ಹಂಬು ಮಲ್ಲಿಗೆ
ಗೋಚರ
Jasminum arborescens | |
---|---|
Scientific classification | |
ಸಾಮ್ರಾಜ್ಯ: | ಸಸ್ಯ |
ಏಕಮೂಲ ವರ್ಗ: | ಹೂಬಿಡುವ ಸಸ್ಯ |
ಏಕಮೂಲ ವರ್ಗ: | ಯೂಡೈಕಾಟ್‍ಗಳು |
ಏಕಮೂಲ ವರ್ಗ: | ಆಸ್ಟರಿಡ್ಸ್ |
ಗಣ: | ಲ್ಯಾಮಿಯೇಲ್ಸ್ |
ಕುಟುಂಬ: | ಓಲಿಯೇಸೀ |
ಕುಲ: | ಜಾಸ್ಮಿನಮ್ |
ಪ್ರಜಾತಿ: | J. arborescens
|
Binomial name | |
Jasminum arborescens |
ಹಂಬು ಮಲ್ಲಿಗೆ (ಟ್ರೀ ಜಾಸ್ಮಿನ್) ಜಾಸ್ಮಿನಮ್ ಆರ್ಬಾರೆಸೆನ್ಸ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಒಂದು ಹೂಬಿಡುವ ಸಸ್ಯ.[೧][೨] ಸುಮಾರು 1400 ಮೀ. ಎತ್ತರದವರೆಗಿನ ಬೆಟ್ಟಪ್ರದೇಶಗಳಲ್ಲಿ ಬೆಳೆಯುವ ಇದು ಉಪಹಿಮಾಲಯ ಶ್ರೇಣಿ, ಬಂಗಾಲ, ಒರಿಸ್ಸ, ಆಂಧ್ರದ ವಿಶಾಖಪಟ್ಟಣ ಜಿಲ್ಲೆ ಮುಂತಾದೆಡೆಗಳಲ್ಲಿ ಸಾಮಾನ್ಯ.
ಗುಣಲಕ್ಷಣಗಳು
[ಬದಲಾಯಿಸಿ]ಎಲೆಗಳು ಸರಳರೀತಿಯವು, ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಹೂಮಂಜರಿ ಸೀಮಾಕ್ಷಿ ಮಾದರಿಯದು, ಒಂದೊಂದು ಮಂಜರಿಯಲ್ಲಿ 15-20 ಅಚ್ಚಬಿಳಿಯ ಹಾಗೂ ಅತ್ಯಂತ್ಯ ಸುವಾಸನೆಯುಳ್ಳ ಹೂಗಳಿರುವುವು.
ಉಪಯೋಗಗಳು
[ಬದಲಾಯಿಸಿ]ಇದರ ಎಲೆಯ ರಸವನ್ನು ಬೆಳ್ಳುಳ್ಳಿ, ಮೆಣಸು ಮುಂತಾದವುಗಳೊಂದಿಗೆ ಸೇರಿಸಿ ವಮನಕಾರಿಯಾಗಿ ಬಳಸುವುದಿದೆ. ಎಲೆಗಳು ಪ್ರತಿಬಂಧಕ ಹಾಗೂ ರೋಚಕವೆಂದು ಹೆಸರಾಗಿವೆ. ಬರಗಾಲದಲ್ಲಿ ಇದರ ಬೀಜಗಳನ್ನು ತಿನ್ನುವುದಿದೆ.
ಉಲ್ಲೇಖಗಳು
[ಬದಲಾಯಿಸಿ]ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: