ಹಳದಿ ಮಲ್ಲಿಗೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jasminum humile
Scientific classification e
ಸಾಮ್ರಾಜ್ಯ: ಸಸ್ಯ
ಏಕಮೂಲ ವರ್ಗ: ಹೂಬಿಡುವ ಸಸ್ಯ
ಏಕಮೂಲ ವರ್ಗ: ಯೂಡೈಕಾಟ್‍ಗಳು
ಏಕಮೂಲ ವರ್ಗ: ಆಸ್ಟರಿಡ್ಸ್
ಗಣ: ಲ್ಯಾಮಿಯೇಲ್ಸ್
ಕುಟುಂಬ: ಓಲಿಯೇಸೀ
ಕುಲ: ಜಾಸ್ಮಿನಮ್
ಪ್ರಜಾತಿ:
J. humile
Binomial name
Jasminum humile
ಜೂನ್‍ನಲ್ಲಿ ಕಾಠ್ಮಾಂಡುವಿನಲ್ಲಿ ಕಂಡುಬಂದ ಹಳದಿ ಮಲ್ಲಿಗೆ ಹೂವು

ಹಳದಿ ಮಲ್ಲಿಗೆ (ಯೆಲ್ಲೋ ಜಾಸ್ಮಿನ್, ಇಟಾಲಿಯನ್ ಜಾಸ್ಮಿನ್,[೧] ನೇಪಾಳ ಜಾಸ್ಮಿನ್, ಜಾಸ್ಮಿನಮ್ ಹ್ಯೂಮೈಲ್) ಕಾಶ್ಮೀರದಿಂದ ನೇಪಾಳದವರೆಗೆ 3000 ಮೀ ಎತ್ತರದ ಹಿಮಾಲಯ ಪರ್ವತಶ್ರೇಣೆಯಲ್ಲೆಲ್ಲ ಕಾಣದೊರೆಯುತ್ತದೆ. ರಾಜಸ್ಥಾನದ ಆಬು ಬೆಟ್ಟ ಹಾಗೂ ದಕ್ಷಿಣ ಭಾರತದ ಬೆಟ್ಟಸೀಮೆಗಳಲ್ಲೂ ಉಂಟು. ಈ ಪ್ರಭೇದವನ್ನು ವ್ಯಾಪಕವಾಗಿ ಕೃಷಿಮಾಡಲಾಗುತ್ತದೆ ಮತ್ತು ಗ್ರೀಸ್, ಸಿಸಿಲಿ ಮತ್ತು ಹಿಂದಿನ ಯೂಗೊಸ್ಲಾವಿಯಾದಲ್ಲಿ ದೇಶೀಕರಿಸಲಾಗಿದೆ ಎಂದು ವರದಿಯಾಗಿದೆ.[೨][೩]

ವಿವರಣೆ[ಬದಲಾಯಿಸಿ]

ಮೇಲ್ಮುಖವಾಗಿ ಹಬ್ಬಿ ಬೆಳೆಯುವ ಪೊದೆ ಜಾತಿ ಇದು. ಹೂಗಳು ಹಳದಿ ಬಣ್ಣದವು; ರೆಂಬೆಗಳು ತುದಿಯಲ್ಲಿ ಸ್ಥಿರವಾಗಿರುವ ಸೀಮಾಕ್ಷಿ ಮಂಜರಿಗಳಲ್ಲಿ ಅರಳುವುವು. ಡಾರ್ಜಿಲಿಂಗ್ ಸುತ್ತಣ ಪ್ರದೇಶಗಳಲ್ಲಿ ಈ ಜಾತಿಯದು ಹೆಚ್ಚು ಹುಲುಸಾಗಿ ಬೆಳೆಯುತ್ತಿದ್ದು ದೀರ್ಘಕಾಲ ಹೂ ಬಿಡುವುದಲ್ಲದೆ ಬೀಜಗಳನ್ನೂ ಉತ್ಪಾದಿಸುತ್ತದೆ.

ಕೃಷಿ[ಬದಲಾಯಿಸಿ]

ಇದನ್ನು ಬೀಜ ಇಲ್ಲವೆ ಕಡ್ಡಿಗಳ ಮೂಲಕ ವೃದ್ಧಿಸಲಾಗುತ್ತದೆ.

ಉಪಯೋಗಗಳು[ಬದಲಾಯಿಸಿ]

ಇದರ ಬೇರಿನಿಂದ ಹಳದಿ ರಂಗನ್ನು ತಯಾರಿಸುವುದಿದೆ. ಬೇರು ಗಜಕರ್ಣದ ಚಿಕಿತ್ಸೆಗೆ ಒಳ್ಳೆಯದೆನ್ನಲಾಗಿದೆ. ತೊಗಟೆಯ ರಸ ಮೊಳೆರೋಗದ ನಿವಾರಣೆಗೆ ಬಳಕೆಯಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  1. ಟೆಂಪ್ಲೇಟು:BSBI 2007
  2. RHS A-Z encyclopedia of garden plants. United Kingdom: Dorling Kindersley. 2008. p. 1136. ISBN 978-1405332965.
  3. Kew World Checklist of Selected Plant Families, Jasminum humile
ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: