ಸುಂದರ್ ಸಿಂಗ್ ಭಂಡಾರಿ
ಸುಂದರ್ ಸಿಂಗ್ ಭಂಡಾರಿ | |
---|---|
14ನೇ ಗುಜರಾತಿನ ರಾಜ್ಯಪಾಲ | |
In office ೧೮ ಮಾರ್ಚ್೧೯೯೯ – ೭ ಮೇ ೨೦೦೩ | |
ಮುಖ್ಯಮಂತ್ರಿ | ಕೇಶುಭಾಯಿ ಪಟೇಲ್ ನರೇಂದ್ರ ಮೋದಿ |
Preceded by | ಕೇಜಿ. ಬಾಲಕೃಷ್ಣನ್ |
Succeeded by | ಕೈಲಾಸಪತಿ ಮಿಶ್ರಾ |
17ನೇ ಬಿಹಾರದ ರಾಜ್ಯಪಾಲರು | |
In office ೨೭ ಎಪ್ರಿಲ್ ೧೯೯೮ – ೧೫ ಮಾರ್ಚ್ ೧೯೯೯ | |
ಬಿಹಾರದ ಮುಖ್ಯಮಂತ್ರಿ | ರಾಬ್ರಿ ದೇವಿ |
Preceded by | ಅಖ್ಲಾಕುರ್ ರೆಹಮಾನ್ ಕಿದ್ವಾಯಿ |
Succeeded by | ವಿ ಸಿ ಪಾಂಡೆ |
ಸಂಸದ, ರಾಜ್ಯಸಭಾ | |
In office ೫ ಜುಲೈ ೧೯೯೨ – ೨೬ ಎಪ್ರಿಲ್ ೧೯೯೮ | |
Constituency | ರಾಜಸ್ಥಾನ |
In office ೩ ಎಪ್ರಿಲ್ ೧೯೭೬ – ೨ ಎಪ್ರಿಲ್ ೧೯೮೨ | |
Constituency | ಉತ್ತರ ಪ್ರದೇಶ |
In office ೩ ಎಪ್ರಿಲ್ ೧೯೬೬ – ೨ ಎಪ್ರಿಲ್ ೧೯೭೨ | |
Constituency | ರಾಜಸ್ಥಾನ |
Personal details | |
Born | Udaipur | ೧೨ ಏಪ್ರಿಲ್ ೧೯೨೧
Died | ೨೨ ಜೂನ್ ೨೦೦೫ (ವಯಸ್ಸು ೮೪) |
Political party | ಭಾರತೀಯ ಜನತಾ ಪಕ್ಷ |
Parent |
|
Education | ಎಂಎ, ಎಲ್ ಎಲ್ ಬಿ |
Alma mater | en:DAV College, Kanpur |
ಸುಂದರ್ ಸಿಂಗ್ ಭಂಡಾರಿ (೧೨ ಏಪ್ರಿಲ್ ೧೯೨೧ – ೨೨ ಜೂನ್ ೨೦೦೫) ಒಬ್ಬ ಭಾರತೀಯ ರಾಜಕಾರಣಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರು ಮತ್ತು ಭಾರತೀಯ ಜನಸಂಘ ಮತ್ತು ಭಾರತೀಯ ಜನತಾ ಪಕ್ಷಕ್ಕೆ ಸೇರಿದ ರಾಜಕಾರಣಿ. [೧]
ಆರಂಭಿಕ ಜೀವನ ಮತ್ತು ಶಿಕ್ಷಣ
[ಬದಲಾಯಿಸಿ]ಇವರು ೧೯೨೧ ರಲ್ಲಿ ಉದಯಪುರದಲ್ಲಿ ಡಾ. ಸುಜನ್ ಸಿಂಗ್ಜಿ ಭಂಡಾರಿ ಮತ್ತು ಫುಲ್ಕನ್ವರ್ಬೈಜಿಯವರಿಗೆ ಜನಿಸಿದರು, ಅವರು ತಮ್ಮ ಶಾಲಾ ಶಿಕ್ಷಣವನ್ನು ಸಿರೋಹಿ ಮತ್ತು ಉದಯಪುರದಲ್ಲಿ. ಕಾಲೇಜು ಶಿಕ್ಷಣವನ್ನು ಕಾನ್ಪುರದಲ್ಲಿ ಪಡೆದರು. ಇವರು ೧೯೪೧ ರಲ್ಲಿ ಕಾನ್ಪುರದ ಎಸ್.ಡಿ ಕಾಲೇಜಿನಿಂದ ಕಾನೂನಿನಲ್ಲಿ ಪದವಿಯನ್ನು ಪಡೆದರು. ೧೯೪೨ ರಲ್ಲಿ ಕಾನ್ಪುರದ ದಯಾನಂದ ಆಂಗ್ಲೋ-ವೇದಿಕ್ ಕಾಲೇಜಿನಲ್ಲಿ ಮನೋವಿಜ್ಞಾನದೊಂದಿಗೆ ಕಲೆಯಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು [೨]
ವೃತ್ತಿ
[ಬದಲಾಯಿಸಿ]ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್)ಗೆ ಸೇರುವ ಮೊದಲು ಅವರು ಮೇವಾರ್ ಹೈಕೋರ್ಟ್‌ನಲ್ಲಿ ಸ್ವಲ್ಪ ಸಮಯ ಕಾನೂನು ಅಭ್ಯಾಸ ಮಾಡಿದರು. ಆರ್‌ಎಸ್‌ಎಸ್‌ನಲ್ಲಿ ಹಲವಾರು ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಇವರು ೧೯೫೧ ರಲ್ಲಿ ಸ್ಥಾಪಿಸಲಾದ ರಾಜಕೀಯ ಪಕ್ಷವಾದ ಜನಸಂಘದ ಸ್ಥಾಪಕ ಸದಸ್ಯರಾಗಿದ್ದರು.
ಅವರು ಜನಸಂಘದಲ್ಲಿ ಮತ್ತು ನಂತರ ಬಿಜೆಪಿಯಲ್ಲಿ ವಿವಿಧ ಸಂಘಟನಾ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದರು. ರಾಜ್ಯಪಾಲರಾಗುವ ಮುನ್ನ ಬಿಜೆಪಿಯ ಉಪಾಧ್ಯಕ್ಷರಾಗಿದ್ದರು. ಅವರು ೧೯೬೬-೧೯೭೨ ರ ಅವಧಿಯಲ್ಲಿ ರಾಜಸ್ಥಾನದಿಂದ ಮತ್ತು ೧೯೭೬ ರಲ್ಲಿ ಉತ್ತರ ಪ್ರದೇಶದಿಂದ ಮತ್ತು ೧೯೯೨ ರಲ್ಲಿ ರಾಜ್ಯಸಭೆಗೆ ಆಯ್ಕೆಯಾದರು.
೧೯೭೬ ರಲ್ಲಿ ಇಂದಿರಾಗಾಂಧಿ ಭಾರತದಲ್ಲಿ ಆಂತರಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದಾಗ ದೆಹಲಿ ರೈಲು ನಿಲ್ದಾಣದಲ್ಲಿ ಇವರನ್ನು ಬಂಧಿಸಲಾಯಿತು.
ಇವರು ೨೭ ಏಪ್ರಿಲ್ ೧೯೯೮ ರಂದು ಬಿಹಾರದ ರಾಜ್ಯಪಾಲರಾಗಿ ನೇಮಕಗೊಂಡರು ಮತ್ತು ೧೫ ಮಾರ್ಚ್ ೧೯೯೯ ರವರೆಗೆ ಸೇವೆ ಸಲ್ಲಿಸಿದರು. ೧೮ ಮಾರ್ಚ್ ೧೯೯೯ ರಿಂದ ೬ ಮೇ ೨೦೦೩ ರವರೆಗೆ ಗುಜರಾತ್ ರಾಜ್ಯಪಾಲರಾಗಿ ಸೇವೆ ಸಲ್ಲಿಸಿದರು [೩] ಇವರು ೨೨ ಜೂನ್ ೨೦೦೫ ರಂದು ನಿಧನರಾದರು [೪]
ಉಲ್ಲೇಖಗಳು
[ಬದಲಾಯಿಸಿ]- ↑ Ramaseshan, Radhika (7 October 2009). "Last leg of pracharak era". The Telegraph. Archived from the original on 29 September 2014. Retrieved 2014-09-29.
- ↑ Nation pays tribute to Bhandariji
- ↑ "Gujarat Governor Sundar Singh Bhandari to monitor Keshubhai Patel leadership". India Today (in ಇಂಗ್ಲಿಷ್). Retrieved 2023-10-06.
- ↑ "BJP leader SS Bhandari dead". The Times of India. 2005-06-22. ISSN 0971-8257. Retrieved 2023-10-06.