ಸ್ಟೀರಾಯ್ಡ್
ಸ್ಟೀರಾಯ್ಡ್ ಎಂದರೆ ಜೀವಿಗಳಲ್ಲಿರುವ ಅನೇಕ ಸಂಕೀರ್ಣ ಹೈಡ್ರೊಕಾರ್ಬನ್‍ಗಳ ಪೈಕಿ ಯಾವುದೇ ಒಂದು.[೧] ಇವೆಲ್ಲವೂ ಒಂದು ಜಾತಿಯ ರಾಸಾಯನಿಕಗಳು. ಇವುಗಳ ಮೂಲರಚನೆಯಲ್ಲಿ ಒಂದು ಚಕ್ರವಿದೆ. ಈ ಗುಂಪಿಗೆ 11 ಬಗೆಯವು ಸೇರಿವೆ. ಪ್ರೊಜೆಸ್ಟಿರಾನ್, ಅಡ್ರಿನಲ್ ಕಾರ್ಟಿಕಲ್ ಹಾರ್ಮೋನ್, ಜನನ ಗ್ರಂಥಿಗಳ ಹಾರ್ಮೋನ್, ಹೃದಯ ಗ್ಲೈಕೊಸೈಡ್, ಪಿತ್ತಾಮ್ಲ, ಕೊಲೆಸ್ಟಿರಾಲ್, ಕಪ್ಪೆ ವಿಷ, ಸ್ಯಾಪೊನಿನ್‌ಗಳು, ಕ್ಯಾನ್ಸರ್‌ಕಾರಕ ಹೈಡ್ರೊಕಾರ್ಬನ್, ಉಪಚಯಕ (ಅನಬಾಲಿಕ್) ಸ್ಟೀರಾಯ್ಡ್ ಮತ್ತು ಟೆಸ್ಟೊಸ್ಟಿರಾನ್.[೨]: 10–19 ಹಲವು ಬಗೆಯ ಕಾಯಿಲೆಗಳಲ್ಲಿ ಇವನ್ನು ಔಷಧಿಗಳಾಗಿ ಬಳಸುತ್ತಾರೆ.
ಉತ್ಪಾದನೆ
[ಬದಲಾಯಿಸಿ]ಇದು ಮುಖ್ಯವಾಗಿ ಅಡ್ರಿನಲ್ ಮತ್ತು ಜನನ ಗ್ರಂಥಿಗಳಲ್ಲಿ ನಡೆಯುತ್ತದೆ. ಕೆಲವು ಸಸ್ಯಮೂಲ ರಾಸಾಯನಿಕಗಳನ್ನು ಪರಿವರ್ತಿಸಿ ಸ್ಟೀರಾಯ್ಡ್‌ಗಳನ್ನು ತಯಾರಿಸುವುದು ಸಾಧ್ಯವೆಂದು ಗೊತ್ತಾಗಿದೆ. ಇಂಥವುಗಳ ತಯಾರಿಕೆ ಕಡಿಮೆ ವೆಚ್ಚದಲ್ಲಿ ಸಾಧ್ಯ.
ಉಪಯೋಗಗಳು
[ಬದಲಾಯಿಸಿ]ಅಲರ್ಜಿ, ಊತ, ಉರಿಯೂತ, ತ್ವಚೆಯ ಉರಿಯೂತ — ಇಂಥ ಅಸುಖಗಳ ನಿವಾರಣೆಗೂ, ಜನನ ನಿರೋಧಕಗಳಾಗಿ ಮತ್ತು ಹಾರ್ಮೋನ್ ಅಭಾವ ನಿವಾರಕಗಳಾಗಿಯೂ ಸ್ಟೀರಾಯ್ಡುಗಳ ಉಪಯೋಗ ಉಂಟು.
ಕಾರ್ಟಿಸೋನ್, ಆಲ್ಡೊಸ್ಟಿರೋನ್, ಪ್ರೆಡ್ನಿಸೋನ್ ಮತ್ತು ಪ್ರೆಡ್ನಿಸಲೋನ್ ಪ್ರಮುಖ ಸ್ಟೀರಾಯ್ಡುಗಳು. ಈಚಿನ ದಿನಗಳಲ್ಲಿ ಸ್ಟೀರಾಯ್ಡುಗಳನ್ನು ಜೈವತಂತ್ರವಿದ್ಯಾವಿಧಾನದಿAದ ತಯಾರಿಸಲಾಗುತ್ತಿದೆ.
ಉಲ್ಲೇಖಗಳು
[ಬದಲಾಯಿಸಿ]- ↑ Clayton, Raymond Brazenor and Kluger, Ronald H.. "steroid". Encyclopedia Britannica, 14 Jan. 2024, https://www.britannica.com/science/steroid. Accessed 25 March 2024.
- ↑ Lednicer D (2011). Steroid Chemistry at a Glance. Hoboken: Wiley. ISBN 978-0-470-66084-3.
ಗ್ರಂಥಸೂಚಿ
[ಬದಲಾಯಿಸಿ]- Russel CA (2005). "Organic Chemistry: Natural products, Steroids". In Russell CA, Roberts GK (eds.). Chemical History: Reviews of the Recent Literature. Cambridge: RSC Publ. ISBN 978-0-85404-464-1.
- "Russell Marker Creation of the Mexican Steroid Hormone Industry - Landmark -". American Chemical Society. 1999. Archived from the original on 12 February 2020. Retrieved 10 May 2014.