ಸಿ.ಆರ್.ರಾವ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿ.ಆರ್.ರಾವ್
ಪ್ರೊ.ರಾವ್ ರವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್, ಚೆನ್ನೈ-ಎಪ್ರಿಲ್ ೨೦೧೨
ಜನನ (1920-09-10) ೧೦ ಸೆಪ್ಟೆಂಬರ್ ೧೯೨೦ (ವಯಸ್ಸು ೧೦೩)
ಕರ್ನಾಟಕ, ಮೈಸೂರು,
ಬ್ರಿಟಿಷ್ ಇಂಡಿಯಾ
ಮರಣ22 August 2023(2023-08-22) (aged 102)
ವಾಸಸ್ಥಳಭಾರತ, ಯುನೈಟೆಡ್ ಕಿಂಗ್ಡಮ್, ಯುನೈಟೆಡ್ ಸ್ಟೇಟ್ಸ್
ಪೌರತ್ವಯುನೈಟೆಡ್ ಸ್ಟೇಟ್ಸ್
ಕಾರ್ಯಕ್ಷೇತ್ರಗಣಿತಶಾಸ್ತ್ರ ಮತ್ತು ಅಂಕಿಅಂಶ
ಸಂಸ್ಥೆಗಳುಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್
ಕೇಂಬ್ರಿಡ್ಜ್
ಪೆನ್ಸಿಲ್ವೇನಿಯಾ ಸ್ಟೇಟ್‌‌ ಯುನಿವರ್ಸಿಟಿ
ಬಫೆಲೋ ಯುನಿವರ್ಸಿಟಿ
ಅಭ್ಯಸಿಸಿದ ವಿದ್ಯಾಪೀಠಆಂಧ್ರ ಯುನಿವರ್ಸಿಟಿ
ಯುನಿವರ್ಸಿಟಿ ಆಫ್ ಕಲ್ಕತ್ತಾ
ಕಿಂಗ್ಸ್ ಕಾಲೇಜ್,ಕೇಂಬ್ರಿಡ್ಜ್
ಮಹಾಪ್ರಬಂಧಸ್ಟ್ಯಾಟಿಸ್ಟಿಕಲ್ ಪ್ರಾಬ್ಲಮ್ಸ್ ಆಫ್ ಬಯೊಲಾಜಿಕಲ್ ಕ್ಲಾಸಿಫಿಕೇಷನ್ (೧೯೪೮)
ಡಾಕ್ಟರೇಟ್ ಸಲಹೆಗಾರರುರೊನಾಲ್ಡ್ ಫಿಶರ್
ಪ್ರಸಿದ್ಧಿಗೆ ಕಾರಣಕ್ರಾಮರ್ ರಾವ್ ಬೌಂಡ್
ರಾವ್ ಬ್ಲ್ಯಾಕ್ ವೆಲ್ ಥಿಯರಂ
ಆರ್ಥೊಗೋನಲ್ ಅರೇಸ್
ಸ್ಕೋರ್ ಟೆಸ್ಟ್
ಗಮನಾರ್ಹ ಪ್ರಶಸ್ತಿಗಳುಪದ್ಮವಿಭೂಷಣ
ನ್ಯಾಷನಲ್ ಮೆಡಲ್ ಆಫ್ ಸೈನ್ಸ್(೨೦೦೧)
ಶಾಂತಿ ಸ್ವರೂಪ್ ಭಟ್ನಗರ್ ಪ್ರೈಸ್ ಫಾರ್ ಸೈನ್ಸ್ ಅಂಡ್ ಟೆಕ್ನಾಲಜಿ
ಗಯ್ ಮೆಡಲ್(ಬೆಳ್ಳಿ ೧೯೬೫, ಚಿನ್ನ ೨೦೧೧)

ಕಲ್ಯಂಪುಡಿ ರಾಧಾಕೃಷ್ಣ ರಾವ್ [೧೦ ಸೆಪ್ಟೆಂಬರ್ ೧೯೨೦ - ೨೨ ಆಗಸ್ಟ್ ೨೦೨೩] ಅವರು ಒಬ್ಬ ಭಾರತೀಯ - ಅಮೇರಿಕನ್ ಗಣಿತಜ್ಞ ಮತ್ತು ಸಂಖ್ಯಾಶಾಸ್ತ್ರಜ್ಞ. ಅವರು ಪೆನ್ಸಿಲ್ವೇನಿಯಾ ಸ್ಟೇಟ್‌‌ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿದ್ದರು ಮತ್ತು ಬಫಲೋ ವಿಶ್ವವಿದ್ಯಾಲಯದ ಸಂಶೋಧನಾ ಪ್ರಾಧ್ಯಾಪಕರಾಗಿದ್ದರು. ರಾವ್ ಅವರನ್ನು ಹಲವು ಕೊಲೊಕ್ವಿಯಾ, ಗೌರವಾನ್ವಿತ ಪದವಿಗಳು ಮತ್ತು ಉತ್ಕೃಷ್ಟತೆಗಳಿಂದ ಗೌರವಿಸಲಾಗಿದೆ ಮತ್ತು ೨೦೦೨ ರಲ್ಲಿ ಯುಎಸ್ ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಪ್ರಶಸ್ತಿಯನ್ನು ಪಡೆದರು. ದಿ ಟೈಮ್ಸ್‌ ಆಫ್‌ ಇಂಡಿಯಾ ವು ಟಾಪ್ ಹತ್ತು ವಿಜ್ಞಾನಿಗಳಲ್ಲಿ ರಾವ್ ರವರೂ ಒಬ್ಬರು ಎಂದು ಪಟ್ಟಿ ಮಾಡಿದೆ. ದಕ್ಷಿಣ ಏಷ್ಯಾಹೃದಯರಕ್ತನಾಳದ ಕಾಯಿಲೆಯ ಅರಿವು ಮೂಡಿಸಲು ಕೇಂದ್ರೀಕರಿಸಿದ ಇಂಡಿಯನ್ ಹಾರ್ಟ್ ಅಸೋಸಿಯೇಷನ್ ನ ಹಿರಿಯ ನೀತಿ ಮತ್ತು ಅಂಕಿಅಂಶಗಳ ಸಲಹೆಗಾರರು ಸಿ.ಆರ್.ರಾವ್.[೧]

ಜನನ, ಜೀವನ[ಬದಲಾಯಿಸಿ]

ಸಿ.ಆರ್.ರಾವ್ ರವರು ಕರ್ನಾಟಕಬಳ್ಳಾರಿ,ಹೂವಿನ ಹಡಗಲಿ ಎಂಬ ಊರಿನಲ್ಲಿ ೧೦ ಸೆಪ್ಟೆಂಬರ್ ೧೯೨೦ ರಂದು ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು ಮತ್ತು ಅವರು ಹತ್ತು ಮಕ್ಕಳ ಪೈಕಿನಲ್ಲಿ ಎರಡನೆಯವರು.[೨] [೩][೪]

ರಾವ್ ಅವರು ೧೯೪೩ ರಲ್ಲಿ ಆಂಧ್ರ ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಎಂ.ಎಸ್ಸಿ. ಮತ್ತು ಕಲ್ಕತ್ತಾ ಯುನಿವರ್ಸಿಟಿಯಲ್ಲಿ ಎಮ್.ಎ ಪದವಿಯನ್ನು ಪಡೆದರು. ೧೯೪೮ ರಲ್ಲಿ ಆರ್.ಎ.ಫಿಶರ್ ಅವರ ನೇತೃತ್ವದಲ್ಲಿ ಕೇಂಬ್ರಿಡ್ಜ್‌‌‌‌‌‌‌‌‌‌‌ ವಿಶ್ವವಿದ್ಯಾನಿಲಯದ ಕಿಂಗ್ಸ್ ಕಾಲೇಜಿನಲ್ಲಿ ಪಿ.ಹೆಚ್.ಡಿ ಪದವಿಯನ್ನು ಪಡೆದರು. ೧೯೬೫ ರಲ್ಲಿ ಕೇಂಬ್ರಿಡ್ಜ್ ನಿಂದ ಇವರು ಎಸ್‌ಸಿ.ಡಿ ಪದವಿಯನ್ನು ಪಡೆದರು.

ಶೈಕ್ಷಣಿಕ ವೃತ್ತಿ[ಬದಲಾಯಿಸಿ]

ರಾವ್ ರವರು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಮತ್ತು ಕೇಂಬ್ರಿಡ್ಜ್ ನ ಮಾನವಶಾಸ್ತ್ರದ ಮ್ಯೂಸಿಯಂನಲ್ಲಿ ಕೆಲಸ ಮಾಡಿದ್ದು ಇಂಡಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ನ ನಿರ್ದೇಶಕ, ಜವಹರಲಾಲ್ ನೆಹರೂ ಪ್ರಾಧ್ಯಾಪಕ ಮತ್ತು ಭಾರತದ ರಾಷ್ಟ್ರೀಯ ಪ್ರೊಫೆಸರ್, ಪಿಟ್ಸ್‌ಬರ್ಗ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಮತ್ತು ಅಂಕಿಅಂಶಗಳ ಅಧ್ಯಕ್ಷರು ಪೆನ್ಸಿಲ್ವೇನಿಯಾ ಸ್ಟೇಟ್ ಯುನಿವರ್ಸಿಟಿಯ ಮಲ್ಟಿವೇರಿಯೇಟ್ ಅನಾಲಿಸಿಸ್ ಕೇಂದ್ರದ ನಿರ್ದೇಶಕರಾಗಿದ್ದು ಹೀಗೆ ಇವರು ಹಲವಾರು ಪ್ರಮುಖ ಸ್ಥಾನಗಳನ್ನು ಹೊಂದಿದ್ದರು. ರಾವ್ ಅವರ ಶಿಫಾರಿಸ್ಸಿನ ಆಧಾರದ ಮೇಲೆ , ಎಎಸ್ಐ(ದ ಏಷಿಯನ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್) ಈಗ ಕರೆಯಲ್ಪಡುವ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ಫಾರ್ ಏಷಿಯಾ ಅಂಡ್ ಫೆಸಿಫಿಕ್ ಎಂಬುದು ಸರ್ಕಾರ ಮತ್ತು ಕೈಗಾರಿಕಾ ಸಂಸ್ಥೆಗಳಲ್ಲಿ ಕೆಲಸ ಮಾಡುವ ಸಂಖ್ಯಾಶಾಸ್ತ್ರಜ್ಞರಿಗೆ ತರಬೇತಿ ನೀಡಲು ಸ್ಥಾಪನೆಯಾಯಿತು.

ಸಂಶೋಧನಾ ಕೊಡುಗೆಗಳು[ಬದಲಾಯಿಸಿ]

 • ಎಸ್ಟಿಮೇಷನ್ ಥಿಯರಿ.
 • ಸಂಖ್ಯಾಶಾಸ್ತ್ತದ ನಿರ್ಣಯ ಮತ್ತು ರೇಖಾತ್ಮಕ ಮಾದರಿಗಳು.
 • ಮಲ್ಟಿವೇರಿಯೇಟ್ ಅನಾಲಿಸಿಸ್.[೫]
 • ಸಂಯೋಜಿತ ವಿನ್ಯಾಸ.
 • ಬಯೋಮೆಟ್ರಿ.
 • ಸಂಖ್ಯಾಶಾಸ್ತ್ರದ ತಳಿಶಾಸ್ತ್ರ.
 • ಕ್ರಿಯಾತ್ಮಕ ಸಮೀಕರಣಗಳು.
 • ಆರ್ಥೋಗೋನಲ್ ರಚನೆಗಳು.
 • ಸಾಮಾನ್ಯ ಮಾತೃಕೆ ವಿಲೋಮಗಳು.

ಪ್ರಶಸ್ತಿಗಳು[ಬದಲಾಯಿಸಿ]

 • ಸರ್ದಾರ್ ಪಟೇಲ್ ಲೈಫ್ ಟೈಮ್ ಅಚೀವ್ಮೆಂಟ್ ಅವಾರ್ಡ್(ಸರ್ದಾರ್ ರತ್ನ)ಆಫ್ ಸರ್ದಾರ್ ಪಟೇಲ್ ಫೌಂಡೇಷನ್ - ೨೦೧೫.
 • ಗಯ್ ಮೆಡಲ್ ಇನ್ ಗೋಲ್ಡ್ ಆಫ್ ದ ರಾಯಲ್ ಸ್ಟ್ಯಾಟಿಸ್ಟಿಕಲ್ ಸೊಸೈಟಿ - ೨೦೧೧.[೬]
 • ಇಂಡಿಯಾ ಸೈನ್ಸ್ ಅವಾರ್ಡ್- ೨೦೧೦.
 • ಇಂಟರ್ನ್ಯಾಷನಲ್ ಮಹಲನೋಬಿಸ್ ಪ್ರೈಸ್ ಆಫ್ ದ ಇಂಟರ್ನ್ಯಾಷನಲ್ ಸ್ಟ್ಯಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ - ೨೦೦೩.
 • ಶ್ರೀನಿವಾಸ ರಾಮಾನುಜನ್ ಮೆಡಲ್ ಆಫ್ ದ ಇಂಡಿಯನ್ ನ್ಯಾಷನಲ್ ಸೈನ್ಸ್ ಅಕಾಡಮಿ - ೨೦೦೩.[೭]
 • ಭಾರತ ಸರ್ಕಾರದಿಂದ ಪದ್ಮವಿಭೂಷಣ - ೨೦೦೧.[೮]
 • ಮಹಲನೋಬಿಸ್ ಸೆಂಟ್ ನರಿ ಗೋಲ್ಡ್ ಮೆಡಲ್ - ೧೯೯೩.
 • ವಿಲ್ಕ್ಸ್ ಮೆಮೊರಿಯಲ್ ಅವಾರ್ಡ್ ಆಫ್‌ ದ ಅಮೇರಿಕನ್ ಸ್ಟ್ಯಾಟಿಸ್ಟಿಕಲ್ ಅಸೋಸಿಯೇಷನ್ - ೧೯೮೯.[೯]
 • ಪದ್ಮ ಭೂಷಣ - ೧೯೬೮.
 • ಗಯ್ ಮೆಡಲ್ ಇನ್ ಸಿಲ್ವರ್ ಆಫ್ ದ ರಾಯಲ್ ಸ್ಟ್ಯಾಟಿಸ್ಟಿಕಲ್ ಸೊಸೈಟಿ - ೧೯೬೫.
 • ಎಸ್.ಎಸ್.ಭಟ್ ನಗರ್ ಅವಾರ್ಡ್ ಆಫ್ ದ ಕೌನ್ಸಿಲ್ ಆಫ್ ಸೈಂಟಿಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್ - ೧೯೬೩.
 • ಜೆ.ಸಿ.ಬೋಸ್ ಗೋಲ್ಡ್ ಮೆಡಲ್ ಆಫ್ ಬೋಸ್ ಇನ್ಸ್ಟಿಟ್ಯೂಟ್ .[೧೦]
 • ಗೋಲ್ಡ್ ಮೆಡಲ್ ಆಫ್ ಯುನಿವರ್ಸಿಟಿ ಆಫ್ ಕಲ್ಕತ್ತಾ.
 • ಯುನಿವರ್ಸಿಟಿ ಆಫ್ ಕಲ್ಕತ್ತಾದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ - ೨೦೦೩.
 • ಇಂಟರ್ ನ್ಯಾಷನಲ್ ಪ್ರೈಸ್ ಆಫ್ ಸ್ಟ್ಯಾಟಿಸ್ಟಿಕ್ಸ್ - 2023'
 • 'ನ್ಯಾಷನಲ್ ಮೆಡಲ್ ಆಫ್ ಸೈನ್ಸ್'

ಉಲ್ಲೇಖಗಳು[ಬದಲಾಯಿಸಿ]

 1. http://www.thankyouindianarmy.com/c-r-rao/
 2. http://www-history.mcs.st-and.ac.uk/Biographies/Rao.html
 3. https://m-mapsofindia-com.cdn.ampproject.org/v/s/m.mapsofindia.com/who-is-who/science-technology/c-r-rao-amppage.html?amp_js_v=a2&amp_gsa=1&usqp=mq331AQCCAE%3D#referrer=https://www.google.com&amp_tf=From%20%251%24s[ಶಾಶ್ವತವಾಗಿ ಮಡಿದ ಕೊಂಡಿ]
 4. https://www.revolvy.com/page/C.-R.-Rao
 5. "ಆರ್ಕೈವ್ ನಕಲು". Archived from the original on 2019-03-10. Retrieved 2019-03-16.
 6. "ಆರ್ಕೈವ್ ನಕಲು". Archived from the original on 2016-08-08. Retrieved 2019-03-16.
 7. https://www.revolvy.com/page/Srinivasa-Ramanujan-Medal
 8. http://www.crraoaimscs.org/about-c-r-rao/
 9. Wilk's memorial award,C.R.Rao
 10. http://www.crraoaimscs.org/about-c-r-rao/awards/