ಸ್ವಾತಂತ್ರ್ಯದ ಪ್ರತಿಮೆ
Historic Site
| name = Statue of Liberty | image = Statue of Liberty, NY.jpg | caption = The Statue of Liberty in New York Harbor | location = [[Libername=whereliberty>"Frequently Asked Questions". NPark Service. Retrieved 2007-03-22.</ees = 40 | lat_minutes = 41 | lat_seconds = 38 | lat_direction = N | long 7 | long_minutes = 2 | long_seconds = 37 | long_direction = W | locmapin = New York | built =October 28, 1886 | architect= Frederic Auguste Bartholdi | architecture= | area = 12 acres (49,000 m2)[೧] | visitation_num = 3.2 million[೨] | visitation_year = 2007 | governing_body = U.S. National Park Service | designation1 = WHS | designation1_date = 1984 (8th session) | designation1_type = Cultural | designation1_criteria = i, vi | designation1_number = 307 | designation1_free1name = Region | designation1_free1value = Europe and North America | designation2 = NRHP | designation2_offname = Statue of Liberty National Monument, Ellis Island and Liberty Island | designation2_date = October 15, 1966[೩] | designation2_number = 66000058 | designation3 = NMON | designation3_date = October 15, 1924 | designation3_free1name = Designated by President | designation3_free1value = Calvin Coolidge[೪] | designation4 = NYC Landmark | designation4_date = September 14, 1976 | designation4_type = Individual }} (ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ರತಿಮೆಯು ಅಮೆರಿಕದ ಅಪರೂಪದ ಸ್ಮಾರಕ. ಇದನ್ನು ವಿಶ್ವದ ಜ್ಞಾನೋದಯದ ಸಂಕೇತವೆಂದೂ ಪರಿಗಣಿಸಲಾಗುತ್ತದೆ) ಸ್ಟ್ಯಾಚ್ಯೂ ಆಫ್ ಲಿಬರ್ಟಿ (ಸ್ವಾತಂತ್ರ್ಯದ ಪ್ರತಿಮೆ) (French: Statue de la Liberté) ಯನ್ನು 'ಲಿಬರ್ಟಿ ಎನ್ಲೈಟೆನಿಂಗ್ ದಿ ವರ್ಲ್ಡ್ ' (French: la Liberté éclairant le monde) ಎಂದು ಅಧಿಕೃತವಾಗಿ ಹೆಸರಿಸಲಾಗಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, 1886ರ ಅಕ್ಟೋಬರ್ 28ರಂದು ಈ ಪ್ರತಿಮೆ ಅನಾವರಣಗೊಂಡಿತು. ಫ್ರಾನ್ಸ್ ದೇಶದ ಜನರು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಸ್ನೇಹಪೂರ್ವಕವಾಗಿ ಈ ಪ್ರತಿಮೆಯನ್ನು ನೀಡಿದ್ದರು. ಅಮೆರಿಕನ್ ಕ್ರಾಂತಿ[೫] ಸಂದರ್ಭದಲ್ಲಿ ಇವೆರಡೂ ದೇಶಗಳ ನಡುವೆ ಸ್ನೇಹವೇರ್ಪಟ್ಟಿತ್ತು. 'ಸ್ಟೊಲಾ' ಎಂಬ ಹೊಳಪಿನ ಕಿರೀಟ ಮತ್ತು ಪಾದರಕ್ಷೆ ಧರಿಸಿ, ಮುರಿದುಹೋದ ಸರಪಳಿಯನ್ನು ಮೆಟ್ಟಿ, ಬಲಗೈಯಲ್ಲಿ ಪಂಜು, ಹಾಗೂ ಸ್ವಾತಂತ್ರ್ಯ ದಿನಾಂಕ JULY IV MDCCLXXVI [೬] ಕೆತ್ತಲಾದ 'ಟ್ಯಾಬುಲಾ ಅನ್ಸಾಟಾ' ಫಲಕ ಎಡಗೈಯಲ್ಲಿ ಹಿಡಿದು ನಿಂತ ಮಹಿಳೆಯೊಬ್ಬಳನ್ನು ಪ್ರತಿನಿಧಿಸುವ ಕೆತ್ತನೆ ಕಲಾಕೃತಿ ಇದಾಗಿದೆ. ನ್ಯೂಯಾರ್ಕ್ ಬಂದರಿನಲ್ಲಿರುವ ಲಿಬರ್ಟಿ ದ್ವೀಪದ ಮೇಲಿರುವ ಈ ಪ್ರತಿಮೆಯು, ಪ್ರವಾಸಿಗರು, ವಲಸೆಗಾರರು ಮತ್ತು ಹಡಗಿನ ಮೂಲಕ ಬರುವ ಅಮೆರಿಕನ್ನರನ್ನೂ ಸ್ವಾಗತಿಸುತ್ತದೆ.[೭] ಫ್ರೆಡೆರಿಕ್ ಆಗಸ್ಟ್ ಬಾರ್ತೊಲ್ಡಿ ಈ ಪ್ರತಿಮೆಯ ಶಿಲ್ಪಿ.[೮] ಇದರ ವಿನ್ಯಾಸಕ್ಕಾಗಿ ಅವರು U.S. ಪೆಟೆಂಟ್ ಹಕ್ಕು ಸ್ವಾಮ್ಯ ಪಡೆದಿದ್ದಾರೆ.[೯]
ಮೌರಿಸ್ ಕೋಚ್ಲಿನ್ ಎಂಬಾತ ಪ್ರತಿಮೆಯ ಆಂತರಿಕ ವಿನ್ಯಾಸಕಾರ. ಈತ ವಿಶ್ವವಿಖ್ಯಾತ ಐಫೆಲ್ ಗೋಪುರದ ನಿರ್ಮಾತೃ ಗುಸ್ತಾವ್ ಐಫೆಲ್‌ನ ಸಂಸ್ಥೆಯಲ್ಲಿ ಮುಖ್ಯ ಅಭಿಯಂತರನಾಗಿದ್ದ. ವಿನ್ಯಾಸಗಾರ ರಿಚರ್ಡ್ ಮಾರಿಸ್ ಹಂಟ್ ಪ್ರತಿಮೆಯ ಪೀಠಭಾಗದ ವಿನ್ಯಾಸ ಮಾಡಿದ. ಯೂಜೆನ್ ವೀಯೊಲೆ-ಲು-ಡ್ಯುಪ್ರತಿಮೆಯ ನಿರ್ಮಾಣದಲ್ಲಿ ತಾಮ್ರ ಲೋಹದ ಬಳಕೆಗೆ ಕಾರಣನಾಗಿದ್ದಾನೆ. ಮೃದುವಾದ (ಮೆದು ಆಕಾರಕ್ಕೆ ಹೊಂದಿಕೊಳ್ಳಬಲ್ಲ) ಲೋಹವನ್ನು ಬಳಸಿ, ಮೆರಗಿನಿಂದ ಲೋಹಕೃತಿ ನಿರ್ಮಿಸುವ ರಪೂಸೆ ತಂತ್ರಕ್ಕೂ ಈತನೇ ಕಾರಣನಾಗಿದ್ದ.[೧೦]
ಉಕ್ಕಿನ ಚೌಕಟ್ಟಿನ (ಮೂಲತಃ ಹದಗೊಳಿಸಿದ ಕಬ್ಬಿಣ)ದ ಮೇಲೆ ಶುದ್ಧ ತಾಮ್ರದ ರಕ್ಷಣಾ ಕವಚದಿಂದ ಈ ಪ್ರತಿಮೆಯನ್ನು ರಚಿಸಲಾಗಿದೆ. ಆದರೆ ಪಂಜಿನ ಜ್ವಾಲೆಗೆ ಗೋಲ್ಡ್ ಲೀಫ್ ಲೇಪನ ಮಾಡಲಾಗಿದೆ (ಮೂಲತಃ ತಾಮ್ರದಿಂದ ಮಾಡಲಾಗಿದ್ದು, ಆನಂತರ ಗಾಜಿನ ಹಲಗೆಗೆ ಹೊಂದಿಸಿಕೊಳ್ಳುವಂತೆ ಅದನ್ನು ಪರಿವರ್ತಿಸಲಾಗಿತ್ತು). ಪ್ರತಿಮೆಯು ಆಯತಾಕಾರದ ಶಿಲೆಯ ಪೀಠಸ್ಥಾನದ ಮೇಲೆ ನಿಂತಿದೆ. ಈ ಪೀಠವು ಏರುಪೇರಿನ ಹನ್ನೊಂದು ತುದಿಗಳುಳ್ಳ ನಕ್ಷತ್ರಾಕಾರದ ಆಧಾರವನ್ನು ಹೊಂದಿದೆ. ಪ್ರತಿಮೆಯೂ ೧೫೧ ಅಡಿ (೪೬ ಮೀ) ಎತ್ತರವಿದೆ. ಪೀಠ ಮತ್ತು ಆಧಾರ ಪರಿಗಣಿಸಿದರೆ ಅದು ೩೦೫ ಅಡಿ (೯೩ ಮೀ)ಇನ್ನಷ್ಟು ಎತ್ತರದಲ್ಲಿರುವಂತೆ ಕಾಣುತ್ತದೆ. ಜಗತ್ತಿನಾದ್ಯಂತ, ಅಮೆರಿಕಾ ಸಂಯುಕ್ತ ಸಂಸ್ಥಾನದ ಪ್ರಮುಖ ಲಾಂಛನಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಒಂದು ಎಂದು ಪರಿಗಣಿಸಲಾಗುತ್ತದೆ.[೧೧] ಜೊತೆಗೆ, 1886ರಿಂದ ಜೆಟ್ ಯುಗದ ವರೆಗೂ, ಯೂರೋಪಿನಿಂದ ಹಡಗಿನಲ್ಲಿ ಬರುತ್ತಿದ್ದ ಲಕ್ಷಗಟ್ಟಲೆ ವಲಸೆಗಾರರಿಗೆ, ಮೊಟ್ಟಮೊದಲು ಗೋಚರಿಸುವ ಅಮೆರಿಕಾ ಸಂಯುಕ್ತ ಸಂಸ್ಥಾನದ ಅಪರೂಪದ ದೃಶ್ಯಗಳಲ್ಲಿ ಈ ಪ್ರತಿಮೆಯೂ ಒಂದಾಗಿತ್ತು. ಈ ಪ್ರತಿಮೆಯು ರಾಷ್ಟ್ರೀಯ ಉದ್ಯಾನ ಸೇವೆಯ ಆಡಳಿತದಲ್ಲಿ ಸ್ವಾತಂತ್ರ್ಯ ಸಂಕೇತಿಸುವ ಪ್ರತಿಮೆ ಎನಿಸಿಕೊಂಡಿದೆ. ರಾಷ್ಟ್ರೀಯ ಸ್ಮಾರಕ ದ ಕೇಂದ್ರಬಿಂದುವೂ ಆಗಿದೆ. ಈ ರಾಷ್ಟ್ರೀಯ ಸ್ಮಾರಕವು ಎಲಿಸ್ ದ್ವೀಪವನ್ನೂ ಸಹ ಒಳಗೊಂಡಿದೆ.
ಇತಿಹಾಸ
[ಬದಲಾಯಿಸಿ]ಅಮೆರಿಕನ್ ಸ್ವಾತಂತ್ರ್ಯ ಘೋಷಣೆಯ ಶತಮಾನೋತ್ಸವದ ಅಂಗವಾಗಿ, ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ನೀಡಬಹುದಾದ ಸೂಕ್ತ ಕೊಡುಗೆಯ ಬಗ್ಗೆ ಫ್ರಾನ್ಸ್‌ನಲ್ಲಿ ಚರ್ಚೆ ನಡೆಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನ ಚರಿತ್ರೆಗಾರ, ಲೇಖಕ ಮತ್ತು ರಾಜಕಾರಣಿ ಎಡ್ವರ್ಡ್ ರೆನೆ ಡಿ ಲಬೊಲೆ ಈ ಚರ್ಚೆಯ ಮುಂದಾಳತ್ವ ವಹಿಸಿದ್ದರು. ಇಸವಿ 1876ರಲ್ಲಿ ಪ್ರತಿಮೆಯ ರಚನಾಕಾರ್ಯವನ್ನು ಪೂರ್ಣಗೊಳಿಸಬೇಕೆಂಬ ಉದ್ದೇಶದಿಂದ, ಅದರ ವಿನ್ಯಾಸಕ್ಕಾಗಿ ಫ್ರೆಡೆರಿಕ್ ಬಾರ್ತೊಲ್ಡಿ ಎಂಬ ಫ್ರೆಂಚ್ ಶಿಲ್ಪಿಯನ್ನು ಅಧಿಕೃತವಾಗಿ ನೇಮಿಸಲಾಯಿತು. ಆ ಸಮಯ ಫ್ರಾನ್ಸ್‌ನಲ್ಲಿ ಸಂಭವಿಸಿದ ರಾಜಕೀಯ ಕ್ಷೋಭೆಯಿಂದಾಗಿ ಫ್ರಾನ್ಸ್ ನಡುಗಿಹೋಗಿತ್ತು. ಇದರ ಜ್ಞಾಪಕಾರ್ಥವೇ ಸ್ಮರಣೀಯ ಕೊಡುಗೆಯ ಯೋಜನೆ ಹುಟ್ಟಿಹೊಂಡಿತ್ತು. ಹಲವರು ಫ್ರೆಂಚ್ ಥರ್ಡ್ ರಿಪಬ್ಲಿಕ್ ಎಂಬುದನ್ನು ತಾತ್ಕಾಲಿಕ ವ್ಯವಸ್ಥೆ ಎಂದು ಪರಿಗಣಿಸಿದ್ದರು. ಇವರು ರಾಜಪ್ರಭುತ್ವ ಅಥವಾ ನೆಪೊಲಿಯನ್ ಆಳ್ವಿಕೆಯ ರೀತಿಯ ಸಾಂವಿಧಾನಿಕ ಸರ್ವಾಧಿಕಾರದತ್ತ ಒಲವು ತೋರುತ್ತಿದ್ದರು.
ಸಾಗರದಾಚೆ ಇರುವ ಸಹೋದರ ಗಣರಾಜ್ಯಕ್ಕೆ ಬೃಹತ್ ಕೊಡುಗೆ ನೀಡುವ ಈ ಕಲ್ಪನೆಯು ಇತರೆ ರಾಜಕಾರಣಿಗಳ ವಿರುದ್ಧದ ಗಣತಂತ್ರ ಚಳವಳಿಗೆ ಕೇಂದ್ರಬಿಂದುವಾಯಿತು.
ಮೊದಲ ಟೆರಾಕೊಟಾ ಮಾದರಿಯನ್ನು 1870ರಲ್ಲಿ ನಿರ್ಮಿಸಲಾಯಿತು. ಅದನ್ನು ಈಗ ಮ್ಯುಸೀ ಡೆ ಬ್ಯೂ-ಆರ್ಟ್ಸ್ ಡಿ ಲಯನ್‌ನ ಸಂಗ್ರಹಾಲಯದಲ್ಲಿ ಪ್ರದರ್ಶಿಸಲಾಗಿದೆ.[೧೨] ಅದೇ ವರ್ಷ, ಮೊದಲು ಕಿರುಗಾತ್ರದ ಕಂಚಿನ ಮಾದರಿ ನಿರ್ಮಿಸಲಾಯಿತು[ಸೂಕ್ತ ಉಲ್ಲೇಖನ ಬೇಕು]. ಈ ಮೊದಲ ಪ್ರತಿಮೆಯು ಈಗ ಪ್ಯಾರಿಸ್‌ನ ಜಾರ್ಡಿನ್ ಡ್ಯು ಲಕ್ಸೆಂಬೊರ್ಗ್‌ನಲ್ಲಿದೆ.[ಸೂಕ್ತ ಉಲ್ಲೇಖನ ಬೇಕು]
ಈಜಿಪ್ಟ್‌ಗೆ ಭೇಟಿ ನೀಡಿದ ಬಾರ್ತೊಲ್ಡಿಗೆ, ಅಲ್ಲಿ ನಡೆಯುತ್ತಿದ್ದ ಸುಯೆಜ್ ಕಾಲುವೆಯ ನಿರ್ಮಾಣ ಯೋಜನೆಯು ಸ್ಫೂರ್ತಿಯಾಯಿತು. ಸುಯೆಜ್ ಕಾಲುವೆ ನಿರ್ಮಾಣ ಯೋಜನೆಯನ್ನು ವಹಿಸಿಕೊಂಡಿದ್ದ ಕೌಂಟ್ ಫರ್ಡಿನಾಂಡ್ ಡಿ ಲೆಸೆಪ್ಸ್‌ನಂತರ, ಬಾರ್ತೊಲ್ಡಿಯ ಆಪ್ತ ಸ್ನೇಹಿತನಾದ. ಇದರಿಂದಾಗಿ, ಬಾರ್ತೊಲ್ಡಿಯ ಈಜಿಪ್ಟ್ ಭೇಟಿ ಆತನ ಕಲಾತ್ಮಕ ದೃಷ್ಟಿಕೋನವನ್ನು 'ಮಹೋನ್ನತ'ದಿಂದ 'ದೈತ್ಯಾಕಾರ'ಕ್ಕೆ ಕೊಂಡೊಯ್ತು. ಕಾಲುವೆಯ ಪ್ರವೇಶ ದ್ವಾರದಲ್ಲಿ ಒಂದು ಬೃಹದಾಕಾರದ ಬೆಳಕುಗೋಪುರವನ್ನು ಕಲ್ಪಿಸಿ, ಆತ ಅದರಂತೆ ಯೋಜನೆ ರೂಪಿಸಿದ. ಈ ಬೆಳಕುಗೋಪುರವು ರೊಮನ್ ದೇವತೆ ಲಿಬರ್ಟಾಸ್‌ಳ ಪ್ರತೀಕವಾಗಿತ್ತು. ಪ್ರಭೆಯುಳ್ಳ ಹಣೆಪಟ್ಟಿ ಹಾಗು ಬಲಗೈಯಲ್ಲಿ ಆಕಾಶದತ್ತ ತೋರುವ ಪಂಜಿನಿಂದ ಬೆಳಕು ಬೀರುತ್ತಿರುವ ವಸ್ತ್ರಧಾರಿ ಈಜಿಪ್ಟಿಯನ್ ರೈತ ಮಹಿಳೆಯ ಸ್ವರೂಪದಲ್ಲಿ ಈ ಪ್ರತಿಮೆಯ ವಿನ್ಯಾಸ ಮಾಡಲಾಯಿತು. 1857ರಲ್ಲಿ ಬಾರ್ತೊಲ್ಡಿ ತನ್ನ ಯೋಜಿತ ವಿನ್ಯಾಸವನ್ನು ಈಜಿಪ್ಟ್‌ನ ಖೆಡಿವ್ ಇಸ್ಮಯಿಲ್ ಪಾಷಾಗೆ ಅರ್ಪಿಸಿದ. ಮಾರ್ಪಾಡುಗಳ ನಂತರ ಪುನಃ 1869ರಲ್ಲಿ ಪ್ರಸ್ತುತಪಡಿಸಿದ. ಆದರೆ, ಆಟೊಮನ್ ಸಾಮ್ರಾಜ್ಯವು ಆರ್ಥಿಕ ತೊಂದರೆಯಲ್ಲಿದ್ದ ಕಾರಣ ಈ ಯೋಜನೆ ಸಾಕಾರಗೊಳ್ಳಲಿಲ್ಲ.[೧೩]
ಎರಡೂ ದೇಶಗಳ ಜಂಟಿ ಒಪ್ಪಂದದಂತೆ, ಅಮೆರಿಕಾ ಸಂಯುಕ್ತ ಸಂಸ್ಥಾನವು ಪ್ರತಿಮೆಯ ಪೀಠಸ್ಥ ಭಾಗದ ವೇದಿಕೆ ನಿರ್ಮಾಣ ಹಾಗೂ ಫ್ರೆಂಚರು ಪ್ರತಿಮೆಯ ಉಸ್ತುವಾರಿ ವಹಿಸುವ ಜವಾಬ್ದಾರಿ ಹೊಂದಿದ್ದರು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಅದರ ಜೋಡಣೆಯ ಕಾರ್ಯವನ್ನು ನಿರ್ವಹಿಸುವುದಿತ್ತು. ಈ ಉದ್ದೇಶಕ್ಕಾಗಿ ಸಾರ್ವಜನಿಕರಿಂದ ಧಹಸಹಾಯವೂ ದೊರಕಿತು. ಜೊತೆಗೆ, ಅಂದಿನ ಪ್ರಖ್ಯಾತ ಉದಯೋನ್ಮುಖ ಸಂಗೀತ ಸಂಯೋಜಕ ಚಾರ್ಲ್ಸ್ ಗೊನೊಡ್ ಪ್ಯಾರಿಸ್ ಒಪೆರಾದಲ್ಲಿ ಸಂಗೀತಗೋಷ್ಠಿ ನಡೆಸಿ ಹಣ ಸಂಗ್ರಹಿಸಿದರು. ಲಾ ಲೀಬೆರ್ಟೆ ಎಕ್ಲೇರನ್ ಲು ಮೋಂಡ್ (ಜಗತ್ತಿಗೆ ಜ್ಞಾನಜ್ಯೋತಿ ನೀಡುವ ಲಿಬರ್ಟಿ) ಸಂಗೀತಗೋಷ್ಠಿ ಸೇರಿದಂತೆ ಹಲವಾರು ಮನರಂಜನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು. ಧನಸಹಾಯಾರ್ಥ ಕೊಡುಗೈ ದಾನಿಗಳಿಗಾಗಿ ಚಾರಿಟಿ ಶೊ, ಲಾಟರಿ ಯೋಜನೆಯನ್ನೂ ಸಹ ಆಯೋಜಿಸಲಾಯಿತು. ಇದರಿಂದ 2,250,000 ಫ್ರಾಂಕ್‌ಮೊತ್ತ ($250,000) ಸಂಗ್ರಹಿಸಲಾಯಿತು. ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ಸಹಾಯಾರ್ಥ ರಂಗಮಂದಿರ ಕಾರ್ಯಕ್ರಮ, ಕಲಾ ಪ್ರದರ್ಶನ, ಹರಾಜು ಮತ್ತು ಬಹುಮಾನಾರ್ಥ ಸೆಣಸುವ ಕ್ರೀಡಾ ಸ್ಫರ್ಧೆಗಳನ್ನು ಆಯೋಜಿಸಿ ಅಗತ್ಯ ಧನ ಸಂಗ್ರಹಿಸಲಾಯಿತು.
ಏತನ್ಮಧ್ಯೆ ಫ್ರಾನ್ಸ್‌ನಲ್ಲಿ, ಅಂತಹ ದೈತ್ಯಾಕಾರಾದ ತಾಮ್ರಲೋಹದ ಪ್ರತಿಮೆಯ ವಿನ್ಯಾಸ ರಚನೆಯ ಸಮಸ್ಯೆಗಳನ್ನು ಬಗೆಹರಿಸಲು ಬಾರ್ತೊಲ್ಡಿಗೆ ಒಬ್ಬ ಅಭಿಯಂತರನ ಸಲಹೆಯ ಅಗತ್ಯವಿತ್ತು. ದೈತ್ಯಾಕಾರದ ಕಬ್ಬಿಣದ ಗೋಪುರ(ಪೈಲಾನ್)ಗಳು, ಹಾಗೂ ಪ್ರತಿಮೆಯ ತಾಮ್ರದ ಸ್ಥೂಲ ಕವಚವು ಆಕಾರಕ್ಕೆ ಹೊಂದಿಕೊಳ್ಳುವ ಚೌಕಟ್ಟಿನ ವಿನ್ಯಾಸ ಮಾಡಲು ಐಫೆಲ್ ಗೋಪುರದ ವಿನ್ಯಾಸಕ ಗುಸ್ತಾವ್ ಐಫೆಲ್‌ನನ್ನು ನೇಮಿಸಲಾಯಿತು. ಇಫೆಲ್ ತನ್ನ ಆಪ್ತ ಸ್ನೇಹಿತ, ನಂಬಿಗಸ್ಥ ಹಾಗೂ ರಚನಾ ಅಭಿಯಂತರ ಮೌರೀಸ್ ಕೋಚ್ಲಿನ್‌ಗೆ ಈ ಕೆಲಸದ ವಿಸ್ತೃತ ಕಾರ್ಯವನ್ನು ವಹಿಸಿಕೊಟ್ಟ.
ಮೊದಲಿಗೆ, ಪ್ರತಿಮೆಯ ನಿರ್ಮಾಣ ಪೂರ್ಣಗೊಳಿಸಿ 1876ರ ಜುಲೈ 4ರಂದು ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ಅರ್ಪಿಸಲು ಬಾರ್ತೊಲ್ಡಿ ಯೋಚಿಸಿದ್ದ. ಆದರೆ ತಡವಾದ ಆರಂಭ, ನಂತರದ ವಿಳಂಬಗಳಿಂದಾಗಿ ಇದು ಸಾಧ್ಯವಾಗಲಿಲ್ಲ. ಆ ಸಮಯದಲ್ಲಿ ಪ್ರತಿಮೆಯ ಪಂಜು ಹಾಗೂ ಬಲಗೈ ನಿರ್ಮಾಣ ಪೂರ್ಣಗೊಂಡಿತ್ತು. ಪ್ರತಿಮೆಯ ಈ ಭಾಗವನ್ನು ಫಿಲಡೆಲ್ಫಿಯಾದ ಸೆಂಟೆನಿಯಲ್ ಎಕ್ಸ್ಪೊಸಿಷನ್‌ನಲ್ಲಿ ಪ್ರದರ್ಶಿಸಲಾಯಿತು. ವೀಕ್ಷಕರು ಮೆಟ್ಟಿಲು ಹತ್ತಿ ಹೋಗಿ ನೋಡಲು 50 ಸೆಂಟ್‌ಗಳ ಶುಲ್ಕ ಪಾವತಿಸಬೇಕಿತ್ತು. ಈ ರೀತಿ ಸಂಗ್ರಹಿಸಿದ ಹಣವನ್ನು ಪೀಠದ ರಚನೆಯ ವೆಚ್ಚಕ್ಕಾಗಿ ಬಳಸಲಾಯಿತು. 1878ರ ಜೂನ್ 20ರಂದು ನಡೆದ ಪ್ಯಾರಿಸ್ (ಪ್ರದರ್ಶನದಲ್ಲಿ) ಎಕ್ಸ್‌ಪೊಸಿಷನ್‌ನಲ್ಲಿ ಪೂರ್ಣಗೊಂಡಿದ್ದ ಪ್ರತಿಮೆಯ ಶಿರಭಾಗವನ್ನು ಟ್ರೊಕಾಡೆರೊ ಅರಮನೆಯ ತೋಟದಲ್ಲಿ ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಇತರೆ ಭಾಗಗಳನ್ನು ಚ್ಯಾಂಪ್ಸ್ ಡಿ ಮಾರ್ಸ್‌ನಲ್ಲಿ ಪ್ರದರ್ಶಿಸಲಾಯಿತು.
1877ರ ಕಾಂಗ್ರೆಸ್‌ನಲ್ಲಿ ಪ್ರತಿಮೆಗೆ ಸ್ಥಳಾವಕಾಶ ನೀಡಲು ಮಸೂದೆಯೊಂದು ಅನುವು ಮಾಡಿಕೊಟ್ಟಿತು. ಅದರಂತೆ, ನ್ಯೂಯಾರ್ಕ್ ಬಂದರಿನಲ್ಲಿ ಪ್ರತಿಮೆ ಪ್ರತಿಷ್ಟಾಪನೆಗೆ, ಬಾರ್ತೊಲ್ಡಿಯ ಇಚ್ಛೆಯಂತೆ ಜನರಲ್ ವಿಲಿಯಮ್ ಟೆಕಮ್ಸೆಹ್ ಷರ್ಮನ್ ಸ್ಥಳ ಆಯ್ಕೆ ಮಾಡಿದ. ಐಸಾಕ್ ಬೆಡ್ಲೊ ಎಂಬಾತನ ನೆನಪಿನಲ್ಲಿ ಬೆಡ್ಲೊಸ್ ಐಲೆಂಡ್ ಹೆಸರಿನ ಈ ದ್ವೀಪದಲ್ಲಿ ಷರ್ಮನ್ ಕಾಮಗಾರಿಗಾಗಿ ಅಲ್ಲಿಯೇ ಬೀಡುಬಿಟ್ಟ. ಅಲ್ಲಿ ಈಗಾಗಲೇ ಫೊರ್ಟ್ ವುಡ್ ಎಂಬ 19ನೆಯ ಶತಮಾನಕ್ಕೆ ಸೇರಿದ ನಕ್ಷತ್ರಾಕಾರದ ಕೋಟೆಯ-ನಿರ್ಮಾಣವೊಂದಿತ್ತು. ಪ್ರತಿಮೆಯ ನಿರ್ಮಾಣದತ್ತ ಮೊದಲ ಹೆಜ್ಜೆಯ ಸಂಕೇತವಾಗಿ ಅಮೆರಿಕಾ ಸಂಯುಕ್ತ ಸಂಸ್ಥಾನದ ಫ್ರಾನ್ಸ್ ರಾಯಭಾರಿ ಸಚಿವ ಲೆವಿ ಪಿ. ಮಾರ್ಟನ್ ಮೊದಲ ಗಟ್ಟಿ ತಂತಿಯ ಮೊಳೆ ಸೇರಿಸುವ ಮೂಲಕ ಸಾಂಕೇತಿಕ ಕಾರ್ಯಾರಂಭಗೊಳಿಸಿದರು.
1879ರ ಫೆಬ್ರವರಿ 18ರಂದು ಬಾರ್ತೊಲ್ಡಿಗೆ ವಿನ್ಯಾಸದ ಪೆಟೆಂಟ್ ಯು.ಎಸ್ ಪೇಟೆಂಟ್ D೧೧,೦೨೩(ಹಕ್ಕು ಸ್ವಾಮ್ಯ) ಲಭಿಸಿತು. ಅದರಲ್ಲಿ ಪ್ರತಿಮೆಯ ವಿನ್ಯಾಸ ಹೀಗೆಂದು ವರ್ಣಿಸಲಾಗಿತ್ತು: 'ಪ್ರತಿಮೆಯು ಜಗತ್ತಿಗೆ ಜ್ಞಾನಜ್ಯೋತಿಯನ್ನು ಪ್ರತಿನಿಧಿಸುವ (ಸ್ವಾತಂತ್ರ್ಯ) ಲಿಬರ್ಟಿಯನ್ನು ನಿರೂಪಿಸುತ್ತದೆ; ಅದು ವಸ್ತ್ರಧಾರಿ ಮಹಿಳೆಯ ರೂಪ ಹೊಂದಿದ್ದು, ಮೇಲೆತ್ತಿದ ಬಲಗೈನಲ್ಲಿ ಪಂಜು, ಎಡಗೈಯಲ್ಲಿ ಕೆತ್ತಲ್ಪಟ್ಟ ಅಕ್ಷರಗಳ ಫಲಕವೊಂದಿದೆ, ಆಕೆಯ ತಲೆಯ ಮೇಲೆ ಕಿರೀಟವಿದೆ.' ಪೆಟೆಂಟ್‌ನಲ್ಲಿ ಶಿರಸ್ಸಿನ ಭಾಗವನ್ನು 'ಉನ್ನತವಾದರೂ ಶಾಂತಸ್ವಭಾವದ, ಗಾಢವಾದ ಲಕ್ಷಣಗಳುಳ್ಳದ್ದು' ಎಂದು ವರ್ಣಿಸಲಾಗಿದೆ; 'ಎಡಗಾಲಿನ ಮೇಲೆ ಭಾರ ಹೊತ್ತಿರುವ ಶರೀರವು ಸ್ವಲ್ಪ ಎಡಕ್ಕೆ ವಾಲಿದೆ; ಇಡೀ ಆಕೃತಿಯು ಸಮತೋಲನ ಸ್ಥಿತಿಯಲ್ಲಿದೆ' ಎಂದು ಪ್ರತಿಮೆಯ ಶಾರೀರವನ್ನು ಬಣ್ಣಿಸಿದೆ; 'ಯಾವುದೇ ರೀತಿಯ ಕೆತ್ತನೆಯ ದೊಡ್ಡ ಅಥವಾ ಸಣ್ಣ ಪ್ರತಿಮೆಯಾಗಲಿ, ಉಬ್ಬು ಶಿಲ್ಪಕಲೆಯಾಗಲಿ, ಶಿಲೆ, ಉಕ್ಕು, ಟೆರಾಕೊಟಾ, ಪ್ಲ್ಯಾಸ್ಟರ್ ಆಫ್ ಪ್ಯಾರಿಸ್ ಅಥವಾ ಇತರೆ ಪ್ಲಾಸ್ಟಿಕ್ ರಚನೆಯಲ್ಲಿ,' ಉಳಿದ ನಿರೂಪಣೆಗಳನ್ನು ಒಳಗೊಂಡಿದೆ.[೧೪]
ಫ್ರಾನ್ಸ್‌ನಲ್ಲಿ ಪ್ರತಿಮೆಗಾಗಿ ನಿಧಿ ಸಂಗ್ರಹ ಕಾರ್ಯವು 1882ರ ಜುಲೈ ತಿಂಗಳಲ್ಲಿ ಪೂರ್ಣಗೊಂಡಿತು. ವಿಲಿಯಮ್ ಎಂ. ಇವರ್ಟ್ಸ್ ಮುಂದಾಳುತ್ವದಲ್ಲಿ ಪದತಲದ ಪೀಠದ ವೆಚ್ಚಕ್ಕಾಗಿ ನಡೆದ ಧನ ಸಂಗ್ರಹ ಕಾರ್ಯವು ನಿಧಾನಗತಿಯಲ್ಲಿ ಸಾಗಿತು. ಹಾಗಾಗಿ, 1883ರಲ್ಲಿ ಧನಸಹಾಯಕ್ಕಾಗಿ (ಪುಲಿಟ್ಜರ್ ಪ್ರಶಸ್ತಿಯ ಆಯೋಜಕ) ಪ್ರಕಾಶಕ ಜೋಸೆಫ್ ಪುಲಿಟ್ಜರ್ ತನ್ನ ಪತ್ರಿಕೆ 'ದಿ ವರ್ಲ್ಡ್ 'ನ ಸಂಪಾದಕೀಯದ ಪುಟಗಳಲ್ಲಿ ಈ ವಿಷಯ ಪ್ರಸ್ತಾಪಿಸಿದ. ಪೀಠದ ನಿರ್ಮಾಣಕ್ಕಾಗಿ ದೇಣಿಗೆ ನೀಡದ ಶ್ರೀಮಂತರು ಮತ್ತು ದೇಣಿಗೆ ನೀಡಲು ಶ್ರೀಮಂತರೆಡೆಗೆ ಕೈ ತೋರಿಸುವ ಮಧ್ಯಮವರ್ಗದ ಜನರನ್ನು ಪುಲಿಟ್ಜರ್ ತನ್ನ ಪತ್ರಿಕೆಯಲ್ಲಿ ಟೀಕಿಸಿದ.[೧೫] ಈ ಯತ್ನಕ್ಕೆ ಅವರ ಅಭಿಯಾನವು ಪ್ರಮುಖ, ಕೊಡುಗೆಯಾಗಿತ್ತು. ಆದರೆ, ಅಂತಿಮವಾಗಿ ಸೆನೇಟರ್ ಇವರ್ಟ್ಸ್ ಮತ್ತು ಆತ ಅಧ್ಯಕ್ಷತೆ ವಹಿಸಿದ್ದ ಅಮೆರಿಕನ್ ಸಮಿತಿಯು ಈ ಹಂತದಲ್ಲಿ ಪೀಠಕ್ಕಾಗಿ ಅಗತ್ಯವಿರುವ ನಿಧಿಯಲ್ಲಿ ಬಹುಪಾಲು ಶೇಖರಣೆ ಮಾಡಿತ್ತು.
ಪ್ರತಿಮೆಯ ನಿರ್ಮಾಣವು ಫ್ರಾನ್ಸ್‌ನಲ್ಲಿ 1884ರ ಜುಲೈ ತಿಂಗಳಲ್ಲಿ ಪೂರ್ಣಗೊಂಡಿತು. ಅಮೆರಿಕನ್ ಶಿಲ್ಪಿ ರಿಚರ್ಡ್ ಮಾರಿಸ್ ಹಂಟ್ ವಿನ್ಯಾಸ ಮಾಡಿದ ಪೀಠದ ಮೂಲೆಗಲ್ಲನ್ನು 1884ರ ಆಗಸ್ಟ್ 5ರಂದು ಪ್ರತಿಷ್ಠಾಪಿಸಲಾಯಿತು. ಆದರೆ, ನಿಧಿಯ ಕೊರತೆಯಿಂದಾಗಿ ನಿರ್ಮಾಣ ಕಾರ್ಯವನ್ನು 1885ರ ಜನವರಿಯಲ್ಲಿ ಸ್ಥಗಿತಗೊಳಿಸಲಾಯಿತು. ಮಾರ್ಚ್ 1885ರಲ್ಲಿ ಜೋಸೆಫ್ ಪುಲಿಟ್ಜರ್ ಅವರು ನಿಧಿಸಂಗ್ರಹಣಾ ಅಭಿಯಾನಕ್ಕೆ ಮರುಜೀವ ನೀಡಿದ್ದರ ಫಲವಾಗಿ 1885ರ ಮೇ 11ರಂದು ನಿರ್ಮಾಣಕ್ಕೆ ಮತ್ತೆ ಚಾಲನೆ ದೊರೆಯಿತು. ನಲ್ವತ್ತಾರು ಹಂತಗಳ ಶಿಲಾನಿರ್ಮಾಣದ ಕೆಲಸದಲ್ಲಿ ಮುವತ್ತೆಂಟು ಇನ್ನೂ ಬಾಕಿ ಉಳಿದಿದ್ದವು..
ಪ್ರತಿಮೆಯನ್ನು ಹೊತ್ತ ಇಸೆರ್ ಎಂಬ ಫ್ರೆಂಚ್ ಹಡಗು, 1885ರ ಜೂನ್ 17ರಂದು ನ್ಯೂಯಾರ್ಕ್ ಬಂದರು ತಲುಪಿತು. ಸಾಗಣೆಯು ಸುಲಭವಾಗಲೆಂದು ಪ್ರತಿಮೆಯ ವಿವಿಧ 350 ಭಾಗಗಳನ್ನು ಬಿಡಿಯಾಗಿ ಬೇರ್ಪಡಿಸಿ 214 ಪೆಟ್ಟಿಗೆಗಳಲ್ಲಿ ಸುರಕ್ಷಿತಗೊಳಿಸಲಾಗಿತ್ತು. (ಮೊದಲೇ ಪೂರ್ಣಗೊಂಡಿದ್ದ ಬಲಗೈ ಭಾಗ ಮತ್ತು ಪಂಜನ್ನು ಫಿಲಡೆಲ್ಫಿಯಾದ ಸೆಂಟೆನಿಯಲ್ ಎಕ್ಸ್‌ಪೊಸಿಷನ್‌ನಲ್ಲಿ, ಆನಂತರ ನ್ಯೂಯಾರ್ಕ್ ನಗರದ ಮೆಡಿಸನ್ ಸ್ಕ್ವೇರ್‌ನಲ್ಲಿ ಪ್ರದರ್ಶಿಸಲಾಗಿತ್ತು.) ಫ್ರೆಂಚ್ ಹಡಗನ್ನು ನ್ಯೂಯಾರ್ಕ್ ಬಂದರಿನಲ್ಲಿರುವ ಬೆಡ್ಲೊಸ್ ಐಲೆಂಡ್‌ಗೆ ಒಯ್ಯಲು ಪೈಲಟ್ ಜೋಸೆಫ್ ಹೆಂಡರ್ಸನ್ ಬೆಂಗಾವಲಿಗಾಗಿ ನಿಯೋಜಿತನಾದ. ಈ ಅವಿಸ್ಮರಣೀಯ ಸಂದರ್ಭ ಮತ್ತು ಪೈಲಟ್ (ಹಡಗು ಚಾಲಕ) ಹೆಂಡರ್ಸನ್‌ನ ಛಾಯಾ ಚಿತ್ರವು ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡವು. 'ಆಕಾಶದ ಕಿಟಕಿಯಿಂದ ತೂರಿದ ಈತ ನೇರವಾಗಿ ಇಸೆರ್‌ನ ಹಡಗಿಗಿಳಿದ. ಈ ಕೆಲಸಕ್ಕಾಗಿಯೇ ಹಡಗುಕಟ್ಟೆಗೆ ಬಂದ ಪೈಲಟ್ ಹೆಂಡರ್ಸನ್' ಎಂದು ವಿವರಿಸಲಾಗಿತ್ತು.[೧೬]
ಪೀಠನಿರ್ಮಾಣಕ್ಕಾಗಿ ನಿಧಿಸಂಗ್ರಹವು 1185ರ ಆಗಸ್ಟ್ 11ರಂದು ಪೂರ್ಣಗೊಂಡಿತ್ತು. ವಿನ್ಯಾಸದ ಕಾಮಗಾರಿ 1886ರ ಏಪ್ರಿಲ್ 22ರಂದು ಪೂರ್ಣಗೊಂಡಿತ್ತು. ಪೀಠದ ಕೊನೆಯ ಶಿಲೆಯನ್ನು ಜೋಡಿಸಿದಾಗ ಗಾರೆ ಕೆಲಸದವರೆಲ್ಲರೂ ತಮ್ಮ ತಮ್ಮ ಜೇಬುಗಳಿಂದ ಸಂಗ್ರಹಿಸಿದ ಬೆಳ್ಳಿಯ ನಾಣ್ಯಗಳನ್ನು ಗಾರೆಯೊಳಗೆ ಸುರಿಮಳೆಗೈದರು. ಪೀಠದ ಭಾರೀ ಕಲ್ಲುಕೆಲಸದಲ್ಲಿ ನಾಲ್ಕು ಕಬ್ಬಿಣ ತೊಲೆಗಳ ಎರಡು ವಿಭಾಗಗಳಿವೆ. ಇವುಗಳಿಗೆ ಕಬ್ಬಿಣದ ಕಟ್ಟು ಕಂಬಿಗಳನ್ನು ಜೋಡಿಸಿ ಮೇಲಕ್ಕೆ ಒಯ್ಯಲಾಗಿದ್ದು, ಐಫೆಲ್ ಗೋಪುರದಂತೆ ವಿನ್ಯಾಸ ಮಾಡಲಾಗಿದೆ. ಹಾಗಾಗಿ, ಸ್ವಾತಂತ್ರ್ಯದ ಪ್ರತಿಮೆ ಯು ತನ್ನ ಪೀಠದೊಂದಿಗೆ ಪ್ರತಿಷ್ಠಾಪಿತವಾಗಿದೆ.
ಪೀಠದ ನಿರ್ಮಾಣ ಸಂಪೂರ್ಣವಾಗುವವರೆಗೂ ಪ್ರತಿಮೆಯ ಭಾಗಗಳು ಹನ್ನೊಂದು ತಿಂಗಳ ಕಾಲ ಪೆಟ್ಟಿಗೆಗಳಲ್ಲಿಯೇ ಬಂಧಿಯಾಗಿದ್ದವು. ನಂತರ ಅದನ್ನು ಹೊರತೆಗೆದು, ನಾಲ್ಕು ತಿಂಗಳುಗಳ ನಂತರ ಜೋಡಿಸಲಾಯಿತು. ಅಕ್ಟೋಬರ್ 28ರಂದು 1886ರಲ್ಲಿ, ಸಾವಿರಾರು ಜನ ವೀಕ್ಷಕರ ಎದುರು, ರಾಷ್ಟ್ರಾಧ್ಯಕ್ಷ ಗ್ರೊವರ್ ಕ್ಲೆವೆಲೆಂಡ್ ಸ್ವಾತಂತ್ರ್ಯದ ಪ್ರತಿಮೆಯನ್ನು ಅನಾವರಣಗೊಳಿಸಿದರು. (ಇದಕ್ಕೆ ಮುಂಚೆ, ಪೀಠದ ನಿರ್ಮಾಣಕ್ಕಾಗಿ ನ್ಯೂಯಾರ್ಕ್ ಶಾಸಕಾಂಗವು ಮಂಜೂರು ಮಾಡಿದ್ದ $50,000 ದೇಣಿಗೆಯ ಮಸೂದೆಯನ್ನು ಆಗ ನ್ಯೂಯಾರ್ಕ್ ರಾಜ್ಯಪಾಲರಾಗಿದ್ದ ಕ್ಲೆವೆಲೆಂಡ್ ನಿರಾಕರಿಸಿದ್ದರು (ವೀಟೊ ಮಾಡಿದ್ದರು)). ಸ್ವಾತಂತ್ರ್ಯದ ಪ್ರತಿಮೆ ಜೋಡಣೆಯಾಗಿ 10 ವರ್ಷಗಳ ನಂತರ, ಅಮೆರಿಕಾ ಸಂಯುಕ್ತ ಸಂಸ್ಥಾನವು ಫ್ರಾನ್ಸ್‌ನಲ್ಲಿರುವ ಹಲವು ಸಹಾಯಾರ್ಥ ದತ್ತಿ ಸಂಸ್ಥೆಗಳಿಗೆ $10,000,000 USD ದಾನ ನೀಡಿತು.
1886ರಿಂದ 1902ರ ವರೆಗೆ ಸ್ವಾತಂತ್ರ್ಯದ ಪ್ರತಿಮೆಯು ದೀಪಸ್ತಂಭವಾಗಿ ಕಾರ್ಯ ನಿರ್ವಹಿಸಿತು.[೧೭] ಆ ಸಮಯದಲ್ಲಿ, ದೀಪಸ್ತಂಭಗಳ ನಿರ್ವಹಣೆಯನ್ನು U.S. ದೀಪಸ್ತಂಭ ಮಂಡಳಿಯು ವಹಿಸಿಕೊಂಡಿತ್ತು. ದೀಪಸ್ತಂಭಕ್ಕೆ ಕಾವಲುಗಾರನೊಬ್ಬನನ್ನು ನೇಮಿಸಲಾಗಿತ್ತು. ಇದರ ವಿದ್ಯುದ್ದೀಪದ ಪ್ರಭೆಯನ್ನು ಸಮುದ್ರದಲ್ಲಿ 24 ಮೈಲಿಗಳ (39 ಕಿ.ಮೀ.ಗಳ) ದೂರದ ಅಂತರದಲ್ಲಿ ಕಾಣಬಹುದಾಗಿದೆ. ಇಡೀ ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲೇ ವಿದ್ಯುತ್ ಬಳಸುವ ಮೊದಲ ದೀಪಸ್ತಂಭವಾಗಿತ್ತು.[೧೮] ದೀಪಕ್ಕಾಗಿಯೇ ವಿದ್ಯುತ್ತು ಪೂರೈಸಲು ಆ ದ್ವೀಪದಲ್ಲೊಂದು ವಿದ್ಯುತ್ ಕೇಂದ್ರವಿತ್ತು.[೧೭]
ಪ್ರತಿಮೆಯ ಸುತ್ತ ವಿಮಾನ ಹಾರಾಟ ನಡೆಸಿದ ಮೊದಲ ವ್ಯಕ್ತಿ ವಿಲ್ಬರ್ ರೈಟ್. ಹಡ್ಸನ್-ಫುಲ್ಟನ್ ಉತ್ಸವದ ಅಂಗವಾಗಿ ಈತನು 1909ರ ಸೆಪ್ಟೆಂಬರ್ 29ರಂದು ಪ್ರತಿಮೆಯ ಸೊಂಟದ ವರೆಗಿನ ಮಟ್ಟದಲ್ಲಿ ವಿಮಾನ ಹಾರಾಟ ನಡೆಸಿ ಗಮನ ಸೆಳೆಯುವಕಾರ್ಯ ಮಾಡಿದ. ಲಾಂಗ್ ಐಲೆಂಡ್‌ನಲ್ಲಿರುವ ಮೊಯ್ಸಂಟ್ ಸ್ಕೂಲ್ ಆಫ್ ಏವಿಯೆಷನ್‌ನಿಂದ ಯುವ ಪೈಲಟ್‌ಗಳ ಗುಂಪೊಂದು 1913ರಲ್ಲಿ ಪದವಿ ಸ್ವೀಕರಿಸಿತು. ಇವರಲ್ಲಿ, ಪ್ರತಿಮೆಯ ಮೇಲ್ಭಾಗದಲ್ಲಿ ವಿಮಾನ ಹಾರಾಟ ನಡೆಸಲು ಜ್ಯುವಾನ್ ಪಾಬ್ಲೊ ಅಲ್ಡಸೊರೊ ಎಂಬ ಮೆಕ್ಸಿಕನ್ ಪೈಲಟ್ ಪದವೀಧರ ಆಯ್ಕೆಯಾದ. ಉಳಿದ ಎಲ್ಲಾ ಪದವೀಧರರು ಆನಂತರ ಅರ್ಲಿ ಬರ್ಡ್ಸ್ ಆಫ್ ಏವಿಯೆಷನ್‌ನ ಸದಸ್ಯರಾದರು.
1916ರಲ್ಲಿ ಪ್ರತಿಮೆಯ ಆಧಾರದ ಅಡಿಪಾಯದ ಸುತ್ತಲೂ ಹೊನಲು ದೀಪದ ಪ್ರಕಾಶವನ್ನು ವ್ಯವಸ್ಥೆಗೊಳಿಸಲಾಯಿತು.[೧೯] ಅದೇ ವರ್ಷ,ಬ್ಲ್ಯಾಕ್ ಟಾಮ್ ವಿಸ್ಪೋಟದ ಕಾರಣ, ಪ್ರತಿಮೆ ಮತ್ತು ಅದು ಒಳಗೊಂಡಿರುವ ವಸ್ತುಗಳಿಗೆ ಸುಮಾರು $100,000ರಷ್ಟು ಮೌಲ್ಯದ ಹಾನಿಯುಂಟಾಯಿತು (2008ರ ಡಾಲರ್ ಲೆಕ್ಕದಲ್ಲಿ $1.98 ದಶಲಕ್ಷ[೨೦]). ಪ್ರತಿಮೆಗೆ ಸಂಭವಿಸಿದ ಈ ಹಾನಿಯ ಘಟನೆಯಿಂದಾಗಿ ಬಹು ಸಮಯದವರೆಗೆ ಸಂದರ್ಶಕರಿಗೆ ಪ್ರವೇಶ ನಿರ್ಭಂದಿಸಲಾಯಿತು. ಇದೇ ವರ್ಷ 1916ರಲ್ಲಿ, ಮೌಂಟ್ ರಷ್ಮೋರ್‌ನ ಶಿಲ್ಪಿ ಗುಟ್ಜನ್ ಬೊರ್ಗ್ಲುಮ್ ಮೂಲ ತಾಮ್ರದ ಪಂಜನ್ನು ಮಾರ್ಪಾಟುಗೊಳಿಸಿದ. ಪಂಜಿನ ಜ್ವಾಲೆಯಲ್ಲಿರುವ ತಾಮ್ರದ ಬಹುಪಾಲನ್ನು ಕತ್ತರಿಸಿ ಅದರ ಜಾಗದಲ್ಲಿ ಗಾಜಿನ ಫಲಕಗಳನ್ನು ಜೋಡಿಸಿ ಒಳಭಾಗದಲ್ಲಿ ಬೆಳಕಿನ ವ್ಯವಸ್ಥೆಯನ್ನು ಅಳವಡಿಸಿದ.[೨೧] ಈ ಮಾರ್ಪಾಡುಗಳ ನಂತರ, ಮಳೆಯ ನೀರು ಹಾಗೂ ಹಿಮ ಕರಗುವಿಕೆಯ ಕಾರಣ ಪಂಜು ತೀವ್ರವಾಗಿ ಸೋರಿಕೆಯಾಯಿತು. ಇದರಿಂದಾಗಿ ಪ್ರತಿಮೆಯ ಒಳಭಾಗದಲ್ಲಿನ ಕಬ್ಬಿಣ ಮತ್ತು ಉಕ್ಕಿನ ಭಾಗಗಳು ಬಹು ಬೇಗ ತುಕ್ಕು ಹಿಡಿದವು. ರಾಷ್ಟ್ರಾಧ್ಯಕ್ಷ ಫ್ರಾಂಕ್ಲಿನ್ ಡಿ. ರೂಸ್ವೆಲ್ಟ್, ಪ್ರತಿಮೆಯ ಐವತ್ತನೆಯ ವಾರ್ಷಿಕೋತ್ಸವದಂದು ಇದನ್ನು (28 ಅಕ್ಟೋಬರ್ 1936) ಪುನಃ ಅನಾವರಣಗೊಳಿಸಿದರು.
ಕಾಂಗ್ರೆಸ್ ಅಂಗೀಕರಿಸಿದ ನಿರ್ಣಯದಂತೆ, 1956ರಲ್ಲಿ ಬೆಡ್ಲೊಸ್ ಐಲೆಂಡ್‌ನ್ನು ಅಧಿಕೃತವಾಗಿ ಲಿಬರ್ಟಿ ಐಲೆಂಡ್ ಎಂದು ಮರುನಾಮಕರಣ ಮಾಡಲಾಯಿತು. ಆದರೂ, 20ನೆಯ ಶತಮಾನದ ಆರಂಭದಿಂದಲೇ ಈ ದ್ವೀಪವನ್ನು ಅನೌಪಚಾರಿಕವಾಗಿ ಲಿಬರ್ಟಿ ಐಲೆಂಡ್ ಎಂದೇ ಕರೆಯಲಾಗುತ್ತಿತ್ತು. ನ್ಯಾಷನಲ್ ಪಾರ್ಕ್ ಸರ್ವಿಸ್ ಆಡಳಿತದಲ್ಲಿರುವ ಎಲ್ಲಾ ಐತಿಹಾಸಿಕ ಸ್ಥಳಗಳಂತೆ, ಎಲಿಸ್ ಐಲೆಂಡ್ ಮತ್ತು ಲಿಬರ್ಟಿ ಐಲೆಂಡ್ ಜೊತೆಗೆ ಸ್ವಾತಂತ್ರ್ಯದ ಪ್ರತಿಮೆ, ರಾಷ್ಟ್ರೀಯ ಸ್ಮಾರಕವನ್ನು, 1966ರ ಅಕ್ಟೋಬರ್ 15ರಂದು ಐತಿಹಾಸಿಕ ಸ್ಥಳಗಳ ರಾಷ್ಟ್ರೀಯ ದಾಖಲಾತಿಯ ಪ್ರೇಕ್ಷಣೀಯ ಪಟ್ಟಿಗೆ (ನ್ಯಾಷನಲ್ ರಿಜಿಸ್ಟರ್ ಆಫ್ ಹಿಸ್ಟಾರಿಕ್ ಪ್ಲೇಸೆಸ್) ಸೇರಿಸಲಾಯಿತು.[೨೨]
ಮುಂಚೆ 'ಫೊರ್ಟ್ ವುಡ್'ನ ಮೇಲ್ಭಾಗದ ಪೀಠಕ್ಕೆ ಅಂಟಿಕೊಂಡು ನಿರ್ಮಿಸಲಾದ ಕಟ್ಟಡದಲ್ಲಿದ್ದ ಅಮೆರಿಕನ್ ಮ್ಯುಸಿಯಮ್ ಆಫ್ ಇಮಿಗ್ರೇಷನ್ ವಸ್ತು ಸಂಗ್ರಹಾಲಯವನ್ನು ರಾಷ್ಟ್ರಾಧ್ಯಕ್ಷ ರಿಚರ್ಡ್ ಎಂ.ನಿಕ್ಸನ್ 1972ರಲ್ಲಿ ಸಮರ್ಪಿಸಿದರು.[೨೩] 1984ರಲ್ಲಿ, ಸ್ವಾತಂತ್ರ್ಯದ (ಸ್ಟ್ಯಾಚ್ಯೂ ಆಫ್ ಲಿಬರ್ಟಿ) ಪ್ರತಿಮೆಯನ್ನು ವಿಶ್ವ ಪರಂಪರೆಯ ಸ್ಥಳಗಳ ಪಟ್ಟಿಗೆ ಸೇರಿಸಲಾಯಿತು.[೨೪] 2007ರಲ್ಲಿ ವಿಶ್ವದ ಏಳು ಅದ್ಭುತಗಳ ಹೊಸ ಪಟ್ಟಿಗಾಗಿ ನಡೆದ ಸ್ಪರ್ಧೆಯಲ್ಲಿ ಅಂತಿಮ ಸುತ್ತಿಗೆ ಬಂದವುಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು.
ಮುಖಕ್ಕೆ ಪ್ರೇರಣೆ
[ಬದಲಾಯಿಸಿ]ದೃಢೀಕರಿಸದ ಹಲವಾರು ಮೂಲಗಳು ಪ್ರತಿಮೆಯ ಮುಖಾರವಿಂದಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳನ್ನು ಸೂಚಿಸುತ್ತವೆ. ಇವುಗಳಲ್ಲೊಂದು ಆಗತಾನೆ ವಿಧವೆಯಾದ ಇಸಾಬೆಲಾ ಯುಜೆನೀ ಬೊಯರ್‌ಳ ಮುಖದ ರೂಪದಂತಿದೆ ಎಂದಿತ್ತು. ಇಸಾಬೆಲಾ ಹೊಲಿಗೆ ಯಂತ್ರಗಳ ಉದ್ಯಮಿ ಐಸಾಕ್ ಸಿಂಗರ್‌ನ ಪತ್ನಿಯಾಗಿದ್ದಳು. 'ಆಕೆಯು ತನ್ನ ಪತಿಯ ಒರಟು ಸ್ವಭಾವದ ಸಹವಾಸದಿಂದ ಮುಕ್ತಳಾಗಿದ್ದಳು; ಆತನು ಆಕೆಗಾಗಿ ಕೇವಲ ಸಾಮಾಜಿಕವಾಗಿ ಅಗತ್ಯವಾದ ತನ್ನ ಆಸ್ತಿಯನ್ನು ಬಿಟ್ಟುಹೋಗಿದ್ದ: ಆತನ ಸಂಪತ್ತು ಮತ್ತು ಆತನ ಮಕ್ಕಳು. ಪ್ಯಾರಿಸ್‌ನಲ್ಲಿ ತನ್ನ ವೃತ್ತಿಯ ಆರಂಭದ ದಿನಗಳಿಂದಲೂ ಆಕೆ ಚಿರಪರಿಚಿತ ವ್ಯಕ್ತಿತ್ವ ಹೊಂದಿದ್ದಳು. ಸ್ವಾತಂತ್ರ್ಯದ ಪ್ರತಿಮೆಯ ಚಹರೆಯ ಹುಡುಕಾಟದಲ್ಲಿದ್ದ ಬಾರ್ತೊಲ್ಡಿಯ ರೂಪದರ್ಶಿಯಾಗಿ ಅಮೆರಿಕನ್ ಫ್ರೆಂಚ್ ಉದ್ಯಮಿಯ ಪತ್ನಿಯಾಗಿದ್ದ ವಿಧವೆ, ಚೆಲುವೆ ಇಸಾಬೆಲ್ಲಾಳನ್ನು ಆಯ್ಕೆ ಮಾಡಲಾಯಿತು.'[೨೫] 'ಗಡುಸು ಮುಖಚಹರೆಯು' ಬಾರ್ತೊಲ್ಡಿ ಬಹಳ ನೆಚ್ಚಿಕೊಂಡಿದ್ದ ಮುಖಾರವಿಂದಗಳಲ್ಲಿ ಒಂದಾಗಿತ್ತು. ಆದ್ದರಿಂದ ತನ್ನ ತಾಯಿ ಚಾರ್ಲೊಟ್ ಬಾರ್ತೊಲ್ಡಿಯ ಚಹರೆ ಇದೆಂದೂ (1801-1891) ಆ ಉದ್ದೇಶಕ್ಕಾಗಿ ಇದನ್ನು ಮಾದರಿಯನ್ನಾಗಿ ಮಾಡಲಾಗಿದೆ ಎಂದು ಇನ್ನೊಂದು ಮೂಲ ತಿಳಿಸಿದೆ.[೨೬] ಪ್ರತಿಮೆಯ ಮುಖ ಬಾರ್ತೊಲ್ಡಿಯ ತಾಯಿಯದನ್ನು ಹೋಲುತ್ತದೆ ಎಂದು ನ್ಯಾಷನಲ್ ಜಿಯೊಗ್ರಫಿಕ್ ಪತ್ರಿಕೆಯೂ ಸಹ ತಿಳಿಸಿದೆ. ಆದರೆ ಬಾರ್ತೊಲ್ಡಿ ಈ ಹೋಲಿಕೆಯನ್ನು ತಳ್ಳಿಹಾಕುವುದಾಗಲೀ ವಿವರಿಸುವುದಾಗಲೀ ಮಾಡಲಿಲ್ಲ.[೨೭]
ಸಂಕೇತಗಳು
[ಬದಲಾಯಿಸಿ]ಪ್ರತಿಮೆಯ ಶಾಸ್ತ್ರೀಯ ಗೋಚರತೆಯು (ರೊಮನ್ ಸ್ಟೊಲಾ, ಪಾದರಕ್ಷೆಗಳು, ಮುಖದ ಭಾವ) ಗುಲಾಮಿತನದ, ದಮನ ಮತ್ತು ದಬ್ಬಾಳಿಕೆಯಿಂದ ಮುಕ್ತಿ ಪಡೆವ ರೊಮನ್ ಸ್ವಾತಂತ್ರ್ಯ ದೇವತೆ ಲಿಬರ್ಟಾಸ್‌ಳಿಂದ ಪಡೆಯಲಾಗಿದೆ. ಆಕೆಯ ಬಲಗಾಲು ಮುನ್ನುಗ್ಗುವಂತಿದೆ; ಅಥವಾ, ಮುನ್ನಡೆಯನ್ನು ಸೂಚಿಸುತ್ತಿದೆ. ಸ್ವಾತಂತ್ರ್ಯ ಮತ್ತು ಮುಕ್ತಿಯ ಪ್ರತೀಕವಾದ ಈ ಪ್ರತಿಮೆ, ತಟಸ್ಥ ಸ್ಥಿತಿ ಅಥವಾ ಸಾವಧಾನ ಸ್ಥಿತಿಯಲ್ಲಿರದೆ, ಚಲಿಸುತ್ತಿರುವಂತೆ ನಿರೂಪಿಸಲಾಗಿದೆ. ಲಿಬರ್ಟಿ ದೇವತೆಯ ಎಡಗಾಲು ಸಂಕೋಲೆಯನ್ನು ಮೆಟ್ಟಿದೆ. ಅಮೆರಿಕಾ ಸಂಯುಕ್ತ ಸಂಸ್ಥಾನವು ದಮನ ಮತ್ತು ದಬ್ಬಾಳಿಕೆಯಿಂದ[೨೮] ಬಿಡುಗಡೆ ಹೊಂದಲು, ಮುಕ್ತವಾಗಿರಲು ಬಯಸುತ್ತದೆ ಎಂಬುದು ಇದರ ಸಂಕೇತ. ಕಿರೀಟದಲ್ಲಿ ಗೋಚರಿಸುವ ಏಳು ಮೊನೆಚುಗಳು ಅಥವಾ ಮುಕುಟದ ಭಾಗವು ಏಳು ಸಾಗರಗಳು ಮತ್ತು ಏಳು ಖಂಡಗಳನ್ನು ಪ್ರತಿನಿಧಿಸುತ್ತವೆ ಎಂಬುದನ್ನು 1940ರ ದಶಕದಿಂದಲೂ ಘೋಷಿಸಿ ಹೇಳಿಕೊಳ್ಳಲಾಗಿದೆ.[೨೯] ಆಕೆಯ ಪಂಜು ಜ್ಞಾನೋದಯದ ಸಂಕೇತವಾಗಿದೆ. ಆಕೆಯ ಎಡಗೈಯಲ್ಲಿನ ಫಲಕವು ಜ್ಞಾನವನ್ನು ನಿರೂಪಿಸುವುದಲ್ಲದೆ, ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ದಿನಾಂಕವನ್ನು ರೋಮನ್ ಸಂಖ್ಯೆಯಲ್ಲಿ ನಿರೂಪಿಸಿದೆ (ಜುಲೈ IV, MDCCLXXVI).
ಪ್ರತಿಮೆಯ ಶಿರಸ್ಸು ಗ್ರೀಕ್ ಸೂರ್ಯ ದೇವತೆ ಅಪೊಲೊ ಅಥವಾ ರೋಮನ್ ಸೂರ್ಯ ದೇವತೆ ಹೀಲಿಯೊಸ್‌ರನ್ನು ಪ್ರತಿಬಿಂಬಿಸುವಂತಿದೆ. ಇಂತಹ ಕೆತ್ತನೆ ಹೊಂದಿರುವ ಪುರಾತನ ಅಮೃತ ಶಿಲೆ ಈಗ ಗ್ರೀಸ್‌ನ ಕೊರಿಂತ್‌ನಲ್ಲಿರುವ ಕೊರಿಂತ್ ಪುರಾತತ್ವಶಾಸ್ತ್ರ ವಸ್ತು ಸಂಗ್ರಹಾಲಯದಲ್ಲಿದೆ. ಇದನ್ನು ಅಪೊಲೊ ಸೌರ ದೇವತೆಯಂತೆ ನಿರೂಪಿಸಲಾಗಿದೆ. ಸ್ವಾತಂತ್ರ್ಯದ ಪ್ರತಿಮೆಯಂತೆಯೇ ಅಪೊಲೊ ವಸ್ತ್ರ ಧರಿಸಿದ್ದಾನೆ; ತಲೆಯ ಮೇಲೆ ಏಳು ಮೊನಚುಗಳುಳ್ಳ ಹೊಳಪಿನ ಕಿರೀಟ - ಇದು ಲಿಬರ್ಟಿ ಪ್ರತಿಮೆಯ ಪ್ರಭಾಮಂಡಲದಂತೆ ಸೂರ್ಯನ ಕಿರಣಗಳನ್ನು ಪ್ರಕಾಶಿಸುತ್ತದೆ. ಪುರಾತನ ಜಗತ್ತಿನ ಏಳು ಅದ್ಭುತಗಳಲ್ಲಿ ಒಂದಾದ ಪುರಾತನ ಕಾಲೊಸಸ್ ಆಫ್ ರೊಡ್ಸ್ ಹೊಳಪಿನ ಕಿರೀಟ ಧರಿಸಿದ ಹೀಲಿಯೊಸ್‌ನ ಪ್ರತಿಮೆಯಾಗಿತ್ತು. ಎಮ್ಮಾ ಲಾಜಾರಸ್ 1883ರಲ್ಲಿ ರಚಿಸಿದ ದಿ ನ್ಯೂ ಕಾಲೊಸಸ್ ಎಂಬ ನುಡಿಕಾವ್ಯದಲ್ಲಿ ಕೊಲೊಸಸ್ ಉಲ್ಲೇಖಿತವಾಗಿದೆ. ಲಾಜಾರಸ್‌ರ ಕಾವ್ಯವನ್ನು ಆನಂತರ ಕಂಚಿನಲ್ಲಿ ಕೆತ್ತಲಾಯಿತು. 1903ರಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಒಳಭಾಗದಲ್ಲಿ ಅಳವಡಿಸಲಾಯಿತು.
ಅಮೆರಿಕಾ ಸಂಯುಕ್ತ ಸಂಸ್ಥಾನದ ಧ್ಯೇಯ ಮತ್ತು ನೀತಿ-ನಿಯಮ ಮೌಲ್ಯಗಳ ಬಗ್ಗೆ ಈ ಪ್ರತಿಮೆಯು ವಿಭಿನ್ನ ವೀಕ್ಷಕರಿಗೆ, ನೋಡುಗರಿಗೆ ನೆನಪಿನ ಆಳಕ್ಕೆ ತಲುಪಿಸುತ್ತದೆ. ಉದಾಹರಣೆಗೆ, ಪ್ರತಿಮೆಯು ಹೇಗೆ ಅಮೆರಿಕಾ ಸಂಯುಕ್ತ ಸಂಸ್ಥಾನದ ಮುಕ್ತ ದ್ವಾರ ನೀತಿಯ ಸಂಕೇತವಾಯಿತು ಎಂಬುದನ್ನು ಸಾಕ್ಷ್ಯಚಿತ್ರಕಾರ ಕೆನ್ ಬರ್ನ್ಸ್ ವಿವರಿಸಿದ್ದಾನೆ.[೩೦] 'ಪೂರ್ವ ತೀರದಲ್ಲಿರುವ ಸ್ವಾತಂತ್ರ್ಯದ ಪ್ರತಿಮೆಗೆ ಪೂರಕವಾಗುವಂತೆ, ಪಶ್ಚಿಮ ತೀರದಲ್ಲಿ ಸ್ಟ್ಯಾಚ್ಯೂ ಆಫ್ ರೆಸ್ಪಾನ್ಸಿಬಿಲಿಟಿಯೊಂದನ್ನು ಸ್ಥಾಪಿಸಬೇಕು' ಎಂದು ಅಸ್ತಿತ್ವವಾದಿ ವಿಜ್ಞಾನಿ (ಚಿಕಿತ್ಸಕ) ವಿಕ್ಟರ್ ಫ್ರಾಂಕ್ಲ್ ತಮ್ಮ ಕೃತಿ 'ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ 'ನಲ್ಲಿ ಉಲ್ಲೇಖ ಮಾಡಿದ್ದಾರೆ.[೩೧][೩೨]
ಮೂರ್ತಿಶಿಲ್ಪದ ಪೂರ್ವನಿದರ್ಶನಗಳು
[ಬದಲಾಯಿಸಿ]ಮೇಲೆ ತಿಳಿಸಿದಂತೆ ಹೊಳಪಿನ ಕಿರೀಟಕ್ಕೆ ಕಾಲೊಸಸ್ ಆಫ್ ರೋಡ್ಸ್ ಪ್ರೇರಣೆಯಾಗಿರಬಹುದು.
ಕೆನೊವಾದ [೩೩] ಕ್ಲೆಮೆಂಟ್ ಕೆಮಿಲೊ ಪಾಸೆಟ್ಟಿ ಆಧುನಿಕ ಯುಗದಲ್ಲಿ, ವಿಶಿಷ್ಟ ಸಂಕೇತಗಳುಳ್ಳ ಹೊಳಪಿನ ಕಿರೀಟಧಾರೀ ಪ್ರತಿಮೆಗಳನ್ನು ಇಟಲಿಯ ಶಿಲ್ಪಿಗಳು ವಿನ್ಯಾಸಗೊಳಿಸಿದ್ದರು. ಇವುಗಳಲ್ಲಿ ಗಮನಾರ್ಹವಾದದ್ದು ಪೋಪ್ ಕ್ಲೆಮೆಂಟ್ XIIIರ ಗೋರಿಯ ಮೇಲೆ ಕೆನೊವಾದ ಧಾರ್ಮಿಕತೆಯ ಗೂಡಾರ್ಥಯುಳ್ಳ, ಹಾಗೂ ಮಿಲಾನ್‌ನ ಮುಖ್ಯ ಇಗರ್ಜಿ (ಕತಿಡ್ರಲ್)[೩೪] ಪ್ರವೇಶದ್ವಾರದ ಮೇಲೆ ಕೆಮಿಲೊ ಪಾಸೆಟ್ಟಿಯ ಹೊಸ ಒಡಂಬಡಿಕೆಯ ಒಳಾರ್ಥಗಳು ಎಂದು ಹೇಳಬಹುದು.
19ನೆಯ ಶತಮಾನದ ಪೂರ್ವಾರ್ಧ ಫ್ರಾನ್ಸ್‌ನಲ್ಲಿ ಇದು ಸರ್ವೇಸಾಮಾನ್ಯವಾಗಲಾರಂಭಿಸಿತು. ಎಲಿಯಾಸ್ ರಾಬರ್ಟ್‌ರ ಕೃತಿ 'ಫ್ರಾನ್ಸ್ ಅತಿಶ್ರೇಷ್ಠ ಕಲೆ ಮತ್ತು ಕೈಗಾರಿಕೆಗಳು' (1855) ಸೇರಿ ಇತರೆ ಮೂಲಗಳು ಸ್ವಾತಂತ್ರ್ಯದ ಪ್ರತಿಮೆಗೆ ಪ್ರೇರಣೆಯಾಗಿರಬಹುದು.[೩೫]. ಏಳು ಕಿರಣಗಳನ್ನು ನೆನಪಿಸುವ ಹೊಳಪಿನ ಕಿರೀಟ ಧರಿಸಿ ಸುಖಾಸೀನವಾಗಿರುವ ಲಿಬರ್ಟಿಯ ಸಾಂಕೇತಿಕ ನಿರೂಪಣೆಯನ್ನು ಫ್ರೆಂಚ್ ಎರಡನೆಯ ಗಣರಾಜ್ಯದ 'ದಿ ಗ್ರೇಟ್ ಸೀಲ್' (1848-1852) ಪ್ರದರ್ಶಿಸುತ್ತದೆ.
[೩೬][೩೭].[೩೭][೩೮] ಏಳು ಕಿರಣಗಳುಳ್ಳ ಹೊಳಪಿನ ಕಿರೀಟ
ಸ್ವಾತಂತ್ರ್ಯದ ಪ್ರತಿಮೆಯ ಮುಂಚಿನ ಮಾದರಿ ಆವೃತ್ತಿಗಳಲ್ಲಿ ಇವೆರಡು ಪ್ರತಿಮೆಗಳು ಸೇರಿವೆ. 1790ರ ಮೇ 30ರಂದು ನಡೆದ ಒಕ್ಕೂಟದ ಉತ್ಸವಕ್ಕಾಗಿ ಲಯನ್‌ನ ಕಾನ್ಕಾರ್ಡಿಯಾ ದೇವಾಲಯದ ಮೇಲೆ ಒಂದು ಪ್ರತಿಮೆ ಸ್ಥಾಪಿಸಲಾಯಿತು[೩೯].ಸ್ವಾತಂತ್ರ್ಯದ ಪ್ರತಿಮೆಯ ಆರಂಭಿಕ ಮಾದರಿಗಳಲ್ಲಿ ಈ ಪ್ರತಿಮೆಗಳೂ ಸೇರಿವೆ.ಪ್ಯಾರಿಸ್ ನಗರದ ಪ್ಲೇಸ್ ಲೂಯಿಸ್ XV ಎಂಬಲ್ಲಿ ಗಿಲೊಟೀನ್[೪೦] ಪಕ್ಕ ಅಶ್ವಾರೂಢ ಲೂಯಿಸ್ XVರ ಪ್ರತಿಮೆಯಿತ್ತು. ನಂತರ ಈ ಪ್ರತಿಮೆಯ ಸ್ಥಾನದಲ್ಲಿ ಫ್ರಿಜಿಯ ಟೋಪಿ (ತಲೆಯುಡುಗೆ) ಧರಿಸಿ ತನ್ನ ಬಲಗೈಯಲ್ಲಿ ಈಟಿ ಹಿಡಿದು ನಿಂತಿರುವ ಪ್ಲಾಸ್ಟರ್ ಕೃತಿಯನ್ನು ಸ್ಥಾಪಿಸಿ, ಆ ಸ್ಥಳವನ್ನು ಪ್ಲೇಸ್ ಡಿ ಲಾ ರೆವೊಲ್ಯೂಷನ್ ಎಂದು ಮರುನಾಮಕರಣ ಮಾಡಲಾಯಿತು. ಇದನ್ನು ನೋಡಿದ ಮ್ಯಾಮ್ ರೊಲೆಂಡ್ ಉದ್ಗರಿಸಿದ್ದು, 'ಓಹ್ ಲಿಬರ್ಟಿ, ನಿನ್ನ ಹೆಸರಿನಲ್ಲಿ ಏನೆಲ್ಲಾ ದುಷ್ಕೃತ್ಯವೆಸಗಲಾಗಿದೆ!'.[೪೧]
ಫ್ರಿಜಿಯನ್ ಟೋಪಿಕಿರೀಟ ಧರಿಸಿರುವ ಸಾಂಪ್ರದಾಯಿಕ ಸಂಕೇತದ ಪ್ರತಿಮೆಯು ಅಂದು ಮೂಲಭೂತವಾದದ ಕ್ರಾಂತಿಕಾರಿ ಚಳವಳಿಯ[೪೨] ಲಾಂಛನವಾಗಿತ್ತು. ಇದು ಬಿತ್ತರಿಸುವ ಅಭಿಪ್ರಾಯ-ಸಂದೇಶಗಳನ್ನು ಮರೆಮಾಚಲು, ಲಿಬರ್ಟಿ ಹೊಳಪಿನ ಕಿರೀಟ ಧರಿಸುವಂತೆ ಮಾಡಲು ನಿರ್ಧರಿಸಲಾಯಿತು. ಇದೇ ರೀತಿ, ಕ್ಯಾಪಿಟಲ್‌ನ ಸ್ವಾತಂತ್ರ್ಯ ಪ್ರತಿಮೆಯನ್ನು ಫ್ರಿಜಿಯನ್ ಟೋಪಿಯೊಂದಿಗೆ ವಿನ್ಯಾಸ ಮಾಡುವ ಯೋಜನೆಯನ್ನು ಥಾಮಸ್ ಕ್ರಾಫರ್ಡ್ ಕೈಬಿಡಬೇಕಾಯಿತು. ಏಕೆಂದರೆ, ಫ್ರಿಜಿಯನ್ ಟೋಪಿಯು ಗುಲಾಮಗಿರಿಯ ವಿರುದ್ಧದ ಹೋರಾಟದ ಸಂಕೇತವೆಂದು ಜನರು ಪರಿಗಣಿಸುವ ಸಾಧ್ಯತೆಯಿತ್ತು.
ಬಾರ್ತೊಲ್ಡಿ ಸ್ವಾತಂತ್ರ್ಯದ ಪ್ರತಿಮೆ ವಿನ್ಯಾಸಿಸುವ ಮೊದಲೇ ಲಿಬರ್ಟಿಗೆ ಪಂಜಿನ ಲಾಂಛನದ ಅವಿನಾಭಾವ ಸಂಬಂಧವಿತ್ತು. ಜುಲೈ ಕಾಲಮ್‌ನ ಮೇಲೆ ಆಗಸ್ಟಿನ್ ಡ್ಯುಮೊಂಟ್‌ನ ಜೀನಿಯಸ್ ಆಫ್ ಸ್ವಾತಂತ್ರ್ಯದ ಪ್ರತಿಮೆಯೂ ಸಹ ಬಲಗೈಯಲ್ಲಿ ಪಂಜನ್ನು ಹಿಡಿದಿತ್ತು. ಈ ಸ್ಮಾರಕ 1840ರಲ್ಲಿ ಉದ್ಘಾಟನೆಗೊಂಡಿತು. 1866ರಲ್ಲಿ ಜೀನ್-ಬ್ಯಾಪ್ಟಿಸ್ಟ್ ಕೊಪ್ಯೂ ತಮ್ಮ ಕೃತಿ ಇಂಪೀರಿಯಲ್ ಫ್ರಾನ್ಸ್ ಬ್ರಿಂಗಿಂಗ್ ಲೈಟ್ ಟು ದಿ ವರ್ಲ್ಡ್ ಅಂಡ್ ಪ್ರೊಟೆಕ್ಟಿಂಗ್ ಅಗ್ರಿಕಲ್ಚರ್ ಅಂಡ್ ಸಯನ್ಸ್ ನಲ್ಲಿ ಜಗತ್ತಿಗೆ ಬೆಳಕನ್ನು ಕೊಂಡೊಯ್ಯುವ ಕಲ್ಪನೆಯನ್ನು ಪ್ರಸ್ತಾಪಿಸಿದರು.[೪೩] ಆದರೆ, ಹಿಲ್ ಆಫ್ ಚಾಯ್ಲಾಟ್ ಮೇಲೆ ಇಂಟೆಲಿಜೆಂಟ್ ಫ್ರಾನ್ಸ್ ಎನ್ಲೈಟೆನಿಂಗ್ ದಿ ವರ್ಲ್ಡ್ ಎಂಬ ಕಾಲೊಸಸ್ ನಿರ್ಮಿಸಲು ಹೆಕ್ಟರ್ ಹೊರೂ 1868ರಲ್ಲಿ ಮಾಡಿದ ಪ್ರಸ್ತಾಪವು ಕಾರ್ಯಗತವಾಗದೇ ಹೋಯಿತು.[೪೪]
ಭೌತಿಕ ಲಕ್ಷಣಗಳು
[ಬದಲಾಯಿಸಿ]11 ಸೆಪ್ಟೆಂಬರ್ 2001 ರಿಂದ 4 ಜುಲೈ 2009ರ ಅವಧಿಯನ್ನು[೪೫] ಹೊರತುಪಡಿಸಿ ಉಳಿದ ಅವಧಿಗಳಲ್ಲಿ ಪ್ರತಿಮೆಯ ಒಳಭಾಗವು, ಸಾರ್ವಜನಿಕರ ಸಂದರ್ಶನಕ್ಕೆ ಮುಕ್ತವಾಗಿರುತ್ತದೆ. ಸಾರ್ವಜನಿಕರು ಕ್ರೌನ್ ಟಿಕೆಟ್‌ಗಳನ್ನು ಮುಂಗಡವಾಗಿಯೇ ಕೊಂಡುಕೊಳ್ಳಬೇಕು. ಸಾರ್ವಜನಿಕರು ದೋಣಿಯ ಮೂಲಕ ಬಂದಿಳಿದ ನಂತರ, ಮಾಹಿತಿ ಕೇಂದ್ರದಲ್ಲಿ ತಮ್ಮ ಮಾಹಿತಿ ನೋಂದಾಯಿಸಿಕೊಳ್ಳಬೇಕು. ನಂತರ ಪ್ರತಿಮೆಯ ತಳಪಾಯದೆಡೆಗೆ ಹೋಗಿ ಅಲ್ಲಿಂದ ಮೇಲೆ ಹತ್ತಿ ಸ್ಮಾರಕಕ್ಕೆ ಹೋಗಬಹುದು. ಮೇಲ್ಭಾಗದ ತುದಿಗೆ ಹತ್ತಿ ಹೋಗಲು ಡಬಲ್-ಹೀಲಿಕ್ಸ್ ಮೆಟ್ಟಿಲುಗಳ ಸಾಲು ಇದೆ. ಇಲ್ಲಿ 146 ಮೆಟ್ಟಿಲುಗಳಿವೆ. ತಾಮ್ರದ ಪ್ರತಿಮೆಯೊಳಗೆ, ಹೊರಗಡೆಗಿಂತಲೂ ಸುಮಾರು 15ರಿಂದ 20 ಡಿಗ್ರಿ (F)ರಷ್ಟು ಬೆಚ್ಚಗಿನ ವಾತಾವರಣ ಕಾಣಬರುತ್ತದೆ. NPS ಏಕಕಾಲಕ್ಕೆ 10 ಜನರನ್ನು, ಪ್ರತಿ ಗಂಟೆಗೆ ಮೂರು ಗುಂಪುಗಳಂತೆ ಕಿರೀಟದೊಳಗೆ ಪ್ರವೇಶಿಸಲು ಅವಕಾಶ ನೀಡುತ್ತದೆ. 25 ಕಿಟಕಿಗಳ ಮೂಲಕ (ಅತಿ ದೊಡ್ಡ ಕಿಟಕಿ ಸುಮಾರು 18" (46 ಸೆ.ಮೀ.) ಎತ್ತರವಿದೆ) ಇದು ನ್ಯೂಯಾರ್ಕ್ ಬಂದರಿನ ನೋಟದಿಂದ ಕಣ್ಮನ ತಣಿಸುತ್ತದೆ. ಪ್ರತಿಮೆಯು ಬ್ರೂಕ್ಲಿನ್‌ನತ್ತ ಮುಖ ಮಾಡಿದೆ. ಮ್ಯಾನ್‌ಹ್ಯಾಟನ್‌ನ ಬಾನಗೆರೆ ದೃಶ್ಯ ಅಷ್ಟಾಗಿ ಗೋಚರಿಸುವದಿಲ್ಲ. ಆದರೆ ಕಿರೀಟದ ಎಡಭಾಗದಲ್ಲಿರುವ ಅತಿ ಸಣ್ಣ ಕಿಟಕಿಗಳ ಮೂಲಕ ಇದನ್ನು ಸೂಕ್ಷ್ಮವಾಗಿ ಗಮನಿಸಬಹುದು. ದೋಣಿಗಳು ಮತ್ತು ದೋಣಿ ಪ್ರಯಾಣದ ಟಿಕೆಟ್‌ಗಳನ್ನು ಪಡೆವ ಸಮಯ ಹೊರತುಪಡಿಸಿ, ಸಂದರ್ಶಕರು ಮೂರುಗಂಟೆಗೂ ಅಧಿಕ ಕಾಲ ಹೊರಭಾಗದಲ್ಲಿ ಕಾಯಬೇಕಾದ ಸಂದರ್ಭ ಒದಗಬಹುದು.
ಸ್ವಾಭಾವಿಕವಾದ ರಾಸಾಯನಿಕ ಆಮ್ಲದ ಪ್ರಕ್ರಿಯೆಯು ತಾಮ್ರದ ಲವಣಗಳ ಬಿಡುಗಡೆಗೊಳಿಸಿ ಕಿಲುಬಿನ ಹಸಿರು ಬಣ್ಣಕ್ಕೆ ಕಾರಣವಾಗುತ್ತದೆ. ಇದು ನೇರಳೆ-ಹಸಿರು ಕಿಟ್ಟದ ಬಣ್ಣದ್ದಾಗಿರುತ್ತದೆ.[೪೬]
ಪ್ರತಿಮೆಯ ಪದತಲದ ನಿರ್ಮಾಣದಲ್ಲಿ ಬಳಸಲಾದ ಮರಳುಗಲ್ಲನ್ನು ನೈಋತ್ಯ ಸ್ಕಾಟ್ಲೆಂಡ್ನ ಡಂಫ್ರೀಸ್ ಗಡಿಯಲ್ಲಿರುವ ಲೊಕರ್‌ಬ್ರಿಗ್ಸ್ ಕಲ್ಲುಗಣಿಯಿಂದ ತರಲಾಯಿತು.[೪೭]
ಪ್ರತಿಮೆ ಮತ್ತು ಅದರ ವೇದಿಕೆಯ ಪೀಠದೊಳಗೆ 354 ಮೆಟ್ಟಿಲುಗಳಿವೆ. ಪ್ರತಿಮೆಯ ಕಿರೀಟದಲ್ಲಿರುವ ಏಳು ಮೊನಚುಗಳ ಕೆಳಭಾಗ ರತ್ನಖಚಿತವಿದೆ; ಇದರ ಜೊತೆಗೆ 25 ಕಿಟಕಿಗಳಿವೆ. ಪ್ರತಿಮೆಯ ಎಡಗೈಯಲ್ಲಿರುವ ಶಿಲಾ ಬಿಲ್ಲೆಯು ರೋಮನ್ ಅಂಕಿಗಳಲ್ಲಿ ಜುಲೈ 4, 1776 ಎಂದು ಕೆತ್ತನೆಯನ್ನು ತೋರಿಸುತ್ತದೆ. ಈ ದಿನವೇ ಅಮೆರಿಕಾ ಸಂಯುಕ್ತ ಸಂಸ್ಥಾನದ ಸ್ವಾತಂತ್ರ್ಯ ಘೋಷಣೆಯ ಅಂಗೀಕಾರವೆನಿಸಿದೆ. ಎಂತಹ ಬಿರುಗಾಳಿಗೂ ಜಗ್ಗದೇ ಅಲುಗಾಡದಂತೆ ಪ್ರತಿಮೆಯನ್ನು ವಿನ್ಯಾಸಗೊಳಿಸಲಾಗಿದೆ. ಜೋರಾದ ಗಾಳಿ 50 miles per hour (80 km/h) ಬೀಸಿದಾಗ ಪ್ರತಿಮೆ 3 inches (76 mm) ಮತ್ತು ಅದರ ಕೈಯಲ್ಲಿರುವ ಪಂಜು ಅತ್ಯಲ್ಪ ಓಲಾಡುತ್ತದೆ 5 inches (130 mm). ಇದರಿಂದ ಪ್ರತಿಮೆ ಮುರಿದುಬೀಳುವ ಸಂಭವನೀಯತೆ ಕಡಿಮೆ ಅದರಿಂದಾಗಿ ಸ್ವಲ್ಪ ಮಟ್ಟಿಗೆ ಓಲಾಡವ ಮಟ್ಟದಲ್ಲಿರುತ್ತದೆ.
ತಳದಿಂದ ಪಂಜಿನವರೆಗೆ ಎತ್ತರ | 151 ಅಡಿ 1 ಅಂಗುಲ | 46 ಮೀ. |
ಪೀಠದ ಅಡಿಪಾಯ ನೆಲಮಟ್ಟದಿಂದ ಪಂಜಿನ ತುದಿಯ ವರೆಗೆ | 305 ಅಡಿ 1 ಅಂಗುಲ | 93 ಮೀ. |
ಪ್ರತಿಮೆಯ ಹಿಮ್ಮಡಿಯಿಂದ ಶಿರೊಭಾಗದ ನೆತ್ತಿಯವರೆಗೆ | 111 ಅಡಿ 1 ಅಂಗುಲ | 34 ಮೀ. |
ತೋಳುಗಳು | 16 ಅಡಿ 5 ಅಂಗುಲ | 5 ಮೀ. |
ತೋರ್ಬೆರಳು | 8 ಅಡಿ 1 ಅಂಗುಲ | 2.44 ಮೀ. |
ಎರಡನೆಯ ಕೀಲಿನಲ್ಲಿ ಪರಿಧಿ | 3 ಅಡಿ 6 ಅಂಗುಲ | 1.07 ಮೀ. |
ತಲೆಯ ಗಾತ್ರ - ಕೆನ್ನೆಭಾಗದಿಂದ ತಲೆಬುರುಡೆಯ ವರೆಗೆ | 17 ಅಡಿ 3 ಅಂಗುಲ | 5.26 ಮೀ. |
ತಲೆಯ ದಪ್ಪ (ಕಿವಿಯಿಂದ ಕಿವಿಯ ವರೆಗೆ | 10 ಅಡಿ 0 ಅಂಗುಲ | 3.05 ಮೀ. |
ಕಣ್ಣುಗಳ ನಡುವಿನ ಅಂತರ | 2 ಅಡಿ 6 ಅಂಗುಲ | 0.76 ಮೀ. |
ಮೂಗು | 4 ಅಡಿ 6 ಅಂಗುಲ | 1.48 ಮೀ. |
ಬಲಗೈಯು | 42 ಅಡಿ 0 ಅಂಗುಲ | 12.8 ಮೀ. |
ಬಲಗೈ ಹೆಚ್ಚು ದಪ್ಪ ಅಂದರೆ | 12 ಅಡಿ 0 ಅಂಗುಲ | 3.66 ಮೀ. |
ಸೊಂಟ | 35 ಅಡಿ 0 ಅಂಗುಲ | 10.67 ಮೀ. |
ಬಾಯಿಯ ವಿಶಾಲತೆ | 3 ಅಡಿ 0 ಅಂಗುಲ | 0.91 ಮೀ. |
ಫಲಕ | 23 ಅಡಿ 7 ಅಂಗುಲ | 7.19 ಮೀ. |
ಫಲಕದ ಅಗಲ | 13 ಅಡಿ 7 ಅಂಗುಲ | 4.14 ಮೀ. |
ಫಲಕದ ದಪ್ಪ | 2 ಅಡಿ 0 ಅಂಗುಲ | 0.61 ಮೀ. |
ಶಿಲಾ ಪೀಠದ ಎತ್ತರ | 89 ಅಡಿ 0 ಅಂಗುಲ | 27.13 ಮೀ. |
ಅಡಿಪಾಯದ ಎತ್ತರ | 65 ಅಡಿ 0 ಅಂಗುಲ | 19.81 ಮೀ. |
ಪ್ರತಿಮೆಯಲ್ಲಿ ಬಳಸಲಾದ ತಾಮ್ರದ ಪ್ರಮಾಣ [೪೯] | 60,000 ಪೌಂಡ್‌ಗಳು | 27.22 ಮೆಟ್ರಿಕ್ ಟನ್‌ಗಳು |
ಪ್ರತಿಮೆಯಲ್ಲಿ ಬಳಸಲಾದ ಉಕ್ಕಿನಪ್ರಮಾಣ | 250,000 ಪೌಂಡ್‌ಗಳು | 113.4 ಮೆಟ್ರಿಕ್ ಟನ್‌ಗಳು |
ಪ್ರತಿಮೆಯಲ್ಲಿ ಬಳಸಲಾದ ಲೋಹಗಳ ಒಟ್ಟು ತೂಕ | 450,000 ಪೌಂಡ್‌ಗಳು | 204.1 ಮೆಟ್ರಿಕ್ ಟನ್‌ಗಳು |
ತಾಮ್ರದ ಹಾಳೆಯ ದಪ್ಪ | ಒಟ್ಟಾರೆಯ 3/32ನೆಯ ಭಾಗ | 2.4 ಮಿಮೀ. |
ಮೇಲ್ಭಾಗ ಭಾರವಾಗಿರುವಂತೆ ಪ್ರತಿಮೆಯನ್ನು ನಿರ್ಮಿಸಲಾಗಿದೆ. ಏಕೆಂದರೆ ನೆಲಮಟ್ಟದಿಂದ ಪ್ರತಿಮೆಯ ಗೋಚರತೆ ದೃಶ್ಯ ಸಮಾನಾಗಿ ಕಂಡುಬರಲೆಂದು ಈ ರೀತಿ ಮಾಡಲಾಗಿದೆ. 1800ರ ದಶಕದಲ್ಲಿ ಪ್ರತಿಮೆ ವಿನ್ಯಾಸಗೊಂಡಾಗ (ವಿಮಾನ ಸಂಶೋಧನೆಗೂ ಮುಂಚೆ) ಪ್ರತಿಮೆಯತ್ತ ದೃಷ್ಟಿ ಹಾಯಿಸಲು ಇತರೆ ಕೆಲವೇ ಕೋನಮಾಪಕಗಳಿದ್ದವು. ಘೋಸ್ಟ್‌ಬಸ್ಟರ್ಸ್ II ಎಂಬ ಚಲನಚಿತ್ರ ನಿರ್ಮಾಣದ ಸಮಯದಲ್ಲಿ ವಿಶೇಷ ಪರಿಣಾಮಗಳನ್ನು, ಸ್ಪೆಷಲ್ ಎಫೆಕ್ಟ್ಸ್ ಅಳವಡಿಸುವ ತಂತ್ರಜ್ಞರಿಗೆ ಇದು ಸವಾಲೊಡ್ಡಿತು.[೫೦]
ತಾಮ್ರದ ಮೂಲ
[ಬದಲಾಯಿಸಿ]ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಲಾದ ತಾಮ್ರದ ಮೂಲವನ್ನು ಯಾವುದೇ ಐತಿಹಾಸಿಕ ದಾಖಲೆಗಳು ಸ್ಫಷ್ಟಪಡಿಸಿಲ್ಲ. ಫ್ರೆಂಚ್-ಸ್ವಾಮ್ಯದ ವಿಸ್ನೆಸ್ ಗಣಿಯಿಂದ ತಾಮ್ರವನ್ನು ಪಡೆಯಲಾಯಿತೆಂದು ನಾರ್ವೇ ದೇಶದ ಕಾರ್ಮೊಯ್ ಪುರಸಭೆಯಲ್ಲಿನ ಸಾಂಪ್ರದಾಯಿಕ ವಿಸ್ನೆಸ್ ನಲ್ಲಿ ಹೇಳಲಾಗಿದೆ.[೫೧][೫೨] ಫ್ರಾನ್ಸ್ ಮತ್ತು ಬೆಲ್ಜಿಯಮ್ ದೇಶಗಳಲ್ಲಿ ಪರಿಶುದ್ಧಗೊಳಿಸಲಾದ ಇಲ್ಲಿನ ಗಣಿಯ ಅದಿರು, ಹತ್ತೊಂಬತನೆಯ ಶತಮಾನದಲ್ಲಿ ಯುರೋಪ್ಯ ಭಾಗದಲ್ಲಿ ವಿಫುಲ ತಾಮ್ರಕ್ಕೆ ಮೂಲವಾಯಿತು. 1985ರಲ್ಲಿ ಬೆಲ್ ಲ್ಯಾಬ್ಸ್ ಪ್ರಯೋಗಾಲಯವು ಹೊಗೆಯುಗುಳುವ ಪರೀಕ್ಷಾ ತಂತ್ರ (ಎಮಿಷನ್ ಸ್ಪೆಕ್ಟ್ರೊಗ್ರಫಿ) ಬಳಸಿತು. ಸ್ವಾತಂತ್ರ್ಯದ ಪ್ರತಿಮೆಯಲ್ಲಿರುವ ತಾಮ್ರದ ನಮೂನೆ ಮತ್ತು ವಿಸ್ನೆಸ್ ಗಣಿಯ ತಾಮ್ರವನ್ನು ಹೋಲಿಕೆ ಮಾಡಿತು. ಇದರಂತೆ ಎರಡೂ ನಮೂನೆಗಳಲ್ಲಿ ಕಚ್ಚಾ ಅದಿರಿನ ಪ್ರಮಾಣವು ಒಂದೇ ತೆರನಾಗಿತ್ತು. ಆದ್ದರಿಂದ, ಸ್ವಾತಂತ್ರ್ಯದ ಪ್ರತಿಮೆಯಲ್ಲಿ ಬಳಸಿದ ತಾಮ್ರದ ಮೂಲ ನಾರ್ವೇ ಎಂದು ನಿರ್ಣಯಿಸಲಾಯಿತು. ಯೆಕಾಟೆರಿನ್ಬರ್ಗ್ ಅಥವಾ ನಿಝ್ನಿ ಟಗಿಲ್‌ನಲ್ಲಿ ಗಣಿಯಿಂದ ತಾಮ್ರದ ಅದಿರನ್ನು ತರಲಾಗಿತ್ತು ಎಂದು ಇತರೆ ಮೂಲಗಳು ತಿಳಿಸಿವೆ.[೫೩] ಗ್ಯಾಗಟ್-ಗೌತಿಯರ್ ಸಂಸ್ಥೆಯ ಕಾರ್ಯಾಗಾರದಲ್ಲಿ ತಾಮ್ರದ ತಗಡುಗಳನ್ನು ಸೃಷ್ಟಿಸಿ, ಪ್ಯಾರಿಸ್ ನಗರದ ಪಶ್ಚಿಮ ಭಾಗದ ಅಟೆಲಿಯರಸ್ ಮೆಸುರೊನಲ್ಲಿ ಅದಕ್ಕೆ ಆಕಾರ ನೀಡಲಾಯಿತು. ಪಿಯರ್-ಯೂಜೆನ್ ಸಿಕ್ರೆಟಾನ್ ತಾಮ್ರ ಖರೀದಿಗಾಗಿ ಧನಸಹಾಯ ಒದಗಿಸಿತು.
ಲಿಬರ್ಟಿಯ ಶತಮಾನೋತ್ಸವ
[ಬದಲಾಯಿಸಿ]'ಕಾಜ್ ಮಾರ್ಕೆಟಿಂಗ್'ಪ್ರಚಾರ ಆಂದೋಲನದ ಅಭಿಯಾನದ ಮೊದಲ ಫಲಾನುಭವಿಗಳಲ್ಲಿ ಸ್ವಾತಂತ್ರ್ಯದ ಪ್ರತಿಮೆಯೂ ಒಂದು. 1983ರಲ್ಲಿ ಪ್ರಕಟವಾದ ಜಾಹೀರಾತಿನಲ್ಲಿ, 'ಅಮೆರಿಕನ್ ಎಕ್ಸ್‌ಪ್ರೆಸ್ ಕಾರ್ಡ್‌ನೊಂದಿಗೆ ಮಾಡುವ ಪ್ರತಿಯೊಂದು ಖರೀದಿಗೂ, ಪ್ರತಿಮೆಯ ನವೀಕರಣಕ್ಕೆ ಒಂದು ಪೆನ್ನಿ ಸಹಾಯಧನ ನೀಡಲು' ಅಮೆರಿಕನ್ ಎಕ್ಸ್‌ಪ್ರೆಸ್ ತಿಳಿಸಿತ್ತು. ಸ್ವಾತಂತ್ರ್ಯದ ಪ್ರತಿಮೆಯ ನವೀಕರಣಾ ಯೋಜನೆಗಾಗಿ ಈ ಅಭಿಯಾನವು $1.7 ದಶಲಕ್ಷದಷ್ಟು ಮೊತ್ತ ಸಂಗ್ರಹಿಸಿತು.[೫೪] ಶತಮಾನೋತ್ಸವಕ್ಕಾಗಿ $62 ದಶಲಕ್ಷ ಮೊತ್ತವನ್ನೊಳಗೊಂಡ ಪ್ರತಿಮೆಯ ನವೀಕರಣಾ ಕಾರ್ಯಕ್ಕಾಗಿ, 1984ರಲ್ಲಿ ಪ್ರತಿಮೆಯನ್ನು ಪರದೆಯಿಂದ ಮುಚ್ಚಲಾಯಿತು. ಅಂದಿನ ರಾಷ್ಟ್ರಾಧ್ಯಕ್ಷ ರೊನಾಲ್ಡ್ ರೀಗನ್, ಈ ಯೋಜನೆಯ ಉಸ್ತುವಾರಿ ಮತ್ತು ಮೇಲ್ವಿಚಾರಣಾ ಆಯೋಗದ ಅಧ್ಯಕ್ಷ ಹುದ್ದೆಗೆ, ಕ್ರಿಸ್ಲರ್ ವಾಹನ ಸಂಸ್ಥೆಯ ಅಧ್ಯಕ್ಷ ಲೀ ಇಯಾಕೊಕಾರನ್ನು ನೇಮಿಸಿದರು. (ಆದರೆ, ಆನಂತರ, ಸ್ವಹಿತಾಸಕ್ತಿಯ ಘರ್ಷಣೆ ತಡೆಗಟ್ಟಲು ಅನಿವಾರ್ಯವಾಗಿ ಇಯಾಕೊಕಾರನ್ನು ವಜಾ ಮಾಡಲಾಯಿತು).[೫೫] ಪ್ರತಿಮೆಯ ಸುತ್ತಲೂ ಕೆಲಸದವರು ತಾತ್ಕಾಲಿಕವಾಗಿ ಕೆಲಸಮಾಡಲು ಚೌಕಟ್ಟು ಸಾರುವೆ ಕಟ್ಟುಗಳನ್ನು ನಿರ್ಮಿಸಿದರು. ಇದರ ಮೂಲಕ ಪ್ರತಿಮೆಯನ್ನು ಮರೆಮಾಚಿ ನವೀಕರಣ ಕೈಗೊಳ್ಳಲಾಯಿತು. 1986ರ ಜುಲೈ 3ರಂದು ಪ್ರತಿಮೆಯನ್ನು ಪುನರುದ್ಘಾಟಿಸಲಾಯಿತು. ಸಾರುವೆ ಕಟ್ಟುಗಳುಳ್ಳ ಸ್ವಾತಂತ್ರ್ಯದ ಪ್ರತಿಮೆಯ ದೃಶ್ಯವನ್ನು ಡೆಸ್ಪೆರೇಟ್ಲಿ ಸೀಕಿಂಗ್ ಸ್ಯೂಸಾನ್ ' (1984) ಹಾಗೂ 'ಬ್ರೂಸ್ಟರ್ಸ್ ಮಿಲಿಯನ್ಸ್ ' (1985) ಚಲನಚಿತ್ರಗಳಲ್ಲಿ ಅಳವಡಿಸಲಾಯಿತು. ದ್ರವರೂಪದ ಸಾರಜನಕ ಬಳಸಿ ಪ್ರತಿಮೆಯ ಒಳಾಂಗಣ ಕೆಲಸ ಆರಂಭವಾಯಿತು. ದಶಕಗಳಾನಂತರದಿಂದ ಪ್ರತಿಮೆಯ ತಾಮ್ರದ ಒಳಭಾಗಕ್ಕೆ ಲೇಪನವಾಗಿದ್ದ ಏಳು ಪದರಗಳ ಬಣ್ಣವನ್ನು ತೆಗೆಯಲು ಈ ದ್ರವರೂಪದ ಸಾರಜನಕವನ್ನು ಬಳಸಲಾಯಿತು. ಹಾಗಾಗಿ, ಸೋರುವಿಕೆ ಹಾಗೂ ತುಕ್ಕು ತಡೆಗಟ್ಟಲು ಲೇಪಿಸಿದ ಡಾಮರಿನ ಎರಡು ಪದರಗಳ ಲೇಪನ ಮಾತ್ರ ಉಳಿದಿತ್ತು. ಅಡುಗೆ ಸೋಡಾ ದಿಂದ ಉಜ್ಜಿ ಪ್ರತಿಮೆಯ ತಾಮ್ರದ ಭಾಗಕ್ಕೆ ಹಾನಿಯಾಗದೆ ಅಲ್ಲಿ ಅಂಟಿಕೊಂಡಿದ್ದ ಕಿಲುಬು ಮತ್ತು ಡಾಮರಿನ ಕಲೆಯನ್ನು ತೆಗೆಯಲಾಯಿತು.[೫೬] ಹೀಗೆ ಪ್ರತಿಮೆ ಶುದ್ಧೀಕರಣದೊಂದಿಗೆ ಸ್ವಚ್ಚವಾಗಿ ಮತ್ತೆ ಹೊಳಪು ಪಡೆದುಕೊಂಡಿತು. ತಾಮ್ರದ ಹೊಸ ಹೊದಿಕೆಗಳನ್ನು ಒಳಭಾಗಕ್ಕೆ ಅಳವಡಿಸಿ ಚದುರದಂತೆ, ಮೊಳೆಗಳಿಂದ ಒಂದುಗೂಡಿಸಿ ದುರಸ್ತಿ ಮಾಡುವ ಮೂಲಕ, ಪ್ರತಿಮೆಯ ತಾಮ್ರದಲ್ಲಿ ಉಂಟಾಗಿದ್ದ ದೊಡ್ಡ ತೂತುಗಳನ್ನು ಮುಚ್ಚಲಾಯಿತು.[೫೭]
ತಾಮ್ರದ ಪ್ರತಿಮೆಗೆ ಆಸರೆಯಾಗಿದ್ದ 1,350 ಕಬ್ಬಿಣದ ಆಕಾರವುಳ್ಳ ಅಸ್ಥಿ ಪಂಜರದ ಎಲುಬುಗಳಲ್ಲಿನ ಪ್ರತಿಯೊಂದನ್ನೂ ಬದಲಾಯಿಸಬೇಕಿತ್ತು. ಕಬ್ಬಿಣವು ತಾಮ್ರದೊಂದಿಗಿನ ಮಿಶ್ರಣದಿಂದಾಗಿ ರಾಸಾಯನಿಕ ಆಮ್ಲೀಯ ಪ್ರಕ್ರಿಯೆಯಿಂದ ತುಕ್ಕು ಹಿಡಿದು ತನ್ನ 50%ರಷ್ಟು ಗಾತ್ರವನ್ನು ಸವೆಸಿಕೊಂಡಿತ್ತು. ಈ ಸಮಸ್ಯೆಯನ್ನು ಮನಗಂಡ ಬಾರ್ತೊಲ್ಡಿ, ಈ ಲೋಹಗಳನ್ನು ಪ್ರತ್ಯೇಕಿಸಿಡಲು ಕಲ್ಲಿದ್ದಲು/ಡಾಮರು ಮೇಣದ ಸಂಯುಕ್ತವನ್ನು ಬಳಸಿದ್ದ. ಆದರೆ ಇದು ದಶಕಗಳ ಮೊದಲೇ ಮಾಸಿಹೋಗಿತ್ತು. ಕಬ್ಬಿಣದ ಬದಲಾಗಿ,ತುಕ್ಕುರಹಿತ ಉಕ್ಕಿನ (ಸ್ಟೇನ್ಲೆಸ್ ಸ್ಟೀಲ್) ಕಂಬಿಗಳನ್ನು ಪ್ರತಿಮೆಯ ಆಕಾರಕ್ಕೆ ಹೊಂದುವಂತೆ ಅಳವಡಿಸಲಾಯಿತು. ಇದರ ಅಗುಳಿಗಳನ್ನು ಹೆಚ್ಚಿಸಿ ಸವೆತವನ್ನು ಶೂನ್ಯಗೊಳಿಸಲು ಟೆಫ್ಲಾನ್ ಪದರ ಲೇಪಿಸಲಾಗುತ್ತಿತ್ತು.[೫೭]
ಮೇಲೆತ್ತಿದ ಬಲಗೈನ ಒಳಭಾಗದ ವಿನ್ಯಾಸ ಬದಲಾಯಿಸಿ ಪುನರ್ರಚಿಸಲಾಯಿತು. ಐಫೆಲ್‌ನ ಮಧ್ಯದ ಚೌಕಟ್ಟಿಗೆ ಬಲಗೈ 18 ಅಂಗುಲ (0.46 ಮೀ.) ಬಲಕ್ಕೆ ಹಾಗೂ ಮುಂದಕ್ಕೆ ಇರುವಂತೆ ಪ್ರತಿಮೆಯನ್ನು ಸ್ಥಾಪಿಸಲಾಗಿತ್ತು. ಪ್ರತಿಮೆಯ ಶಿರಭಾಗವನ್ನು 24 ಅಂಗುಲದಷ್ಟು (0.61 ಮೀ.) ಎಡಕ್ಕೆ ವಾಲಿಸಲಾಯಿತು. ಇದು ಚೌಕಟ್ಟಿಗೆ ಸಮತಟ್ಟಾಗಿರಲಿಲ್ಲ.[೫೭] ಬಲಗೈ ಮತ್ತು ಶಿರಭಾಗದ ನಿಕಟತೆಯನ್ನು ಗಮನಿಸಿದ ಬಾರ್ತೊಲ್ಡಿ, ಐಫೆಲ್‌ನ ಯಾವದೇ ಅನುಕರಣೆ ಇಲ್ಲದೇ ಈ ಬದಲಾವಣೆ ಮಾಡಿದ ಎಂಬ ವಾದವೂ ಇತ್ತು. 1932ರಲ್ಲಿ ಮಾಡಲಾದ ಪುನರುತ್ಥಾನ ಸಾಲದೆಂದು ಅಭಿಯಂತರರು ನಿರ್ಣಯಿಸಿದರು. ಆದ್ದರಿಂದ ಅವರು ಪ್ರತಿಮೆಯ ಬಲಗೈನ ರಚನೆಯನ್ನು ಮತ್ತಷ್ಟು ಸದೃಢಗೊಳಿಸಲು 1984 ಮತ್ತು 1986ರಲ್ಲಿ ಮೂಲೆಗಳನ್ನು ಒಂದೊಕ್ಕೊಂದು ಸೇರಿಸಿ ಅಪಾರ್ಶ್ವ ಕೋನಗಳನ್ನು ಅಳವಡಿಸಿದರು.
ಪ್ರತಿಮೆಯ ಒಳಭಾಗದಲ್ಲಿ ಕಬ್ಬಿಣದ ಬದಲಾಗಿ ಸ್ಟೇನ್ಲೆಸ್ ಸ್ಟೀಲ್ ಅಳವಡಿಸಿ, ಪ್ರತಿಮೆಯ ರಾಚನಿಕ ಬಲವರ್ಧನೆ ಮಾಡಲಾಯಿತು. 1980ರ ದಶಕದ ಮಧ್ಯದಲ್ಲಿ ಇನ್ನುಳಿದ ಕೆಲವು ದುರಸ್ತಿ ಕಾರ್ಯಗಳನ್ನು ಕೈಗೊಳ್ಳಲಾಯಿತು. ಮೂಲ ಪಂಜಿನ ಸ್ಥಾನದಲ್ಲಿ ಪ್ರತಿಕೃತಿ ಅಳವಡಿಸಲಾಯಿತು. ಮೂಲ ಕಬ್ಬಿಣ ಲೋಹದ ಮೆಟ್ಟಿಲುಗಳ ಬದಲಾಗಿ ಹೊಸ ಮೆಟ್ಟಿಲುಗಳು, ಪೀಠದೊಳಗೆ ಹೊಸ ಲಿಫ್ಟ್ ಮತ್ತು ಹವಾನಿಯಂತ್ರಣಾ ವ್ಯವಸ್ಥೆ ಅಳವಡಿಸಲಾಯಿತು.[೫೭] 1986ರ ಜುಲೈ 5ರಂದು ಸ್ವಾತಂತ್ರ್ಯದ ಪ್ರತಿಮೆಯನ್ನು ಸಾರ್ವಜನಿಕರಿಗಾಗಿ ಮತ್ತೆ ಮುಕ್ತಗೊಳಿಸಲಾಯಿತು.
ಹೊಸ ಪಂಜು
[ಬದಲಾಯಿಸಿ]1986ರಲ್ಲಿ ಮೂಲ ಪಂಜಿನ ಸ್ಥಾನದಲ್ಲಿ ಅದರ ಪ್ರತಿಕೃತಿ ಅಳವಡಿಸಲಾಯಿತು. 1916ರಲ್ಲಿ ಬಹಳಷ್ಟು ಬದಲಾವಣೆಗಳಾದ ಕಾರಣ, ಮೂಲ ದೀವಟಿಗೆಯನ್ನು ದುರಸ್ತಿ ಮಾಡಲು ಅಸಾಧ್ಯವೆನ್ನುವ ಸ್ಥಿತಿ ತಲುಪಿತ್ತು. 1886ರ ಪಂಜು ಈಗ ಸ್ಮಾರಕಗಳ ವಸ್ತುಸಂಗ್ರಹಾಲಯದಲ್ಲಿದೆ. ಹೊಸ ಪಂಜಿನ 'ಜ್ವಾಲೆ'ಯ ಹೊರಮೈ ಸುವರ್ಣ ಲೇಪಿತವಾಗಿದೆ. ಸ್ಮಾರಕದ ಸುತ್ತಲಿನ ಕೆಳಭಾಗದ ಬೆಳಕಿನ ವ್ಯವಸ್ಥೆ ಮೂಲಕ ಈ ಪಂಜನ್ನು ಬೆಳಗಿಸಲಾಗುತ್ತದೆ.
ಅಧಿಪತ್ಯ ವ್ಯಾಜ್ಯದ ಸಮಸ್ಯೆ ಪರಿಹಾರ
[ಬದಲಾಯಿಸಿ]1987ರಲ್ಲಿ US ಪ್ರತಿನಿಧಿ, ಡೆಮೊಕ್ರೆಟ್ ಪಕ್ಷದ ಫ್ರ್ಯಾಂಕ್ ಜೆ. ಗ್ವಾರಿನಿ, ಹಾಗೂ, ಜರ್ಸಿ ನಗರದ ಮಹಾಪೌರ ಜೆರಾಲ್ಡ್ ಮೆಕ್ಯಾನ್ ನ್ಯೂಯಾರ್ಕ್ ನಗರದ ವಿರುದ್ಧ ಮೊಕದ್ದಮೆ ಹೂಡಿದರು. ಲಿಬರ್ಟಿ ಐಲೆಂಡ್ ಮೇಲಿನ ಸ್ವಾಮ್ಯವು ನ್ಯೂಜರ್ಸಿಗಿರಬೇಕು, ಏಕೆಂದರೆ, ಪ್ರತಿಮೆಯು ಹಡ್ಸನ್ ನದಿಯ ನ್ಯೂಜರ್ಸಿ ಭಾಗದಲ್ಲಿದೆ ಎಂದು ವಾದಿಸಿದ್ದರು. ಸಂಯುಕ್ತ ರಾಜ್ಯಾಡಳಿತಕ್ಕೆ ಆಧೀನವಾಗಿರುವ ದ್ವೀಪವು ಜರ್ಸಿ ನಗರದಿಂದ ಸುಮಾರು ಒಂದು 2,000 feet (610 m) ಹಾಗೂ ನ್ಯೂಯಾರ್ಕ ನಗರದಿಂದ ಎರಡು ಮೈಲ್‌ಗಳಿಗಿಂತಲೂ ಅಧಿಕ ದೂರವಿದೆ.[೫೮] ನ್ಯಾಯಾಲಯವು ಈ ಮೊಕದ್ದಮೆಯ ಅಹವಾಲು ತೆಗೆದುಕೊಳ್ಳಲು ನಿರಾಕರಿಸಿತು. ಇದರಿಂದಾಗಿ, ನೀರಿನ ಮಟ್ಟಕ್ಕಿಂತ ಮೇಲಿರುವ ದ್ವೀಪದ ಭಾಗವು ಯಥಾ ಸ್ಥಿತಿಯಲ್ಲಿ ಮುಂದುವರೆದಿದೆ. ಪ್ರತಿಮೆಯ ಸುತ್ತಮುತ್ತಲಿನ ಮುಳುಗಡೆ ಪ್ರದೇಶದ ಮೇಲೆ ನದೀತೀರದ ಮೇಲಿನ ಹಕ್ಕುಗಳು ನ್ಯೂಜರ್ಸಿಗೆ ಸೇರಿವೆ, ಏಕೆಂದರೆ ಪ್ರತಿಮೆ ನ್ಯೂಜರ್ಸಿ ವ್ಯಾಪ್ತಿಯಲ್ಲಿದೆ. ಒಮ್ಮೆ,ನ್ಯೂ ನೆದರ್ಲೆಂಡ್ಸ್ ಎಂಬ ಡಚ್ (ವಸಾಹತು) ಕಾಲೊನಿಯಲ್ಲಿ ಮ್ಯಾನ್‌ಹ್ಯಾಟನ್ ಮತ್ತು ನ್ಯೂಜರ್ಸಿಗೆ ಸಂಬಂಧಿಸಿದ ಕೆಲವು ವಲಯಗಳನ್ನು ಸೇರಿಸಲಾಗಿತ್ತು. ಆದರೆ, ನ್ಯೂ ನೆದರ್ಲೆಂಡ್ಸ್ ಎಂಬ ಡಚ್ ಪ್ರಾಂತ್ಯ ಸ್ವಾಧೀನಪಡಿಸಿಕೊಂಡ ಬ್ರಿಟಿಷ್, 1664ನಲ್ಲಿ ವಸಾಹತು ಸನ್ನದು ಹೊರಡಿಸಿದಾಗಿನಿಂದ, ನ್ಯೂಯಾರ್ಕ್ ಬಂದರಿನ ದ್ವೀಪಗಳು ನಗರದ ಭಾಗವಾಗಿವೆ.[೫೯] ಬ್ರಿಟಿಷರ ಈ ಸ್ವಾಧೀನಕ್ಕೆ ಡಚ್ಚರು ಗಮನಾರ್ಹ ಪ್ರತಿರೋಧ ತೋರಲಿಲ್ಲ. ಬ್ರಿಟಿಷರು 1649ರಲ್ಲಿ ನ್ಯೂಜರ್ಸಿ ಪ್ರಾಂತ್ಯವನ್ನು ರಚಿಸಿದರು. ಅವರು ಹಡ್ಸನ್ ನದಿಯ ಮಧ್ಯದಲ್ಲಿ ಗಡಿ ನಿಗದಿಪಡಿಸಲು ವಿಫಲರಾದರು. ಆದರೂ, ನದಿ ನೀರನ್ನು ಪಡೆಯುವ ಸರಹದ್ದನ್ನು ಕಡಲ್ಗಾಲುವೆಯ ಮಧ್ಯಕ್ಕೆ ಸ್ಥಳಾಂತರಿಸಲಾಯಿತು.
ಫೆಡರಲ್ ಪಾರ್ಕ್ ಸರ್ವಿಸ್ ಸಂಘಟನೆ ಹೇಳುವ ಪ್ರಕಾರ, ಸ್ವಾತಂತ್ರ್ಯದ ಪ್ರತಿಮೆಯು ಲಿಬರ್ಟಿ ಐಲೆಂಡ್‌ನಲ್ಲಿದೆ. ಈ ದ್ವೀಪವು ನ್ಯಾಷನಲ್ ಪಾರ್ಕ್ ಸರ್ವಿಸ್(ರಾಷ್ಟ್ರೀಯ ಉದ್ಯಾನ ಸೇವಾಡಳಿತ) ಆಡಳಿತದಲ್ಲಿರುವ ಸಂಯುಕ್ತ ರಾಜ್ಯದ ಸ್ವತ್ತು. ನ್ಯೂಯಾರ್ಕ್ ಹಾಗೂ ನ್ಯೂಜರ್ಸಿ ರಾಜ್ಯ ಸರ್ಕಾರಗಳ ನಡುವೆ ಒಪ್ಪಂದವಾಗಿ, 1834ರಲ್ಲಿ ಕಾಂಗ್ರೆಸ್ ಅನುಮೋದನೆ ಪಡೆಯಿತು. ಅದರ ಪ್ರಕಾರ, ಈ ದ್ವೀಪವು ಅಧಿಕೃತವಾಗಿ ನ್ಯೂಯಾರ್ಕ್ ರಾಜ್ಯದ ಪ್ರಾಂತೀಯ(ಪ್ರಾಂತ್ಯ) ವ್ಯಾಪ್ತಿಯಲ್ಲಿದೆ.[೬೦]
9/11ರ ದುರಂತದ ಪರಿಣಾಮ
[ಬದಲಾಯಿಸಿ]2001ರ ಸೆಪ್ಟೆಂಬರ್ 11ರಂದು ಲಿಬರ್ಟಿ ದ್ವೀಪವನ್ನು ಮುಚ್ಚಲಾಯಿತು. ಇದು 2001ರ ಡಿಸೆಂಬರ್ ತಿಂಗಳಲ್ಲಿ ತೆರೆಯಿತು. ಸ್ಮಾರಕವನ್ನು 2004ರ ಅಗಸ್ಟ್ 3ರಂದು ಸಾರ್ವಜನಿಕರಿಗಾಗಿ ಮುಕ್ತಗೊಳಿಸಲಾಯಿತು. ಸ್ಮಾರಕದ ಒಳಭಾಗವು 2009ರ ಜುಲೈ 4ರಂದು ಪ್ರವೇಶಕ್ಕೆ ಸಜ್ಜುಗೊಂಡಿತು. 2001ರ ಸೆಪ್ಟೆಂಬರ್ 11ರಂದು ಆತಂಕವಾದಿಗಳ ಬೆದರಿಕೆಯ ಕಾರಣ ಸ್ಮಾರಕ ಪ್ರತಿಮೆಯನ್ನು ಮುಚ್ಚಲಿಲ್ಲ, ಬದಲಿಗೆ, ಹಲವು ಬೆಂಕಿ ಪ್ರಕೋಪ ನಿಯಂತ್ರಣಾ ನಿಯಮಗಳ ಉಲ್ಲಂಘನೆ ಹಾಗು ಅಸಮರ್ಪಕವಾಗಿ ತೆರುವುಗೊಳಿಸುವ ವಿಧಾನಗಳು ಮುಖ್ಯ ಕಾರಣ ಎಂದು ನ್ಯಾಷನಲ್ ಪಾರ್ಕ್ ಸರ್ವಿಸ್ ಹೇಳಿಕೊಂಡಿದೆ.
FBI ಮೂಲಗಳ ಪ್ರಕಾರ, ಸ್ವಾತಂತ್ರ್ಯದ ಪ್ರತಿಮೆಯು ಹಿಂದೆಯೂ ಸಹ ಆತಂಕವಾದಿ ಬೆದರಿಕೆಗೆ ಈಡಾಗಿತ್ತು. ಬ್ಲ್ಯಾಕ್ ಲಿಬರೇಷನ್ ಫ್ರಂಟ್ ನ ಮೂವರು ಆತಂಕವಾದಿಗಳ ಸಂಚನ್ನು ತಡೆಗಟ್ಟಿದೆವೆಂದು ಅಮೆರಿಕಾ ಸಂಯುಕ್ತ ತನಿಖಾ ಮಂಡಳಿಯು (FBI) 1965ರ ಫೆಬ್ರುವರಿ 18ರಂದು ತಿಳಿಸಿತು. ಈ ಗುಂಪು ಕ್ಯೂಬಾಗೆ ಸೇರಿತ್ತು. ಜೊತೆಗೆ, ಫ್ರಂಟ್ ಡಿ ಲಿಬೆರೇಷನ್ ಡು ಕ್ಯುಯೆಬೆಕ್ (FLQ) ಸದಸ್ಯೆ ಮಾಂಟ್ರಿಯಾಲ್ ಮೂಲದ ಒಬ್ಬ ಮಹಿಳಾ ಆತಂಕವಾದಿಯನ್ನು ಸಹ ಸೆರೆಹಿಡಿಯಲಾಯಿತು. ಕೆನಡಾದಿಂದ ಕ್ಯೂಯೆಬೆಕ್ನ ಸ್ವಾತಂತ್ರ್ಯ FLQನ ಉದ್ದೇಶವಾಗಿತ್ತು. ಸ್ವಾತಂತ್ರ್ಯದ ಪ್ರತಿಮೆಯಲ್ಲದೆ ಇನ್ನೆರಡು ರಾಷ್ಟ್ರೀಯ ಸ್ಮಾರಕಗಳಾದ ಲಿಬರ್ಟಿ ಬೆಲ್ (ಫಿಲಡೆಲ್ಫಿಯಾ) ಮತ್ತು ವಾಷಿಂಗ್ಟನ್ ಸ್ಮಾರಕ (ವಾಷಿಂಗ್ಗನ್ ಡಿ.ಸಿ.)ಯನ್ನು ಧ್ವಂಸಗೊಳಿಸುವ ಸಂಚನ್ನು FLQ ಹೂಡಿತ್ತು.[೬೧]
ಜೂನ್ 2006ರಲ್ಲಿ S. 3597 ಎಂಬ ಮಸೂದೆಯನ್ನು ಸೆನೇಟ್‌ನಲ್ಲಿ ಪ್ರಸ್ತಾಪಿಸಲಾಯಿತು. ಇದನ್ನು ಅಂಗೀಕರಿಸಿದ್ದರೆ, ಸ್ವಾತಂತ್ರ್ಯ ಪ್ರತಿಮೆಯ ಕಿರೀಟಭಾಗ ಮತ್ತು ಒಳಾಂಗಣ ಸಂದರ್ಶನಕ್ಕೆ ಮತ್ತೆ ಅವಕಾಶ ಒದಗಿಸಲು ತೆರೆಯಲಾಗುತ್ತಿತ್ತು.[೬೨] 2007ರ ಜುಲೈ ತಿಂಗಳಲ್ಲಿ, ಇದೇ ಮಸೂದೆಯನ್ನು ಹೌಸ್ ಆಫ್ ರೆಪ್ರೆಸೆಂಟೆಟಿವ್ಸ್‌ನಲ್ಲಿ ಪ್ರಸ್ತಾಪಿಸಲಾಯಿತು.[೬೩]
'ಪ್ರತಿಮೆಯ ಕಿರೀಟ ಭಾಗ ಮತ್ತು ಒಳಾಂಗಣವನ್ನು ಅನಿರ್ದಿಷ್ಟ ಕಾಲ ಮುಚ್ಚಲಾಗುವುದು' ಎಂದು ನ್ಯಾಷನಲ್ ಪಾರ್ಕ್ ಸರ್ವಿಸ್ ನಿರ್ದೇಶಕ ಫ್ರ್ಯಾನ್ ಪಿ. ಮೇನೆಲ್ಲಾ, ನ್ಯೂಯಾರ್ಕ್‌ನ ಕಾಂಗ್ರೆಸ್ ಸದಸ್ಯ ಆಂತೊನಿ ಡಿ. ವೇನರ್‌ರಿಗೆ 2006 ಆಗಸ್ಟ್ 9ರಂದು ಬರೆದ ಪತ್ರದಲ್ಲಿ ತಿಳಿಸಿದರು. 'ನಮ್ಮ ಎಲ್ಲಾ ಸಂದರ್ಶಕರ ಹಿತದೃಷ್ಟಿಯಿಂದ, ಪ್ರಸ್ತುತ ಪ್ರವೇಶಾನುಮತಿ ನೀತಿ ನಿಯಮಗಳನ್ನು ಬಲಗೊಳಿಸುವ ಜವಾಬ್ದಾರಿಯನ್ನು ಹೊರಲು ವ್ಯವಸ್ಥಾಪಕ ಮಂಡಳಿಯು ನಿರ್ಧರಿಸಿದೆ.' ಎಂದು ಈ ಪತ್ರದಲ್ಲಿ ಹೇಳಲಾಯಿತು.[೬೪] ಪ್ರತಿಮೆಯ ಅಡಿಪಾಯ ಹಾಗೂ ಪೀಠಭಾಗಗಳನ್ನು ಪುನಃ ತೆರೆಯುವಲ್ಲಿನ ವಿಳಂಬ, ಹಾಗೂ ಅಗತ್ಯ ಸುರಕ್ಷಾ-ಭದ್ರತಾ ಕ್ರಮಗಳನ್ನು ನೆರವೇರಿಸಲು ಖಾಸಗಿ ದೇಣಿಗೆಗಳನ್ನು ಅವಲಂಬಿಸಿದ್ದಕ್ಕಾಗಿ ಪಾರ್ಕ್ ಸರ್ವಿಸ್ ಟೀಕೆಗೊಳಗಾಯಿತು.[೬೫]
11 ಸೆಪ್ಟೆಂಬರ್ 2001ರಂದು ಆತಂಕವಾದಿ ದಾಳಿಯ ನಂತರ, ಸ್ವಾತಂತ್ರ್ಯದ ಪ್ರತಿಮೆಯ ಕಿರೀಟಭಾಗವನ್ನು ಮೊದಲ ಬಾರಿಗ 2009ರ ಜುಲೈ 4ರಂದು ಪ್ರವೇಶಕ್ಕಾಗಿ ಮುಕ್ತಗೊಳಿಸಲಾಯಿತು.[೬೬]
ಪಂಜನ್ನು ಹೊರತುಪಡಿಸಿ, ಪ್ರತಿಮೆ, ವಸ್ತುಸಂಗ್ರಹಾಲಯ ಹಾಗೂ ಹತ್ತು ಮಹಡಿಯ ಪೀಠವನ್ನು ಸಂದರ್ಶನಕ್ಕೆ ತೆರೆದಿಡಲಾಗಿದೆ. ಆದರೆ ಭೇಟಿ ನೀಡುವವರು, ಮುಂಚಿತವಾಗಿ ತಿಳಿಸಿ ಕಾದಿರಿಸಿಕೊಂಡು, ದೋಣಿಯನ್ನು ಏರುವಾಗ 'ಸ್ಮಾರಕಕ್ಕೆ ಪ್ರವೇಶಾನುಮತಿ ಪಾಸ್' ಪಡೆಯತಕ್ಕದ್ದು. ಲಿಬರ್ಟಿ ಐಲೆಂಡ್ ಮತ್ತು ಲಿಬರ್ಟಿ ಪ್ರತಿಮೆಗೆ ಭೇಟಿ ನೀಡುವವರು, ವಿಮಾನ ನಿಲ್ದಾಣದಲ್ಲಿನಂತೆಯೇ ಇಲ್ಲಿಯೂ ಸಹ ವೈಯಕ್ತಿಕ ತಪಾಸಣೆಗೊಳಗಾಗಬೇಕಾಗುತ್ತದೆ. ಸಂದರ್ಶಕರು ಇಲ್ಲಿಯೂ ಹಲವು ಭದ್ರತೆಯ ನಿಬಂಧನೆಗೊಳಪಟ್ಟಿರುತ್ತಾರೆ. ಪ್ರತಿದಿನ ಗರಿಷ್ಠ ಪಕ್ಷ 3,000 ಪಾಸುಗಳು ಲಭ್ಯವಿರುತ್ತವೆ. (ದಿನವೂ ಒಟ್ಟು 15,000 ಜನರು ದ್ವೀಪಕ್ಕೆ ಭೇಟಿ ನೀಡುತ್ತಾರೆ) ಪಂಜಿನತ್ತ ಸಾಗುವ ಏಣಿಯು 1916 ರಿಂದಲೂ ಮುಚ್ಚಿದೆ.
ನೆಗೆತಗಳು
[ಬದಲಾಯಿಸಿ]1912ರ ಫೆಬ್ರವರಿ 2ರಂದು ಮಧ್ಯಾಹ್ನ 2.45 ಗಂಟೆಗೆ ಗೋಪುರಾರೋಹಿ ಫ್ರೆಡ್ರಿಕ್ ಆರ್. ಲಾ ಪಂಜಿನ ಸುತ್ತ ಇರುವ ವೀಕ್ಷಣಾ ನೆಲೆಯಿಂದ ಪ್ಯಾರಷೂಟ್ ಜಿಗಿತದಲ್ಲಿ ಸಫಲನಾದ. ಅ ದ್ವೀಪದ ಆಡಳಿತಾಧಿಕಾರಿ ಭೂಸೇನಾ ಕ್ಯಾಪ್ಟನ್‌ನ ಅನುಮತಿ ಪಡೆದು ಫ್ರೆಡ್ರಿಕ್ ಈ ಸಾಹಸ ಮಾಡಿದ. 'ಆತ ಎಪ್ಪತ್ತೈದು ಅಡಿ [23 ಮೀ.] ರಭಸವಾಗಿ ಅಪ್ಪಳಿಸುವುದರಲ್ಲಿದ್ದ, ಪ್ಯಾರಷೂಟ್ ತೆರೆಯಲಿಲ್ಲ; ಕೈಕೊಟ್ಟಿತ್ತು ನಂತರ ಆತ ಸುಲಲಿತವಾಗಿ ನೆಲಕ್ಕಿಳಿದು, ಕುಂಟುತ್ತಾ ಹೋದ.' ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿತು.[೬೭]
ಮೊದಲ ಸಾವು 1929ರ ಮೇ 13ರಂದು ಸಂಭವಿಸಿತು. 'ರಾಲ್ಫ್ ಗ್ಲೀಸನ್ ಎಂದು ಗುರುತಿಸಲಾದ ವ್ಯಕ್ತಿಯೊಬ್ಬನು ಕಿರೀಟದ ಕಿಟಕಿಯೊಂದರಿಂದ ನುಸುಳಿ, ವಾಪಸಾಗುವಂತೆ, ಮುಂದಕ್ಕೆ ಜಾರಿ, ಪ್ರತಿಮೆಯ ಎದೆಭಾಗಕ್ಕೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದ' ಎಂದು 'ಟೈಮ್ಸ್ ' ವರದಿ ಮಾಡಿತು. ಪ್ರತಿಮೆ ತಳಭಾಗದ ಬಳಿ ಇರುವ ಹುಲ್ಲುಹಾಸಿನ ತುಣುಕೊಂದರ ಮೇಲೆ ಬಿದ್ದು ರಾಲ್ಫ್ ಗ್ಲೀಸನ್ ಮೃತಪಟ್ಟ. ಇದೇ ವೇಳೆಗೆ ಕೆಲವೇ ಅಡಿಗಳ ಅಂತರದಲ್ಲಿ ಕಾರ್ಮಿಕನೊಬ್ಬ ಹುಲ್ಲು ಕಟಾವು ಮಾಡುವುದರಲ್ಲಿ ಮಗ್ನನಾಗಿದ್ದ.[೬೮] 2001ರ ಆಗಸ್ಟ್ 23ರಂದು, ಪ್ಯಾರಾಸೇಲ್ ಮೂಲಕ ಪ್ರತಿಮೆಯ ತುದಿಗೆ ಬಂದ ಫ್ರೆಂಚ್ ಸಾಹಸಕಾರ ತಿಯರಿ ಡೆವೊ, ಅಲ್ಲಿಂದ ಬಾಂಗೀಜಂಪ್‌ಗೆ ಯತ್ನಿಸಿ ಪ್ರತಿಮೆಯ ಪಂಜಿಗೆ ಸಿಕ್ಕಿ ನೇತಾಡುತ್ತಿದ್ದ. ಅವನಿಗೆ ಯಾವುದೇ ಗಾಯಗಳಾಗಲಿಲ್ಲ. ಅತಿಕ್ರಮಣ ಪ್ರವೇಶವೂ ಸೇರಿ ನಾಲ್ಕು ದೋಷಾರೋಪಗಳನ್ನು ಅವನ ಮೇಲೆ ಹೊರೆಸಲಾಯಿತು.[೬೯]
ಕೆತ್ತನೆ ಬರಹಗಳು
[ಬದಲಾಯಿಸಿ]ಪೀಠದ ಎರಡನೆಯ ಮಹಡಿಯಲ್ಲಿರುವ ಕಂಚಿನ ಫಲಕದಲ್ಲಿ, ಎಮ್ಮಾ ಲಾಝಾರಸ್ ರಚಿಸಿದ 'ದಿ ನ್ಯೂ ಕಾಲೊಸಸ್' ಎಂಬ ಕಾವ್ಯದ ಚತುರ್ದಶಪದಿಯನ್ನು ಕೆತ್ತಲಾಗಿದೆ. ಸಂಪಾದಕೀಯ ವ್ಯಂಗ್ಯಚಿತ್ರಗಳಲ್ಲಿ ತೋರಿಸಲಾಗಿದ್ದರೂ, ಇದನ್ನು ಪೀಠದ ಹೊರಭಾಗದಲ್ಲಿ ಕೆತ್ತನೆ ಮಾಡಿಯೇ ಇಲ್ಲ.[೭೦]
“ |
Not like the brazen giant of Greek fame, |
” |
ಮೊದಲ ಎರಡು ಸಾಲುಗಳು ಪುರಾತನ 'ಕಾಲೊಸಸ್ ಆಫ್ ರೋಡ್ಸ್'ನ್ನು ಉಲ್ಲೇಖಿಸುತ್ತವೆ. ಪೀಠದಲ್ಲಿರುವ ಕಂಚಿನ ಫಲಕದಲ್ಲಿ ಅಕ್ಷರದೋಷವಿದೆ: 'ಕೀಪ್, ಏಂಷಿಯೆಂಟ್ ಲ್ಯಾಂಡ್ಸ್' ಸಾಲಿನಲ್ಲಿ ಅಲ್ಪವಿರಾಮವು ನಾಪತ್ತೆಯಾಗಿದೆ. ಹಾಗಾಗಿ, ಆ ವಾಕ್ಯವು, "'ಕೀಪ್ ಏಂಷಿಯೆಂಟ್ ಲ್ಯಾಂಡ್ಸ್, ಯಾವ್ರ್ ಸ್ಟೊರೀಡ್ ಪಾಂಪ್!' ಕ್ರೈಸ್ ಷಿ" ಎಂದು ಅರ್ಥವನ್ನು ಗಮನಾರ್ಹವಾಗಿ ಬದಲಿಸಿಬಿಡುತ್ತದೆ. 'ಮದರ್ ಆಫ್ ಎಕ್ಸೈಲ್ಸ್' ಎಂಬುದನ್ನು ಪ್ರತಿಮೆಯ ಹೆಸರಾಗಿ ಆಯ್ದುಕೊಳ್ಳಲಾಗಲಿಲ್ಲ.
ಪ್ರತಿಕೃತಿಗಳು ಮತ್ತು ಮೂಲ ಕಾರ್ಯಗಳು
[ಬದಲಾಯಿಸಿ]ಇದೇ ರೀತಿ ನೂರಾರು ಸ್ವಾತಂತ್ರ್ಯದ ಪ್ರತಿಮೆಗಳು ವಿಶ್ವಾದ್ಯಂತ ಸ್ಥಾಪಿತವಾದವು. 1950ರಲ್ಲಿ ಬಾಯ್ ಸ್ಕೌಟ್ಸ್ ಆಫ್ ಅಮೆರಿಕಾ ಮಿಸ್ಸೂರಿಯ ಕೊಲಂಬಿಯಿಯಾದಲ್ಲಿರುವ ಜೆಂಟ್ರಿ ಕಟ್ಟಡ ಆವರಣದಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಕಿರು-ಪ್ರತಿಕೃತಿಯನ್ನು ಸ್ಥಾಪಿಸಿತು. ಸೆವೆನ್ತ್ ಅಂಡ್ ಬ್ರಾಡ್ವೇದ ಪಾರ್ಕ್ಸ್ ಅಂಡ್ ರಿಕ್ರಿಯೇಷನ್ ಅಡ್ಮಿನಿಸ್ಟ್ರೇಷನ್ ಆಫೀಸಸ್‌ನಲ್ಲಿರುವ ಪ್ರತಿಮೆಯ ಫಲಕವು, 'ಎಂದೆಂದಿಗೂ ಉಳಿಯುವ ಸ್ವಾಮಿನಿಷ್ಠೆ'ಯ ವಾಗ್ದಾನದ ಪ್ರತೀಕವಾಗಿದೆ. ಈ ಸ್ಥಳೀಯ ಯೋಜನೆಯು, 'ಸ್ಟ್ರೆಂಗ್ತೆನ್ ದಿ ಆರ್ಮ್ ಆಫ್ ಲಿಬರ್ಟಿ' ಎಂಬ ತತ್ವವನ್ನು ಆಯ್ದುಕೊಂಡ ಸ್ಕೌಟ್‌ಗಳ 40ನೆಯ ರಾಷ್ಟ್ರೀಯ ವಾರ್ಷಿಕೋತ್ಸವದ ಅಂಗವಾಗಿತ್ತು. ಇದರ ಫಲವಾಗಿ ರಾಷ್ಟ್ರಾದ್ಯಂತ ಸುಮಾರು 200ಕ್ಕೂ ಹೆಚ್ಚು ಪ್ರತಿಕೃತಿಗಳನ್ನು ಪ್ರತಿಷ್ಠಾಪಿಸಲಾಯಿತು.[೭೧]
ಪೆನ್ಸಿಲ್ವಾನಿಯಾದ ಹ್ಯಾರಿಸ್ಬರ್ಗ್ ಬಳಿ ಸಸ್ಕ್ಯುಹ್ಯಾನಾ ನದಿಯ ಮಧ್ಯದಲ್ಲೂ ಒಂದು ಪ್ರತಿಕೃತಿಯಿದೆ. ನದಿಯನ್ನು ದಾಟಿ ಹಾದುಹೋಗುವಾಗ US-322 ಪೂರ್ವ ಮತ್ತು ಪಶ್ಚಿಮದಿಂದ ನೋಡಿದಲ್ಲಿ ಪ್ರತಿಮೆಯು ಬಹುಶಃ ಶ್ವೇತ ವರ್ಣದ್ದಾಗಿ ಕಂಡುಬರುತ್ತದೆ. ಮಿಸ್ಸೂರಿಯ ಕೇಪ್ ಜಿರಾರ್ಡೂನಲ್ಲಿರುವ ಪ್ರತಿಕೃತಿಯು ಕ್ಯಾಪಹಾ ಉದ್ಯಾನದ ಪ್ರವೇಶದ್ವಾರದಲ್ಲಿದೆ.
ಪ್ಯಾರಿಸ್‌ನಲ್ಲಿ ಇದರ 'ಸೋದರಿ ಪ್ರತಿಮೆ' ಹಾಗೂ ಫ್ರಾನ್ಸ್‌ನ ಇತರೆಡೆ ಹಲವು ಪ್ರತಿಮೆಗಳಿವೆ. ಇವುಗಳ ಪೈಕಿ ಒಂದನ್ನು ಬಾರ್ತೊಲ್ಡಿ ಮರಣದ ನೂರನೆಯ ವರ್ಷದ ಸ್ಮರಣಾರ್ಥ, ಆತನ ಹುಟ್ಟೂರು ಕೊಲ್ಮರ್‌ನಲ್ಲಿ 2004ರಲ್ಲಿ ಸ್ಥಾಪಿಸಲಾಯಿತು. ಪ್ರತಿಮೆಗಳು ಆಸ್ಟ್ರಿಯಾ, ಜರ್ಮನಿ, ಇಟಲಿ, ಜಪಾನ್, ಚೀನಾ, ಬ್ರೆಜಿಲ್ ಮತ್ತು ವಿಯಟ್ನಾಮ್ ದೇಶಗಳಲ್ಲಿವೆ. ಫ್ರೆಂಚ್ ರು ಆಳ್ವಕೆಯಲ್ಲಿದ್ದಾಗ, ಪ್ರತಿಮೆಯು ಹ್ಯಾನೊಯಿಯಲ್ಲಿತ್ತು. ಧೀಮ್ ಪಾರ್ಕ್ ಮತ್ತು ರೆಸಾರ್ಟ್‌ಗಳಲ್ಲಿ ಸ್ವಾತಂತ್ರ್ಯ ಪ್ರತಿಮೆಯ ಪ್ರತಿಕೃತಿಗಳಿವೆ. ಲಾಸ್ ವೆಗಾಸ್‌ನಲ್ಲಿ ಸ್ಟ್ರಿಪ್ ನದಿ ದಂಡೆಯಲ್ಲಿರುವ ನ್ಯೂಯಾರ್ಕ್-ನ್ಯೂಯಾರ್ಕ್ ಹೊಟೆಲ್ ಅಂಡ್ ಕ್ಯಾಸಿನೊದಲ್ಲಿ ಪ್ರತಿಮೆಯ ಪ್ರತಿಕೃತಿಯಿದೆ. ದೇಶಭಕ್ತ ಉದಾರಿಗಳು U.S. ಸಮುದಾಯಗಳಲ್ಲಿ ಸ್ಥಾಪಿಸಿದ ಪ್ರತಿಕೃತಿಗಳೂ ಸೇರಿ ವಾಣಿಜ್ಯ ಜಾಹೀರಾತಿನ ಮೂಲಕ ಪ್ರತಿಕೃತಿಗಳನ್ನು ರಚಿಸಲಾಗಿವೆ. ಸ್ಥಳೀಯ ಸಮಯದಾಯಗಳಿಗೆ ಬಾಯ್ ಸ್ಕೌಟ್ ಪಡೆಯ ಸದಸ್ಯರು ದೇಣಿಗೆ ನೀಡಿದ ಇನ್ನೂರು ಪ್ರತಿಕೃತಿಗಳೂ ಸಹ ಇದರಲ್ಲಿ ಸೇರಿವೆ. 1989ರ ಟಯನಾನ್ಮೆನ್ ಸ್ಕ್ವಯರ್ ಪ್ರತಿಭಟನೆಯ ಸಂದರ್ಭದಲ್ಲಿ, ಬೀಜಿಂಗ್‌ನಲ್ಲಿ ಚಳವಳಿ ನಿರತ ಚೀನೀ ವಿದ್ಯಾರ್ಥಿಗಳು 'ಗಾಡೆಸ್ ಆಫ್ ಡೆಮಾಕ್ರೆಸಿ' ಎಂಬ ಹತ್ತು-ಮೀಟರ್ ಎತ್ತರದ ಪ್ರತಿಮೆಯನ್ನು ನಿರ್ಮಿಸಿದರು. ಆದರೆ, ಅಮೆರಿಕನ್-ಪರ ಎಂಬ ಅಭಿಪ್ರಾಯ ತಪ್ಪಿಸಲು ಪ್ರತಿಮೆಯನ್ನು ಉದ್ದೇಶಪೂರ್ವಕವಾಗಿಯೇ ಸ್ವಾತಂತ್ರ್ಯ ಪ್ರತಿಮೆಗಿಂತ ಭಿನ್ನವಾಗಿರಿಸಿದ್ದೆ' ಎಂದು ಇದರ ಶಿಲ್ಪಿ ಸಾವೊ ಸಿಂಗ್-ಯುವಾನ್ ಹೇಳಿದ್ದ.[೭೨] ಇದೇ ಸಮಯದಲ್ಲಿ, ಈ ಪ್ರತಿಮೆಯ ಪ್ರತಿಕೃತಿಯನ್ನು ರಚಿಸಿ ವಾಷಿಂಗ್ಟನ್ ಡಿ.ಸಿ.ಯ ಕನೆಕ್ಟಿಕಟ್ ಅವೆನ್ಯೂದಲ್ಲಿ ಚೀನೀ ದೂತಾವಾಸದ ಎದುರಿಗಿರುವ ಪುಟ್ಟ ಉದ್ಯಾನವನದಲ್ಲಿ ಪ್ರದರ್ಶಿಸಲಾಯಿತು.
'ಗ್ಲಾಸ್ಗೋ ಸಿಟಿ ಚೇಂಬರ್ಸ್' ಜ್ಯುಬಿಲೀ ಪೆಡಿಮೆಂಟ್ (ಮನೆಯ ಮುಂದಿನ ತ್ರಿಕೋನೀಯ ಕಮಾನು), ಅದರ ನಿಜವಾದ ಅಗ್ರಗಣ್ಯ ಸಮೂಹವನ್ನು ಸಂಕೇತಿಸುತ್ತದೆ. ಐಶ್ವರ್ಯ ಮತ್ತು ಗೌರವ; ಹಾಗೂ, ಕಟ್ಟಡದ ಗೋಪುರದ ಮೇಲಿರುವ ಪ್ರತಿಮೆಗಳನ್ನು ನಾಲ್ಕು ಋತುಗಳ ಪ್ರತೀಕವನ್ನಾಗಿ ನಿರ್ಮಿಸುವುದು ಶಿಲ್ಪಿ ಜೇಮ್ಸ್ ಅಲೆಕ್ಸಾಂಡರ್ ಎವಿಂಗ್ಸ್‌ನ ಅತಿ ಪ್ರತಿಷ್ಠಿತ ಕಾರ್ಯವಾಗಿತ್ತು. ಫಿಗರ್ ಆಫ್ ಟ್ರೂತ್ ಎಂಬುದು ಗ್ಲಾಸ್ಗೋದ ಸ್ವಾತಂತ್ರ್ಯದ ಪ್ರತಿಮೆಯೆಂದು ಪರಿಗಣಿಸಲಾಗಿದೆ. ಏಕೆಂದರೆ, ಈ ಪ್ರತಿಮೆಯು ನ್ಯೂಯಾರ್ಕ್‌ನಲ್ಲಿರುವ, ಬೃಹದಾಕಾರದ ಮೂಲ ಪ್ರತಿಮೆಯನ್ನು ಹೋಲುತ್ತದೆ.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]ಸ್ವಾತಂತ್ರ್ಯದ ಪ್ರತಿಮೆಯು ಜನಪ್ರಿಯತೆಯ ದ್ಯೋತಕವಾಗಿ ಎಲ್ಲೆಡೆಯೂ ತನ್ನ ಮುದ್ರೆ ಒತ್ತಿ ಪ್ರತಿಬಿಂಬವಾಯಿತು. ಹಲವು ಚಿತ್ರಗಳು, ದೊಡ್ಡ ಮುದ್ರಿತ ಭಿತ್ತಿ ಚಿತ್ರಗಳು,ಛಾಯಾ ಚಿತ್ರಗಳು (ಪೋಸ್ಟರ್‌ಗಳು), ಚಲನಚಿತ್ರಗಳು ಮತ್ತು ಪುಸ್ತಕಗಳಲ್ಲಿ ಪ್ರತಿಮೆ ಕಾಣಿಸಿಕೊಂಡಿತು. 1911ರಲ್ಲಿ ಒ'ಹೆನ್ರಿಯವರ ಕಥೆಯು, 'ಶ್ರೀಮತಿ ಲಿಬರ್ಟಿ' ಹಾಗೂ ಇನ್ನೊಂದು ಪ್ರತಿಮೆಯ ನಡುವಿನ ಒಂದು ಕಲ್ಪನಾ ಮಗ್ನ ಸಂವೇದನೆಯನ್ನು ತಿಳಿಸುತ್ತದೆ.[೭೩] ಅದು 1918ರ ಲಿಬರ್ಟಿ ಲೋನ್ ಮುದ್ರಿತ ಬೃಹತ್ ಚಿತ್ರಗಳಲ್ಲಿಯೂ ಕಾಣಿಸಿಕೊಂಡಿತು. 1940 ಹಾಗೂ 1950ರ ದಶಕಗಳಲ್ಲಿನ, ವೈಜ್ಞಾನಿಕ ಕಾಲ್ಪನಿಕ ಕಥಾ ಸಂಚಿಕೆಗಳಲ್ಲಿ ಲೇಡಿ ಲಿಬರ್ಟಿ ಪುರಾತನ ಕಾಲದ ಅವಶೇಷಗಳಿಂದ ಸುತ್ತುವರೆದಂತೆ ಚಿತ್ರಿಸಲಾಗಿತ್ತು. ಸುಮಾರು ಚಲನಚಿತ್ರಗಳಲ್ಲಿಯೂ ಸಹ ಈ ರೀತಿ ನಿರೂಪಣೆ ಕಂಡು ಬಂದಿದೆ. 1942ರಲ್ಲಿ ಬಿಡುಗಡೆಯಾದ ಆಲ್‌ಫ್ರೆಡ್ ಹಿಚ್‌ಕಾಕ್‌ರ ಚಲನಚಿತ್ರ ಸಬೊಟ್ಯೂರ್‌ನಲ್ಲಿ ಚಲನಚಿತ್ರದ ಅಂತಿಮ ಕ್ಲೈಮಾಕ್ಸ್ ದೃಶ್ಯಗಳಲ್ಲಿ, ಪ್ರತಿಮೆಯ ಬಳಿ ಇದನ್ನೂ ಒಂದು ಸನ್ನಿವೇಶವನ್ನಾಗಿಸಲಾಗಿತ್ತು. 1968ರ 'ಪ್ಲ್ಯಾನೆಟ್ ಆಫ್ ದಿ ಏಪ್ಸ್ 'ನ ಅಂತ್ಯ ಭಾಗದಲ್ಲಿ ಮರಳಿನಲ್ಲಿ ಅರ್ಧ ಹೂತುಹೋಗಿರುವ ಪ್ರತಿಮೆಯು ಅಚ್ಚರಿಗೊಳಿಸುವ ಸಂಗತಿಯನ್ನು ಹೊರಗೆಡಹುತ್ತದೆ. 1989ರಲ್ಲಿ ತೆರೆಕಂಡ ಘೋಸ್ಟ್‌ಬಸ್ಟರ್ಸ್ II ಚಿತ್ರದಲ್ಲಿ, ನ್ಯೂಯಾರ್ಕಿಗರ ಹರ್ಷೋದ್ಗಾರಗಳ ನಡುವೆ, ಮಹಾ ಶಕ್ತಿಯ ಪ್ರತೀಕವಾಗಿ ಖಳನಾಯಕನನ್ನು ಸೋಲಿಸಲು, ಪ್ರತಿಮೆಯು ಲಿಬರ್ಟಿ ಐಲೆಂಡ್‌ನಿಂದ ಮ್ಯಾನ್‌ಹ್ಯಾಟನ್ ವರೆಗೆ ನಡೆದು ಹೋಗುತ್ತದೆ. ಮೊದಲ X-ಮೆನ್ ಚಲನಚಿತ್ರದ ಅಂತಿಮ(ಕ್ಲೈಮಾಕ್ಸ್ ಗಾಗಿ) ದೃಶ್ಯಕ್ಕಾಗಿ ಇದು ಚಿತ್ರೀಕರಣದ ಸನ್ನಿವೇಶವಾಗಿತ್ತು. ಇಂಡಿಪೆಂಡೆನ್ಸ್ ಡೇ ಚಲನಚಿತ್ರದಲ್ಲಿ, ಭೂಮ್ಯತೀತ, ಅನ್ಯಗ್ರಹಗಳ ಜೀವಿಗಳಿಂದ ಪ್ರಥಮ ದಾಳಿಗೊಳಗಾದ ಪ್ರತಿಮೆಯು ಮುರಿದು ನೆಲಕ್ಕುರುಳಿರುವ ದೃಶ್ಯವಿದೆ.
2004ರ ಚಲನಚಿತ್ರ ದಿ ಡೇ ಆಫ್ಟರ್ ಟುಮೊರೊ ನಲ್ಲಿ ಪ್ರತಿಮೆಯು ಹಿಮಾಚ್ಚ್ಚಾದಿತವಾಗಿರುತ್ತದೆ. 2008ರ ಚಲನಚಿತ್ರ ಕ್ಲೊವರ್ಫೀಲ್ಡ್ ನಲ್ಲಿ ದೊಡ್ಡ ಅಸುರಾಕೃತಿಯು ಪ್ರತಿಮೆಯ ರುಂಡ ಕತ್ತರಿಸಿ ಮ್ಯಾನ್‌ಹ್ಯಾಟನ್‌ನ ಬೀದಿಗೆ ಎಸೆಯುತ್ತದೆ. 1994ರ ಚಲನಚಿತ್ರ ಗನ್‌ಡ್ಯಾಮ್ ಸರಣಿಯಲ್ಲಿ ಪ್ರಮುಖ ಪಾತ್ರ ಜಿ ಗನ್‌ಡ್ಯಾಮ್ ತನ್ನ ಗನ್‌ಡ್ಯಾಮ್‌ನ್ನು ಪರಿತ್ಯಕ್ತ ಪ್ರತಿಮೆಯೊಂದರಲ್ಲಿ ಅವಿತಿಡುತ್ತಾನೆ. ನಂತರ ಅದನ್ನು ಪ್ರತಿಮೆಯಿಂದಾಚೆ ಸಿಡಿಯುವಂತೆ ಮಾಡಿ ಅದನ್ನು ನಾಶಮಾಡುತ್ತಾನೆ. ಚಿತ್ರದಲ್ಲಿ, National Treasure: Book of Secrets , ಪ್ಯಾರಿಸ್‌ನಲ್ಲಿರುವ ಏಕರೂಪದ ಸಹೋದರಿ ಪ್ರತಿಮೆಯು ಸುಳಿವು ನೀಡುತ್ತದೆ. 2008ರಲ್ಲಿ ಬಿಡುಗಡೆಯಾದ ಭಾರಿ ಜನಪ್ರಿಯತೆ ಗಳಿಸಿರುವ ಸಚಿತ್ರ ಗ್ರಂಥ ಲೇಡಿ ಲಿಬರ್ಟಿ: ಎ ಬಯಾಗ್ರಫಿ ಯಲ್ಲಿ ಸ್ವಾತಂತ್ರ್ಯದ ಪ್ರತಿಮೆಯ ಇತಿಹಾಸವನ್ನು ವಿವರಿಸಲಾಗಿದೆ.
1978ರಲ್ಲಿ ವಿಸ್ಕಾನ್ಸಿನ್-ಮ್ಯಾಡಿಸನ್ ವಿಶ್ವವಿದ್ಯಾಲಯದಲ್ಲಿ ನಡೆದ ವೇಷಭೂಷಣ ಸ್ಫರ್ಧೆಯಲ್ಲಿ, ಲೇಡಿ ಲಿಬರ್ಟಿ ಪ್ರತಿಮೆ ಇಬ್ಬನಿಗಟ್ಟಿದ ಸ್ಥಳೀಯ ಸರೋವರವೊಂದರಲ್ಲಿ ನಿಂತಿರುವಂತೆ ತೋರಿಸಲಾಗಿತ್ತು.[೭೪] ನ್ಯೂಯಾರ್ಕ್ ಮತ್ತು ನ್ಯೂಜರ್ಸಿ ವಾಹನ ನೋಂದಣಿ ಫಲಕಗಳ ಮೇಲೆ ಕೂಡಾ ಕಾಣಿಸಿಕೊಂಡಿದೆ. ಜೊತೆಗೆ, NHLನ ನ್ಯೂಯಾರ್ಕ್ ರೇಂಜರ್ಸ್ ಮತ್ತು WNBAನ ನ್ಯೂಯಾರ್ಕ್ ಲಿಬರ್ಟಿ ತಂಡಗಳ ಲಾಂಛನವಾಗಿ ಪ್ರತಿಮೆಯ ಚಿತ್ರವನ್ನು ಬಳಸಲಾಗಿದೆ. ಯಕ್ಷಿಣಿಕಾರ ಡೇವಿಡ್ ಕಾಪರ್ಫೀಲ್ಡ್‌ರ ಬೃಹತ್ 'ಮಾಯಾ' ಜಾಲದ ವಿಷಯ ವಸ್ತುವಾಗಿಯೂ ಇತ್ತು.[೭೫]
1982ರಲ್ಲಿ ಜೆಸಿಕಾ ಸ್ಕಿನರ್, ಪ್ರತಿಮೆಯ ಒಳಾಂಗಣದಲ್ಲಿ ಜನಿಸಿದಳು. ಮೆಟ್ಟಿಲು ಏರುವಾಗ ಆಕೆಯ ತಾಯಿ ಹೆರಿಗೆಬೇನೆ ಅನುಭವಿಸಿ, ನೆಲ ತಲುಪುವ ಮುಂಚೆಯೇ ಮಗುವಿಗೆ ಜನ್ಮವಿತ್ತಳು.[೭೬]
ಇದನ್ನೂ ನೋಡಿರಿ
[ಬದಲಾಯಿಸಿ]- ಕೊಲಂಬಿಯಾ ಪಿಕ್ಚರ್ಸ್ ಲಾಂಛನ
- ಎಲ್ಲಿಸ್ ಐಲೆಂಡ್
- ಫ್ರಾಂಕೊ-ಅಮೆರಿಕನ್ ಸಂಬಂಧಗಳು
- ಪ್ರಜಾಪ್ರಭುತ್ವದ ದೇವಿ
- ದಿ ಮದರ್ಲೆಂಡ್ ಕಾಲ್ಸ್
- ಲಿಬರ್ಟಾಸ್
- ಲಿಬರ್ಟಿ ಐಲೆಂಡ್
- ಪ್ರತಿಮೆಗಳ ಪಟ್ಟಿ
- ಎತ್ತರದ ಅನುಸಾರವಾಗಿ ಪ್ರತಿಮೆಗಳ ಪಟ್ಟಿ
- ಮೇರಿಯಾನ್
- ಪ್ಲೇಸ್ ಡೆಸ್ ಎಟಾಟ್ಸ್-ಯುನಿಸ್
- ನ್ಯೂಯಾರ್ಕ್ ನಗರದಲ್ಲಿರುವ ಪ್ರತಿಮೆಗಳು ಮತ್ತು ಶಿಲ್ಪಾಕಲಾಕೃತಿಗಳು
- ಸ್ಟ್ಯಾಚ್ಯೂ ಆಫ್ ಲಿಬರ್ಟಿ ಪ್ಲೇ, ಅಮೆರಿಕನ್ ಫುಟ್ಬಾಲ್ನಲ್ಲಿ ಒಂದು ಚಾತುರ್ಯದ ಆಟ
- ಸ್ಟ್ಯಾಚ್ಯೂ ಆಫ್ ರೆಸ್ಪಾನ್ಸಿಬಿಲಿಟಿ
ಉಲ್ಲೇಖಗಳು
[ಬದಲಾಯಿಸಿ]- ↑ "Statue of Liberty National Monument". National Park Service. 2007-12-31. Retrieved 2008-07-24.
- ↑ "U.S. to Study Access to Liberty's Crown", The New York Times, July 5, 2008, accessed August 14, 2009
- ↑ "National Register Information System". National Register of Historic Places. National Park Service. 2009-03-13. Archived from the original on 2009-04-22. Retrieved 2009-12-17.
- ↑ "National Monument Proclamations under the Antiquities Act". Cr.nps.gov. 2003-01-16. Archived from the original on 2011-10-25. Retrieved 2009-08-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Statue of Liberty". National Park Service. 2006-04-28. Retrieved 2008-07-24.
- ↑ ರೋಮನ್ ಅಂಕಗಳಲ್ಲಿ 4 ಜುಲೈ 1776: File:Statue liberty22.jpg ನೋಡಿ
- ↑ "Crown of Statue of Liberty may reopen to public soon". Xinhua News Agency. 2008-07-05. Retrieved 2008-07-24.
- ↑ "Statue of Liberty National Monument - History & Culture". National Park Service. 2006-10-05. Retrieved 2008-07-24.
- ↑ Bellis, Mary. "Statue of Liberty - Frederic Auguste Bartholdi". About.com. Retrieved 2008-07-24.[ಶಾಶ್ವತವಾಗಿ ಮಡಿದ ಕೊಂಡಿ]
- ↑ "June 17, 1885: The Statue of Liberty Arrives". CR4. 2008-06-17. Archived from the original on 2008-06-23. Retrieved 2008-07-24.
- ↑ "Statue of Liberty". HTML. Archived from the original on 2008-10-03. Retrieved 2006-06-20.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಆರ್.ಬೆಲೊಟ್, ಡಿ.ಬರ್ಮೊಂಡ್, ಬಾರ್ತೊಲ್ಡಿ , 2004, ಪು.237
- ↑ "Statue of Liberty National Park: History". Archived from the original on 2006-10-19. Retrieved 2007-02-07.
- ↑ Khan, B. Zorina (2005). The Democratization of Invention: Patents and Copyrights in American Economic Development, 1790–1920. Cambridge University Press. ISBN 0-521-81135-X. ಪು. 299 [೧]
- ↑ "National Park Service Historical Handbook: Statue of Liberty". 2000-09-25. Archived from the original on 2007-06-11. Retrieved 2007-05-19.
- ↑ ಪ್ರೊಕ್ವೆಸ್ಟ್ ಹಿಸ್ಟಾರಿಕಲ್ ನ್ಯೂಸ್ಪೇಪರ್ಸ್ ದಿ ನ್ಯೂಯಾರ್ಕ್ ಟೈಮ್ಸ್, ಪಿಜಿ. 1.
- ↑ ೧೭.೦ ೧೭.೧ Crowley, Jim. "Lighthouses of New York Harbor: Statue of Liberty". National Lighthouse Museum. Archived from the original on 2006-10-08. Retrieved 2008-07-24.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "What are some interesting facts about lighthouses?". United States Coast Guard. 2008-07-22. Archived from the original on 2008-09-20. Retrieved 2008-07-24.
- ↑ "Statue of Liberty to be Flood-Lighted", Electrical Experimenter, 4 (4): pg 237, August 1916
{{citation}}
:|pages=
has extra text (help) - ↑ "Cost-of-Living Calculator". Aier.org. Retrieved 2009-08-01.
- ↑ ದಿ ಟಾರ್ಚ್ ರೀಡಿಸೈನ್ಡ್ Archived 2009-07-09 ವೇಬ್ಯಾಕ್ ಮೆಷಿನ್ ನಲ್ಲಿ.
- ↑ "NRIS Search by location". Nr.nps.gov. Archived from the original on 2008-09-23. Retrieved 2009-08-01.
- ↑ ಸ್ವಾತಂತ್ರ್ಯದ ಪ್ರತಿಮೆಯ ನಿರ್ಮಾಣ;
- ↑ "Statue of Liberty - UNESCO World Heritage Centre". Whc.unesco.org. Retrieved 2009-08-01.
- ↑ (ರೂತ್ ಬ್ರ್ಯಾಂಡನ್, ಸಿಂಗರ್ ಅಂಡ್ ದಿ ಸ್ಯೂಯಿಂಗ್ ಮೆಷೀನ್: ಎ ಕ್ಯಾಪಿಟಲಿಸ್ಟ್ ರೊಮೆನ್ಸ್ , ಪು. 211)
- ↑ (ಲೆಸ್ಲೀ ಅಲೆನ್, "ಲಿಬರ್ಟಿ: ದಿ ಸ್ಟ್ಯಾಚ್ಯೂ ಅಂಡ್ ದಿ ಅಮೆರಿಕನ್ ಡ್ರೀಮ್," ಪು. 21)
- ↑ (ಅಲೀಸ್ ಜೆ. ಹಾಲ್, "ಲಿಬರ್ಟಿ ಲಿಫ್ಟ್ಸ್ ಹರ್ ಲ್ಯಾಂಪ್ ಒನ್ಸ್ ಮೋರ್," ಜುಲೈ 1986.) ಬಾರ್ತೊಲ್ಡಿಯ ಪತ್ನಿಯ ಶಾರೀರ ಗಮನಿಸಿ ಲಿಬರ್ಟಿಯ ಶರೀರ ಭಾಗ ರಚಿಸಲಾಯಿತು.
- ↑ "Fun Facts". Statueofliberty.org. Archived from the original on 2009-04-25. Retrieved 2009-08-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ USIA. "Portrait of the USA: The Statue of Liberty". Archived from the original on 2007-12-14. Retrieved 2006-05-29.
- ↑ ಥಾಮಸ್, ಡೊಗ್. ಕೆನ್ ಬರ್ನ್ಸ್ ಅಮೆರಿಕಾ—ದಿ ಸ್ಟ್ಯಾಚ್ಯೂ ಆಫ್ ಲಿಬರ್ಟಿ (ವೀಡಿಯೊ ರಿವ್ಯೂ). Amazon.com. 2009. 24 ನವೆಂಬರ್ 2009ರಂದು ಪುನ:ಪಡೆದದ್ದು.
- ↑ ಫ್ರ್ಯಾಂಕ್ಲ್, ವಿಕ್ಟರ್ ಎಮಿಲ್ (1956) ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್, ಪು. 209-210.
- ↑ ವಾರ್ನಾಕ್, ಸಿ. (2005) "ಸ್ಟ್ಯಾಚ್ಯೂ ಆಫ್ ರೆಸ್ಪಾನ್ಸಿಬಿಲಿಟಿ," Archived 2017-06-02 ವೇಬ್ಯಾಕ್ ಮೆಷಿನ್ ನಲ್ಲಿ. DAILY HERALD. 2009ರ ನವೆಂಬರ್ 24ರಂದು ಪುನ:ಪಡೆದದ್ದು.
- ↑ File:Tomb of Pope Clement XIII Gregorovius.jpg ನೋಡಿ
- ↑ ಜೊತೆಗೆ ಆಕೆಯ ಬಲಗೈಯಲ್ಲಿ ಪಂಜನ್ನು ಹಿಡಿದಿದ್ದು
- ↑ ಮಾರ್ವಿನ್ ಟ್ರ್ಯಾಕ್ಟೆನ್ಬರ್ಗ್, "ದಿ ಸ್ಟ್ಯಾಚ್ಯೂ ಆಫ್ ಲಿಬರ್ಟಿ", ನ್ಯೂಯಾರ್ಕ್ : ಪೆಂಗ್ವಿನ್ ಬುಕ್ಸ್, 1977, ಪು.72-74
- ↑ File:Sceau de la République.jpg ನೋಡಿ
- ↑ ೩೭.೦ ೩೭.೧ ಇದನ್ನೂ ನೋಡಿ: 1848ರಲ್ಲಿ ನಡೆದ ಗಣರಾಜ್ಯದ ಸಾಂಕೇತಿಕ ಲಾಂಛನಕ್ಕಾಗಿ ರಾಷ್ಟ್ರೀಯ ಸ್ಪರ್ಧೆಯಲ್ಲಿ ಅರ್ಮಾಂಡ್ ಕ್ಯಾಂಬನ್ ರಚಿಸಿದ ರಿಪಬ್ಲಿಕ್ ಚಿತ್ರ. ಇದರ ಮೇಲೆ ಒಂಬತ್ತು ಕಿರಣಗಳ ಪ್ರಭಾಮಂಡಲವಿದೆ : ಮ್ಯುಸೇ ಇಂಗ್ರೆಸ್, ಮಾಂಟಾಬಾನ್ : ಚಿತ್ರ
- ↑ File:Sceau de la République.jpg ನೋಡಿ
- ↑ ಜ್ಞಾಪಕಾರ್ಥ ಪದಕ Archived 2011-05-21 ವೇಬ್ಯಾಕ್ ಮೆಷಿನ್ ನಲ್ಲಿ. ನೋಡಿ
- ↑ ಪಿಯರ್-ಆಂಟೊಯಿನ್ ಡಿಮಾಚಿಯವರ ಚಿತ್ರಗಳಲ್ಲಿ ಈ ಪ್ರತಿಮೆಯು ಗೋಚರವಾಗಿದೆ: ಫೆಟ್ ಡಿ ಲ್'ಇಂಡಿವಿಸಿಬಿಲಿಟೆ ಡಿ ಲಾ ರೆಪಬ್ಲಿಕ್ ಲೆ 10 ಆವುಟ್ 1793 Archived 2010-01-18 ವೇಬ್ಯಾಕ್ ಮೆಷಿನ್ ನಲ್ಲಿ. ಮತ್ತು ಯೂನ್ ಇಕ್ಸೆಕ್ಯುಷನ್ ಕ್ಯಾಪಿಟೆಲ್, ಪ್ಲೇಸ್ ಡಿ ಲಾ ರೆವೊಲ್ಯೂಷನ್ Archived 2010-01-18 ವೇಬ್ಯಾಕ್ ಮೆಷಿನ್ ನಲ್ಲಿ.
- ↑ ಮಾರಿಸ್ ಅಗುಲ್ಹೊನ್, "ಮ್ಯಾರಿಯಾನ್ ಆ ಕಾಂಬ್ಯಾಟ್", ಪು.34
- ↑ ಮಾರಿಸ್ ಅಗುಲ್ಹೊನ್, ಹಿಸ್ಟೊಯಿರ್ ವ್ಯಾಗಬಾಂಡ್: ಲಾ ಪೊಲಿಟಿಕ್ ಎನ್ ಫ್ರಾನ್ಸ್, ಡಿ'ಹಯರ್ ಅ ಆಜೊ'ಹ್ಯುಯಿ", 1996, ಪು.162
- ↑ File:Allegory France Pavillon de Flore Louvre.jpg ನೋಡಿ
- ↑ ಫ್ರಾಂಕೊಯ್ ಬೊಡಾನ್, « ಹೆಕ್ಟರ್ ಹೊರೂ », 1978 ಪು.143
- ↑ "Statue of Liberty's crown reopens for visitors". 2009-04-07. Retrieved 2009-05-07.
- ↑ "Why is the Statue of Liberty green". Finishing.com. Retrieved 2009-08-01.
- ↑ "Stancliffe Stone - Supplier Of Natural Stone | Talk to us about Locharbriggs Red Sandstone". Stancliffe.com. 2006-08-09. Retrieved 2009-08-01.
- ↑ "National Park Service". Nps.gov. Retrieved 2009-08-01.
- ↑ "National Park Service - Statue of Liberty Statistics". Nps.gov. 2006-08-16. Retrieved 2009-08-01.
- ↑ Adam Eisenberg (November 1989). "Ghostbusters II: Ghostbusters Revisited". Cinefex.
- ↑ "Karmøy Kommune". Archived from the original on 2006-05-10. Retrieved 2006-05-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) (ಪ್ರವಾಸೋದ್ಯಮ ಜಾಲತಾಣ) "ವಿಸ್ನೆಸ್ ಗಣಿ ಸಂಗ್ರಹಾಲಯ: 1972ರವರೆಗೆ ವಿಸ್ನೆಸ್‌ನಲ್ಲಿರುವ ತಾಮ್ರ ಗಣಿಗಳು ಕಾರ್ಯನಿರ್ವಹಿಸುತ್ತಿದ್ದವು. ನ್ಯೂಯಾರ್ಕ್‌ನಲ್ಲಿರುವ ಸ್ವಾತಂತ್ರ್ಯದ ಪ್ರತಿಮೆಗಾಗಿ ತಾಮ್ರವನ್ನು ಇಲ್ಲಿ ತೆಗೆಯಲಾಗುತ್ತಿತ್ತು." - ↑ Copper Development Association. "Copper Facts". Archived from the original on 2006-07-21. Retrieved 2006-05-29.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) U.S. ತಾಮ್ರ ಉದ್ಯಮದವೊಂದರ ಜಾಲತಾಣ. "ಸ್ವಾತಂತ್ರ್ಯದ ಪ್ರತಿಮೆಯು 179,000 ಪೌಂಡ್‌ಗಳಷ್ಟು ತಾಮ್ರವನ್ನು ಹೊಂದಿದೆ. ಈ ತಾಮ್ರದ ಮೂಲ ನಾರ್ವೇಯ ಸ್ಟಾವಂಜರ್ ಬಳಿ ಕಾರ್ಮೊಯ್ ದ್ವೀಪದಲ್ಲಿರುವ ವಿಸ್ನೆಸ್ ತಾಮ್ರ ಗಣಿಗಳು. ಫ್ರೆಂಚ್ ಕುಶಲಕರ್ಮಿಗಳು ಇದನ್ನು ಸಿದ್ಧಪಡಿಸಿದರು." - ↑ "Statue of Liberty Made of Russian Copper?".
- ↑ Daw, Jocelyne (March 2006). Cause Marketing for Nonprofits: Partner for Purpose, Passion, and Profits. Hoboken, NJ: John Wiley & Sons. p. 4. ISBN 9780471717508.
- ↑ Robert Pear (1986-02-14). "Iacocca and Secretary of Interior Clash Over Statue Panel Ouster". The New York Times. Retrieved 2006-06-06. "ಗೃಹ ಕಾರ್ಯದರ್ಶಿ ಡೊನಾಲ್ಡ್ ಪಿ. ಹೊಡೆಲ್ ... ಬುಧವಾರದಂದು ಶ್ರೀ ಇಯಾಕೊಕಾರನ್ನು ಆಯೋಗದಿಂದ ವಜಾ ಮಾಡಿದರು. ಇದೇ ಸಮಯ ಶ್ರೀ ಇಯಾಕೊಕಾ ಪ್ರತಿಮೆ ಮತ್ತು ಎಲ್ಲಿಸ್ ಐಲೆಂಡ್‌ನ ನವೀಕರಣದಲ್ಲಿ ತೊಡಗಿದ ಖಾಸಗಿ ಸಂಸ್ಥೆಯ ಮುಖ್ಯಸ್ಥರಾಗಿದ್ದರು. ಇದರ ಕಾರಣ, ಯಾವುದೇ ಹಿತಾಸಕ್ತಿಯ ಘರ್ಷಣೆಗೆ ಆಸ್ಪದ ನೀಡದಿರಲು ಅವರನ್ನು ವಜಾ ಮಾಡಿದರು. ನವೀಕರಣೆಗಾಗಿ $233 ದಶಲಕ್ಷ ಮೊತ್ತದ ಹಣವನ್ನು ಈ ಸಂಸ್ಥೆ ಕ್ರೋಢೀಕರಿಸಿತ್ತು. ಈ ಪ್ರತಿಷ್ಠಾನವು ಪುನಃಸ್ಥಾಪನೆಗಾಗಿ ಗುತ್ತಿಗೆಯನ್ನೂ ನೀಡಿತ್ತು."
- ↑ ಸ್ವಾತಂತ್ರ್ಯದ ಪ್ರತಿಮೆ Archived 2010-01-17 ವೇಬ್ಯಾಕ್ ಮೆಷಿನ್ ನಲ್ಲಿ. ASCE ಮಹಾನಗರ ವಿಭಾಗ. 2009ರ ಜುಲೈ 27ರಂದು ಸೇರಿಸಲಾಯಿತು.
- ↑ ೫೭.೦ ೫೭.೧ ೫೭.೨ ೫೭.೩ Gilmore, V. Elaine (June 1986). "Engineering Miss Liberty's rescue". Popular Science. Vol. 228, no. 6. Bonnier Corporation. pp. 68–72, 102, 104, 106, 108, 110. ISSN 0161-7370. Retrieved November 13, 2009.
- ↑ "New Jerseyans' Claim To Liberty Island Rejected". Associated Press. New York Times. October 6, 1987. Retrieved 2008-07-27.
The Supreme Court today refused to strip the Statue of Liberty of its status as a New Yorker. The Court, without comment, turned away a move by a two New Jerseyans to claim jurisdiction over the landmark for their state.
{{cite news}}
: Cite has empty unknown parameter:|coauthors=
(help) - ↑ "Avalon Project - Colonial Charters, Grants and Related Documents". Avalon.law.yale.edu. Retrieved 2009-08-01.
- ↑ "Statue of Liberty National Monument - Frequently Asked Questions". NPS.gov. National Park Service. Retrieved November 14, 2009.
- ↑ "The Monumental Plot". TIME. February 26, 1965. Archived from the original on ಡಿಸೆಂಬರ್ 16, 2008. Retrieved November 14, 2009.
{{cite news}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "Introduction of Bills and Joint Resolutions—(Senate—June 29, 2006)". Library of Congress Congressional Record. 2006-06-29. pp. S6786. Retrieved 2006-08-17.[ಶಾಶ್ವತವಾಗಿ ಮಡಿದ ಕೊಂಡಿ]
- ↑ "Save the Statue of Liberty Act (H.R.2982 — July 10, 2007)". Library of Congress Congressional Record. 2007-07-10. Archived from the original on 2014-09-30. Retrieved 2007-12-06.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ "ಸ್ವಾತಂತ್ರ್ಯದ ಪ್ರತಿಮೆಯ ಕಿರೀಟ ಭಾಗವು ಮುಚ್ಚಿರಲಾಗುವುದು" ಅಸೋಷಿಯೇಟೆಡ್ ಪ್ರೆಸ್, ಆಗಸ್ಟ್ 9, 2006
- ↑ Chan, Sewell (September 19, 2007). "For Safety, Lady Liberty's Crown Will Stay Closed, Park Service Says". The New York Times. Retrieved ovember 14, 2009.
{{cite news}}
: Check date values in:|accessdate=
(help) - ↑ Price, Matthew (2009-07-04). "Statue of Liberty crown reopens". BBC News. Retrieved 2009-07-04.
- ↑ "ಸ್ವಾತಂತ್ರ್ಯದ ಪ್ರತಿಮೆಯಿಂದ ಪ್ಯಾರಷೂಟ್ ಬಳಸಿ ಜಿಗಿಯುವಿಕೆ; ಮೊದಲಿಗೆ ಸಿಂಗರ್ ಕಟ್ಟಡದಿಂದ ಜಿಗಿಯಲು ಸ್ಟೀಪಲ್‌ಜ್ಯಾಕ್ ಯೋಚಿಸಿದ್ದ. ತನ್ನ ತೋಳುಗಳನ್ನು ಬಳಸಿ, (ಇಳಿಯುವ ಹಾದಿಯನ್ನು ನಿರ್ದೇಶಿಸಿ) ನೀರಿನಿಂದ 30 ಅಡಿ ಎತ್ತರದಲ್ಲಿರುವ ಕಲ್ಲಿನ ಗೋಡೆಯ ಮೇಲೆ ಸುರಕ್ಷಿತವಾಗಿ ಇಳಿದ - ಆತನು ಇದರ ಬಗ್ಗೆ ಮಾತನಾಡಲಾರ." ದಿ ನ್ಯೂಯಾರ್ಕ್ ಟೈಮ್ಸ್, ಫೆಬ್ರುವರಿ 3, 1912, ಪುಟ. 4
- ↑ "200 ಅಡಿ ಎತ್ತರದ ಸ್ವಾತಂತ್ರ್ಯದ ಪ್ರತಿಮೆ ಕಿರೀಟದಿಂದ ಜಿಗಿದ ಯುವಕ, ಸ್ಥಳದಲ್ಲಿನ ಮೊದಲ ಆತ್ಮಹತ್ಯೆ." ದಿ ನ್ಯೂಯಾರ್ಕ್ ಟೈಮ್ಸ್, ಮೇ 14, 1929, ಪುಟ. 1
- ↑ Phil Hirschkorn and Laura Dolan (2001-08-24). "CNN.com - Frenchman who took liberties with the Lady charged - August 24, 2001". Archives.cnn.com. Archived from the original on 2009-09-15. Retrieved 2009-08-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help); Text "CNN New York Bureau" ignored (help) - ↑ ಉ.ದಾ. Barry Shelton (2000-06-02). "New Statue of Liberty". Retrieved 2006-05-28.Barry Shelton (2000-06-02). "New Statue of Liberty". Retrieved 2006-05-28.
- ↑ "Description". Visitcolumbiamo.com. Archived from the original on 2009-07-09. Retrieved 2009-08-01.
{{cite web}}
: More than one of|archivedate=
and|archive-date=
specified (help); More than one of|archiveurl=
and|archive-url=
specified (help) - ↑ ಸಾವೊ ಸಿಂಗ್-ಯುವಾನ್. "ದಿ ಬರ್ತ್ ಆಫ್ ದಿ ಗಾಡೆಸ್ ಆಫ್ ಡೆಮೊಕ್ರೆಸಿ." ಇನ್ ಪಾಪ್ಯುಲರ್ ಪ್ರೊಟೆಸ್ಟ್ ಅಂಡ್ ಪೊಲಿಟಿಕಲ್ ಕಲ್ಚರ್ ಇನ್ ಮಾಡರ್ನ್ ಚೈನಾ. ಸಂಪಾದಕರು: ಜೆಫ್ರಿ ಎನ್. ವಸರ್‌ಸ್ಟ್ರಾಮ್ ಮತ್ತು ಎಲಿಜಬೆತ್ ಜೆ. ಪೆರಿ, 140-147. ಬೌಲ್ಡರ್, ಕೊಲ್.: ವೆಸ್ಟ್‌ವ್ಯೂ ಪ್ರೆಸ್, 1994.
- ↑ ಹೆನ್ರಿ, ಒ., ಸಿಕ್ಸಸ್ ಅಂಡ್ ಸೆವೆನ್ಸ್, "ದಿ ಲೇಡಿ ಹೈಯರ್ ಅಪ್." ಪ್ರಾಜೆಕ್ಟ್ ಗುಟೆನ್ಬರ್ಗ್ ಟೆಕ್ಸ್ಟ್
- ↑ "Lady Liberty on Lake Mendota". Archived from the original on 2009-07-08. Retrieved 2009-12-17.
- ↑ ಪೌಂಡ್‌ಸ್ಟೋನ್, ವಿಲಿಯಮ್. (1986). ಬಿಗರ್.ಸೀಕ್ರೆಟ್ಸ್ ಹೌಟನ್ ಮಿಫ್ಲಿನ್
- ↑ ಲೈವ್ ವಿತ್ ರೆಜಿಸ್ ಅಂಡ್ ಕೆಲ್ಲಿ, ಫೆ. 11, 2009 ಸೆಗ್ಮೆಂಟ್ ಟೈಟ್ಲ್‌ಡ್ 'ಫನ್ ಫ್ಯಾಕ್ಟ್ಸ್.'
ಹೆಚ್ಚಿನ ಓದಿಗಾಗಿ
[ಬದಲಾಯಿಸಿ]- ಹೋಲ್ಡ್‌ಸ್ಟಾಕ್, ರಾಬರ್ಟ್, ಸಂಪಾದಕರು. ಎನ್ಸೈಕ್ಲೊಪೀಡಿಯಾ ಆಫ್ ಸಯನ್ಸ್ ಫಿಕ್ಷನ್ . ಲಂಡನ್: ಆಕ್ಟೊಪಸ್ ಬುಕ್ಸ್, 1978.
- ಮೊರೆನೊ, ಬ್ಯಾರಿ. The ಸ್ಟ್ಯಾಚ್ಯೂ ಆಫ್ ಲಿಬರ್ಟಿ ಎನ್ಸೈಕ್ಲೊಪೀಡಿಯಾ . ನ್ಯೂಯಾರ್ಕ್: ಸೈಮನ್ ಅಂಡ್ ಸ್ಕಸ್ಟರ್, 2000.
- ಸ್ಮಿತ್, ವಿ. ಎಲೇನ್, "ಇಂಜಿನಿಯರಿಂಗ್ ಮಿಸ್ ಲಿಬರ್ಟಿಸ್ ರೆಸ್ಕ್ಯೂ." ಪಾಪ್ಯುಲರ್ ಸಯನ್ಸ್, ಜೂನ್ 1986, ಪುಟ 68.
- ವಿಡಾಲ್, ಪಿಯರ್. ಫ್ರೆಡೆರಿಕ್-ಆಗಸ್ಟ್ ಬಾರ್ತೊಲ್ಡಿ 1834–1904: ಪಾರ್ ಲಾ ಮೈನ್, ಪಾರ್ ಲ್'ಎಸ್ಪ್ರಿಟ್. ಪ್ಯಾರಿಸ್: ಲೆಸ್ ಕ್ರೆಯೆಷನ್ಸ್ ಡು ಪೆಲಿಕಾನ್, 2000.
ಬಾಹ್ಯ ಕೊಂಡಿಗಳು
[ಬದಲಾಯಿಸಿ]- ಸ್ಟ್ಯಾಚ್ಯೂ ಆಫ್ ಲಿಬರ್ಟಿ ನ್ಯಾಷನಲ್ ಮಾನ್ಯುಮೆಂಟ್ ಐತಿಹಾಸಿಕ ಸ್ಥಳದ ಅಧಿಕೃತ ಕೈಪಿಡಿ.
- ಸ್ಟ್ಯಾಚ್ಯೂ ಆಫ್ ಲಿಬರ್ಟಿ ನ್ಯಾಷನಲ್ ಮಾನ್ಯುಮೆಂಟ್ ಭೇಟಿಗಾರ ಮಾಹಿತಿ.
- ಸ್ವಾತಂತ್ರ್ಯದ ಪ್ರತಿಮೆಯ ಕುರಿತು PBS ಸಾಕ್ಷ್ಯಚಿತ್ರ
- ಅಮೆರಿಕನ್ ಕ್ಲ್ಯಾಸಿಕ್: ಲೇಡಿ ಲಿಬರ್ಟಿ Archived 2010-03-16 ವೇಬ್ಯಾಕ್ ಮೆಷಿನ್ ನಲ್ಲಿ. - ಲೈಫ್ ಮ್ಯಾಗಜೀನ್ ರವರ ಸ್ಲೈಡ್ಷೋ
- ಅಲೆಕ್ಸಾಂಡ್ರಾ ಕೊಲಾಂಟೆ ಅವರ ಲೇಖನ, 'ದಿ ಸ್ಟ್ಯಾಚ್ಯೂ ಆಫ್ ಲಿಬರ್ಟಿ', 1916.
- ಐತಿಹಾಸಿಕ ಮಾಹಿತಿ ಮತ್ತು ಛಾಯಾಚಿತ್ರಗಳು
- ಸ್ವಾತಂತ್ರ್ಯದ ಪ್ರತಿಮೆ ಗ್ಯಾಲರಿ ಚಿತ್ರಗಳು Archived 2009-06-14 ವೇಬ್ಯಾಕ್ ಮೆಷಿನ್ ನಲ್ಲಿ.
- Statue of Liberty at Structurae
- ಸ್ವಾತಂತ್ರ್ಯದ ಪ್ರತಿಮೆ ಪೀಠದ ನಿರ್ಮಾಣ ಕುರಿತು ಹಾರ್ಪರ್ರ ವಾರದ ವ್ಯಂಗ್ಯಚಿತ್ರ (NY ಟೈಮ್ಸ್ 5/2/1885 ಆನ್ ದಿಸ್ ಡೇ ಸೈಟೆಷನ್)
- ಸ್ವಾತಂತ್ರ್ಯದ ಪ್ರತಿಮೆ-ಎಲ್ಲಿಸ್ ಐಲೆಂಡ್ ಫೌಂಡೇಷನ್ ವಿನೋದಾವಳಿಗಳು, ಮಕ್ಕಳ ಚಿತ್ರಕಲಾ ಸ್ಪರ್ಧೆ ಮತ್ತು ಪ್ರತಿಷ್ಠಾನದ ಕುರಿತು ಇತರೆ ಮಾಹಿತಿ.
- Pages with non-numeric formatnum arguments
- CS1 errors: redundant parameter
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಜನವರಿ 2023
- Articles with invalid date parameter in template
- ಶಾಶ್ವತವಾಗಿ ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಎಲ್ಲಾ ಲೇಖನಗಳು
- CS1 errors: extra text: pages
- ವೆಬ್ ಆರ್ಕೈವ್ ಟೆಂಪ್ಲೇಟಿನ ವೇಬ್ಯಾಕ್ ಕೊಂಡಿಗಳು
- CS1 errors: empty unknown parameters
- ಮಡಿದ ಬಾಹ್ಯ ಕೊಂಡಿಗಳನ್ನು ಹೊಂದಿರುವ ಲೇಖನಗಳು from ಆಗಸ್ಟ್ 2021
- CS1 errors: dates
- CS1 errors: unrecognized parameter
- Articles containing French-language text
- Articles with unsourced statements from September 2009
- Articles with hatnote templates targeting a nonexistent page
- Commons link from Wikidata
- Coordinates on Wikidata
- ವಾಸ್ತುಶಿಲ್ಪ
- ಲಿಬರ್ಟಿಯ ಪ್ರತಿಮೆ
- ಫ್ರೆಂಚ್ ವಾಸ್ತುಶಿಲ್ಪ
- ಫ್ರಾನ್ಸ್‌ನ ಇತಿಹಾಸ
- 1886ರಲ್ಲಿನ ಸ್ಥಾಪನೆಗಳು
- ಭಾವಾರ್ಥದ ಶಿಲ್ಪಕಲೆಗಳು
- ದೈತ್ಯಾಕಾರದ ಪ್ರತಿಮೆಗಳು
- ಫ್ರಾನ್ಸ್ – ಅಮೆರಿಕಾ ಸಂಯುಕ್ತ ಸಂಸ್ಥಾನ ಸಂಬಂಧಗಳು
- ಐತಿಹಾಸಿಕ ಲೋಕೋಪಯೋಗಿ ಶಿಲ್ಪವೈಜ್ಞಾನಿಕ ಹೆಗ್ಗುರುತುಗಳು
- ನ್ಯೂಯಾರ್ಕ್ನಲ್ಲಿನ ಇತಿಹಾಸ ಸಂಗ್ರಹಾಲಯಗಳು
- ಅಮೆರಿಕಾ ಸಂಯುಕ್ತ ಸಂಸ್ಥಾನಕ್ಕೆ ವಲಸೆಯ ಇತಿಹಾಸ
- ನ್ಯೂಯಾರ್ಕ್ ನಗರದಲ್ಲಿನ ಹೆಗ್ಗುರುತುಗಳು
- ಲಿಬರ್ಟಿ ಲಾಂಛನಗಳು
- ನ್ಯೂಯಾರ್ಕ್ನಲ್ಲಿನ ದೀಪಸ್ತಂಭಗಳು
- ನ್ಯಾಷನಲ್ ರಿಜಿಸ್ಟರ್ ಆಫ್ ಹಿಸ್ಟಾರಿಕ್ ಪ್ಲೇಸಸ್ನಲ್ಲಿ ದೀಪಸ್ತಂಭಗಳು
- ನ್ಯೂಯಾರ್ಕ್ನಲ್ಲಿನ ರಾಷ್ಟ್ರೀಯ ಸ್ಮಾರಕಗಳು
- ರಾಷ್ಟ್ರೀಯ ಮೂರ್ತರೂಪದ ಆದರ್ಶ ವ್ಯಕ್ತಿಗಳು
- ಸಂಯುಕ್ತ ಸಂಸ್ಥಾನದ ರಾಷ್ಟ್ರೀಯ ಚಿಹ್ನೆಗಳು
- ನ್ಯೂಯಾರ್ಕ್ ನಗರದ ಹೊರಾಂಗಣ ಶಿಲ್ಪಕಲೆಗಳು
- ರಿಚರ್ಡ್ ಮಾರಿಸ್ ಹಂಟ್ ಕಟ್ಟಡಗಳು
- ನ್ಯೂಯಾರ್ಕ್ ನಗರದ ಸಂದರ್ಶಕರ ಆಕರ್ಷಣೆಗಳು
- ಅಮೆರಿಕಾ ಸಂಯುಕ್ತ ಸಂಸ್ಥಾನದಲ್ಲಿ ವಿಶ್ವ ಪರಂಪರೆಯ ಸ್ಥಳಗಳು
- ಮ್ಯಾನ್ಹ್ಯಾಟನ್ನಲ್ಲಿನ ವಸ್ತುಸಂಗ್ರಹಾಲಯಗಳು
- ಅಮೇರಿಕ ಸಂಯುಕ್ತ ಸಂಸ್ಥಾನದ ಪ್ರೇಕ್ಷಣೀಯ ಸ್ಥಳಗಳು