dansband, Roots rock, Southern rock, Heartland rock
Subgenres
Bakersfield sound - Bluegrass - Close harmony - Honky tonk - Jug band - Lubbock sound - Nashville sound - Neotraditional country - Outlaw country - Red Dirt - Western swing - Texas country
Fusion genres
Alternative country - Country rock - Psychobilly - Rockabilly - Gothabilly - Cowpunk - Country-rap - Country pop - Country soul - Southern soul
Other topics
Country musicians - List of years in country music
ಡೊಲಿ ಪಾರ್ಟನ್‌
ವೆರ್ನಾನ್‌‌ ಡಾಲ್‌ಹಾರ್ಟ್‌

ಹಳ್ಳಿಗಾಡಿನ ಸಂಗೀತ (ಅಥವಾ ಹಳ್ಳಿಗರ ಹಾಡು ) ಎಂಬುದು, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ದಕ್ಷಿಣದ ಭಾಗ ಮತ್ತು ಕೆನಡಾದ ಸಮುದ್ರ ತೀರದ ಪ್ರದೇಶಗಳಲ್ಲಿ ಸಾಂಪ್ರದಾಯಿಕವಾಗಿ ಕಂಡು ಬಂದ ಸಾಂಪ್ರದಾಯಿಕ ಮತ್ತು ಜನಪ್ರಿಯ ಸಂಗೀತದ ಸ್ವರೂಪಗಳ ಒಂದು ಹದವಾದ ಮಿಶ್ರಣವಾಗಿದೆ. ಇದು 1920ರ ದಶಕದಲ್ಲಿ ಆರಂಭಗೊಂಡು ಕ್ಷಿಪ್ರವಾಗಿ ವಿಕಸನಗೊಂಡಿತು.[೧]

ಹಳ್ಳಿಗಾಡಿನ ಸಂಗೀತಪ್ರಕಾರ[ಬದಲಾಯಿಸಿ]

 • ಈ ಪ್ರಕಾರಕ್ಕೆ ಹಿಂದೆ ಬೆಟ್ಟಗಾಡಿನ ಜಾನಪದ ಸಂಗೀತ ಎಂದು ಕರೆಯಲಾಗುತ್ತಿದ್ದು ಅದು ಹೆಸರು ಕೆಡಿಸುವಂತೆ ಕಂಡು ಬಂದಿದ್ದರಿಂದಾಗಿ, ಹಳ್ಳಿಗಾಡಿನ ಸಂಗೀತ ಎಂಬ ಪರಿಭಾಷೆಯು 1940ರ ದಶಕದಲ್ಲಿ ಜನಪ್ರಿಯತೆಯನ್ನು ಗಳಿಸಿತು. ಹಳ್ಳಿಗಾಡಿನ ಸಂಗೀತ ವು 1970ರ ದಶಕದಲ್ಲಿ ವ್ಯಾಪಕವಾಗಿ ಸ್ವೀಕರಿಸಲ್ಪಟ್ಟ ಸಂದರ್ಭದಲ್ಲಿ, ಆ ಕಾಲದಿಂದ ಮೊದಲ್ಗೊಂಡು ಹಳ್ಳಿಗರ ಹಾಡು ಬಳಕೆಯಲ್ಲಿ ಕುಸಿಯಿತು; ಆದರೂ ಸಹ ಯುನೈಟೆಡ್‌ ಕಿಂಗ್‌ಡಂ ಮತ್ತು ಐರ್ಲೆಂಡ್‌ ಪ್ರದೇಶಗಳು ಇದಕ್ಕೆ ಹೊರತಾಗಿದ್ದು, ಅಲ್ಲಿ ಈ ಪ್ರಕಾರವು ಈಗಲೂ ಸಾಮಾನ್ಯವಾಗಿ ಬಳಸಲ್ಪಡುತ್ತಿದೆ.[೧]
 • ಆದಾಗ್ಯೂ, ಅಮೆರಿಕಾ ಸಂಯುಕ್ತ ಸಂಸ್ಥಾನಗಳ ನೈಋತ್ಯ ಭಾಗದಲ್ಲಿ, ಜನಾಂಗೀಯ ಗುಂಪುಗಳ ವಿಭಿನ್ನ ಮಿಶ್ರಣವು ಸೃಷ್ಟಿಸಿದ ಸಂಗೀತವೊಂದು, ಹಳ್ಳಿಗರ ಹಾಡು ಎಂಬ ಪರಿಭಾಷೆಯ ಪಾಶ್ಚಾತ್ಯ ಸಂಗೀತ ಎನಿಸಿಕೊಂಡಿತು.
 • ಅನೇಕ ಶೈಲಿಗಳು ಮತ್ತು ಉಪ-ಪ್ರಕಾರಗಳನ್ನು ವಿವರಿಸಲು ಹಳ್ಳಿಗಾಡಿನ ಸಂಗೀತ ಎಂಬ ಪರಿಭಾಷೆಯು ಇಂದು ಬಳಸಲ್ಪಡುತ್ತಿದೆ. ಸಾರ್ವಕಾಲಿಕವಾಗಿ ಹೆಚ್ಚು ಮಾರಾಟವಾಗುವ ಒಂಟಿಗಾಯನದ ಕೃತಿಗಳಿಗೆ ಸಂಬಂಧಿಸಿದ ಇಬ್ಬರು ಕಲಾವಿದರನ್ನು ಹಳ್ಳಿಗಾಡಿನ ಸಂಗೀತವು ಸೃಷ್ಟಿಸಿದೆ. ಫ್ರಾಂಕ್ ಪಾಟರ್‌‌ ಎಂಬಾತ ಈ ಪೈಕಿ ಮೊದಲನೆಯ ವನಾಗಿದ್ದು, "ಬೆಟ್ಟಗಾಡಿನ ಜಾನಪದ ಸಂಗೀತದ ಬೆಕ್ಕು" ಎಂದೇ ಈತ ಹಿಂದೆ ಕರೆಯಲ್ಪಡುತ್ತಿದ್ದ ಮತ್ತು ಮೊಂಟಾನಾ ರೆಡ್‌ನೆಕ್‌‌ [೨] ಎಂಬ ಹೆಸರಿನ ರೇಡಿಯೋ ಕಾರ್ಯಕ್ರಮದಲ್ಲಿ ಓರ್ವ ನಿಯತ ಕಲಾವಿದನಾಗಿದ್ದ; ರಾಕ್‌ ಅಂಡ್‌ ರೋಲ್‌‌ ಪ್ರಕಾರದ ಹೊರಹೊಮ್ಮುವಿಕೆಯ ಸಂದರ್ಭದಲ್ಲಿ ಇವನು ಓರ್ವ ವಿಶದೀಕರಿಸುವ ಬಿಂಬವಾಗಿ ಮಾರ್ಪಟ್ಟ.
 • ಗಾರ್ಥ್‌ ಬ್ರೂಕ್ಸ್‌‌‌ ಎಂಬ ಸಮಕಾಲೀನ ಸಂಗೀತಗಾರನು ಈ ಪೈಕಿ ಎರಡನೆಯವನಾಗಿದ್ದು, ಈತನ 128 ದಶಲಕ್ಷ ಗೀತಸಂಪುಟಗಳು ಮಾರಾಟವಾಗಿವೆ; ಈತ U.S. ಇತಿಹಾಸದಲ್ಲಿ ಅತಿಹೆಚ್ಚು ಮಾರಾಟವಾಗುವ ದೇಶೀಯ ಒಂಟಿ ಗಾಯನದ ಕೃತಿಗಳ U.S. ಕಲಾವಿದನಾಗಿದ್ದಾನೆ.[೩]
 • ಸುಮಾರು 2005ರ ವರ್ಷದ ವೇಳೆಗೆ ಬಹುತೇಕ ಸಂಗೀತ ಪ್ರಕಾರಗಳಿಗೆ ಸೇರಿದ ಗೀತಸಂಪುಟಗಳ ಮಾರಾಟಗಳು ಕುಸಿದಿರುವ ಸಂದರ್ಭದಲ್ಲೇ, 2006ರ ವರ್ಷದ ಅವಧಿಯಲ್ಲಿ ಹಳ್ಳಿಗಾಡಿನ ಸಂಗೀತವು ಮಾಡಿದ ಸಾಧನೆಯು ಅದರ ಅತ್ಯುತ್ತಮ ಸಾಧನೆಗಳ ಪೈಕಿ ಒಂದಾಗಿತ್ತು; ಈ ವರ್ಷದ ಮೊದಲ ಆರು ತಿಂಗಳುಗಳ ಅವಧಿಯಲ್ಲಿ, U.S.ನಲ್ಲಿನ ಹಳ್ಳಿಗಾಡಿನ ಸಂಗೀತದ ಗೀತ ಸಂಪುಟಗಳು 17.7 ಪ್ರತಿಶತದಷ್ಟು ಹೆಚ್ಚಳವನ್ನು ಕಾಣುವುದರೊಂದಿಗೆ, ಮಾರಾಟಗಳು 36 ದಶಲಕ್ಷ ಸಂಖ್ಯೆಯನ್ನು ಮುಟ್ಟಿತು.
 • ಮೇಲಾಗಿ, ರಾಷ್ಟ್ರವ್ಯಾಪಿಯಾಗಿ ಕೇಳಲ್ಪಡುತ್ತಿರುವ ಹಳ್ಳಿಗಾಡಿನ ಸಂಗೀತದ ಪ್ರಮಾಣವು ಹೆಚ್ಚೂಕಮ್ಮಿ ಒಂದು ದಶಕದವರೆಗೆ ಸ್ಥಿರವಾಗಿ ಉಳಿದುಕೊಂಡಿದ್ದು, ಪ್ರತಿ ವಾರವೂ 77.3 ದಶಲಕ್ಷದಷ್ಟು ವಯಸ್ಕರನ್ನು ಅದು ತಲುಪುತ್ತಿದೆ ಎಂಬುದಾಗಿ ಆರ್ಬಿಟ್ರಾನ್‌‌, ಇಂಕ್‌ ಎಂಬ ರೇಡಿಯೋ-ಶ್ರೇಯಾಂಕಗಳ ಸಂಸ್ಥೆಯು ಮಾಹಿತಿ ನೀಡಿದೆ.[೪][೫]

ಆರಂಭಿಕ ಇತಿಹಾಸ[ಬದಲಾಯಿಸಿ]

 • ಉತ್ತರ ಅಮೆರಿಕಾದ ಸಮುದ್ರ ತೀರದ ಪ್ರಾಂತ್ಯಗಳು ಮತ್ತು ದಕ್ಷಿಣದ ಅಪಲಾಚಿಯಾದ ಪರ್ವತಗಳ ಪ್ರದೇಶಗಳಿಗೆ ಸುಮಾರು 300 ವರ್ಷಗಳಷ್ಟು ಹಿಂದೆಯೇ ಬಂದ ವಲಸೆಗಾರರು ತಮ್ಮೊಂದಿಗೆ ಪೂರ್ವಾರ್ಧ ಗೋಳದ ಸಂಗೀತ ಮತ್ತು ಸಂಗೀತ ವಾದ್ಯಗಳನ್ನು ತಂದರು. ಅವರು ತಮ್ಮೊಂದಿಗೆ ಅತ್ಯಂತ ಪ್ರಮುಖವಾದ ಬೆಲೆಬಾಳುವ ವಸ್ತುಗಳ ಪೈಕಿ ಕೆಲವನ್ನು ತಂದರು ಹಾಗೂ ಅವರಲ್ಲಿ ಬಹುತೇಕರಿಗೆ ಒಂದು ಸಂಗೀತ ವಾದ್ಯವೇ ಅತ್ಯಂತ ಪ್ರಮುಖ ಮತ್ತು ಬೆಲೆಬಾಳುವ ವಸ್ತುವಾಗಿತ್ತು ಎಂಬುದು ಗಮನಾರ್ಹ ಅಂಶ:
 • "ಮುಂಚಿನ ಸ್ಕಾಟಿಷ್‌ ವಸಾಹತುಗಾರರು ಅಥವಾ ಮೊದಲ ನೆಲಸಿಗರಿಗೆ ಪಿಟೀಲು ಅತ್ಯಂತ ಇಷ್ಟದ ವಾದ್ಯವಾಗಿತ್ತು; ಏಕೆಂದರೆ, ದುಃಖ ಮತ್ತು ಶೋಕಸೂಚಕ ಅನುಭೂತಿಯನ್ನು ಅಥವಾ ಉಲ್ಲಾಸದ ಮತ್ತು ಲವಲವಿಕೆಯಿಂದ ಪುಟಿಯುವ[೬] ಅನುಭೂತಿಯನ್ನು ಧ್ವನಿಸಲು ಇದನ್ನು ನುಡಿಸಬಹುದಾಗಿತ್ತು";
 • ಐರ್ಲಂಡಿನ ಪಿಟೀಲು, ಜರ್ಮನ್‌‌ ಜನ್ಯ ಪಿಯಾನೊ ಮಾದರಿಯ ತಂತಿವಾದ್ಯ (ಡಲ್ಸಿಮರ್‌‌), ಇಟಲಿಯ ಮ್ಯಾಂಡೊಲಿನ್‌‌, ಸ್ಪೇನಿನ ಗಿಟಾರು, ಮತ್ತು ಪಶ್ಚಿಮ ಆಫ್ರಿಕಾದ ಕೈವೀಣೆ (ಬ್ಯಾಂಜೊ)[೭] ಇವೇ ಮೊದಲಾದವು ಹೀಗೆ ಬಂದ ಅತ್ಯಂತ ಸಾಮಾನ್ಯವಾದ ಸಂಗೀತ ವಾದ್ಯಗಳಾಗಿದ್ದವು.
 • ವಿಭಿನ್ನ ಜನಾಂಗೀಯ ಗುಂಪುಗಳಿಗೆ ಸೇರಿದ ಸಂಗೀತಗಾರರ ನಡುವಿನ ಪರಸ್ಪರ ಸಂವಹನಗಳು, ಉತ್ತರ ಅಮೆರಿಕಾದ ಈ ಪ್ರದೇಶಕ್ಕೆ ಅನನ್ಯವಾಗಿದ್ದ ಸಂಗೀತವನ್ನು ಸೃಷ್ಟಿಸಿದವು. ಇಪ್ಪತ್ತನೇ ಶತಮಾನದ ಆರಂಭಿಕ ಅವಧಿಯ ಅಪಲಾಚಿಯಾದ ತಂತಿವಾದ್ಯ ಮೇಳಗಳು ಪಿಟೀಲು, ಗಿಟಾರು, ಮತ್ತು ಕೈವೀಣೆಗಳನ್ನು ಪ್ರಧಾನವಾಗಿ ಒಳಗೊಂಡಿದ್ದವು.[೮]
 • ಮುಂಚಿನ ಧ್ವನಿಮುದ್ರಿತ ಹಳ್ಳಿಗಾಡಿನ ಸಂಗೀತದ ಜೊತೆಯಲ್ಲಿ ಈ ಆರಂಭಿಕ ಹಳ್ಳಿಗಾಡಿನ ಸಂಗೀತವನ್ನು ಹಳೆಯ-ಕಾಲದ ಸಂಗೀತ ಎಂಬುದಾಗಿ ಅನೇಕ ವೇಳೆ ಉಲ್ಲೇಖಿಸಲಾಗು ತ್ತದೆ. ಕಂಟ್ರಿ ಮ್ಯೂಸಿಕ್‌‌ U.S.A ಕೃತಿಯಲ್ಲಿ ಬಿಲ್‌ ಮ್ಯಾಲೋನ್‌‌ ಎಂಬಾತ ಅಭಿಪ್ರಾಯ ಪಟ್ಟಿರುವ ಅನುಸಾರ, "ದಕ್ಷಿಣದ ಭಾಗದ ಒಂದು ವಿದ್ಯಮಾನವಾಗಿ ಹಳ್ಳಿಗಾಡಿನ ಸಂಗೀತವು ಪ್ರಪಂಚಕ್ಕೆ ಪರಿಚಯಿಸಲ್ಪಟ್ಟಿತು."[೯] ದಕ್ಷಿಣ ಭಾಗದಲ್ಲಿ, ಜಾನಪದ ಸಂಗೀತವು ಸಾಂಸ್ಕೃತಿಕ ಪೀಳಿಗೆಗಳ ಒಂದು ಮಿಶ್ರಣವಾಗಿತ್ತು ಮತ್ತು ಆ ಪ್ರದೇಶದಲ್ಲಿನ ವೈವಿಧ್ಯಮಯ ಜನಾಂಗೀಯ ಗುಂಪುಗಳ ಸಂಗೀತದ ಸಂಪ್ರದಾಯಗಳನ್ನು ಅದು ಸಂಯೋಜಿ ಸಿತ್ತು.
 • ಉದಾಹರಣೆಗೆ: ಆಂಗ್ಲ-ಕೆಲ್ಟರ ವರ್ಗಕ್ಕೆ ಸೇರಿದ ವಲಸೆಗಾರರಿಂದ ಬಂದ ಕೆಲವೊಂದು ವಾದ್ಯಸಂಗೀತದ ತುಣುಕುಗಳು, ಹಳ್ಳಿಗಾಡಿನ ಸಂಗೀತ ಹುಟ್ಟಿಕೊಳ್ಳುವುದಕ್ಕೆ ಮೂಲನೆಲೆಯಾಗಿರುವ, ಈಗ ಹಳೆಯ ಕಾಲದ ಸಂಗೀತ ಎಂದು ಕರೆಯಲ್ಪಡುತ್ತಿರುವ ಪ್ರಕಾರವನ್ನು ರೂಪಿಸುವ ಜಾನಪದ ಹಾಡುಗಳು ಮತ್ತು ಲಾವಣಿಗಳಿಗೆ ಆಧಾರವಾಗಿದ್ದವು. *ಹಳೆಯ ಕಾಲದ ಸಂಗೀತದ ಬೆಳವಣಿಗೆಯ ಮೇಲೆ ಇಂಗ್ಲಂಡಿನ (ಬ್ರಿಟಿಷರ) ಮತ್ತು ಐರ್ಲಂಡಿನ (ಐರಿಷ್‌ ಜನಗಳ) ಜಾನಪದ ಸಂಗೀತವು ಪ್ರಭಾವ ಬೀರಿತು ಎಂದು ಸಾಮಾನ್ಯ ವಾಗಿ ಭಾವಿಸಲಾಗುತ್ತದೆ. U.S.ನ ದಕ್ಷಿಣದ ಭಾಗಕ್ಕೆ ಆದ ಬ್ರಿಟಿಷರ ಮತ್ತು ಐರ್ಲಂಡಿನ ಜನರ ಆಗಮನಗಳಲ್ಲಿ, ಸ್ಕಾಟ್ಲೆಂಡ್‌, ವೇಲ್ಸ್‌‌, ಐರ್ಲೆಂಡ್‌, ಮತ್ತು ಇಂಗ್ಲೆಂಡ್‌ ಭಾಗಗಳಿಂದ ಬಂದ ವಲಸೆಗಾರರು ಸೇರಿದ್ದರು.
 • ಅನೇಕ ವೇಳೆ, ಅನೇಕ ಜನರು ಹಳ್ಳಿಗಾಡಿನ ಸಂಗೀತವನ್ನು ಕೇಳಿದಾಗ ಅಥವಾ ಅದರ ಕುರಿತು ಆಲೋಚಿಸಿದಾಗ, ಇದನ್ನು ಯುರೋಪಿಯನ್ನರ-ಅಮೆರಿಕನ್ನರ ಒಂದು ಸೃಷ್ಟಿ ಎಂಬ ರೀತಿಯಲ್ಲಿ ಅವರು ಭಾವಿಸುತ್ತಾರೆ. ಆದಾಗ್ಯೂ, ಈ ಸಂಗೀತ ಶೈಲಿಯು ಒಂದು ದೊಡ್ಡ ಪ್ರಮಾಣದದಲ್ಲಿ ಅಮೆರಿಕಾದ ನೀಗ್ರೋಗಳಿಂದ ಬಂತು ಎನ್ನಬಹುದು; ಅತ್ಯಂತ ಮುಂಚಿನ ಅಮೆರಿಕಾದ ಜಾನಪದ ಹಾಡುಗಳಲ್ಲಿ ಒಂದು ಪ್ರಮುಖ ಸಂಗೀತವಾದ್ಯವಾಗಿದ್ದ ಕೈವೀಣೆಗೂ ಈ ಮಾತು ಅನ್ವಯಿಸುತ್ತದೆ.
 • ಅಮೆರಿಕಾದ-ನೀಗ್ರೋಗಳಿಂದ ಮಾತ್ರವೇ ಅಲ್ಲದೇ ಐರೋಪ್ಯ ಸಂತತಿಯ-ಅಮೆರಿಕನ್ನರಿಂದ ಹಳ್ಳಿಗಾಡಿನ ಸಂಗೀತವು ಸೃಷ್ಟಿಸಲ್ಪಟ್ಟಿರುವುದಕ್ಕೆ ಇರುವ ಕಾರಣಗಳಲ್ಲಿ ಒಂದೆಂದರೆ, ದಕ್ಷಿಣ ಭಾಗದಲ್ಲಿನ ಗ್ರಾಮೀಣ ಸಮುದಾಯಗಳಲ್ಲಿರುವ ಕರಿಯರು ಮತ್ತು ಬಿಳಿಯರು ಅನೇಕಬಾರಿ ಒಟ್ಟಾಗಿ ಕೆಲಸ ಮಾಡುತ್ತಿದ್ದರು ಮತ್ತು ಆಡುತ್ತಿದ್ದರು; ಡಿಫೋರ್ಡ್‌ ಬೇಲಿ: ಎ ಲೆಜೆಂಡ್‌ ಲಾಸ್ಟ್‌‌ ಎಂಬ ಶೀರ್ಷಿಕೆಯ PBS ಸಾಕ್ಷ್ಯಚಿತ್ರದಲ್ಲಿ ಡಿಫೋರ್ಡ್‌ ಬೇಲಿ[೧೦] ಎಂಬಾತ ಇದನ್ನು ನೆನಪಿಸಿಕೊಂಡಿದ್ದಾನೆ.[೧೧]
 • 19ನೇ ಶತಮಾನದಾದ್ಯಂತವೂ ಯುರೋಪ್‌‌ ವಲಯಕ್ಕೆ ಸೇರಿದ ಹಲವಾರು ವಲಸೆಗಾರ ಗುಂಪುಗಳು ಟೆಕ್ಸಾಸ್‌‌ನಲ್ಲಿ ನೆಲೆಗೊಂಡವು; ಇವುಗಳ ಪೈಕಿ ಐರ್ಲೆಂಡ್‌, ಜರ್ಮನಿ, ಸ್ಪೇನ್‌‌, ಮತ್ತು ಇಟಲಿ ದೇಶಗಳಿಂದ ಬಂದ ವಲಸೆಗಾರ ಗುಂಪುಗಳು ಅತ್ಯಂತ ಗಮನಾರ್ಹವಾಗಿದ್ದವು. ಅಷ್ಟು ಹೊತ್ತಿಗಾಗಲೇ ಟೆಕ್ಸಾಸ್‌ನಲ್ಲಿ ನೆಲೆಗೊಂಡಿದ್ದ ಮೆಕ್ಸಿಕೊ ದೇಶದ ಮತ್ತು ಅಮೆರಿಕಾದ ಸ್ಥಳವಂದಿಗರು, ಹಾಗೂ U.S. ಸಮುದಾಯಗಳ ಜೊತೆಯಲ್ಲಿ ಈ ಗುಂಪುಗಳು ಪರಸ್ಪರ ತೊಡಗಿಸಿಕೊಂಡವು.
 • ಈ ಸಹ ಜೀವನ ಮತ್ತು ವಿಸ್ತರಿಸಲ್ಪಟ್ಟ ಸಂಪರ್ಕದ ಫಲವಾಗಿ, ಸಾಂಸ್ಕೃತಿಕವಾಗಿ ವಿಶಿಷ್ಟವಾಗಿರುವ ಅನನ್ಯ ಲಕ್ಷಣಗಳನ್ನು ಟೆಕ್ಸಾಸ್‌ ವಲಯವು ಬೆಳೆಸಿಕೊಂಡಿದ್ದು, ಅದರ ಎಲ್ಲಾ ಸಂಸ್ಥಾಪಕ ಸಮುದಾಯಗಳ ಸಂಸ್ಕೃತಿಯಲ್ಲಿ ಈ ವಿಶಿಷ್ಟ ಲಕ್ಷಣಗಳ ಮೂಲಗಳಿವೆ ಎಂದು ಹೇಳಬಹುದು.[೧೨]

1920ರ ದಶಕ[ಬದಲಾಯಿಸಿ]

 • ಅಟ್ಲಾಂಟಾ ಮತ್ತು ಫೋರ್ಟ್‌ ವರ್ತ್‌ ಪ್ರದೇಶಗಳಿಗೆ ಸೇರಿದ ಸ್ಥಳೀಯ ಪ್ರಸ್ತುತಿಕಾರರು 1922ರಲ್ಲಿ ರೇಡಿಯೋ ಕೇಂದ್ರಗಳ ಮೂಲಕ ಕಾರ್ಯಕ್ರಮಗಳನ್ನು ನೀಡುತ್ತಿದ್ದರು. ಸ್ಥಳೀಯ ಪ್ರಸ್ತುತಿಕಾರರ ಸಂಗೀತ ಕಾರ್ಯಕ್ರಮಗಳ ಜೊತೆಗೆ, ಕಣಜದ ಕುಣಿತ ಕಾರ್ಯಕ್ರಮಗಳೂ ಸಹ ರೇಡಿಯೋ ಕೇಂದ್ರಗಳಲ್ಲಿ ಜನಪ್ರಿಯವಾಯಿತು.
 • ಜಾರ್ಜಿಯಾದಲ್ಲಿನ ಕೆಲವೊಂದು ಧ್ವನಿಮುದ್ರಣ ಕಂಪನಿಗಳು ಫಿಡ್ಲಿನ್‌‌' ಜಾನ್‌‌ ಕಾರ್ಸನ್‌‌ನಂಥ ಮುಂಚಿನ ಕಲಾವಿದರನ್ನು ನಿರಾಕರಿಸಿದರೆ, ದೇಶಗಳ ವ್ಯಾವಸಾಯಿಕ ಕೆಲಸಗಾರರ ಜೀವನ ಶೈಲಿಯೊಂದಿಗೆ ಅವನ ಸಂಗೀತವು ಕರಾರುವಾಕ್ಕಾಗಿ ಹೊಂದಿಕೊಳ್ಳುತ್ತದೆ ಎಂದು ಇತರ ಕಂಪನಿಗಳು ಅರಿತುಕೊಂಡವು.[೧೩] ಹಳ್ಳಿಗಾಡಿನ ಸಂಗೀತ ಎಂಬುದಾಗಿ ಪರಿಗಣಿಸಲ್ಪಟ್ಟ ಪ್ರಕಾರದ ಮೊದಲ ವ್ಯಾಪಾರೀ ಧ್ವನಿಮುದ್ರಣವು "ಸ್ಯಾಲೀ ಗುಡನ್‌‌" ಎಂಬುದಾಗಿತ್ತು; ಪಿಟೀಲುವಾದಕನಾದ A.C. (ಎಕ್‌‌) ರಾಬರ್ಟ್‌ಸನ್‌‌ ಎಂಬಾತ ಇದನ್ನು ವಿಕ್ಟರ್‌ ರೆಕಾರ್ಡ್ಸ್ ಸಂಸ್ಥೆಗಾಗಿ 1922ರಲ್ಲಿ ನೆರವೇರಿಸಿದ.
 • ಕೊಲಂಬಿಯಾ ರೆಕಾರ್ಡ್ಸ್ ಸಂಸ್ಥೆಯು 1924ರಷ್ಟು ಮುಂಚೆಯೇ "ಬೆಟ್ಟಗಾಡಿನ ಜಾನಪದ" ಸಂಗೀತವನ್ನು (ಸರಣಿ 15000D "ಓಲ್ಡ್‌ ಫೆಮಿಲಿಯರ್‌ ಟ್ಯೂನ್ಸ್‌") ಬಳಸಿ ಕೊಂಡಿ ರುವ ಧ್ವನಿಮುದ್ರಿಕೆಗಳನ್ನು ನೀಡಲು ಶುರುಮಾಡಿತು.[೧೪]
 • ಒಂದು ವರ್ಷ ಹಿಂದೆ, 1923ರ ಜೂನ್‌‌ 14ರಂದು ಒಕೆಹ್‌ ರೆಕಾರ್ಡ್ಸ್‌‌ ಸಂಸ್ಥೆಗಾಗಿ "ಲಿಟ್ಲ್‌ ಲಾಗ್‌ ಕ್ಯಾಬಿನ್‌ ಇನ್‌ ದಿ ಲೇನ್‌‌" ಗೀತೆಯನ್ನು ಫಿಡ್ಲಿನ್‌‌' ಜಾನ್‌‌ ಕಾರ್ಸನ್‌‌ ಧ್ವನಿ ಮುದ್ರಿಸಿದ.[೧೫] 1924ರ ಮೇ ತಿಂಗಳಲ್ಲಿ ಬಂದ "ರೆಕ್‌ ಆಫ್‌ ದಿ ಓಲ್ಡ್‌‌ '97" ಎಂಬ ಗೀತೆಯೊಂದಿಗೆ ವೆರ್ನಾನ್ ಡಾಲ್‌ಹಾರ್ಟ್‌ ಎಂಬಾತ, ಒಂದು ರಾಷ್ಟ್ರವ್ಯಾಪಿ ಜನಪ್ರಿಯ ಗೀತೆಯನ್ನು ತನ್ನ ತೆಕ್ಕೆಗೆ ಸೇರಿಸಿಕೊಂಡ ಹಳ್ಳಿಗಾಡಿನ ಸಂಗೀತ ಪ್ರಕಾರದ ಮೊದಲ ಗಾಯಕ ಎನಿಸಿಕೊಂಡ.[೧೬][೧೭]
 • ಧ್ವನಿಮುದ್ರಿಕೆಯ ಮತ್ತೊಂದು ಬದಿಯಲ್ಲಿದ್ದ "ಲೋನ್‌ಸಮ್‌ ರೋಡ್‌ ಬ್ಲೂಸ್‌" ಎಂಬ ಗೀತೆಯೂ ಅತ್ಯಂತ ಜನಪ್ರಿಯವಾಯಿತು.[೧೮] 1924ರ ಏಪ್ರಿಲ್‌ನಲ್ಲಿ, "ಆಂಟ್‌" ಸಮಂತಾ ಬಮ್‌ಗಾರ್ನರ್‌ ಮತ್ತು ಇವಾ ಡೇವಿಸ್‌ ಎಂಬಿಬ್ಬರು ಗಾಯಕಿಯರು ಹಳ್ಳಿಗಾಡಿನ ಹಾಡುಗಳನ್ನು ಧ್ವನಿಮುದ್ರಿಸಿ ಬಿಡುಗಡೆ ಮಾಡುವುದಕ್ಕೆ ಸಂಬಂಧಿಸಿದಂತೆ ಮೊದಲ ಮಹಿಳಾ ಸಂಗೀತಗಾರ್ತಿಯರೆಂಬ ಕೀರ್ತಿಗೆ ಪಾತ್ರರಾದರು.[೧೯]
 • ಕ್ಲಿಫ್‌‌ ಕಾರ್ಲೈಲ್‌‌‌ನಂಥ ಅನೇಕ "ಬೆಟ್ಟಗಾಡಿನ ಜಾನಪದ" ಸಂಗೀತಗಾರರು ದಶಕದ[೨೦] ಉದ್ದಕ್ಕೂ ಮತ್ತು 30ರ ದಶಕದಲ್ಲಿಯೂ ಬ್ಲೂಸ್‌ ಹಾಡುಗಳನ್ನು ಧ್ವನಿಮುದ್ರಿಸಿದರು.
 • ಆರಂಭಿಕ ಅವಧಿಯಲ್ಲಿ ಇಂಥ ಧ್ವನಿಮುದ್ರಣಗಳನ್ನು ನಡೆಸಿದ ಇತರ ಪ್ರಮುಖ ಕಲಾವಿದರಲ್ಲಿ ರಿಲೆ ಪುಕೆಟ್‌, ಡಾನ್‌ ರಿಚರ್ಡ್‌ಸನ್‌‌, ಫಿಡ್ಲಿನ್‌‌' ಜಾನ್‌‌ ಕಾರ್ಸನ್‌‌, ಅಲ್‌‌ ಹಾಪ್ಕಿನ್ಸ್‌, ಅರ್ನೆಸ್ಟ್‌ V. ಸ್ಟೋನ್‌ಮನ್‌‌, ಚಾರ್ಲೀ ಪೂಲ್‌‌ ಮತ್ತು ನಾರ್ತ್‌ ಕರೋಲಿನಾ ರ್ಯಾಂಬ್ಲರ್ಸ್‌‌ ಹಾಗೂ ದಿ ಸ್ಕಿಲ್ಲೆಟ್‌ ಲಿಕರ್ಸ್ ಸೇರಿದ್ದಾರೆ‌.[೨೧]
 • 1922ರಷ್ಟು ಆರಂಭದಲ್ಲೇ ಉಕ್ಕಿನ ಗಿಟಾರು ಹಳ್ಳಿಗಾಡಿನ ಸಂಗೀತವನ್ನು ಪ್ರವೇಶಿಸಿತು; ಫ್ರಾಂಕ್‌‌ ಫೆರೆರಾ ಎಂಬ ಪ್ರಸಿದ್ಧ ಹವಾಯಿಯ ಗಿಟಾರು ವಾದಕನನ್ನು ಪಶ್ಚಿಮ ತೀರ ಪ್ರದೇಶ ದಲ್ಲಿ ಜಿಮ್ಮೀ ಟಾರ್ಲ್‌ಟನ್‌ ಭೇಟಿಮಾಡಿದಾಗ ಈ ಪ್ರವೇಶಕ್ಕೆ ನಾಂದಿಯಾಯಿತು.[೨೨]
 • ಜಿಮ್ಮೀ ರಾಡ್ಗರ್ಸ್‌‌ ಮತ್ತು ಕಾರ್ಟರ್‌‌ ಫ್ಯಾಮಿಲಿ ಎಂಬಿಬ್ಬರನ್ನು ಆರಂಭಿಕ ಅವಧಿಯ ಪ್ರಮುಖ ಹಳ್ಳಿಗಾಡಿನ ಸಂಗೀತಗಾರರೆಂದು ವ್ಯಾಪಕವಾಗಿ ಪರಿಗಣಿಸಲಾಗುತ್ತದೆ. 1927ರ ಆಗಸ್ಟ್‌‌ 1ರಂದು ಬ್ರಿಸ್ಟಲ್‌‌‌‌ನಲ್ಲಿ ನಡೆದ ಒಂದು ಐತಿಹಾಸಿಕ ಧ್ವನಿಮುದ್ರಣ ಅವಧಿಯಲ್ಲಿ ಅವರ ಹಾಡುಗಳು ಮೊದಲ ಬಾರಿಗೆ ಸೆರೆ ಹಿಡಿಯಲ್ಪಟ್ಟವು; ಇಲ್ಲಿ ರಾಲ್ಫ್‌‌ ಪೀರ್‌‌ ಪ್ರತಿಭಾ ಶೋಧಕ ಮತ್ತು ಧ್ವನಿ ಧ್ವನಿಮುದ್ರಕನ ಪಾತ್ರವನ್ನು ವಹಿಸಿದ್ದ.[೨೩][೨೪]
 • ಬೆಟ್ಟಗಾಡಿನ ಜಾನಪದದ ಛಾಯೆಯ ಹಳ್ಳಿಗಾಡಿನ ಸಂಗೀತ, ಸುವಾರ್ತೆ, ಜಾಝ್‌‌, ಬ್ಲೂಸ್‌, ಪಾಪ್‌, ಕೌಬಾಯ್‌‌, ಮತ್ತು ಜಾನಪದ ಸಂಗೀತ ಪ್ರಕಾರಗಳನ್ನು ರಾಡ್ಗರ್ಸ್‌ ಬೆಸುಗೆಹಾಕಿದ ಎಂದು ಹೇಳಬಹುದು; ಮತ್ತು ಅವನ ಅತ್ಯುತ್ತಮ ಹಾಡುಗಳ ಪೈಕಿ ಅನೇಕವು ಅವನದೇ ಸಂಯೋಜನೆಗಳಾಗಿದ್ದವು. ಈ ಪೈಕಿ “ಬ್ಲೂ ಯೊಡೆಲ್‌‌”[೨೫] ಎಂಬ ಗೀತ-ಸಂಯೋಜನೆಯ ಧ್ವನಿ ಮುದ್ರಿಕೆಗಳು ಒಂದು ದಶಲಕ್ಷಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದವು ಹಾಗೂ ರಾಡ್ಗರ್ಸ್‌‌ನನ್ನು ಆರಂಭಿಕ ಹಳ್ಳಿಗಾಡಿನ ಸಂಗೀತದ ಪ್ರಧಾನ ಗಾಯಕನ ಸ್ಥಾನದಲ್ಲಿ ಅವು ನೆಲೆ ಗೊಳಿಸಿದವು.[೨೬][೨೭]
 • 1927ರಲ್ಲಿ ಆರಂಭಗೊಂಡ ಹಾಗೂ ಮುಂದಿನ 17 ವರ್ಷಗಳವರೆಗೆ ಮುಂದುವರಿದ ಕಾರ್ಟರ್ಸ್‌, ಸುಮಾರು 300ರಷ್ಟು ಹಳೆಯ-ಕಾಲದ ಲಾವಣಿಗಳು, ಸಾಂಪ್ರದಾಯಿಕ ರಾಗಗಳು, ಹಳ್ಳಿಗಾಡಿನ ಹಾಡುಗಳು ಮತ್ತು ಸುವಾರ್ತೆ ಸ್ತೋತ್ರಗಳನ್ನು ಧ್ವನಿಮುದ್ರಿಸಿದ; ಇವೆಲ್ಲವೂ ಅಮೆರಿಕಾದ ಆಗ್ನೇಯ ಭಾಗದ ಜನಶ್ರುತಿ ಮತ್ತು ಪರಂಪರೆಯನ್ನು ಪ್ರತಿನಿಧಿಸುವಂತಿದ್ದವು ಎಂಬುದು ಗಮನಾರ್ಹ ಅಂಶ.[೨೮]

1930ರ ದಶಕದಿಂದ 1940ರ ದಶಕದವರೆಗೆ[ಬದಲಾಯಿಸಿ]

 • ಮಹಾನ್‌ ಕೈಗಾರಿಕಾರ್ಥಿಕ ಕುಸಿತದ ಒಂದು ಪರಿಣಾಮವೆಂದರೆ, ಮಾರಾಟವಾಗಬಹುದಾಗಿದ್ದ ಧ್ವನಿಮುದ್ರಿಕೆಗಳ ಸಂಖ್ಯೆಯನ್ನು ಅದು ತಗ್ಗಿಸಿತು. ರೇಡಿಯೋ ಮತ್ತು ಪ್ರಸಾರ ಸೇವೆಯು ಮನರಂಜನೆಯ ಒಂದು ಜನಪ್ರಿಯ ಮೂಲವಾಗಿ ಮಾರ್ಪಟ್ಟಿತು; ಹಳ್ಳಿಗಾಡಿನ ಸಂಗೀತವನ್ನು ಒಳಗೊಂಡಿದ್ದ "ಕಣಜದ ನೃತ್ಯ" ಪ್ರದರ್ಶನಗಳು ದಕ್ಷಿಣ ಭಾಗದ ಎಲ್ಲೆಡೆ ಆರಂಭವಾಗಿ, ತೀರಾ ಉತ್ತರಕ್ಕಿದ್ದ ಚಿಕಾಗೊದಿಂದ ತೀರಾ ಪಶ್ಚಿಮಕ್ಕಿದ್ದ ಕ್ಯಾಲಿಫೋರ್ನಿಯಾದವರೆಗೆ ವ್ಯಾಪಿಸಿದವು.
 • 1925ರಲ್ಲಿ ಆರಂಭಗೊಂಡು ನ್ಯಾಶ್‌ವಿಲ್ಲೆಯಲ್ಲಿನ WSM-AMನಿಂದ ಬಿತ್ತರಗೊಂಡ ಗ್ರಾಂಡ್‌ ಓಲೆ ಓಪ್ರಿ ಯು ಅತ್ಯಂತ ಪ್ರಮುಖ ಪ್ರಸ್ತುತಿ ಎನಿಸಿತು. ಇದು ಇಂದಿಗೂ ಮುಂದುವರಿದುಕೊಂಡು ಬಂದಿದೆ. ಓಪ್ರಿ ಯಲ್ಲಿ ಪ್ರಸ್ತುತಿ ನೀಡಿದ ಕೆಲವೊಂದು ಆರಂಭಿಕ ತಾರೆಗಳಲ್ಲಿ ಅಂಕಲ್‌ ಡೇವ್‌ ಮೆಕಾನ್‌‌, ರಾಯ್‌‌ ಅಕುಫ್‌‌ ಮತ್ತು ಅಮೆರಿಕಾದ ನೀಗ್ರೋ ಆಗಿದ್ದ ಹಾರ್ಮೋನಿಕಾ ವಾದಕ ಡಿಫೋರ್ಡ್‌ ಬೇಲಿ ಸೇರಿದ್ದರು. WSMನ 50,000 ವ್ಯಾಟ್‌ ಸಾಮರ್ಥ್ಯದ ಪ್ರಸಾರ ಸಂಕೇತವು (1934) ದೇಶದ[೨೯] ಉದ್ದಗಲಕ್ಕೂ ಹಲವು ಬಾರಿ ಹೇಳಿ ಬರುತ್ತಿತ್ತು.
 • ಹಳ್ಳಿಗಾಡಿನ ಸಂಗೀತದ ಈ ಯುಗವು "ಬಂಗಾರದ ಯುಗ" ಎಂಬ ಅವಧಿಯೊಂದರ ಹುಟ್ಟುವಿಕೆಗೆ ಕಾರಣವಾಯಿತು. ಹಳ್ಳಿಗಾಡಿನ ಸಂಗೀತದ ಈ ಸ್ವರೂಪವನ್ನು ಜನಪ್ರಿಯ ಗೊಳಿಸುವುದಕ್ಕೆ ಸಂಬಂಧಿಸಿದಂತೆ ಗ್ರಾಂಡ್‌ ಓಲೆ ಓಪ್ರಿಯು ಅತ್ಯಂತ ಪ್ರಸಿದ್ಧವಾಗಿದೆ; ಆಧಾರನಾದದ ಉಕ್ಕಿನ ಗಿಟಾರಿನಂಥ ಹೊಸ ಸಂಗೀತ ವಾದ್ಯದ ಬಳಕೆಯೊಂದಿಗೆ ಪರ್ವತದ ಧ್ವನಿಗಳು ಹದವಾಗಿ ಮಿಶ್ರಣಗೊಳಿಸಲ್ಪಡುವುದನ್ನು ಇದು ಒಳಗೊಳ್ಳುತ್ತದೆ.
 • ಜಾರ್ಜ್‌ ಜೋನ್ಸ್‌‌, ಪೋರ್ಟರ್‌‌ ವ್ಯಾಗನರ್‌‌, ಮತ್ತು ಲೊರೆಟ್ಟಾ ಲಿನ್‌‌‌‌‌ರಂಥ ಕಲಾವಿದರು ಹಳ್ಳಿಗಾಡಿನ[೩೦] ಸಂಗೀತದ ಬಂಗಾರದ ಯುಗವನ್ನು ಪ್ರತಿನಿಧಿಸಿದರು ಹಾಗೂ ಈ ಹಾಡುಗಳ ಪೈಕಿ ಅನೇಕವು ತಮ್ಮ ಸರಳತೆಯ ಮೂಲಕ ಇಂದಿಗೂ ಅನುರಣಿಸುತ್ತಿವೆ.
 • ಅನೇಕ ಸಂಗೀತಗಾರರು ಬಹಳಷ್ಟು ಶೈಲಿಗಳಲ್ಲಿ ಹಾಡುಗಳನ್ನು ಪ್ರಸ್ತುತಪಡಿಸಿದರು ಹಾಗೂ ಧ್ವನಿಮುದ್ರಿಸಿದರು. ಉದಾಹರಣೆಗೆ: ಮೂನ್ ಮುಲ್ಲಿಕನ್‌‌ ಎಂಬಾತ ಪಾಶ್ಚಾತ್ಯ ತೀವ್ರಧಾಟಿಯ ಸಂಗೀತವನ್ನು ನುಡಿಸಿದ್ದರ ಜೊತೆಗೆ ರಾಕಬಿಲಿ ಎಂದು ಕರೆಯಬಹುದಾದ ಪ್ರಕಾರದ ಹಾಡುಗಳನ್ನೂ ಸಹ ಧ್ವನಿಮುದ್ರಿಸಿದ. ಬಿಲ್‌‌ ಹ್ಯಾಲೆ ಎಂಬಾತ ಕೌಬಾಯ್‌‌ ಹಾಡುಗಳನ್ನು ಹಾಡಿದ ಮತ್ತು ಒಂದು ಅವಧಿಗಂತೂ ಅವನು ಸ್ವಾಭಾವಿಕ ಧ್ವನಿ ಹಾಗೂ ಕೀರಲು ಧ್ವನಿಗಳನ್ನು ಪರ್ಯಾಯವಾಗಿ ಹಾಡುವ ಓರ್ವ ಕೌಬಾಯ್‌‌ ಗಾಯಕನಾಗಿದ್ದ.
 • ಜಿಮ್ಮೀ ರಾಡ್ಗರ್ಸ್‌‌-ಶೈಲಿಗಳನ್ನು ತನ್ನ ಗಾಯನ ಪರಿಸರಕ್ಕೆ ಸೇರ್ಪಡೆಮಾಡಿಕೊಳ್ಳುವ ಮೂಲಕ, ಹ್ಯಾಲೆಯು ರಾಕ್‌ ಎನ್‌ ರೋಲ್‌‌ ಪ್ರಕಾರದ ಓರ್ವ ಆರಂಭಿಕ ವಾದಕನಾಗಿ ಅತ್ಯಂತ ಪ್ರಸಿದ್ಧನಾದ; ಇದರಿಂದ ಅವನದೇ ಸ್ವಂತಿಕೆಯ ಧ್ವನಿಯೊಂದು ಸೃಷ್ಟಿಯಾಗಲು ಸಾಧ್ಯವಾಯಿತು. ಹಳ್ಳಿಗಾಡಿನ ಸಂಗೀತದ ಮೆಲುದನಿಯಲ್ಲಿ ಹಾಡುವ ಗಾಯಕನಾದ ಎಡ್ಡಿ ಅರ್ನಾಲ್ಡ್‌‌ ಎಂಬಾತ 1947 ಮತ್ತು 1949ರ ನಡುವೆ 10 ಅಗ್ರಗಣ್ಯ ಗೀತೆಗಳ ಪಟ್ಟಿಯಲ್ಲಿ ತನ್ನ ಎಂಟು ಹಾಡುಗಳಿಗೆ ಸ್ಥಾನ ಕಲ್ಪಿಸಿದ್ದ.[೩೧]

ಹಾಡುವ ಕೌಬಾಯ್‌‌ಗಳು ಮತ್ತು ಪಾಶ್ಚಾತ್ಯ ತೀವ್ರಧಾಟಿ[ಬದಲಾಯಿಸಿ]

 • ಕೌಬಾಯ್‌‌ ಹಾಡುಗಳನ್ನು, ಅಥವಾ 1920ರ ದಶಕದಿಂದಲೂ ಧ್ವನಿಮುದ್ರಿಸಲ್ಪಡುತ್ತಿದ್ದ ಪಾಶ್ಚಾತ್ಯ ಸಂಗೀತವನ್ನು ಹಾಲಿವುಡ್‌ನಲ್ಲಿ ನಿರ್ಮಿಸಲ್ಪಟ್ಟ ಚಲನಚಿತ್ರಗಳು 1930ರ ದಶಕ ಮತ್ತು 1940ರ ದಶಕದ ಅವಧಿಯಲ್ಲಿ ಜನಪ್ರಿಯಗೊಳಿಸಿದವು.
 • ಜೀನ್‌ ಆಟ್ರಿ, ಸನ್ಸ್‌ ಆಫ್‌ ದಿ ಪಯನೀರ್ಸ್‌ ಮತ್ತು ರಾಯ್‌‌ ರೋಜರ್ಸ್‌‌ ಇವರೇ ಮೊದಲಾದವರು ಈ ಯುಗಕ್ಕೆ ಸೇರಿದ ಜನಪ್ರಿಯರಾದ ಹಾಡುವ ಕೌಬಾಯ್‌‌‌ಗಳ ಪೈಕಿ ಕೆಲವರಾಗಿದ್ದರು.[೩೨]
 • ಹಾಗಂತ ಕೇವಲ ಕೌಬಾಯ್‌ಗಳು ಮಾತ್ರವೇ ತಮ್ಮ ಕೊಡುಗೆಯನ್ನು ನೀಡಲಿಲ್ಲ; ಹಲವಾರು ಕುಟುಂಬ ಗುಂಪುಗಳಲ್ಲಿ ಕೌಗರ್ಲ್‌ಗಳೂ ಸಹ ಧ್ವನಿಗೆ ತಮ್ಮ ಕೊಡುಗೆ ನೀಡಿದರು. ಇತಿಹಾಸ ನಿರ್ಮಿಸಿದ "ಐ ವಾಂಟ್‌ ಟು ಬಿ ಎ ಕೌಬಾಯ್‌'ಸ್‌ ಸ್ವೀಟ್‌ಹಾರ್ಟ್‌" ಎಂಬ ತನ್ನ ಗೀತೆಯೊಂದಿಗೆ ಪ್ಯಾಟ್ಸಿ ಮೊಂಟಾನಾ ಎಂಬಾಕೆಯು ಮಹಿಳಾ ಕಲಾವಿದರಿಗಾಗಿ ಬಾಗಿಲನ್ನು ತೆರೆದಳು.
 • ಒಂಟಿಗಾಯನದ ಯಶಸ್ವಿ ವೃತ್ತಿಜೀವನಗಳನ್ನು ಮಹಿಳೆಯರು ತಮ್ಮದಾಗಿಸಿಕೊಳ್ಳುವುದಕ್ಕೆ ಸಂಬಂಧಿಸಿದಂತೆ, ಇದು ಅವಕಾಶಗಳೆಡೆಗಿನ ಒಂದು ಆಂದೋಲನವನ್ನು ಶುರುಮಾಡಿತು.‌ಲೋಯರ್‌ ಗ್ರೇಟ್‌ ಪ್ಲೇನ್ಸ್‌ ಪ್ರದೇಶದಿಂದ ಬಂದಿದ್ದ ಬಾಬ್‌ ವಿಲ್ಸ್ ಎಂಬಾತ ಮತ್ತೋರ್ವ ಹಳ್ಳಿಗಾಡಿನ ಸಂಗೀತಗಾರನಾಗಿದ್ದ; ಈತ "ಪ್ರಸಿದ್ಧ ತಂತಿವಾದ್ಯ ಮೇಳ"ವೊಂದರ ನಾಯಕನಾಗಿ ಅತ್ಯಂತ ಜನಪ್ರಿಯನಾಗಿದ್ದ ಮತ್ತು ಹಾಲಿವುಡ್‌ ವೆಸ್ಟರ್ನ್ಸ್‌‌‌ನಲ್ಲಿಯೂ ಈತ ಕಾಣಿಸಿಕೊಂಡ.
 • ಹಳ್ಳಿಗಾಡಿನ ಸಂಗೀತ ಮತ್ತು ಜಾಝ್‌‌ ಸಂಗೀತವನ್ನು ಬೆರೆಸಿ ಅವನು ರೂಪಿಸಿದ ಪ್ರಕಾರವು ನೃತ್ಯಭವನದ ಸಂಗೀತವಾಗಿ ಆರಂಭಗೊಂಡು, ಪಾಶ್ಚಾತ್ಯ ತೀವ್ರಧಾಟಿಯ ಸಂಗೀತವಾಗಿ ಚಿರಪರಿಚಿತವಾಯಿತು.
 • ಸ್ಪೇಡ್ ಕೂಲೆ ಮತ್ತು ಟೆಕ್ಸ್‌ ವಿಲಿಯಮ್ಸ್‌ ಕೂಡಾ ಅತ್ಯಂತ ಜನಪ್ರಿಯ ವಾದ್ಯವೃಂದಗಳನ್ನು ಹೊಂದಿದ್ದರು ಮತ್ತು ಚಲನಚಿತ್ರಗಳಲ್ಲಿ ಕಾಣಿಸಿಕೊಂಡರು. ಪಾಶ್ಚಾತ್ಯ ತೀವ್ರಧಾಟಿಯ ಸಂಗೀತ ಪ್ರಕಾರವು ತನ್ನ ಉಚ್ಛ್ರಾಯ ಸ್ಥಿತಿಯಲ್ಲಿ ಇತರ ದೊಡ್ಡ ವಾದ್ಯವೃಂದದ ಜಾಝ್‌‌ ಸಂಗೀತದ ಜನಪ್ರಿಯತೆಗೆ ತೀವ್ರ ಪೈಪೋಟಿಯನ್ನು ಒಡ್ಡಿತು.

ಸಂಗೀತ ವಾದ್ಯದ ಬಳಕೆಯನ್ನು ಬದಲಾಯಿಸುವಿಕೆ[ಬದಲಾಯಿಸಿ]

 • ಡ್ರಮ್‌ಗಳು "ತೀರಾ ಅಬ್ಬರವಾಗಿವೆ" ಮತ್ತು ಅವು "ಅಪ್ಪಟ ಧ್ವನಿಯನ್ನು ಹೊಮ್ಮಿಸುವುದಿಲ್ಲ" ಎಂಬ ಕಾರಣವನ್ನು ಮುಂದು ಮಾಡಿ ಆರಂಭಿಕ ಹಳ್ಳಿಗಾಡಿನ ಸಂಗೀತಗಾರರು ಅವನ್ನು ಅಲಕ್ಷಿಸಿದರು; ಆದರೆ ಪಾಶ್ಚಾತ್ಯ ತೀವ್ರಧಾಟಿಯ ದೊಡ್ಡ ವಾದ್ಯವೃಂದದ ನಾಯಕನಾದ ಬಾಬ್‌ ವಿಲ್ಸ್‌ ಟೆಕ್ಸಾಸ್‌ 1935ರ ವೇಳೆಗೆ ಪ್ಲೇಬಾಯ್ಸ್ ತಂಡಕ್ಕೆ ಡ್ರಮ್‌ಗಳನ್ನು ಸೇರ್ಪಡೆ ಮಾಡಿದ್ದ. 1940ರ ದಶಕದ ಮಧ್ಯಭಾಗದಲ್ಲಿ, ಪ್ಲೇಬಾಯ್ಸ್‌ ತಂಡದ ಡ್ರಮ್‌ ವಾದಕನು ವೇದಿಕೆಯ ಮೇಲೆ ಕಾಣಿಸಿಕೊಳ್ಳುವುದನ್ನು ಗ್ರಾಂಡ್‌ ಓಲೆ ಓಪ್ರಿಯು ಬಯಸಲಿಲ್ಲ. *1955ರ ವೇಳೆಗೆ ರಾಕಬಿಲಿ ಗುಂಪುಗಳು ಡ್ರಮ್‌ಗಳನ್ನು ಸಾಮಾನ್ಯವಾಗಿ ಬಳಸುತ್ತಿದ್ದವಾದರೂ, ಗ್ರಾಂಡ್‌ ಓಲೆ ಓಪ್ರಿಗಿಂತ ಕಡಿಮೆ ಸಾಂಪ್ರದಾಯಿಕವಾಗಿದ್ದ ಲೂಸಿಯಾನಾ ಹೇರೈಡ್‌ , ವಿರಳವಾಗಿ ಬಳಸಲ್ಪಟ್ಟಿದ್ದ ತನ್ನ ಡ್ರಮ್‌ ವಾದಕನನ್ನು 1956ರ ಅಂತ್ಯದ ವೇಳೆಗೆ ನೇಪಥ್ಯಕ್ಕೆ ಸರಿಸಿತ್ತು.
 • ಆದಾಗ್ಯೂ, 1960ರ ದಶಕದ ಆರಂಭದ ವೇಳೆಗೆ, ಹಳ್ಳಿಗಾಡಿನ ಸಂಗೀತದ ವಾದ್ಯವೃಂದವೊಂದು ಓರ್ವ ಡ್ರಮ್‌ ವಾದಕನನ್ನು ಹೊಂದಿರದೇ ಇರುವುದು ಅಪರೂಪವಾಗಿತ್ತು.[೩೩]
 • ಬಾಬ್‌ ವಿಲ್ಸ್‌ 1938ರಲ್ಲಿ ತನ್ನ ವಾದ್ಯವೃಂದಕ್ಕೆ ವಿದ್ಯುತ್‌ಚಾಲಿತ ಗಿಟಾರೊಂದನ್ನು ಸೇರ್ಪಡೆ ಮಾಡುವ ಮೂಲಕ, ಈ ಪ್ರಯತ್ನ ಮಾಡಿದ ಹಳ್ಳಿಗಾಡಿನ ಸಂಗೀತಗಾರರ ಪೈಕಿ ಮೊದಲಿಗ ಎನಿಸಿಕೊಂಡ.[೩೪]
 • ಒಂದು ದಶಕದ ನಂತರ (1948) ಅರ್ಥರ್‌‌ ಸ್ಮಿತ್‌‌ ಎಂಬಾತ, MGM ರೆಕಾರ್ಡ್ಸ್‌ ಸಂಸ್ಥೆಗಾಗಿ ಧ್ವನಿಮುದ್ರಿಸಿದ "ಗಿಟಾರ್‌‌ ಬೂಗೀ" ಎಂಬ ತನ್ನ ಗೀತೆಯ ಮೂಲಕ USನ 10 ಅಗ್ರಗಣ್ಯ ಹಳ್ಳಿಗಾಡಿನ ಸಂಗೀತದ ಕೋಷ್ಟಕದಲ್ಲಿ ಯಶಸ್ಸು ಸಾಧಿಸಿದ; ಇದು ಅಲ್ಲಿಂದ US ಪಾಪ್‌ ಕೋಷ್ಟಕಕ್ಕೂ ದಾಟಿತು ಮತ್ತು ವಿದ್ಯುತ್‌ಚಾಲಿತ ಗಿಟಾರ್‌ನ ಸಾಮರ್ಥ್ಯವನ್ನು ಅನೇಕ ಜನರಿಗೆ ಪರಿಚಯಿಸಿತು.
 • ನ್ಯಾಶ್‌ವಿಲ್ಲೆ ಅವಧಿಯ ವಾದಕರು ಹಲವಾರು ದಶಕಗಳವರೆಗೆ ಕಮಾನು ತುದಿಯ ಮಾದರಿಯ ಗಿಬ್ಸನ್‌‌ ಮತ್ತು ಗ್ರೆಟ್ಷ್‌ ವಿದ್ಯುತ್‌ಚಾಲಿತ ಗಿಟಾರ್‌ಗಳು ಹೊಮ್ಮಿಸುವ ಹೃತ್ಪೂರ್ವಕವಾದ ನಾದಗಳಿಗೆ ಪ್ರಾಶಸ್ತ್ಯ ನೀಡಿದ್ದರು; ಆದರೆ 1950ರ ದಶಕದ ಆರಂಭದಲ್ಲಿ ಲಭ್ಯವಾಗಲು ಶುರುವಾದ ಗಿಟಾರುಗಳನ್ನು ಬಳಸಿಕೊಳ್ಳುವ ಮೂಲಕ, ಒಂದು "ಜನಪ್ರಿಯ" ಫೆಂಡರ್‌ ಶೈಲಿಯು ಹಳ್ಳಿಗಾಡಿನ ಸಂಗೀತದ ವಿಶಿಷ್ಟ ಲಕ್ಷಣದ ಗಿಟಾರು ಧ್ವನಿಯಾಗಿ ಅಂತಿಮವಾಗಿ ಮೇಲುಗೈ ಸಾಧಿಸಿತು.[೩೩][೩೫]

ಬೆಟ್ಟಗಾಡಿನ ಜಾನಪದ ಬೂಗೀ[ಬದಲಾಯಿಸಿ]

 • ಹಳ್ಳಿಗಾಡಿನ ಸಂಗೀತಗಾರರು 1939ರಲ್ಲಿ ಬೂಗೀಯನ್ನು ಧ್ವನಿಮುದ್ರಿಸಲು ಶುರು ಮಾಡಿದರು. ಕಾರ್ನೆಗೀ ಸಭಾಂಗಣದಲ್ಲಿ ಇದು ನುಡಿಸಲ್ಪಟ್ಟ ಸಂದರ್ಭದಲ್ಲಿ ಜಾನಿ ಬಾರ್‌‌ಫೀಲ್ಡ್‌ ಎಂಬಾತ "ಬೂಗೀ ವೂಗೀ"ಯನ್ನು ಧ್ವನಿಮುದ್ರಿಸಿದ ನಂತರದ ಕೆಲವೇ ದಿನಗಳಲ್ಲಿ ಈ ಧ್ವನಿಮುದ್ರಣವು ನಡೆಯಿತು. ಆರಂಭದಲ್ಲಿ ಬೆಟ್ಟಗಾಡಿನ ಜಾನಪದ ಬೂಗೀ, ಅಥವಾ ಒಕೀ ಬೂಗೀ (ನಂತರ ಇದೇ ಹಳ್ಳಿಗಾಡಿನ ಬೂಗೀ ಎಂಬುದಾಗಿ ಮರುನಾಮಕರಣಗೊಂಡಿತು) ಎಂದು ಕರೆಯಲ್ಪಡುತ್ತಿದ್ದ ಪ್ರಕಾರದ ನಿಧಾನ ಹರಿವು 1945ರ ದಶಕದ ಅಂತ್ಯದ ವೇಳೆಗೆ ಒಂದು ಪ್ರವಾಹವಾಗಿ ಮಾರ್ಪಟ್ಟಿತು.
 • ಡೆಲ್‌ಮೋರ್‌‌ ಬ್ರದರ್ಸ್‌‌ ವತಿಯಿಂದ ಬಂದ "ಫ್ರೈಟ್‌ ಟ್ರೇನ್‌‌ ಬೂಗೀ" ಈ ಅವಧಿಗೆ ಸೇರಿದ ಒಂದು ಗಮನಾರ್ಹ ಬಿಡುಗಡೆಯಾಗಿತ್ತು. ಇದು ರಾಕಬಿಲಿ ಪ್ರಕಾರದೆಡೆಗಿನ ಹಳ್ಳಿಗಾಡಿನ ಸಂಗೀತ ಮತ್ತು ಬ್ಲೂಸ್‌ ಸಂಗೀತದ ಒಂದು ಸಂಯೋಜಿತ ವಿಕಸನ ಎಂಬುದಾಗಿ ಪರಿಗಣಿಸಲ್ಪಟ್ಟಿದೆ. 1948ರಲ್ಲಿ, MGM ರೆಕಾರ್ಡ್ಸ್‌ ಸಂಸ್ಥೆಗಾಗಿ ಅರ್ಥರ್‌‌ "ಗಿಟಾರ್‌‌ ಬೂಗೀ" ಸ್ಮಿತ್‌‌ ಧ್ವನಿ ಮುದ್ರಿಸಿದ "ಗಿಟಾರ್‌‌ ಬೂಗೀ" ಮತ್ತು "ಕೈವೀಣೆ ಬೂಗೀ"ಯ ಧ್ವನಿಮುದ್ರಿಕೆಗಳಿಂದಾಗಿ US ಹಳ್ಳಿಗಾಡಿನ ಸಂಗೀತದ ಹತ್ತು ಅಗ್ರಗಣ್ಯ ಗೀತೆಗಳ ಕೋಷ್ಟಕದಲ್ಲಿ ಸ್ಥಾನಗಿಟ್ಟಿಸುವಲ್ಲಿ ಯಶಸ್ವಿಯಾದ;
 • ಇವೆರಡರ ಪೈಕಿ "ಗಿಟಾರ್‌‌ ಬೂಗೀ" ಧ್ವನಿಮುದ್ರಿಕೆಯು US ಪಾಪ್‌ ಕೋಷ್ಟಕಗಳಿಗೂ ಲಗ್ಗೆಯಿಟ್ಟಿತು.[೩೬] ಹಳ್ಳಿಗಾಡಿನ ಬೂಗೀ ಪ್ರಕಾರದ ಇತರ ಕಲಾವಿದರಲ್ಲಿ ಮೆರಿಲ್‌ ಮೂರ್‌ ಮತ್ತು ಟೆನೆಸ್ಸೀ ಅರ್ನೀ ಫೋರ್ಡ್‌ ಸೇರಿದ್ದರು. ಬೆಟ್ಟಗಾಡಿನ ಜಾನಪದ ಬೂಗೀ ಪ್ರಕಾರದ ಅವಧಿಯು 1950ರ ದಶಕದವರೆಗೆ ಮುಂದುವರಿಯಿತು ಮತ್ತು 21ನೇ ಶತಮಾನಕ್ಕೆ ಅಡಿಯಿಟ್ಟ ಹಳ್ಳಿಗಾಡಿನ ಸಂಗೀತದ ಅನೇಕ ಉಪ-ಪ್ರಕಾರಗಳ ಪೈಕಿ ಅದು ಒಂದಾಗಿ ಉಳಿದುಕೊಂಡಿತು.

ಬ್ಲೂಗ್ರಾಸ್‌‌, ಜಾನಪದ ಮತ್ತು ಸುವಾರ್ತೆ[ಬದಲಾಯಿಸಿ]

ಚಿತ್ರ:Clyde J Foley.jpg
ರೆಡ್‌ ಫೋಲೆ
 • IIನೇ ಜಾಗತಿಕ ಸಮರದ ಅಂತ್ಯದ ವೇಳೆಗೆ, ಬ್ಲೂಗ್ರಾಸ್‌‌ ಎಂದು ಕರೆಯಲ್ಪಡುತ್ತಿದ್ದ "ಪರ್ವತಾರೋಹಿ" ತಂತಿವಾದ್ಯ ಮೇಳದ ಸಂಗೀತವು ಹೊರಹೊಮ್ಮಿತು; ರಾಯ್‌‌ ಅಕುಫ್‌‌ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲೆಸ್ಟರ್‌‌ ಫ್ಲಾಟ್‌ ಮತ್ತು ಅರ್ಲ್‌ ಸ್ಕ್ರಗ್ಸ್‌‌ ಜೊತೆಯಲ್ಲಿ ಗ್ರಾಂಡ್‌ ಓಲೆ ಓಪ್ರಿ ಕಾರ್ಯಕ್ರಮದಲ್ಲಿ ಬಿಲ್‌‌ ಮನ್ರೋ ಸೇರಿಕೊಂಡಾಗ ಇದು ಸಂಭವಿಸಿತು. ಸುವಾರ್ತೆ ಸಂಗೀತವೂ ಸಹ ಹಳ್ಳಿಗಾಡಿನ ಸಂಗೀತದ ಒಂದು ಜನಪ್ರಿಯ ಅಂಗಭಾಗವಾಗಿ ಉಳಿದುಕೊಂಡಿತು.
 • IIನೇ ಜಾಗತಿಕ ಸಮರದ ನಂತರ ಪ್ರವರ್ಧಮಾನಕ್ಕೆ ಬಂದ ರೆಡ್‌ ಫೋಲೆ ಎಂಬ ಹಳ್ಳಿಗಾಡಿನ ಸಂಗೀತದ ಅತಿದೊಡ್ಡ ತಾರೆಯು, ಮೊದಲ ಬಾರಿಗೆ ದಶಲಕ್ಷ ಸಂಖ್ಯೆಯಲ್ಲಿ ಮಾರಾಟವಾದ ಸುವಾರ್ತೆಯ ಜನಪ್ರಿಯ ಗೀತೆಗಳ ಪೈಕಿ ("ಪೀಸ್‌ ಇನ್‌ ದಿ ವ್ಯಾಲಿ") ಒಂದನ್ನು ತನ್ನ ಸಾಧನೆಯಲ್ಲಿ ಸೇರಿಸಿಕೊಂಡ ಹಾಗೂ ಬೂಗೀ, ಬ್ಲೂಸ್‌ ಮತ್ತು ರಾಕಬಿಲಿ ಪ್ರಕಾರಗಳಲ್ಲಿಯೂ ಆತ ಹಾಡಿದ.
 • ಯುದ್ಧಾನಂತರದ ಅವಧಿಯಲ್ಲಿ, ಹಳ್ಳಿಗಾಡಿನ ಸಂಗೀತವು ವ್ಯಾಪಾರದ ವಲಯಗಳಲ್ಲಿ "ಜಾನಪದ" ಪ್ರಕಾರ ಎಂಬುದಾಗಿಯೂ, ಉದ್ಯಮದೊಳಗಡೆ "ಬೆಟ್ಟಗಾಡಿನ ಜಾನಪದ" ಪ್ರಕಾರ ಎಂಬುದಾಗಿಯೂ ಕರೆಯಲ್ಪಟ್ಟಿತು.[೩೭]
 • 1944ರಲ್ಲಿ, "ಬೆಟ್ಟಗಾಡಿನ ಜಾನಪದ" ಎಂಬ ಶಬ್ದವನ್ನು "ಜಾನಪದ ಹಾಡುಗಳು ಮತ್ತು ಬ್ಲೂಸ್‌" ಎಂಬುದರಿಂದ ದಿ ಬಿಲ್‌ಬೋರ್ಡ್‌ ಪಲ್ಲಟಗೊಳಿಸಿತು, ಮತ್ತು 1949ರಲ್ಲಿ ಇದನ್ನು "ಹಳ್ಳಿಗಾಡಿನ" ಸಂಗೀತ ಅಥವಾ "ಹಳ್ಳಿಗರ ಹಾಡು" ಎಂಬುದಾಗಿ ಬದಲಾಯಿಸಿತು.[೩೮][೩೯]

ಹಾಂಕಿ ಟಾಂಕ್‌‌[ಬದಲಾಯಿಸಿ]

 • ವೈವಿಧ್ಯಮಯ ಚಿತ್ತಸ್ಥಿತಿಗಳನ್ನು ಹೊಂದಿರುವ ಹಾಗೂ ಗಿಟಾರು, ಮಂದ್ರವಾದ್ಯ, ಡೊಬ್ರೊ ಅಥವಾ ಉಕ್ಕಿನ ಗಿಟಾರು (ಮತ್ತು ನಂತರದಲ್ಲಿ) ಡ್ರಮ್‌ಗಳನ್ನು ಒಳಗೊಂಡ ಒಂದು ಮೂಲಭೂತ ಮೇಳದೊಂದಿಗಿನ, ಆವರಣ ಕಳಚಿದ ಮತ್ತು ಕಚ್ಚಾ ಸಂಗೀತದ ಮತ್ತೊಂದು ಬಗೆಯು ವಿಶೇಷವಾಗಿ ದಕ್ಷಿಣ ಭಾಗದ ಬಿಳಿಯ ಬಡಜನರ ಸಮುದಾಯದಲ್ಲಿ ಜನಪ್ರಿಯ ವಾಯಿತು. ಹಾಂಕಿ ಟಾಂಕ್‌‌ ಎಂದು ಕರೆಯಲ್ಪಟ್ಟ ಈ ಪ್ರಕಾರವು ಟೆಕ್ಸಾಸ್‌ನಲ್ಲಿ ತನ್ನ ಮೂಲಗಳನ್ನು ಹೊಂದಿತ್ತು.
 • ಬಾಬ್‌ ವಿಲ್ಸ್‌ ಮತ್ತು ಅವನ ಟೆಕ್ಸಾಸ್‌ ಪ್ಲೇಬಾಯ್ಸ್‌ ತಂಡದ ಸದಸ್ಯರು ಈ ಸಂಗೀತಕ್ಕೆ ಸಾಕಾರರೂಪವನ್ನು ನೀಡಿದರು; "ಒಂದಷ್ಟು ಇದು, ಮತ್ತು ಒಂದಷ್ಟು ಅದು, ಒಂದಷ್ಟು ಕರಿಯರ ಸಂಗೀತ ಮತ್ತು ಒಂದಷ್ಟು ಬಿಳಿಯರ ಸಂಗೀತ. ನೀವು ತೀರಾ ಆಲೋಚನೆಗೆ ಇಳಿಯದಂತೆ ಮಾಡುವ ಹಾಗೂ ವಿಸ್ಕಿಗೆ ಮೊರೆ ಹೋಗುವಂತೆ ಪ್ರೇರೇಪಿಸಬಲ್ಲ ಅಬ್ಬರದ ಸದ್ದು" ಇವುಗಳ ಹದವಾದ ಮಿಶ್ರಣವಾಗಿ ಈ ಸಂಗೀತವು ವಿವರಿಸಲ್ಪಟ್ಟಿದೆ.[೪೦]
 • ಟೆಕ್ಸಾಸ್‌ನ ಪೂರ್ವ ಭಾಗಕ್ಕೆ ಸೇರಿರವನಾದ ಅಲ್‌ ಡೆಕ್ಸ್‌ಟರ್‌‌ ಎಂಬಾತ "ಹಾಂಕಿ ಟಾಂಕ್‌‌ ಬ್ಲೂಸ್‌"ನೊಂದಿಗೆ ಒಂದು ಜನಪ್ರಿಯ ಗೀತೆಯನ್ನು ತನ್ನದಾಗಿಸಿಕೊಂಡ ಮತ್ತು ಏಳು ವರ್ಷಗಳ ನಂತರ "ಪಿಸ್ಟಲ್‌ ಪ್ಯಾಕಿನ್‌' ಮಾಮಾ" ಗೀತೆಯ ಯಶಸ್ಸು ಅವನದಾಯಿತು.[೪೧] ಪಾನಕೋಣೆಗಳಿಗೆ ಲಗತ್ತಾಗಿದ್ದ ಈ "ಹಾಂಕಿ ಟಾಂಕ್‌‌" ಹಾಡುಗಳನ್ನು ಅರ್ನೆಸ್ಟ್‌ ಟಬ್‌‌, ಟೆಡ್‌ ಡಾಫನ್‌, ಫ್ಲಾಯ್ಡ್‌‌ ಟಿಲ್‌ಮನ್‌‌, ಮತ್ತು ಮೆಡಾಕ್ಸ್‌ ಬ್ರದರ್ಸ್‌‌ ಅಂಡ್‌ ರೋಸ್‌, ಲೆಫ್ಟಿ ಫ್ರಿಜೆಲ್‌‌ ಮತ್ತು ಹ್ಯಾಂಕ್‌ ವಿಲಿಯಮ್ಸ್‌ ಇವರೇ ಮೊದಲಾದ ಕಲಾವಿದರು ಪ್ರಸ್ತುತ ಪಡಿಸಿದರು. * ಈ ಹಾಡುಗಳು ನಂತರದಲ್ಲಿ ಹಳ್ಳಿಗಾಡಿನ "ಸಾಂಪ್ರದಾಯಿಕ" ಹಾಡುಗಳೆಂದು ಕರೆಯಲ್ಪಟ್ಟವು. ನಿರ್ದಿಷ್ಟವಾಗಿ ಹೇಳುವುದಾದರೆ ವಿಲಿಯಮ್ಸ್‌ನ ಪ್ರಭಾವವು ಅಗಾಧ ಪ್ರಮಾಣ ದಲ್ಲಿದ್ದು, ಎಲ್ವಿಸ್‌ ಪ್ರೆಸ್ಲೆ ಮತ್ತು ಜೆರ್ರಿ ಲೀ ಲೆವಿಸ್‌‌‌ರಂಥ ರಾಕ್‌ ಅಂಡ್‌ ರೋಲ್ ಪ್ರಕಾರದ ಪಥನಿರ್ಮಾಪಕರ ಪೈಕಿ ಅನೇಕರನ್ನು ಪ್ರೇರೇಪಿಸಿತು; ಅಷ್ಟೇ ಅಲ್ಲ, ಜಾರ್ಜ್‌ ಜೋನ್ಸ್‌ ‌ನಂಥ ಚಿಗುರುತ್ತಿರುವ ಹಾಂಕಿ ಟಾಂಕ್‌‌ ಪ್ರತಿಭೆಗಳಿಗೆ ಸಂಬಂಧಿಸಿದಂತೆ ಒಂದು ಚೌಕಟ್ಟನ್ನು ಅದು ಒದಗಿಸಿತು.
 • ವೆಬ್ ಪಿಯರ್ಸ್‌‌ ಎಂಬಾತ 1950ರ ದಶಕದ ಸಂಗೀತ-ಕೋಷ್ಟಕದಲ್ಲಿ ಅಗ್ರಗಣ್ಯ ಸ್ಥಾನಪಡೆದಿದ್ದ ಹಳ್ಳಿಗಾಡಿನ ಕಲಾವಿದನಾಗಿದ್ದು, ಅವನ 13 ಏಕಗೀತೆಗಳು 113 ವಾರಗಳವರೆಗೆ ಮೊದಲನೇ ಸ್ಥಾನವನ್ನು ಕಾಯ್ದುಕೊಂಡಿದ್ದವು. ಆ ದಶಕದ ಅವಧಿಯಲ್ಲಿ ಅವನ 48 ಏಕಗೀತೆಗಳು ಕೋಷ್ಟಕದಲ್ಲಿ ಸ್ಥಾನಪಡೆದವು; ಅವುಗಳ ಪೈಕಿ 31 ಗೀತೆಗಳು ಹತ್ತು ಅಗ್ರಗಣ್ಯ ಗೀತೆಗಳ ಪೈಕಿ ಸ್ಥಾನಪಡೆದರೆ, 26 ಗೀತೆಗಳು ನಾಲ್ಕು ಅಗ್ರಗಣ್ಯ ಗೀತೆಗಳ ಪಟ್ಟಿಯಲ್ಲಿ ನೆಲೆಕಂಡವು.

1950ರ ದಶಕದಿಂದ 1960ರ ದಶಕದವರೆಗೆ[ಬದಲಾಯಿಸಿ]

1950ರ ದಶಕದ ಆರಂಭದ ವೇಳೆಗೆ, ಪಾಶ್ಚಾತ್ಯ ತೀವ್ರಧಾಟಿ, ಹಳ್ಳಿಗಾಡಿನ ಬೂಗೀ, ಮತ್ತು ಹಾಂಕಿ ಟಾಂಕ್‌‌ ಪ್ರಕಾರಗಳ ಒಂದು ಹದವಾದ ಮಿಶ್ರಣವು ಬಹುಪಾಲು ಹಳ್ಳಿಗಾಡಿನ ವಾದ್ಯವೃಂದಗಳಿಂದ ನುಡಿಸಲ್ಪಡುತ್ತಿತ್ತಾದರೂ, ಒಂದು ಹೊಸ ಶೈಲಿಯು ಜನಪ್ರಿಯಗೊಳ್ಳುವುದರಲ್ಲಿತ್ತು.[೪೨]

ರಾಕಬಿಲಿ[ಬದಲಾಯಿಸಿ]

ಜೊನಿ ಕ್ಯಾಶ್
 • ರಾಕಬಿಲಿ ಪ್ರಕಾರವು 1950ರ ದಶಕದಲ್ಲಿ ಹಳ್ಳಿಗಾಡಿನ ಸಂಗೀತದ ಅಭಿಮಾನಿಗಳ ನಡುವೆ ಅತ್ಯಂತ ಜನಪ್ರಿಯವಾಗಿತ್ತು. ಹಳ್ಳಿಗಾಡಿನ ಸಂಗೀತದಲ್ಲಿ 1956ರ ವರ್ಷವನ್ನು ರಾಕಬಿಲಿ ಪ್ರಕಾರದ ವರ್ಷ ಎಂದು ಕರೆಯಬಹುದು. ರಾಕಬಿಲಿ ಪ್ರಕಾರವು, ರಾಕ್‌-ಅಂಡ್‌-ರೋಲ್‌‌ ಮತ್ತು ಬೆಟ್ಟಗಾಡಿನ ಜಾನಪದ ಸಂಗೀತದ ಒಂದು ಮಿಶ್ರಣವಾಗಿತ್ತು. ಈ ಅವಧಿಯಲ್ಲಿ ಎಲ್ವಿಸ್‌ ಪ್ರೆಸ್ಲೆಯು ಹಳ್ಳಿಗಾಡಿನ ಸಂಗೀತದೆಡೆಗೆ ಹೊರಳುದಾರಿ ತುಳಿದು ಪರಿವರ್ತಿಸಲ್ಪಟ್ಟ. ಈ ಅವಧಿಯಲ್ಲೇ ಆತ ಸಂಗೀತದ ಉದ್ಯಮದಲ್ಲಿ ಒಂದು ಬೃಹತ್‌‌ ಪಾತ್ರವನ್ನು ವಹಿಸಿದ. *ಆ ವರ್ಷದ ಬಿಲ್‌ಬೋರ್ಡ್‌ನ ಕೋಷ್ಟಕಗಳಲ್ಲಿನ ಎರಡು, ಮೂರು ಮತ್ತು ನಾಲ್ಕನೇ ಸ್ಥಾನಗಳು ಎಲ್ವಿಸ್‌ ಪ್ರೆಸ್ಲೆಯ ಹಾಡುಗಳ ಪಾಲಾಗಿದ್ದವು; "ಹಾಟ್‌ಬ್ರೇಕ್‌ ಹೊಟೇಲ್‌"; ಜಾನಿ ಕ್ಯಾಶ್‌‌, "ಐ ವಾಕ್‌ ದಿ ಲೈನ್‌‌"; ಮತ್ತು ಕಾರ್ಲ್‌ ಪರ್ಕಿನ್ಸ್‌‌, "ಬ್ಲೂ ಸ್ಯೂಡ್‌ ಷೂಸ್‌" ಇವೇ ಆ ನಾಲ್ಕು ಹಾಡುಗಳಾಗಿದ್ದವು.[೪೩]
 • 1958ರ ವರ್ಷದ 5 ಅಗ್ರಗಣ್ಯ ಹಾಡುಗಳ ಪೈಕಿ ಕ್ಯಾಶ್‌‌ ಮತ್ತು ಪ್ರೆಸ್ಲೆಯವರ ಹಾಡುಗಳಿಗೆ ಜಾಗ ಸಿಕ್ಕಿತು; ಕ್ಯಾಶ್‌‌ ಪ್ರಸ್ತುತಿಯ "ಗೆಸ್‌ ಥಿಂಗ್ಸ್‌ ಹ್ಯಾಪನ್‌ ದಟ್‌ ವೇ/ಕಮ್‌ ಇನ್‌, ಸ್ಟ್ರೇಂಜರ್‌" ಎಂಬ ಗೀತೆಯು 3ನೇ ಸ್ಥಾನವನ್ನು ಅಲಂಕರಿಸಿದರೆ, ಪ್ರೆಸ್ಲೆ ಪ್ರಸ್ತುತಿಯ "ಡೋಂಟ್‌/ಐ ಬೆಗ್‌ ಆಫ್‌ ಯು" ಎಂಬ ಗೀತೆಯು 5ನೇ ಸ್ಥಾನವನ್ನು ಅಲಂಕರಿಸಿತು.[೪೪]
 • ತನ್ನ ಪ್ರಸ್ತುತಿಯ ಶೈಲಿಯ ಮೇಲೆ ಲಯ ಮತ್ತು ಬ್ಲೂಸ್‌ ಕಲಾವಿದರ ಪ್ರಭಾವವಿದೆ ಎಂಬ ಅಭಿಪ್ರಾಯಕ್ಕೆ ಪ್ರೆಸ್ಲೆ ಸಮ್ಮತಿಸಿದ. "ನಾನು ಈಗ ಮಾಡುತ್ತಿರುವ ರೀತಿಯಲ್ಲಿಯೇ ವರ್ಣ ರಂಜಿತ ಜಾನಪದ ಕಲಾವಿದರು ಹಾಡುತ್ತಾ, ಸಂಗೀತವನ್ನು ನುಡಿಸುತ್ತಾ ಬಂದಿದ್ದಾರೆ. ನನಗೆ ತಿಳಿದಿರುವುದಕ್ಕಿಂತ ಮುಂಚಿನಿಂದಲೂ ಇದು ನಡೆದು ಕೊಂಡು ಬಂದಿದೆ" ಎಂದು ತಿಳಿಸಿದ ಆತ, "ನನ್ನ ಸಂಗೀತದ ಮೂಲದ್ರವ್ಯವು ಕೇವಲ ಹಳ್ಳಿಗಾಡಿನ ಸಂಗೀತ ಪ್ರಕಾರವನ್ನು ಪ್ರಚೋದಿಸಿದೆ" ಎಂದೂ ಹೇಳಿದ.[೪೦]
 • ಕೆಲವೇ ವರ್ಷಗಳೊಳಗಾಗಿ, ಅನೇಕ ರಾಕಬಿಲಿ ಸಂಗೀತಗಾರರು ಅತೀವವಾದ ಒಂದು ಮುಖ್ಯವಾಹಿನಿ ಶೈಲಿಗೆ ಹಿಂದಿರುಗಿದರು ಅಥವಾ ತಮ್ಮದೇ ಆದ ಅನನ್ಯ ಶೈಲಿಯನ್ನು ವಿಶದೀಕರಿಸಿದ್ದರು. 1955ರಿಂದ 1960ರವರೆಗಿನ ಅವಧಿಯಲ್ಲಿ, ಮಿಸ್ಸೌರಿಯ ಸ್ಪ್ರಿಂಗ್‌ಫೀಲ್ಡ್‌‌‌ನಿಂದ ರೇಡಿಯೋದಲ್ಲಿ ಹಾಗೂ ABC-TVಯಲ್ಲಿನ ಒಜಾರ್ಕ್‌ ಜುಬಿಲೀ ಕಾರ್ಯಕ್ರಮದಲ್ಲಿ ಬಿತ್ತರಗೊಳ್ಳುವ ಮೂಲಕ, ಹಳ್ಳಿಗಾಡಿನ ಸಂಗೀತವು ರಾಷ್ಟ್ರೀಯ ದೂರದರ್ಶನದ ಪ್ರದರ್ಶನದ-ಮಾನ್ಯತೆಯನ್ನು ಗಳಿಸಿತು.
 • ಒಜಾರ್ಕ್‌ ಕಾರ್ಯಕ್ರಮಗಳ ಕೆಲವೊಂದು ಕಲಾವಿದರೂ ಸೇರಿದಂತೆ, ಹಲವಾರು ರಾಕಬಿಲಿ ಕಲಾವಿದರನ್ನು ಒಳಗೊಂಡ ಅಗ್ರಗಣ್ಯ ತಾರೆಗಳಿಗೆ ಈ ಕಾರ್ಯಕ್ರಮವು ಪ್ರದರ್ಶನ-ವೇದಿಕೆಯಾಯಿತು. 1956ರಲ್ಲಿ ವೆಬ್‌‌ ಪಿಯರ್ಸ್‌‌ ವಿವರಿಸಿದಂತೆ, "ಒಂದಾನೊಂದು ಕಾಲದಲ್ಲಿ, ನ್ಯೂಯಾರ್ಕ್‌ ನಗರದಂಥ ಪ್ರದೇಶವೊಂದರಲ್ಲಿ ಹಳ್ಳಿಗಾಡಿನ ಸಂಗೀತದ ಧ್ವನಿಮುದ್ರಿಕೆಯನ್ನು ಮಾರುವುದು ಬಹುಪಾಲು ಅಸಾಧ್ಯವಾಗಿತ್ತು.
 • ಇಂದು, ದೂರದರ್ಶನವು ನಮ್ಮನ್ನು ಎಲ್ಲೆಡೆಗೆ ಕೊಂಡೊಯ್ಯುತ್ತಿದೆ, ಮತ್ತು ಹಳ್ಳಿಗಾಡಿನ ಸಂಗೀತದ ಧ್ವನಿಮುದ್ರಿಕೆಗಳು ಹಾಗೂ ಸಂಗೀತದ ಕೃತಿಹಾಳೆಗಳು ಬೇರೆಡೆಗಿಂತ ಹೆಚ್ಚಾಗಿ ಬೃಹತ್‌‌ ನಗರಗಳಲ್ಲಿ ಮಾರಾಟವಾಗುತ್ತವೆ."[೪೫]
 • 1950ರ ದಶಕದ ದ್ವಿತೀಯಾರ್ಧದ ವೇಳೆಗೆ ಲಬಾಕ್‌ ಧ್ವನಿಯ ಉದಯವಾಯಿತಾದರೂ, ದಶಕದ ಅಂತ್ಯದ ವೇಳೆಗೆ ಕಂಡು ಬಂದ ಪ್ರತಿಕ್ರಿಯೆ ಹಾಗೂ ರೇ ಪ್ರೈಸ್‌, ಮಾರ್ಟಿ ರಾಬಿನ್ಸ್‌‌, ಮತ್ತು ಜಾನಿ ಹಾರ್ಟನ್‌‌‌ರಂಥ ಸಾಂಪ್ರದಾಯಿಕ ಕಲಾವಿದರು, 50ರ ದಶಕದ ಮಧ್ಯಭಾಗದ ರಾಕ್‌ ಎನ್‌' ರೋಲ್‌‌ ಪ್ರಭಾವಗಳಿಂದ ಉದ್ಯಮವನ್ನು ಬೇರೆಡೆಗೆ ವರ್ಗಾ ಯಿಸಲು ಶುರುಮಾಡಿದರು.

ನ್ಯಾಶ್‌ವಿಲ್ಲೆ ಮತ್ತು ಹಳ್ಳಿಗಾಡು ಪ್ರದೇಶದ ಧ್ವನಿಗಳು[ಬದಲಾಯಿಸಿ]

ಚಿತ್ರ:Jim Reeves.jpg
ಜಿಮ್‌‌ ರೀವ್ಸ್‌‌
 • 1950ರ ದಶಕದ ಮಧ್ಯಭಾಗದಲ್ಲಿ ಪ್ರಾರಂಭಗೊಂಡು, 1960ರ ದಶಕದ ಆರಂಭಿಕ ಅವಧಿಯಲ್ಲಿ ತನ್ನ ಉತ್ತುಂಗವನ್ನು ತಲುಪಿದ ನ್ಯಾಶ್‌ವಿಲ್ಲೆ ಧ್ವನಿಯು, ಹಳ್ಳಿಗಾಡಿನ ಸಂಗೀತ ವನ್ನು ಟೆನೆಸ್ಸೀಯ ನ್ಯಾಶ್‌ವಿಲ್ಲೆಯಲ್ಲಿ ಕೇಂದ್ರೀಕರಿಸಲ್ಪಟ್ಟ ದಶಲಕ್ಷಗಟ್ಟಲೆ-ಡಾಲರ್‌‌ ಮೌಲ್ಯದ ಒಂದು ಉದ್ಯಮವನ್ನಾಗಿ ಮಾರ್ಪಡಿಸಿತು. ಚೆಟ್‌ ಆಟ್ಕಿನ್ಸ್‌‌, ಒವೆನ್‌‌ ಬ್ರಾಡ್ಲೆಯಂಥ ನಿರ್ಮಾಪಕರು, ಮತ್ತು ನಂತರದಲ್ಲಿ ಬಂದ ಬಿಲ್ಲಿ ಷೆರಿಲ್‌‌‌‌‌ನ ನಿರ್ದೇಶನದ ಅನುಸಾರ, ಸದರಿ ಧ್ವನಿಯು ಹಳ್ಳಿಗಾಡಿನ ಸಂಗೀತವನ್ನು ವೈವಿಧ್ಯಮಯ ಪ್ರೇಕ್ಷಕರಿಗೆ ಮುಟ್ಟಿಸಿತು.
 • ಅಷ್ಟೇ ಅಲ್ಲ, ವ್ಯಾಪಾರೀ ದೃಷ್ಟಿಯಲ್ಲಿ ಚುರುಕಿಲ್ಲದ ಅವಧಿಯೊಂದರಲ್ಲಿ ಹಳ್ಳಿಗಾಡಿನ ಸಂಗೀತವು ಹೊರಹೊಮ್ಮಿದ ಕಾರಣದಿಂದಾಗಿ, ಅದರ ಪುನರುಜ್ಜೀವನಕ್ಕೂ ಅದು ನೆರವು ನೀಡಿತು.[೪೬] 1950ರ ದಶಕದ ಪಾಪ್‌ ಶೈಲಿಗಳಿಂದ ಎರವಲು ಪಡೆಯುವುದಕ್ಕೆ ಸಂಬಂಧಿಸಿದಂತೆ ಈ ಉಪ-ಪ್ರಕಾರವು ಗಮನಾರ್ಹವಾಗಿತ್ತು: ಒಂದು ಎದ್ದು ಕಾಣುವ ಮತ್ತು "ನವಿರಾದ" ಗಾಯನಭಾಗ, ಒಂದು ತಂತಿವಾದ್ಯ ವಿಭಾಗ ಮತ್ತು ಗಾಯನಭಾಗದ ಸಮೂಹಗಾಯನಗಳು ಅದಕ್ಕೆ ಒತ್ತಾಸೆಯಾಗಿರುವುದು ಇದರಲ್ಲಿನ ವೈಶಿಷ್ಟ್ಯವಾಗಿತ್ತು.
 • "ಲಿಕ್ಸ್‌‌" ಹಣೆಪಟ್ಟಿಯ ಪರವಾಗಿ ವಾದ್ಯಸಂಗೀತದ ತನಿಪ್ರಸ್ತುತಿಯ ಮೇಲಿನ ಒತ್ತನ್ನು ತೆಗೆಯಲಾಯಿತು. ಈ ಪ್ರಕಾರದಲ್ಲಿನ ಅಗ್ರಗಣ್ಯ ಕಲಾವಿದರಲ್ಲಿ ಪ್ಯಾಟ್ಸಿ ಕ್ಲೈನ್‌, ಜಿಮ್‌‌ ರೀವ್ಸ್‌‌ ಮತ್ತು ಎಡ್ಡಿ ಅರ್ನಾಲ್ಡ್‌‌ ಸೇರಿದ್ದರು. ಅವಧಿ ಸಂಗೀತಗಾರ ಫ್ಲಾಯ್ಡ್‌‌ ಕ್ರೇಮರ್‌‌ ಎಂಬಾತನ "ಜಾರು-ಸ್ವರದ" ಪಿಯಾನೊ ಶೈಲಿಯು ಈ ಶೈಲಿಯ ಒಂದು ಪ್ರಮುಖ ಅಂಗಭಾಗ ವಾಗಿತ್ತು.
 • ನ್ಯಾಶ್‌ವಿಲ್ಲೆಯ ಪಾಪ್‌ ಹಾಡಿನ ಸ್ವರೂಪವು ಹೆಚ್ಚು ಎದ್ದು ಕಾಣುವ ರೂಪವನ್ನು ತಳೆಯಿತು ಹಾಗೂ ಹಳ್ಳಿಗಾಡು ಪ್ರದೇಶದ ಸಂಗೀತ ಪ್ರಭೇದವಾಗಿ ಅದು ರೂಪಾಂತರಗೊಂಡಿತು. ಹಳ್ಳಿಗಾಡು ಪ್ರದೇಶದ ಪ್ರಕಾರವು ಮುಖ್ಯವಾಹಿನಿ ಮಾರುಕಟ್ಟೆಗಳ ಕಡೆಗೆ ನೇರವಾಗಿ ಗುರಿಯಿರಿಸಿಕೊಂಡಿತ್ತು ಹಾಗೂ 1960ರ ದಶಕದ ಉತ್ತರ ಭಾಗಗಳಿಂದ ಮೊದಲ್ಗೊಂಡು 1970ರ ದಶಕದ ಆರಂಭಿಕ ಭಾಗದವರೆಗೂ ಅದು ಚೆನ್ನಾಗಿ ಮಾರಾಟವಾಯಿತು. ಟ್ಯಾಮಿ ವೈನೆಟ್‌ ಮತ್ತು ಚಾರ್ಲೀ ರಿಚ್‌ ಮೊದಲಾದವರು ಅಗ್ರಗಣ್ಯ ಕಲಾವಿದರಲ್ಲಿ ಸೇರಿದ್ದರು.

ಹಳ್ಳಿಗಾಡಿನ ಸಂಗೀತದ ಜೀವಾಳ[ಬದಲಾಯಿಸಿ]

 • 1962ರಲ್ಲಿ, ತನ್ನ ಗಮನವನ್ನು ಹಳ್ಳಿಗರ ಹಾಡಿನ ಸಂಗೀತದ ಕಡೆಗೆ ತಿರುಗಿಸುವ ಮೂಲಕ, ರೇ ಚಾರ್ಲ್ಸ್‌‌ ಪಾಪ್‌ ಪ್ರಪಂಚವನ್ನು ಅಚ್ಚರಿಗೀಡುಮಾಡಿದ; ಈ ವರ್ಷದಲ್ಲಿ ಆತ ಸಂಗೀತದ ಕೋಷ್ಟಕಗಳಲ್ಲಿ ಅಗ್ರಗಣ್ಯತೆಯನ್ನು ಮೆರೆದ, "ಐ ಕಾಂಟ್‌ ಸ್ಟಾಪ್‌ ಲವಿಂಗ್‌ ಯು" ಎಂಬ ಏಕಗೀತೆಯ ನೆರವಿನೊಂದಿಗೆ ಬಿಲ್‌ಬೋರ್ಡ್‌ನ ಪಾಪ್‌ ಕೋಷ್ಟಕ [೪೭] ದಲ್ಲಿ ವರ್ಷಪೂರ್ತಿ ಮೂರನೇ ಶ್ರೇಯಾಂಕವನ್ನು ಕಾಯ್ದುಕೊಂಡ, ಮತ್ತು ಮಾಡರ್ನ್‌ ಸೌಂಡ್ಸ್‌ ಇನ್‌ ಕಂಟ್ರಿ ಅಂಡ್ ವೆಸ್ಟರ್ನ್‌ ಮ್ಯೂಸಿಕ್‌ ಎಂಬ ಸ್ಥಿತ್ಯಂತರ-ಸೂಚಕ ಗೀತಸಂಪುಟವನ್ನು ಧ್ವನಿಮುದ್ರಿಸಿದ.

ಬೇಕರ್ಸ್‌ಫೀಲ್ಡ್‌ ಧ್ವನಿ[ಬದಲಾಯಿಸಿ]

 • ಹಳ್ಳಿಗಾಡಿನ ಸಂಗೀತದ ಮತ್ತೊಂದು ಪ್ರಕಾರವು ಪಾಶ್ಚಾತ್ಯ ತೀವ್ರಧಾಟಿಯ ಅಂಶಗಳೊಂದಿಗಿನ ಕಟ್ಟಾ ಹಾಂಕಿ ಟಾಂಕ್‌ನಿಂದಾಗಿ ಬೆಳೆಯಿತು ಮತ್ತು ಕ್ಯಾಲಿಫೋರ್ನಿಯಾದ ಬೇಕರ್ಸ್‌ಫೀಲ್ಡ್‌‌ನಲ್ಲಿನ ಲಾಸ್‌ ಏಂಜಲೀಸ್‌‌‌ನ ಉತ್ತರ-ವಾಯವ್ಯ ದಿಕ್ಕಿಗೆ ೧೧೨ ಕಿಲೋ ಮೀ ನಷ್ಟು ದೂರವಿರುವ ಪ್ರದೇಶದಲ್ಲಿ ಅದು ಹುಟ್ಟಿಕೊಂಡಿತು. ಒಂದು-ಕಾಲದ ಪಶ್ಚಿಮ ತೀರಪ್ರದೇಶ ನಿವಾಸಿಗಳಾದ ಬಾಬ್‌ ವಿಲ್ಸ್‌ ಮತ್ತು ಲೆಫ್ಟಿ ಫ್ರಿಜೆಲ್‌‌‌ರಿಂದ ಪ್ರಭಾವಿಸಲ್ಪಟ್ಟ ಈ ಪ್ರಕಾರವು 1966ರ ವೇಳೆಗೆ ಬೇಕರ್ಸ್‌ಫೀಲ್ಡ್‌ ಧ್ವನಿ ಎಂಬ ಹೆಸರಿನಿಂದ ಗುರುತಿಸಲ್ಪಟ್ಟಿತು.
 • ಆ ಯುಗದ ಹಳ್ಳಿಗಾಡಿನ ಸಂಗೀತದ ಇತರ ಉಪ-ಪ್ರಕಾರಗಳು ನೆಚ್ಚಿಕೊಂಡಿದ್ದಕ್ಕಿಂತ ಹೆಚ್ಚಾಗಿ ವಿದ್ಯುತ್‌ಚಾಲಿತ ಸಂಗೀತ ವಾದ್ಯಗಳು ಮತ್ತು ಧ್ವನಿವರ್ಧನೆಯನ್ನು, ಅದರಲ್ಲೂ ನಿರ್ದಿಷ್ಟವಾಗಿ ಟೆಲಿಕ್ಯಾಸ್ಟರ್‌‌ ವಿದ್ಯುತ್‌ಚಾಲಿತ ಗಿಟಾರನ್ನು ಇದು ಅವಲಂಬಿಸಿತು. ಒಂದು ತೀಕ್ಷ್ಣವಾದ, ಗಡುಸಾದ, ಪ್ರೇರಕ ಶಕ್ತಿಯುಳ್ಳ, ಅಲಂಕಾರಗಳಿಲ್ಲದ, ಸ್ಫುಟವಾದ ಸೊಗಡನ್ನು ಇದು ಹೊಂದಿದೆ ಎಂದು ಹೇಳಬಹುದು.
 • ಈ ಶೈಲಿಯ ಅಗ್ರಗಣ್ಯ ವೃತ್ತಿಗಾರರಲ್ಲಿ ಬಕ್‌‌ ಒವೆನ್ಸ್‌, ಮೆರ್ಲೆ ಹಗಾರ್ಡ್‌, ಟಾಮಿ ಕಾಲಿನ್ಸ್‌, ಡ್ವೈಟ್‌ ಯೋವಾಕಾಮ್‌ ಮತ್ತು ವಿನ್‌ ಸ್ಟಿವರ್ಟ್‌ ಮೊದಲಾದವರು ಸೇರಿದ್ದರು ಹಾಗೂ ಇವರಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಶೈಲಿಯನ್ನು ಹೊಂದಿದ್ದರು.[೪೮]

[೪೯]

ಹಳ್ಳಿಗಾಡಿನ ರಾಕ್‌ ಸಂಗೀತ[ಬದಲಾಯಿಸಿ]

 • 1960ರ ದಶಕದ ಅಂತ್ಯದ ವೇಳೆಗೆ, ಪ್ರತ್ಯೇಕ ಪ್ರಕಾರಗಳೊಳಗೆ ಕಂಡುಬಂದ ಸಂಪ್ರದಾಯಶರಣ ಪ್ರತಿಕ್ರಿಯೆಯ ಒಂದು ಫಲವಾಗಿ, ಅಮೆರಿಕಾದ ಸಂಗೀತವು ಒಂದು ಅನನ್ಯ ವಾದ ಹದವಾದ ಮಿಶ್ರಣವನ್ನು ಸೃಷ್ಟಿಸಿತು. ಬ್ರಿಟಿಷರ ಆಕ್ರಮಣದ ಪರಿಣಾಮವಾಗಿ ರಾಕ್‌ ಎನ್‌' ರೋಲ್ ಪ್ರಕಾರದ "ಹಳೆಯ ಮೌಲ್ಯಗಳಿಗೆ" ಹಿಂದಿರುಗಲು ಅನೇಕರು ಬಯಸಿ ದರು. ಅದೇ ವೇಳೆಗೆ ಸರಿಯಾಗಿ, ನ್ಯಾಶ್‌ವಿಲ್ಲೆ-ನಿರ್ಮಿತ ಸಂಗೀತಕ್ಕೆ ಸಂಬಂಧಿಸಿದಂತೆ ಹಳ್ಳಿಗಾಡಿನ ಸಂಗೀತ ವಲಯದಲ್ಲಿ ಒಂದು ಉತ್ಸಾಹದ ಕೊರತೆ ಕಂಡು ಬಂದಿತು. ಇದರ ಫಲವಾಗಿ ಹಳ್ಳಿಗಾಡಿನ ರಾಕ್‌ ಎಂದು ಕರೆಯಲ್ಪಡುವ ಒಂದು ಮಿಶ್ರತಳಿಯ ಪ್ರಕಾರವು ಅಸ್ತಿತ್ವಕ್ಕೆ ಬಂದಿತು.
ಚಿತ್ರ:Gram Parsons promo.jpg
1960ರ ದಶಕದ ಅಂತ್ಯಭಾಗದಲ್ಲಿ ದಿ ರೋಲಿಂಗ್‌ ಸ್ಟೋನ್ಸ್‌ನಿಂದ ಮೊದಲ್ಗೊಂಡು ದಿ ಬೈರ್ಡ್ಸ್‌ವರೆಗಿನ ರಾಕ್‌ ಸಂಗೀತಗಾರರನ್ನು ಗ್ರಾಮ್‌ ಪಾರ್ಸನ್ಸ್‌‌ ಪ್ರಭಾವಿಸಿದ
 • 60ರ ದಶಕ ಮತ್ತು 70ರ ದಶಕದಲ್ಲಿ ಸಂಗೀತದ ಈ ಹೊಸ ಶೈಲಿಯಲ್ಲಿ ತೊಡಗಿಸಿಕೊಂಡ ಹೊಸತನದ ಆರಂಭಿಕ ಪ್ರವರ್ತಕರಲ್ಲಿ ಇವರೆಲ್ಲರೂ ಸೇರಿದ್ದರು: ರಾಕ್‌ ಎನ್‌' ರೋಲ್‌‌ ಮಾದರಿಯ ವಾದ್ಯವೃಂದವಾದ ದಿ ಬೈರ್ಡ್ಸ್‌ ಮತ್ತು ಅದರ ಅಧೀನ-ವಿಭಾಗವಾದ ದಿ ಫ್ಲೈಯಿಂಗ್‌ ಬುರಿಟೊ ಬ್ರದರ್ಸ್‌‌ (ಎರಡೂ ತಂಡಗಳು ಗ್ರಾಮ್‌ ಪಾರ್ಸನ್ಸ್‌‌ನ್ನು ಒಳಗೊಂಡಿದ್ದ ವು), ಗಿಟಾರು ವಾದಕ ಕ್ಲಾರೆನ್ಸ್‌‌ ವೈಟ್‌, ಮೈಕೇಲ್‌‌ ನೆಸ್ಮಿತ್‌‌ (ಮಂಕೀಸ್‌ ಮತ್ತು ಫಸ್ಟ್‌ ನ್ಯಾಷನಲ್‌ ಬ್ಯಾಂಡ್‌), ದಿ ಗ್ರೇಟ್‌ಫುಲ್‌ ಡೆಡ್‌, ನೀಲ್‌ ಯಂಗ್‌, ಕಮಾಂಡರ್‌ ಕೋಡಿ, ದಿ ಆಲ್‌ಮನ್‌‌ ಬ್ರದರ್ಸ್‌‌, ದಿ ಮಾರ್ಷಲ್‌ ಟಕರ್‌ ಬ್ಯಾಂಡ್‌, ಪೊಕೊ, ಬಫೆಲೊ ಸ್ಪ್ರಿಂಗ್‌ಫೀಲ್ಡ್‌‌, ಮತ್ತು ದಿ ಈಗಲ್ಸ್‌. "ಹಾಂಕಿ ಟಾಂಕ್‌‌ ವುಮೆನ್‌‌" ಮತ್ತು "ಡೆಡ್‌ ಫ್ಲವರ್ಸ್‌"ನಂಥ ಹಾಡುಗಳೊಂದಿಗೆ ದಿ ರೋಲಿಂಗ್‌ ಸ್ಟೋನ್ಸ್ ಕೂಡಾ ಈ ಕಾರ್ಯಾಚರಣೆಯಲ್ಲಿ ತೊಡಗಿಸಿ ಕೊಂಡಿತು.
 • ಆಲ್‌ಮ್ಯೂಸಿಕ್‌‌ನಿಂದ "ಹಳ್ಳಿಗಾಡಿನ-ರಾಕ್‌ನ ಜನಕ"[೫೦] ಎಂಬುದಾಗಿ ವಿವರಿಸಲ್ಪಟ್ಟಿರುವ ಗ್ರಾಮ್‌ ಪಾರ್ಸನ್ಸ್‌‌ನ ಕೆಲಸವು ಅದರ ಅಪ್ಪಟತನದಿಂದಾಗಿ 70ರ ದಶಕದಲ್ಲಿ ಮೆಚ್ಚುಗೆಯನ್ನು ಪಡೆಯಿತು; ಅಷ್ಟೇ ಅಲ್ಲ, ಸಾಂಪ್ರದಾಯಿಕ ಹಳ್ಳಿಗಾಡಿನ ಸಂಗೀತದ ಅಂಶಗಳಿಗೆ ಸಂಬಂಧಿಸಿದಂತೆ ಅವನು ತೋರಿಸಿದ ಗುಣ ಗ್ರಹಣವೂ ಸಹ ಮೆಚ್ಚುಗೆಗೆ ಪಾತ್ರವಾಯಿತು.[೫೧]
 • 1973ರಲ್ಲಿ ಸಂಭವಿಸಿದ ಅವನ ಸಾವಿನಿಂದಾಗಿ ಅವನ ವೃತ್ತಿಜೀವನವು ದುರಂತಮಯವಾಗಿ ಮೊಟುಕುಗೊಳಿಸಲ್ಪಟ್ಟಿತಾದರೂ, ಅವನ ಮಾರ್ಗದರ್ಶನವನ್ನು ಪಡೆದ ಹಾಗೂ ಯುಗಳ ಗಾಯನದಲ್ಲಿ ಅವನ ಸಹಭಾಗಿಯಾದ ಎಮಿಲೌ ಹ್ಯಾರಿಸ್‌ ಎಂಬಾಕೆಯಿಂದ ಅವನ ಪರಂಪರೆಯು ಮುಂದುವರಿಸಲ್ಪಟ್ಟಿತು; 1975ರಲ್ಲಿ ಅವಳ ಪ್ರಥಮ ಪರಿಚಯದ ಒಂಟಿಗಾಯನದ ಧ್ವನಿಮುದ್ರಿಕೆಯನ್ನು ಹ್ಯಾರಿಸ್‌ ಬಿಡುಗಡೆ ಮಾಡಿದ;
 • ಇದು ಹಳ್ಳಿಗಾಡಿನ ಸಂಗೀತ, ರಾಕ್‌ ಅಂಡ್‌ ರೋಲ್‌‌, ಜಾನಪದ, ಬ್ಲೂಸ್‌ ಮತ್ತು ಪಾಪ್‌ ಪ್ರಕಾರಗಳ ಒಂದು ಸಮ್ಮಿಲನವಾಗಿತ್ತು.ಧ್ರುವೀಯವಾಗಿ ಎದುರಾಗಿದ್ದ ಎರಡು ಪ್ರಕಾರಗಳ ಆರಂಭಿಕ ಹದವಾದ ಮಿಶ್ರಣದ ಫಲವಾಗಿ ತರುವಾಯದಲ್ಲಿ ಇತರ ಉತ್ಪನ್ನಗಳು ಸೃಷ್ಟಿಯಾದವು; ದಕ್ಷಿಣದ ರಾಕ್‌, ಹಾರ್ಟ್‌ಲ್ಯಾಂಡ್‌ ರಾಕ್‌ ಮತ್ತು ತೀರಾ ಇತ್ತೀಚಿನ ವರ್ಷಗಳಲ್ಲಿನ ಹಳ್ಳಿಗಾಡಿನ ಪರ್ಯಾಯ ಪ್ರಕಾರ ಇವು ಅದರಲ್ಲಿ ಸೇರಿದ್ದವು.
 • ಇದರ ನಂತರದ ದಶಕಗಳಲ್ಲಿ ಪ್ರವರ್ಧಮಾನಕ್ಕೆ ಬಂದ ಕಲಾವಿದರು, ಹಳ್ಳಿಗಾಡಿನ ಸಂಗೀತವನ್ನು ರಾಕ್‌ ಪ್ರಭಾವದ ಕಡೆಗೆ ಮತ್ತಷ್ಟು ಮುಂದುವರಿಸಿದರು. ಆ ಕಲಾವಿದರೆಂದರೆ: ಜೂಸ್‌ ನ್ಯೂಟನ್‌‌, ಅಲಬಾಮಾ, ಹ್ಯಾಂಕ್‌ ವಿಲಿಯಮ್ಸ್‌, ಜೂನಿಯರ್‌‌, ಗ್ಯಾರಿ ಅಲನ್‌, ಷೇನಿಯಾ ಟ್ವೈನ್‌‌, ಬ್ರೂಕ್ಸ್‌‌‌ & ಡನ್‌, ಫೇತ್‌ ಹಿಲ್‌‌, ಗಾರ್ಥ್‌ ಬ್ರೂಕ್ಸ್‌‌‌, ಡ್ವೈಟ್‌ ಯೋವಾಕಾಮ್‌, ಸ್ಟೀವ್‌ ಅರ್ಲೆ, ಡಾಲಿ ಪಾರ್ಟನ್‌‌, ರೊಸಾನ್ನೆ ಕ್ಯಾಶ್‌‌ ಮತ್ತು ಲಿಂಡಾ ರೋನ್ಸ್‌ಡ್ಟ್‌.

1970ರ ದಶಕದಿಂದ 1980ರ ದಶಕದವರೆಗೆ[ಬದಲಾಯಿಸಿ]

ಅನಧಿಕೃತ ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

 • ರೇ ಪ್ರೈಸ್‌‌‌ನ್ನು ಒಳಗೊಂಡಂತೆ (ಇವನ ವಾದ್ಯವೃಂದವಾದ "ಚೆರೋಕೀ ಕೌಬಾಯ್ಸ್‌‌"ನಲ್ಲಿ ವಿಲ್ಲೀ ನೆಲ್ಸನ್‌‌ ಮತ್ತು ರೋಜರ್‌‌ ಮಿಲ್ಲರ್‌‌ ಇದ್ದರು) 1950ರ ದಶಕದ ದ್ವಿತೀಯಾರ್ಧ ಮತ್ತು 1960ರ ದಶಕದ ಸಾಂಪ್ರದಾಯಿಕ ಹಾಗೂ ಹಾಂಕಿ ಟಾಂಕ್‌‌ ಧ್ವನಿಗಳಿಂದ ಜನ್ಯವಾದ ಮತ್ತು ಆ ಅವಧಿಯಲ್ಲಿ ರಾಷ್ಟ್ರದ ಪರಭಾರೆ ಮಾಡಲ್ಪಟ್ಟ ಉಪಸಂಸ್ಕೃತಿಯೊಂದರ ಕೋಪದೊಂದಿ ಗೆ ಬೆರೆತಿದ್ದ ಅನಧಿಕೃತ ಹಳ್ಳಿಗಾಡಿನ ಸಂಗೀತವು, ಹಳ್ಳಿಗಾಡಿನ ಸಂಗೀತದ ಪ್ರಕಾರವನ್ನು ಕ್ರಾಂತಿಕಾರಕವಾದ ರೀತಿಯಲ್ಲಿ ಬದಲಾವಣೆ ಮಾಡಿತು.
ವಿಲ್ಲೀ ನೆಲ್ಸನ್‌‌
 • "ನಾನು ನ್ಯಾಶ್‌ವಿಲ್ಲೆಯನ್ನು ಬಿಟ್ಟನಂತರ (70ರ ದಶಕದ ಆರಂಭದಲ್ಲಿ), ವಿರಮಿಸುಸಲು ತೆರಳುವುದು ಮತ್ತು ನಾನು ನುಡಿಸಲು ಬಯಸಿದ್ದ ಸಂಗೀತವನ್ನು ನುಡಿಸುವುದು ನನ್ನ ಬಯಕೆಯಾಗಿತ್ತು, ಮತ್ತು ಟೆಕ್ಸಾಸ್‌ನ ಸುತ್ತಮುತ್ತಲಲ್ಲಿ, ಸಾಧ್ಯವಾದಲ್ಲಿ ಪ್ರಾಯಶಃ ಓಕ್ಲಹಾಮಾದಲ್ಲಿ ಉಳಿಯುವುದು ನನ್ನ ಉದ್ದೇಶವಾಗಿತ್ತು. ಅನಧಿಕೃತ ಸಂಗೀತದ ಬಿಂಬವು ಚಾಲ್ತಿಯಲ್ಲಿರುವುದು ವೇಲಾನ್‌‌ ಮತ್ತು ನನ್ನ ಅರಿವಿಗೆ ಬಂದಿತ್ತು. ಅದು ಕಾಲೇಜುಗಳಲ್ಲಿ ಜನಪ್ರಿಯವಾದಾಗ, ಧ್ವನಿಮುದ್ರಿಕೆಗಳ ಮಾರಾಟವನ್ನು ನಾವು ಶುರುಮಾಡಿದೆವು ಹಾಗೂ ನಮಗದು ಹೊಂದಿಕೆಯಾಗಿತ್ತು. ಇಡೀ ಅನಧಿಕೃತ ಸಂಗೀತದ ವಿಷಯವು ಸಂಗೀತದೊಂದಿಗೆ ಸಂಬಂಧವನ್ನು ಹೊಂದಿರಲಿಲ್ಲ.
 • ಲೇಖನವೊಂದರಲ್ಲಿ ಅದು ಬರೆಯಲ್ಪಟ್ಟಿದ್ದೇ ಗಮನಾರ್ಹವಾಗಿತ್ತು; ಯುವಜನರೂ ಸಹ, 'ಸರಿ, ಅದು ಸಾಕಷ್ಟು ಲವಲವಿಕೆಯಿಂದ ಕೂಡಿದೆ' ಎಂದು ಅಭಿಪ್ರಾಯಪಟ್ಟರು ಹಾಗೂ ಮತ್ತು ಅದನ್ನು ಕೇಳಲು ಶುರುಮಾಡಿದರು." (ವಿಲ್ಲೀ ನೆಲ್ಸನ್‌‌)[೫೨]
 • ಅನಧಿಕೃತ ಹಳ್ಳಿಗಾಡಿನ ಸಂಗೀತ ಎಂಬ ಶಬ್ದ ಅಥವಾ ಪರಿಭಾಷೆಯೊಂದಿಗೆ ಸಾಂಪ್ರದಾಯಿಕವಾಗಿ ಗುರುತಿಸಿಕೊಂಡವರಲ್ಲಿ ಹ್ಯಾಂಕ್‌ ವಿಲಿಯಮ್ಸ್‌, ಜೂನಿಯರ್‌‌, ವಿಲ್ಲೀ ನೆಲ್ಸನ್‌‌, ವೇಲಾನ್‌‌ ಜೆನ್ನಿಂಗ್ಸ್‌‌, ಡೇವಿಡ್‌ ಅಲನ್‌ ಕೋಯೆ,ಜಾನ್‌‌ ಪ್ರೈನ್‌‌, ಬಿಲ್ಲಿ ಜೋ ಷೇವರ್‌, ಗ್ಯಾರಿ ಸ್ಟಿವರ್ಟ್‌, ಟೊವೆನ್ಸ್‌ ವಾನ್‌ ಝಾಂಡ್ಟ್‌ ಹಾಗೂ ಜೆಸ್ಸಿ ಕೋಲ್ಟರ್‌‌ ಮತ್ತು ಸ್ಯಾಮಿ ಸ್ಮಿತ್‌‌‌‌ರಂಥ ಕೆಲವು ಗಾಯಕಿಯರು ಸೇರಿದ್ದಾರೆ. 1976ರಲ್ಲಿ ಬಂದ ವಾಂಟೆಡ್‌! ದಿ ಔಟ್‌ಲಾಸ್ ಎಂಬ ಗೀತಸಂಪುಟದಲ್ಲಿ ಅದು ಸಂಗ್ರಹಿಸಲ್ಪಟ್ಟಿತು. ರೆಡ್‌ ಡರ್ಟ್‌ ಎಂಬುದು ಇದಕ್ಕೆ ಸಂಬಂಧಪಟ್ಟ ಒಂದು ಉಪ-ಪ್ರಕಾರವಾಗಿದೆ.

ಹಳ್ಳಿಗಾಡಿನ ಪಾಪ್‌[ಬದಲಾಯಿಸಿ]

 • ಹಳ್ಳಿಗಾಡಿನ ಪಾಪ್‌ ಅಥವಾ ನವಿರಾದ ಪಾಪ್ ಎಂಬ ಪ್ರಕಾರವು‌, ಹಳ್ಳಿಗಾಡು ಪ್ರದೇಶದ ಧ್ವನಿಯಲ್ಲಿ ಮತ್ತು ನವಿರಾದ ರಾಕ್‌‌‌‌ನಲ್ಲಿ ತನ್ನ ಮೂಲಗಳನ್ನು ಹೊಂದಿದ್ದು, ಅದು 1970ರ ದಶಕದಲ್ಲಿ ಮೊದಲ ಬಾರಿಗೆ ಹೊರಹೊಮ್ಮಿದ ಒಂದು ಉಪ-ಪ್ರಕಾರವಾಗಿದೆ. ಹಳ್ಳಿಗಾಡಿನ ಸಂಗೀತದ ಹಾಡುಗಳಿಗೆ ಮತ್ತು ರೇಡಿಯೋದ 40 ಅಗ್ರಗಣ್ಯರ ಪಟ್ಟಿಯಲ್ಲಿ ಸ್ಥಾನಗಿಟ್ಟಿಸಿ ಕೊಂಡ ಕಲಾವಿದರಿಗೆ ಈ ಶಬ್ದವು ಮೊದಲು ಉಲ್ಲೇಖಿಸಲ್ಪಟ್ಟಿತಾದರೂ, ಹಳ್ಳಿಗಾಡಿನ ಪಾಪ್‌ ಪ್ರಸ್ತುತಿಗಳು ಈಗ ವಯಸ್ಕರ ಸಮಕಾಲೀನ ಸಂಗೀತದ ವಲಯಕ್ಕೆ ಲಗ್ಗೆ ಹಾಕುವ ಲಕ್ಷಣಗಳು ಹೆಚ್ಚು ಕಾಣುತ್ತಿವೆ.
 • ಹಳ್ಳಿಗಾಡಿನ ಸಂಗೀತದ ಕೋಷ್ಟಕಗಳಲ್ಲಿ ಜನಪ್ರಿಯ ಗೀತೆಗಳನ್ನು ದಾಖಲಿಸಿರುವ ಕೀರ್ತಿಯನ್ನು ಹೊಂದಿರುವ ಪಾಪ್‌ ಸಂಗೀತದ ಗಾಯಕರೊಂದಿಗೆ ಇದು ಆರಂಭವಾಯಿತು; ಅಂಥ ಗಾಯಕರೆಂದರೆ, ಮೈಕೇಲ್‌‌ ನೆಸ್ಮಿತ್‌‌, ದಿ ಬೆಲ್ಲಾಮಿ ಬ್ರದರ್ಸ್‌‌, ಗ್ಲೆನ್‌‌ ಕ್ಯಾಂಪ್‌ಬೆಲ್‌‌, ಜಾನ್‌‌ ಡೆನ್ವರ್‌‌, ಒಲಿವಿಯಾ ನ್ಯೂಟನ್‌‌-ಜಾನ್‌‌, ಮೇರೀ ಓಸ್ಮಾಂಡ್‌, B.J. ಥಾಮ ಸ್‌ ಮತ್ತು ಆನ್ನೆ ಮರ್ರೇ. ಕ್ಯಾಂಪ್‌ಬೆಲ್‌‌ನ "ರೈನ್‌ಸ್ಟೋನ್‌ ಕೌಬಾಯ್‌‌" ಎಂಬ ಗೀತೆಯು, ಹಳ್ಳಿಗಾಡಿನ ಸಂಗೀತದ ಇತಿಹಾಸದಲ್ಲಿನ ಹಾಯುದಾಣದ ಅತಿದೊಡ್ಡ ಜನಪ್ರಿಯ ಗೀತೆ ಗಳ ಪೈಕಿ ಒಂದಾಗಿತ್ತು.
ಸಂಗೀತ ಕಚೇರಿಯಲ್ಲಿ ಭಾಗಿಯಾಗಿರುವ ಲಿನ್‌‌ ಆಂಡರ್‌‌ಸನ್‌‌
 • ಆಸ್ಟ್ರೇಲಿಯಾದ ಓರ್ವ ಪಾಪ್‌ ಗಾಯಕಿಯಾದ ನ್ಯೂಟನ್‌‌-ಜಾನ್‌‌ ಎಂಬಾಕೆಯು 1974ರಲ್ಲಿ "ಹಳ್ಳಿಗಾಡಿನ ಸಂಗೀತದ ಅತ್ಯುತ್ತಮ ಮಹಿಳಾ ಗಾಯನ ಪ್ರಸ್ತುತಿಯ" ಪ್ರಶಸ್ತಿಯನ್ನು ಗೆದ್ದಳು; ಅಷ್ಟೇ ಅಲ್ಲ, ಮಹಿಳೆಯರು ಪಡೆಯಲು ಅತೀವವಾಗಿ ಬಯಸುವ ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌ನ "ವರ್ಷದ ಮಹಿಳಾ ಗಾಯಕಿ" ಎಂಬ ಪ್ರಶಸ್ತಿಯನ್ನೂ ಅವಳು ಗೆದ್ದುಕೊಂಡಳು.
 • ಈ ಪ್ರವೃತ್ತಿಯಿಂದ ತೊಂದರೆಗೊಳಗಾದ ಕಲಾವಿದರ ಒಂದು ಗುಂಪು ಅದೇ ವರ್ಷದಲ್ಲಿ, ಅಸೋಸಿಯೇಷನ್‌ ಆಫ್‌ ಕಂಟ್ರಿ ಎಂಟರ್‌ಟೈನರ್ಸ್‌ ಎಂಬ ಒಂದು ಅಲ್ಪಕಾಲಿಕ ತಂಡವನ್ನು ರೂಪಿಸಿತು. ಉತ್ಕಟಗೊಂಡ ಚರ್ಚೆಯು 1975ರ ವರ್ಷಕ್ಕೂ ಮುಂದುವರಿಯಿತು ಮತ್ತು ಅದೇ ವರ್ಷದ ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅದು ತನ್ನ ಪರಮಾವಧಿಗೆ ತಲುಪಿತು;
 • ವರ್ಷದ ಮನರಂಜಕ ಎಂಬ ಬಿರುದನ್ನು ಹೊತ್ತಿದ್ದ ಚಾರ್ಲೀ ರಿಚ್‌ (ಈತ ಸ್ವತಃ ಹಾಯುದಾಣದ ಜನಪ್ರಿಯ ಗೀತೆಗಳ ಒಂದು ಸರಣಿಯನ್ನೇ ಹೊಂದಿದ್ದ) ತನ್ನ ಉತ್ತರಾಧಿಕಾರಿಯಾದ ಜಾನ್‌‌ ಡೆನ್ವರ್‌‌ ಎಂಬಾತನಿಗೆ ಪ್ರಶಸ್ತಿಯನ್ನು ಪ್ರದಾನ ಮಾಡಿದಾಗ ಈ ಪರಿಸ್ಥಿತಿ ಕಂಡುಬಂತು. ಡೆನ್ವರ್‌‌ನ ಹೆಸರನ್ನು ಓದಿದ ನಂತರ, ಅದರ ಲಕೋಟೆಗೆ ಒಂದು ಸಿಗರೇಟ್‌ ಲೈಟರ್‌ನಿಂದ ರಿಚ್‌ ಬೆಂಕಿಹಚ್ಚಿದ. ಈ ವರ್ತನೆಯನ್ನು ಹಳ್ಳಿಗಾಡಿನ ಸಂಗೀತದಲ್ಲಿ ಹೆಚ್ಚುತ್ತಲೇ ಇದ್ದ ಪಾಪ್‌ ಶೈಲಿಯ ವಿರುದ್ಧದ ಒಂದು ಪ್ರತಿಭಟನೆಯಾಗಿ ಪರಿಗಣಿಸಲಾಯಿತು.
 • 60ರ ದಶಕದ ಮಧ್ಯಭಾಗದಲ್ಲಿ ಅತೀವ ಯಶಸ್ಸನ್ನು ಕಂಡಿದ್ದ ಹಳ್ಳಿಗಾಡಿನ ಸಂಗೀತದ ಮುಖ್ಯವಾಹಿನಿಯ ಕಲಾವಿದೆಯಾದ ಡಾಲಿ ಪಾರ್ಟನ್‌‌ ಎಂಬಾಕೆಯು, 1970ರ ದಶಕದ ಮಧ್ಯಭಾಗದ ಅವಧಿಯಲ್ಲಿ ಪಾಪ್‌ ಸಂಗೀತಕ್ಕೆ ಅಡ್ಡಹಾಯಲೆಂದು ಉನ್ನತ ಮಟ್ಟದ ಪ್ರಚಾರಾಂದೋಲನವೊಂದನ್ನು ಹುಟ್ಟು ಹಾಕಿದಳು; ಇದರ ಪರಿಣಾಮವಾಗಿ, 1977ರಲ್ಲಿ ಬಂದ "ಹಿಯರ್‌ ಯು ಕಮ್‌ ಎಗೇನ್‌" ಎಂಬ ಅವಳ ಜನಪ್ರಿಯ ಗೀತೆಯು U.S.ನ ಹಳ್ಳಿಗಾಡಿನ ಏಕಗೀತೆಗಳ ಕೋಷ್ಟಕದಲ್ಲಿ ಅಗ್ರಸ್ಥಾನ ಗಳಿಸಿತು ಮತ್ತು ಪಾಪ್‌ ಏಕಗೀತೆಗಳ ಕೋಷ್ಟಕಗಳಲ್ಲಿ ಅದು 3ನೇ ಸ್ಥಾನವನ್ನು ದಕ್ಕಿಸಿಕೊಂಡಿತು.
 • ಪಾರ್ಟನ್‌‌ಳ ಪುರುಷ ಸಹಭಾಗಿಯಾದ ಕೆನ್ನಿ ರೋಜರ್ಸ್‌‌ ಅವಳಿಗೆ ಎದುರಾಗಿರುವ ದಿಕ್ಕಿನಿಂದ ಬಂದ; ಹಳ್ಳಿಗಾಡಿನ ಸಂಗೀತದ ಕೋಷ್ಟಕಗಳಲ್ಲಿ ತನ್ನ ಸಂಗೀತವು ಇರಬೇಕೆಂಬುದು ಅವನ ಗುರಿಯಾಗಿತ್ತು. ಪಾಪ್‌, ರಾಕ್‌ ಮತ್ತು ಜಾನಪದ ಸಂಗೀತಗಳಲ್ಲಿ ಒಂದು ಯಶಸ್ವಿ ವೃತ್ತಿಜೀವನದ ಭಾಗೀದಾರನಾದ ಆತ, ಅದೇ ವರ್ಷದಲ್ಲಿ "ಲ್ಯೂಸಿಲ್ಲೆ" ಎಂಬ ಗೀತೆ ಯೊಂದಿಗೆ ಯಶಸ್ಸು ಸಾಧಿಸಿದ್ದ.
 • ಈ ಗೀತೆಯು ಹಳ್ಳಿಗಾಡಿನ ಸಂಗೀತದ ಕೋಷ್ಟಕಗಳಲ್ಲಿ ಅಗ್ರಸ್ಥಾನ ಗಳಿಸಿತ್ತು ಮತ್ತು U.S. ಪಾಪ್‌ ಏಕಗೀತೆಗಳ ಕೋಷ್ಟಕಗಳಲ್ಲಿ 5ನೇ ಸ್ಥಾನವನ್ನು ಗಳಿಸಿತ್ತು. ಹಳ್ಳಿಗಾಡಿನ ಸಂಗೀತ ಮತ್ತು ಪಾಪ್‌ ಸಂಗೀತದ ಕೋಷ್ಟಕಗಳೆರಡರಲ್ಲೂ ಯಶಸ್ಸು ಸಂಪಾದಿಸಲು ಏಕಕಾಲಿಕವಾಗಿ ಮುಂದುವರಿದ ಪಾರ್ಟನ್‌‌ ಮತ್ತು ರೋಜರ್ಸ್‌, 1980ರ ದಶಕಕ್ಕೆ ಅಡಿ ಯಿರಿಸಿದರು. ಕ್ರಿಸ್ಟಲ್‌ ಗೇಯ್ಲ್‌‌, ರೊನ್ನೀ ಮಿಲ್ಸಾಪ್‌‌ ಮತ್ತು ಬಾರ್ಬರಾ ಮ್ಯಾಂಡ್ರೆಲ್‌‌‌‌ರಂಥ ಕಲಾವಿದರೂ ಸಹ ತಂತಮ್ಮ ಧ್ವನಿಮುದ್ರಿಕೆಗಳ ನೆರವಿನೊಂದಿಗೆ ಪಾಪ್‌ ಕೋಷ್ಟಕಗಳಲ್ಲಿ ಯಶಸ್ಸು ಕಂಡುಕೊಂಡರು.
 • 1975ರಲ್ಲಿ, ಪಾಲ್‌ ಹೆಮ್‌ಫಿಲ್‌ ಎಂಬ ಲೇಖಕ ಸಾಟರ್ಡೆ ಈವ್ನಿಂಗ್‌ ಪೋಸ್ಟ್‌ ಪತ್ರಿಕೆಯಲ್ಲಿ ಹೇಳಿಕೆಯೊಂದನ್ನು ನೀಡಿ, "ಹಳ್ಳಿಗಾಡಿನ ಸಂಗೀತವು ಈಗ ನಿಜವಾಗಿಯೂ ತನ್ನತನವನ್ನು ಉಳಿಸಿಕೊಂಡಿಲ್ಲ; ಇದು ಹೆಚ್ಚೂಕಮ್ಮಿ ಅಮೆರಿಕಾದಲ್ಲಿನ ಜನಪ್ರಿಯ ಸಂಗೀತದ ಪ್ರತಿಯೊಂದು ಸ್ವರೂಪದ ಒಂದು ಸಂಕರಜಾತಿಯಾಗಿದೆ" ಎಂದು ಅಭಿಪ್ರಾಯ ಪಟ್ಟ.[೫೩]
 • 1980ರ ದಶಕದ ಆರಂಭದಲ್ಲಿ, ತಂತಮ್ಮ ಧ್ವನಿಮುದ್ರಿಕೆಗಳು ಪಾಪ್‌ ಕೋಷ್ಟಕಗಳಲ್ಲಿ ಉತ್ತಮ ಸ್ಥಾನವನ್ನು ಗಳಿಸಿಕೊಳ್ಳುವ ರೀತಿಯಲ್ಲಿ ಹಳ್ಳಿಗಾಡಿನ ಕಲಾವಿದರು ಕಲಾಕ್ಷಮತೆ ಯನ್ನು ಮೆರೆದರು. ಎಂಬತ್ತರ ದಶಕದ ಆರಂಭದಲ್ಲಿ, 100 ಜನಪ್ರಿಯ ಗೀತೆಗಳ ಬಿಲ್‌ಬೋರ್ಡ್‌ ಕೋಷ್ಟಕದಲ್ಲಿನ ಅಗ್ರಗಣ್ಯ 5 ಹಾಡುಗಳ ಪೈಕಿ, ವಿಲ್ಲೀ ನೆಲ್ಸನ್‌‌ ಮತ್ತು ಜೂಸ್‌ ನ್ಯೂಟನ್‌‌ ಇಬ್ಬರೂ ತಲಾ ಎರಡು ಹಾಡುಗಳನ್ನು ಹೊಂದಿದ್ದರು:
 • ನೆಲ್ಸನ್‌‌ನ "ಆಲ್ವೇಸ್‌ ಆನ್‌ ಮೈ ಮೈಂಡ್‌" (5ನೇ ಸ್ಥಾನ, 1982) ಮತ್ತು "ಟು ಆಲ್‌ ದಿ ಗರ್ಲ್ಸ್‌ ಐ ಹ್ಯಾವ್‌ ಲವ್ಡ್‌ ಬಿಫೋರ್‌" (5ನೇ ಸ್ಥಾನ, 1984) ಗೀತೆಗಳು ಹಾಗೂ ನ್ಯೂಟನ್‌ನ "ಕ್ವೀನ್‌ ಆಫ್‌ ಹಾರ್ಟ್ಸ್‌" (2ನೇ ಸ್ಥಾನ, 1981) ಮತ್ತು "ಏಂಜಲ್‌ ಆಫ್‌ ದಿ ಮಾರ್ನಿಂಗ್‌" (4ನೇ ಸ್ಥಾನ, 1981) ಗೀತೆಗಳು ಹೀಗೆ ಸ್ಥಾನಗಿಟ್ಟಿಸಿಕೊಳ್ಳುವ ಮೂಲಕ ತಮ್ಮ ಸೃಷ್ಟಿಕರ್ತರಿಗೆ ಯಶಸ್ಸು ತಂದುಕೊಟ್ಟವು.
 • 1980ರ ದಶಕದಲ್ಲಿ ನಾಲ್ಕು ಹಳ್ಳಿಗಾಡಿನ ಸಂಗೀತದ ಹಾಡುಗಳು 100 ಜನಪ್ರಿಯ ಗೀತೆಗಳ ಬಿಲ್‌ಬೋರ್ಡ್ ಕೋಷ್ಟಕದಲ್ಲಿ ಅಗ್ರಸ್ಥಾನ ಗಳಿಸಿದವು: 1980ರ ಶರತ್ಕಾಲದ ಅಂತ್ಯದಲ್ಲಿ ಬಂದ ಕೆನ್ನಿ ರೋಜರ್ಸ್‌‌‌ ಪ್ರಸ್ತುತಿಯ "ಲೇಡಿ"; ಡಾಲಿ ಪಾರ್ಟನ್‌‌ ಪ್ರಸ್ತುತಿಯ "9 ಟು 5", ಎಡ್ಡೀ ರ್ಯಾಬಿಟ್‌ ಪ್ರಸ್ತುತಿಯ "ಐ ಲವ್‌ ಎ ರೈನಿ ನೈಟ್‌" (ಈ ಎರಡು ಗೀತೆಗಳು 1981ರ ಪ್ರಥಮಾರ್ಧದಲ್ಲಿ ಅನುಕ್ರಮವಾಗಿ ಅಗ್ರಗಣ್ಯ ಸ್ಥಾನವನ್ನು ದಕ್ಕಿಸಿಕೊಂಡವು); ಹಾಗೂ 1983ರಲ್ಲಿ ಬಂದ ಡಾಲಿ ಪಾರ್ಟನ್‌‌ ಮತ್ತು ಕೆನ್ನಿ ರೋಜರ್ಸ್‌‌ ಪ್ರಸ್ತುತಿಯ "ಐಲಂಡ್ಸ್ ಇನ್‌ ದಿ ಸ್ಟ್ರೀಮ್‌‌" ಎಂಬ ಒಂದು ಯುಗಳ ಗಾಯನ ಇವೇ ಆ ನಾಲ್ಕು ಗೀತೆಗಳಾಗಿದ್ದವು.
 • ಇವುಗಳ ಪೈಕಿ "ಐಲಂಡ್ಸ್ ಇನ್‌ ದಿ ಸ್ಟ್ರೀಮ್" ಗೀತೆಯು ಪಾಪ್‌‌-ಹಳ್ಳಿಗಾಡಿನ ಸಂಗೀತದ ಒಂದು ಹಾಯುದಾಣದ ಜನಪ್ರಿಯ ಗೀತೆಯಾಗಿದ್ದು, ಬೀ ಗೀಸ್‌ ತಂಡದ ಬ್ಯಾರಿ, ರಾಬಿನ್‌, ಮತ್ತು ಮೌರಿಸ್‌ ಗಿಬ್‌‌ರಿಂದ ಅದು ಬರೆಯಲ್ಪಟ್ಟಿತು. ನ್ಯೂಟನ್‌‌ನ "ಕ್ವೀನ್‌ ಆಫ್‌ ಹಾರ್ಟ್ಸ್‌" ಗೀತೆಯು ಬಹುಪಾಲು ಮೊದಲನೇ ಸ್ಥಾನವನ್ನು ತಲುಪಿತ್ತಾದರೂ, ಡಯಾನ ರಾಸ್‌ ಮತ್ತು ಲಯೋನೆಲ್‌‌ ರಿಚೀಯಿಂದ ಪ್ರಸ್ತುತಪಡಿಸಲ್ಪಟ್ಟ "ಎಂಡ್‌ಲೆಸ್‌ ಲವ್‌" ಎಂಬ ಪಾಪ್‌ ಲಾವಣಿಯ ಮಹಾಶಕ್ತಿಯಿಂದಾಗಿ ಆ ಸ್ಥಾನವು ಅದಕ್ಕೆ ದಕ್ಕಲಿಲ್ಲ.

[೫೪]

 • 1980ರ ದಶಕದ ದ್ವಿತೀಯಾರ್ಧದಲ್ಲಿ ಅಡ್ಡಹಾಯ್ಕೆಯ ಜನಪ್ರಿಯ ಗೀತೆಗಳು ಕಂಡುಬಂದವಾದರೂ, 1989ರ ವರ್ಷಕ್ಕೆ ಸೇರಿದ ರಾಯ್‌‌ ಓರ್ಬಿನ್‌ಸನ್‌‌‌‌‌ನ "ಯು ಗಾಟ್‌ ಇಟ್‌" ಎಂಬ ಗೀತೆಯು ‌ಬಿಲ್‌ಬೋರ್ಡ್‌‌‌ ನ ಜನಪ್ರಿಯ ಹಳ್ಳಿಗಾಡಿನ ಏಕಗೀತೆಗಳ ಕೋಷ್ಟಕ ಹಾಗೂ ಜನಪ್ರಿಯ 100 ಗೀತೆಗಳ ಕೋಷ್ಟಕಗಳೆರಡರ 10 ಅಗ್ರಗಣ್ಯ ಗೀತೆಗಳಲ್ಲಿ ಸ್ಥಾನ ಗಿಟ್ಟಿಸಿಕೊಂಡಿತು.[೫೫][೫೬]

ನವ-ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

 • 1980ರಲ್ಲಿ, "ನವ-ಹಳ್ಳಿಗಾಡಿನ ಡಿಸ್ಕೋ ಸಂಗೀತ"ದ ಶೈಲಿಯೊಂದು ಅರ್ಬನ್‌‌ ಕೌಬಾಯ್‌‌ [೫೭] ಎಂಬ ಚಲನಚಿತ್ರದಿಂದ ಜನಪ್ರಿಯಗೊಳಿಸಲ್ಪಟ್ಟಿತು;
 • ಈ ಚಲನಚಿತ್ರವು ಚಾರ್ಲೀ ಡೇನಿಯಲ್ಸ್‌ ವಾದ್ಯವೃಂದದಿಂದ ಪ್ರಸ್ತುತಪಡಿಸಲ್ಪಟ್ಟ "ದಿ ಡೆವಿಲ್‌ ವೆಂಟ್‌ ಡೌನ್‌ ಟು ಜಾರ್ಜಿಯಾ"ದಂಥ ಹೆಚ್ಚು ಸಾಂಪ್ರದಾಯಿಕ ಹಾಡುಗಳನ್ನೂ ಒಳ ಗೊಂಡಿತ್ತು.[೫೮] ಟೆಕ್ಸಾಸ್‌ ಹಳ್ಳಿಗಾಡಿನ ಸಂಗೀತವು ಇದಕ್ಕೆ ಸಂಬಂಧಿಸಿದ ಒಂದು ಉಪ-ಪ್ರಕಾರವಾಗಿದೆ.
 • 1981ರಲ್ಲಿ ಧ್ವನಿಮುದ್ರಿಕೆಗಳ ಮಳಿಗೆಗಳಲ್ಲಿನ ಮಾರಾಟಗಳ ಮೌಲ್ಯವು 250 ದಶಲಕ್ಷ $ ಮೊತ್ತದಷ್ಟು ಮಟ್ಟಕ್ಕೆ ಚಿಮ್ಮಿತು; 1984ರ ವೇಳೆಗೆ 900 ರೇಡಿಯೋ ಕೇಂದ್ರಗಳು ಹಳ್ಳಿಗಾಡಿನ ಸಂಗೀತ ಅಥವಾ ನವ-ಹಳ್ಳಿಗಾಡಿನ ಪಾಪ್‌ ಸಂಗೀತವನ್ನು ಪೂರ್ಣಾವಧಿಗೆ ಬಿತ್ತರಿಸಲು ಶುರುಮಾಡಿದವು. ಆದಾಗ್ಯೂ, ಅತ್ಯಂತ ಹಠಾತ್‌ ಪ್ರವೃತ್ತಿಗಳಲ್ಲಿ ಕಂಡು ಬರುವಂತೆ, 1984ರ ವೇಳೆಗೆ ಮಾರಾಟಗಳ ಪ್ರಮಾಣವು 1979ರಲ್ಲಿ ಇದ್ದ ಅಂಕಿ-ಅಂಶಕ್ಕಿಂತ ಕೆಳಗೆ ಕುಸಿದಿದ್ದವು.[೫೭]

ಟ್ರಕ್‌‌ ಚಾಲನೆಯ ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

 • ಟ್ರಕ್‌‌ ಚಾಲನೆಯ ಹಳ್ಳಿಗಾಡಿನ ಸಂಗೀತವು, ಹಳ್ಳಿಗಾಡಿನ ಸಂಗೀತದ[೫೯] ಒಂದು ಪ್ರಕಾರವಾಗಿದೆ ಮತ್ತು ಇದು ಹಾಂಕಿ ಟಾಂಕ್‌‌, ಹಳ್ಳಿಗಾಡಿನ-ರಾಕ್‌ ಮತ್ತು ಬೇಕರ್ಸ್‌ಫೀಲ್ಡ್‌ ಧ್ವನಿ ಇವೇ ಮೊದಲಾದವುಗಳ ಒಂದು ಬೆಸುಗೆಯಾಗಿದೆ.[೬೦]

ಇದು ಹಳ್ಳಿಗಾಡಿನ-ರಾಕ್‌ ಸಂಗೀತದ ಗತಿ ಮತ್ತು ಹಾಂಕಿ-ಟಾಂಕ್‌[೬೦] ಸಂಗೀತದ ಭಾವವನ್ನು ಹೊಂದಿದೆ, ಮತ್ತು ಇದರ ಸಾಹಿತ್ಯವು ಓರ್ವ ಟ್ರಕ್‌‌ ಚಾಲಕನ ಜೀವನಶೈಲಿಯ ಮೇಲೆ ಗಮನವನ್ನು ಕೇಂದ್ರೀಕರಿಸುತ್ತದೆ.[೬೧] ಟ್ರಕ್‌‌ ಚಾಲನೆಯ ಹಳ್ಳಿಗಾಡಿನ ಸಂಗೀತದ ಹಾಡುಗಳು, ಟ್ರಕ್ಕು‌‌ಗಳು ಮತ್ತು ಪ್ರೀತಿಯ ಕುರಿತಾದ ಹೂರಣವನ್ನು ಅನೇಕವೇಳೆ ತಮ್ಮೊಳಗೆ ತುಂಬಿಕೊಂಡಿರುತ್ತವೆ.[೬೦] ಟ್ರಕ್‌‌ ಚಾಲನೆಯ ಹಳ್ಳಿಗಾಡಿನ ಹಾಡುಗಳನ್ನು ಹಾಡುವ ಸುಪರಿಚಿತ ಕಲಾವಿದರಲ್ಲಿ, ಡೇವ್‌ ಡ್ಯೂಡ್ಲೆ, ರೆಡ್‌ ಸೊವೀನ್‌, ಡಿಕ್‌‌ ಕರ್ಲೆಸ್‌, ರೆಡ್‌ ಸಿಂಪ್ಸನ್‌‌, ಕರ್ನಲ್‌ ರಾಬರ್ಟ್‌ ಮೋರಿಸ್‌, ಮತ್ತು ವೇಲಾನ್‌‌ ಸ್ಪೀಡ್‌ ಮೊದಲಾದವರು ಸೇರಿದ್ದಾರೆ.[೬೦] ಡ್ಯೂಡ್ಲೆಯು ಟ್ರಕ್‌‌ ಚಾಲನೆಯ ಹಳ್ಳಿಗಾಡಿನ ಹಾಡುಗಳ ಜನಕ ಎಂಬುದಾಗಿ ಪರಿಗಣಿಸಲ್ಪಟ್ಟಿದ್ದಾನೆ.[೬೧][೬೨]

ನವ-ಸಂಪ್ರದಾಯ ಶರಣ ಆಂದೋಲನ[ಬದಲಾಯಿಸಿ]

 • 1980ರ ದಶಕದ ಮಧ್ಯಭಾಗದಲ್ಲಿ ಹೊಸ ಕಲಾವಿದರ ಒಂದು ಗುಂಪು ಪ್ರವರ್ಧಮಾನಕ್ಕೆ ಬಂತು; ಹೆಚ್ಚು ಸಾಂಪ್ರದಾಯಿಕವಾಗಿ ನಿರ್ಮಾಣಗೊಂಡ ಗೀತೆಗಳ ಪರವಾಗಿ ನಿಲ್ಲುವ ಉದ್ದೇಶದಿಂದ ಈ ಗುಂಪು, ರೇಡಿಯೋ ಮತ್ತು ಕೋಷ್ಟಕಗಳಲ್ಲಿ ಎದ್ದುಕಾಣುವಂತಿದ್ದ ಹೆಚ್ಚು ಪುಟವಿಟ್ಟ ಹಳ್ಳಿಗಾಡಿನ-ಪಾಪ್‌‌ ಧ್ವನಿಯನ್ನು ತಿರಸ್ಕರಿಸಿತು. ರ್ಯಾಂಡಿ ಟ್ರಾವಿಸ್‌ನ 1986ರ ಪ್ರಥಮ ಪರಿಚಯದ ಸ್ಟಾರ್ಮ್ಸ್‌ ಆಫ್‌ ಲೈಫ್‌ ಎಂಬ ಗೀತಸಂಪುಟವು ನಾಲ್ಕು ದಶಲಕ್ಷ ಪ್ರತಿಗಳಷ್ಟು ಮಾರಾಟವಾಗಿತ್ತು.
 • ಅದು 1987ರ ವರ್ಷಕ್ಕೆ ಸಂಬಂಧಿಸಿದಂತೆ ಬಿಲ್‌ಬೋರ್ಡ್‌ನ ವರ್ಷಾಂತ್ಯದ ಹಳ್ಳಿಗಾಡಿನ ಸಂಗೀತದ ಅಗ್ರಗಣ್ಯ ಗೀತಸಂಪುಟವಾಗಿತ್ತು. ಇಂಥ ರ್ಯಾಂಡಿ ಟ್ರಾವಿಸ್‌ ನೇತೃತ್ವದಲ್ಲಿ 80ರ ದಶಕದ ದ್ವಿತೀಯಾರ್ಧದಲ್ಲಿ, ಅನೇಕ ಕಲಾವಿದರು ಸಾಂಪ್ರದಾಯಿಕ ಹಾಂಕಿ ಟಾಂಕ್‌‌, ಬ್ಲೂಗ್ರಾಸ್‌‌, ಜಾನಪದ ಮತ್ತು ಪಾಶ್ಚಾತ್ಯ ತೀವ್ರಧಾಟಿ ಪ್ರಕಾರಗಳಿಂದ ಆಕರ್ಷಿಸಲ್ಪಟ್ಟರು. ಈ ಧ್ವನಿಯನ್ನು ಪ್ರತಿನಿಧಿಸಿದ ಕಲಾವಿದರಲ್ಲಿ, ಟ್ರಾವಿಸ್‌ ಟ್ರಿಟ್‌, ರಿಕಿ ಸ್ಕ್ಯಾಗ್ಸ್‌, ಕ್ಯಾಥಿ ಮೇಟಿಯಾ, ಜಾರ್ಜ್‌ ಸ್ಟ್ರೈಟ್‌ ಮತ್ತು ದಿ ಜ್ಯೂಡ್ಸ್‌ ಸೇರಿದ್ದರು.

1990ರ ದಶಕ[ಬದಲಾಯಿಸಿ]

 • 1989ರಲ್ಲಿ, ರಾಷ್ಟ್ರೀಯ ಹಳ್ಳಿಗಾಡಿನ ಸಂಗೀತ ರಂಗಸ್ಥಲದಲ್ಲಿ ತನ್ನ ರಂಗಪ್ರವೇಶವು ಆಗುವುದರೊಂದಿಗೆ, ಕ್ಲಿಂಟ್‌ ಬ್ಲಾಕ್‌‌ ಎಂಬ ಗಾಯಕ ಮತ್ತು ಗೀತರಚನೆಕಾರನು ಹೊಸ ಧ್ವನಿ ಯೊಂದರಲ್ಲಿ ನೀಡಿದ ಆಗಮನದ ಘೋಷಣೆಯು 1990ರ ದಶಕ ಮತ್ತು ಅದರಾಚೆಗಿನ ಅವಧಿಗೆ ಸಂಬಂಧಿಸಿದಂತೆ ಹಳ್ಳಿಗಾಡಿನ ಸಂಗೀತದ ಬಹುಭಾಗವನ್ನು ವಿಶದೀಕರಿಸಿತು.

1990ರ ದಶಕದಲ್ಲಿ ಹಳ್ಳಿಗಾಡಿನ ಸಂಗೀತವು ಒಂದು ವಿಶ್ವವ್ಯಾಪಿ ಸಂಗತಿಯಾಗಿ ಮಾರ್ಪಟ್ಟಿತು;

 • ಬಿಲ್ಲಿ ರೇ ಸೈರಸ್‌ ಮತ್ತು ಗಾರ್ಥ್‌ ಬ್ರೂಕ್ಸ್‌‌‌ ಎಂಬಿಬ್ಬರು ಇದರ ಕಾರಣ ಕರ್ತರಾಗಿದ್ದರು.[೬೩][೬೪][೬೫]
 • ಈ ಇಬ್ಬರ ಪೈಕಿ ಗಾರ್ಥ್‌ ಬ್ರೂಕ್ಸ್, ಜನಪ್ರಿಯ ಸಂಗೀತದ ಇತಿಹಾಸದಲ್ಲಿ ವೃತ್ತಿಜೀವನದ ಅತ್ಯಂತ ಯಶಸ್ವಿ ಕ್ಷಣಗಳ ಪೈಕಿ ಒಂದನ್ನು ಅನುಭವಿಸಿದ; ಆ ದಶಕದ ಉದ್ದಕ್ಕೂ ಅವನ ಧ್ವನಿಮುದ್ರಿಕೆಗಳ ಮಾರಾಟಗಳು ಹಾಗೂ ಅವನ ಸಂಗೀತ ಕಚೇರಿಗಳಲ್ಲಿನ ಅಭಿಮಾನಿಗಳ ಹಾಜರಿಯ ಪ್ರಮಾಣಕ್ಕೆ ಸಂಬಂಧಿಸಿದಂತೆ ಅವನು ದಾಖಲೆಗಳನ್ನು ಮುರಿದಿದ್ದು ಇದಕ್ಕೆ ಸಾಕ್ಷಿಯಾಗಿತ್ತು. RIAA ಸಂಸ್ಥೆಯು ಒಂದು ಸಂಯೋಜಿತ (128× ಪ್ಲಾಟಿನಮ್‌‌)ನಲ್ಲಿ ಅವನ ಧ್ವನಿಮುದ್ರಣಗಳನ್ನು ಪ್ರಮಾಣೀಕರಿಸಿದ್ದು, ಇದು ಸರಿಸುಮಾರಾಗಿ 113 ದಶ ಲಕ್ಷದಷ್ಟು U.S. ಸಾಗಣೆಗಳನ್ನು ಸೂಚಿಸುತ್ತದೆ.[೬೬]
 • 1990ರ ದಶಕದ ಮಧ್ಯಭಾಗದಲ್ಲಿ, ಹಳ್ಳಿಗಾಡಿನ ಪಾಶ್ಚಾತ್ಯ ಸಂಗೀತದ ಮೇಲೆ ಸಾಲು ನರ್ತನದ ಜನಪ್ರಿಯತೆಯು ಪ್ರಭಾವಬೀರಿತು. ಈ ಪ್ರಭಾವ ಅದೆಷ್ಟು ಮಹತ್ತರವಾಗಿ ತ್ತೆಂದರೆ, ಚೆಟ್‌ ಆಟ್ಕಿನ್ಸ್‌‌ ಈ ರೀತಿ ಹೇಳಿದ ಎಂಬುದಾಗಿ ಉಲ್ಲೇಖಿಸಲ್ಪಟ್ಟಿತು: "ಹಳ್ಳಿಗಾಡಿನ ಪಾಶ್ಚಾತ್ಯ ಸಂಗೀತವು ತೀರಾ ಹದಗೆಟ್ಟಿದೆ ಎಂದು ನನಗನ್ನಿಸುತ್ತದೆ. ಇದಕ್ಕೆಲ್ಲಾ ಆ ಅತ್ಯಲ್ಪ ಮಟ್ಟದ ಸಾಲು ನರ್ತನವೇ ಕಾರಣ."[೬೭] ಆದಾಗ್ಯೂ, ದಶಕದ ಅಂತ್ಯದ ವೇಳೆಗೆ, ಉತ್ತಮವಾದ ಹಳ್ಳಿಗಾಡಿನ ಸಾಲು ನೃತ್ಯ ಸಂಗೀತವು ಈಚೀಚೆಗೆ ಬಿಡುಗಡೆಯಾಗುತ್ತಿಲ್ಲ ಎಂಬುದಾಗಿ ಸಾಲು ನೃತ್ಯ ಪ್ರಕಾರಕ್ಕೆ ಸಂಬಂಧಿಸಿದ ಕನಿಷ್ಟ ಪಕ್ಷ ಓರ್ವ ನೃತ್ಯಸಂಯೋಜಕನು ದೂರಲು ತೊಡಗಿದ.

ಪರ್ಯಾಯವಾದ ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

 • 1990ರ ದಶಕದಲ್ಲಿ, ಮುಖ್ಯವಾಹಿನಿಯ ಹಳ್ಳಿಗಾಡಿನ ಸಂಗೀತದ ಸಂಪ್ರದಾಯಗಳ ಮತ್ತು ಉದ್ಯಮದ ಹೊರಗಡೆ ಕಾರ್ಯಾಚರಣೆ ನಡೆಸುವ ಸಂಗೀತಗಾರರು ಮತ್ತು ಗಾಯಕರ ಒಂದು ವೈವಿಧ್ಯಮಯ ಗುಂಪನ್ನು ಉಲ್ಲೇಖಿಸಲು, ಪರ್ಯಾಯವಾದ ಹಳ್ಳಿಗಾಡಿನ ಸಂಗೀತವು ಅಸ್ತಿತ್ವಕ್ಕೆ ಬಂತು. ಒಟ್ಟಾರೆಯಾಗಿ ಹೇಳುವುದಾದರೆ, ಒಂದು ಕಡಿಮೆ-ಸ್ಥಾಯಿಯ ಧ್ವನಿಯೊಂದಿಗಿನ ಸಂಗೀತವನ್ನು ಉಂಟುಮಾಡಲು, ನ್ಯಾಶ್‌ವಿಲ್ಲೆ-ಪ್ರಾಬಲ್ಯದ ಉದ್ಯಮದ ಉನ್ನತ ನಿರ್ಮಾಣ ಮೌಲ್ಯಗಳು ಮತ್ತು ಪಾಪ್‌ ಹೊರನೋಟವನ್ನು ಅವರು ಬಿಟ್ಟುಬಿಟ್ಟರು. *ಅದರಲ್ಲಿ ಒಂದು ಗಾಢವಾದ ಪಂಕ್‌ ಶೈಲಿ ಹಾಗೂ ಪರ್ಯಾಯ ಸಂಗೀತದ ಕಲಾಮೀಮಾಂಸೆಯನ್ನು ಆಗಿಂದಾಗ್ಗೆ ತುಂಬಿಸುವ ಮೂಲಕ, ಹಳ್ಳಿಗಾಡಿನ ಸಂಗೀತದ ಸಾಂಪ್ರದಾಯಿಕ ನಿಯಮಗಳನ್ನು ಅವರು ಬಗ್ಗಿಸಿದರು. ಗೀತಸಾಹಿತ್ಯಗಳು ಅನೇಕವೇಳೆ ನಿರಾಶಾದಾಯಕವಾಗಿ, ಒರಟಾಗಿ ಅಥವಾ ಸಾಮಾಜಿಕವಾಗಿ ಅರಿವುಳ್ಳವಾಗಿದ್ದವು. ಇದರ ಉಪಕ್ರಮದಲ್ಲಿ ತೊಡಗಿಸಿಕೊಂಡ ಇತರ ಕಲಾವಿದರಲ್ಲಿ ಓಲ್ಡ್‌‌ 97'ಸ್‌, ಲೈಲ್‌ ಲೊವೆಟ್‌, ಸ್ಟೀವ್‌ ಅರ್ಲೆ, ಅಂಕಲ್‌ ಟ್ಯುಪೆಲೊ, ಸಾನ್‌ ವೋಲ್ಟ್‌, ರೈಯಾನ್‌ ಆಡಮ್ಸ್‌, ಮೈ ಮಾರ್ನಿಂಗ್‌ ಜಾಕೆಟ್‌, ಬ್ಲಿಟ್ಜೆನ್‌‌ ಟ್ರಾಪರ್‌‌, ಆರ್‌, ದಿ ವೇಲ್‌‌ ಮತ್ತು ಡ್ರೈವ್‌-ಬೈ ಟ್ರಕರ್ಸ್‌ ಸೇರಿದ್ದರು.

2000ದ ದಶಕ[ಬದಲಾಯಿಸಿ]

ಕ್ಯಾರೀ ಅಂಡರ್‌ವುಡ್‌
 • ಹಲವಾರು ರಾಕ್‌ ಮತ್ತು ಪಾಪ್‌ ತಾರೆಗಳು ಹಳ್ಳಿಗಾಡಿನ ಸಂಗೀತದೊಳಗೆ ಪಾದಾರ್ಪಣೆ ಮಾಡುವ ಸಾಹಸ ಮಾಡಿದ್ದಾರೆ. 2000ದಲ್ಲಿ, ರಿಚರ್ಡ್‌ ಮಾರ್ಕ್ಸ್‌‌ ಎಂಬಾತ ತನ್ನ ಡೇಸ್‌ ಇನ್‌ ಅವಲಾನ್‌‌ ಗೀತಸಂಪುಟದೊಂದಿಗೆ ಒಂದು ಸಂಕ್ಷಿಪ್ತ ಅಡ್ಡ ಹಾಯ್ಕೆಯನ್ನು ಕೈಗೊಂಡ; ಈ ಗೀತಸಂಪುಟವು ಐದು ಹಳ್ಳಿಗಾಡಿನ ಹಾಡುಗಳು ಮತ್ತು ಹಲವಾರು ಗಾಯಕರು ಹಾಗೂ ಸಂಗೀತಗಾರರನ್ನು ಒಳಗೊಂಡಿದೆ.
 • ಮಾರ್ಕ್ಸ್‌‌ನ "ಸ್ಟ್ರೈಟ್‌ ಫ್ರಂ ಮೈ ಹಾರ್ಟ್‌" ಎಂಬ ಏಕಗೀತೆಗೆ ‌‌ಆಲಿಸನ್ ಕ್ರೌಸ್‌ ಹಿನ್ನೆಲೆಯ ಗಾಯನಭಾಗಗಳನ್ನು ಹಾಡಿದ. ಅಷ್ಟೇ ಅಲ್ಲ, ಶುಗರ್‌ಲ್ಯಾಂಡ್‌‌ನ ಜೆನ್ನಿಫರ್‌‌ ನೆಟಲ್ಸ್‌ ಜೊತೆಯಲ್ಲಿ "ಹೂ ಸೇಸ್‌ ಯು ಕಾಂಟ್‌ ಗೋ ಹೋಮ್‌‌" ಎಂಬ ಒಂದು ಜನಪ್ರಿಯ ಗೀತೆಯನ್ನು ಬಾನ್‌ ಜೋವಿ ತನ್ನ ದಾಖಲೆಗೆ ಸೇರಿಸಿಕೊಂಡಿದ್ದ. ತಮ್ಮ ಗೀತಸಂಪುಟಗಳಲ್ಲಿ ಹಳ್ಳಿಗಾಡಿನ ಹಾಡೊಂದನ್ನು ಸೇರಿಸಿದ ಇತರ ರಾಕ್‌ ತಾರೆಗಳಲ್ಲಿ ಡಾನ್‌ ಹೆನ್ಲೆ ಮತ್ತು ಪಾಯಿಸನ್‌‌ ಸೇರಿದ್ದರು.
 • ಹೆಮ್ಮೆಯಿಂದ ಕೂಡಿದ, ಮಣಿಯದ ಸ್ವತಂತ್ರಭಾವವು ಆಧುನಿಕ ಹಳ್ಳಿಗಾಡಿನ ಸಂಗೀತದಲ್ಲಿರುವ ಒಂದು ವಿರಳವಾದ, ಆದರೆ ಸುಸಂಗತವಾದ ವಿಷಯವಾಗಿದೆ. "ಕೌಂಟಿ ಬಾಯ್‌ ಕೆನ್‌ ಸರ್ವೈವ್‌‌" ಮತ್ತು "ಕಾಪರ್‌ಹೆಡ್‌ ರೋಡ್‌"[೬೮] ಎಂಬೆರಡು ಹೆಚ್ಚು ಗಂಭೀರ ಸ್ವರೂಪದ ಹಾಡುಗಳು ಇದೇ ಶೈಲಿಯಿಂದ ಕೂಡಿದ್ದರೆ, "ಸಮ್‌ ಗರ್ಲ್ಸ್‌ ಡೂ"[೬೯] ಮತ್ತು "ರೆಡ್‌ನೆಕ್‌‌ ವುಮನ್‌‌"[೭೦] ಎಂಬೆರಡು ಹಾಡುಗಳು ವಿಷಯದ ಕುರಿತಾದ ಅತೀವ ಲಘು-ಹೃದಯದ ರೂಪಾಂತರಗಳಾಗಿವೆ.
 • 2005ರಲ್ಲಿ, ಕ್ಯಾರೀ ಅಂಡರ್‌ವುಡ್‌ ಎಂಬ ಹಳ್ಳಿಗಾಡಿನ ಸಂಗೀತದ ಗಾಯಕಿಯು ಅಮೆರಿಕನ್‌ ಐಡಲ್‌ ಸ್ಪರ್ಧೆಯ ನಾಲ್ಕನೇ ಋತುವಿನಲ್ಲಿ ವಿಜಯಶಾಲಿಯಾಗುವುದರ ಮೂಲಕ ಪ್ರಸಿದ್ಧಿಗೆ ಬಂದಳು; ಅಷ್ಟೇ ಅಲ್ಲ, ಆಕೆಯು ಬಹು-ಪ್ಲಾಟಿನಮ್‌‌ ಧ್ವನಿಮುದ್ರಿಕೆಗಳ ಮಾರಾಟದ ಕೀರ್ತಿಪಡೆದ ಓರ್ವ ಕಲಾವಿದೆ ಮತ್ತು ಅನೇಕ ಗ್ರಾಮಿ ಪ್ರಶಸ್ತಿಗಳ ಓರ್ವ ವಿಜಯಶಾಲಿ ಎನಿಸಿಕೊಂಡಳು.
 • ತನ್ನ ಎಲ್ಲಾ 3 ಗೀತಸಂಪುಟಗಳಿಗೆ ಸೇರಿದ ತನ್ನೆಲ್ಲಾ ಏಕಗೀತೆಗಳಿಗೂ ಒಂದನೇ ಸ್ಥಾನವನ್ನು ದಕ್ಕಿಸಿಕೊಂಡು ಉತ್ತುಂಗವನ್ನೇರಿದ ಮೊದಲ ಹಳ್ಳಿಗಾಡಿನ ಕಲಾವಿದೆ ಎಂಬ ಕೀರ್ತಿಗೆ ಅವಳು ಪಾತ್ರಳಾಗಿದ್ದಾಳೆ. ಅಕಾಡೆಮಿ ಆಫ್‌ ಕಂಟ್ರಿ ಮ್ಯೂಸಿಕ್‌ ಅವಾರ್ಡ್ಸ್‌ ವತಿಯಿಂದ ನೀಡಲಾಗುವ ವರ್ಷದ ಮನರಂಜಕಿ ಪ್ರಶಸ್ತಿಯನ್ನು ಗೆಲ್ಲುವಲ್ಲಿನ ಏಳನೇ ಮಹಿಳೆ ಎನಿಸಿ ಕೊಳ್ಳುವ ಮೂಲಕ ಅಂಡರ್‌ವುಡ್‌ ಇತಿಹಾಸವನ್ನೂ ಸೃಷ್ಟಿಸಿದಳು.
 • ಅಕಾಡೆಮಿ ಆಫ್‌ ಕಂಟ್ರಿ ಮ್ಯೂಸಿಕ್‌ ಅವಾರ್ಡ್ಸ್‌ ವತಿಯಿಂದ ವರ್ಷದ ಮನರಂಜಕಿ ಪ್ರಶಸ್ತಿಯನ್ನು ಎರಡು ಬಾರಿಗೆ ಮಾತ್ರವೇ ಅಲ್ಲದೇ ಎರಡು ಬಾರಿ ಅನುಕ್ರಮವಾಗಿ ಸ್ವೀಕರಿಸುವಲ್ಲಿನ ಇತಿಹಾಸದಲ್ಲಿನ ಮೊದಲ ಮಹಿಳೆ ಎನಿಸಿಕೊಂಡಳು. "ಸಮ್‌ ಹಾರ್ಟ್ಸ್‌" ಎಂಬ ಹೆಸರಿನ, ಅಂಡರ್‌ವುಡ್‌ಳ ಪ್ರಥಮ ಪರಿಚಯದ ಗೀತ ಸಂಪುಟವು, ಪ್ರಥಮ ಪರಿಚಯದಲ್ಲಿಯೇ ಅತ್ಯಂತ ವೇಗವಾಗಿ-ಮಾರಾಟವಾದ ಯಾವುದೇ ಹಳ್ಳಿಗಾಡಿನ ಕಲಾವಿದರ ಗೀತಸಂಪುಟ ಎಂಬ ಕೀರ್ತಿಗೆ ಪಾತ್ರವಾಗಿದ್ದು ಮಾತ್ರವಲ್ಲದೆ, 2000-2009 ದಶಕದ ಹಳ್ಳಿಗಾಡಿನ ಸಂಗೀತದ ಅತ್ಯುಚ್ಚ ಗೀತಸಂಪುಟ ಎಂಬ ಶ್ರೇಯಾಂಕವನ್ನು Billboard.comನಿಂದ ಪಡೆಯಿತು.
 • 2008ರಲ್ಲಿ, ಟೇಲರ್‌ ಸ್ವಿಫ್ಟ್‌ ಎಂಬಾಕೆಯು ಹಳ್ಳಿಗಾಡಿನ-ಪಾಪ್‌ ಪ್ರಕಾರದ ಓರ್ವ ಪ್ರಮುಖ ಕಲಾವಿದೆಯಾಗಿ ಪ್ರವರ್ಧಮಾನಕ್ಕೆ ಬಂದಳು; ಈ ಅವಧಿ ಯಲ್ಲಿ "ಲವ್‌ ಸ್ಟೋರಿ" ಎಂಬ ಅವಳ ಏಕಗೀತೆಯು ನೀಲ್‌ಸೆನ್‌‌ BDS CHR/ಅಗ್ರಗಣ್ಯ 40 ಗೀತೆಗಳ ಕೋಷ್ಟಕದಲ್ಲಿ ಮೊದಲ ಸ್ಥಾನವನ್ನು ತಲುಪಿದ ಮೊದಲ ಹಳ್ಳಿಗಾಡಿನ ಹಾಡು ಎಂಬ ಕೀರ್ತಿಗೆ ಪಾತ್ರವಾಯಿತು. ಸ್ವಿಫ್ಟ್‌ಳ ಮುಂದಿನ ಏಕಗೀತೆಯಾದ "ಯು ಬಿಲಾಂಗ್‌ ವಿತ್‌ ಮಿ" ಕೂಡಾ ಮೊದಲನೇ ಸ್ಥಾನವನ್ನು ತಲುಪಿತು.
 • ಇದರಿಂದಾಗಿ, ಕೋಷ್ಟಕದ ಉಚ್ಚಸ್ಥಾನದಲ್ಲಿ ಮೊದಲ ಸ್ಥಾನವನ್ನು ದಕ್ಕಿಸಿಕೊಂಡ ಎರಡು ಏಕಗೀತೆಗಳನ್ನು ತನ್ನ ದಾಖಲೆಗೆ ಸೇರಿಸಿಕೊಂಡ ಏಕಮಾತ್ರ ಹಳ್ಳಿಗಾಡಿನ ಸಂಗೀತ ಕಲಾವಿದೆ ಎಂಬ ಕೀರ್ತಿಯು ಅವಳಿಗೆ ದಕ್ಕಿತು. "ಲವ್‌ ಸ್ಟೋರಿ" ಮತ್ತು "ಯು ಬಿಲಾಂಗ್‌ ವಿತ್‌ ಮಿ" ಗೀತೆಗಳೆರಡೂ ಅತ್ಯುತ್ತಮವಾಗಿ-ಮಾರಾಟವಾದ ಸಾರ್ವಕಾಲಿಕ ಹಳ್ಳಿ ಗಾಡಿನ ಹಾಡುಗಳೆಂಬ ಕೀರ್ತಿಗೆ ಪಾತ್ರವಾದವು; ಮೊದಲ ಸ್ಥಾನದಲ್ಲಿದ್ದ "ಲವ್‌ ಸ್ಟೋರಿ" ಗೀತೆಯು ಸ್ವದೇಶಿ ಮಾರುಕಟ್ಟೆಯಲ್ಲಿ ಒಟ್ಟು 4.4 ದಶಲಕ್ಷ ಡಿಜಿಟಲ್‌‌ ಪ್ರತಿಗಳಷ್ಟು ಸಂಖ್ಯೆಯಲ್ಲಿ ಮಾರಾಟವಾದರೆ, ಎರಡನೇ ಸ್ಥಾನದಲ್ಲಿದ್ದ "ಯು ಬಿಲಾಂಗ್‌ ವಿತ್‌ ಮಿ" ಗೀತೆಯು 3.4 ದಶಲಕ್ಷ ಪ್ರತಿಗಳಷ್ಟು ಮಾರಾಟವನ್ನು ಕಂಡಿತು.
 • (ಗಮನಾರ್ಹವೆಂಬಂತೆ, ಈ ಎರಡೂ ಹಾಡುಗಳು ಹಳ್ಳಿಗಾಡಿನ ಸಂಗೀತ ಅಭಿಮಾನಿಗಳ ವಲಯದಲ್ಲಿ ಅತೀವವಾಗಿ ಟೀಕಿಸಲ್ಪಟ್ಟವು; ಈ ಹಾಡುಗಳಲ್ಲಿ ಹಳ್ಳಿಗಾಡಿನ ಸಂಗೀತದ ಪ್ರಭಾವವು ಅಲ್ಪಮಟ್ಟದಲ್ಲಿದೆ ಎಂಬುದನ್ನು ಗಮನಿಸಿದ ಈ ಅಭಿಮಾನಿಗಳು ಅವಳ ಉಳಿದ ಹಾಡುಗಳಲ್ಲಿ ಬಹುಪಾಲು ಹಳ್ಳಿಗಾಡಿನ ಸಂಗೀತದ ಛಾಯೆಯು ಇದ್ದಕಾರಣದಿಂದ ಮಾತ್ರವೇ ಈ ಹಾಡುಗಳನ್ನು ಹಳ್ಳಿಗಾಡಿನ ಹಾಡುಗಳೆಂದು ಪರಿಗಣಿಸಿದ್ದರು.)
 • 2010ರಲ್ಲಿ, "ಫಿಯರ್‌ಲೆಸ್‌" ಎಂಬ ಸ್ವಿಫ್ಟ್‌ಳ ದ್ವಿತೀಯ ಗೀತಸಂಪುಟಕ್ಕೆ ವರ್ಷದ ಗೀತಸಂಪುಟಕ್ಕಾಗಿರುವ ಗ್ರಾಮಿ ಪ್ರಶಸ್ತಿಯನ್ನು ಪ್ರದಾನಮಾಡಲಾಯಿತು; ಇದರಿಂದಾಗಿ ಸದರಿ ಗೀತಸಂಪುಟವು ಅದೇ ವರ್ಷದಲ್ಲಿ ಅಮೆರಿಕನ್‌ ಮ್ಯೂಸಿಕ್‌ ಅವಾರ್ಡ್‌ (AMA), ಅಕಾಡೆಮಿ ಆಫ್‌ ಕಂಟ್ರಿ ಮ್ಯೂಸಿಕ್‌ ಅವಾರ್ಡ್‌ (ACM), ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌ ಪ್ರಶಸ್ತಿ (CMA), ಮತ್ತು ವರ್ಷದ ಗೀತಸಂಪುಟಕ್ಕಾಗಿರುವ ಗ್ರಾಮಿ ಪ್ರಶಸ್ತಿಯನ್ನು ಗೆಲ್ಲುವಲ್ಲಿನ ಇತಿಹಾಸದಲ್ಲಿನ ಮೊದಲ ಗೀತಸಂಪುಟ ಎನಿಸಿಕೊಂಡಿತು.
 • ಅದೇ ವರ್ಷದಲ್ಲಿ, ಹೂಟಿ & ದಿ ಬ್ಲೋಫಿಷ್‌ ಗಾಯಕನಾದ ಡೇರಿಯಸ್‌ ರಕರ್‌ ಎಂಬಾತ ಲರ್ನ್‌ ಟು ಲಿವ್‌‌ ಎಂಬ ಹೆಸರಿನ ತನ್ನ ಒಂಟಿಗಾಯನದ ಎರಡನೇ ಗೀತ ಸಂಪುಟ ಹಾಗೂ ಹಳ್ಳಿಗಾಡಿನ ಸಂಗೀತದ ರಂಗಪ್ರವೇಶದ ಗೀತಸಂಪುಟವನ್ನು ಬಿಡುಗಡೆ ಮಾಡಿದ. ಆ ಗೀತಸಂಪುಟದ ಮೊದಲ ಮೂರು ಏಕಗೀತೆಗಳೆಲ್ಲವೂ ಮೊದಲನೇ ಸ್ಥಾನ ವನ್ನು ದಕ್ಕಿಸಿಕೊಳ್ಳುವ ಮೂಲಕ, ಒಂದು ದಶಕದ ಅವಧಿಯಲ್ಲಿ ಪ್ರಥಮ ಪ್ರವೇಶದ ಸಂದರ್ಭದಲ್ಲಿಯೇ ಮೊದಲ ಸ್ಥಾನವನ್ನು ಅಲಂಕರಿಸಿದ ಮೂರು ಜನಪ್ರಿಯ ಗೀತೆಗಳನ್ನು ನೀಡಿದ ಮೊದಲ ಒಂಟಿಗಾಯನ ಕಲಾವಿದ ಎಂಬ ಕೀರ್ತಿಗೆ ರಕರ್‌ ಪಾತ್ರನಾಗಲು ಕಾರಣವಾದವು.
 • 1983ರಲ್ಲಿ ಚಾರ್ಲೆ ಪ್ರೈಡ್‌ ಎಂಬಾತನು ದಾಖಲಿಸಿದ ಯಶಸ್ಸಿನ ನಂತರ, ಒಂದು ಅತ್ಯುಚ್ಚ ಸ್ಥಾನದಲ್ಲಿನ ಹಳ್ಳಿಗಾಡಿನ ಜನಪ್ರಿಯ ಗೀತೆಯನ್ನು ನೀಡಿದ ಮೊದಲ ಅಮೆರಿಕಾದ ನೀಗ್ರೋ ಎಂಬ ಕೀರ್ತಿಯನ್ನೂ ಅವನು ಪಡೆದ.2009ರಲ್ಲಿ, ಅಕಾಡೆಮಿ ಆಫ್‌ ಕಂಟ್ರಿ ಮ್ಯೂಸಿಕ್‌‌ ಸಂಸ್ಥೆಯು ಜಾರ್ಜ್‌ ಸ್ಟ್ರೈಟ್‌‌ನ್ನು ದಶಕದ ಕಲಾವಿದ ಎಂಬುದಾಗಿ ಹೆಸರಿಸಿತು.

ಅಮೆರಿಕಾ ಸಂಯುಕ್ತ ಸಂಸ್ಥಾನಗಳ ಹೊರಗಿನ ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

ಕೆನಡಾ[ಬದಲಾಯಿಸಿ]

 • USನಿಂದ ಹೊರಗಿನ ವಲಯವನ್ನು ಪರಿಗಣಿಸುವುದಾದರೆ, ಅತಿದೊಡ್ಡ ಪ್ರಮಾಣದ ಹಳ್ಳಿಗಾಡಿನ ಸಂಗೀತಾಭಿಮಾನಿಗಳನ್ನು ಹಾಗೂ ಕಲಾವಿದರ ನೆಲೆಯನ್ನು ಕೆನಡಾ ಹೊಂದಿದೆ. ಮುಖ್ಯವಾಹಿನಿಯ ಹಳ್ಳಿಗಾಡಿನ ಸಂಗೀತವು ನೋವಾ ಸ್ಕಾಟಿಯಾ, ನ್ಯೂ ಬ್ರನ್ಸ್‌ವಿಕ್‌‌, ಪ್ರಿನ್ಸ್‌‌ ಎಡ್ವರ್ಡ್‌ ಐಲಂಡ್‌, ಆಲ್ಬರ್ಟಾ, ಸಾಸ್ಕಾಟ್‌ಚೆವಾನ್‌‌, ಮತ್ತು ಮನಿಟೋಬಾ ಪ್ರದೇಶಗಳಲ್ಲಿ ಸಾಂಸ್ಕೃತಿಕವಾಗಿ ಆಳವಾಗಿ ಬೇರುಬಿಟ್ಟಿದೆ: ಈ ಪ್ರದೇಶಗಳಲ್ಲಿ ಬೃಹತ್‌‌ ಸಂಖ್ಯೆಯ ಗ್ರಾಮೀಣ ನಿವಾಸಿಗಳಿದ್ದಾರೆ ಎಂಬುದು ಗಮನಾರ್ಹ ಅಂಶ.
 • ಕೆನಡಾದ ಸಮುದ್ರ ತೀರದ ಪ್ರಾಂತ್ಯಗಳಿಗೆ (ನೋವಾ ಸ್ಕಾಟಿಯಾ, ನ್ಯೂ ಬ್ರನ್ಸ್‌ವಿಕ್‌‌, ಮತ್ತು ಪ್ರಿನ್ಸ್‌‌ ಎಡ್ವರ್ಡ್‌ ಐಲಂಡ್‌) ವಲಸೆಗಾರರಾಗಿ ಬಂದ ಐರ್ಲಂಡಿನ ಮತ್ತು ಸ್ಕಾಟಿಷ್‌ ಜನರ ನಡುವೆ ಜನಪ್ರಿಯವಾದ ಕೆಲ್ಟಿಕ್‌‌ ಜಾನಪದ ಸಂಗೀತದ ಸ್ವರೂಪದಲ್ಲಿ, ಅಟ್ಲಾಂಟಿಕ್‌‌ ಕೆನಡಾದಲ್ಲಿ ಕೆನಡಾದ ಹಳ್ಳಿಗಾಡಿನ ಸಂಗೀತವು ಹುಟ್ಟಿಕೊಂಡಿತು. USನ ದಕ್ಷಿಣ ಭಾಗ ಮತ್ತು ಅಪಲಾಚಿಯಾ ಭಾಗದೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿರುವ ಈ ಪ್ರದೇಶದಲ್ಲಿ, ಕೆನಡಾದ ಹಳ್ಳಿಗಾಡಿನ ಸಂಗೀತದ ಮೂಲಗಳಿರುವುದು ಅಚ್ಚರಿಯೇನಲ್ಲ.
 • ಈ ಎಲ್ಲಾ ಮೂರು ಪ್ರದೇಶಗಳೂ ಅತೀವ ಪ್ರಮಾಣದಲ್ಲಿ ಬ್ರಿಟಿಷ್‌ ಐಲ್ಸ್‌ಗೆ ಸೇರಿದ ಮನೆತನದ ಜನ ಮತ್ತು ಗ್ರಾಮೀಣ ಜನರನ್ನು ಒಳಗೊಂಡಿವೆ. ಸಮುದ್ರ ತೀರದ ಪ್ರದೇಶಗಳಲ್ಲಿನ ಹಳ್ಳಿಗಾಡಿನ ಸಂಗೀತದ ಬೆಳವಣಿಗೆಯು, USನ ದಕ್ಷಿಣ ಭಾಗ ಮತ್ತು ಅಪಲಾಚಿಯಾ ಭಾಗಗಳಲ್ಲಿ ಹಳ್ಳಿಗಾಡಿನ ಸಂಗೀತದ ಬೆಳವಣಿಗೆಯನ್ನು ಪ್ರತಿಫಲಿಸಿತು. ಡಾನ್‌ ಮೆಸ್ಸರ್‌‌'ಸ್‌‌ ಜುಬಿಲೀ ಎಂಬುದು ನೋವಾ ಸ್ಕಾಟಿಯಾದ ಹ್ಯಾಲಿಫ್ಯಾಕ್ಸ್ ಮೂಲದ ಒಂದು ಹಳ್ಳಿಗಾಡಿನ/ಜಾನಪದ ಪ್ರಭೇದದ ದೂರದರ್ಶನ ಕಾರ್ಯಕ್ರಮವಾಗಿದ್ದು, 1957ರಿಂದ 1969ರ ವರೆಗಿನ ಅವಧಿಯಲ್ಲಿ ಅದು ರಾಷ್ಟ್ರಮಟ್ಟದಲ್ಲಿ ಪ್ರಸಾರವಾಗಿತ್ತು.
 • ಇದು ಅಮೆರಿಕಾ ಸಂಯುಕ್ತ ಸಂಸ್ಥಾನದ ಎಡ್‌ ಸಲ್ಲಿವಾನ್‌‌ ಷೋ ಕಾರ್ಯಕ್ರಮಕ್ಕಿಂತ ಮಿಗಿಲಾಗಿ ಜನರನ್ನು ಆಕರ್ಷಿಸಿತು ಮತ್ತು 1960ರ ದಶಕದ ಬಹುಭಾಗದಾದ್ಯಂತವೂ ಕೆನಡಾ ದಲ್ಲಿ ಅತ್ಯುಚ್ಚ ಶ್ರೇಯಾಂಕವನ್ನು ಪಡೆದ ದೂರದರ್ಶನ ಕಾರ್ಯಕ್ರಮ ಎನಿಸಿಕೊಂಡಿತು. ಡಾನ್‌ ಮೆಸ್ಸರ್‌‌'ಸ್‌ ಜುಬಿಲೀ ಕಾರ್ಯಕ್ರಮವು ತಾನು ಪ್ರಸಾರವಾದ ವರ್ಷಗಳ ಅವಧಿ ಯುದ್ದಕ್ಕೂ ಒಂದು ಏಕನಿಷ್ಠೆಯ ಅಥವಾ ಸುಸಂಗತವಾದ ಸ್ವರೂಪವನ್ನು ಕಾಯ್ದುಕೊಂಡು ಬಂದಿತು;
 • "ಗೋಯಿಂಗ್‌ ಟು ದಿ ಬ್ರಾನ್‌ಡಾನ್ಸ್‌ ಟುನೈಟ್‌" ಎಂಬ ಹೆಸರಿನ ರಾಗದೊಂದಿಗೆ ಆರಂಭಗೊಂಡು, ಮೆಸ್ಸರ್ ಪ್ರಸ್ತುತಿಯ ಪಿಟೀಲು ರಾಗಗಳಿಂದ, ಗಾಯಕರಾದ ಮಾರ್ಗ್‌ ಓಸ್ಬರ್ನ್‌ ಮತ್ತು ಚಾರ್ಲೀ ಚೇಂಬರ್‌ಲೇನ್‌ರ ಅತಿಥಿ ಪ್ರಸ್ತುತಿಗಳನ್ನು ಒಳಗೊಂಡಂತೆ ಮೆಸ್ಸರ್‌ನ "ಐಲಂಡರ್ಸ್‌‌"ಗೆ ಸೇರಿದ ಕೆಲವೊಂದು ಹಾಡುಗಳಿಂದ ಅದು ಅನುಸರಿಸಲ್ಪಡುತ್ತಿತ್ತು; ಮತ್ತು ಒಂದು ಮುಕ್ತಾಯದ ಸ್ತೋತ್ರಗೀತೆಯನ್ನು ಅದು ಹೊಂದಿರುತ್ತಿತ್ತು. "ಟಿಲ್‌ ವಿ ಮೀಟ್‌ ಎಗೇನ್‌‌" ಗೀತೆಯೊಂದಿಗೆ ಅದು ಕೊನೆಗೊಳ್ಳುತ್ತಿತ್ತು.
 • ಅತಿಥಿ ಪ್ರಸ್ತುತಿಯ ಸ್ಥಳಾವಕಾಶವು ಸ್ಟೊಂಪಿನ್‌‌' ಟಾಮ್‌ ಕೊನಾರ್ಸ್‌ ಮತ್ತು ಕ್ಯಾಥರೀನ್‌ ಮೆಕ್‌ಕಿನ್ನನ್‌‌ ಸೇರಿದಂತೆ ಕೆನಡಾದ ಹಲವಾರು ಜಾನಪದ ಸಂಗೀತಗಾರರಿಗೆ ರಾಷ್ಟ್ರೀಯ ಮಾನ್ಯತೆಯನ್ನು ದಕ್ಕಿಸಿಕೊಟ್ಟಿತು. ಸಮುದ್ರ ತೀರಪ್ರದೇಶಕ್ಕೆ ಸೇರಿದ ಕೆಲವೊಂದು ಹಳ್ಳಿಗಾಡಿನ ಪ್ರಸ್ತುತಿಕಾರರು ಕೆನಡಾದಿಂದ ಆಚೆಗೂ ಪ್ರಸಿದ್ಧಿಯನ್ನು ಪಡೆದರು. ಅವರ ಪೈಕಿ ಹ್ಯಾಂಕ್‌ ಸ್ನೋ, ವಿಲ್ಫ್‌ ಕಾರ್ಟರ್‌‌ (ಮೊಂಟಾನಾ ಸ್ಲಿಮ್ ಎಂದೂ ಸಹ ಈತ ಹೆಸರಾಗಿದ್ದ‌‌), ಮತ್ತು ಆನ್ನೆ ಮರ್ರೇ ಎಂಬ ಮೂವರು ಅತ್ಯಂತ ಗಮನಾರ್ಹ ಕಲಾವಿದರಾಗಿದ್ದಾರೆ.
*1969ರಲ್ಲಿ ಸಾರ್ವಜನಿಕ ಪ್ರಸಾರಕ ಕೇಂದ್ರವು ಪ್ರದರ್ಶನವನ್ನು ರದ್ದುಪಡಿಸಿದ್ದು ಒಂದು ರಾಷ್ಟ್ರವ್ಯಾಪಿ ಪ್ರತಿಭಟನೆಗೆ ಕಾರಣವಾಯಿತು; ಕೆನಡಾದ ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳುವವರೆಗೆ ಪ್ರತಿಭಟನೆಯ ವ್ಯಾಪ್ತಿ ವಿಸ್ತರಿಸಿತು. ಸಮುದ್ರ ತೀರದ ಪ್ರದೇಶಗಳಲ್ಲಿ ಹಳ್ಳಿಗಾಡಿನ ಸಂಗೀತದ ಮೂಲಗಳಿದ್ದರೂ ಸಹ, ಕೆನಡಾದ ಪೂರ್ವ ಮತ್ತು ಪಶ್ಚಿಮ ಭಾಗ ಗಳಲ್ಲಿಯೂ ಸಾಂಪ್ರದಾಯಿಕ ಹಳ್ಳಿಗಾಡಿನ ಸಂಗೀತದ ಅನೇಕ ಕಲಾವಿದರು ನೆಲೆಗೊಂಡಿದ್ದಾರೆ. 
 • ಅವರು ತಮ್ಮ ಸಂಗೀತ ಪ್ರಸ್ತುತಿಯಲ್ಲಿ ಪಿಟೀಲು ಮತ್ತು ಆಧಾರನಾದದ ಉಕ್ಕಿನ ಗಿಟಾರಿನ ಶೈಲಿಗಳನ್ನು ಸಾಮಾನ್ಯವಾಗಿ ಬಳಸುತ್ತಾರೆ. ಕೆನಡಾದ ಕೆಲವೊಂದು ಗಮನಾರ್ಹ ಹಳ್ಳಿಗಾಡಿನ ಕಲಾವಿದರಲ್ಲಿ ಇವರು ಸೇರಿದ್ದಾರೆ: ಷೇನಿಯಾ ಟ್ವೈನ್‌‌, ಬ್ಲೂ ರೋಡಿಯೋ, ಮಾರ್ಗ್‌ ಓಸ್ಬರ್ನ್‌, ಹ್ಯಾಂಕ್‌ ಸ್ನೋ, ಜಾನಿ ಮೂರಿಂಗ್‌‌, ಡಾನ್‌ ಮೆಸ್ಸರ್‌‌, ಡಾಕ್‌‌ ವಾಕರ್‌‌, ಎಮರ್‌‌ಸನ್‌‌ ಡ್ರೈವ್‌‌, ಪಾಲ್‌ ಬ್ರಾಂಡ್ಟ್‌‌, ದಿ ವಿಲ್ಕಿನ್ಸನ್ಸ್‌, ವಿಲ್ಫ್‌ ಕಾರ್ಟರ್‌‌, ಮಿಚೆಲ್ಲೆ ರೈಟ್‌, ಕೊರ್ಬ್‌ ಲುಂಡ್‌ ಅಂಡ್‌ ದಿ ಹರ್ಟಿನ್‌ ಆಲ್ಬರ್ಟನ್ಸ್‌, ಸ್ಟೊಂಪಿನ್‌‌' ಟಾಮ್‌ ಕೊನಾರ್ಸ್‌, ಟೆರ್ರಿ ಕ್ಲಾರ್ಕ್‌, ಕ್ರಿಸ್ಟಲ್‌ ಷಾವಂಡಾ, ಶೇನ್‌‌ ಯೆಲ್ಲೋಬರ್ಡ್‌, ದಿ ರೋಡ್‌ ಹ್ಯಾಮರ್ಸ್‌‌, ಮತ್ತು ಆನ್ನೆ ಮರ್ರೇ.

ಆಸ್ಟ್ರೇಲಿಯಾ[ಬದಲಾಯಿಸಿ]

 • ಹಳ್ಳಿಗಾಡಿನ ಸಂಗೀತವು ಆಸ್ಟ್ರೇಲಿಯಾದಲ್ಲಿ ಎಲ್ಲ ಸಮಯಗಳಲ್ಲೂ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡು ಬಂದಿದೆ, ಅದರಲ್ಲೂ ವಿಶೇಷವಾಗಿ ಹಳ್ಳಿಗಾಡಿನ ಸಂಗೀತದ ಗ್ರಾಮೀಣ ಸ್ವಭಾವವು ಹೆಚ್ಚು ಜನಪ್ರಿಯವಾಗಿದೆ. ಪೊದೆಗಾಡಿನ ಲಾವಣಿ ಗಾಯಕರು ಪೊದೆಗಾಡಿನ ಕುರಿತಾಗಿ ತಮ್ಮದೇ ಹಾಡುಗಳನ್ನು ಬರೆಯುವುದರೊಂದಿಗೆ ಮಾತ್ರವೇ ಅಲ್ಲದೇ, ಸರ್ಕಾರದ ದಬ್ಬಾಳಿಕೆಯ ವಿರುದ್ಧ ಹೊರಹೊಮ್ಮಿದ ಪ್ರತಿಭಟನೆಯ ಹಾಡುಗಳಾಗಿ 1800ರ ದಶಕದಲ್ಲಿ ಇದು ಆರಂಭವಾಯಿತು.
 • 1940ರ ದಶಕದಲ್ಲಿ, ಹಳ್ಳಿಗಾಡಿನ ಸಂಗೀತದ ವೃತ್ತಿಜೀವನದಲ್ಲಿ ಸ್ಲಿಮ್‌ ಡಸ್ಟಿ ತನ್ನನ್ನು ತೊಡಗಿಸಿಕೊಂಡ; ಅದು ಐವತ್ತು ವರ್ಷಗಳಿಗೂ ಹೆಚ್ಚಿನ ಅವಧಿಗೆ ಹಬ್ಬಿತು ಮತ್ತು ಈ ಅವಧಿಯಲ್ಲಿ 100ಕ್ಕೂ ಹೆಚ್ಚಿನ ಗೀತಸಂಪುಟಗಳು ಹೊರಬಂದವು. ಸ್ಮೋಕಿ ಡಾಸನ್‌‌ ಎಂಬಾತ ಕೂಡಾ ಆಸ್ಟ್ರೇಲಿಯಾದಲ್ಲಿ ಹಳ್ಳಿಗಾಡಿನ ಸಂಗೀತದ ಓರ್ವ ಪಥನಿರ್ಮಾಪಕನಾಗಿದ್ದ; ಸಾಂಪ್ರದಾಯಿಕ ಕೌಬಾಯ್‌‌ ಶೈಲಿಯಲ್ಲಿ ಬಹುಪಾಲು ತನ್ನನ್ನು ಒಡ್ಡಿಕೊಳ್ಳುತ್ತಿದ್ದ ಆತ, ತನ್ನದೇ ಸಚಿತ್ರ ಕಥಾಪುಸ್ತಕಗಳು ಹಾಗೂ ರೇಡಿಯೋ ಧಾರಾವಾಹಿಗಳಲ್ಲಿಯೂ ತೊಡಗಿಸಿಕೊಂಡ.
 • ತೀರಾ ಇತ್ತೀಚಿನ ವರ್ಷಗಳಲ್ಲಿ, ಕೀತ್‌ ಅರ್ಬನ್‌‌ ಮತ್ತು ಷೆರ್ರಿ ಆಸ್ಟಿನ್‌‌‌ರಂಥ ಕಲಾವಿದರು ಹಳ್ಳಿಗಾಡಿನ ಸಂಗೀತದ ಸಂಪ್ರದಾಯವನ್ನು ಜೀವಂತವಾಗಿರಿಸಿಕೊಂಡು ಬರುತ್ತಿದ್ದಾರೆ.

ಸಾಹಿತ್ಯದ ಮೇಲೆ ತನ್ನ ಅನುಭೂತಿಯನ್ನು ಕೇಂದ್ರೀಕರಿಸುವ ಮೂಲಕ ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತವು ತನ್ನದೇ ಆದ ಅನನ್ಯ ಶೈಲಿಯನ್ನು ಬೆಳೆಸಿತು; ಇದು ಲೀ ಕೆರ್ನಾಘಾನ್‌‌, ಸ್ಲಿಮ್‌ ಡಸ್ಟಿ ಮತ್ತು ಗ್ರೇಮ್‌‌ ಕೊನಾರ್ಸ್‌‌‌ರಂಥ ಕಲಾವಿದರಿಂದ ಪ್ರತಿಬಿಂಬಿಸಲ್ಪಟ್ಟಿದೆ.

 • ಟ್ಯಾಮ್‌ವರ್ತ್‌ ಕಂಟ್ರಿ ಮ್ಯೂಸಿಕ್‌ ಫೇಸ್ಟಿವಲ್‌‌ ಎಂಬುದು ನ್ಯೂಸೌತ್‌‌ ವೇಲ್ಸ್‌‌ನ ಟ್ಯಾಮ್‌ವರ್ತ್‌ನಲ್ಲಿ (ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತದ ರಾಜಧಾನಿ) ಆಯೋಜಿಸಲ್ಪಡುವ ಹಳ್ಳಿಗಾಡಿನ ಸಂಗೀತದ ಒಂದು ವಾರ್ಷಿಕ ಉತ್ಸವವಾಗಿದೆ. ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತದ ಸಂಸ್ಕೃತಿ ಮತ್ತು ಪರಂಪರೆಯನ್ನು ಇದು ಆಚರಿಸುತ್ತದೆ. ಈ ಉತ್ಸವದ ಅವಧಿಯಲ್ಲಿ, ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತ ಪ್ರಶಸ್ತಿಗಳ ಸಮಾರಂಭವನ್ನು CMAA ಹಮ್ಮಿಕೊಳ್ಳುತ್ತದೆ ಮತ್ತು ಗೋಲ್ಡನ್‌‌ ಗಿಟಾರ್‌‌ ಪ್ರಶಸ್ತಿ ಫಲಕಗಳನ್ನು ನೀಡುತ್ತದೆ.
 • ಗಮನಾರ್ಹವಾಗಿರುವ ಇತರ ಹಳ್ಳಿಗಾಡಿನ ಸಂಗೀತ ಉತ್ಸವಗಳಲ್ಲಿ ಇವು ಸೇರಿವೆ: ಫೆಬ್ರುವರಿಯಲ್ಲಿ ಮೆಲ್ಬೋರ್ನ್‌ನ ಉತ್ತರ ಭಾಗದಲ್ಲಿ ಆಯೋಜಿಸಲ್ಪಡುವ ವಿಟ್ಲ್‌ಸೀ ಹಳ್ಳಿಗಾಡಿನ ಸಂಗೀತ ಉತ್ಸವ, ಫೆಬ್ರುವರಿಯಲ್ಲಿ ಆಸ್ಟ್ರೇಲಿಯಾದ ಪಶ್ಚಿಮ ಭಾಗದಲ್ಲಿ ಆಯೋಜಿಸಲ್ಪಡುವ ಬಾಯಪ್‌‌ ಬ್ರೂಕ್‌‌ ಹಳ್ಳಿಗಾಡಿನ ಸಂಗೀತ ಉತ್ಸವ, ಜೂನ್‌‌ನಲ್ಲಿ ದಕ್ಷಿಣ ಆಸ್ಟ್ರೇಲಿಯಾದಲ್ಲಿ ಆಯೋಜಿಸಲ್ಪಡುವ ಬಮೆರಾ ಹಳ್ಳಿಗಾಡಿನ ಸಂಗೀತ ಉತ್ಸವ, ಆಗಸ್ಟ್‌‌ ಅವಧಿಯಲ್ಲಿ ಆಯೋಜಿಸಲ್ಪಡುವ ನ್ಯಾಷನಲ್‌ ಕಂಟ್ರಿ ಮಸ್ಟರ್‌, ಅಕ್ಟೋಬರ್‌‌ ಅವಧಿಯಲ್ಲಿ ಆಯೋಜಿಸಲ್ಪಡುವ ಸಂಪೂರ್ಣ "ಸ್ವತಂತ್ರ" ಪ್ರಸ್ತುತಿಕಾರರಿಗೆ ಮೀಸಲಾದ ಮಿಲ್ಡ್ಯೂರಾ ಹಳ್ಳಿಗಾಡಿನ ಸಂಗೀತ ಉತ್ಸವ ಹಾಗೂ ನವೆಂಬರ್‌‌ ಅವಧಿಯಲ್ಲಿ ರಾಷ್ಟ್ರೀಯ ರಾಜಧಾನಿಯಲ್ಲಿ ಆಯೋಜಿಸಲ್ಪಡುವ ಕ್ಯಾನ್‌ಬೆರಾ ಹಳ್ಳಿಗಾಡಿನ ಸಂಗೀತ ಉತ್ಸವ.
 • ಕೆಲವೊಂದು ಉತ್ಸವಗಳು ಅವು ನಡೆಯುವ ತಾಣಗಳಿಂದಾಗಿ ಅನನ್ಯತೆಯನ್ನು ಪಡೆದುಕೊಂಡಿವೆ: ನ್ಯೂ ಸೌತ್‌‌ ವೇಲ್ಸ್‌ನಲ್ಲಿನ ಗ್ರಾಬೈನ್‌‌ ಸ್ಟೇಟ್‌ ಪಾರ್ಕ್‌ ತನ್ನ ಗ್ರಾಬೈನ್‌‌ ಮ್ಯೂಸಿಕ್‌ ಮಸ್ಟರ್‌ ಫೆಸ್ಟಿವಲ್ ಮೂಲಕ ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತವನ್ನು ಉತ್ತೇಜಿಸುತ್ತದೆ; ಮೆರಿಲಿನ್ಸ್‌‌ ಹಳ್ಳಿಗಾಡಿನ ಸಂಗೀತ ಉತ್ಸವವು ಒಂದು ಅನನ್ಯ ಕಾರ್ಯಕ್ರಮವಾಗಿದ್ದು, ದಕ್ಷಿಣ ಆಸ್ಟ್ರೇಲಿಯಾದ ಸ್ಮೋಕಿ ಬೇ ಎಂಬಲ್ಲಿ ಅದು ಪ್ರತಿವರ್ಷ ಸೆಪ್ಟೆಂಬರ್‌ನಲ್ಲಿ ಆಯೋಜಿಸಲ್ಪಡುತ್ತದೆ ಮತ್ತು ಸಿಂಪಿ ದೋಣಿಮನೆಯೊಂದನ್ನು ಒಂದು ವೇದಿಕೆಯಾಗಿ ಬಳಸಿಕೊಂಡು ನಡೆಸಲ್ಪಡುವ ಪ್ರಪಂಚದಲ್ಲಿನ ಏಕೈಕ ಸಂಗೀತ ಉತ್ಸವವಾಗಿದೆ.
 • ಆಸ್ಟ್ರೇಲಿಯಾ ದೇಶಗಳಲ್ಲಿನ ಹಳ್ಳಿಗಾಡಿನ ಸಂಗೀತದ ರಂಗಸ್ಥಲದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವ ಹೊಸ ಪ್ರತಿಭೆಗಳಿಗೆ ಕಂಟ್ರಿ HQ ವೇದಿಕೆಯನ್ನು ಕಲ್ಪಿಸುತ್ತದೆ. ಆಸ್ಟ್ರೇಲಿಯಾದಲ್ಲಿನ ತಡೆರಹಿತ ಹಳ್ಳಿಗಾಡಿನ ಸಂಗೀತಕ್ಕೆಂದೇ ಸಮರ್ಪಿಸಲಾಗಿರುವ 24 ಗಂಟೆಗಳ ಸಂಗೀತ ವಾಹಿನಿಯೊಂದನ್ನು ಆಸ್ಟ್ರೇಲಿಯಾ ಹೊಂದಿದೆ. CMCಯನ್ನು (ಕಂಟ್ರಿ ಮ್ಯೂಸಿಕ್‌ ಚಾನೆಲ್‌‌) ಫಾಕ್ಸ್‌ಟೆಲ್‌‌ ಮತ್ತು ಆಸ್ಟರ್‌‌ಗಳಲ್ಲಿ ಕಾಣಬಹುದು;
 • ಇದು ವರ್ಷಕ್ಕೊಮ್ಮೆ ದಿ ವಿಲ್ಕಿನ್ಸನ್ಸ್‌, ದಿ ರೋಡ್‌ ಹ್ಯಾಮರ್ಸ್‌‌, ಮತ್ತು ಕಂಟ್ರಿ ಮ್ಯೂಸಿಕ್‌ ಅಕ್ರಾಸ್‌ ಅಮೆರಿಕಾದಂಥ ಅಂತರರಾಷ್ಟ್ರೀಯ ಕಾರ್ಯಕ್ರಮಗಳ ಜೊತೆಜೊತೆಗೆ, ಗೋಲ್ಡನ್‌‌ ಗಿಟಾರ್‌‌ ಪ್ರಶಸ್ತಿ ಸಮಾರಂಭಗಳು, CMA ಪ್ರಶಸ್ತಿ ಸಮಾರಂಭಗಳು ಮತ್ತು CCMA ಪ್ರಶಸ್ತಿ ಸಮಾರಂಭಗಳನ್ನೂ ಪ್ರದರ್ಶಿಸುತ್ತದೆ.

ಇತರ ಅಂತರರಾಷ್ಟ್ರೀಯ ಹಳ್ಳಿಗಾಡಿನ ಸಂಗೀತ[ಬದಲಾಯಿಸಿ]

 • ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌ ಇಂಟರ್‌ನ್ಯಾಷನಲ್‌ಗೆ ಸೇರಿದ ಟಾಮ್‌ ರೋಲ್ಯಾಂಡ್ ಎಂಬಾತ ಹಳ್ಳಿಗಾಡಿನ ಸಂಗೀತದ ಜಾಗತಿಕ ಜನಪ್ರಿಯತೆಯನ್ನು ಹೀಗೆ ವಿವರಿಸುತ್ತಾನೆ: "ಕನಿಷ್ಟ ಪಕ್ಷ ಇದಕ್ಕೆ ಸಂಬಂಧಿಸಿದಂತೆ, ಭೂಮಂಡಲದೆಲ್ಲೆಡೆ ಇರುವ ಹಳ್ಳಿಗಾಡಿನ ಸಂಗೀತದ ಕೇಳುಗರು ಅಮೆರಿಕಾ ಸಂಯುಕ್ತ ಸಂಸ್ಥಾನಗಳಲ್ಲಿರುವ ಕೇಳುಗರ ನಡುವೆ ಒಂದು ಸಾಮಾನ್ಯವಾಗಿರುವ ಅಂಶವಿದೆ.
 • ಉದಾಹರಣೆಗೆ, ಜರ್ಮನಿಯಲ್ಲಿ, ಈ ಪ್ರಕಾರದೆಡೆಗೆ ಆಕರ್ಷಿಸಲ್ಪಡುವ ಮೂರು ಸಾಮಾನ್ಯ ಗುಂಪುಗಳನ್ನು ರೋಹ್ರ್‌‌ಬ್ಯಾಚ್‌ ಗುರುತಿಸುತ್ತದೆ: ಅಮೆರಿಕಾದ ಕೌಬಾಯ್‌‌ ಮಾದರಿಯೊಂದಿಗೆ ಆಸಕ್ತಿ ತಳೆದಿರುವ ಜನರು, ಗಡುಸಾದ ರಾಕ್‌ ಸಂಗೀತಕ್ಕೆ ಒಂದು ಪರ್ಯಾಯ ಬೇಕೆಂದು ಬಯಸುತ್ತಿರುವ ಮಧ್ಯ-ವಯಸ್ಸಿನ ಅಭಿಮಾನಿಗಳು ಮತ್ತು ಹಳ್ಳಿಗಾಡಿನ ಅನೇಕ ಪ್ರಸಕ್ತ ಜನಪ್ರಿಯ ಗೀತೆಗಳನ್ನು ಒತ್ತಿಹೇಳುವ ಪಾಪ್‌‌-ಪ್ರಭಾವಿತ ಧ್ವನಿಯೆಡೆಗೆ ಆಕರ್ಷಿತರಾಗಿರುವ ಚಿಕ್ಕ ವಯಸ್ಸಿನ ಕೇಳುಗರು.”[೭೧]
 • IVನೇ ಜಾರ್ಜ್‌ ಹ್ಯಾಮಿಲ್ಟನ್‌‌ ಎಂಬಾತ ಹೊರದೇಶದಲ್ಲಿ ಹಳ್ಳಿಗಾಡಿನ ಸಂಗೀತವನ್ನು ಪ್ರಸ್ತುತಪಡಿಸಿದ ಮೊದಲ ಅಮೆರಿಕನ್ನರ ಪೈಕಿ ಒಬ್ಬನಾಗಿದ್ದ. ಅವನು ಸೋವಿಯೆಟ್‌ ಒಕ್ಕೂಟದಲ್ಲಿ ಸಂಗೀತ ಪ್ರಸ್ತುತಿಯನ್ನು ನೀಡುವಲ್ಲಿನ ಮೊದಲ ಹಳ್ಳಿಗಾಡಿನ ಸಂಗೀತಗಾರನಾಗಿದ್ದ; ಆತ ಆಸ್ಟ್ರೇಲಿಯಾ ಮತ್ತು ಮಧ್ಯಪ್ರಾಚ್ಯ ದೇಶಗಳಲ್ಲಿಯೂ ಪ್ರವಾಸ ಮಾಡಿದ. ಹಳ್ಳಿಗಾಡಿನ ಸಂಗೀತದ ಜಾಗತೀಕರಣಕ್ಕೆ ಅವನು ನೀಡಿದ ಕೊಡುಗೆಗಳಿಂದಾಗಿ, "ಹಳ್ಳಿಗಾಡಿನ ಸಂಗೀತದ ಅಂತರರಾಷ್ಟ್ರೀಯ ರಾಯಭಾರಿ" ಎಂಬುದಾಗಿ ಅವನು ಪರಿಗಣಿಸಲ್ಪಟ್ಟ.[೭೨] ಜಾನಿ ಕ್ಯಾಶ್‌‌, ಎಮಿಲೌ ಹ್ಯಾರಿಸ್‌, ಕೀತ್‌ ಅರ್ಬನ್‌‌, ಮತ್ತು ಡ್ವೈಟ್‌ ಯೋವಾಕಾಮ್‌ ಮೊದಲಾದವರೂ ಸಹ ಹಲವಾರು ಅಂತರರಾಷ್ಟ್ರೀಯ ಪ್ರವಾಸಗಳನ್ನು ಕೈಗೊಂಡಿದ್ದಾರೆ.[೭೧] ಹಳ್ಳಿಗಾಡಿನ ಸಂಗೀತವನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಉತ್ತೇಜಿಸುವ ಸಲುವಾಗಿ, ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌ ಹಲವಾರು ಉಪಕ್ರಮಗಳನ್ನು ಕೈಗೊಳ್ಳುತ್ತದೆ.[೭೧]
 • ದಕ್ಷಿಣ ಅಮೆರಿಕಾದಲ್ಲಿ, ಸೆಪ್ಟೆಂಬರ್ ತಿಂಗಳ ಕೊನೆಯ ವಾರಾಂತ್ಯದಲ್ಲಿ, ಅರ್ಜೆಂಟೀನಾದ ಸ್ಯಾನ್‌ ಪೆಡ್ರೊ ಪಟ್ಟಣದಲ್ಲಿ ವರ್ಷಕ್ಕೊಮ್ಮೆ "ಸ್ಯಾನ್‌ ಪೆಡ್ರೊ ಕಂಟ್ರಿ ಮ್ಯೂಸಿಕ್‌ ಫೆಸ್ಟಿವಲ್‌‌"[೭೩] ಆಯೋಜಿಸಲ್ಪಡುತ್ತದೆ. ಅರ್ಜೆಂಟೀನಾದ ವಿಭಿನ್ನ ಪ್ರದೇಶ ಗಳಿಗೆ ಸೇರಿದ ವಾದ್ಯ ವೃಂದಗಳನ್ನೇ ಅಲ್ಲದೇ, ಬ್ರೆಜಿಲ್‌‌, ಉರುಗ್ವೆ, ಚಿಲಿ, ಪೆರು ಮತ್ತು ಅಮೆರಿಕಾ ಸಂಯುಕ್ತ ಸಂಸ್ಥಾನಗಳಿಗೆ ಸೇರಿದ ಅಂತರರಾಷ್ಟ್ರೀಯ ಕಲಾವಿದರಿಗೆ ಈ ಉತ್ಸವವು ಪ್ರದರ್ಶನದ ಅವಕಾಶವನ್ನು ಕಲ್ಪಿಸುತ್ತದೆ.
 • ಐರ್ಲೆಂಡ್‌ನಲ್ಲಿ TG4 ವಾಹಿನಿಯು ಐರ್ಲೆಂಡ್‌ನ ಮುಂದಿನ ಹಳ್ಳಿಗಾಡಿನ ತಾರೆಗಾಗಿ ಗ್ಲಾರ್‌ ಟೈರ್‌‌ ಎಂದು ಕರೆಯಲ್ಪಡುವ ಒಂದು ಪ್ರತಿಭಾಶೋಧದ ಕಾರ್ಯಕ್ರಮವನ್ನು ಶುರುಮಾಡಿತು; ಅನುವಾದಿಸಿದಾಗ 'ಹಳ್ಳಿಗಾಡಿನ ಧ್ವನಿ' ಎಂಬ ಅರ್ಥವನ್ನು ನೀಡುವ 'ಗ್ಲಾರ್‌ ಟೈರ್' ಕಾರ್ಯಕ್ರಮವು ತನ್ನ 6ನೇ ಋತುವನ್ನು ಆಚರಿಸಿಕೊಳ್ಳುತ್ತಿದೆ ಮತ್ತು ಇದು TG4 ವಾಹಿನಿಯ ಅತಿಹೆಚ್ಚು ವೀಕ್ಷಿಸಲ್ಪಡುವ TV ಕಾರ್ಯಕ್ರಮಗಳ ಪೈಕಿ ಒಂದೆನಿಸಿಕೊಂಡಿದೆ.ಕ್ರಿಸ್ಟಲ್‌ ಸ್ವಿಂಗ್‌‌ ಎಂಬುದು ಐರ್ಲಂಡಿನ ಅಖಾಡದಲ್ಲಿ ಯಶಸ್ಸು ದಾಖಲಿಸಿದ ಒಂದು ಇತ್ತೀಚಿನ ಕಾರ್ಯಕ್ರಮವಾಗಿದೆ.
 • 1970ರ ದಶಕದ ಅವಧಿಯಲ್ಲಿ ಕಂಡುಬಂದ ರೊಡೇಷಿಯಾ ಕಾರ್ಯಕ್ರಮವು ಹಳ್ಳಿಗರ ಹಾಡಿನ ಸಂಗೀತದ ಒಂದು ಸಕ್ರಿಯವಾದ ರಂಗಸ್ಥಲವನ್ನು ಹೊಂದಿತ್ತು. ಅನೇಕ ಹಾಡುಗಳು ದೇಶಭಕ್ತಿಯ ಅಥವಾ ಸೇನಾಪ್ರೇರಿತ ಸಾಹಿತ್ಯದೊಂದಿಗೆ ಹಳ್ಳಿಗಾಡಿನ ಲಾವಣಿಗಳನ್ನು ಸಂಯೋಜಿಸಿದವು. ಉದಾಹರಣೆಗೆ, ಕ್ಲೆಮ್‌‌ ಥೊಲೆಟ್‌‌‌ನ ರೊಡೇಷಿಯನ್ಸ್‌ ನೆವರ್‌ ಡೈ , ರೊಡೇಷಿಯಾದ ಪಾಪ್‌ ಕೋಷ್ಟಕಗಳಲ್ಲಿ ಅಗ್ರಗಣ್ಯ ಸ್ಥಾನಕ್ಕೇರಿತು.

ಪ್ರಸ್ತುತಿಕಾರರು ಮತ್ತು ಪ್ರದರ್ಶನಗಳು[ಬದಲಾಯಿಸಿ]

US ಕೇಬಲ್‌ ದೂರದರ್ಶನ[ಬದಲಾಯಿಸಿ]

 • ನಾಲ್ಕು U.S. ಕೇಬಲ್‌ ಜಾಲಗಳು ಕನಿಷ್ಟ ಪಕ್ಷ ಈ ಪ್ರಕಾರಕ್ಕೆ ಭಾಗಶಃ ಸಮರ್ಪಿಸಿಕೊಂಡಿವೆ. ಅವುಗಳೆಂದರೆ: CMT ಮತ್ತು CMT ಪ್ಯೂರ್‌ ಕಂಟ್ರಿ (ಎರಡಕ್ಕೂ ವಯಾಕಾಮ್‌ ‌‌‌ನ ಮಾಲೀಕತ್ವವಿದೆ), ರೂರಲ್‌ ಫ್ರೀ ಡೆಲಿವರಿ TV (ಇದಕ್ಕೆ ರೂರಲ್‌ ಮೀಡಿಯಾ ಗ್ರೂಪ್‌ನ ಮಾಲೀಕತ್ವವಿದೆ‌‌) ಮತ್ತು GAC (ಇದಕ್ಕೆ ದಿ E. W. ಸ್ಕ್ರಿಪ್ಸ್‌‌ ಕಂಪನಿಯ ಮಾಲೀಕ ತ್ವವಿದೆ). 1980ರ ದಶಕದ ಆರಂಭದಲ್ಲಿ ಪ್ರಾರಂಭವಾದ ದಿ ನ್ಯಾಶ್‌ವಿಲ್ಲೆ ನೆಟ್‌ವರ್ಕ್‌, ಅಮೆರಿಕಾದ ಹಳ್ಳಿಗಾಡಿನ ಸಂಗೀತದ ಮೊದಲ ವಿಡಿಯೊ ಕೇಬಲ್‌ ವಾಹಿನಿಯಾಗಿತ್ತು.
 • 2000ನೇ ಇಸವಿಯಲ್ಲಿ, ದಿ ನ್ಯಾಷನಲ್‌ ನೆಟ್‌ವರ್ಕ್‌ ಎಂಬುದಾಗಿ ಈ ವಾಹಿನಿಯು ಮರುನಾಮಕರಣಗೊಂಡಿತು ಮತ್ತು ಹೊಸದಾಗಿ ರೂಪಿಸಲ್ಪಟ್ಟಿತು; ಒಂದು ಸಾಮಾನ್ಯ-ಆಸಕ್ತಿಯ ಜಾಲವಾಗಿ ರೂಪುಗೊಂಡ ಇದು ಅಂತಿಮವಾಗಿ ಸ್ಪೈಕ್‌ TV ಎಂಬ ಹೆಸರನ್ನು ಪಡೆಯಿತು.

ಇದನ್ನೂ ನೋಡಿ[ಬದಲಾಯಿಸಿ]

 • ಅಕಾಡೆಮಿ ಆಫ್‌ ಕಂಟ್ರಿ ಮ್ಯೂಸಿಕ್‌‌
 • ಆಸ್ಟ್ರೇಲಿಯಾದ ಹಳ್ಳಿಗಾಡಿನ ಸಂಗೀತ
 • ಕೆನಡಿಯನ್‌ ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌
 • ಹಳ್ಳಿಗರ ಹಾಡಿನ ನೃತ್ಯ
 • ಕಂಟ್ರಿ ಮ್ಯೂಸಿಕ್‌ ಅಸೋಸಿಯೇಷನ್‌
 • ಹಳ್ಳಿಗಾಡಿನ ಸಂಗೀತದ ಕೀರ್ತಿಭವನ
 • ಗ್ರಾಂಡ್‌ ಓಲೆ ಓಪ್ರಿ
 • ಗ್ರೇಟ್‌ ಅಮೆರಿಕನ್‌ ಕಂಟ್ರಿ
 • ಬಿಲ್‌ಬೋರ್ಡ್‌ ಕೋಷ್ಟಕದಲ್ಲಿ ಸಾಧನೆಗಳನ್ನು ದಾಖಲಿಸಿದ ಜನಪ್ರಿಯ ಹಳ್ಳಿಗಾಡಿನ ಹಾಡುಗಳ ಪಟ್ಟಿ
 • ಹಳ್ಳಿಗಾಡಿನ ಸಂಗೀತ ಪ್ರಕಾರಗಳ ಪಟ್ಟಿ
 • ಮ್ಯೂಸಿಕಾ ಸೆರ್ಟನೆಜಾ
 • ಹಳ್ಳಿಗಾಡಿನ ಸಂಗೀತದ ಸ್ವೀಕೃತಿ
 • ದಕ್ಷಿಣದ ಸಂಸ್ಕೃತಿ
 • ತೆಜಾನೊ: ಪೊಲ್ಕಾ ಲಯವೊಂದಕ್ಕೆ ಸ್ಪೇನಿನ ಶೈಲಿಯಲ್ಲಿ ಪ್ರಸ್ತುತಪಡಿಸಲಾದ ಹಳ್ಳಿಗಾಡಿನ ಸಂಗೀತ
 • ವೆಸ್ಟರ್ನ್‌ ಮ್ಯೂಸಿಕ್‌ ಅಸೋಸಿಯೇಷನ್‌
 • ಪಾಶ್ಚಾತ್ಯ ಸಂಗೀತ (ಉತ್ತರ ಅಮೆರಿಕಾ)
 • WSM ರೇಡಿಯೋ

ಹೆಚ್ಚಿನ ಓದಿಗಾಗಿ[ಬದಲಾಯಿಸಿ]

 • Harris, Stacy (1978). Comedians of Country Music. Lerner Publications Company. ISBN 0-8225-1409-5.
 • ದಿ ಕಾರ್ಟರ್‌ ಫ್ಯಾಮಿಲಿ: ಕಂಟ್ರಿ ಮ್ಯೂಸಿಕ್‌'ಸ್‌ ಫಸ್ಟ್‌ ಫ್ಯಾಮಿಲಿ ,
  ಸ್ಟೇಸಿ ಹ್ಯಾರಿಸ್‌, ಲೆರ್ನರ್‌‌ ಪಬ್ಲಿಕೇಷನ್ಸ್‌‌ ಕಂಪನಿ, 1978, ISBN 0-8225-1403-6
 • ‌‌ಇನ್‌ ದಿ ಕಂಟ್ರಿ ಆಫ್‌ ಕಂಟ್ರಿ: ಎ ಜರ್ನಿ ಟು ದಿ ರೂಟ್ಸ್‌ ಆಫ್‌ ಅಮೆರಿಕನ್‌ ಮ್ಯೂಸಿಕ್ ,
  ನಿಕೋಲಸ್‌ ಡಾವಿಡಫ್‌‌, ವಿಂಟೇಜ್‌ ಬುಕ್ಸ್‌‌, 1998, ISBN 0-375-70082-X
 • ಆರ್‌ ಯು ರೆಡಿ ಫಾರ್‌ ದಿ ಕಂಟ್ರಿ: ಎಲ್ವಿಸ್‌, ಡೈಲನ್‌‌, ಪಾರ್ಸನ್ಸ್‌ ಅಂಡ್‌ ದಿ ರೂಟ್ಸ್‌ ಆಫ್‌ ಕಂಟ್ರಿ ರಾಕ್‌ ,
  ಪೀಟರ್‌‌ ಡಾಗೆಟ್‌, ಪೆಂಗ್ವಿನ್‌ ಬುಕ್ಸ್‌, 2001, ISBN 0-14-026108-7
 • ರೋಡ್‌ಕಿಲ್‌ ಆನ್‌ ದಿ ಥ್ರೀ-ಕಾರ್ಡ್‌ ಹೈವೇ ,
  ಕಾಲಿನ್‌‌ ಎಸ್ಕಾಟ್‌, ರೌಲೆಟ್ಜ್‌‌, 2002, ISBN 0-415-93783-3
 • ಗಿಟಾರ್ಸ್‌ & ಕ್ಯಾಡಿಲ್ಯಾಕ್ಸ್ ,
  ಸಬೈನ್‌‌ ಕೀವಿಲ್‌‌, ಥಿಂಕಿಂಗ್‌ ಡಾಗ್‌ ಪಬ್ಲಿಷಿಂಗ್‌, 2002, ISBN 0-9689973-0-9
 • ಪ್ರೌಡ್‌ ಟು ಬಿ ಆನ್‌ ಒಕೀ: ಕಲ್ಚರಲ್‌ ಪಾಲಿಟಿಕ್ಸ್‌, ಕಂಟ್ರಿ ಮ್ಯೂಸಿಕ್‌, ಅಂಡ್‌ ಮೈಗ್ರೇಷನ್‌ ಟು ಸದರ್ನ್‌ ಕ್ಯಾಲಿಫೋರ್ನಿಯಾ ,
  ಪೀಟರ್‌‌ ಲಾ ಚಾಪೆಲ್ಲೆ, ಯೂನಿವರ್ಸಿಟಿ ಆಫ್‌ ಕ್ಯಾಲಿಫೋರ್ನಿಯಾ ಪ್ರೆಸ್‌, 2007, ISBN 0-52-024889-9
 • ಕ್ರಿಯೇಟಿಂಗ್‌ ಕಂಟ್ರಿ ಮ್ಯೂಸಿಕ್‌: ಫ್ಯಾಬ್ರಿಕೇಟಿಂಗ್‌ ಅಥೆಂಟಿಸಿಟಿ ,
  ರಿಚರ್ಡ್‌ A. ಪೀಟರ್‌‌ಸನ್‌‌, ಯೂನಿವರ್ಸಿಟಿ ಆಫ್‌ ಚಿಕಾಗೊ ಪ್ರೆಸ್‌, 1999, ISBN 0226662853
 • ದಿ ಬೆಸ್ಟ್‌ ಆಫ್‌ ಕಂಟ್ರಿ: ದಿ ಅಫಿಷಿಯಲ್‌ CD ಗೈಡ್ ,
  ಸ್ಟೇಸಿ ಹ್ಯಾರಿಸ್‌, ಕಾಲಿನ್ಸ್‌ ಪಬ್ಲಿಷರ್ಸ್‌, 1993, ISBN 0-00-255335-X
 • ಕಂಟ್ರಿ ಮ್ಯೂಸಿಕ್‌‌ USA ,
  ಬಿಲ್‌‌ C. ಮ್ಯಾಲೋನ್‌‌, ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ ಪ್ರೆಸ್‌, 1985, ISBN 0-292-71096-8, ಎರಡನೇ ಪರಿಷ್ಕೃತ ಆವೃತ್ತಿ, 2002, ISBN 0-292-75262-8
 • ಡೋಂಟ್‌ ಗೆಟ್‌ ಎಬೌ ಯುವರ್‌ ರೈಸಿನ್‌: ಕಂಟ್ರಿ ಮ್ಯೂಸಿಕ್‌ ಅಂಡ್‌ ದಿ ಸದರ್ನ್‌ ವರ್ಕಿಂಗ್‌ ಕ್ಲಾಸ್‌ (ಮ್ಯೂಸಿಕ್‌ ಇನ್‌ ಅಮೆರಿಕನ್‌ ಲೈಫ್‌) ,
  ಬಿಲ್‌‌ C. ಮ್ಯಾಲೋನ್‌‌, ಯೂನಿವರ್ಸಿಟಿ ಆಫ್‌ ಇಲಿನಾಯ್ಸ್‌ ಪ್ರೆಸ್‌, 2002, ISBN 0-252-02678-0
 • Stamper, Pete (1999). It All Happened In Renfro Valley. University of Kentucky Press. ISBN 978-0813109756.

ಟಿಪ್ಪಣಿಗಳು[ಬದಲಾಯಿಸಿ]

 1. ೧.೦ ೧.೧ ಪೀಟರ್‌‌ಸನ್‌‌, ರಿಚರ್ಡ್‌ A. (1999). ಕ್ರಿಯೇಟಿಂಗ್‌ ಕಂಟ್ರಿ ಮ್ಯೂಸಿಕ್‌: ಫ್ಯಾಬ್ರಿಕೇ ಟಿಂಗ್‌ ಅಥೆಂಟಿಸಿಟಿ , ಪುಟ 9. ISBN 0-226-66285-3.
 2. Jim-reeves.com Jim-reeves.com
 3. Acountry.com "ಹಳ್ಳಿಗಾಡಿನ ಸಂಗೀತದ ಅಕಾಡೆಮಿಯು ಗಾರ್ಥ್‌ ಬ್ರೂಕ್ಸ್‌‌‌ಗೆ ಮೊಟ್ಟ ಮೊದಲ ಕ್ರಿಸ್ಟಲ್‌ ಮೈಲಿಗಲ್ಲು ಪ್ರಶಸ್ತಿಯನ್ನೂ ಸಹ ನೀಡಿ ಗೌರವಿಸಿತು.
  • ಒಂದು ನಿರ್ದಿಷ್ಟವಾದ, ಗಮನಾರ್ಹವಾದ ಸಾಧನೆಯನ್ನು ಸ್ಮರಿಸಿ ಶ್ಲಾಘಿಸಲು ಓರ್ವ ಕಲಾವಿದನಿಗೆ ಅಥವಾ ಉದ್ಯಮದ ನಾಯಕನಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತದೆ. 128 ದಶಲಕ್ಷ ಪ್ರತಿಗಳಷ್ಟು ಧ್ವನಿಮುದ್ರಿಕೆಗಳು ಮಾರಾಟಗೊಳ್ಳುವುದರೊಂದಿಗೆ, U.S. ಇತಿಹಾಸದಲ್ಲಿ ಅತಿಹೆಚ್ಚು-ಮಾರಾಟವಾಗುವ ಒಂಟಿಗಾಯನದ ಧ್ವನಿಮುದ್ರಿಕೆಗಳ ಕಲಾವಿದ ಎಂಬುದಾಗಿ ಬ್ರೂಕ್ಸ್‌‌‌ ಪ್ರಮಾಣೀಕರಿಸಲ್ಪಟ್ಟಿದ್ದಾನೆ.
 4. Roughstock.com Archived 2009-01-29 ವೇಬ್ಯಾಕ್ ಮೆಷಿನ್ ನಲ್ಲಿ. Roughstock.com
 5. Duhigg, Charles; Boucher, Geoff (2006-08-21). "L.A. radio loses its twang / Last country station switches to pop format to attract more Hispanic adult women". The San Francisco Chronicle.
 6. ‌‌ಗಿಶ್, D.L. ಕಂಟ್ರಿ ಮ್ಯೂಸಿಕ್‌‌. ಉತ್ತರ ಮನಕಾಟೊ, MN: ಸ್ಮಾರ್ಟ್‌ ಆಪಲ್‌ ಮೀಡಿಯಾ, 2002.ಮುದ್ರಣ.
 7. Bluegrassbanjo.org
 8. "Shoppbs. org". Archived from the original on 2008-11-19. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
  • ಮ್ಯಾಲೋನ್‌‌, ಬಿಲ್‌‌. ಕಂಟ್ರಿ ಮ್ಯೂಸಿಕ್‌‌ U.S.A. ಆಸ್ಟಿನ್‌‌: ಯೂನಿವರ್ಸಿಟಿ ಆಫ್‌ ಟೆಕ್ಸಾಸ್‌ ಪ್ರೆಸ್‌, 2002. ಮುದ್ರಣ.
 9. PBS.org
 10. PBS.org
 11. ಟೆಕ್ಸಾಸ್‌ ಹ್ಯಾಂಡ್‌ಬುಕ್‌ ಆನ್‌ಲೈನ್‌‌
  • ರಿಚರ್ಡ್‌, ಕ್ರಾಫೋರ್ಡ್‌,. ಅಮೆರಿಕಾ'ಸ್‌ ಮ್ಯೂಸಿಕಲ್‌ ಲೈಫ್‌ ಎ ಹಿಸ್ಟರಿ. ನ್ಯೂಯಾರ್ಕ್: ನಾರ್ಟನ್, 2001. ಮುದ್ರಣ.
 12. 78Discography.com ದಿ ಆನ್‌ಲೈನ್‌ ಡಿಸ್ಕೋಗ್ರಫಿ ಪ್ರಾಜೆಕ್ಟ್‌ .
 13. "ಅವರ್‌‌ ಜಾರ್ಜಿಯಾ ಹಿಸ್ಟರಿ". Archived from the original on 2008-11-21. Retrieved 2010-09-27.
 14. "ಬ್ಲೂ ರಿಡ್ಜ್‌ ಇನ್‌‌ಸ್ಟಿಟ್ಯೂಟ್‌ & ಮ್ಯೂಸಿಯಂ". Archived from the original on 2010-12-06. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 15. "ಬ್ಲೂ ರಿಡ್ಜ್‌ ಇನ್‌‌ಸ್ಟಿಟ್ಯೂಟ್‌ & ಮ್ಯೂಸಿಯಂ". Archived from the original on 2010-12-09. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 16. Cohn, Lawrence. Nothing but the Blues: The Music and the Musicians. Abbeville Press. p. 238. {{cite book}}: Unknown parameter |coauthors= ignored (|author= suggested) (help); Unknown parameter |isdn= ignored (help); Unknown parameter |origmonth= ignored (help)
 17. "Thesylvaherald.com". Archived from the original on 2006-05-09. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 18. ಕಂಟ್ರಿ ಮ್ಯೂಸಿಕ್‌ ಒರಿಜಿನಲ್ಸ್‌ - ದಿ ಲೆಜೆಂಡ್ಸ್‌ ಅಂಡ್‌ ದಿ ಲಾಸ್ಟ್‌. ಟೋನಿ ರಸ್ಸೆಲ್‌‌. 2007. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌. ಪುಟಗಳು 14, 15, 25, 31, 45, 59, 73, 107, 157, 161, 165,167, 225. ISBN 978019532506.
 19. Southernmusic.net
 20. ‌‌ಕೊಹ್ನ್, ಲಾರೆನ್ಸ್‌‌: "ನಥಿಂಗ್‌ ಬಟ್‌ ದಿ ಬ್ಲೂಸ್‌" ಚಾಪ್ಟರ್‌ ಟೈಟ್ಲ್ಸ್‌ "ಎ ಲೈಟರ್‌ ಷೇಡ್‌ ಆಫ್‌ ಬ್ಲೂ - ವೈಟ್‌ ಕಂಟ್ರಿ ಬ್ಲೂಸ್‌" -ಚಾರ್ಲ್ಸ್‌‌ ವೋಲ್ಫ್‌ ಪುಟ 247, 1993
  • ಕಂಟ್ರಿ ಮ್ಯೂಸಿಕ್‌ ಒರಿಜಿನಲ್ಸ್‌ - ದಿ ಲೆಜೆಂಡ್ಸ್‌ ಅಂಡ್‌ ದಿ ಲಾಸ್ಟ್. ಟೋನಿ ರಸ್ಸೆಲ್‌‌. 2007. ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌. ಪುಟ 68. ISBN 978019532506
 21. ಡೇವಿಡ್‌ ಸಂಜೆಕ್‌‌, "ಆಲ್‌ ದಿ ಮೆಮರೀಸ್‌ ಮನಿ ಕೆನ್‌ ಬೈ: ಮಾರ್ಕೆಟಿಂಗ್‌ ಅಥೆಂಟಿಸಿಟಿ ಅಂಡ್‌ ಮ್ಯಾನುಫ್ಯಾಕ್ಚರಿಂಗ್‌ ಆಥರ್‌ಷಿಪ್‌," ಪುಟ 155–172; ಎರಿಕ್‌ ವೀಸ್‌ಬಾರ್ಡ್‌, ಸಂಪಾದಿತ ದಿಸ್‌ ಈಸ್‌ ಪಾಪ್‌ ಕೃತಿಯಲ್ಲಿರುವಂಥದು, ಹಾರ್ವರ್ಡ್‌ ಯೂನಿವರ್ಸಿಟಿ ಪ್ರೆಸ್‌, 2004. ISBN 0-674-01321-2 (ಬಟ್ಟೆಯ ಹೊದಿಕೆ), ISBN 0-674-01344-1 (ಕಾಗದದ ಹೊದಿಕೆ). ಪುಟ 158.
 22. LPdiscography.com
 23. "Alamhof.org". Archived from the original on 2008-05-23. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 24. ನಥಿಂಗ್‌ ಬಟ್‌ ದಿ ಬ್ಲೂಸ್‌ 1993, ವೈಟ್‌ ಕಂಟ್ರಿ ಬ್ಲೂಸ್‌ -ಚಾರ್ಲ್ಸ್‌‌ ವೋಲ್ಫ್‌, ಪುಟ 233
 25. Southernmusic. net, ದಿ ಕಾರ್ಟರ್‌‌ ಫ್ಯಾಮಿಲಿ.
 26. PBS - ಅಮೆರಿಕಾದ ಮೂಲಗಳ ಸಂಗೀತ : ಸಂಚಿಕೆಯ ಸಾರಾಂಶಗಳು
 27. Timelife.com Archived 2012-03-26 ವೇಬ್ಯಾಕ್ ಮೆಷಿನ್ ನಲ್ಲಿ. ಗೋಲ್ಡನ್‌ ಏಜ್‌ ಆಫ್‌ ಕಂಟ್ರಿ
 28. Billboard‌.com Billboard‌.com
 29. "ಹಳ್ಳಿಗಾಡಿನ ಸಂಗೀತದ ರಫ್‌ಸ್ಟಾಕ್‌ನ ಇತಿಹಾಸ - ಕೌಬಾಯ್‌‌ ಸಂಗೀತ". Archived from the original on 2004-02-16. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 30. ೩೩.೦ ೩೩.೧ ಇನ್ಸ್‌‌ಟ್ರುಮೆಂಟ್ಸ್‌ | ಕಂಟ್ರಿ ಮ್ಯೂಸಿಕ್‌ ಹಾಲ್‌ ಆಫ್‌ ಫೇಮ್‌ ಅಂಡ್‌ ಮ್ಯೂಸಿಯಂ | ನ್ಯಾಶ್‌ವಿಲ್ಲೆ, ಟೆನೆಸ್ಸೀ
 31. Takecountryback.com Archived 2008-05-13 ವೇಬ್ಯಾಕ್ ಮೆಷಿನ್ ನಲ್ಲಿ., ಮೆರ್ಲೆ ಹಗಾರ್ಡ್‌ - ಬಾಬ್‌ ವಿಲ್ಸ್‌
 32. Empsfm.org Archived 2010-12-03 ವೇಬ್ಯಾಕ್ ಮೆಷಿನ್ ನಲ್ಲಿ., ಪ್ರದರ್ಶನಗಳು - ಆನ್‌ಲೈನ್‌ ರೂಪಕಗಳು
 33. Oldies.com, ಅರ್ಥರ್‌‌ ಸ್ಮಿತ್‌‌ ಜೀವನಚರಿತ್ರೆ.
 34. ಕಂಟ್ರಿ ಮ್ಯೂಸಿಕ್‌‌ ಗೋಸ್‌ ಟು ವಾರ್‌ -ಚಾರ್ಲ್ಸ್‌‌ K. ವೋಲ್ಫ್‌, ಜೇಮ್ಸ್‌‌ ಎಡ್ವರ್ಡ್‌ ಅಕೆನ್ಸನ್‌‌. 2005. ಯೂನಿವರ್ಸಿಟಿ ಪ್ರೆಸ್‌ ಆಫ್‌ ಕೆಂಟುಕಿ. ಪುಟ = 55. ISBN 0813123089 ಗೂಗಲ್‌ ಬುಕ್ಸ್‌
 35. ಲಾಂಗ್‌ ಸ್ಟೀಲ್‌ ರೈಲ್‌: ದಿ ರೈಲ್‌ರೋಡ್‌ ಇನ್‌ ಅಮೆರಿಕನ್‌ ಫೋಕ್‌ಸಾಂಗ್‌. -ನಾರ್ಮ್‌ ಕೊಹೆನ್‌, ಡೇವಿಡ್‌ ಕೊಹೆನ್‌. ಯೂನಿವರ್ಸಿಟಿ ಆಫ್ ಇಲಿನಾಯ್ಸ್ ಪ್ರೆಸ್. 2000. ಪುಟ 31. ISBN 0252068815, 9780252068812
 36. ಗೂಗಲ್ ಬುಕ್ಸ್‌‌
 37. ೪೦.೦ ೪೦.೧ ವರ್ಕಿನ್‌' ಮ್ಯಾನ್‌ ಬ್ಲೂಸ್‌ - ಕಂಟ್ರಿ ಮ್ಯೂಸಿಕ್‌ ಇನ್‌ ಕ್ಯಾಲಿಫೋರ್ನಿಯಾ. ಜೆರಾಲ್ಡ್‌ W. ಹಾಲ್ಸನ್‌‌‌. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೆಸ್. 1999. ಪುಟ 135. ISBN 0-520-21800-0.
 38. ಗೋ, ಕ್ಯಾಟ್‌, ಗೋ! -ಕಾರ್ಲ್‌ ಪರ್ಕಿನ್ಸ್‌‌ ಮತ್ತು ಡೇವಿಡ್‌ ಮೆಕ್‌ಗೀ 1996 ಪುಟಗಳು 23–24 ಹೈಪೆರಿಯನ್‌ ಪ್ರೆಸ್‌ ISBN 0-7868-6073-1
 39. ಗೋ ಕ್ಯಾಟ್‌ ಗೋ! ರಾಕಬಿಲಿ ಮ್ಯೂಸಿಕ್‌ ಅಂಡ್‌ ಇಟ್ಸ್‌ ಮೇಕಿಂಗ್‌. ಕ್ರೇಗ್‌‌ ಮಾರಿಸನ್‌‌. 1996. ಇಲಿನಾಯ್ಸ್‌‌ ವಿಶ್ವವಿದ್ಯಾಲಯ. ಪುಟ 28. ISBN 0-252-02207-6
 40. com/bbcom/charts/ yearend_ chart_ display.jsp?f=Hot+Country+Songs&g=Year-end+Singles&year=1956 Billboard.com
 41. Billboard.com Billboard.com
 42. ‌‌ಷುಲ್‌ಮನ್, ಆರ್ಟ್‌ "ಡೈನಮೊ - ಕಂಟ್ರಿ ಸ್ಟೈಲ್‌‌" (1956), TV ಗೈಡ್‌ , ಪುಟ, 28
 43. Rockhall.com
 44. Billboard.com
 45. CMT.com : ಮೆರ್ಲೆ ಹಗಾರ್ಡ್‌ : ಜೀವನಚರಿತ್ರೆ
 46. Buckowens.com Archived 2013-12-13 ವೇಬ್ಯಾಕ್ ಮೆಷಿನ್ ನಲ್ಲಿ., ಬಕ್‌‌ ಒವೆನ್‌‌'ಸ್‌ ಕ್ರಿಸ್ಟಲ್‌ ಪ್ಯಾಲೇಸ್‌: ಎಬೌಟ್‌ ಬಕ್‌‌
 47. Allmusic.com, ಗ್ರಾಮ್‌ ಪಾರ್ಸನ್ಸ್‌‌: ಓವರ್‌ವ್ಯೂ
 48. "Rollingstone.com". Archived from the original on 2009-04-29. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 49. ದಿ ರೂಟ್ಸ್ ಆಫ್‌ ಕಂಟ್ರಿ ಮ್ಯೂಸಿಕ್‌" ಕಲೆಕ್ಟರ್ಸ್‌ ಎಡಿಷನ್‌ ಬೈ ಲೈಫ್‌ ಸೆಪ್ಟೆಂಬರ್‌‌ 1, 1994 ಪುಟ 72
 50. ಹೆಮ್‌ಫಿಲ್‌, ಪಾಲ್‌. "ನ್ಯಾಶ್‌ವಿಲ್ಲೆ--ವೇರ್‌ ಇಟ್‌ ಆಲ್‌ ಸ್ಟಾರ್ಟೆಡ್‌." ಸಾಟರ್ಡೆ ಈವ್ನಿಂಗ್‌ ಪೋಸ್ಟ್‌ 247.3 (1975): 44-86. ಅಕಾಡೆಮಿಕ್‌ ಸರ್ಚ್‌ ಪ್ರೀಮಿಯರ್‌‌. EBSCO. ವೆಬ್‌‌. 1 ಫೆಬ್ರುವರಿ 2010.
 51. Billboard.com, ಹಿಸ್ಟಾರಿಕಲ್‌ ಮ್ಯೂಸಿಕ್‌ ಚಾರ್ಟ್ಸ್‌ ಆರ್ಕೀವ್‌.
 52. ‌ವಿಟ್‌ಬರ್ನ್, ಜೋಯೆಲ್‌, "ಟಾಪ್‌ ಕಂಟ್ರಿ ಸಾಂಗ್ಸ್‌: 1944-2008," 2009.
 53. ವಿಟ್‌ಬರ್ನ್‌, ಜೋಯೆಲ್‌, "ಟಾಪ್‌‌ ಪಾಪ್‌ ಸಿಂಗಲ್ಸ್‌: 1955-2006," 2007
 54. ೫೭.೦ ೫೭.೧ ವರ್ಕಿನ್‌' ಮ್ಯಾನ್‌ ಬ್ಲೂಸ್‌ - ಕಂಟ್ರಿ ಮ್ಯೂಸಿಕ್‌ ಇನ್‌ ಕ್ಯಾಲಿಫೋರ್ನಿಯಾ. ಜೆರಾಲ್ಡ್‌ W. ಹಾಲ್ಸನ್‌‌‌. ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯ ಪ್ರೆಸ್. 1999. ಪುಟ 259. ISBN 0-520-21800-0.
 55. Lyricsoncall.com Archived 2008-05-19 ವೇಬ್ಯಾಕ್ ಮೆಷಿನ್ ನಲ್ಲಿ. Lyricsoncall.com
 56. Trucker's Jukebox: Various Artists: Music. Amazon.com. Retrieved 2009-02-24. Trucker's Jukebox covers the Country landscape: outlaw, honkey tonk, country-rock, Bakers field sound, country comedy, truck driving country and more.
 57. ೬೦.೦ ೬೦.೧ ೬೦.೨ ೬೦.೩ "Truck Driving Country Music". All Media Guide LLC. Archived from the original on 2012-06-04. Retrieved 2009-02-24. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 58. ೬೧.೦ ೬೧.೧ "Dave Dudley: Albums, Songs, Bios, Photos". Amazon.com. Retrieved 2009-02-24.
 59. "Dave Dudley". CBS Interactive. Archived from the original on 2009-03-05. Retrieved 2009-02-24.
 60. "Country is No. 1 musical style". Reading Eagle. 1992-08-19. Retrieved 2010-07-26.
 61. "Country music reflects the time". Herald-Journal. 1992-09-27. Retrieved 2010-07-26.
 62. "Country music is making waves across the seas". thestar.com. 1993-11-25. Archived from the original on 2011-05-06. Retrieved 2010-07-26.
 63. RIAA.com
  • ದಿ ರೂಟ್ಸ್‌ ಆಫ್‌ ಕಂಟ್ರಿ ಮ್ಯೂಸಿಕ್‌" ಕಲೆಕ್ಟರ್ಸ್‌ ಎಡಿಷನ್‌ ಬೈ ಲೈಫ್‌ ಸೆಪ್ಟೆಂಬರ್‌‌ 1, 1994
 64. Steveearle.net
 65. Cowboylyrics.com
 66. "Lyricstop.com". Archived from the original on 2010-08-15. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 67. ೭೧.೦ ೭೧.೧ ೭೧.೨ "CMAworld.com". Archived from the original on 2010-09-23. Retrieved 2010-09-27. {{cite web}}: More than one of |archivedate= and |archive-date= specified (help); More than one of |archiveurl= and |archive-url= specified (help)
 68. Lib.unc.edu Archived 2013-07-29 ವೇಬ್ಯಾಕ್ ಮೆಷಿನ್ ನಲ್ಲಿ.
  • “ಕಂಟ್ರಿ ಮ್ಯೂಸಿಕ್‌ ಫಿಗರ್ಸ್‌ ಡೊನೇಟ್‌ ಪೇಪರ್ಸ್‌, ಗಿವ್‌ ಕನ್ಸರ್ಟ್‌”
 69. Country2.com

ಹೊರಗಿನ ಕೊಂಡಿಗಳು[ಬದಲಾಯಿಸಿ]