ಮೌಂಟ್‌ ಅಬು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
Mount Abu
India-locator-map-blank.svg
Red pog.svg
Mount Abu
ರಾಜ್ಯ
 - ಜಿಲ್ಲೆ
Rajasthan
 - Sirohi
ನಿರ್ದೇಶಾಂಕಗಳು 24.5925° N 72.7083° E
ವಿಸ್ತಾರ
 - ಎತ್ತರ
 km²
 - 1200 ಮೀ.
ಸಮಯ ವಲಯ IST (UTC+5:30)
ಜನಸಂಖ್ಯೆ (2005)
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - 307501
 - ++02974
 - RJ

ಮೌಂಟ್‌ ಅಬು ,About this sound pronunciation  ಅರಾವಳಿ ಪರ್ವತಶ್ರೇಣಿಗಳಲ್ಲಿ ಅತ್ಯಂತ ಎತ್ತರದ ಶಿಖರವಾಗಿದ್ದು, ಇದು ಪಶ್ಚಿಮ ಭಾರತರಾಜಸ್ತಾನ ರಾಜ್ಯದಲ್ಲಿದೆ. ಈ ಶಿಖರ ಸಿರೋಹಿ ಜಿಲ್ಲೆಯಲ್ಲಿದೆ.

ಮೌಂಟ್‌ ಅಬು ಶಿಖರ ಪಾಲಂಪುರ್‌ (ಗುಜರಾತ್‌)ನಿಂದ 58 ಕಿಲೋ ಮೀಟರ್‌ ದೂರದಲ್ಲಿದೆ. ಈ ಪರ್ವತ, 22 ಕಿಲೋ ಮೀಟರ್‌ ಉದ್ದ ಮತ್ತು 9 ಕಿಲೋ ಮೀಟರ್‌ ವಿಸ್ತಾರವಿರುವ ಅಪರೂಪದ ಕಲ್ಲುಬಂಡೆಗಳಿಂದ ಕೂಡಿದ ಪ್ರಸ್ಥಭೂಮಿಯನ್ನು ರೂಪಿಸಿದೆ. ಪರ್ವತಶ್ರೇಣಿಯಲ್ಲಿ ಗುರು ಶಿಖರ ಅತ್ಯಂತ ಅತ್ಯಂತ ಎತ್ತರವಾದ ಶಿಖರವಾಗಿದ್ದು, ಸಮುದ್ರ ಮಟ್ಟದಿಂದ 1722 ಮೀಟರ್‌ ಎತ್ತರದಲ್ಲಿದೆ. ಇದು ಹಲವು ನದಿಗಳು, ಸರೋವರಗಳು ಮತ್ತು ಜಲಪಾತಗಳ ತವರು ಮನೆಯಾಗಿದೆ, ಅಲ್ಲದೆ ನಿತ್ಯಹರಿದ್ವರ್ಣ ಅರಣ್ಯದಿಂದ ಕೂಡಿದೆ. ಈ ಎಲ್ಲ ಕಾರಣಗಳಿಂದ ಇದು 'ಮರುಭೂಮಿಯಲ್ಲಿರುವ ಓಯಸಿಸ್‌' ಎಂದು ಉಲ್ಲೇಖಗೊಂಡಿದೆ.


ಮೌಂಟ್‌ ಅಬು ಪರ್ವತದ ಪ್ರಾಚೀನ ಹೆಸರು "ಅರ್ಬುದಾಂಚಲ್‌ "


ಇತಿಹಾಸ[ಬದಲಾಯಿಸಿ]

ಪುರಾಣದಲ್ಲಿ ಈ ಪ್ರದೇಶ ಅರ್ಬುದಾರಣ್ಯ ಎಂದು ಉಲ್ಲೇಖಗೊಂಡಿದೆ, ("ಅರ್ಬು ವಿನ ಅರಣ್ಯ") ಮತ್ತು ಅಬು ಎನ್ನುವುದು ಇದರ ಸಂಕ್ಷಿಪ್ತ ಹೆಸರು. ಋಷಿ ವಸಿಷ್ಠರಿಗೆ ಇನ್ನೊಬ್ಬ ಋಷಿ ವಿಶ್ವಾಮಿತ್ರರೊಂದಿಗೆ ವೈಮನಸ್ಯ ಉಂಟಾಗಿ, ವಸಿಷ್ಠರು ಮೌಂಟ್‌ ಅಬುವಿನ ದಕ್ಷಿಣ ಭಾಗಕ್ಕೆ ತೆರಳಿ ಪರ್ವತದಂಚಿನಲ್ಲಿ ತಪಸ್ಸಿಗೆ ಕುಳಿತರು ಎಂಬ ನಂಬಿಕೆಯಿದೆ. ಆದಾಗ್ಯೂ, ಈ ನಂಬಿಕೆಗೆ ಪುಷ್ಠಿ ನೀಡುವಂತೆ ಸಣ್ಣದೊಂದು ಸಾಕ್ಷಿಯೂ ದೊರೆತಿದೆ.


ಪ್ರವಾಸಿ ಆಕರ್ಷಣೆಯ ಸ್ಥಳಗಳು[ಬದಲಾಯಿಸಿ]

ಚಿತ್ರ:Mt. Abu Sunset 1990.jpg
ಮೌಂಟ್‌‌ ಅಬುವಿನಲ್ಲಿ ಸೂರ್ಯಾಸ್ತ


ರಾಜಸ್ತಾನದಲ್ಲಿರುವ ಏಕೈಕ ಗಿರಿಧಾಮವಾಗಿರುವ ಮೌಂಟ್‌ ಅಬು ಪಟ್ಟಣ, 1220 ಮೀಟರ್‌ಗಳಷ್ಟು ಎತ್ತರದಲ್ಲಿದೆ. ರಾಜಸ್ತಾನ ಮತ್ತು ನೆರೆಯ ಗುಜರಾತ್‌ ರಾಜ್ಯದ ಧಗೆಯಿಂದ ಪಾರಾಗಲು ಸುರಕ್ಷಿತ ತಾಣವಾಗಿ ಇದು ಶತಮಾನಗಳಿಂದಲೂ ಜನಪ್ರಿಯವಾಗಿದೆ. ಮೌಂಟ್‌ ಅಬು ವನ್ಯಜೀವಿ ಅಭಯಾರಣ್ಯ1960ರಲ್ಲಿ ಸ್ಥಾಪನೆಯಾಗಿದ್ದು, ಪರ್ವತದ 290 ಚದರ ಕಿಲೋ ಮೀಟರ್‌ ವ್ಯಾಪ್ತಿಯಲ್ಲಿ ಹರಡಿಕೊಂಡಿದೆ.


ಮೌಂಟ್ ಅಬುವಿನಲ್ಲಿ ಹಲವು ಜೈನ ದೇವಾಲಯಗಳಿವೆ. AD 11 ಮತ್ತು 13ನೇ ಶತಮಾನದಲ್ಲಿ ನಿರ್ಮಾಣಗೊಂಡಿರುವ ದಿಲ್‌ವಾರ ದೇವಾಲಯಗಳು, ಬಿಳಿ ಅಮೃತಶಿಲೆಯಿಂದ ರಚನೆಗೊಂಡಿದ್ದು, ಅತ್ಯಂತ ಸಂಕೀರ್ಣ ರಚನೆ ಮತ್ತು ಸೂಕ್ಷ್ಮ ಕೆತ್ತನೆಗಳಿಂದ ಕೂಡಿವೆ. ಇವುಗಳ ಪೈಕಿ ವಿಮಲ್‌ ವಾಸಾಹಿ ದೇವಾಲಯ ಅತ್ಯಂತ ಪ್ರಾಚೀನವಾಗಿದ್ದು, AD 1031ರಲ್ಲಿ ವಿಮಲ್‌ ಷಾ ಎಂಬುವವನು ನಿರ್ಮಿಸಿದನು, ಮತ್ತು ಅದನ್ನು ಮೊದಲ ಜೈನ ತೀರ್ಥಂಕರ ವೃಷಭನಾಥನಿಗೆ ಅರ್ಪಿಸಿದನು. ಲುನ ವಾಸಾಹಿ ದೇವಾಲಯವನ್ನು ಪೋರ್ವಾಲ್‌ ಜೈನ ಸಮುದಾಯಕ್ಕೆ ಸೇರಿದ ವಾಸ್ತುಪಾಲ್‌ ಮತ್ತು ತೇಜ್‌ಪಾಲ್‌ ಎಂಬ ಸಹೋದರರು AD 1231ರಲ್ಲಿ ನಿರ್ಮಿಸಿದರು. ಗುಜರಾತ್‌ನ ಸ್ಥಳೀಯ ದೊರೆ ರಾಜ ವೀರ ಧವಳ್‌ನ ಆಳ್ಚಿಕೆಯಲ್ಲಿ ಇವರು ಮಂತ್ರಿಗಳಾಗಿದ್ದರು.


ಇಲ್ಲಿಗೆ ಸಮೀಪದಲ್ಲೇ ಮೇವಾಡ್‌‌ರಾಣ ಕುಂಭ 14ನೇ ಶತಮಾನದಲ್ಲಿ ಕಟ್ಟಿಸಿದ ಅಚಲ್‌ಗರ್‌ ಕೋಟೆಯಿದೆ. ಈ ಕೋಟೆಯೊಳಗೆ ಅಚಲೇಶ್ವರ ಮಹಾದೇವ ದೇವಾಲಯ (1412) ಮತ್ತು ಕಾಂತೀನಾಥ ದೇದಾಲಯ (1513) ಸೇರಿದಂತೆ ಹಲವು ಸುಂದರವಾದ ಜೈನ ದೇವಾಲಯಗಳಿವೆ.


ಚಿತ್ರ:Nakki.JPG
ಮಹಾರಾಜ ಜೈಪುರ್‌ ಅರಮನೆಯೊಂದಿಗೆ ನಕ್ಕಿ ಸರೋವರ ಮತ್ತು ಕಪ್ಪೆಗಲ್ಲು


ನಕ್ಕಿ ಸರೊವರ, ಮೌಂಟ್‌ ಅಬುವಿನಲ್ಲಿರುವ ಪ್ರವಾಸಿಗರ ಮತ್ತೊಂದು ಪ್ರೇಕ್ಷಣೀಯ ಸ್ಥಳ. ಸರೋವರದ ಸಮೀಪ ಬೆಟ್ಟದ ಮೇಲೆ ಕಪ್ಪೆಗಲ್ಲು (ಕಪ್ಪೆಯಾಕಾರದ ಕಲ್ಲು) ಇದೆ. ರಘನಾಥ ದೇವಾಲಯ ಮತ್ತು ಮಹಾರಾಜ ಜೈಪುರ್ ಅರಮನೆಗಳೂ ಕೂಡ ಬೆಟ್ಟದ ಮೇಲೆ ನಕ್ಕಿ ಸರೋವರದ ಸಮೀಪ ಇವೆ.


ಗಟ್ಟಿಯಾದ ಬಂಡೆಯಲ್ಲಿ ಕೆತ್ತಲಾದ ಅಧರ್‌ ದೇವಿ ದೇವಾಲಯ, ಶ್ರೀ ರಘುನಾಥಜಿ ದೇವಾಲಯ ಮತ್ತು ಗುರು ಶಿಖರದ ಮೇಲೆ ನಿರ್ಮಾಣಗೊಂಡಿರುವ ಪುಣ್ಯಕ್ಷೇತ್ರ ದತ್ತಾತ್ರೇಯ ದೇವಾಲಯ ಸೇರಿದಂತೆ ಹಲವು ಹಿಂದೂ ದೇವಾಲಯಗಳಿಗೂ ಈ ಪರ್ವತ ತವರು ಮನೆಯಾಗಿದೆ. ಬ್ರಹ್ಮ ಕುಮಾರಿ ಪಂಥದ ಮಹಿಳಾ ಸಂನ್ಯಾಸಿಯರ ವಿಶ್ವ ಕೇಂದ್ರ ಕಾರ್ಯಾಲಯ ಇಲ್ಲಿದ್ದು, ಇದು ಅದೇ ಪಂಥದ ವಿಶ್ವದ ಆಧ್ಯಾತ್ಮಿಕ ವಿಶ್ವವಿದ್ಯಾಲಯ ಕೂಡ ಹೌದು. ಮೌಂಟ್‌ ಅಬು ಪರ್ವತದ ತುದಿಯಲ್ಲಿ ವಿಷ್ಣುವಿನ ಪಾದದ ಗುರುತುಗಳಿವೆ ಎಂಬ ನಂಬಿಕೆಯೂ ಇದೆ. ಮೌಂಟ್‌ ಅಬುವಿನ ಹೊರಗಡೆ ಜಗತ್‌ ಎಂಬಲ್ಲಿರುವ ಬಂಡೆಯ ಸೀಳಿನಲ್ಲಿ ದುರ್ಗಾ ದೇವಾಲಯಮತ್ತು ಅಂಬಿಕಾ ಮಾತಾ ದೇವಾಲಯವಿದೆ.


ಸಾರಿಗೆ[ಬದಲಾಯಿಸಿ]

ಇಲ್ಲಿಗೆ ಅತಿ ಸಮೀಪದ ರೈಲು ನಿಲ್ದಾಣ ಅಬು ರಸ್ತೆಯಲ್ಲಿದ್ದು, ಮೌಂಟ್‌ ಅಬು ಪಟ್ಟಣದಿಂದ ತಗ್ಗಿನಲ್ಲಿ ಆಗ್ನೇಯಕ್ಕೆ 27 ಕಿಲೋ ಮೀಟರ್‌ ದೂರದಲ್ಲಿದೆ. ಭಾರತೀಯ ರೈಲ್ವೆದೆಹಲಿ, ಪಾಲಂಪುರ್‌ ಮತ್ತು ಅಹ್ಮದಾಬಾದ್‌ ನಡುವಿನ ಪ್ರಮುಖ ಮಾರ್ಗದಲ್ಲೇ ಈ ನಿಲ್ದಾಣವಿದೆ.


ಜನಸಂಖ್ಯೆ[ಬದಲಾಯಿಸಿ]

As of 2001ಭಾರತ ಜನಗಣತಿ[೧]ಯ ಪ್ರಕಾರ ಮೌಂಟ್‌ ಅಬು 22,045 ಜನಸಂಖ್ಯೆಯನ್ನು ಹೊಂದಿತ್ತು.

ಒಟ್ಟು ಜನಸಂಖ್ಯೆಯಲ್ಲಿ 58% ಪುರುಷರೂ ಮತ್ತು 42% ಮಹಿಳೆಯರೂ ಇದ್ದಾರೆ. ಮೌಂಟ್‌ ಅಬು 67% ಸರಾಸರಿ ಸಾಕ್ಷರತಾ ಪ್ರಮಾಣವನ್ನು ಹೊಂದಿದೆ; ಇದು ರಾಷ್ಟ್ರೀಯ ಸರಾಸರಿ 59.5%ಗಿಂತ ಅಧಿಕವಾಗಿದೆ. ಇದರಲ್ಲಿ ಪುರುಷ ಸಾಕ್ಷರತಾ ಪ್ರಮಾಣ 77% ಇದ್ದರೆ, ಮಹಿಳಾ ಸಾಕ್ಷರತಾ ದರ 55% ಇದೆ.

ಮೌಂಟ್‌ ಅಬುವಿನಲ್ಲಿರುವ ಜನಸಂಖ್ಯೆಯಲ್ಲಿ 14%ನಷ್ಟು ಜನರು 6 ವರ್ಷಕ್ಕಿಂತ ಕಡಿಮೆ ವಯಮಾನದವರು.


ಪರಾಮರ್ಶನಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ:


ಟೆಂಪ್ಲೇಟು:Sirohi district


[[Category: ಪವಿತ್ರ ಪರ್ವತಗಳು]] [[Category: ಹಿಂದೂ ತೀರ್ಥಕ್ಷೇತ್ರಗಳು]] [[Category:

ಜೈನಧರ್ಮಕ್ಕೆ ಸಂಬಂಧಿಸಿದ ಸ್ಥಳಗಳು]]