ಸುಚೇತಾ ದಲಾಲ್
ಸುಚೇತಾ ದಲಾಲ್ | |
---|---|
ಜನನ | ೧೯೬೨ (ವಯಸ್ಸು ೬೧-೬೨) ಬಾಂಬೆ, ಮಹಾರಾಷ್ಟ್ರ, ಭಾರತ |
ಶಿಕ್ಷಣ ಸಂಸ್ಥೆ | ಕರ್ನಾಟಕ ಕಾಲೇಜು, ಧಾರವಾಡ ಬಾಂಬೆ ವಿಶ್ವವಿದ್ಯಾಲಯ |
ವೃತ್ತಿ | ವ್ಯಾಪಾರ ಪತ್ರಿಕೋದ್ಯಮ |
ಗಮನಾರ್ಹ ಕೆಲಸಗಳು | ೧೯೯೨ ಭಾರತೀಯ ಷೇರು ಮಾರುಕಟ್ಟೆ ಹಗರಣ |
ಹೆಸರಾಂತ ಕೆಲಸಗಳು | ೧೯೯೨ ಸೆಕ್ಯುರಿಟೀಸ್ ಹಗರಣ |
ಸಂಗಾತಿ | ದೇಬಾಶಿಸ್ ಬಸು |
ಪ್ರಶಸ್ತಿಗಳು | ಪದ್ಮಶ್ರೀ, ೨೦೦೬ರಲ್ಲಿ |
ಜಾಲತಾಣ | moneylife .in |
ಸುಚೇತಾ ದಲಾಲ್ (ಜನನ ೧೯೬೨) ಒಬ್ಬ ಭಾರತೀಯ ವ್ಯಾಪಾರ ಪತ್ರಕರ್ತೆ ಮತ್ತು ಲೇಖಕಿ.[೧] ಅವರು ಎರಡು ದಶಕಗಳಿಗೂ ಹೆಚ್ಚು ಕಾಲ ಪತ್ರಕರ್ತರಾಗಿದ್ದರು ಮತ್ತು ೨೦೦೬ರಲ್ಲಿ ಪತ್ರಿಕೋದ್ಯಮ ವಿಷಯಕ್ಕಾಗಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದರು.[೨] ಅವರು ೧೯೯೮ ರವರೆಗೆ ಟೈಮ್ಸ್ ಆಫ್ ಇಂಡಿಯಾದಲ್ಲಿ ಹಣಕಾಸು ಸಂಪಾದಕರಾಗಿದ್ದರು, ನಂತರ ಇಂಡಿಯನ್ ಎಕ್ಸ್ಪ್ರೆಸ್ ಸಮೂಹಕ್ಕೆ ಸಲಹಾ ಸಂಪಾದಕರಾಗಿ ಸೇರಿ ೨೦೦೮ ರಲ್ಲಿ ತೊರೆದರು. ಹರ್ಷದ್ ಮೆಹ್ತಾ ಅವರು ಪ್ರಚಾರ ಮಾಡಿದ ೧೯೯೨ರ ಷೇರು ಮಾರುಕಟ್ಟೆ ಹಗರಣವನ್ನು ಬಹಿರಂಗಪಡಿಸಿದ್ದಕ್ಕಾಗಿ ಅವರು ಹೆಸರುವಾಸಿಯಾಗಿದ್ದಾರೆ.
೨೦೦೬ರಲ್ಲಿ ಆಕೆ ತಮ್ಮ ಪತಿ ದೇಬಾಶಿಸ್ ಬಸು ಪ್ರಾರಂಭಿಸಿದ ಮನಿಲೈಫ್ ಎಂಬ ಹೂಡಿಕೆಯ ಕುರಿತ ಹದಿನೈದು ದಿನಗಳ ನಿಯತಕಾಲಿಕೆಯಲ್ಲಿ ಬರೆಯಲು ಪ್ರಾರಂಭಿಸಿದರು. ಈಗ ಆಕೆ ಮನಿಲೈಫ್ನ ವ್ಯವಸ್ಥಾಪಕ ಸಂಪಾದಕಿ. ೨೦೧೦ರಲ್ಲಿ ಭಾರತದಲ್ಲಿ ಕಳಪೆ ಆರ್ಥಿಕ ಸಾಕ್ಷರತೆಗೆ ಪ್ರತಿಕ್ರಿಯಿಸಿದ ಆಕೆ ಮತ್ತು ಆಕೆಯ ಪತಿ ಮುಂಬೈ ಮೂಲದ ಲಾಭರಹಿತ ಸಂಸ್ಥೆಯಾದ ಮನಿ ಲೈಫ್ ಫೌಂಡೇಶನ್ ಅನ್ನು ಸ್ಥಾಪಿಸಿದರು. ಅಕೆ ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಹೂಡಿಕೆದಾರರ ಶಿಕ್ಷಣ ಮತ್ತು ಸಂರಕ್ಷಣಾ ನಿಧಿಯ ಸದಸ್ಯರಾಗಿದ್ದಾರೆ. ಅವರಿಗೆ ಅತ್ಯುತ್ತಮ ಮಹಿಳಾ ಮಾಧ್ಯಮ ವ್ಯಕ್ತಿಗಳಿಗಾಗಿ ನೀಡುವ ಚಮೇಲಿ ದೇವಿ ಜೈನ್ ಪ್ರಶಸ್ತಿಯನ್ನು ೧೯೯೨ರಲ್ಲಿ ನೀಡಿ ಗೌರವಿಸಲಾಯಿತು.[೩]
ಶಿಕ್ಷಣ ಮತ್ತು ವೃತ್ತಿಜೀವನ
[ಬದಲಾಯಿಸಿ]ಸುಚೇತಾ ಹಿಂದೂ ಜಾಟ್ ಕುಟುಂಬದಲ್ಲಿ ಜನಿಸಿದವರು. ಇವರು ಬೆಳಗಾವಿಯ ಸೇಂಟ್ ಜೋಸೆಫ್ಸ್ ಕಾನ್ವೆಂಟ್ ಶಾಲೆಯಲ್ಲಿ ಶಾಲಾ ಶಿಕ್ಷಣವನ್ನು ಪಡೆದರು.[೪] ನಂತರ ಅವರು ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಬಿ. ಎಸ್ಸಿ ಸ್ಟ್ಯಾಟಿಸ್ಟಿಕ್ಸ್ ಅಧ್ಯಯನ ಮಾಡಿದರು. ಆಕೆ ತರಬೇತಿ ಪಡೆದ ವಕೀಲರಾಗಿದ್ದು, ಎಲ್. ಎಲ್. ಎಂ ಮತ್ತು ಎಲ್ .ಎಲ್. ಬಿಯನ್ನು ಬಾಂಬೆ ವಿಶ್ವವಿದ್ಯಾಲಯದಲ್ಲಿ ಪಡೆದಿದ್ದಾರೆ. [೫]
೧೯೮೪ರಲ್ಲಿ ಸುಚೇತಾ ಅವರು ಹೂಡಿಕೆ ನಿಯತಕಾಲಿಕೆಯಾದ ಫಾರ್ಚೂನ್ ಇಂಡಿಯಾದಲ್ಲಿ ಕೆಲಸ ಪಡೆಯುವ ಮೂಲಕ ಪತ್ರಿಕೋದ್ಯಮದಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು. ನಂತರ, ಅವರು ಬಿಸಿನೆಸ್ ಸ್ಟ್ಯಾಂಡರ್ಡ್ ಮತ್ತು ದಿ ಎಕನಾಮಿಕ್ ಟೈಮ್ಸ್ ನಂತಹ ಸುದ್ದಿ ಕಂಪನಿಗಳಲ್ಲಿ ಕೆಲಸ ಮಾಡಿದರು. [೬]೧೯೯೦ರ ದಶಕದ ಆರಂಭದಲ್ಲಿ ದಲಾಲ್ ಅವರು ಮುಂಬೈ ಮೂಲದ ಪ್ರಮುಖ ಪತ್ರಿಕೆಯಾದ ಟೈಮ್ಸ್ ಆಫ್ ಇಂಡಿಯಾದಲ್ಲಿ ವ್ಯಾಪಾರ ಮತ್ತು ಅರ್ಥಶಾಸ್ತ್ರ ವಿಭಾಗಕ್ಕೆ ಪತ್ರಕರ್ತರಾಗಿ ಕೆಲಸಕ್ಕೆ ಸೇರಿದರು. ಅಲ್ಲಿ ಅವರು ಪತ್ರಿಕೋದ್ಯಮ ಮತ್ತು ಕ್ರಿಯಾವಾದ ಕ್ಷೇತ್ರಗಳಲ್ಲಿ ಅಂತಿಮವಾಗಿ ತನ್ನ ಪ್ರಾಮುಖ್ಯತೆಗೆ ಕಾರಣವಾದ ಹಲವಾರು ಪ್ರಕರಣಗಳನ್ನು ತನಿಖೆ ಮಾಡಿದರು. ಅವುಗಳೆಂದರೆ,೧೯೯೨ರ ಹರ್ಷದ್ ಮೆಹ್ತಾ ಹಗರಣ, ಎನ್ರಾನ್ ಹಗರಣ, ಇಂಡಸ್ಟ್ರಿಯಲ್ ಡೆವಲಪ್ಮೆಂಟ್ ಬ್ಯಾಂಕ್ ಆಫ್ ಇಂಡಿಯಾ ಹಗರಣ , ೨೦೦೧ರ ಕೇತನ್ ಪರೇಖ್ ಹಗರಣ ಇತ್ಯಾದಿಗಳು. ಆಕೆ ದೇಬಾಶಿಸ್ ಬಸು, ಗಿರೀಶ್ ಸಂತ, ಶಂತನು ದೀಕ್ಷಿತ್ ಮತ್ತು ಪ್ರದ್ಯುಮ್ನ ಕೌಲ್ ಅವರಂತಹ ಪತ್ರಕರ್ತರು ಮತ್ತು ವಿಶ್ಲೇಷಕರೊಂದಿಗೆ ನಿಕಟವಾಗಿ ಕೆಲಸ ಮಾಡಿದರು. ನಂತರ ಅವರು ಟೈಮ್ಸ್ ಆಫ್ ಇಂಡಿಯಾ ಹಣಕಾಸು ಸಂಪಾದಕರಾದರು.[೭]
ಪ್ರಶಸ್ತಿಗಳು ಮತ್ತು ಮನ್ನಣೆ
[ಬದಲಾಯಿಸಿ]ಸುಚೇತಾ ಅವರಿಗೆ ಪದ್ಮಶ್ರೀ ಪ್ರಶಸ್ತಿ, ಮಾಧ್ಯಮ ಪ್ರತಿಷ್ಠಾನವು ಸ್ಥಾಪಿಸಿದ ಚಮೇಲಿ ದೇವಿ ಪ್ರಶಸ್ತಿ ಮತ್ತು ಪತ್ರಿಕೋದ್ಯಮದಲ್ಲಿ ಅವರ ಉತ್ಸಾಹಭರಿತ ಕೆಲಸಕ್ಕಾಗಿ ಫೆಮಿನಾಸ್ ವುಮನ್ ಆಫ್ ಸಬ್ಸ್ಟಾನ್ಸ್ ಪ್ರಶಸ್ತಿಯನ್ನು ನೀಡಲಾಗಿದೆ. [೮]
ಇವರು ಮತ್ತು ದೇಬಾಶಿಸ್ ಅವರ ಪುಸ್ತಕ ದಿ ಸ್ಕ್ಯಾಮ್ ಅನ್ನು ಆಧರಿಸಿ ಹನ್ಸಲ್ ಮೆಹ್ತಾರವರು ಸ್ಕ್ಯಾಮ್ ೧೯೯೨ ಎಂಬ ಸಾಕ್ಷ್ಯಚಿತ್ರ ಸರಣಿಯನ್ನು ನಿರ್ದೇಶಿಸಿದರು. ಈ ಸರಣಿಯು ೨೦೨೦ರ ಅಕ್ಟೋಬರ್ ನಲ್ಲಿ ಬಿಡುಗಡೆಯಾಯಿತು ಮತ್ತು ದಲಾಲ್ ಅವರ ಪಾತ್ರವನ್ನು ಶ್ರೇಯಾ ಧನ್ವಂತರಿ ನಿರ್ವಹಿಸಿದರು.
ಜನಪ್ರಿಯ ಸಂಸ್ಕೃತಿಯಲ್ಲಿ
[ಬದಲಾಯಿಸಿ]- ನಟಿ ಶ್ರೇಯಾ ಧನ್ವಂತರಿ ಅವರು ಸೋನಿ ಲಿವ್ ನ ಮೂಲ ಸರಣಿಯಾದ ಸ್ಕ್ಯಾಮ್ ೧೯೯೨ ರಲ್ಲಿ ಸುಚೇತಾ ದಲಾಲ್ ಪಾತ್ರವನ್ನು ನಿರ್ವಹಿಸಿದ್ದಾರೆ. ಇದು ಅವರ ಸ್ವಂತ ಪುಸ್ತಕ ದಿ ಸ್ಕ್ಯಾಮ್ಃ ಹೂ ವಾನ್, ಹೂ ಲಾಸ್ಟ್, ಹೂ ಗಾಟ್ ಅವೇ ಅನ್ನು ಆಧರಿಸಿತ್ತು.
- ನಟಿ ಇಲಿಯಾನಾ ಡಿ ಕ್ರೂಜ್ ಅವರು ೨೦೨೧ ರ ಚಲನಚಿತ್ರ ದಿ ಬಿಗ್ ಬುಲ್ ಸುಚೇತಾ ದಲಾಲ್ನಿಂದ ಸ್ಫೂರ್ತಿ ಪಡೆದ ಮೀರಾ ರಾವ್ ಪಾತ್ರವನ್ನು ನಿರ್ವಹಿಸಿದ್ದಾರೆ, ಇದು ಅದೇ ಪುಸ್ತಕವನ್ನು ಆಧರಿಸಿದೆ.[೯]
ಉಲ್ಲೇಖಗಳು
[ಬದಲಾಯಿಸಿ]- ↑ "Sucheta Dalal, Padma Shri". Express India. 27 Jan 2006. Archived from the original on 22 March 2016. Retrieved 21 May 2015.
{{cite news}}
: CS1 maint: unfit URL (link) - ↑ "Padma Awards" (PDF). Ministry of Home Affairs, Government of India. 2015. Archived from the original (PDF) on 15 ಅಕ್ಟೋಬರ್ 2015. Retrieved 21 July 2015.
- ↑ "Sucheta Dalal: Executive Profile & Biography". Bloomberg. Retrieved 9 March 2019.
- ↑ "St. Joseph's Convent School to celebrate 125 years on Friday". The Hindu (in Indian English). 21 January 2016.
- ↑ "Sucheta Dalal". Retrieved 7 November 2016.
- ↑ Mehrotra, Kriti (2020-11-11). "Sucheta Dalal Now: Where Is Journalist Who Broke Harshad Mehta Story Today?". The Cinemaholic (in ಅಮೆರಿಕನ್ ಇಂಗ್ಲಿಷ್). Retrieved 2020-11-23.
- ↑ "Girish Sant memorial lecture 2015". Prayas (Energy Group). 28 January 2015. Retrieved 7 November 2016.
- ↑ Mehrotra, Kriti (2020-11-11). "Sucheta Dalal Now: Where Is Journalist Who Broke Harshad Mehta Story Today?". The Cinemaholic (in ಅಮೆರಿಕನ್ ಇಂಗ್ಲಿಷ್). Retrieved 2020-11-23.
- ↑ Roy, Priyanka (10 April 2021). "The Big Bull romanticises a criminal in a half-baked story". Telegraph India. Retrieved 2021-04-14.
ಬಾಹ್ಯ ಸಂಪರ್ಕಗಳು
[ಬದಲಾಯಿಸಿ]ಆಯ್ದ ಪ್ರಕಟಣೆಗಳು
[ಬದಲಾಯಿಸಿ]
- ಪುಸ್ತಕಗಳು
- ದೆಬಾಶಿಸ್, ಬಸು; ದಲಾಲ್, ಸುಚೇತಾ (೧೯೯೨), ದ ಸ್ಕ್ಯಾಮ್: ಹು ವೋನ್, ಹು ಲೋಸ್ಟ್, ಹು ಗಾಟ್ ಅವೇ, ಮುಂಬೈ: ಸೌತ್ ಏಷ್ಯಾ ಬಕ್ಸ್, ISBN 81-85944-10-5
- ದಲಾಲ್, ಸುಚೇತಾ (೨೦೦೦), ಎ. ಡಿ. ಶ್ರಾಫ್: ಟೈಟಾನ್ ಆಫ್ ದಿ ಫಿನಾನ್ಸ್ ಆಂಡ್ ಫ್ರೀ ಎಂಟರ್‌ಫ್ರೈಸ್, ನವದೆಹಲಿ: ವಿಕಿಂಗ್, ISBN 0-670-89336-6
- ದೆಬಾಶಿಸ್, ಬಸು; ದಲಾಲ್, ಸುಚೇತಾ (೨೦೨೧), ಆಬ್ಸಲ್ಯೂಟ್ ಪವರ್- ಇನ್ಸೈಡ್ ಸ್ಟೋರೀ ಆಫ್ ದ ನ್ಯಾಷಿನಲ್ ಸ್ಟಾಕ್ ಎಕ್ಸ್ಚೇಂಜ್ ಅಮೇಜ಼ಿಂಗ್ ಸಕ್ಸೆಸ್, ಲೀಡಿಂಗ್ ಟು ಹಬ್ರಿಸ್, ರೆಗ್ಯುಲೇಟರ್ ಕ್ಯಾಪ್ಚರ್ ಆಂಡ್ ಆಲ್ಗೊ ಸ್ಕ್ಯಾಮ್, ಮುಂಬಯಿ: ಕೆನ್ಸೋರ್ಸ್ ಇನ್ಫಾರ್ಮೇಷನ್ ಸರ್ವಿಸ್ ಎಲ್‌ಎಲ್‌ಪಿ, ISBN 978-81-95190-73-7
- CS1 maint: unfit URL
- CS1 Indian English-language sources (en-in)
- CS1 ಅಮೆರಿಕನ್ ಇಂಗ್ಲಿಷ್-language sources (en-us)
- Articles with hCards
- Articles with ISNI identifiers
- Articles with VIAF identifiers
- Articles with WorldCat Entities identifiers
- Articles with LCCN identifiers
- ಕನ್ನಡ ವಿಕಿಪೀಡಿಯ ಸಮುದಾಯ ಬೆಳವಣಿಗೆ
- ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರು