ವಿಷಯಕ್ಕೆ ಹೋಗು

ಸಿಲಿಕಾಬೇನೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಸಿಲಿಕಾಬೇನೆಯಿಂದ ಬಾಧಿತವಾದ ಶ್ವಾಸಕೋಶದ ಹೋಳು

ಸಿಲಿಕಾಬೇನೆ ಎಂಬುದು ದೂಳಿನ ಮೂಲಕ ಸಿಲಿಕಾ ಕಣಗಳು ಫುಪ್ಫುಸಗಳನ್ನು ಸೇರಿ ಉಂಟುಮಾಡುವ ರೋಗ (ಸಿಲಿಕೋಸಿಸ್). ಒಟ್ಟಾರೆ ದೂಳು ಅನೇಕ ರಾಸಾಯನಿಕಗಳ ಮಿಶ್ರಣ, ಸಿಲಿಕಾ ಈ ಪೈಕಿ ಒಂದು. ಸಮಗ್ರವಾಗಿ ದೂಳು ಫುಪ್ಫುಸಗಳಲ್ಲಿ ಜಮೆಯಾಗಿ ಕಾಣಿಸಿಕೊಳ್ಳುವ ವ್ಯಾಧಿಗೆ ನ್ಯೂಮೊಕೋನಿಯೇಸಿಸ್ ಎಂದು ಹೆಸರು.[೧] ಸಿಲಿಕಾಬೇನೆ ಈ ವರ್ಗಕ್ಕೆ ಸೇರಿದೆ. ಇದರಿಂದ ನರಳುವಾತನ ಶ್ವಾಸಕೋಶ ನಾರುಗಳಿಂದ ತುಂಬಿರುತ್ತದೆ. ಹೀಗಾಗಿ ಉಚ್ಛ್ವಾಸ ಬಲು ದುಸ್ತರವಾಗುವುದು. ರೋಗಿಯನ್ನು ದಮ್ಮು ತೀವ್ರವಾಗಿ ಬಾಧಿಸಿ ಆತ ಮರಣಿಸಬಹುದು.

ಸಿಲಿಕಾಬೇನೆ ಮೊತ್ತಮೊದಲಿಗೆ ದಕ್ಷಿಣ ಆಫ್ರಿಕದಲ್ಲಿಯ ಚಿನ್ನದ ಗಣಿಗಳಲ್ಲಿ ಕೂಲಿ ಮಾಡುತ್ತಿದ್ದವರಲ್ಲಿ ಪತ್ತೆಯಾಯಿತು. ಅನೇಕ ಗಣಿ ಕೆಲಸಗಾರರನ್ನು ರೋಗ ಕೊಂದು ಹಾಕಿದೆ. ಕರ್ನಾಟಕದಲ್ಲಿ ಕೋಲಾರ ಹಾಗೂ ಹಟ್ಟಿ ಚಿನ್ನದ ಗಣಿಗಳಲ್ಲಿ ದುಡಿಯುವ ಕಾರ್ಮಿಕರಿಗೆ ಈ ರೋಗ ತೊಂದರೆ ಕೊಟ್ಟಿದೆ. ಇದೇ ಬಗೆಯ ಇತರ ಗಂಡಾಂತರಕಾರಿ ವೃತ್ತಿಗಳೆಂದರೆ ಮರಳುಕಣಗಳನ್ನು ಅರೆದು ನುಣುಪು ತರಿಸುವ ಉದ್ಯಮ, ಪಿಂಗಾಣಿ ತಯಾರಿಕೆ ಘಟಕ, ಸೀಸ ಮತ್ತು ತವರ ತೆಗೆಯುವ ಗಣಿಗಳು ಇತ್ಯಾದಿ.

ಸಿಲಿಕಾ ಒಂದು ಬಗೆಯ ಖನಿಜ. ಇದು ಬಲು ಸೂಕ್ಷ್ಮವಾದ ಕಣಗಳ ರೂಪದಲ್ಲಿ ಶ್ವಾಸಕೋಶಗಳನ್ನು ಸೇರಿದರೆ ರೋಗ ಬರುವುದು. ಕೆಲವು ಸಲ ಸಿಲಿಕಾ ರೋಗದಿಂದ ಬಳಲುವ ವ್ಯಕ್ತಿಯಲ್ಲಿ ಕ್ಷಯ ರೋಗಾಣು ಸೇರಿಕೊಳ್ಳುವುವು. ಈ ರೋಗಿಯ ಗತಿ ಇನ್ನೂ ಕೆಡುಕಿನದು.

ಸದ್ಯಕ್ಕೆ ಸಿಲಿಕಾರೋಗವನ್ನು ಗುಣಪಡಿಸಲು ಮದ್ದುಗಳಿಲ್ಲ. ರೋಗ ಬರದಂತೆ ನೋಡಿಕೊಳ್ಳುವ ತಂತ್ರಗಳಿವೆ.[೨] ಕಲ್ಲುಗಳಿಂದ ಏಳುವ ದೂಳು, ಕಾರ್ಯ ಮಾಡುವ ಸ್ಥಳದಲ್ಲಿ ಸಾಂದ್ರತೆಗೊಳ್ಳದಂತೆ ಮಾಡುವುದೇ ಈ ಸೂತ್ರ.

ಉಲ್ಲೇಖಗಳು[ಬದಲಾಯಿಸಿ]

  1. Derived from Gr. πνεῦμα pneúm|a (lung) + buffer vowel -o- + κόνις kóni|s (dust) + Eng. scient. suff. -osis (like in asbest"osis" and silic"osis", see ref. 10).
  2. "Prevention of Silicosis Deaths". July 22, 2015.

ಹೊರಗಿನ ಕೊಂಡಿಗಳು[ಬದಲಾಯಿಸಿ]

ವಿಕಿಸೋರ್ಸ್ ನಲ್ಲಿ ಲಭ್ಯವಿರುವ ಲೇಖನದ ವಿಷಯವನ್ನು ಇಲ್ಲಿ ಅಳವಡಿಸಲಾಗಿದೆ: