ಪ್ರಭಾಮಂಡಲ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬುದ್ಧನ ವಿಗ್ರಹದ ತಲೆಯ ಸುತ್ತಲಿರುವ ಪ್ರಭಾಮಂಡಲ

ಪ್ರಭಾಮಂಡಲವು (ಪ್ರಭಾವಳಿ) ಕಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಸುತ್ತುವರಿಯುವ ಬೆಳಕಿನ ಕಿರಣಗಳ ಮುಕುಟ, ಬೆಳಕಿನ ವೃತ್ತ ಅಥವಾ ಬಿಂಬ.[೧] ಪವಿತ್ರ ವ್ಯಕ್ತಿಗಳನ್ನು ಸೂಚಿಸಲು ಇದನ್ನು ಅನೇಕ ಧರ್ಮಗಳ ಮೂರ್ತಿಶಿಲ್ಪದಲ್ಲಿ ಬಳಸಲಾಗಿದೆ, ಮತ್ತು ವಿವಿಧ ಅವಧಿಗಳಲ್ಲಿ ಅರಸರು ಅಥವಾ ವೀರರ ಚಿತ್ರಗಳಲ್ಲಿಯೂ ಬಳಸಲಾಗಿದೆ. ಪ್ರಾಚೀನ ಗ್ರೀಸ್, ಪ್ರಾಚೀನ ರೋಮ್, ಇತರ ಧರ್ಮಗಳ ಪೈಕಿ ಹಿಂದೂ ಧರ್ಮ, ಬೌದ್ಧ ಧರ್ಮ, ಇಸ್ಲಾಂ ಧರ್ಮ ಮತ್ತು ಕ್ರೈಸ್ತ ಧರ್ಮದ ಪವಿತ್ರ ಕಲೆಯಲ್ಲಿ, ಪೂಜ್ಯ ವ್ಯಕ್ತಿಗಳನ್ನು ತಲೆಯ ಸುತ್ತ, ಅಥವಾ ಸಂಪೂರ್ಣ ಶರೀರದ ಸುತ್ತ, ವೃತ್ತಾಕಾರದ ಕಾಂತಿ, ಅಥವಾ ಏಷ್ಯನ್ ಕಲೆಯಲ್ಲಿ ಜ್ವಾಲೆಗಳ ರೂಪದಲ್ಲಿರುವ ಪ್ರಭಾಮಂಡಲದೊಂದಿಗೆ ಚಿತ್ರಿಸಬಹುದು. ಪ್ರಭಾಮಂಡಲಗಳನ್ನು ಬಹುತೇಕ ಯಾವುದೇ ಬಣ್ಣ ಅಥವಾ ಬಣ್ಣಗಳ ಸಂಯೋಜನೆಯಾಗಿ ತೋರಿಸಬಹುದು, ಆದರೆ ಬೆಳಕನ್ನು ಪ್ರತಿನಿಧಿಸುವಾಗ ಬಹುತೇಕ ವೇಳೆ ಬಂಗಾರದ ಬಣ್ಣ, ಹಳದಿ ಅಥವಾ ಬಿಳಿ ಬಣ್ಣದ್ದಾಗಿ ಅಥವಾ ಜ್ವಾಲೆಗಳನ್ನು ಪ್ರತಿನಿಧಿಸುವಾಗ ಕೆಂಪು ಬಣ್ಣದ್ದಾಗಿ ಚಿತ್ರಿಸಲಾಗುತ್ತದೆ.

ಉಲ್ಲೇಖಗಳು[ಬದಲಾಯಿಸಿ]

  • Aster, Shawn Zelig, The Unbeatable Light: Melammu and Its Biblical Parallels, Alter Orient und Altes Testament vol. 384 (Münster), 2012,  ISBN 978-3-86835-051-7
  • Crill, Rosemary, and Jariwala, Kapil. The Indian Portrait, 1560–1860, National Portrait Gallery, London, 2010,  ISBN 978-1-85514-409-5
  • Didron, Adolphe Napoléon, Christian Iconography: Or, The History of Christian Art in the Middle Ages, Translated by Ellen J. Millington, H. G. Bohn, (Original from Harvard University, Digitized for Google Books) – Volume I, Part I (pp. 25–165) is concerned with the halo in its different forms, though the book is not up to date.
  • Dodwell, C. R., The Pictorial arts of the West, 800–1200, 1993, Yale UP,  ISBN 0-300-06493-4
  • Rhie, Marylin and Thurman, Robert (eds.): Wisdom And Compassion: The Sacred Art of Tibet, 1991,  ISBN 0-8109-2526-5
  • Schiller, Gertrud, Iconography of Christian Art, Vol. I, 1971 (English trans from German), Lund Humphries, London,  ISBN 0-85331-270-2

ಬಾಹ್ಯ ಕೊಂಡಿಗಳು[ಬದಲಾಯಿಸಿ]

  1. "halo – art". britannica.com.